ತುಮಕೂರು :
ಜಿಲ್ಲೆಯ 8 ವಿವಿಧ ಗ್ರಾಮ ಪಂಚಾಯಿತಿಯಲ್ಲಿ ವಿವಿಧ ಕಾರಣಗಳಿಗೆ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಸಲು ಆದೇಶಿಸಿ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ|| ಕೆ. ರಾಕೇಶ್‍ಕುಮಾರ್ ತಿಳಿಸಿದ್ದಾರೆ.
ಚುನಾವಣಾ ವೇಳಾಪಟ್ಟಿ:
ವೇಳಾಪಟ್ಟಿಯನ್ವಯ ಚುನಾವಣಾಧಿಕಾರಿಗಳು ಅಕ್ಟೋಬರ್ 28ರಂದು ಚುನಾವಣಾ ನೋಟೀಸ್ ಹೊರಡಿಸಲಿದ್ದಾರೆ.
ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ಅಕ್ಟೋಬರ್ 31 ಕಡೆಯ ದಿನವಾಗಿದ್ದು, ನವೆಂಬರ್ 2ರಂದು ನಾಮಪತ್ರಗಳನ್ನು ಪರಿಶೀಲಿಸಲಾಗುವುದು. ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ನವೆಂಬರ್ 4 ಕೊನೆಯ ದಿನ. ಮತದಾನದ ಅವಶ್ಯವಿದ್ದರೆ ನವೆಂಬರ್ 12ರಂದು ಬೆಳಿಗ್ಗೆ 7 ರಿಂದ ಸಂಜೆ 5ರವರೆಗೆ ಮತದಾನ ನಡೆಸಲಾಗುವುದು. ಮರು ಮತದಾನದ ಅವಶ್ಯವಿದ್ದಲ್ಲಿ ನವೆಂಬರ್ 13ರಂದು ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಸಲಾಗುವುದು.
ಗ್ರಾಮ ಪಂಚಾಯತಿಗೆ ಸಂಬಂಧಿಸಿದ ತಾಲ್ಲೂಕು ಕೇಂದ್ರದಲ್ಲಿ ನವೆಂಬರ್ 14ರಂದು ಗುರುವಾರ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ನಡೆಯಲಿದೆ.
ಗ್ರಾಮ ಪಂಚಾಯಿತಿ ಮತ್ತು ಮೀಸಲಾತಿ ವಿವರ:
ಗುಬ್ಬಿ ತಾಲ್ಲೂಕು ಪೆದ್ದನಹಳ್ಳಿ ಗ್ರಾಮ ಪಂಚಾಯಿತಿಯ ಮಂಚಿಹಳ್ಳಿ(ಸಾಮಾನ್ಯ); ಕುಣಿಗಲ್ ತಾಲ್ಲೂಕಿನ ಕೆಂಪನಹಳ್ಳಿ ಗ್ರಾ.ಪಂ. ಕಡಸಿಂಗನಹಳ್ಳಿ(ಪರಿಶಿಷ್ಟ ಪಂಗಡ ಮಹಿಳೆ); ತುರುವೇಕೆರೆ ತಾಲ್ಲೂಕು ಸಂಪಿಗೆ ಗ್ರಾ.ಪಂ. ಸಂಪಿಗೆ-1(ಪರಿಶಿಷ್ಟ ಜಾತಿ), ಲೋಕಮ್ಮನಹಳ್ಳಿ ಗ್ರಾ.ಪಂ. ಲೋಕಮ್ಮನಹಳ್ಳಿ-2(ಪರಿಶಿಷ್ಟ ಪಂಗಡ ಮಹಿಳೆ) ಹಾಗೂ ಹಡವನಹಳ್ಳಿ ಗ್ರಾ.ಪಂ. ಮಾರಸಂದ್ರ(ಸಾಮಾನ್ಯ ಮಹಿಳೆ); ಮಧುಗಿರಿ ತಾಲ್ಲೂಕು ದೊಡ್ಡವೀರಗೊಂಡನಹಳ್ಳಿ ಗ್ರಾ.ಪಂ. ತಾಯಿಗೊಂಡನಹಳ್ಳಿ(ಹಿಂದುಳಿದ ವರ್ಗ-ಬ), ಸಜ್ಜೆಹೊಸಹಳ್ಳಿ ಗ್ರಾ.ಪಂ. ಸಜ್ಜೆ ಹೊಸಹಳ್ಳಿ(ಸಾಮಾನ್ಯ); ಕೊರಟಗೆರೆ ತಾಲ್ಲೂಕು ಬೊಮ್ಮಲದೇವಿಪುರ ಗ್ರಾ.ಪಂ. ಬೊಮ್ಮಲದೇವಿಪುರ ಮಜರೆ ತಿಗಳರಪಾಳ್ಯ(ಹಿಂದುಳಿದ ವರ್ಗ-ಬ)
ಉಪಚುನಾವಣೆ ನಡೆಯಲಿರುವ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ಟೋಬರ್ 28 ರಿಂದ ನವೆಂಬರ್ 14ರವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಗ್ರಾಮ ಪಂಚಾಯಿತಿ ಚುನಾವಣೆಗಳ ಮತ ಪತ್ರದಲ್ಲಿ “ಓಔಖಿಂ” ಅವಕಾಶ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.