
ತುಮಕೂರು: `ಕನಸು ಸಂಘಟನೆ’ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕನಸು ಸಂಘಟನೆಯ ಸಂಸ್ಥಾಪಕರು ಆದ ದೀಪಿಕಾ ಮರಳೂರು ರವರು ಕನಸು ವಿದ್ಯಾರ್ಥಿಗಳ ಪರ ಮಹಿಳೆಯರ ಪರ ನಿರಂತರವಾಗಿ ಕಾರ್ಯ ಯೋನ್ಮುಖವಾಗುತ್ತಾ ಬಂದಿರುವ ರೀತಿಯನ್ನು ಪ್ರಸ್ತಾವಿಕ ನುಡಿಗಳಲ್ಲಿ ನುಡಿದರು.
“ಮಹಿಳೆಯರ ಮೇಲಿನ ದೌರ್ಜನ್ಯ ದಿನ ದಿನ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಮತ್ತು ಯುವಜ ನಾಂಗ ಹೆಚ್ಚು ಜಾಗೃತವಾಗಬೇಕಾಗಿರುವ ಅನಿವಾರ್ಯತೆ ಇದೆ. ಕೌಟುಂಬಿಕ ವ್ಯವಸ್ಥೆಗಳಲ್ಲಿ ಮಹಿಳೆಯರ ಮೇಲಿನ ದೌರ್ಜ ನ್ಯಗಳು ದಾಖಲಾಗುತ್ತಿರುವುದು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಬೇಕು’’ ಎಂದು ಪ್ರಸಿದ್ಧ ಲೇಖಕಿ ಮತ್ತು ಮಹಿಳಾ ಹೋರಾಟಗಾರರು ಆದ ಡಾ. ಬಿ.ಸಿ. ಶೈಲಾನಾಗರಾಜ್‌ರವರು ಕಾರ್ಯಕ್ರಮದ ಕುರಿತು ಅಧ್ಯಕ್ಷತೆಯ ಮಾತುಗಳನ್ನು ಆಡಿದರು. ಅವರ ಅಧ್ಯಕ್ಷತೆಯಲ್ಲಿ ಕನಸು ಕಾರ್ಯಕ್ರಮದಲ್ಲಿ ಕವಿಗೋಷ್ಠಿಯನ್ನು ಆಯೋಜಿಸಲಾಗಿತ್ತು. ಕವಿಗೋಷ್ಠಿಯಲ್ಲಿ ಭಾಗಿಯಾದ ಗೀತಾ ಆರ್.ಎಸ್., ಡಾ. ವೀಣಾ, ಶಾರದಮ್ಮ, ಗೀತಾ ಭಾರತಿ, ಚಂದ್ರಕಲಾ, ಪ್ರಭ ವಸಂತ, ಮೇಘನಾ, ಲತಾ, ಶಕುಂತಲಾ, ಮುಂತಾದವರು ಭಾಗವಹಿಸಿದ್ದರು.
ಕನಸು ಕಾರ್ಯಕ್ರಮದ ಉದ್ಘಾಟನೆಯನ್ನು ಈಶ್ವರಿ ಮಹಿಳಾ ಸಂಘಟನೆಯ ರಂಗಮ್ಮರವರು ನಡೆಸಿಕೊಟ್ಟರು.
ಕರ್ನಾಟಕ ಜನಶಕ್ತಿಯ ಮಹಿಳಾ ಮುನ್ನಡೆಯ ರೂವಾರಿಯಾಗಿರುವ ಮಂಡ್ಯ ಪೂರ್ಣಿಮಾ ಪ್ರಸಿದ್ಧ ಹೋರಾಟಗಾರರು ಆದ ಇವರು ಕಾರ್ಯಕ್ರಮದಲ್ಲಿ ಸಂವಾದವನ್ನು ನಡೆಸಿಕೊಟ್ಟರು. “ಮಹಿಳೆಯರಿಗೆ ಸಮಾನತೆಯು ದೂರದ ಮಾತಿದೆ ಮಹಿಳೆಯರು ಇನ್ನೂ ಬಲಗೊಳ್ಳಬೇಕು. ವಿಶ್ವಸಂಸ್ಥೆಯು ಹೊರಡಿಸಿರುವ ಈ ವರ್ಷದ ಮಹಿಳಾ ಘೋಷಣೆಯನ್ನು ಹೇಳುತ್ತಾ ನಾವು ಇನ್ನೂ ಸಾಮಾಜಿಕ ವ್ಯವಸ್ಥೆಯಲ್ಲಿ ಬಹಳಷ್ಟು ನಮ್ಮ ಹಕ್ಕುಗಳಿಗಾಗಿ ನಮ್ಮ ಸಮಾನತೆಗಳಿಗಾಗಿ ಹೋರಾಡಬೇಕು’’ ಎಂದು ಹೇಳಿದರು.
ಇಂದಿರಮ್ಮರವರು ಕಾರ್ಯಕ್ರಮ ಕುರಿತು ಮಾತನಾಡಿ “ಹೆಣ್ಣು ಮಕ್ಕಳು ಸಂವಿಧಾನ ಹಾಗೂ ಕಾನೂನುಗಳ ಅರಿವು ತಿಳಿಯಬೇಕು ನೊಂದ ಮಹಿಳೆಯರ ಪರ ದೊಡ್ಡ ಧ್ವನಿಯಾಗಬೇಕು, ಸಂಘಟ ಕರಾಗಬೇಕು’’ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಪ್ರವೀಣ್ ಸ್ಫೂರ್ತಿ, ಸ್ಲಂ ಸಂಘಟನೆ ಅನುಪಮ, ಈಶ್ವರಿ ಮಹಿಳಾ ಸಂಘಟನೆಯ ರಂಗಮ್ಮ, ಚಂದ್ರಕಲಾ, ಲಲಿತಾಮಲ್ಲಪ್ಪ, ವಿಜ್ಞಾನ ಕೇಂದ್ರದ ಅಧ್ಯಕ್ಷರು ಆದ ಅಕ್ಕಮ್ಮ, ಚಂದ್ರಕಲಾಕುಮಾರಸ್ವಾಮಿ, ಪದ್ಮ, ಸರಳ ಮುಂತಾದವರು ಭಾಗಿಯಾಗಿದ್ದರು.
ಈಶ್ವರಿ ಮಹಿಳಾ ಸಂಘಟನೆಯ ತಂಡವು ಸಾಂಸ್ಕೃತಿಕ ಕಾರ್ಯಕ್ರಮವಾದ ಜನಪದ ಗೀತೆಗೆ ನೃತ್ಯ ಮಾಡಿದರು. ದೀಪಿ ಕಾಮರಳೂರು ಈ ಕಾರ್ಯಕ್ರಮವನ್ನು ನಿರೂಪಿಸಿದರು.





