Author: News Desk Benkiyabale

ಹುಳಿಯಾರು: ಹುಳಿಯಾರಿನ ದುರ್ಗಮ್ಮನ ಗುಡಿ ಬೀದಿಯಲ್ಲಿರುವ ಕಿಯೋನಿಕ್ಸ್ ಕಂಪ್ಯೂಟರ್ ತರಬೇತಿ ಸಂಸ್ಥೆಯು 18 ರಿಂದ 45 ವರ್ಷ ವಯಸ್ಸಿನ ನಿರುದ್ಯೋಗಿ ಯುವಕ ಯುವತಿಯರಿಗೆ 2 ತಿಂಗಳ ಉಚಿತ ಟೈಲರಿಂಗ್ ತರಬೇತಿ (ಸಿದ್ದ ಉಡುಪು ತಯಾರಿಕೆ) ನೀಡಲಿದ್ದು, ಆಸಕ್ತರು ಮೇಲ್ಕಂಡ ವಿಳಾಸದಲ್ಲಿ 5/1/2025 ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ. ತರಬೇತಿ ಪಡೆದಂತವರಿಗೆ ಜಿಲ್ಲೆಯ ಪ್ರಖ್ಯಾತ ಗಾರ್ಮೆಂಟ್ಸ್ ಗಳಲ್ಲಿ ಉದ್ಯೋಗ ಕಲ್ಪಿಸಲು ನೆರವು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸಿ.ಎನ್.ಪ್ರಭು, ಕಿಯೋನಿಕ್ಸ್ ಕಂಪ್ಯೂಟರ್ ತರಬೇತಿ ಸಂಸ್ಥೆ. ಹುಳಿಯಾರು 9141689595 9448748259.

Read More

ಚಿಕ್ಕನಾಯಕನಹಳ್ಳಿ; ರಾಸಾಯನಿಕ ವಿಷ ಬೆರೆತ ಆಹಾರ ಜೊತೆಗೆ ನೀರು ಕೂಡ ಮಲಿನವಾಗಿದೆ ಇದರ ರಕ್ಷಣೆಗೆ ನಾಗರೀಕ ಸಮಾಜ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಡುವ ಅನಿವಾರ್ಯತೆ ಇದೆ ಎಂದು ಶಾಸಕ ಹಾಗೂ ಜೆ ಡಿ ಎಲ್ ಪಿ ನಾಯಕ ಸಿಬಿ ಸುರೇಶ್ ಬಾಬು ಹೇಳಿದರು. ಇಂದು ಪಟ್ಟಣದ ಬಸವೇಶ್ವರನಗರ ಹಾಗೂ 16ನೇ ವಾರ್ಡಿನ ಬುಗುರಿ ಮರದ ಸುತ್ತಮುತ್ತ ಸಿಮೆಂಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡುತ್ತಾ ಅಲ್ಪಸಂಖ್ಯಾತರ ಇಲಾಖೆ ವತಿಯಿಂದ 3 ಕೋಟಿ ಹಣ ಬಿಡುಗಡೆಯಾಗಿದ್ದು ಹುಳಿಯಾರ್ ಭಾಗಕ್ಕೆ 1 ಕೋಟಿ 40 ಲಕ್ಷ ಚಿಕ್ಕನಾಯಕನಹಳ್ಳಿ ಭಾಗಕ್ಕೆ 1 ಕೋಟಿ 60 ಲಕ್ಷದ ಕಾಮಗಾರಿ ಯೋಜನೆ ಆರಂಭಗೊAಡಿದೆ ಈಗಾಗಲೇ ಮನೆಮನೆಗೆ ನಲ್ಲಿ ನೀಡುವ ಅಮೃತ ಜಲ ಯೋಜನೆಗೆ 73 ಕೋಟಿ ಹಣ ಬಂದಿದ್ದು ಟೆಂಡರ್ ಪ್ರಕ್ರಿಯೆಯಲ್ಲಿದ್ದು ಒಳಚರಂಡಿ ಹಾಗೂ ಪೈಪ್ಲೈನ್ ಕಾಮಗಾರಿಯಿಂದ ರಸ್ತೆ ಆಗಿರುವುದರಿಂದ ಈ ಕಾಮಗಾರಿ ವಿಳಂಬವಾಗುತ್ತಿದೆ ಇನ್ನು ಒಂದು ವರ್ಷಕ್ಕೂ ಹೆಚ್ಚು ಕಾಲ ಬೇಕಾಗುತ್ತದೆ ಇದರಿಂದ ಸಾರ್ವಜನಿಕರು ಸಹಕರಿಸಬೇಕು ಈ…

Read More

ತುಮಕೂರು : ಸೂಕ್ತ ಚಿಕಿತ್ಸೆಯಿಂದ ಕುಷ್ಠರೋಗವನ್ನು ಸಂಪೂರ್ಣವಾಗಿ ಗುಣಮುಖಪಡಿಸಬಹುದಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸಾ ತಿಳಿಸಿದರು. ರಾಷ್ಟಿçÃಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿ ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸುಮಾರು ವರ್ಷಗಳ ಹಿಂದೆ ಕುಷ್ಠರೋಗವು ಯಾವುದೇ ಔಷಧೋಪಚಾರವಿಲ್ಲದೆ ಗುಣಮುಖವಾಗದ ಖಾಯಿಲೆಯಾಗಿತ್ತು. ಕುಷ್ಠರೋಗಿಗಳನ್ನು ಅಸ್ಪಶ್ಯರಂತೆ ಕಾಣುವ ವ್ಯವಸ್ಥೆಯಿತ್ತು. ಪ್ರಸ್ತುತ ಕುಷ್ಠರೋಗಕ್ಕೆ ಉಚಿತ ಔಷಧಿ ಲಭ್ಯವಿದ್ದು, ಸಕಾಲದಲ್ಲಿ ಚಿಕಿತ್ಸೆ ಪಡೆಯುವುದರಿಂದ ಕುಷ್ಠರೋಗದಿಂದ ಗುಣಮುಖ ಹೊಂದಬಹುದು ಎಂದು ತಿಳಿಸಿದರು. ಜಿಲ್ಲೆಯಲ್ಲಿ ಶೇ.0.06ರಷ್ಟು ಮಾತ್ರ ಕುಷ್ಠರೋಗದ ಪ್ರಕರಣಗಳಿವೆ. ರಾಜ್ಯದಲ್ಲಿ 1785 ಪ್ರಕರಣಗಳಿವೆ. ಜಿಲ್ಲೆಯಲ್ಲಿ ಕೇವಲ 40 ಕುಷ್ಠರೋಗ ಪ್ರಕರಣಗಳು ಪತ್ತೆಯಾಗಿದ್ದು, ಚಿಕಿತ್ಸೆಯಿಂದ ಗುಣಮುಖರಾಗುತ್ತಿದ್ದಾರೆ ಎಂದು ಅವರು ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಚಂದ್ರಶೇಖರ್ ಮಾತನಾಡಿ ಹಿಂದಿನ ಕಾಲದಲ್ಲಿ ಕುಷ್ಠರೋಗವನ್ನು ಶಾಪಗ್ರಸ್ಥ ರೋಗವೆಂದು ಪರಿಗಣಿಸಲಾಗುತ್ತಿತ್ತು. ಜಿಲ್ಲೆಯ ಇತರೆ…

Read More

ತುಮಕೂರು: ಇತ್ತೀಚೆಗೆ ವಿಜಯಪುರ ಜಿಲ್ಲೆಯ ಗಾಂಧಿನಗರದಲ್ಲಿ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ದಲಿತ ಕಾರ್ಮಿಕರ ಮೇಲೆ ಆದಂತಹ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ಇಂದು ತುಮಕೂರು ಜಿಲ್ಲೆಯ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ತಮ್ಮ ಮನವಿ ಪತ್ರದಲ್ಲಿ ಪರಿಶಿಷ್ಟ ಜಾತಿ ಕೂಲಿ ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಲ್ಲದೇ ಜಾತಿನಿಂದನೆಯ ಮಾಡಿರುವವರ ವಿರುದ್ಧ ಕಾನೂನು ರೀತ್ಯಾ ಕ್ರಮ ವಹಿಸುವುದಲ್ಲದೇ ಹಲ್ಲೆಗೊಳಗಾದ ವ್ಯಕ್ತಿಗಳ ಕುಟುಂಬಕ್ಕೆ ಸರ್ಕಾರ ನೆರವನ್ನು ನೀಡುವುದರೊಂದಿಗೆ ಕೂಲಿ ಕಾರ್ಮಿಕರ ಕುಟುಂಬಕ್ಕೆ ಉದ್ಯೋಗ, ಪರಿಹಾರ, ಮೂಲಭೂತ ಸೌಕರ್ಯಗಳು ಹಾಗೂ ಸೂಕ್ತ ರಕ್ಷಣೆ ಕೊಡುವಂತೆ ನಮ್ಮ ಮನವಿಯಲ್ಲಿ ಉಲ್ಲೇಖಿಸಿದ್ದೇವೆಂದು ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್ ತಿಳಿಸಿದ್ದಾರೆ. ಮನವಿ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ…

Read More

ತುಮಕೂರು: ಕಾಂಗ್ರೆಸ್ ಪಕ್ಷ ಗಾಂಧಿಜೀ ಅವರು ಸತ್ಯ, ಶಾಂತಿ ಮತ್ತು ಅಹಿಂಸೆಯ ತತ್ವದ ಮೇಲೆ ನಡೆಯುತ್ತಿದೆ. ಎಲ್ಲ ವರ್ಗದ ಜನರಿಗೂ ಅವಕಾಶಗಳನ್ನು ಕಲ್ಪಿಸಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರ ಗೌಡ ತಿಳಿಸಿದ್ದಾರೆ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಸದ್ಬಾವನಾ ದಿನ(ಹುತಾತ್ಮರ ದಿನ)ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಮಹಾತ್ಮಗಾಂಧಿಜೀ ಅವರು ಕೇವಲ ಸ್ವಾತಂತ್ರ÷್ಯ ಕ್ಕಾಗಿ ಹೋರಾಟ ನಡೆಸಿದ್ದಷ್ಟೇ ಅಲ್ಲ.ಈ ದೇಶದಲ್ಲಿ ನಡೆಯುತಿದ್ದ ಅನಿಷ್ಠ ಪದ್ದತಿಗಳ ವಿರುದ್ದವೂ ಹೋರಾಟ ನಡೆಸಿದ್ದರು ಎಂದರು. ಈ ದೇಶದ ಸ್ವಾತಂತ್ರ÷್ಯಕ್ಕಾಗಿ ಹೋರಾಡಿದ ಕಾಂಗ್ರೆಸ್ ಪಕ್ಷ,ಸ್ವಾತಂತ್ರ÷್ಯ ನಂತರವೂ ದೇಶದ ಸಮಗ್ರ ಅಭಿವೃದ್ದಿಗೆ ನಿರಂತರವಾಗಿ ಶ್ರಮಿಸಿದ ಪರಿಣಾಮ ಶಾಲಾ,ಕಾಲೇಜು,ಆಸ್ಪತ್ರೆ, ರಸ್ತೆ,ವಿಮಾನ ನಿಲ್ದಾಣಗಳು,ಅಣೆಕಟ್ಟು ಗಳು ನಿರ್ಮಾಣಗೊಂಡು ದೇಶದ ಜನರು ಸ್ವಾವಲಂಭಿ ಜೀವನ ನಡೆಸಲು ಸಾಧ್ಯವಾಯಿತು. ಇದನ್ನು ತಿಳಿಯದ ಕೆಲವರು ದೇಶಕ್ಕೆ ಕಾಂಗ್ರೆಸ್ ಕೊಡುಗೆ ಎನು ಎಂದು ಪ್ರಶ್ನೇ ಮಾಡುತ್ತಾರೆ. ಇತಿಹಾಸವೇ ಗೊತ್ತಿಲ್ಲದವರಿಂದ ಇತಿಹಾಸ ನಿರ್ಮಿಸಲು ಸಾಧ್ಯವೇ ಎಂದು ಜಿ.ಚಂದ್ರಶೇಖರ ಗೌಡ ಪ್ರಶ್ನಿಸಿದರು. ನನ್ನ ಜೀವನವೇ ನನ್ನ ಸಂದೇಶ ಎಂದ…

Read More

ಚಿಕ್ಕನಾಯಕನಹಳ್ಳಿ; ಉಪ ವಿಭಾಗಾಧಿಕಾರಿ ಆಡಳಿತ ಅಧಿಕಾರಿಗಳ ಅವಧಿಯಲ್ಲಿ ಹಣ ದುರ್ಬಳಿಕೆ ಮಾಡಿಕೊಳ್ಳಲಾಗಿದೆ ಈ ಬಗ್ಗೆ ಹಲವು ಬಾರಿ ಕೇಳಿದರು ಹಾಗೂ ಮಾಹಿತಿ ಹಕ್ಕು ಕಾಯ್ದೆಯಲ್ಲಿ ಕೇಳಿದರು ನಮಗೆ ಮಾಹಿತಿ ನೀಡಿಲ್ಲ ಈ ಅವಧಿಯಲ್ಲಿ ಮಾರ್ಚ್ 2023 ರಿಂದ ಡಿಸೆಂಬರ್ 2023 ವರೆಗಿನ ವರದಿ ನೀಡಬೇಕು ಹಾಗೂ ಈ ಬಗ್ಗೆ ಲೋಕಾಯುಕ್ತ ತನಿಖೆಗೆ ಒಳಪಡಿಸಬೇಕು ಎಂದು ಸದಸ್ಯೆ ಪೂರ್ಣಿಮಾ ರೇಣುಕ ಪ್ರಸಾದ್ ನಾಗರಾಜ್ ಬಾಬು ಹುಸೇನ್ ಗುಂಡ ಇವರುಗಳು ಆಗ್ರಹಿಸಿದರು. ಪುರಸಭಾಧ್ಯಕ್ಷ ಕೆಂಗಲ್ ದಯಾನಂದ್ ಅವರ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಾಮಾನ್ಯ ಸಭೆಯಲ್ಲಿ ಆಡಳಿತ ಅಧಿಕಾರಿಯ ಅವಧಿಯಲ್ಲಿ 14 ಹಾಗೂ 15ನೇ ಹಣಕಾಸು ಯೋಜನೆ, ಕಾಮಗಾರಿಗಳನ್ನು ಮನಬಂದAತೆ ಮಾಡಿದ್ದು ಜಮಾ ಖರ್ಚುಗಳ ಬಗ್ಗೆ ವರದಿಯನ್ನು ಸಭೆಗೆ ಮಂಡಿಸಿಲ್ಲ ಗೌರವಾನ್ವಿತ ಸದಸ್ಯತ್ವ ಬೆಲೆ ಇಲ್ಲವಾ ಎಂದು ಸದಸ್ಯ ಮಲ್ಲೇಶ ಶಾಸಕರಲ್ಲಿ ತಮ್ಮ ಅಳಲನ್ನು ತೋಡಿಕೊಂಡರು ಇದಕ್ಕೆ ಶಾಸಕ ಸಿಬಿ ಸುರೇಶ್ ಬಾಬು ಆಡಳಿತ ಅಧಿಕಾರಿಗಳ ಅವಧಿಯಲ್ಲಿನ ಮಾಹಿತಿಯನ್ನು ವಿಶೇಷ ಸಭೆಯಲ್ಲಿ ಚರ್ಚಿಸಿ ಮಾರ್ಚ್ ನಿಂದ ಮಾರ್ಚ್…

Read More

ತುಮಕೂರು: ಅವಶ್ಯಕತೆಗಳನ್ನು ಮೀರಿ ಸಾಲ ಮಾಡಿ ಸಮಸ್ಯೆಗಳಿಗೆ ಸಿಲುಕಬಾರದು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ಸಂಬAಧಿಸಿದAತೆ ಕೊರಟಗೆರೆ ತಾಲ್ಲೂಕು ಚನ್ನರಾಯನದುರ್ಗ ಹೋಬಳಿ ಕುರಂಕೋಟೆ ಗ್ರಾಮಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್ಗಳಿಗೆ ಅಸಲು ಹಣಕ್ಕಿಂತ ಬಡ್ಡಿಯನ್ನೇ ಹೆಚ್ಚಾಗಿ ಕಟ್ಟಬೇಕಾಗುತ್ತದೆ. ಅತಿ ಹೆಚ್ಚು ಬಡ್ಡಿ ವಸೂಲಿ ಮಾಡುವ ಮೈಕ್ರೋ ಫೈನಾನ್ಸ್ಗಳಿಂದ ಸಾಲ ಪಡೆಯುವ ಮುನ್ನ ಜನರು ಆಲೋಚಿಸಬೇಕು ಎಂದು ತಿಳಿಸಿದರು. ಸಾರ್ವಜನಿಕರು ತಮ್ಮ ಖರ್ಚು-ವೆಚ್ಚಗಳು ಇತಿ-ಮಿತಿಯೊಳಗಿರುವಂತೆ ಎಚ್ಚರವಹಿಸಬೇಕು. ಮೈಕ್ರೋ ಫೈನಾನ್ಸ್ನಿಂದ ತಾವು ಸಾಲ ಪಡೆಯುವುದಲ್ಲದೆ ಸ್ನೇಹಿತರು, ಬಂಧುಗಳ ಹೆಸರಲ್ಲಿಯೂ ತೆಗೆದುಕೊಳ್ಳುತ್ತಿರುವುದು ಪರಿಶೀಲನೆ ವೇಳೆಯಲ್ಲಿ ಗಮನಕ್ಕೆ ಬಂದಿದೆ. ಸ್ನೇಹಿತರ ಸಾಲಕ್ಕೆ ಜಾಮೀನು ಹಾಕುವ ಮುನ್ನ ಯೋಚಿಸಬೇಕು. ಇದರಿಂದ ಸಾಲ ಪಡೆದವರು ಹಾಗೂ ಜಾಮೀನು ಹಾಕಿದವರೂ ಸಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ತಿಳಿ ಹೇಳಿದರು. ಗ್ರಾಮೀಣ ಪ್ರದೇಶದಲ್ಲಿ ಸ್ವ-ಸಹಾಯ ಗುಂಪುಗಳ ಸದಸ್ಯರಿಗೆ ಸರ್ಕಾರದ ವಿವಿಧ ಯೋಜನೆಗಳಡಿ ಅತಿ ಕಡಿಮೆ…

Read More

ಕೊರಟಗೆರೆ: ಬಿಜೆಪಿ ಪಕ್ಷ ಸಂಘಟನೆಗೆ ಪ್ರತಿಯೊಬ್ಬ ಕಾರ್ಯಕರ್ತರ ಸಹಕಾರ ಅತ್ಯಗತ್ಯ. ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಬಲಗೊಳ್ಳಿಸುವ ಸಲುವಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ನೂತನ ಕೊರಟಗೆರೆ ಬಿಜೆಪಿ ಪಕ್ಷದ ಮಂಡಲ ಅಧ್ಯಕ್ಷ ಟಿ.ಎನ್.ರುದ್ರೇಶ್ ತಿಳಿಸಿದರು. ಪಟ್ಟಣದ ನವೀನ್ ಕಂಫಟ್‌ನಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ನೂತನವಾಗಿ ಕೊರಟಗೆರೆ ಮಂಡಲ ಅಧ್ಯಕ್ಷರಿಗೆ ಅಭಿನಂದನಾ ಸಭೆಯನ್ನ ಉದ್ದೇಶಿಸಿ ಮಾತನಾಡಿದರು. ಮಂಡಲ ಅಧ್ಯಕ್ಷ ಎನ್ನವುದು ಒಂದು ಹುದ್ದೆ ಪ್ರೋಟೋಕಾಲ್ ಅಷ್ಟೇ. ನಾನು ಕೂಡ ಒಬ್ಬ ಬೂತ್ ಸದಸ್ಯನಾಗಿ ಕೆಲಸ ಮಾಡುತ್ತೇನೆ. ಇಲ್ಲಿ ಯಾರು ಅಧ್ಯಕ್ಷರಲ್ಲ ಎಲ್ಲರೂ ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿಗಳಂತೆ ಕೆಲಸ ಮಾಡಿ ಮುಂದೆ ಬರುವ ಜಿಪಂ, ತಾಪಂ ಹಾಗೂ ಗ್ರಾಪಂ ಚುನಾವಣೆಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಸ್ಪರ್ಧಿಸಿ ಬಿಜೆಪಿ ಪಕ್ಷವನ್ನ ನಮ್ಮ ಕ್ಷೇತ್ರದಲ್ಲಿ ಸದೃಢಗೊಳಿಸೋಣ ಎಂದು ತಿಳಿಸಿದರು. ನನಗೆ ಬಿಜೆಪಿ ಪಕ್ಷದ ಜಿಲ್ಲಾ ಮಟ್ಟದ ಮುಖಂಡು ಹಾಗೂ ಕೊರಟಗೆರೆ ವಿಧಾನಸಭಾದ ಬಿಜೆಪಿ ಅಭ್ಯರ್ಥಿಯಾದ ಹಾಗೂ ನಿವೃತ್ತ ಐಎಎಸ್ ಅಧಿಕಾರಿಯಾದ ಬಿ.ಹೆಚ್.ಅನಿಲ್‌ಕುಮಾರ್ ಅವರು ಸಹಕಾರದಿಂದ…

Read More

ತುಮಕೂರು: ಇಂದಿನ ಪರಸ್ಪರ ಸಂಪರ್ಕಿತ ಡಿಜಿಟಲ್ ಪರಿಸರದಲ್ಲಿ ವಿವಿಧ ಕ್ಷೇತ್ರಗಳ ಮಾಹಿತಿಯನ್ನು ರಕ್ಷಿಸಲು ಸೈಬರ್ ಸುರಕ್ಷತೆ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಸಾಹೇ ಕುಲಾಧಿಪತಿಗಳ ಸಲಹೆಗಾರರಾದ ಡಾ.ವಿವೇಕ ವೀರಯ್ಯ ಅವರು ಅಭಿಪ್ರಾಯಪಟ್ಟರು. ನಗರದ ಕ್ಯಾತಸಂದ್ರದ ಬಳಿಯಿರುವ ಶ್ರೀ ಸಿದ್ಧಾರ್ಥ ಸ್ಕೂಲ್ ಆಫ್ ಇಂಜಿನಿಯರಿAಗ್ ನಲ್ಲಿ ಏರ್ಪಡಿಸಲಾಗಿದ್ದ ಒಂದು ವಾರದ ಪ್ರಾಧ್ಯಾಪಕರ ಪ್ರಗತಿ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾಗಿದ್ದ ‘ಇ-ಆಡಳಿತದ ಸುರಕ್ಷತೆ, ಸೈಬರ್ ಭದ್ರತೆ ಸಮ್ಮೀಲನದ ವಸ್ತುಸ್ಥಿತಿ ಹಾಗೂ ಆಧುನಿಕ ಕಾಲಘಟ್ಟದ ತಂತ್ರಜ್ಞಾನದಲ್ಲಿ ಕೃತಕ ಬುದ್ದಿಮತ್ತೆ’ ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಇಂಟರ್ನೆಟ್ ಜೀವನದ ಪ್ರತಿಯೊಂದು ಹಂತದಲ್ಲೂ ಅಗತ್ಯವಾಗಿದ್ದು, ಸೈಬರ್ ಭೀತಿಯ ಜೊತೆಗೆ ಸಂಬAಧಿಸಿದ ತೊಂದರೆಗಳು ವೇಗವಾಗಿ ಹೆಚ್ಚುತ್ತಿವೆ. ಪ್ರತಿಷ್ಠಿತ ವ್ಯಕ್ತಿಗಳು, ದೊಡ್ಡ ಸಂಸ್ಥೆಗಳು, ಹಾಗು ಸರ್ಕಾರಗಳೂ ಸಹ ಎಲ್ಲರೂ ಭದ್ರತೆಗೆ ಸಂಬAಧಿಸಿದ ಅಪಾಯಗಳನ್ನು ಎದುರಿಸುತ್ತಿವೆ ಎಂದ ಡಾ.ವಿವೇಕ ವೀರಯ್ಯ ಅವರು ಸೂಕ್ಷ್ಮ ಮಾಹಿತಿಯನ್ನು ಸುರಕ್ಷಿತವಾಗಿಡಲು ಮತ್ತು ಆನ್ಲೈನ್ ಚಟುವಟಿಕೆಗಳನ್ನು ರಕ್ಷಿಸಲು ಎಷ್ಟು ಅಗತ್ಯವಿದೆ ಎಂಬುದು ನಿರ್ಧರಿಸಬೇಕಾಗಿದೆ. ಸೈಬರ್ ದಾಳಿ…

Read More

ಹುಳಿಯಾರು: ಗ್ರಾಮಠಾಣ ವ್ಯಾಪ್ತಿಯಲ್ಲಿರುವ ನನ್ನ ನಿವೇಶನದ ಖಾತೆ ಮಾಡಿಸಲು ಹುಳಿಯಾರು ಪಟ್ಟಣ ಪಂಚಾಯ್ತಿಗೆ 2 ವರ್ಷಗಳಿಂದ ಅಲೆಯುತ್ತಿದ್ದೇನೆ. ಆದರೆ ಇದೂವರೆವಿಗೂ ಖಾತೆ ಆಗಿಲ್ಲ. ಯಾವಾಗ ಬಂದರೂ ಒಂದೊAದು ಸಬೂಬು ಹೇಳಿ ಕಳುಹಿಸುತ್ತಿದ್ದಾರೆ. ಗಂಡನ ಮನೆ ಹೊಸದುರ್ಗ ತಾಲೂಕಿನ ಶ್ರೀರಾಂಪುರದಿAದ ಪಂಚಾಯ್ತಿಗೆ ಅಲೆದು ಅಲೆದು ಸಾಕಾಗಿ ಹೋಗಿದೆ. ಮೇಲಧಿಕಾರಿಗಳು ಇನ್ನಾದರೂ ಖಾತೆ ಮಾಡಿಸಲು ನಿರ್ಲಕ್ಷಿö್ಯಸಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು ನನಗೆ ಖಾತೆ ಮಾಡಿಸಿಕೊಟ್ಟು ಪುಣ್ಯಕಟ್ಟಿಕೊಳ್ಳಿ ಎಂದು ರೇಷ್ಮಾಬಾನು ಬುಧವಾರ ಮನವಿ ಮಾಡಿದ್ದಾರೆ. ಹುಳಿಯಾರಿನ ಗ್ರಾಮ ಠಾಣಾ ವ್ಯಾಪ್ತಿಯಲ್ಲಿನ ಲಿಂಗಾಯಿತರ ಬೀದಿಯ ಪಂಚಾಯ್ತಿ ಖಾತೆ ಸಂಖ್ಯೆ 325 ಅ.ಸಂ 204 ನಿವೇಶನವನ್ನು ನನ್ನ ತಾಯಿಯಿಂದ 14/8/2018 ರಲ್ಲಿ ರಿಜಿಸ್ಟರ್ ಮಾಡಿಕೊಂಡಿದ್ದೇನೆ. ಈ ನಿವೇಶನವನ್ನು ನನ್ನ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಡಲು 2/2/23 ರಲ್ಲಿ ಪಂಚಾಯ್ತಿಗೆ ರಿಜಿಸ್ಟರ್ ಪ್ರತಿ, ಇಸಿ, ಆಧಾರ್ ಕಾರ್ಡ್, ಗ್ರಾಮಠಾಣಾ ನಕ್ಷೆ, ಕಂದಾಯ ರಸೀಧಿ ಹೀಗೆ ಎಲ್ಲವನ್ನು ಕೊಟ್ಟಿದ್ದೇನೆ. ಆದರೆ ಇಲ್ಲಿಯವರೆವಿಗೆ ಖಾತೆ ಮಾಡಿಕೊಟ್ಟಿಲ್ಲ. ಯಾವಾಗ ಬಂದರೂ ಸಿಬ್ಬಂದಿ ಇಲ್ಲ,…

Read More