BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಸಂಭ್ರಮದ ಸ್ವಾತಂತ್ರೊತ್ಸವಕ್ಕೆ ಸಿದ್ಧತೆ
  • ಶಾಲಾ ಕ್ರೀಡಾಕೂಟ ನಡೆಸಲು ಶಿಕ್ಷಣ ಇಲಾಖೆ ನಿರಾಸಕ್ತಿ
  • ಚುನಾವಣೆಯಲ್ಲಿ ಹಂಚುವ ಉಚಿತ ಮದ್ಯಕ್ಕೆ ಬಲಿಯಾಗಬೇಡಿ
  • ೨೭ರಿಂದ ನಗರದಲ್ಲಿ ರಾಜ್ಯ ರ‍್ಯಾಂಕಿ0ಗ್ ಬ್ಯಾಡ್ಮಿಂಟನ್ ಪಂದ್ಯಾವಳಿ
  • ಬಿಎಲ್‌ಓಗಳ ಉತ್ತಮ ಕೆಲಸಕ್ಕೆ ಮಾಜಿ ಶಾಸಕ ಡಾ.ಎಸ್.ರಫೀಕ್ ಅಹಮದ್ ಶ್ಲಾಘನೆ
  • ಪ್ರೆಸಿಡೆನ್ಸಿ ಕಾಲೇಜು ಬಳಿ ಅಪಘಾತ
  • ಜಿಲ್ಲೆಯಲ್ಲಿ ಪೋಲೀಸರ ಭರ್ಜರಿ ಬೇಟೆ
  • ಆಗಸ್ಟ್ ೬ ರವರೆಗೆ ಸಲಹೆ ಸೂಚನೆಗಳನ್ನು ನೀಡಲು ಅವಕಾಶ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಕುಡಿಯುವ ನೀರು ಸ್ವಚ್ಛತೆಗೆ ಮೊದಲ ಆದ್ಯತೆ ಮೇಲೆ ಕಾರ್ಯವೆಸಗಲು ಸಚಿವರ ಸೂಚನೆ
Trending

ಕುಡಿಯುವ ನೀರು ಸ್ವಚ್ಛತೆಗೆ ಮೊದಲ ಆದ್ಯತೆ ಮೇಲೆ ಕಾರ್ಯವೆಸಗಲು ಸಚಿವರ ಸೂಚನೆ

By News Desk BenkiyabaleUpdated:February 27, 2020 6:57 pm

 ತುಮಕೂರು:

      ತುಮಕೂರು ನಗರವು ಬೆಂಗಳೂರಿನ ಸಮೀಪವಿದ್ದು, ತುಮಕೂರು ನಗರ ಅಭಿವೃದ್ಧಿಗೆ ಕೈಗೊಂಡಿರುವ ಸ್ಮಾರ್ಟ್‍ಸಿಟಿ ಯೋಜನೆಯಡಿಯಲ್ಲಿ, ಬೇಸಿಗೆ ಸಮೀಪಿಸುತ್ತಿರುವುದರಿಂದ ಕುಡಿಯುವ ನೀರು ಸರಬರಾಜಿಗೆ ಹಾಗೂ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ ಕಾಮಗಾರಿಗಳನ್ನು ಹಂತಹಂತವಾಗಿ ಪೂರ್ಣಗೊಳಿಸಲು ನಗರಾಭಿವೃದ್ಧಿ ಸಚಿವರಾಗಿರುವ ಬಿ.ಎ. ಬಸವರಾಜ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

      ಅವರು ಇಂದು ಮಹಾನಗರ ಪಾಲಿಕೆಯಲ್ಲಿ ಏರ್ಪಡಿಸಲಾಗಿದ್ದ ಅಧಿಕಾರಿಗಳ ಹಾಗೂ ಮಹಾನಗರ ಪಾಲಿಕೆಯ ಸದಸ್ಯರುಗಳ ಸಭೆಯಲ್ಲಿ ಅವರು ಮಾತನಾಡಿದರು. ಸ್ಮಾರ್ಟ್‍ಸಿಟಿ ಕಾಮಗಾರಿಗಳ ಪ್ರಗತಿ ಬಗ್ಗೆ ಸಾರ್ವಜನಿಕರಿಂದ ಬಹಳ ದೂರುಗಳು ಬರುತ್ತಿದ್ದು, ರಸ್ತೆ ನಿರ್ಮಾಣ ಕೈಗೊಳ್ಳುವಾಗ ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಒನ್ ಬೈ ಒನ್ ರಂತೆ ಕಾಮಗಾರಿ ಕೈಗೊಂಡು ಇರುವ ಸಮಸ್ಯೆಗಳನ್ನು ಪರಿಹರಿಸುತ್ತಾ ಅಭಿವೃದ್ಧಿ ಸಾಧಿಸಲು ಮುಖ್ಯ ಇಂಜಿನಿಯರ್ ಸಿದ್ಧಗಂಗಪ್ಪ ಅವರಿಗೆ ತಿಳಿಸಿದರು.

     ತುಮಕೂರು ನಗರಕ್ಕೆ ಸುಮಾರು 22 ಹಳ್ಳಿಗಳು ವಿಲೀನಗೊಂಡಿದ್ದು, ಈ ಹಳ್ಳಿಗಳ ರಸ್ತೆಗಳ ಅಭಿವೃದ್ಧಿಗೂ ಅಧಿಕಾರಿಗಳು ಗಮನಹರಿಸಬೇಕು. ಸಚಿವರಾದ ಮೇಲೆ ಪ್ರಥಮ ಬಾರಿಗೆ ತುಮಕೂರಿನ ನಗರದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆಗೆ ಆಗಮಿಸಿದ್ದು, ಈ ಹಿಂದೆ ಆಗಿರುವ ಮಣ್ಣಿನ ರಸ್ತೆಗಳನ್ನು ಡಾಂಬರೀಕರಣಗೊಳಿಸುವುದು ಮತ್ತು ಅಮೃತ ಯೋಜನೆಯಡಿಯಲ್ಲಿ ನೀರು ಸರಬರಾಜು ಯೋಜನೆಯಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಹೆಚ್ಚಿನ ಒತ್ತು ನೀಡಿ ಪೂರ್ಣಗೊಳಿಸುವಂತೆ ಸಚಿವರು ಅಧಿಕಾರಿಗಳಿಗೆ ತಿಳಿಸಿದರು.

      ಇದೇ ಸಂದರ್ಭದಲ್ಲಿ ಪೌರಾಯುಕ್ತ ಹಾಗೂ ಸ್ಮಾರ್ಟ್‍ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರಾದ ಟಿ. ಭೂಬಾಲನ್ ಸ್ಮಾರ್ಟ್‍ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ವಿವರಿಸಿದರು. ಡಿಜಿಟಲ್ ಲೈಬ್ರರಿ, ಸ್ಮಾರ್ಟ್‍ಕ್ಲಾಸ್‍ರೂಂ, ರಿಂಗ್‍ರೋಡ್, ಅಮಾನಿಕೆರೆ, ಕ್ರೀಡಾಂಗಣ ಅಭಿವೃದ್ಧಿ ಕಾಮಗಾರಿಯ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿದರು.

      ಶಾಸಕ ಜಿ.ಬಿ. ಜ್ಯೋತಿಗಣೇಶ್ ತುಮಕೂರು ಸ್ಮಾರ್ಟ್‍ಸಿಟಿ ಯೋಜನೆಗೆ ಬಂದಿರುವ 125 ಕೋಟಿ ಅನುದಾನದಲ್ಲಿ ತುಮಕೂರು ನಗರದ ಬಡಾವಣೆಗಳ ರಸ್ತೆ, ಚರಂಡಿ, ಕುಡಿಯುವ ನೀರು, ಸ್ವಚ್ಛತೆ ಮತ್ತಿತರ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಸಾಕಾಗುತ್ತಿಲ್ಲ. ವಿಶೇಷವಾಗಿ ತುಮಕೂರು ನಗರದ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‍ನಲ್ಲಿ ಅನುದಾನ ಒದಗಿಸಲು ಸಚಿವರಲ್ಲಿ ಮನವಿ ಮಾಡಿದರು. ನಗರಸಭೆ ಹಾಗೂ ಸ್ಮಾರ್ಟ್‍ಸಿಟಿ ಯೋಜನೆ ಅನುಷ್ಠಾನದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ನಿರತರಾಗಿರುವುದರಿಂದ ಮಹಾನಗರ ಪಾಲಿಕೆ ಕೆಲಸಗಳಲ್ಲಿ ಅಡಚಣೆ ಉಂಟಾಗಿದೆ. ಇದನ್ನು ಪರಿಹರಿಸಲು ಸಚಿವರು ಮಾರ್ಗದರ್ಶನ ಮಾಡಬೇಕೆಂದು ಅವರು ಕೇಳಿದರು.

     ರೆವಿನ್ಯೂ ಜಾಗಗಳಲ್ಲಿ ಮನೆಗಳನ್ನು ಕಟ್ಟಿಕೊಂಡಿರುವ ಜನರಿಗೆ ಖಾತೆ ಮಾಡಿಕೊಡುವುದು ತೆರಿಗೆ ವಸೂಲಿಯ ಬಗ್ಗೆ ಮತ್ತು ನಗರದ ಸಮಸ್ಯೆಗಳ ಬಗ್ಗೆ ಮಹಾಪೌರರಾಗಿರುವ ಫರೀದಾ ಬೇಗಂ ಸೇರಿ ನಗರಸಭಾ ಸದಸ್ಯರುಗಳು ಸಚಿವರಲ್ಲಿ ಒಕ್ಕೊರಿಲಿನಿಂದ ಮನವಿ ಮಾಡಿದರು.

    ಸಚಿವರು ಈಗ ತಾನೆ ಈ ಖಾತೆಯನ್ನು ವಹಿಸಿಕೊಂಡಿದ್ದು, ಮೇಲ್ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಈ ಎಲ್ಲಾ ಬೇಡಿಕೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು.

     ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್, ಪಾಲಿಕೆಯ ಉಪಮೇಯರ್ ಶಶಿಕಲಾ ಗಂಗಹನುಮಯ್ಯ, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಹಾಜರಿದ್ದರು.

(Visited 12 times, 1 visits today)
Previous Articleಸಚಿವರ ಆಪ್ತರಿಂದ ಪತ್ರಕರ್ತನ ಮೇಲೆ ಹಲ್ಲೆಗೆ ಯತ್ನ
Next Article ಭೌಗೋಳಿಕ ಮಾಹಿತಿ ವ್ಯವಸ್ಥೆಯಡಿ ಪ್ರಥಮ ಬಾರಿಗೆ ತುಮಕೂರು ಜಿಲ್ಲೆ ಆಯ್ಕೆ!
News Desk Benkiyabale

Related Posts

ಸಂಭ್ರಮದ ಸ್ವಾತಂತ್ರೊತ್ಸವಕ್ಕೆ ಸಿದ್ಧತೆ

July 16, 2026 5:17 pm news

ಶಾಲಾ ಕ್ರೀಡಾಕೂಟ ನಡೆಸಲು ಶಿಕ್ಷಣ ಇಲಾಖೆ ನಿರಾಸಕ್ತಿ

July 16, 2026 5:15 pm news

ಚುನಾವಣೆಯಲ್ಲಿ ಹಂಚುವ ಉಚಿತ ಮದ್ಯಕ್ಕೆ ಬಲಿಯಾಗಬೇಡಿ

July 16, 2026 3:36 pm news
ತಾಜಾ ಸುದ್ಧಿಗಳು

ಸಂಭ್ರಮದ ಸ್ವಾತಂತ್ರೊತ್ಸವಕ್ಕೆ ಸಿದ್ಧತೆ

July 16, 2026 5:17 pm

ಶಾಲಾ ಕ್ರೀಡಾಕೂಟ ನಡೆಸಲು ಶಿಕ್ಷಣ ಇಲಾಖೆ ನಿರಾಸಕ್ತಿ

July 16, 2026 5:15 pm

ಚುನಾವಣೆಯಲ್ಲಿ ಹಂಚುವ ಉಚಿತ ಮದ್ಯಕ್ಕೆ ಬಲಿಯಾಗಬೇಡಿ

July 16, 2026 3:36 pm

೨೭ರಿಂದ ನಗರದಲ್ಲಿ ರಾಜ್ಯ ರ‍್ಯಾಂಕಿ0ಗ್ ಬ್ಯಾಡ್ಮಿಂಟನ್ ಪಂದ್ಯಾವಳಿ

July 16, 2026 3:34 pm

ಬಿಎಲ್‌ಓಗಳ ಉತ್ತಮ ಕೆಲಸಕ್ಕೆ ಮಾಜಿ ಶಾಸಕ ಡಾ.ಎಸ್.ರಫೀಕ್ ಅಹಮದ್ ಶ್ಲಾಘನೆ

July 16, 2026 3:32 pm

ಪ್ರೆಸಿಡೆನ್ಸಿ ಕಾಲೇಜು ಬಳಿ ಅಪಘಾತ

July 16, 2026 3:31 pm
Our Youtube Channel
Our Picks

ಸಂಭ್ರಮದ ಸ್ವಾತಂತ್ರೊತ್ಸವಕ್ಕೆ ಸಿದ್ಧತೆ

July 16, 2026 5:17 pm

ಶಾಲಾ ಕ್ರೀಡಾಕೂಟ ನಡೆಸಲು ಶಿಕ್ಷಣ ಇಲಾಖೆ ನಿರಾಸಕ್ತಿ

July 16, 2026 5:15 pm

ಚುನಾವಣೆಯಲ್ಲಿ ಹಂಚುವ ಉಚಿತ ಮದ್ಯಕ್ಕೆ ಬಲಿಯಾಗಬೇಡಿ

July 16, 2026 3:36 pm

೨೭ರಿಂದ ನಗರದಲ್ಲಿ ರಾಜ್ಯ ರ‍್ಯಾಂಕಿ0ಗ್ ಬ್ಯಾಡ್ಮಿಂಟನ್ ಪಂದ್ಯಾವಳಿ

July 16, 2026 3:34 pm

ಬಿಎಲ್‌ಓಗಳ ಉತ್ತಮ ಕೆಲಸಕ್ಕೆ ಮಾಜಿ ಶಾಸಕ ಡಾ.ಎಸ್.ರಫೀಕ್ ಅಹಮದ್ ಶ್ಲಾಘನೆ

July 16, 2026 3:32 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds kannada news karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss

ಸಂಭ್ರಮದ ಸ್ವಾತಂತ್ರೊತ್ಸವಕ್ಕೆ ಸಿದ್ಧತೆ

By News Desk BenkiyabaleJuly 16, 2026 5:17 pm

ತುಮಕೂರು: ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಆಗಸ್ಟ್ ೧೫ರಂದು ಸ್ವಾತಂತ್ರ‍್ಯ ದಿನಾಚರಣೆಯ ಸಂಭ್ರಮಾಚರಣೆಗೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್…

ಶಾಲಾ ಕ್ರೀಡಾಕೂಟ ನಡೆಸಲು ಶಿಕ್ಷಣ ಇಲಾಖೆ ನಿರಾಸಕ್ತಿ

July 16, 2026 5:15 pm

ಚುನಾವಣೆಯಲ್ಲಿ ಹಂಚುವ ಉಚಿತ ಮದ್ಯಕ್ಕೆ ಬಲಿಯಾಗಬೇಡಿ

July 16, 2026 3:36 pm

೨೭ರಿಂದ ನಗರದಲ್ಲಿ ರಾಜ್ಯ ರ‍್ಯಾಂಕಿ0ಗ್ ಬ್ಯಾಡ್ಮಿಂಟನ್ ಪಂದ್ಯಾವಳಿ

July 16, 2026 3:34 pm
News by Date
July 2026
M T W T F S S
 12345
6789101112
13141516171819
20212223242526
2728293031  
« Jun    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.