ತುಮಕೂರು ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿಂದ 80 ವರ್ಷ ಮೇಲ್ಪಟ್ಟ 6595 ಮತದಾರರು ಹಾಗೂ ವಿಶೇಷ ಚೇತನ ಮತದಾರರು 2845 ಸೇರಿ ಒಟ್ಟು 9,440 ಮತದಾರರು ಅಂಚೆ ಮತದಾನ ಮಾಡಲು ಇಚ್ಛಿಸಿದ್ದು, ಅರ್ಹ ಅಂಚೆ ಮತದಾರರ ಮಾಹಿತಿ ಪಡೆದು ಸೆಕ್ಟರ್‍ವಾರು ಮಾರ್ಗ ನಕ್ಷೆಗಳನ್ನು ಸಿದ್ಧಪಡಿಸಿಟ್ಟುಕೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್.ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು. ತುಮಕೂರಿನ ಗುಬ್ಬಿ ವೀರಣ್ಣ ಕಲಾ ಮಂದಿರದಲ್ಲಿಂದು ಕರ್ನಾಟಕ ವಿಧಾನಸಭಾ ಚುನಾವಣೆ-2023ರ ಸಂಬಂಧ ಹೋಂ ವೋಟಿಂಗ್ ಕಾರ್ಯಕ್ಕೆ ನಿಯೋಜನೆಗೊಂಡಿರುವ ಪೋಲಿಂಗ್ ಅಧಿಕಾರಿಗಳಿಗಾಗಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 85742 ಮಂದಿ ದಿವ್ಯಾಂಗ ಮತ್ತು 80+ ಮತದಾರರಿಗೆ 12 ಡಿ ಅರ್ಜಿಗಳನ್ನು ವಿತರಿಸಲಾಗಿದ್ದು, ಈ ಪೈಕಿ 9440 ಮತದಾರರು ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ಇಚ್ಛಿಸಿದ್ದು, ಅವರುಗಳ ವಾಸ ಸ್ಥಳಕ್ಕೆ ಮತಗಟ್ಟೆ ಅಧಿಕಾರಿಗಳ ತಂಡ ಭೇಟಿ ನೀಡಿ ಅಂಚೆ ಮತ ಪತ್ರ ಮೂಲಕ ಹೋಂ ವೋಟಿಂಗ್ ಮಾಡಿಸುವ ಸಂಬಂಧ ಮತಗಟ್ಟೆ…
Author: News Desk Benkiyabale
ತುಮಕೂರು ಜನಬಲ,ತೊಳ್ಬಲವಿಲ್ಲದೆ,ನನ್ನ ಸಮಾಜ ಸೇವೆಯನ್ನು ಮುಂದಿಟ್ಟುಕೊಂಡು ಕ್ಷೇತ್ರದ ಜನರ ಮುಂದೆ ಮತ ಕೇಳಲಿದ್ದೇನೆ ಎಂದು ಜೆಡಿಎಸ್ ಬಂಡಾಯ ಅಭ್ಯರ್ಥಿ ನರಸೇಗೌಡ ತಿಳಿಸಿದ್ದಾರೆ. ನಗರದ ಖಾಸಗಿ ಹೊಟೇಲ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ಕ್ಷೇತ್ರದ ಬಗ್ಗೆ ಹಲವಾರು ಕನಸುಗಳನ್ನು ಕಂಡಿದ್ದು, ಅದನ್ನು ಸಹಕಾರ ಮಾಡಲು ಜನಸಾಮಾನ್ಯರು, ಮತ ನೀಡಿ ಸಹಕರಿಸುವಂತೆ ಮನವಿ ಮಾಡಿದರು. ರಾಜಕೀಯ ಹಿನ್ನೆಲೆಯಿಲ್ಲದ ಕುಟುಂಬದಿಂದ ಬಂದಿರುವ ನನಗೆ, ನಾನು ಮಾಡಿರುವ ಸಮಾಜ ಸೇವೆಯೇ ನನಗೆ ಶ್ರೀರಕ್ಷೆ. ಜೀವನಕ್ಕಾಗಿ ಗುತ್ತಿಗೆದಾರ ವೃತ್ತಿ ನಡೆಸುತ್ತಿದ್ದು, ಅದರಿಂದ ಬಂದ ದುಡಿಮೆಯಲ್ಲಿಯೇ ಕೊಂಚ ಭಾಗವನ್ನು ಸಮಾಜಸೇವೆಗೆ ಮೀಸಲಿಟ್ಟು, ನನ್ನ ಕೈಲಾದ ಸೇವೆಯನ್ನು ಮಾಡುತ್ತಾ ಬಂದಿದ್ದೇನೆ.ಕಳೆದ 20ಕ್ಕೂ ಹೆಚ್ಚು ವರ್ಷಗಳ ಕಾಲ ಜೆಡಿಎಸ್ ಪಕ್ಷಕ್ಕಾಗಿ ದುಡಿದಿದ್ದೇನೆ.ಕಳೆದ ಮೂರು ಚುನಾವಣೆಗಳಿಂದ ಜೆಡಿಎಸ್ ಪಕ್ಷದ ಟಿಕೇಟ್ ಬಯಸಿ ಅರ್ಜಿ ಸಲ್ಲಿಸಿದರೂ ಇದುವರೆಗೂ ನೀಡಿಲ್ಲ.ದೇವೇಗೌಡರ ಕೈಯಿಂದ ಬಿ.ಫಾರಂ ಪಡೆಯುವ ಅದೃಷ್ಟ ನನಗಿಲ್ಲ ಎಂದುಕೊಳ್ಳುತ್ತೇನೆ.ಯಾರನ್ನು ದೂಷಿಸುವುದಿಲ್ಲ. ಹಾಗಾಗಿ ಜನರ ಮುಂದೆ ಹೋಗಿ ಮತ ಕೇಳುತ್ತೇನೆ ಎಂದರು. ಜೆಡಿಎಸ್ ಪಕ್ಷಕ್ಕೆ ಬಂಡಾಯವಾಗಿ ಕಣಕ್ಕೆ ಇಳಿದಿದ್ದ ನಾನು…
ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಪಿ.ಕೆ.ಎಸ್ ಕಾಲೋನಿಯ ಸಂಪನ್ಮೂಲ ಕೇಂದ್ರದಲ್ಲಿ 890ನೇ ಬಸವೇಶ್ವರರ ಜಯಂತಿಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾದ ಇಕ್ಬಾಲ್ ಅಹಮದ್ ಸಮಿತಿಯ ಕಛೇರಿಗೆ ಭೇಟಿ ನೀಡಿ ಬಸವಣ್ಣನವರ ಜಯಂತಿಯಲ್ಲಿ ಬಾಗಿಯಾಗಿ ಮತಯಾಚನೆ ಮಾಡಿ ಮಾತನಾಡಿದರು. ನಾನು ನಜರಾಬಾದ್ ಸ್ಲಂನಲ್ಲಿ ಜನಿಸಿ ಸ್ಲಂ ಜನರ ಕಷ್ಟ ಸುಖದ ಅನುಭವವಾಗಿದೆ ಈಗ ಈದ್ಗಾ ಮೊಹಲ್ಲದ್ದಲ್ಲಿದ್ದೇನೆ ಹಾಗಾಗಿ ನಾನು ಸ್ಲಂ ನಿವಾಸಿಯಾಗಿ ಬದುಕಿದ ಅನುಭವವಿದೆ ಕಳೆದ 20 ವರ್ಷಗಳಿಂದ ಸ್ಲಂ ಸಮಿತಿ ಹೋರಾಟವನ್ನು ಹತ್ತಿರದಿಂದ ನೋಡಿದ್ದೇನೆ, ತುಮಕೂರು ನಗರ ಮಾತ್ರವಲ್ಲದೇ ಜಿಲ್ಲೆಯಲ್ಲಿ ಸಾವಿರಾರು ಸ್ಲಂ ಜನರಿಗೆ ಸಂವಿಧಾನದ ಆಶಯದಂತೆ ಹಕ್ಕುಗಳನ್ನು ದೊರಕಿಸುವ ಭೂಮಿ ಮತ್ತು ವಸತಿ ಮೇಲೆ ಕೆಲಸ ಮಾಡಿ ಸ್ಲಂ ನಿವಾಸಿಗಳನ್ನು ಒಕ್ಕಲೆಬ್ಬಿಸದಂತೆ ಸಂಘಟನೆ ತಡೆದಿದೆ, ಹೋರಾಟದಿಂದ ತುಮಕೂರು ನಗರದಲ್ಲಿ ಸಾವಿರಾರು ಸ್ಲಂ ಜನರು, ಬಡವರು ಪ್ರತಿಫಲ ಪಡೆದಿದ್ದಾರೆ ಇದರಲ್ಲಿ ದಿಬ್ಬೂರು ವಸತಿ ಮತ್ತು ಮಾರಿಯಮ್ಮ ವಸತಿ ಸಂಕೀರ್ಣ ಸೇರಿದಂತೆ ನಗರದಲ್ಲಿ 5 ಸಾವಿರಕ್ಕೂ ಹೆಚ್ಚು…
ಕೊರಟಗೆರೆ ಲೋಕಸಭಾ ಚುನಾವಣೆಗೆ ನಾನು ನಿಲ್ಲೋದಿಲ್ಲ ಅಂತಾ ಹೇಳ್ದೆ.. ಆದರೇ ಕಾಂಗ್ರೆಸ್ ಪಕ್ಷದವ್ರು ನನಗೇ ತುಮಕೂರು ಜಿಲ್ಲೆಗೆ ಕರೆತಂದು ಸೋಲಿಸಿ ಅವಮಾನ ಮಾಡಿದ್ರು.. ನನಗೇ ಸೋಲಿಸಿ ಅವಮಾನ ಮಾಡಿದ ನೋವು ಇನ್ನೂ ಕಾಡ್ತೀದೆ.. ನಮ್ಮೇಲ್ಲರ ಆತ್ಮೀಯ ಸುಧಾಕರಲಾಲ್ ಗೆಲ್ಲಿಸಿ ನನ್ನ ಕಣ್ಣೀರು ಒರೆಸಬೇಕಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಕಾರ್ಯಕರ್ತರಿಗೆ ಕರೆ ನೀಡಿದರು. ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಕೇಂದ್ರದ ಗ್ರಾಮದಲ್ಲಿ ಜೆಡಿಎಸ್ ಪಕ್ಷದಿಂದ ಸೋಮವಾರ ಏರ್ಪಡಿಸಲಾಗಿದ್ದ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ನಾನು 1994ರಲ್ಲಿ ಸಿಎಂ ಆಗಿದ್ದಾಗ 11ಕ್ಷೇತ್ರದಲ್ಲಿ 9ಕ್ಷೇತ್ರ ಗೆಲ್ಲಿಸಿದ ತುಮಕೂರು ಜಿಲ್ಲೆಯ ಪುಣ್ಯಾತ್ಮರು ನೀವು. ಕಾಂಗ್ರೆಸ್ ನಾಯಕರು ನನಗೇ ಅವಮಾನ ಮಾಡಿದ ನೋವು ಇನ್ನೂ ನನ್ನನ್ನು ಕಾಡ್ತೀದೆ. ಸುಧಾಕರಲಾಲ್ ಬಡಕುಟಂಬದ ಓಬ್ಬ ಸಾಮಾನ್ಯ ಜೆಡಿಎಸ್ ಕಾರ್ಯಕರ್ತ. 25ವರ್ಷದಿಂದ ಕೊರಟಗೆರೆ ಕ್ಷೇತ್ರದಲ್ಲಿ ಬಡಜನರ ಸೇವೆ ಮಾಡ್ತೀದ್ದಾನೆ. ನೀವು ಸಾಮಾನ್ಯ ಕಾರ್ಯಕರ್ತನನ್ನ ಬೆಳೆಸಿದ್ದಿರಾ 2023ಕ್ಕೆ ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿ. ಕುಮಾರಸ್ವಾಮಿ ಸರಕಾರ ಸುಧಾಕರಲಾಲ್‍ಗೆ ವಿಶೇಷ ಸ್ಥಾನಮಾನ ನೀಡ್ತಾರೇ…
ತುಮಕೂರು ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ತತ್ವಜ್ಞಾನಿ ಆದಿ ಶಂಕರಾಚಾರ್ಯರ ದಿನಾಚರಣೆಯನ್ನು ತತ್ವಜ್ಞಾನಿಗಳ ದಿನವಾಗಿ ಆಚರಿಸಲಾಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕಸಾಪ ಜಂಟಿಯಾಗಿ ಆಯೋಜಿಸಿದ್ದ ಶ್ರೀಆದಿ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮವನ್ನು ರಾಜ್ಯದಲ್ಲಿ ವಿಧಾನಸಭೆ ಚುನಾವಣಾ ನೀತಿಸಂಹಿತೆ ಅಗತ್ಯವಿರುವ ಎರಡು ಸಂಪತ್ತುಗಳು. ಇವುಗಳೇ ಮನುಷ್ಯನನ್ನು ಮೋಕ್ಷಕ್ಕೆ ತೆಗೆದುಕೊಂಡು ಹೋಗುವ ಸಾಧನಗಳಾಗಿವೆ ಎಂಬುದನ್ನುಜಾರಿಯಲ್ಲಿರುವುದರಿಂದ ಶ್ರೀ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುμÁ್ಟರ್ಚನೆ ಸಲ್ಲಿಸುವ ಮುಖೇನ ಸರಳ ಹಾಗೂ ಸಾಂಕೇತಿಕವಾಗಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ,ವಿದ್ಯೆ ಮತ್ತು ಜ್ಞಾನ ಈ ಪ್ರಪಂಚದಲ್ಲಿ ಬದುಕಲು ತಮ್ಮ ಅದೈತ ಸಿದ್ದಾಂತದ ಮೂಲಕ ಶ್ರೀಆದಿ ಶಂಕರಾಚಾರ್ಯರು ತೋರಿಸಿಕೊಟ್ಟಿದ್ದಾರೆ.ಎಲ್ಲರನ್ನು ಒಳಗೊಂಡ ಸೌಹಾರ್ಧ, ಸಾಮಾರಸ್ಯ ಸಮಾಜ ನಿರ್ಮಾಣಕ್ಕೆ ಎಲ್ಲರೂ ಒಗ್ಗೂಡುವಂತೆ ಶಂಕರಾಚಾರ್ಯರು ಕರೆ ನೀಡಿದ್ದರು ಎಂದರು. ಎಂ.ವಿ.ನಾಗರಾಜರಾವ್ ಮಾತನಾಡಿ, ಜಗತ್ತಿಗೆ ಶಿವನೇ ತಂದೆಯಾದರೆ, ಪಾವರ್ತಿಯೇ ತಾಯಿ ಎಂದು ಪ್ರತಿಪಾದಿಸಿದ ಆದಿ ಶಂಕರಾಚಾರ್ಯರು, ತಮ್ಮ ಸಿದ್ದಾಂತಗಳ ಬದುಕಿನ ದರ್ಶನ ಮಾಡಿಸಿದರು ಎಂದರು. ವೇದಿಕೆಯಲ್ಲಿ ಟೂಡಾ ಅಧ್ಯಕ್ಷರಾದ ಹೆಚ್…
ತುಮಕೂರು ಕಳೆದ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ ಬಾರಿ ಬದಲಾವಣೆ ಕಾಣುತ್ತಿದ್ದು,ಸ್ಮಾರ್ಟ್ ಸಿಟಿಯ ಮೂಲಕ ತುಮಕೂರು ಸಹ ಪ್ರಗತಿಯ ಹಾದಿಯಲ್ಲಿದೆ ಎಂದು ಮಧ್ಯಪ್ರದೇಶದ ಸಂಸದ ಹಾಗು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಸ್ ವಿಜಯ್ ಬರ್ಜಿಯ ಅಭಿಪ್ರಾಯ ಪಟ್ಟಿದ್ದಾರೆ ನಗರದ ಬಾಜಪ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಸ್ಮಾರ್ಟ್ ಸಿಟಿಗಳ ಜೊತೆಗೆ ಸ್ಮಾರ್ಟ್ ವಿಲೇಜ್ಗಳ ನಿರ್ಮಾಣಕ್ಕು ಬಿಜೆಪಿ ಒತ್ತು ನೀಡಿದ್ದು, ಇದೇ ವೇಗದಲ್ಲಿ ವಿಕಾಸ ಮುಂದುವರೆದರೆ 2047 ಕ್ಕೆ ಅಂದರೆ ಸ್ವಾತಂತ್ರ್ಯ ಬಂದ ನೂರನೇ ವರ್ಷಕ್ಕೆ ಭಾರತ ಪ್ರಪಂಚದ ನಂ.1 ರಾಷ್ಟವಾಗಲಿದೆ ಎಂದರು. ಕೇಂದ್ರ ದಲ್ಲಿ ಮೋದಿ ಅಧಿಕಾರಕ್ಕೆ ದ ನಂತರ ರಾಷ್ಟ್ರೀಯ ಹೆದ್ದಾರಿ ಗಳ ನಿರ್ಮಾಣ ಕಾರ್ಯದಲ್ಲಿ ಸಾಕಷ್ಟು ವೇಗ ಪಡೆದುಕೊಂಡಿದೆ.ಇದರ ಫಲವಾಗಿ ಜನರಿಗೆ ಸಮಯದ ಜೊತೆಗೆ ಇಂಧನದ ಉಳಿತಾಯ ಸಹ ಆಗುತ್ತಿದೆ.ಅಮೇರಿಕಾದಂತಹ ಅರ್ಥಿಕತೆಯೇ ಕುಸಿದು ಜನರು ತತ್ತರಿಸುತ್ತಿರುವ ಕಾಲದಲ್ಲಿ, ಭಾರತದ ಅರ್ಥಿಕತೆ ಅತ್ಯಂತ ಸ್ಥಿರವಾಗಿದೆ ಎಂದರೆ ಅದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರ ಸಧೃಡ ಅಡಳಿತ.ಡಬಲ್ ಇಂಜಿನ್ ಸರಕಾರ ಎಲ್ಲಾ…
ತುಮಕೂರು: ನಾನು ಶಾಸಕನಾಗಿದ್ದ ಕಾಲದಲ್ಲಿ ರಸ್ತೆ,ಕುಡಿಯುವ ನೀರು, ಚರಂಡಿ, ಶಿಕ್ಷಣ, ಕೈಗಾರಿಕೆ ಎಲ್ಲದರಲ್ಲಿಯೂ ಮುಂದಿದ್ದ ತುಮಕೂರು ಗ್ರಾಮಾಂತರ ಕ್ಷೇತ್ರವನ್ನು 2018ರಲ್ಲಿ ಆಯ್ಕೆಯಾದ ಜೆಡಿಎಸ್ ಶಾಸಕರ ನಿರ್ಲಕ್ಷದಿಂದಾಗಿ ದರಿದ್ರ ಕ್ಷೇತ್ರವಾಗಿ ಮಾರ್ಪಡಿಸಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಬಿ.ಸುರೇಶಗೌಡ ಆರೋಪಿಸಿದ್ದಾರೆ. ಗ್ರಾಮಾಂತರ ಕ್ಷೇತ್ರದ ಕಚೇರಿ ಶಕ್ತಿ ಸೌಧದಲ್ಲಿ ತುಮಕೂರು ಗ್ರಾಮಾಂತರದ ಬೋವಿ ಸಮುದಾಯದ ಮುಖಂಡರ ಸಭೆ ನಡೆಸಿ ಮಾತನಾಡಿದ ಅವರು, ಪ್ರತಿ ಮನೆಗೆ ನಲ್ಲಿ,ಕುಡಿಯುವ ನೀರು, ರಸ್ತೆ, ಚರಂಡಿ,ಶೈಕ್ಷಣಿಕ ಅಭಿವೃದ್ದಿ ಒತ್ತು ನೀಡಿದ್ದರ ಪರವಾಗಿ ಕ್ಷೇತ್ರದಲ್ಲಿ ಸುಮಾರು 20ಕ್ಕು ಹೆಚ್ಚು ಸರಕಾರಿ ಶಾಲೆಗಳು ನವೀಕರಣಗೊಂಡ ಪರಿಣಾಮ ಕ್ಷೇತ್ರದ ಸಾವಿರಾರು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಯಿತು.ಆದರೆ ಇಂದು ಬಹುತೇಕ ಶಾಲೆಗಳಲ್ಲಿ ಬಿಸಿಯೂಟಕ್ಕೆ ನೀರಿಲ್ಲ. ಶೌಚಾಲಯಕ್ಕೆ ನೀರಿಲ್ಲ. ಇಂತಹ ಪರಿಸ್ಥಿತಿಗೆ ಹಾಲಿ ಶಾಸಕರ ನಿರ್ಲಕ್ಷವೇ ಕಾರಣ ಎಂದರು. ಬೋವಿ ಸಮಾಜ ಪರಿಶ್ರಮಕ್ಕೆ ಹೆಸರಾದ ಸಮುದಾಯ. ಮಾನಸಿಕ ಶ್ರಮಕ್ಕಿಂತ ದೈಹಿಕ ಶ್ರಮ ಹೆಚ್ಚು. ಆದರೆ ಇಂದಿಗೂ ಶಿಕ್ಷಣ, ಉದ್ಯೋಗದಲ್ಲಿ ಇಂದಿಗೂ ಅತ್ಯಂತ ಹಿಂದುಳಿದ…
ತುಮಕೂರು ಅಣ್ಣ ಬಸವಣ್ಣನವರು 12ನೇ ಶತಮಾನದಲ್ಲಿ ಕಾಯಕ ಜನರಲ್ಲಿ ವಚನದ ಮೂಲಕ ತಮ್ಮ ಕಸುಬುಗಳಿಗೆ ಮನ್ನಣೆ ನೀಡಿ ಸಮಾಜದ ಮುಖ್ಯವಾಹಿನಿಗೆ ತಂದು ಸಾಮಾಜಿಕ ಕ್ರಾಂತಿ ಮಾಡಿದ ಮಾದರಿಯೇ ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆ ಸ್ಲಂ ಜನರನ್ನು ಸಂಘಟಿಸಿ ಸಮಾಜ ಬದಲಾವಣೆ ಮಾಡುವುದಕ್ಕೆ ಸ್ಪೂರ್ತಿಯಾಗಿದೆ ಎಂದು ಎಸ್.ಜೆ,ಕೆ ರಾಜ್ಯ ಸಂಚಾಲಕ ಎ,ನರಸಿಂಹಮೂರ್ತಿಯವರು ಹೇಳಿದ್ದರು, ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಪಿ.ಕೆ.ಎಸ್ ಕಾಲೋನಿಯ ಸಂಪನ್ಮೂಲ ಕೇಂದ್ರದಲ್ಲಿ 890ನೇ ಬಸವೇಶ್ವರರ ಜಯಂತಿಯನ್ನು ಆಯೋಜಿಸಲಾಗಿತ್ತು. ಬಸವಣ್ಣನವರ ಭಾವಚಿತ್ರ ಮತ್ತು ವಚನಗಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಎ.ನರಸಿಂಹಮೂರ್ತಿ ಕಾಯಕದ ಮಾತು ಹೇಳಿದ ಅರ್ಥಶಾಸ್ತ್ರಜ್ಞ ಜಗತ್ತಿನಲ್ಲಿಯೇ ಮೊಟ್ಟ ಮೊದಲು ಅನುಭವ ಮಂಟಪದ ಮೂಲಕ ಸಂಸತ್ ನಿರ್ಮಿಸಿದ ರಾಜಕೀಯ ತಜ್ಞ, ಅಂತರ್‍ಜಾತಿ ವಿವಾಹ ಮಾಡಿದ ಸಮಾಜತಜ್ಞ ಮಹಿಳೆಯರಿಗೆ ಸಮಾನ ಅಧಿಕಾರ ಕೊಟ್ಟ ಸಮಾನತಾವಾದಿಯಾಗಿ ಎಲ್ಲಾ ಜಾತಿಯ ಶರಣರನ್ನು ಸಮಾನಾಗಿ ಕಂಡು ಸಾವಿರಾರು ವಚನಗಳ ಮೂಲಕ ಮಾನವೀಯತೆ ಸಾರಿದ ಮಹಾನ್ ಸಮಾಜ ಸುಧಾರಕ ಬಸವಣ್ಣ 12ನೇ ಶತಮಾನದಲ್ಲಿ ಕೆಳಜಾತಿಯ…
ತುಮಕೂರು ಸಿದ್ಧ ಗಂಗಾ ಮಠಕ್ಕೆ ಬಸವ ಜಯಂತಿ ಯ ಶುಭ ದಿನದಂದು ನೂತನ ಉತ್ತರಾಧಿಕಾರಿ ನಿಯುಕ್ತಿ ಗೊಳಿಸಿದ್ದು, ನೆಲಮಂಗಲ ತಾಲೂಕು ಮೈಲನಹಳ್ಳಿ ಮೂಲದ ವಟು ಮನೋಜ್ ಕುಮಾರ್ ಅವರಿಗೆ ಶ್ರೀಶಿವಸಿದ್ದೇಶ್ವರ ಸ್ವಾಮೀಜಿ ಯೆಂಬ ಹೊಸ ಅಬಿಧಾನದೊಂದಿಗೆ ನಿರಂಜನ ಪಟ್ಟಾಧಿಕಾರ ನೆರವೇರಿಸಲಾಯಿತು. ಇವರೊಂದಿಗೆ ಕಂಚಗಲ್ ಬಂಡೆಮಠಕ್ಕೆ ಕಾಳೇನಹಳ್ಳಿ ಮೂಲದ ಹರ್ಷ ಅವರಿಗೆ ಮಹಾಲಿಂಗ ಸ್ವಾಮೀಜಿ ಎಂಬ ಅಭಿದಾನದೊಂದಿಗೆ ವಿರಕ್ತಾಶ್ರಮ ದೀಕ್ಷೆ ನೀಡಲಾಗಿದ್ದು ದೇವನಹಳ್ಳಿ ಮಠಕ್ಕೂ ಸದಾಶಿವ ಸ್ವಾಮೀಜಿ ಅವರನ್ನು ನೂತನ ಉತ್ತರಾಧಿಕಾರಿಯಾಗಿ ಶಾಸ್ತ್ರೋಕ್ತವಾಗಿ ಪಟ್ಟಕಟ್ಟಲಾಯಿತು. ಕಾರ್ಯಕ್ರಮದ ನಿಮಿತ್ತ ಶನಿವಾರ ರಾತ್ರಿ ಯಿಂದಲೇ ಧಾರ್ಮಿಕ ಕಾರ್ಯ ಕ್ರಮಗಳು ನೆರವೇರುದ್ದು ಸಿದ್ಧಗಂಗಾ. ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರು ಮಠದ ನೂತನ ಉತ್ತರಾಧಿಕಾರಿಗೆ ದೀಕ್ಷಾ ಸಂಸ್ಕಾರಇಷ್ಟಲಿಮಗ ಪೂಜೆ ಮಾಡಿಸಿದರು. ಮೂವರು ವಟುಗಳ ನಿರಂಜನ ಪಟ್ಟಾಧಿಕಾರ ಸಮಾರಂಭಕ್ಕೆ ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕನಕಪುರ ದೇಗುಲ ಮಠದ ಶ್ರೀ ಗಳು, ಹಿರೇಮಠ ಶ್ರೀ ಗಳುಸೇರಿ ಹರಗುರುಚರಮೂರ್ತಿಗಳು, ಸಂಸದ ಜಿ. ಎಸ್. ಬಸವರಾಜ್ ಸೇರಿ ಮಾಜಿ ಎಂಎಲ್ಸಿ ಡಾಹುಲಿನಾಯ್ಕರ್,…
ಕೊರಟಗೆರೆ 15ವರ್ಷಗಳಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ಅವಕಾಶ ನೀಡಿದ್ದೀರಾ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ ಈ ಬಾರಿ ಬಿಜೆಪಿ ಬೆಂಬಲಿಸಿ ಕ್ಷೇತ್ರದಲ್ಲಿನ ಕುಂದುಕೊರತೆಗಳನ್ನು ಸರಿಪಡಿಸಲು ಸಹಕರಿಸಿ ಎಂದು ಬಿಜೆಪಿ ಅಭ್ಯರ್ಥಿ ಬಿ.ಎಚ್ ಅನಿಲ್ ಕುಮಾರ್ ಕೋರ ಹೋಬಳಿಯ ಗೊಲ್ಲಹಳ್ಳಿ ಸುಪ್ರಸಿದ್ಧ ಶ್ರೀ ಆಂಜನೇಯಸ್ವಾಮಿ ದೇವಾಲಯಕ್ಕೆ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದು ಮತಯಾಚನೆ ಪ್ರಾರಂಭಿಸಿದ ಬಿ.ಹೆಚ್ ಅನಿಲ್ ಕುಮಾರ್ ಮತದಾರರನ್ನು ಉದ್ದೇಶಿ ಮಾತನಾಡಿದರು. ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕೋರಾ ಹೋಬಳಿಯ ಗೊಲ್ಲಹಳ್ಳಿ ಗ್ರಾಮದ ಮನೆ ಮನೆಗೆ ತೆರಳಿ ಬಿಜೆಪಿ ಯೋಜನೆಗಳನ್ನು ಜನರಿಗೆ ತಿಳಿಸಿ ಈ ಬಾರಿ ಬಿಜೆಪಿ ಪಕ್ಷಕ್ಕೆ ಮತನೀಡುವಂತೆ ಅಭ್ಯರ್ಥಿ ಬಿ.ಎಚ್ ಅನಿಲ್ ಕುಮಾರ್ ಮನವಿ ಮಾಡಿದರು. ಕೋರಾ ಹೋಬಳಿ ಸುಮಾರು 80 ಗ್ರಾಮಗಳ ಮನೆ ಮನೆಗೆ ಭೇಟಿ ನೀಡಿ ಬಿಜೆಪಿ ಕಮಲ ಗುರುತಿಗೆ ಮತನೀಡಿ ಎಂದು ಮನವಿ ಮಾಡಿದರು. ಎಲ್ಲಾ ಗ್ರಾಮಗಳಲ್ಲಿಯೂ ಅಭೂತಪೂರ್ವ ಬೆಂಬಲ ದೊರೆಯುತ್ತಿದ್ದು, ಈ ಬಾರಿ ಸುಮಾರು 25ಸಾವಿರ ಅಂತರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಕ್ಷೇತ್ರದ…











