ತುಮಕೂರು ಇತಿಹಾಸ ಪ್ರಸಿದ್ದ ಶ್ರೀಸಿದ್ದಗಂಗಾ ಮಠದ ಶ್ರೀಚನ್ನಬಸವೇಶ್ವರ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಫೆ.08ರಿಂದ 22ರವರೆಗೆ ನಡೆಯಲಿದೆ ಎಂದು ವಸ್ತುಪ್ರದರ್ಶನ ಸಮಿತಿಯ ಕಾರ್ಯದರ್ಶಿ ಬಿ.ಗಂಗಾಧರಯ್ಯ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಕೃಷಿ, ಅರಣ್ಯ, ತೋಟಗಾರಿಕೆ, ರೇಷ್ಮೆ ಸೇರಿದಂತೆ ಸರಕಾರದ 16, ಖಾಸಗಿಯ 5 ಮಳಿಗೆಗಳು ಸೇರಿ ಒಟ್ಟು 197ಮಳಿಗೆಗಳನ್ನು ತೆರೆಯಲಾಗಿದ್ದು,15 ದಿನಗಳ ಕಾಲ ನಡೆಯುವ ಈ ವಸ್ತುಪ್ರದರ್ಶನಕ್ಕೆ ಒಂದು ಲಕ್ಷಕ್ಕೂ ಅಧಿಕ ಜನರು ಭೇಟಿ ನೀಡುವ ನಿರೀಕ್ಷೆ ಇದೆ ಎಂದರು. ಕಳೆದ 59 ವರ್ಷಗಳಿಂದ ಈ ಭಾಗದ ಕೃಷಿಕರು, ಕೈಗಾರಿಕೋದ್ಯಮಿಗಳು ಹಾಗೂ ಜನಸಾಮಾನ್ಯರಿಗೆ ಆಯಾಯ ಕ್ಷೇತ್ರದ ಹೊಸ ಅವಿಷ್ಕಾರಗಳ ತಿಳುವಳಿಕೆ ನೀಡುವ ಉದ್ದೇಶದಿಂದ ನಡೆದಾಡುವ ದೇವರು ಎಂದೇ ಪ್ರಸಿದ್ದರಾಗಿದ್ದ ಡಾ.ಶ್ರೀಶಿವಕುಮಾರ ಸ್ವಾಮೀಜೀಗಳು ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನವನ್ನು 1964ರಲ್ಲಿ ಆರಂಭಿಸಿದರು.ಇಂದು ಇಷ್ಟು ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವ ಏಕೈಕ ವಸ್ತು ಪ್ರದರ್ಶನ ಇದಾಗಿದೆ ಎಂದು ಗಂಗಾಧರಯ್ಯ ತಿಳಿಸಿದರು. ಜಾನುವಾರುಗಳ ಜಾತ್ರೆ ಇಲ್ಲ:ಸಿದ್ದಗಂಗಾ ಜಾತ್ರೆಯ ಸಂಬಂಧ ನಡೆಯುವ ಈ ವಸ್ತು ಪ್ರದರ್ಶನದ ಸಂದರ್ಭದಲ್ಲಿ ಜಾನುವಾರು…
Author: News Desk Benkiyabale
ತುಮಕೂರು ಪ್ರಧಾನಿ ನರೇಂದ್ರಮೋದಿರವರು ಗುಬ್ಬಿಯ ಬಿದರೆಹಳ್ಳಿ ಕಾವಲ್‍ನಲ್ಲಿ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್‍ನ ಲಘು ಹೆಲಿಕ್ಯಾಪ್ಟರ್ ಕಾರ್ಖಾನೆ ಉದ್ಘಾಟನೆ ಮತ್ತು ಚಿಕ್ಕನಾಯಕನಹಳ್ಳಿ ಹಾಗೂ ತಿಪಟೂರು ತಾಲ್ಲೂಕಿನ ವ್ಯಾಪ್ತಿಯ ಮನೆ ಮನೆಗೆ ಗಂಗೆ ಹರಿಸುವ “ಜಲ್ ಜೀವನ್ ಮಿಷನ್ ಯೋಜನೆ”ಗೆ ಶಂಕುಸ್ಥಾಪನೆಯ ಸಂಬಂಧ ಸರ್ಕಾರಿ ಪ್ರಯೋಜಿತ ಕಾರ್ಯಕ್ರಮ ನಡೆಸಲು ಇದೇ ಫೆಬ್ರವರಿ 6ರ ಸೋಮವಾರ ಪ್ರಧಾನಿ ನರೇಂದ್ರಮೋದಿರವರು ಆಗಮಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸುಮಾರು 80 ಸಾವಿರ ಜನರು ಸೇರುವ ಸಂಭವವಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಎಸ್.ರವಿಶಂಕರ್ ಹೆಬ್ಬಾಕ ತಿಳಿಸಿದರು. ಇವರು ಇಂದು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ, ಪ್ರಧಾನಿ ನರೇಂದ್ರ ಮೋದಿರವರು ಗುಬ್ಬಿಗೆ ಮಧ್ಯಾಹ್ನ 3.30ಕ್ಕೆ ಆಗಮಿಸಿ, ಮಧ್ಯಾಹ್ನ 4.30ರವರೆಗೆ ಸುಮಾರು 60 ನಿಮಿಷಗಳ ಕಾÀರ್ಯಕ್ರಮದಲ್ಲಿ ಭಾಗವಹಿಸಿ, ದೇಶಕ್ಕೆ ಮಹತ್ತರ ಸಂದೇಶ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ರಕ್ಷಣಾ ಇಲಾಖೆಯ ಕೇಂದ್ರ ಮಂತ್ರಿಗಳಾದ ರಾಜನಾಥ್‍ಸಿಂಗ್ ಹಾಗೂ ರಾಜ್ಯ ಸಚಿವ ಅಜಯ್‍ಭಟ್, ರಕ್ಷಣಾ ಇಲಾಖೆ ಹಾಗೂ ಊಂಐ ಪ್ರಮುಖ ಅಧಿಕಾರಿಗಳು, ಕೇಂದ್ರ ಹಾಗೂ ರಾಜ್ಯದ…
ತುಮಕೂರು ಭಾರತವು ಇಂದು ವಿಶ್ವದ ಗಮನವನ್ನು ಸೆಲೆಯುತ್ತಿದ್ದು, ವಿಶ್ವಗುರುವಾಗುವ ನಿಟ್ಟಿನಲ್ಲಿ ಸಾಗುತ್ತಿದೆ. ಇದಕ್ಕೆ ಯುವಕರು ಮತ್ತು ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ನಿಕಟಪೂರ್ವ ರಾಷ್ಟ್ರೀಯ ಕಾರ್ಯದರ್ಶಿ ಹರ್ಷನಾರಾಯಣ್ ತಿಳಿಸಿದರು. ನಗರದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಇಂದು ಎಬಿವಿಪಿ ಆಯೋಜಿಸಿದ್ದ ತುಮಕೂರು ಜಿಲ್ಲಾ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅವರು ಭಾರತವನ್ನು ಎಲ್ಲಾ ದೇಶಗಳು ಗೌರವದಿಂದ ನೋಡುತ್ತಿವೆ. ಇಲ್ಲಿ ಸಾಮಾಜಿಕ ಸಮಾನತೆ, ಆರ್ಥಿಕ ಪ್ರಗತಿ ಮತ್ತು ಶೈಕ್ಷಣಿಕ ಉನ್ನತಿಯನ್ನು ಸಾಧಿಸಲು ಈ ದೇಶದ ಯುವ ಸಮುದಾಯವಾದ ವಿದ್ಯಾರ್ಥಿ ಸಮುದಾಯದ ಕೊಡುಗೆ ಅತ್ಯವಶ್ಯಕ ಎಂದರು. ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ರಾಷ್ಟ್ರೀಯತೆ ಬೆಳೆಸುವ ಎಬಿವಿಪಿಯು ಶೈಕ್ಷಣಿಕ ಕ್ಷೇತ್ರದ ಸುಧಾರಣೆಗೆ ನಿರಂತರ ಹೋರಾಟ ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಯುವಕರಲ್ಲಿ ನಾಯಕತ್ವಗುಣ, ಹೋರಾಟದ ಮನೋಭಾವನೆಯನ್ನು ಬೆಳೆಸುತ್ತಿದೆ ಎಂದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಬೆಳ್ಳಾವೆಯ ಶ್ರೀ ಕಾರದೇಶ್ವರ ಮಠದ ಶ್ರೀ ಕಾರದ ವೀರಬಸವ ಮಹಾಸ್ವಾಮಿಗಳು ಮಾತನಾಡಿ ವಿದ್ಯಾರ್ಥಿಗಳು ಸುಂಸ್ಕøತರಾಗಿ ತಮ್ಮ ತಂದೆ ತಾಯಿಯರನ್ನು…
ಕೊರಟಗೆರೆ ಪಟ್ಟಣದ ಮೂರನೇ ವಾರ್ಡಿನ ಕಾವಲಮ್ಮ ಎನ್ನುವ ವೃದ್ದೆಯನ್ನು ತನ್ನ ಮೊಮ್ಮಗನೇ ಮನೆಯಿಂದ ಹೊರ ಹಾಕಿದ್ದ ದಾರುಣ ಘಟನೆ ನಡೆದ ಹಿನ್ನೆಲೆ… ಮದುಗಿರಿ ಉಪ ವಿಭಾಗಾಧಿಕಾರಿಗಳ ಆದೇಶದಂತೆ ಕೊರಟಗೆರೆ ತಹಸಿಲ್ದಾರ್ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೆÇಲೀಸ್ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಿರಿಯ ನಾಗರಿಕರ ಹಕ್ಕು ಕಾಯ್ದೆ ಅಡಿಯಲ್ಲಿ ಸುಮಾರು 80 ವಯಸ್ಸಿನ ಕಾವಲಮ್ಮ ವೃದ್ದೆಗೆ ತಾನು ವಾಸಿಸುತ್ತಿದ್ದ ಮನೆಯನ್ನು ಅಜ್ಜಿಯ ಮೊಮ್ಮಗನೇ ಆದ ಮಾರುತಿ ಬಲವಂತವಾಗಿ ಮನೆಯಿಂದ ಅಜ್ಜಿಯನ್ನು ಹೊರ ಹಾಕಿದ್ದ ಇದನ್ನು ಗಮನಿಸಿದ ಅಧಿಕಾರಿಗಳು ಕಾನೂನಿನ ಪ್ರಕಾರ ಅಜ್ಜಿಗೆ ತನ್ನ ಮನೆಯನ್ನು ಹಿಂತಿರುಗಿಸಿ ಕೊಟ್ಟಿರುವ ಘಟನೆ ಕೊರಟಗೆರೆ ಪಟ್ಟಣದ ಮೂರನೇ ವಾರ್ಡಿನಲ್ಲಿ ನಡೆದಿದೆ.. ತಹಶೀಲ್ದಾರ್ ನರಸಿಂಮೂರ್ತಿ ಮಾತನಾಡಿ :- ಮಾನ್ಯ ಉಪವಿಭಾಗಾಧಿಕಾರಿಗಳ ಆದೇಶದಂತೆ ಪಟ್ಟಣದ ಮೂರನೇ ವಾರ್ಡಿನ ಕಾವಲಮ್ಮ ಲೇಟ್ ರಾಮಯ್ಯ ಎನ್ನುವವರನ್ನು ಮಾರುತಿ ಎನ್ನುವವರು ಬಲವಂತದಿಂದ ಮನೆಯಿಂದ ಹೊರ ಹಾಕಿದ್ದ ದೂರಿನ ಅನ್ವಯ ಮೇಲಾಧಿಕಾರಿಗಳ ಆದೇಶದಂತೆ ಸ್ಥಳಕ್ಕೆ ಭೇಟಿ ನೀಡಿ ವಯೋವೃದ್ದೆಯಾದ ಕಾವಲಮ್ಮನಿಗೆ ಇವರ…
ತುಮಕೂರು ಯಾವುದೋ ದಾಖಲೆ ಮಾಡಲು ಕೆಲಸ ಮಾಡುವುದು ಬೇಡ ನಾವು ಒಳ್ಳೆಯ ಉದ್ದೇಶಕ್ಕಾಗಿ ಮಾಡುವ ಕೆಲಸ ದಾಖಲೆ ಸೃಷ್ಟಿಸಲು ಎಂದು ಕಾರ್ಯಕ್ರಮದ ಅಧ್ಯಕ್ಷರಾದ ಎಈಒ ಜನಾರ್ಧನ್ ನುಡಿದರು. ತುಮಕೂರಿನಲ್ಲಿ ನಡೆದ ಏಷ್ಯಾ ಬುಕ್ ಆಪ್ ರೆಕಾರ್ಡ ಸರ್ಟಿಪಿಕೇಟ್ ವಿತರಣಾ ಸಮಾರಂಭದಲ್ಲಿ ಮಾಡನಾಡಿದ ಅವರು ಒಂದು ವರ್ಷದಿಂದ ಮಾಡಿದ ಆಯೋಚನೆ, ಯೋಜನೆಗಳ ಫಲವಾಗಿ ಕರ್ನಾಟಕದಾದ್ಯಂತ ಸುಮಾರು 253 ಶಾಲೆಗಳಲ್ಲಿ ಸುಮಾರು 60 ಸಾವಿರ ವಿದ್ಯಾರ್ಥಿಗಳಿಗೆ ಏಕಕಾಲದಲ್ಲಿ ನಿರ್ಧಾರ ಕೈಗೊಳ್ಳುವುದು ಹೇಗೆ? ಎಂಬ ವಿಷಯದ ಬಗ್ಗೆ ತರಬೇತಿ ಕೊಡಿಸಲಾಗಿದ್ದು, ಇದು ಏಷ್ಯಾ ಬುಕ್ ಆಪ್ ರೆಕಾರ್ಡನಲ್ಲಿ ದಾಖಲೆಯಾಗಿರುವುದು ಅತ್ಯಂತ ಸಂತೋಷದ ವಿಷಯ, ಈ ಯೋಜನೆಯ ಮಾರ್ಗದರ್ಶಕರಾದ ಮಾಜಿ ರಾಷ್ಟ್ರೀಯ ಅಧ್ಯಕ್ಷರಾದ ಟಿ.ವಿ.ಎನ್ ಮೂರ್ತಿ ರವರಿಗೆ ವಿಶೇಷ ವಂದನೆಗಳನ್ನು ಸಲ್ಲಿಸಿ ಈ ಯೋಜನೆಯು ಮುಂಬರುವ ಸಾವಿರಾರು ತರಬೇತಿಗಳಿಗೆ ಮಾದರಿಯಾಗುವುದು ಎಂಬ ಮಾತುಗಳನ್ನು ಆಡುತ್ತಾ “ಮನೋಬಲ” ತಂಡಕ್ಕೆ ಮತ್ತು ಭಾಗವಹಿಸಿದ ಎಲ್ಲಾ ತರಬೇತುದಾರರಿಗೆ ಮತ್ತು ಕೋ ಆರ್ಡಿನೇಟರ್ ಗಳಿಗೆ ಧನ್ಯವಾದಗಳನ್ನು ಅರ್ಪಿಸಿ, ಯೋಜನೆಯ ನಿರ್ದೇಶಕರಾದ ನಯನಾ ಜನಾರ್ಧನ್…
ತುಮಕೂರು ಪೋಲಿಸ್ಇಲಾಖೆ ಅತ್ಯಂತ ಜವಾಬ್ದಾರಿಯುತ ಇಲಾಖೆ. ಇಂತಹ ಪಾವಿತ್ರ್ಯತೆಯುಳ್ಳ ಇಲಾಖೆಯಲ್ಲಿ ಸದಾ ಕಾಲ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಕೇಂದ್ರ ವಲಯ ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ ಪ್ರಶಿಕ್ಷಣಾರ್ಥಿಗಳಿಗೆ ಕರೆ ನೀಡಿದರು. ಇಲಾಖೆಯಲ್ಲಿ ಕಾರ್ಯನಿರ್ವಹಿಸುವಾಗ ಯಾವುದೇ ಟೀಕೆಗಳು ಬಂದರೂ ಅದನ್ನು ಋಣಾತ್ಮಕವಾಗಿ ತೆಗೆದುಕೊಳ್ಳದೇ ಸಕಾರಾತ್ಮಕವಾಗಿ ಪರಿಗಣಿಸಬೇಕು. ಬಡ, ಮಧ್ಯಮ ವರ್ಗದಿಂದ ಬಂದು ಪೆÇಲೀಸ್ ಇಲಾಖೆಯಲ್ಲಿ ಕಾರ್ಯನಿರ್ವ ಹಿಸುತ್ತಿರುವ ನಾವು ಪೆÇಲೀಸ್ ಠಾಣೆಗಳಿಗೆ ಸಾರ್ವಜನಿಕರು ಬಂದಾಗ ಸೌಜನ್ಯದಿಂದ ಜನಸ್ನೇಹಿಯಾಗಿ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಸಲಹೆ ಮಾಡಿದರು. ನಗರದ ಜಿಲ್ಲಾ ಪೆÇಲೀಸ್ ಕವಾಯತು ಮೈದಾನದಲ್ಲಿ ನಡೆದ ನಾಗರೀಕ ಮಹಿಳಾ ಪೆÇಲೀಸ್ ಪ್ರಶಿಕ್ಷಣಾರ್ಥಿಗಳ 12ನೇ ತಂಡದ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೆÇಲೀಸ್ ಠಾಣೆಗಳಿಗೆ ದೂರುಗಳನ್ನು ಹೊತ್ತು ಬಡವರು, ದೀನ ದಲಿತರು ಬಂದಾಗ ಅವರ ಕಷ್ಟವನ್ನು ನಿವಾರಿಸುವ ಗಂಭೀರ ಪ್ರಯತ್ನ ಮಾಡಬೇಕು ಎಂದರು. ಮಹಿಳಾ ಸಬಲೀಕರಣ ಮಾಡಬೇಕಾದರೆ ನಮ್ಮನ್ನು ನಾವು ಸಶಕ್ತಗೊಳಿಸಬೇಕು, ವೃತ್ತಿ ಪರತೆಯಿಂದಲೇ ಮೆಚ್ಚುಗೆ ಗಳಿಸಬೇಕು. ಹಿರಿಯ ಅಧಿಕಾರಿಗಳು ಹಾಗೂ ಸಹದ್ಯೋಗಿಗಳ…
ಕೊರಟಗೆರೆ ದಕ್ಷಿಣ ಭಾರತದ ಐತಿಹಾಸಿಕ ಪವಿತ್ರ ಪುಣ್ಯಕ್ಷೇತ್ರ ಕ್ಯಾಮೇನಹಳ್ಳಿಯ ಶ್ರೀಆಂಜನೇಯ ಸ್ವಾಮಿಯ ಬ್ರಹ್ಮ ರಥೋತ್ಸವ ಮತ್ತು ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 25ಸಾವಿರಕ್ಕೂ ಅಧಿಕ ಆಂಜನೇಯ ಭಕ್ತರ ಸಮ್ಮುಖದಲ್ಲಿ ಶನಿವಾರ ಅದ್ದೂರಿಯಿಂದ ನಡೆಯಿತು. ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಕ್ಯಾಮೇನಹಳ್ಳಿಯ ಶ್ರೀಆಂಜನೇಯ ಸ್ವಾಮಿಯ ಬ್ರಹ್ಮ ರಥೋತ್ಸವ ಕಾರ್ಯಕ್ರಮವು ಕಳೆದ 4ವರ್ಷಗಳ ನಂತರ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಆಂಜನೇಯ ಸ್ವಾಮಿ ಜಾತ್ರೆಗೆ ಆಗಮಿಸಿದ್ದ ಭಕ್ತರಿಗೆ ದಾನಿಗಳಿಂದ ಪ್ರಸಾದ ಮತ್ತು ಸಕಲ ಸೌಲಭ್ಯವನ್ನು ಕಲ್ಪಿಸಿದ್ದರು. ಆಂಜನೇಯ ದೇವಾಲಯದಲ್ಲಿ ಬ್ರಹ್ಮ ರಥೋತ್ಸವದ ಪ್ರಯುಕ್ತ ಜ.27ರಿಂದ ವಿಶೇಷ ಕಾರ್ಯಕ್ರಮ ಪ್ರಾರಂಭವಾಗಿ ಅಂಕುರಾರ್ಪಣೆ, ಗಜೇಂದ್ರ ಮೋಕ್ಷ, ಕಲ್ಯಾಣೋತ್ಸವ, ಬ್ರಹ್ಮ ರಥೋತ್ಸವ, ಮೈಲಿಗೆ ರಥೋತ್ಸವ, ಮಂಟಪೋತ್ಸವ, ವಸಂತೋತ್ಸವ, ಪಲ್ಲಕ್ಕಿ ಉತ್ಸವ, ಗರುಡೋತ್ಸವ, ಗಜವಾಹನ ಮತ್ತು ಮಹಾಭಿಷೇಕವು ಫೆ.6ಕ್ಕೆ ಮುಕ್ತಾಯವಾಗಿ ಸತತ 12ದಿನಗಳ ಕಾಲ ವಿಶೇಷವಾಗಿ ನಡೆಯಲಿವೆ. ಮಾಜಿ ಜಿಪಂ ಸದಸ್ಯ ಪಿ.ಎನ್.ಕೃಷ್ಣಮೂರ್ತಿ ಬ್ರಹ್ಮ ರಥೋತ್ಸವ-ದೇವಾಲಯಕ್ಕೆ ಹೂವಿನ ಅಲಂಕಾರ…
ತುಮಕೂರು ನಗರದ ಹೆಚ್.ಎಂ.ಎಸ್.ತಾಂತ್ರಿಕ ಮಹಾವಿದ್ಯಾಲಯದಲ್ಲಿ ಗೋಗ್ರಿನ್, ಗೋ ವ್ಯಾಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹೆಚ್.ಎಂ.ಎಸ್.ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಸ್.ಷಪಿಅಹಮದ್ ಅವರ ನೇತೃತ್ವದಲ್ಲಿ ನಡೆದ ಗೋಗ್ರಿನ್, ಗೋ ವ್ಯಾಲಿ ಕಾರ್ಯಕ್ರಮದಲ್ಲಿ ಸುಮಾರು 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಕ್ರೀಯವಾಗಿ ಭಾಗವಹಿಸಿ ಕೆಲವು ಔಷಧಿಯುಕ್ತ ಹಾಗೂ ಸಾಮಾನ್ಯ ಬಳಕೆಯಲ್ಲಿ ಉಪಯೋಗಕ್ಕೆ ಬರುವ ಸಸ್ಯಗಳನ್ನು ನೆಡುವ ಮೂಲಕ ಅಭಿಯಾನಕ್ಕೆ ಮುನ್ನುಡಿ ಬರೆದರು. ಔಷದಿ ಸಸ್ಯಗಳ ಬೆಳೆಸಲು ಚಾಲನೆ ನೀಡಿದ ಹೆಚ್.ಎಂ.ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಸ್.ಷಪಿಅಹಮದ್ ಮಾತನಾಡಿ,ಮನುಷ್ಯ ಇಂದು ರೋಗ ರುಜಿನಗಳಿಲ್ಲದ ಬದುಕಬೇಕೆಂದರೆ ಆತ ಪ್ರಕೃತಿಯ ಮೊರೆ ಹೋಗಬೇಕಾಗುತ್ತದೆ.ವಾಯು ಮಾಲೀನ್ಯ ನಮ್ಮೆಲ್ಲರನ್ನು ಕಾಡುತ್ತಿದೆ.ಇದು ತೊಲಗಬೇಕೆಂದರೆ ನಾವುಗಳು ಹೆಚ್ಚು ಹೆಚ್ಚ ಗಿಡ ಮರಗಳನ್ನು ಬೆಳೆಸಬೇಕಾಗಿದೆ.ಅದರಲ್ಲಿಯೂ ಔಷಧಿ ಸಸ್ಯಗಳನ್ನು ಬೆಟ್ಟ, ಗುಡ್ಡ, ಕಾಡು ಮೇಡುಗಳಲ್ಲಿ ಬೆಳೆಸಿ, ಪರಿಸರದಲ್ಲಿನ ವಾಯು ಮಾಲಿನ್ಯವನ್ನು ತಡೆಯಲು ಮುಂದಾಗೋಣ. ಈ ನಿಟ್ಟಿನಲ್ಲಿ ಗೋಗ್ರಿನ್, ಗ್ರಿನ್ ವ್ಯಾಲಿ ಅಭಿಯಾನ ಅತ್ಯಂತ ಮಹತ್ವದ್ದು ಎಂದರು. ಹೆಚ್.ಎಂ.ಎಸ್.ಐ.ಟಿ ಪ್ರಾಂಶುಪಾಲರಾದ ಡಾ.ಕವಿತಾ ಮಾತನಾಡಿ,ಗಿಡಗಳು,ಮರಗಳು ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೇ ಮಾನವನಿಗೆ ಸಮೃಧ್ಧಿ…
ತುಮಕೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಹಾತ್ಮಗಾಂಧಿ, ಮಾಜಿ ಪ್ರಧಾನಿಗಳಾದ ಇಂದಿರಾಗಾಂಧಿ ಹಾಗೂ ರಾಜೀವ್‍ಗಾಂಧಿ ಅವರ ಸಂಸ್ಮರಣೆ ಅಂಗವಾಗಿ ಹುತಾತ್ಮರ ದಿನವನ್ನು ಡಿಸಿಸಿ ಅಧ್ಯಕ್ಷ ಚಂದ್ರಶೇಖರಗೌಡ ಅವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು. ಅಹಿಂಸೆಯನ್ನೇ ತನ್ನ ಹೋರಾಟದ ಆಸ್ತ್ರವಾಗಿಸಿಕೊಂಡು ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ಮಹಾತ್ಮಗಾಂಧಿ, ಬಡವರು, ದೀನದಲಿತರು, ಅಲ್ಸಸಂಖ್ಯಾತರು ಹಾಗೂ ಜನಸಾಮಾನ್ಯರ ಏಳಿಗೆಗೆ ದುಡಿದ ಉಕ್ಕಿನ ಮಹಿಳೆಯ ಇಂದಿರಾಗಾಂಧಿ ಹಾಗೂ ದೇಶವನ್ನು ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ದೇಶ ಅಭಿವೃದ್ದಿಗೆ ಮುನ್ನುಡಿ ಬರೆದ ರಾಜೀವ್‍ಗಾಂಧಿ ಅವರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆಂಚಮಾರಯ್ಯ,ತನ್ನ ಜೀವನದುದ್ದಕ್ಕೂ ಅಹಿಂಸೆಯನ್ನು ಪ್ರತಿಪಾದಿಸಿ,ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ಗಾಂಧಿಜೀ ಸಾವನ್ನಪ್ಪಿದ್ದು ಹಿಂಸೆಯಿಂದ.ಇದು ಈ ದೇಶದ ದುರಂತ,ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ಬ್ರಿಟಿಷರು ಗಾಂಧೀಜಿಯ ಹೋರಾಟವನ್ನು ಸಹಿಸಿಕೊಂಡರು.ಆದರೆ ಸ್ವಾತಂತ್ರ ಬಂದ ನಂತರ ಒಂದು ವರ್ಷ ಕಾಲ ಅವರನ್ನು ಭಾರತೀಯರು ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ.ಅಂದು ಗಾಂಧಿ ಸಾವಿಗೆ ಪಿತೂರಿ ಮಾಡಿದ ವೀರ ಸಾರ್ವಕರ್…
ತುಮಕೂರು ಜಿಲ್ಲೆಯಲ್ಲಿ ವಿದ್ಯಾರ್ಥಿನಿಲಯ ದುರಸ್ತಿ ಹಾಗೂ ನಿರ್ಮಾಣ, ಶೌಚಾಲಯ, ಸಮುದಾಯ ಭವನ, ಶಾಲಾ ಕಟ್ಟಡ, ವಿವೇಕ ಶಾಲೆ, ಅಂಗನವಾಡಿ ಕಟ್ಟಡ ನಿರ್ಮಾಣ ಸೇರಿದಂತೆ ಅಪೂರ್ಣವಾಗಿರುವ ಕಾಮಗಾರಿಗಳನ್ನು ಫೆಬ್ರವರಿ 15ರೊಳಗಾಗಿ ಪೂರ್ಣಗೊಳಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ: ಕೆ.ವಿದ್ಯಾಕುಮಾರಿ ಇಂಜಿನಿಯರುಗಳಿಗೆ ಖಡಕ್ ಸೂಚನೆ ನೀಡಿದರು. ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆದ ಬಳಿಕ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳೊಂದಿಗೆ ಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಯಾವುದೇ ಕಾಮಗಾರಿಯನ್ನು ತರಾತುರಿಯಲ್ಲಿ ಪೂರ್ಣಗೊಳಿಸುವ ಭರದಲ್ಲಿ ಕಳಪೆ ಗುಣಮಟ್ಟದ ಕಾಮಗಾರಿಯನ್ನು ಕೈಗೊಂಡಲ್ಲಿ ಸಂಬಂಧಿಸಿದ ಏಜೆನ್ಸಿಗಳ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಇಲಾಖಾ ಮುಖ್ಯಸ್ಥರು ತಮ್ಮ ವ್ಯಾಪ್ತಿಯ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಗುಣಮಟ್ಟವನ್ನು ಪರಿಶೀಲಿಸಬೇಕು. ಕಾಮಗಾರಿಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವ ಗುತ್ತಿಗೆದಾರರಿಗೆ ಮಾತ್ರ ಕಾರ್ಯಾದೇಶ ನೀಡಬೇಕು ಎಂದರಲ್ಲದೆ, ಸರ್ಕಾರದಿಂದ ಕಾಮಗಾರಿಗಾಗಿ ಬಿಡುಗಡೆಯಾಗಿರುವ ಅನುದಾನದ ಹಣವನ್ನು ಎಚ್ಚರಿಕೆಯಿಂದ ವೆಚ್ಚ ಮಾಡಬೇಕೆಂದು ನಿರ್ದೇಶಿಸಿದರು.…











