
ತುಮಕೂರು: ಪ್ರಧಾನಿಗಳ ವಿಕಸಿತ ಭಾರತದ ಪರಿಕಲ್ಪನೆಗೆ ಯುವಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ವಿದ್ಯಾರ್ಥಿಗಳು ಪ್ರಧಾನ ಮಂತ್ರಿಗಳ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಮುಂದಿನ ಸದೃಢ ಭಾರತ ನಿರ್ಮಾಣಕ್ಕೆ ಯುವ ಪೀಳಿಗೆಯ ಕೊಡುಗೆ ಅಪಾರ ಎಂದು ತುಮಕೂರು ವಿಶ್ವವಿದ್ಯಾನಿಲಯದ ಇತಿಹಾಸ ಮತ್ತು ಪುರಾತತ್ವ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಯು. ಎಸ್. ಮೂರ್ತಿ ಅವರು ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ಹಾಗೂ ಸಂಶೋಧನಾ ವಿಭಾಗ ಮತ್ತು ಅರ್ಥಶಾಸ್ತç ಅಧ್ಯಯನ ಹಾಗೂ ಸಂಶೋಧನಾ ವಿಭಾಗಗಳ ಸಹಯೋಗದಲ್ಲಿ, ಕೇಂದ್ರ ಸರ್ಕಾರದ ಪಿಎಂ-ಉಷಾ ಸಾಫ್ಟ್ ಕಾಂಪೊನೆAಟ್ ಯೋಜನೆಯಡಿ ಜೂನ್ ೨೨ರ ಸೋಮವಾರದಂದು ಆಯೋಜಿಸಿದ್ದ “ಭಾರತದಲ್ಲಿ ಪರಂಪರೆ ಅರ್ಥವ್ಯವಸ್ಥೆ” ಎಂಬ ವಿಷಯದ ಕುರಿತ ಒಂದು ದಿನದ ರಾಷ್ಟಿçÃಯ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ ಅರ್ಥವ್ಯವಸ್ಥೆ ಸರಿ ಇದ್ದರೆ ಮಾತ್ರ ದೇಶ ಉಳಿಯಲು ಸಾಧ್ಯ. ಯಾವ ದೇಶದಲ್ಲಿ ಆರ್ಥಿಕ ವ್ಯವಸ್ಥೆ ಸರಿಯಿಲ್ಲವೋ, ಅವುಗಳ ಪತನವನ್ನು ನಾವು ಕಣ್ಣಾರೆ ನೋಡುತ್ತಿದ್ದೇವೆ ಎಂದರು.
ಬೆAಗಳೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತç ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಎಸ್. ಪುಟ್ಟಸ್ವಾಮಯ್ಯ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಆಲೋಚನೆಗಳು ಮತ್ತು ಚಿಂತನೆಗಳು ತುಂಬಾ ಅಗತ್ಯ. ನಮ್ಮ ಪರಂಪರೆ, ಸಂಸ್ಕöÈತಿ ಹಾಗೂ ಸಂಪ್ರದಾಯಗಳಿAದ ಇಂತಹ ಆಲೋಚನೆಗಳಿಗೆ ಸರಿಯಾದ ಮಾರ್ಗದರ್ಶನ ಸಿಗುತ್ತದೆ. ಅವುಗಳನ್ನು ನೆನಪಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರಗಳು ಹೆಚ್ಚು ಸಹಕಾರಿಯಾಗುತ್ತವೆ ಎಂದರು.
ತುಮಕೂರು ವಿವಿಯ ಅರ್ಥಶಾಸ್ತç ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷರಾದ ಡಾ. ರವೀಂದ್ರ ಕುಮಾರ್ ಮಾತನಾಡಿ, ಪರಂಪರೆಯ ಆರ್ಥಿಕ ವ್ಯವಸ್ಥೆಗೆ ಇತಿಹಾಸದ ಸಹಕಾರ ಅಗತ್ಯವಾಗಿದೆ. ಈ ಕಾರ್ಯಾಗಾರವು ೨೦೪೭ರ ವಿಕಸಿತ ಭಾರತದ ಗುರಿಗೆ ದಾರಿದೀಪವಾಗಿದೆ. ಗ್ರಾಮೀಣ ಆರ್ಥಿಕ ವ್ಯವಸ್ಥೆ ಸಬಲೀಕರಣವಾಗಲು ಗ್ರಾಮಗಳ ವಿಕಾಸವಾಗಬೇಕು. ಅದಕ್ಕೆ ಪ್ರವಾಸೋದ್ಯಮ, ಪರಂಪರೆಯ ಅರಿವು ಹಾಗೂ ಸೂಕ್ತ ಯೋಜನೆಗಳು ಅಗತ್ಯ. ಪ್ರವಾಸೋದ್ಯಮ ಕೇವಲ ಪ್ರಚಾರವಾಗದೆ, ಅದು ಪ್ರೇರಣೆಯಾಗಬೇಕು. ಈ ಇಂದಿನ ಎಐ ಯುಗದಲ್ಲಿ ನಮ್ಮ ಆರ್ಥಿಕ ವ್ಯವಸ್ಥೆಯೂ ಡಿಜಿಟಲೀಕರಣಗೊಳ್ಳಬೇಕು ಎಂದರು.
ಇತಿಹಾಸ ಹಾಗೂ ಪುರಾತತ್ವ ವಿಭಾಗದ ಅಧ್ಯಕ್ಷರಾದ ಡಾ. ಎಲ್. ಪಿ. ರಾಜು ಸ್ವಾಗತಿಸಿದರು. ಸಹ ಪ್ರಾಧ್ಯಾಪಕರಾದ ಡಾ. ನೀಲಕಂಠ ಎನ್. ಟಿ. ವಂದಿಸಿದರು. ಸಹ ಪ್ರಾಧ್ಯಾಪಕರಾದ ಪ್ರೊ. ಡಾ. ಪ್ರಿಯಾ ಠಾಕೂರ್ ಉಪಸ್ಥಿತರಿದ್ದರು.

