BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಮಹಿಳೆಯರು ರಾಜಕೀಯ ನಾಯಕತ್ವ ಗುಣ ಬೆಳೆಸಿಕೊಳ್ಳಿ
  • ತುಮಕೂರು ಜಿಲ್ಲೆಯಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ದೀರ್ಘಕಾಲಿಕ ಪರಿಹಾರ ಕ್ರಮ: ದೀಪ ಚೋಳನ್
  • ಕ್ರೀಡೆ ಕೇವಲ ಆಟವಲ್ಲ, ಉದ್ಯೋಗಕ್ಕೂ ಸಹಕಾರಿ
  • ಜನಸ್ನೇಹಿ ವೈದ್ಯ ಡಾ.ಅಕ್ಷಯ್‌ಗೆ ವೈದ್ಯರ ದಿನಾಚರಣೆಯಂದು ಸಾರ್ವಜನಿಕರಿಂದ ಅಭಿನಂದನೆಗಳ ಮಹಾಪೂರ
  • ಅಡಿಕೆ ತೋಟದಲ್ಲಿ ಪತ್ತೆಯಾಯಿತು ಶಾಸನ
  • ಎಸ್‌ಐಆರ್: ಮನೆ ಮನೆಗೆ ತೆರಳಿ ಗಣತಿ ನಮೂನೆ ವಿತರಿಸುತ್ತಿರುವ ಬಿಎಲ್‌ಒಗಳು
  • ಆಧುನಿಕ ಕೃಷಿ ಪದ್ದತಿಗಳ ಬಳಕೆಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ
  • ತಾತ್ಕಾಲಿಕವಾಗಿ ಪಿಂಚಣಿ ಸ್ಥಗಿತ: ದಾಖಲೆ ಲೋಪ ಕಾರಣ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಹೆಚ್ಚು ಹಾಲು ಕರಿದ ರೈತರಿಗೆ ೩೦,೦೦೦ ನಗದು ಪ್ರಥಮ ಬಹುಮಾನ
ತುಮಕೂರು ಜಿಲ್ಲಾ ಸುದ್ಧಿಗಳು

ಹೆಚ್ಚು ಹಾಲು ಕರಿದ ರೈತರಿಗೆ ೩೦,೦೦೦ ನಗದು ಪ್ರಥಮ ಬಹುಮಾನ

ತುಮಕೂರು ಹಾಲು ಒಕ್ಕೂಟದಿಂದ ಮಿಶ್ರತಳಿ ರಸುಗಳ ಹಾಲು ಕರೆಯುವ ಸ್ಪರ್ಧೆ ಯಶಸ್ವಿ
By News Desk BenkiyabaleUpdated:March 28, 2026 3:43 pm
oplus_2097154
oplus_2097154

ಕೊರಟಗೆರೆ: ಪ್ರಸಕ್ತ ಆಧುನಿಕ ಯುಗದಲ್ಲಿ ಯಾಂತ್ರಿಕೃತ ಕೃಷಿ ಪದ್ಧತಿ ಹೆಚ್ಚಾಗುತ್ತಿದ್ದರೂ, ಹೈನುಗಾರಿಕೆಯಲ್ಲಿ ಇಂದಿಗೂ ರೈತನಿಗೂ ಮತ್ತು ಹಸುವಿಗೂ ಇರುವ ಅವಿನಾಭಾವ ಸಂಬAಧವನ್ನು ಸಾರುವ ‘ಹಾಲು ಕರೆಯುವ ಸ್ಪರ್ಧೆ’ಯೊಂದು ವಿಜೃಂಭಣೆಯಿ0ದ ಜರುಗಿತು.
ಕೊರಟಗೆರೆ ತಾಲೂಕಿನ ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಆವರಣದಲ್ಲಿ ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕ ಸಂಘದ ಒಕ್ಕೂಟ ನಿಯಮಿತ ತುಮಕೂರು ಹಾಗೂ ತಾಲೂಕು ಘಟಕ , ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಕೊರಟಗೆರೆ , ತುಮಕೂರು ಜಿಲ್ಲಾ ರೈತರ ಮತ್ತು ಎಂಪಿ ಸಿಎಸ್ ನೌಕರರ ಮತ್ತು ಸಾಮಾನ್ಯ ಕಲ್ಯಾಣ ಟ್ರಸ್ಟ್ ಮಲ್ಲಸಂದ್ರ ಹಾಗೂ ಕುಂಚೀಟಿಗ ಮಹಾ ಸಂಸ್ಥಾನ ಮಠದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮಿಶ್ರ ತಳಿರಾಸುಗಳ ಹಾಲು ಕರೆಯುವ ಸ್ಪರ್ಧೆ ಹಾಗೂ ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನ ಕಾರ್ಯಕ್ರಮ ತುಂಬಾ ಯಶಸ್ವಿಯಾಗಿ ಜರಗಿ ಈ ಕಾರ್ಯಕ್ರಮ ಕೇವಲ ಸ್ಪರ್ಧೆಯಾಗಿ ಉಳಿಯದೆ, ರೈತರ ಶ್ರಮ ಮತ್ತು ಪಶುಸಂಗೋಪನೆಯ ಮಹತ್ವವನ್ನು ಸಾರುವ ವೇದಿಕೆಯಾಗಿ ಮಾರ್ಪಟ್ಟಿತ್ತು.
ಕಾರ್ಯಕ್ರಮ ಸತತ ಎರಡು ದಿನಗಳ ಕಾಲ ಜರುಗಿ ರೈತರಿಂದ ಸಂಜೆ ಹಾಗೂ ಬೆಳಿಗ್ಗೆ ಎರಡು ಸಮಯದ ಹಾಲು ಕರೆಯುವ ಸ್ಪರ್ಧೆಯನ್ನು ಬಹಳ ಅಚ್ಚುಕಟ್ಟಾಗಿ ಹಾಲು ಒಕ್ಕೂಟ, ಪಶು ಇಲಾಖೆ ಸಹಯೋಗದಲ್ಲಿ ತುಂಬಾ ಯಶಸ್ವಿಯಾಗಿ ಆಯೋಜನೆಗೊಂಡು, ತಾಲೂಕಿನ ವಿವಿಧ ಮೂಲಗಳಿಂದ ಬಂದAತ ೫೦ಕ್ಕೂ ಹೆಚ್ಚಿನ ರೈತರು ತಮ್ಮ ಹಸುಗಳನ್ನು ಸ್ಪರ್ಧಾ ಕಣಕ್ಕೆ ಉಳಿಸಿ ಎಚ್.ಎಫ್ , ಜರ್ಸಿ ಹಸುಗಳನ್ನ ರೈತರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿದ್ದು, ಹಾಲಿನ ಪ್ರಮಾಣ ಮಾತ್ರವಲ್ಲದೆ, ಹಾಲಿನ ಗುಣಮಟ್ಟ (ಫ್ಯಾಟ್ ಅಂಶ) ಮತ್ತು ಹಸುಗಳ ಆರೋಗ್ಯವನ್ನು ಕೂಡ ತೀರ್ಪುಗಾರರು ಪರಿಗಣಿಸಲ್ಲಾಯಿತು, ನಿರ್ದಿಷ್ಟ ಸಮಯದಲ್ಲಿ ಅತಿ ಹೆಚ್ಚು ಹಾಲು ಕರೆಯುವ ಕೌಶಲ್ಯವನ್ನು ನೋಡಲು ಜನಸಾಗರವೇ ಹರಿದು ಬಂದಿತ್ತು. ಹಸುಗಳು ಶಾಂತವಾಗಿ ನಿಂತು ಸಹಕರಿಸುತ್ತಿದ್ದರೆ, ರೈತರು ಅಷ್ಟೇ ವೇಗವಾಗಿ ಕೈಚಳಕ ತೋರಿಸುತ್ತಿದ್ದರು.
ಕಾರ್ಯಕ್ರಮದ ಅಂತ್ಯದಲ್ಲಿ ಅತಿ ಹೆಚ್ಚು ಹಾಲು ನೀಡಿದ ಹಸುಗಳ ಮಾಲೀಕರಿಗೆ ಗಣ್ಯರ ಸಮ್ಮುಖದಲ್ಲಿ ಬಹುಮಾನ ವಿತರಿಸಲಾಯಿತು. ಮೊದಲನೇ ಬಹುಮಾನವನ್ನ ಬೈಚೇನಹಳ್ಳಿ ಅನುಸೂಯಮ್ಮ ನಟರಾಜು ಎಂಬುವರಿಗೆ ರೂ.೩೦೦೦೦ ನಗದು ಹಾಗೂ ಪಾರಿತೋಷಕ, ಎರಡನೇ ಬಹುಮಾನ ಪಾತಗನಹಳ್ಳಿ ಗ್ರಾಮದ ರಾಮಕ್ಕ ರಂಗಸ್ವಾಮಿಯ ಎಂಬವರಿಗೆ ಲಭಿಸಿದ್ದು ೨೦,೦೦೦ ನಗದು ಹಾಗೂ ಪಾರಿತೋಷಕ ನೀಡಲಾಯಿತು ತೃತೀಯ ಬಹುಮಾನವನ್ನು ಪಾತಗಾನಹಳ್ಳಿ ರಾಜೇಶ್ವರಿ ಶಿವಕುಮಾರ್ ಎಂಬವರಿಗೆ ಲಭಿಸಿದ್ದು ಅವರಿಗೆ ಹತ್ತು ಸಾವಿರ ನಗದು ಹಾಗೂ ಪಾರತೋಷಕ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ .ಹನುಮಂತನಾಥ ಸ್ವಾಮೀಜಿ ಮಾತನಾಡಿ ಹೈನುಗಾರಿಕೆ ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾಗಿದೆ, ಇಂತಹ ಸ್ಪರ್ಧೆಗಳು ರೈತರಿಗೆ ಪ್ರೇರಣೆ ನೀಡುವುದರ ಜೊತೆಗೆ, ಪಶುಸಂಗೋಪನೆಯ ಮಹತ್ವವನ್ನು ಮತ್ತಷ್ಟು ಜನರಿಗೆ ತಲುಪಿಸುತ್ತವೆ ಜೊತೆಗೆ, ಯುವಕರು ಕೃಷಿ ಹಾಗೂ ಪಶುಸಂಗೋಪನೆ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಂತೆ ಕಿವಿಮಾತು ಹೇಳಿದರು.
ತುಮಕೂರು ಹಾಲು ಒಕ್ಕೂಟದ ತಾಲೂಕು ನಿರ್ದೇಶಕ ಸಿದ್ದಗಂಗಯ್ಯ ಮಾತಾಡಿ ಹೈನುಗಾರಿಕೆ ತಾಲ್ಲೂಕಿನ ಜನರ ಬೆನ್ನೆಲುಬಾಗಿದ್ದು , ಹಾಲನ್ನೇ ನಂಬಿಕೊ0ಡು ಬದುಕುತ್ತಿರುವ ಕುಟುಂಬಗಳಿಗೆ ಯಾವುದೇ ಸಮಸ್ಯೆ ಇದ್ದರೂ ನನ್ನ ಸಹಕಾರ ಇರುತ್ತದೆ ಇಲಾಖೆಯಿಂದ ಸಿಗುವಂತ ಸೌಲಭ್ಯಗಳನ್ನ ರೈತರು ಬಳಸಿಕೊಂಡು ಆರ್ಥಿಕವಾಗಿ ಸದೃಢರಾಗುವಂತೆ ರೈತರಿಗೆ ತಿಳಿಸಿದರು.
ಹೈನುಗಾರಿಕೆಗೆ ಸಂಬ0ಧಪಟ್ಟ0ತ ಇಂತಹ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿಸಲಿದ್ದು ಈ ಬಾರಿ ೪೦ರಿಂದ ೫೦ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ನಡೆಸಲಾಗುವುದು ಎಂದು ಅಭಿಪ್ರಾಯಪಟ್ಟರು.
ಶಿರಾ ತಾಲೂಕಿನ ನಿರ್ದೇಶಕರಾದ ಎಸ್ ಆರ್ ಗೌಡ ಮಾತನಾಡಿ ಹೈನುಗಾರಿಕೆಗೆ ಸಂಬ0ಧಪಟ್ಟ0ತ ಇಂತಹ ಕಾರ್ಯಕ್ರಮಗಳು
ನಮ್ಮ ಪರಂಪರೆಯನ್ನು ಉಳಿಸುವುದಲ್ಲದೆ, ರೈತರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ ಎಂದರು.
ತುಮಕೂರು ಪಶು ಇಲಾಖೆ ಉಪ ನಿರ್ದೇಶಕ ಡಾ. ಎಚ್ ಎಮ್ ಶಿವಪ್ರಸಾದ್ ಮಾತನಾಡಿ ಪಶುಪಾಲನೆ ಇಂದು ರೈತರ ಆರ್ಥಿಕ ಸ್ಥಿರತೆಗೆ ಮಹತ್ವದ ಆಧಾರವಾಗಿದೆ. ಉತ್ತಮ ತಳಿ ಅಭಿವೃದ್ಧಿ, ಸಮರ್ಪಕ ಆಹಾರ ಮತ್ತು ವೈಜ್ಞಾನಿಕ ನಿರ್ವಹಣೆಯಿಂದ ಹಾಲು ಉತ್ಪಾದನೆಯನ್ನು ಗಮನಾರ್ಹವಾಗಿ ಹೆಚ್ಚಿಸಬಹುದು. ಸರ್ಕಾರದ ವಿವಿಧ ಯೋಜನೆಗಳನ್ನು ಪಶುಪಾಲಕರು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಇಂತಹ ಸ್ಪರ್ಧೆಗಳು ರೈತರಲ್ಲಿ ಉತ್ತೇಜನವನ್ನು ಮೂಡಿಸುವುದರ ಜೊತೆಗೆ ಗುಣಮಟ್ಟದ ಪಶುಪಾಲನೆಗೆ ದಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಹಾಲು ಒಕ್ಕೂಟದ ಮಧುಗಿರಿ ನಾಗೇಶ್ ಬಾಬು, ಚಂದ್ರಶೇಖರ್ ರೆಡ್ಡಿ ಜೆಡಿಎಸ್ ತಾಲೂಕು ಅಧ್ಯಕ್ಷ ಕಾಮರಾಜು ,
ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಸುಧಾಕರ್ ಎಂ ಎಸ್ , ವ್ಯವಸ್ಥಾಪಕರಾದ ಶ್ರೀನಿವಾಸ್, ಉಪ ವ್ಯವಸ್ಥಾಪಕರಾದ ದೀಕ್ಷಿತ್ ,ಕೆಎಂಎಫ್ ತಾಲೂಕ ಘಟಕದ ಮುಖ್ಯಸ್ಥೆ ಪುಷ್ಪಲತಾ, ವಿಸ್ತರಣಾಧಿಕಾರಿ ಬಶೀರಾ, ಎಲೆರಾಂಪುರ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ವೈವಿ ಚಂದ್ರಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

(Visited 1 times, 1 visits today)
Previous Articleಮಕ್ಕಳು ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿ
Next Article ಸಂಪನ್ನಗೊ0ಡ ವಿಶ್ವ ರಂಗಭೂಮಿ ಸಂಭ್ರಮಾಚರಣೆ
News Desk Benkiyabale

Related Posts

ಮಹಿಳೆಯರು ರಾಜಕೀಯ ನಾಯಕತ್ವ ಗುಣ ಬೆಳೆಸಿಕೊಳ್ಳಿ

July 03, 2026 5:50 pm news

ತುಮಕೂರು ಜಿಲ್ಲೆಯಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ದೀರ್ಘಕಾಲಿಕ ಪರಿಹಾರ ಕ್ರಮ: ದೀಪ ಚೋಳನ್

July 03, 2026 5:36 pm news

ಕ್ರೀಡೆ ಕೇವಲ ಆಟವಲ್ಲ, ಉದ್ಯೋಗಕ್ಕೂ ಸಹಕಾರಿ

July 03, 2026 5:35 pm news
ತಾಜಾ ಸುದ್ಧಿಗಳು

ಮಹಿಳೆಯರು ರಾಜಕೀಯ ನಾಯಕತ್ವ ಗುಣ ಬೆಳೆಸಿಕೊಳ್ಳಿ

July 03, 2026 5:50 pm

ತುಮಕೂರು ಜಿಲ್ಲೆಯಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ದೀರ್ಘಕಾಲಿಕ ಪರಿಹಾರ ಕ್ರಮ: ದೀಪ ಚೋಳನ್

July 03, 2026 5:36 pm

ಕ್ರೀಡೆ ಕೇವಲ ಆಟವಲ್ಲ, ಉದ್ಯೋಗಕ್ಕೂ ಸಹಕಾರಿ

July 03, 2026 5:35 pm

ಜನಸ್ನೇಹಿ ವೈದ್ಯ ಡಾ.ಅಕ್ಷಯ್‌ಗೆ ವೈದ್ಯರ ದಿನಾಚರಣೆಯಂದು ಸಾರ್ವಜನಿಕರಿಂದ ಅಭಿನಂದನೆಗಳ ಮಹಾಪೂರ

July 03, 2026 5:32 pm

ಅಡಿಕೆ ತೋಟದಲ್ಲಿ ಪತ್ತೆಯಾಯಿತು ಶಾಸನ

July 02, 2026 4:59 pm

ಎಸ್‌ಐಆರ್: ಮನೆ ಮನೆಗೆ ತೆರಳಿ ಗಣತಿ ನಮೂನೆ ವಿತರಿಸುತ್ತಿರುವ ಬಿಎಲ್‌ಒಗಳು

July 02, 2026 4:36 pm
Our Youtube Channel
Our Picks

ಮಹಿಳೆಯರು ರಾಜಕೀಯ ನಾಯಕತ್ವ ಗುಣ ಬೆಳೆಸಿಕೊಳ್ಳಿ

July 03, 2026 5:50 pm

ತುಮಕೂರು ಜಿಲ್ಲೆಯಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ದೀರ್ಘಕಾಲಿಕ ಪರಿಹಾರ ಕ್ರಮ: ದೀಪ ಚೋಳನ್

July 03, 2026 5:36 pm

ಕ್ರೀಡೆ ಕೇವಲ ಆಟವಲ್ಲ, ಉದ್ಯೋಗಕ್ಕೂ ಸಹಕಾರಿ

July 03, 2026 5:35 pm

ಜನಸ್ನೇಹಿ ವೈದ್ಯ ಡಾ.ಅಕ್ಷಯ್‌ಗೆ ವೈದ್ಯರ ದಿನಾಚರಣೆಯಂದು ಸಾರ್ವಜನಿಕರಿಂದ ಅಭಿನಂದನೆಗಳ ಮಹಾಪೂರ

July 03, 2026 5:32 pm

ಅಡಿಕೆ ತೋಟದಲ್ಲಿ ಪತ್ತೆಯಾಯಿತು ಶಾಸನ

July 02, 2026 4:59 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds kannada news karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss

ಮಹಿಳೆಯರು ರಾಜಕೀಯ ನಾಯಕತ್ವ ಗುಣ ಬೆಳೆಸಿಕೊಳ್ಳಿ

By News Desk BenkiyabaleJuly 03, 2026 5:50 pm

ತುಮಕೂರು: ಜೆಡಿಎಸ್‌ನ ಮಹಿಳಾ ಕಾರ್ಯಕರ್ತೆಯರು ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಪಕ್ಷ ಸಂಘಟನೆಗೆ ಕೆಲಸ ಮಾಡಿ, ಮುಂಬರುವ ಸ್ಥಳೀಯ ಸಂಸ್ಥೆಗಳ…

ತುಮಕೂರು ಜಿಲ್ಲೆಯಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ದೀರ್ಘಕಾಲಿಕ ಪರಿಹಾರ ಕ್ರಮ: ದೀಪ ಚೋಳನ್

July 03, 2026 5:36 pm

ಕ್ರೀಡೆ ಕೇವಲ ಆಟವಲ್ಲ, ಉದ್ಯೋಗಕ್ಕೂ ಸಹಕಾರಿ

July 03, 2026 5:35 pm

ಜನಸ್ನೇಹಿ ವೈದ್ಯ ಡಾ.ಅಕ್ಷಯ್‌ಗೆ ವೈದ್ಯರ ದಿನಾಚರಣೆಯಂದು ಸಾರ್ವಜನಿಕರಿಂದ ಅಭಿನಂದನೆಗಳ ಮಹಾಪೂರ

July 03, 2026 5:32 pm
News by Date
July 2026
M T W T F S S
 12345
6789101112
13141516171819
20212223242526
2728293031  
« Jun    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.