Author: News Desk Benkiyabale

ತುಮಕೂರು ಸರಕಾರಿ ವೈದ್ಯರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ರೋಗಿಗಳನ್ನು ಮೇಲ್ಮಟ್ಟದ ಆಸ್ಪತ್ರೆಗೆ ರೇಪರ್ ಮಾಡುವ ಪೋಸ್ಟ್‍ಮನ್ ಕೆಲಸದ ಬದಲು, ತಮ್ಮ ಶಕ್ತಿಯನ್ನು ಅರಿತು, ಅದರ ಪೂರ್ಣ ಸದ್ವಿನಿಯೋಗಕ್ಕೆ ಮುಂದಾದರೆ, ದೇವರ ಮಕ್ಕಳಾದ ಬಡವರ ಕಣ್ಣಿಗೆ ನೀವೇ ದೇವರಾಗುತ್ತೀರಿ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಸಲಹೆ ನೀಡಿದ್ದಾರೆ. ನಗರದ ಶ್ರೀಸಿದ್ದಾರ್ಥ ಮೆಡಿಕಲ್ ಕಾಲೇಜು ಆವರಣದಲ್ಲಿರುವ ಡಾ.ಹೆಚ್.ಎಂ.ಗಂಗಾಧರಯ್ಯ ಮೇಮೊರಿಯಲ್ ಹಾಲ್‍ನಲ್ಲಿ ಕರ್ನಾಟಕ ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ 30ನೇ ರಾಜ್ಯ ಮಟ್ಟದ ಸಮ್ಮೇಳನ ಕಲ್ಪತರು ವೈದ್ಯೋತ್ಸವಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ನೀವು ನಿಮ್ಮ ಕಲಿತ ವಿದ್ಯೆಯ ಸಂಪೂರ್ಣ ಬಳಕೆಗೆ ಮುಂದಾದರೆ ನಿಮ್ಮ ಪರವಾಗಿ ಕಾನೂನು ಮಂತ್ರಿಯಾಗಿ ನಾನು ನಿಲ್ಲಲ್ಲು ಸಿದ್ದ ಎಂದ ಅಭಯ ನೀಡಿದರು. ವೈದ್ಯರ ಕೆಲಸ ಅವಿರತ ಶ್ರಮವಿರುವ ಕೆಲಸ. ಕೋವಿಡ್ ಸಂದರ್ಭದಲ್ಲಿ ನಮ್ಮ ಸರಕಾರಿ ವೈದ್ಯರು ಹಾಗೂ ಅವರ ಸಿಬ್ಬಂದಿ ವರ್ಗ ತೆಗದುಕೊಂಡು ನಿರಂತರ ಪರಿಶ್ರಮದ ಫಲವಾಗಿ ಬಹುಬೇಗ ಸಾಂಕ್ರಾಮಿಕ ರೋಗವನ್ನು ಹತೋಟಿಗೆ ತರಲು ಸಾಧ್ಯವಾಯಿತು.ಇದಕ್ಕಾಗಿ ನಾನು ನಾಡಿನ ಎಲ್ಲ…

Read More

ತುಮಕೂರು ಡಾ. ಸಿದ್ಧಗಂಗಯ್ಯ ಹೊಲತಾಳು ನಾಡು ಸುತ್ತಿ ಕೋಶ ರಚಿಸುತ್ತಾ ಸಾಹಿತ್ಯಲೋಕಕ್ಕೆ ತಮ್ಮ ಬದುಕು ಸಮರ್ಪಿಸುತ್ತಿದ್ದಾರೆ. ಸಾವಯವ ಕೃಷಿಯಲ್ಲಿನ ವಿಶೇಷ ಆಸಕ್ತಿ ಹಾಗೂ ಕೃತಿರಚನೆಯಲ್ಲಿ ತೊಡಗಿರುವ ಅವರ ಹುರುಪು ಮತ್ತು ಉತ್ಸಾಹ ಪ್ರೇರಣಾಶೀಲವಾದದ್ದು ಎಂದು ಲೇಖಕ ಡಾ. ವಡ್ಡಗೆರೆ ನಾಗರಾಜಯ್ಯ ಹೇಳಿದರು. ತುಮಕೂರು ವಿಶ್ವವಿದ್ಯಾನಿಲಯದ ಡಿವಿಜಿ ಅಧ್ಯಯನ ಕೇಂದ್ರವು ಆರೆಂಜ್ ಬುಕ್ಸ್ ಸಂಸ್ಥೆಯ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ. ಸಿದ್ಧಗಂಗಯ್ಯ ಹೊಲತಾಳು ಅವರ ‘ಒಳನಾಡಿನ ಒಡನಾಟ’ ಕೃತಿ ಲೋಕಾರ್ಪಣೆ-ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿಜ್ಞಾನ ಮತ್ತು ತಂತ್ರಜ್ಞಾನ ಕೃಷಿ ಕ್ಷೇತ್ರಕ್ಕೆ ತಂದೊಡ್ಡಿರುವ ವಿಪತ್ತು ಕೇವಲ ಕನ್ನಡ ನೆಲದ ಒಳನಾಡಿಗμÉ್ಟೀ ಅಲ್ಲದೆ ಇಡೀ ದೇಶವನ್ನೇ ವ್ಯಾಪಿಸಿದೆ. ಮುಂದಿನ ದಿನಗಳಲ್ಲಿ ಈ ಸ್ಥಿತ್ಯಂತರ ಯಾವ ಹಂತ ತಲುಪುವುದೋ ಎಂಬ ಆತಂಕವಿದೆ ಎಂದರು. ಕೃತಿ ಲೋಕಾರ್ಪಣೆ ನೆರವೇರಿಸಿ ಅಧ್ಯಕ್ಷೀಯ ನುಡಿಗಳನ್ನಾಡಿದ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪೆÇ್ರ. ಎಂ. ವೆಂಕಟೇಶ್ವರಲು, ಮುಂದಿನ ದಿನಗಳಲ್ಲಿ ವಿವಿಯ ವಿದ್ಯಾರ್ಥಿಗಳೊಂದಿಗೆ ಸಿದ್ಧಗಂಗಯ್ಯ ಅವರ ಅಧ್ಯಯನ ಕೇಂದ್ರಕ್ಕೆ ಭೇಟಿ ನೀಡುವ ಚಿಂತನೆಯಿದೆ. ಅವರ…

Read More

ತುಮಕೂರು ಮಹಿಳೆಯರು ಮತ್ತು ಮಕ್ಕಳು ಮೋಸದ ಬಲೆಗೆ ಸುಲಭವಾಗಿ ಬೀಳುವ ಸಾಧ್ಯತೆಯಿರುವುದರಿಂದ ಅವರನ್ನು ರಕ್ಷಿಸುವುದು ಅವಶ್ಯಕವಾಗಿರುತ್ತದೆ. ಮಹಿಳೆಯರು ಮತ್ತು ಮಕ್ಕಳನ್ನು ಅನೈತಿಕ ಸಾಗಾಣಿಕೆಯಿಂದ ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನೂರುನ್ನೀಸ ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆ, ತುಮಕೂರು ಗ್ರಾಮಾಂತರ ಇವರ ಸಹಯೋಗದಲ್ಲಿ ಆಯೋಜಿಸಿದ್ದ “ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟುವಿಕೆ” ಕುರಿತಂತೆ ಪುನಶ್ಚೇತನ ತರಬೇತ್ನಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಾ, ಮಹಿಳೆಯರು ಮತ್ತು ಮಕ್ಕಳು ಸಾಗಾಣಿಕೆಯಾಗುತ್ತಿರುವುದು ಶೋಚನೀಯ ಸಂಗತಿ. ಮಹಿಳೆಯರು ತಮಗೆ ಅರಿವಿಲ್ಲದೆ ಇಂತಹ ಸಮಸ್ಯೆಗಳಿಗೆ ಸಿಲುಕುತ್ತಾರೆ ಹಾಗೂ ಬಡ ಕುಂಟುಂಬದ ಹೆಣ್ಣು ಮಕ್ಕಳು ಆಮಿಷಗಳಿಗೆ ಒಳಗಾಗುತ್ತಾರೆ. ಉದ್ಯೋಗದ ಭರವಸೆ ನೀಡಿ ಮಾರಾಟ ಮಾಡಿ ಅನೈತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಈ ಪಿಡುಗು ಮಕ್ಕಳು, ಅಪ್ರಾಪ್ತ…

Read More

ತುಮಕೂರು ನಗರದ ಸರಕಾರಿ ಜೂನಿಯರ್ ಕಾಲೇಜು ಮೈಧಾನದಲ್ಲಿ ಚಕ್ರವರ್ತಿ ಗೆಳೆಯರ ಬಳಗದಿಂದ ಆಯೋಜಿಸಿದ್ದ ಕರ್ನಾಟಕ ರತ್ನ ಡಾ.ಪುನಿತ್ ರಾಜ್‍ಕುಮಾರ್ ಅವರ ಸ್ಮರಣಾರ್ಥವಾಗಿ ಹೊಮ್ಮಿಕೊಂಡಿರುವ 5ನೇ ವರ್ಷದ ರಾಷ್ಟ್ರಮಟ್ಟದ ಹೊನಲು ಬೆಳಕಿನ ಟೆನ್ನಿಸ್‍ಬಾಲ್ ಕ್ರಿಕೆಟ್‍ನ ಅಪ್ಪು ಚಾಂಪಿಯನ್ಸ್ ಟ್ರೋನಿ ಗುರುವಾರ ಸಂಜೆ ವಿದ್ಯುಕ್ತವಾಗಿ ಚಾಲನೆ ದೊರೆಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಹುಲ್‍ಕುಮಾರ ಶಹಾಪೂರ್‍ವಾಡ್ ಅವರು ಜೋತಿ ಬೆಳೆಸಿ,ಟೇಫ್ ಕತ್ತರಿಸುವ ಮೂಲಕ ಹೊನಲು ಬೆಳಕಿನ ನೌಕೌಂಟ್ ಕಂ ಲೀಗ್ ಟೂರ್ನಿಗೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಇಂತಹ ಕ್ರೀಡಾಕೂಟಗಳು ಯುವಜನರು ತಮ್ಮಲ್ಲಿರುವ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯನ್ನು ಕಲ್ಪಿಸುತ್ತೇವೆ.ಕ್ರೀಡೆಯನ್ನು ಪ್ರೋತ್ಸಾಹಿಸುವ ಮೂಲಕ ಚಕ್ರವರ್ತಿ ಗೆಳೆಯರ ಬಳಗ ಒಳ್ಳೆಯ ಕೆಲಸ ಮಾಡುತ್ತಿದೆ. ಐದನೇ ವರ್ಷದ ಟೂರ್ನಿ 100ನೇ ವರ್ಷದ ಟೂರ್ನಿಯವರೆಗೆ ಮುಂದುವರೆಯುವಂತಾಗಲಿ ಎಂದು ಶುಭ ಹಾರೈಸಿದರು. ಜಾತ್ಯಾತೀತ ಮಾನವ ವೇದಿಕೆಯ ಟಿ.ಆರ್.ಆಂಜನಪ್ಪ ಮಾತನಾಡಿ,ಅಪ್ಪು ಚಾಂಪಿಯನ್ಸ್ ಟ್ರೋಫಿ ಹೆಸರಿನಲ್ಲಿ ಚಕ್ರವರ್ತಿ ಗೆಳೆಯರ ಬಳಗದ ಯುವಜನರಿಗೆ ಸ್ಪೂರ್ತಿದಾಯಕರಾಗಿರುವ ಡಾ.ಪುನಿತ್ ರಾಜಕುಮಾರ್ ಹೆಸರಿನಲ್ಲಿ ಆಯೋಜಿಸಿ ರುವುದು ಒಳ್ಳೆಯ ಬೆಳವಣಿಗೆ.ಆಟೋಟಗಳು…

Read More

ತುಮಕೂರು ಭಾಷೆ ಬರೆವಣಿಗೆ, ಸೃಜನಶೀಲತೆಗೆ ಡಿಜಿಟಲ್ ಯುಗ ತೊಡಕಾಗಬಾರದು. ಪತ್ರಕರ್ತನಾಗುವವನಿಗೆ ತೆರೆದ ಕಣ್ಣುಗಳಿರಬೇಕು. ಸುದ್ದಿಯ ಆಳ ಅಗಲವನ್ನು ಸಂಶೋಧನೆ, ಗ್ರಹಿಕೆ, ಪ್ರಸ್ತುತಿಯ ಮುಖೇನ ಓದುಗರಿಗೆ ಉಣಬಡಿಸುವವನೇ ನಿಜವಾದ ಪತ್ರಕರ್ತ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಕುಲಪತಿ ಪೆÇ್ರ. ನಿರಂಜನ ವಾನಳ್ಳಿ ಹೇಳಿದರು. ತುಮಕೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಗುರುವಾರ ಆಯೋಜಿಸಿದ್ದ ನೂತನ ಸ್ಟುಡಿಯೋ ಮತ್ತು ಪ್ರಯೋಗಾಲಯ ಉದ್ಘಾಟನೆ ಕಾರ್ಯಕ್ರಮವನ್ನು ನೆರವೇರಿಸಿ ‘ಡಿಜಿಟಲ್ ಕಾಲದಲ್ಲಿ ಭಾμÉ-ಬರೆವಣಿಗೆಯ ಪ್ರಾಮುಖ್ಯತೆ’ ಕುರಿತು ವಿಶೇಷ ಉಪನ್ಯಾಸ ನೀಡಿದರು. ಪಸ್ತುತ ವಿವಿಗಳಲ್ಲಿ ಪತ್ರಿಕೋದ್ಯಮ ವಿಭಾಗಗಳು ಪ್ರತಿಭಾವಂತ ಪತ್ರಕರ್ತರನ್ನು ಹೆರುವ ಸ್ಥಿತಿಯಲ್ಲಿಲ್ಲ. ಪತ್ರಿಕೋದ್ಯಮದಲ್ಲೇ ಬದುಕು ಕಟ್ಟಿಕೊಳ್ಳುವ ಹಠ, ಛಲ ಇರುವ ಸರ್ವಾಸಕ್ತರನ್ನು ತರಗತಿಗಳು ಉತ್ತಮ ಮಟ್ಟಕ್ಕೆ ಏರಿಸಬಹುದೇ ಹೊರತು, ಪತ್ರಿಕೋದ್ಯಮದ ಹಸಿವಿಲ್ಲದವರನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯುವುದು ಪ್ರಯೋಜನವಿಲ್ಲ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪೆÇ್ರ. ಎಂ. ವೆಂಕಟೇಶ್ವರಲು, ವಿಶ್ವವಿದ್ಯಾನಿಲಯಗಳಲ್ಲೇ ಸಂಸ್ಥೆಯಾಗಿ ತಯಾರಾಗಿ ಹೋಗುವ ಯುವಪತ್ರಕರ್ತರೇ ಸಮಾಜದ ಬದಲಾವಣೆಗಾಗಿ ಶ್ರಮಿಸುವರು. ಪತ್ರಿಕೋದ್ಯಮ…

Read More

ತುಮಕೂರು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿಗಳು ಮತ್ತು ಖಾಯಂ ಜನತಾ ನ್ಯಾಯಾಲಯಗಳಲ್ಲಿ ಜಿಲ್ಲೆಯಾದ್ಯಂತ ನ್ಯಾಯಾಲಯಗಳಲ್ಲಿ ಫೆಬ್ರವರಿ 11 ರಂದು ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಗೀತಾ ಕೆ.ಬಿ ಅವರು ತಿಳಿಸಿದರು. ನಗರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ಪೆÇಲೀಸ್ ಇಲಾಖೆ ರಾಜ್ಯಾದ್ಯಂತ ಇ ಚಲನ್ ಗಳ ಮೂಲಕ ಹಾಕಿರುವ ದಂಡದ ಮೊತ್ತದಲ್ಲಿ ಶೇ.50 ರಿಯಾಯಿತಿ ನೀಡಿದ್ದು, ಸಂಚಾರಿ ದಂಡ ಪಾವತಿಗೆ 50 ಶೇಕಡಾ ರಿಯಾಯಿತಿ ನೀಡಿರುವುದಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು,ಸಾರ್ವಜನಿಕರು ಸ್ವಯಂಪ್ರೇರಿತವಾಗಿ ದಂಡ ಪಾವತಿಸುತ್ತಿದ್ದು, ಪೆÇಲೀಸ್ ಠಾಣೆಯಲ್ಲಿ ದಂಡ ಪಾವತಿಗೆ ಅವಕಾಶ ನೀಡಲಾಗಿದ್ದು, ದಂಡ ವಿಧಿಸಿರುವುದರಲ್ಲಿ ಸಮಸ್ಯೆಗಳಿದ್ದರೆ ಸಂಚಾರ ನಿಯಂತ್ರಣ…

Read More

ತುಮಕೂರು ತಾಲೂಕಿನ ಕಸಬಾ ಹೋಬಳಿ ಅದಲಾಪುರ ಗ್ರಾಮದೇವತೆ ಶ್ರೀಮಾರಮ್ಮದೇವಿ ದೇವಾಲಯವು ಸರಕಾರದ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯವಾಗಿದೆ. ಸದರಿ ದೇವಾಲಯದ ಉತ್ಸವ ಮೂರ್ತಿಯನ್ನು ದೇವರ ಜಾತ್ರೆ ಸಂದರ್ಭದಲ್ಲಿ ಎಲ್ಲಾ ಕೇರಿಗಳಿಗೆ ತೆಗೆದುಕೊಂಡು ಹೋಗುವಂತೆ ದಲಿತರ ಕೇರಿಗೆ ತರುವಂತೆ ಕೇಳಿದ ದಲಿತರ ಮೇಲೆ ಸವರ್ಣೀಯರು ಹಲ್ಲೆ ನಡೆಸಿದ್ದು, ಇವರ ವಿರುದ್ದ ಕ್ರಮ ಕೈಗೊಳ್ಳುವಂತೆ ಗ್ರಾಮದ ಜನರು ಪೊಲೀಸರಿಗೆ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ. ಅಂಬೇಡ್ಕರ್ ಸೇನೆಯ ಜಿಲ್ಲಾಧ್ಯಕ್ಷ ಗೂಳೂರು ಸಿದ್ದರಾಜು ನೇತೃತ್ವದಲ್ಲಿ ಅದಲಾಪುರ ಗ್ರಾಮದ ಹತ್ತಾರು ದಲಿತರು,ಜಿಲ್ಲಾಧಿಕಾರಿಗಳ ಕಚೇರಿಗೆ ಹಾಗೂ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಕಳೆದ ಜನವರಿ 30ರಂದು ಗ್ರಾಮದಲ್ಲಿ ಗ್ರಾಮದೇವತೆ ಶ್ರೀಮಾರಮ್ಮ(ಅದಲಾಪುರದಮ್ಮ)ದೇವಿ ಜಾತ್ರೆ ಇದ್ದು, ಜಾತ್ರೆಯ ಸಂದರ್ಭದಲ್ಲಿ ಎಲ್ಲಾ ಕೇರಿಗಳಿಗೆ ಉತ್ಸವ ಮೂರ್ತಿ ಹೋಗುವಂತೆ ತಮ್ಮ ಕೇರಿಗೂ ಉತ್ಸವ ಮೂರ್ತಿ ಕರೆದುಕೊಂಡು ಬಂದರೆ ಹರಕೆ ತೀರಿಸಲು ಅನುಕೂಲವಾಗುತ್ತದೆ ಎಂದು ಗ್ರಾಮದ ಹಿರಿಯರಿಗೆ ತಿಳಿಸಿ,ಅದಕ್ಕಾಗಿ ಶುಲ್ಕವನ್ನು ಪಾವತಿಸಲಾಗಿತ್ತು. ಅದಲಾಪುರ ಗ್ರಾಮದ ದಲಿತ ಕುಟುಂಬಕ್ಕೆ ಸೇರಿದ ಕುಮಾರಸ್ವಾಮಿ ಬಿನ್ ಹುಚ್ಚರಂಗಯ್ಯ,ಶ್ರೀನಿವಾಸ್ ಬಿನ್…

Read More

ತುಮಕೂರು 2023-34 ರಾಜ್ಯ ಬಜೆಟ್ಟ್ ನಲ್ಲಿ ಅಲ್ಪ ಸಂಖ್ಯಾತರಿಗೆ ಸಾಮಾಜಿಕ ನ್ಯಾಯ, ಮತ್ತು ಸಂವಿಧಾನದ ಅಶಯಗಳಂತೆ ತಾರತಮ್ಯ ಮಾಡದೆ ಅನುಧಾನ ನೀಡಲು ಅಗ್ರಹಿಸಿ ಭಾರತ ಕಮ್ಯೂನಿಷ್ಟ ಪಕ್ಷ(ಮಾಕ್ರ್ಸವಾದಿ) ಬುಧವಾರು ಜಿಲ್ಲಾಧಿಕಾರಿಗಳ ಕಛೇರಿ ಎದರು ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮತಾನಾಡಿದ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ದೇಶದ ಸಂವಿಧಾನವು ನಾಗರಿಕರಿಗೆ ಯಾವುದೆ ತಾರತಮ್ಯವಿಲ್ಲದೆ ಸಮಾನವಾಗಿ ನಡೆಸಿಕೊಳ್ಳುವ ಕರ್ತವ್ಯವನ್ನು ಸರ್ಕಾರಕ್ಕೆ ನೀಡಿದೆ . ಸರ್ವರಿಗೂ ಸಮಭಾವದಿಂದ ಅವರ ಅವರ ಪಾಲನ್ನು ನೀಡಬೇಕಾಗಿದೆ.. ಅದರೆ ರಾಜ್ಯ ಸರ್ಕಾರವು ಅಲ್ವ ಸಂಖ್ಯಾತರ ಜೋತೆಯಲ್ಲಿ ತಾರತಮ್ಯದಿಂದ ನಡೆದು ಕೊಳ್ಳುತ್ತಿರುವುದನ್ನು ಇತ್ತಿಚೆಗೆ ನಾಗರಿಕ ಸಮಾಜವು ಚಿಂತಿಸುವಂತೆ ಮಾಡಿದೆ. ಈ ಹಿಂದೆ ಭಾರತ ಸರ್ಕಾರವು ಅಲ್ವಸಂಖ್ಯಾತರ ಸ್ಥಿತಿ-ಗತಿಗಳನ್ನು ಅಧ್ಯಾಯನ ಮಾಡಲು ರೂಪಿಸಿದ ಡಾ; ರಾಜೆಂದ್ರ ಸಿಂಗ್ ಸಾಚರ್, ಹಾಗು ನ್ಯಾ; ರಂಗನಾಥ ಮಿಶ್ರ ಸಮಿತಿಗಳ ಶಿಪಾರಸ್ಸುಗಳನ್ನು ನೋಡಿದರೆ ಭಾರತ / ಕರ್ನಾಟಕದ ಅಲ್ವ ಸಂಖ್ಯಾತ ಸಮುದಾಯಗಳ ಸ್ಥಿತಿ- ಗತಿಗಳ ಚಿತ್ರಣವು ಸ್ವಷ್ಟವಾಗುತ್ತದೆ. ಮಾನವ ಅಭಿವೃದ್ದಿ ಸೂಚ್ಯಂಕದ ಮಾನದಂಡಗಳಲ್ಲಿ ಸಹ ಹಿಂದೆ ಬಿದ್ದಿರುವುದನ್ನು…

Read More

ತುಮಕೂರು : ತುಮಕೂರಿನ ಗುಬ್ಬಿ ತಾಲೂಕಿನ ಬಿದರೆಹಳ್ಳ ಕಾವಲ್‍ನಲ್ಲಿ ಭಾರತದ ಅತೀ ದೊಡ್ಡ ಎಚ್‍ಎಎಲ್ ಹೆಲಿಕಾಪ್ಟರ್ ಘಟಕ ಹಾಗೂ ಜಲ ಜೀವನ್ ಮಿಷನ್‍ನ್ನು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕರ್ನಾಟಕದ ಯುವಕರಿಗೆ ಉದ್ಯೋಗ ನೀಡಲು ಕೋಟ್ಯಂತರ ವೆಚ್ಚದ ಘಟಕ ಲೋಕಾರ್ಪಣೆ ಮಾಡಲಾಗಿದೆ. ಕರ್ನಾಟಕ ಅತಿ ಹೆಚ್ಚು ಯುವಕರ ಟ್ಯಾಲೆಂಟ್ ಹೊಂದಿರುವ ರಾಜ್ಯ. ಡಬಲ್‍ಇಂಜಿನ್ ಸರ್ಕಾರ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಡಬಲ್ ಇಂಜಿನ್ ಸರ್ಕಾರ ಏನು ಮಾಡಿದೆ ಎಂದು ಕೇಳುತ್ತಾರೆ. ಇದಕ್ಕೆ ಇಂದು ಉದ್ಘಾಟನೆಗೊಂಡ ಹೆಚ್?ಎಎಲ್ ಹೆಲಿಕಾಪ್ಟರ್ ತಯಾರಿಕಾ ಘಟಕ ಉದಾಹರಣೆಯಾಗಿದೆ ಎಂದರು. ಭಾರತೀಯರ ರಕ್ಷಣೆಗೆ ವಿದೇಶಿಯರ ಮೇಲಿನ ಅವಲಂಬನೆ ಕಡಿಮೆ ಆಗಿದೆ. ನಮ್ಮ ಸಾಮಥ್ರ್ಯವನ್ನು ಇಡೀ ವಿಶ್ವವೇ ಗಮನಿಸುತ್ತಿದೆ. ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಯತ್ತ ಭಾರತ ಮುನ್ನುಗ್ಗುತ್ತಿದೆ. ಆತ್ಮನಿರ್ಭರ್ ಭಾರತ ಮೂಲಕ ಹೆಲಿಕಾಪ್ಟರ್??ಗಳ ತಯಾರಿಸಲಾಗುತ್ತದೆ ಎಂದರು. ಚಿಕ್ಕನಾಯಕನಹಳ್ಳಿ ಹಾಗೂ ತಿಪಟೂರಿನಲ್ಲಿ ಜಲಜೀವನ್ ಅಭಿಯಾನದ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ನೆರವೇರಿಸಿದರು. 430 ಕೋಟಿ ರೂಪಾಯಿ…

Read More

ತುಮಕೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪ್ರಬಲ ಆಕಾಂಕ್ಷಿಯಾದ ಮಾಜಿ ಶಾಸಕ ರಫಿಕ್ ಅಹ್ಮದ್‍ಗೆ ಸೋಲಿನ ಭೀತಿ ಮತ್ತೆ ಕಾಡ್ತಾ ಇದ್ಯಾ? ಹಣ ಇಲ್ಲ ಎಂಬ ನೆಪವೊಡ್ಡಿ ಕಣದಿಂದ ಹಿಂದೆ ಸರಿಯುತ್ತಿದ್ದಾರೆ ಎಂಬ ಗುಮಾನಿ ಹುಟ್ಟಿಕೊಂಡಿದೆ. ಕಾಂಗ್ರೆಸ್‍ನ ಇನ್ನೊಬ್ಬ ಟಿಕೆಟ್ ಆಕಾಂಕ್ಷಿ ಡಾ. ಬೊಮ್ಮನಹಳ್ಳಿ ಬಾಬು @ ಅಟ್ಟಿಕಾ ಬಾಬು ಮಾತು ಈ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಅಟ್ಟಿಕಾ ಗೋಲ್ಡ್ ಕಂಪನಿಯ ಮಾಲೀಕ ಅಟ್ಟಿಕಾ ಬಾಬು ಕೆಲದಿನಗಳ ಹಿಂದೆ ಮಸೀದಿಗಳಿಗೆ ಭೇಟಿ ಕೊಟ್ಟು ಆಡಿದ ಮಾತುಗಳ ರಫಿಕ್ ಅಹ್ಮದ್ ಸ್ಪರ್ಧೆ ಮಾಡಲ್ಲ ಎನ್ನುವುದಕ್ಕೆ ಇನ್ನಷ್ಟು ಪುಷ್ಟಿ ನೀಡಿದೆ. ರಫಿಕ್ ಅಹ್ಮದ್ ನನಗೆ ಸಹಾಯ ಮಾಡುತ್ತಾರೆ. ಅವರ ಬಳಿ ಹಣ ಇಲ್ಲ. ಹಾಗಾಗಿ ಅವರು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಅಟ್ಟಿಕಾ ಬಾಬು ಮಸೀದಿಯಲ್ಲಿ ಹೇಳಿದ್ದಾರೆ. ಅಟ್ಟಿಕಾ ಬಾಬು ಕೂಡ ಮುಸ್ಲಿಂ ಸಮುದಾಯದವನಾಗಿದ್ದು, ನನ್ನ ಹೆಸರು ಅಯೂಬ್ ನನ್ನ ತಂದೆ ಪಾಷ ಸಾಬ್ ಎಂದು ಹೇಳಿಕೊಂಡಿದ್ದಾರೆ. ಈ ವೀಡಿಯೋ ಸಾಕಷ್ಟು ವೈರಲ್ ಆಗಿದ್ದು ಸಂಚಲನ ಸೃಷ್ಟಿಸಿದೆ. ಮಾಜಿ…

Read More