Author: News Desk Benkiyabale

ತುಮಕೂರು- ರಾಜ್ಯದಲ್ಲಿ ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಇದೇ ಮೊದಲ ಬಾರಿಗೆ ಚುನಾವಣಾ ಆಯೋಗ 80 ವರ್ಷ ಮೇಲ್ಪಟ್ಟ ಮತದಾರರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಇಂದಿನಿಂದ 80 ವರ್ಷ ಮೇಲ್ಪಟ್ಟ ಮತದಾರರು ಮನೆಯಲ್ಲಿ ಮತದಾನ ಮಾಡುವ ಕಾರ್ಯಕ್ಕೆ ಚಾಲನೆ ದೊರೆಯಿತು. 80 ವರ್ಷ ಮೇಲ್ಪಟ್ಟ ಮತದಾರರಿಗೆ ಅನುಕೂಲವಾಗುವಂತೆ ಆಯೋಗ ನಮೂನೆ-12ಡಿ ಮೂಲಕ ಅರ್ಜಿ ಸಲ್ಲಿಸಿ ಅಂಚೆ ಮತಪತ್ರಗಳನ್ನು ಪಡೆದು ಮತದಾನ ಮಾಡಲು ಮೊದಲ ಬಾರಿಗೆ ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಬಿಎಲ್‍ಓಗಳು, ಪಿಡಬ್ಲ್ಯೂಡಿ ಮತ್ತು 80 ವರ್ಷ ಮೇಲ್ಪಟ್ಟ ಮತದಾರರ ಮನೆಗಳಿಗೆ ತೆರಳಿ ನಮೂನೆ-12 ಡಿ ಅರ್ಜಿಗಳನ್ನು ಹಂಚಿಕೆ ಮಾಡಿದ್ದು, ಮತಗಟ್ಟೆಗಳಿಗೆ ಬರಲು ಇಚ್ಛಿಸದ 80 ವರ್ಷ ಮೇಲ್ಪಟ್ಟ ಮತದಾರರು ಅಂಚೆ ಮತಪತ್ರಗಳ ಮೂಲಕ ಮನೆಯಲ್ಲೆ ಮತ ಚಲಾಯಿಸಿದರು. ನಗರದ ಚಿಕ್ಕಪೇಟೆಯಲ್ಲಿರುವ 80 ವರ್ಷ ಮೇಲ್ಪಟ್ಟ ಸುಗಂಧರಾಜು ಮತ್ತು ಅವರ ಪತ್ನಿ ವಸಂತಮ್ಮ ಅವರು ತಮ್ಮ ಮನೆಯಲ್ಲೇ ಅಧಿಕಾರಿಗಳು ಮತ್ತು ರಾಜಕೀಯ ಪಕ್ಷಗಳ ಏಜೆಂಟರ್…

Read More

ತುಮಕೂರು ಪ್ರಾಣಿಗಳ ಜೀವ ಉಳಿಸುವಂತಹ ಪುಣ್ಯದ ಕೆಲಸ ಮಾಡುತ್ತಿರುವ ನಿಮ್ಮಗಳ ಸೇವೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹಳ್ಳಿಗಳನ್ನು ತಲುಪುವಂತಾಗಲಿ ಎಂದು ಜಿಲ್ಲಾ ಪಂಚಾಯಿತಿ ಸಿಇಓ ಡಾ.ಕೆ.ವಿದ್ಯಾಕುಮಾರಿ ಆಶಯ ವ್ಯಕ್ತಪಡಿಸಿದ್ದಾರೆ. ನಗರದ ಅರ್ಬನ್ ರೆಸ್ಟಾಟ್‍ನಲ್ಲಿ ಪಶುವೈದ್ಯಕೀಯ ಸಂಘ(ರಿ) ತುಮಕೂರು, ಪಶುಪಾಲನೆ ಮತ್ತ ಪಶುವೈದ್ಯಕೀಯ ಸೇವಾ ಇಲಾಖೆ ಜಂಟಿಯಾಗಿ ಆಯೋಜಸಿದ್ದ ವಿಶ್ವ ಪಶುವೈದ್ಯಕೀಯ ದಿನಾಚರಣೆ ಹಾಗೂ ತಾಂತ್ರಿಕ ವಿಚಾರ ಸಂಕೀರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ನಮ್ಮ ಇತಿಮಿತಿಗಳ ನಡುವೆಯೂ ಹೆಚ್ಚು ಗ್ರಾಮಗಳನ್ನು ನಿಗಧಿತ ಅವಧಿಯೊಳಗೆ ತಲುಪುವಂತಾಗದರೆ, ಅದರಿಂದ ಮೂಕ ಪ್ರಾಣಿಗಳಿಗೆ ಜೊತೆಗೆ,ಅವುಗಳ ಮಾಲೀಕರಿಗೆ ಹೆಚ್ಚಿನ ಲಾಭ ಉಂಟಾಗುತ್ತದೆ ಎಂದರು ಇಂತಹ ದಿನಾಚರಣೆಗಳ ನಾವು ಹೇಗೆ ಕಾರ್ಯನಿರ್ವಹಿಸುತ್ತಿದೇವೆ.ನಮ್ಮ ಜವಾಬ್ದಾರಿಗಳೇನು,ನಮ್ಮಗಳ ಕರ್ತವ್ಯ ಸಮರ್ಪಕವಾಗಿದೆಯೆ ಎಂದು ಪುನರ್ ಮನನ ಮಾಡಿಕೊಳ್ಳಲು ಇರುವ ಒಂದು ಅವಕಾಶ ಎಂದೇ ಭಾವಿಸಬೇಕಾಗುತ್ತದೆ. ಪ್ರಕೃತಿಯ ಒಂದು ಭಾಗವಾದ ಪ್ರಾಣಿಗಳ ಸೇವೆಯ ಉದ್ದೇಶ ನಿಮ್ಮ ಉದ್ದೇಶವಾಗಿದೆ.ಪಶುಪಾಲನೆ ಗ್ರಾಮೀಣ ಜನರ ಒಂದು ಅಂಗವಾಗಿದೆ.ಪ್ರಾಣಿಗಳಿಗೆ ರೋಗ, ರುಜೀನಗಳು ಕಾಣಿಸಿಕೊಂಡಾಗ ಅವರ ಯಾತನೆ ಹೇಳತೀರದು.ಈ ಬಾರಿಯ ಘೋಷ್ಯವಾಕ್ಯ ಎಲ್ಲರನ್ನು ಒಳಗೊಳ್ಳುವಿಕೆ…

Read More

ತುರುವೇಕೆರೆ ತುರುವೇಕೆರೆ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಾಸಕ ಮಸಾಲಜಯರಾಮ್ ಗೆಲುವಿಗೆ ಮತ ನೀಡುವಂತೆ ಅವರ ಪತ್ನಿ ಸುನಂದಾ ಜಯರಾಮ್ ಕ್ಷೇತ್ರದಲ್ಲಿ ಮನೆ ಮನೆ ಪ್ರಚಾರ ಮಾಡುತ್ತಿದ್ದಾರೆ. ತಾಲೂಕಿನ ಮಾಯಸಂದ್ರ ಹೋಬಳಿಯ ಜಡಿಂiÀi ಗ್ರಾಮದಲ್ಲಿ ಶುಕ್ರವಾರ ಮನೆ ಮನೆ ಪ್ರಚಾರ ಕೈಗೊಂಡು ಮಾತನಾಡಿದ ಅವರು ನಾಮಪತ್ರ ಸಲ್ಲಿಸಿದ ದಿನದಿಂದಲೂ ತಾಲೂಕಿನಾದ್ಯಂತ ಪ್ರತಿ ನಿತ್ಯ ನೂರಾರು ಮಹಿಳಾ ಕಾರ್ಯಕರ್ತರೊಂದಿಗೆ ಪ್ರಚಾರ ಮಾಡುತ್ತಿದ್ದು. ಈಗಾಗಲೇ ದಂಡಿನಶಿವರ ಹೋಬಳಿಯಲ್ಲಿ ಎಲ್ಲ ಪಂಚಾಯಿತಿಗಳಲ್ಲಿ ಪ್ರಚಾರ ಮುಗಿಸಿದ್ದು, ಇಂದಿನಿಂದ ಮಾಯಸಂದ್ರ ಹೋಬಳಿಯಲ್ಲಿ ಚುನಾವಣಾ ಪ್ರಚಾರ ಪ್ರಾರಂಬಿಸಿದ್ದು ಗ್ರಾಮಗಳ ಎಲ್ಲ ಮನೆ ಮನೆಗೆ ತೆರಳಿ ಕರಪತ್ರ ನೀಡಿ ತಮ್ಮ ಪತಿ ಬಿಜೆಪಿ ಅಭ್ಯರ್ರ್ಥಿಗೆ ಮತ ನೀಡುವಂತೆ ಕೈ ಮುಗಿದು ಕೇಳುತ್ತಿದ್ದೇನೆ. ಈಗಾಗಲೇ ಸುಮಾರು 5 ವರ್ಷಗಳ ಕಾಲ ಶಾಸಕರಾಗಿ ಕ್ಷೇತ್ರದಲ್ಲಿ ಅಭಿವೃದಿ ಕೆಲಸ ಮಾಡಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಪಕ್ಷದಿಂದ ಸ್ಪರ್ದಿಸಿದ್ದು ಸ್ಪರ್ದಿಸಿದ್ದು ಎಲ್ಲ ಕಡೆಗಳಲ್ಲಿ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಪ್ರಚಾರದ ವೇಳೆ ಹಳ್ಳಿಗಳಲ್ಲಿ ನಮ್ಮನ್ನು…

Read More

ತುಮಕೂರು ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಅಂಗವಾಗಿ ಮತದಾರರಲ್ಲಿ ತಮ್ಮ ಮತಗಟ್ಟೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ “ನಮ್ಮ ನಡೆ ಮತಗಟ್ಟೆಯ ಕಡೆ” ಕಾರ್ಯಕ್ರಮವನ್ನು ಏಪ್ರಿಲ್ 30ರಂದು ಬೆಳಿಗ್ಗೆ 8 ಗಂಟೆಗೆ ರಾಜ್ಯಾದ್ಯಂತ ಏಕಕಾಲದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದ್ದು, ಅದರಂತೆ ತುಮಕೂರು ಜಿಲ್ಲೆಯಾದ್ಯಂತ ಸದರಿ ಕಾರ್ಯಕ್ರಮವನ್ನು ರಾಷ್ಟ್ರೀಯ ಹಬ್ಬದ ಮಾದರಿಯಲ್ಲಿ ಆಯೋಜಿಸಲಾಗುವುದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್. ಪಾಟೀಲ ಅವರು ತಿಳಿಸಿದ್ದಾರೆ. ಪ್ರಸ್ತುತ ಚುನಾವಣೆಯ ಮತದಾನ ಮೇ 10ರಂದು ನಡೆಯಲಿದ್ದು, “ನಮ್ಮ ನಡೆ ಮತಗಟ್ಟೆಯ ಕಡೆ” ಕಾರ್ಯಕ್ರಮವನ್ನು ಏಪ್ರಿಲ್ 30ರಂದು ಬೆಳಿಗ್ಗೆ 8 ಗಂಟೆಗೆ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗುವುದು. ಪ್ರಾಥಮಿಕವಾಗಿ ಮತಗಟ್ಟೆ ಹಂತದಲ್ಲಿ ಮತಗಟ್ಟೆ ಅಧಿಕಾರಿಗಳ ನೇತೃತ್ವದಲ್ಲಿ, ಗ್ರಾಮ ಪಂಚಾಯತ್ ಮಟ್ಟದಲ್ಲಿ ಪಿಡಿಓ ನೇತೃತ್ವದಲ್ಲಿ, ತಾಲ್ಲೂಕು ಮಟ್ಟದಲ್ಲಿ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ಹಾಗೂ ಅದೇ ರೀತಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ರಾಜ್ಯ ಮಟ್ಟದಲ್ಲಿ ಒಂದೇ ರೀತಿಯ ‘ಪ್ರಜಾಪ್ರಭುತ್ವದ ಹಬ್ಬ ‘ಮೇ 10…

Read More

ಮಧುಗಿರಿ ಜೆಡಿಎಸ್ ಬಿಜೆಪಿಯ ಬಿ.ಟೀಮ್ ಎಂದು ಶಾಸಕ ಜಮೀರ್ ಅಹಮದ್ ಅರೋಪಿಸಿದ್ದಾರೆ. ಇದೆ ಅಲ್ಲದೆ ರಾಜ್ಯದಲ್ಲಿ ಬಿಜೆಪಿ ಸಂಘಟನೆ ಆಗುತ್ತಿರುವುದಕ್ಕೆ ಮುಖ್ಯ ಕಾರಣ ಜೆಡಿಎಸ್ ಪಕ್ಷ ಬಿಜೆಪಿಗೆ ಅಧಿಕಾರದ ರುಚಿ ತೋರಿಸಿದವರು ಜೆಡಿಎಸ್ ಪಕ್ಷದವರು ಎಂದು ವಾಗ್ದಾಳಿ ನಡೆಸಿದರು ಪಟ್ಟಣದ ದಂಡೂರ ಬಾಗಿಲ ಸಮೀಪ ಇರುವ ಆಶುಖಾನೆ ಬಳಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಅಲ್ಪಸಂಖ್ಯಾತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು 1993 ರಲ್ಲಿ ಮಾಜಿ ಸಿಎಂ ವೀರಪ್ಪಮೊಯ್ಲಿಯವರು ಅಲ್ಪ ಸಂಖ್ಯಾತರಿಗೆ ಶೇ. 6 ರಷ್ಟು ಮೀಸಲಾತಿ ನೀಡಬೇಕೆಂದು ಅಂದಿನ ಸರ್ಕಾರಕ್ಕೆ ವರದಿ ನೀಡಿದ್ದರು ಆದರೆ ಅದನ್ನು ಜಾರಿಗೊಳಿಸುವ ವೇಳೆಗೆ ಅನ್ಯ ಕಾರಣಗಳಿಂದ ಸರ್ಕಾರ ಬದಲಾದ ಹಿನ್ನೆಲೆಯಲ್ಲಿ ದೇವೇಗೌಡರು ಮುಖ್ಯಮಂತ್ರಿಯಾದರು. ಅವರದೇ ಸರ್ಕಾರವಿದ್ದರೂ ಶೇ. 6 ರಷ್ಟು ಮೀಸಲಾತಿಯನ್ನು ಶೇ. 4 ಕ್ಕೇ ಇಳಿಸಿ ಶೇ. 2 ರಷ್ಟು ಮೀಸಲಾತಿಯನ್ನು ಕಿತ್ತುಕೊಂಡು ಅಲ್ಪಸಂಖ್ಯಾತರ ಸಮುದಾಯಕ್ಕೆ ಅನ್ಯಾಯ ಮಾಡಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಿದ್ದರಾಮಯ್ಯನವರು ಅಲ್ಪ ಸಂಖ್ಯಾತ ಸಮುದಾಯಕ್ಕೆ 3150 ಕೋಟಿ ಅನುದಾನ ನೀಡಿದ್ದರು.…

Read More

ತುಮಕೂರು ಅಶ್ಲೀಲ ಮತ್ತು ಮಾರ್ಪಾಟು ಮಾಡಿರುವ ವಿಡಿಯೋಗೆ ಸಂಬಂಧಿಸಿದಂತೆ ಯಾವುದೇ ವರದಿಯನ್ನು ಪ್ರಕಟಿಸದಂತೆ ತುಮಕೂರು ನಗರ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ತುಮಕೂರು ಜಿಲ್ಲಾ ನ್ಯಾಯಾಲಯದಿಂದ ತಡೆಯಾಜ್ಞೆಯನ್ನು ತಂದಿದ್ದಾರೆ. ಮಾನಹಾನಿ ಮಾಡುವ ಉದ್ದೇಶದಿಂದ ಮಾರ್ಪಡಿಸಿರುವ ವಿಡಿಯೋ ಮತ್ತು ಪೆÇೀಟೋವನ್ನು ಪ್ರಕಟಿಸುವ ಸಾಧ್ಯತೆ ಇದ್ದು, ಇದರಿಂದ ನನಗೆ ಮಾನಹಾನಿ ಆಗುವ ಸಾಧ್ಯತೆ ಹೆಚ್ಚಿರುವುದರಿಂದ ಮಾನಹಾನಿ ಆಗುವಂತಹ ವರದಿಯನ್ನು ಪ್ರಕಟಿಸದಂತೆ ತಡೆಯಾಜ್ಞೆ ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಮಾನಹಾನಿ ವರದಿ ಪ್ರಕಟಿಸದಂತೆ 17 ಪತ್ರಿಕೆ | ಸುದ್ದಿಸಂಸ್ಥೆಗಳ ಸಂಪಾದಕರಿಗೆ ಸಮನ್ಸ್ ಜಾರಿಗೊಳಿಸಿ, ತಾತ್ಕಾಲಿಕ ತಡೆಯಾಜ್ಞೆಯನ್ನು ನೀಡಿ ಪ್ರಕರಣವನ್ನು ಜೂ.06ಕ್ಕೆ ಮುಂದೂಡಿ ಆದೇಶವನ್ನು ಹೊರಡಿಸಿದೆ.

Read More

ಕೊರಟಗೆರೆ ಎತ್ತಿನಹೊಳೆ ಯೋಜನೆಯಡಿ ಬೈರಗೊಂಡ್ಲು ಬಳಿ ಬಫರ್ ಡ್ಯಾಂನಿಂದ 109ಕೆರೆಗಳಿಗೆ ನೀರು ಹರಿಯಲಿದೆ.. ಬಯಲುಸೀಮೆ ಪ್ರದೇಶದ ಸಾವಿರಾರು ರೈತಾಪಿವರ್ಗದ ನೀರಾವರಿಯ ಕನಸು ಇನ್ನೇರಡು ವರ್ಷದಲ್ಲಿ ನನಸಾಗಲಿದೆ.. 2023ಕ್ಕೆ ಕಾಂಗ್ರೆಸ್ ಸರಕಾರ ಮತ್ತೇ ಅಧಿಕಾರಕ್ಕೆ ಬರುತ್ತೇ.. ಕೊರಟಗೆರೆ ಕ್ಷೇತ್ರದಿಂದ ನಾನು ಶಾಸಕನಾಗಿ ಆಯ್ಕೆ ಆಗ್ತೀನಿ. ಕೊರಟಗೆರೆಯು ಮತ್ತಷ್ಟು ಅಭಿವೃದ್ದಿಯ ಪಥದತ್ತಾ ಸಾಗುವುದು ಖಚಿತ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ತಿಳಿಸಿದರು. ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ಪಾತಗಾನಹಳ್ಳಿ ಮತ್ತು ವಜ್ಜನಕುರಿಕೆ ಗ್ರಾಪಂ ವ್ಯಾಪ್ತಿಯ 25ಕ್ಕೂ ಅಧಿಕ ಗ್ರಾಮಗಳಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಬುಧವಾರ ಏರ್ಪಡಿಸಲಾಗಿದ್ದ ಪ್ರಚಾರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕೊರಟಗೆರೆ ಕ್ಷೇತ್ರದಲ್ಲಿ 7ವಸತಿ ಶಾಲೆ ಮತ್ತು ಅತ್ಯುತ್ತಮ ಆಸ್ಪತ್ರೆಗಳನ್ನು ಕಟ್ಟಿಸಿದ್ದೇನೆ. 5ವರ್ಷದ ಅವಧಿಯಲ್ಲಿ 2500ಕೋಟಿ ಅನುಧಾನ ತಂದು ಕೊರಟಗೆರೆ ಕ್ಷೇತ್ರದ ಜನತೆಯ ಋಣ ತೀರಿಸುವ ಕೆಲಸ ಮಾಡಿದ್ದೇನೆ. 2023ಕ್ಕೆ ಮತ್ತೇ ನಾನು ಗೆದ್ದು 5ಸಾವಿರ ಕೋಟಿ ಅನುಧಾನ ತರುತ್ತೇನೆ. ನನಗೇ ರಾಜಕೀಯ ಶಕ್ತಿ ನೀಡಿದ ಕೊರಟಗೆರೆ ಕ್ಷೇತ್ರದ ಜನರ ಋಣವನ್ನು ತೀರಿಸುವ…

Read More

ತುಮಕೂರು ಕಾಂಗ್ರೆಸ್‍ನ ಗಾಂಧಿವಾದ ಮತ್ತು ಬಿಜೆಪಿಯ ನಾಥೂರಾಮ್ ಗೂಡ್ಸೆ ವಾದದ ನಡುವೆ ಪ್ರಸಕ್ತ ಚುನಾವಣೆ ನಡೆಯುತ್ತಿದ್ದು, ಜನರ ಆಶೀರ್ವಾದ ಬಲದಿಂದ ರಾಜ್ಯದಲ್ಲಿ ಸ್ಪಷ್ಟ ಬಹುಮತ ಪಡೆದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ದೆಹಲಿ ಕಾಂಗ್ರೆಸ್ ಶಾಸಕಿ ಹಾಗೂ ಎಐಸಿಸಿ ಮಾಧ್ಯಮ ವಕ್ತಾರೆ ಅಲ್ಕಾಲಂಬಾ ತಿಳಿಸಿದರು. ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಹೊಸ ಭರವಸೆಗಳು ಮತ್ತು ಬಿಜೆಪಿ ಪಕ್ಷದ ಶೂನ್ಯ ಸಾಧನೆ ಪ್ರಸಕ್ತ ಚುನಾವಣೆಯಲ್ಲಿ ಚರ್ಚೆಗೆ ಗ್ರಾಸವಾಗಿ ಕಾಂಗ್ರೆಸ್ ಪಕ್ಷದ ಪರವಾಗಿ ಜನಮತ ವ್ಯಕ್ತವಾಗಲಿದೆ ಎಂದರು. ಶೇ.40 ರಷ್ಟು ಕಮೀಷನ್ ಪಡೆಯುವಲ್ಲಿ ಮಗ್ನವಾದ ರಾಜ್ಯ ಬಿಜೆಪಿ ಸರ್ಕಾರ ಅಭಿವೃದ್ಧಿಯತ್ತ ಗಮನಹರಿಸದೆ ಕೋಮು ದ್ವೇಶ ಬಿತ್ತಿ ಸಮಾಜದ ಶಾಂತಿ, ಸೌಹಾರ್ಧತೆ, ಸ್ವಾಸ್ತ್ಯವನ್ನು ಕೆಡಿಸುವ ಹುನ್ನಾರ ನಡೆಸಿದೆ. ಇದಕ್ಕೆ ಕಾಂಗ್ರೆಸ್ ಪಕ್ಷ ಅವಕಾಶ ನೀಡುವುದಿಲ್ಲ ಎಂದರು. ಕೇಂದ್ರ ಸರ್ಕಾರದಲ್ಲಿ ಗೃಹಮಂತ್ರಿಯಾಗಿರುವ ಅಮಿತ್ ಶಾ ಚುನಾವಣಾ ಪ್ರಚಾರದ ವೇಳೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದಂಗೆ, ಗಲಾಟೆಗಳನ್ನು…

Read More

ತುಮಕೂರು  ಕ್ಷೇತ್ರದ ಜನರಿಗಷ್ಟೇ ಅಲ್ಲದೇ ಜೆಡಿಎಸ್ ಮುಖಂಡರು, ಕಾರ್ಯಕರ್ತರಿಗೂ ಮೋಸ ಮಾಡಿರುವ ಶಾಸಕ ಗೌರಿಶಂಕರ್ ಅವರನ್ನು ಸೋಲಿಸುವುದೇ ನಮ್ಮ ಗುರಿ ಎಂದು ಜೆಡಿಎಸ್ ನಿಂದ ಹೊರ ಬಂದಿರುವ ಮುಖಂಡರು ಹೇಳಿದರು. ಜೆಡಿಎಸ್ ಮಾಜಿ ಮುಖಂಡರಾದ ಪಂಚೆ ರಾಮಚಂದ್ರಯ್ಯ, ವೈ.ಟಿ.ನಾಗರಾಜ್, ಹೆತ್ತೇನಹಳ್ಳಿ ವೆಂಕಟೇಶ್, ಬೀಮಸಂದ್ರ ಕೃಷ್ಣಪ್ಪ,ಕೆಂಪರಾಜ್, ವೈಟಿ ನಾಗರಾಜ್, ಬೆಳ್ಳಿ ಲೋಕೇಶ್ ಜಯಂತ್ ಗೌಡ, ಮತ್ತಿತರರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಗೌರಿಶಂಕರ್ ನಕಲಿ ಬಾಂಡ್ ಗಳನ್ನು ಹಂಚುವ ಮೂಲಕ ಜನರನ್ನು ವಂಚಿಸಿ ಕಳೆದ ಸಲ ಗೆಲುವು ಸಾಧಿಸಿದರು. ಪ್ರತಿ ಬಡ ಮಕ್ಕಳಿಗೂ ಎರಡು ಲಕ್ಷ ರೂಪಾಯಿ ಬರಲಿದೆ ಎಂದು ಹೇಳಿದ್ದರು. ಆನಂತರ ಅವುಗಳು ನಕಲಿ ಬಾಂಡ್ ಗಳು ಎಂಬುದು ಗೊತ್ತಾಯಿತು. ಇದೇ ವಿಚಾರದಲ್ಲಿ ಹೈ ಕೋರ್ಟ್ ಕೂಡ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದೆ. ಸದ್ಯ , ಸುಪ್ರೀಂ ಕೋರ್ಟ್ ನಲ್ಲಿ ಇನ್ನೂ ವಿಚಾರಣೆ ನಡೆಸಬೇಕಾಗಿದೆ. ಸದ್ಯಕ್ಕೆ ತಡೆಯಾಜ್ಞೆ ಸಿಕ್ಕಿದೆಯಷ್ಟೆ. ಜನರ ಕಣ್ಣಲ್ಲಿ ಏನು ತಪ್ಪಾಗಿಲ್ಲ ಎಂದು ತೋರಿಸಿಕೊಳ್ಳಲಷ್ಟೇ ಸ್ಪರ್ಧೆ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ…

Read More

ತುಮಕೂರು ಕೇಂದ್ರದ ಜನತೆ ಮೋಸಗಾರ ಶಾಸಕರನ್ನು ಮನೆಗೆ ಕಳುಹಿಸಿ, ಅಭಿವೃದ್ದಿಯ ಹರಿಕಾರರಾಗಿರುವ ಸುರೇಶಗೌಡ ರನ್ನು ಆಯ್ಕೆ ಮಾಡಲು ತುದಿಗಾಲಲ್ಲಿ ನಿಂತಿದ್ದು, ಮೇ.13ರ ಫಲಿತಾಂಶದಲ್ಲಿ ಅದು ವ್ಯಕ್ತವಾಗಲಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನಕುಮಾರ್ ಕಟೀಲ್ ತಿಳಿಸಿದ್ದಾರೆ. ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಸುರೇಶಗೌಡ ಅವರ ಪರವಾಗಿ ಮತಯಾಚಿಸಲು ಆಗಮಿಸಿ,ಕೈದಾಳದ ಶ್ರೀಚನ್ನಕೇಶವಸ್ವಾಮೀಗೆ ಪೂಜೆ ಸಲ್ಲಿಸಿದ ನಂತರ ತೆರೆದ ಜೀಪಿನಲ್ಲಿ ಮೆರವಣಿಗೆಯ ವೇಳೆ ಮಾತನಾಡಿದ ಅವರು,ಸುರೇಶಗೌಡರ ಕಾಲದಲ್ಲಿ ಜಕಣಚಾರಿ ಹುಟ್ಟಿದ ಈ ಊರಿನಲ್ಲಿ ಅವರ ಹೆಸರಿನಲ್ಲಿಯೇ ಒಂದು ಸಮುದಾಯಭವನವನ್ನು ನಿರ್ಮಿಸಿದರೆ, ಹಾಲಿ ಶಾಸಕರು ಅದರ ಬಾಗಿಲು ತೆಗೆಯುವ ಗೋಜಿಗೂ ಹೋಗದೆ, ಪಾಳು ಬೀಳುವಂತೆ ಮಾಡಿದ್ದಾರೆ. ಈ ಕ್ಷೇತ್ರಕ್ಕೆ ಅಭಿವೃದ್ದಿಯ ಹರಿಕಾರರು ಬೇಕೋ, ಇಲ್ಲ ಜನರಿಗೆ ಮೋಸ ಮಾಡಿ ಗೆದ್ದ ಶಾಸಕರು ಬೇಕೋ ನೀವೇ ತೀರ್ಮಾನ ಮಾಡಿಕೊಂಡು ಮತ ನೀಡಿ ಎಂದರು. ಹಾಲಿ ಶಾಸಕರನ್ನು ಮೋಸಗಾರ ಎಂದು ನಾನು ಹೇಳುತ್ತಿಲ್ಲ.ಈ ರಾಜ್ಯದ ಉಚ್ಚ ನ್ಯಾಯಾಲಯ ಹೇಳುತ್ತಿದೆ.ದೇಶ ಮತ್ತು ರಾಜ್ಯದಲ್ಲಿರುವ ಡಬಲ್ ಇಂಜಿನ್ ಸರಕಾರ ಜನರ…

Read More