ತುಮಕೂರು: ರಂಗಭೂಮಿ ಇಂದು ಕಲಾಸ್ತಕರ ಕೊರತೆಯನ್ನು ಎದುರಿಸುತ್ತಿದ್ದು,ಈ ಕ್ಷೇತ್ರದಲ್ಲಿ ತೊಡಗಿರುವವರು ತಮ್ಮ ಉಳಿವಿನ ಜೊತೆಗೆ, ರಂಗಭೂಮಿಯ ಇರುವಿಕೆಗಾಗಿ ಅಧುನಿಕ ತಂತ್ರಜ್ಞಾನಗಳನ್ನು ಬಳಕೆ ಮಾಡಿಕೊಂಡು ಪ್ರಚಾ ರ ಮಾಡುವ ಮೂಲಕ ತನ್ನತ್ತ ಸೆಳೆಯುವ ಕೆಲಸ ಮಾಡಬೇಕಾಗಿದೆ ಎಂದು ಶಾಸಕ ಜಿ.ಬಿ. ಜೋತಿಗಣೇಶ್ ತಿಳಿಸಿದ್ದಾರೆ. ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ(ರಿ), ತುಮ ಕೂರು, ವಿಶ್ವ ರಂಗಭೂಮಿ ದಿನಾಚರಣೆ ಅಂಗ ವಾಗಿ ಆಯೋಜಿಸಿದ್ದ ೫ ದಿನಗಳ ಯುಗಾದಿ ನಾಟಕೋತ್ಸವ-೨೦೨೫ ಮುಕ್ತಾಯ ಸಮಾರಂಭದಲ್ಲಿ ಪಾಲ್ಗೊಂಡು, ಹಿರಿಯ ಕಲಾವಿದರುಗಳಿಗೆ ರಂಗಗೌರವ ಸಮರ್ಪಿಸಿ ಮಾತನಾಡುತಿದ್ದ ಅವರು,ರಂಗಭೂಮಿಯ ಬಗ್ಗೆ ಕುತೂಹಲ ಹೆಚ್ಚಿ ದೆ. ಮುಂದಿನ ಹತ್ತು ವರ್ಷಕ್ಕೆ ಏನಾಗಬಹುದು, ಅಸ್ಥಿತ್ವದಲ್ಲಿ ಇರುತ್ತದೆಯೋ, ಇಲ್ಲವೋ ಎಂಬ ಆಂತಕವನ್ನು ಹುಟ್ಟಿಸುತ್ತದೆ. ಇದೊಂದು ಪ್ರಬಲ ಮಾಧ್ಯಮವಾಗಿದ್ದು, ಉಳಿಸಿಕೊಳ್ಳುವ ಅನಿವಾರ್ಯತೆ ಕಲಾವಿದರು ಮತ್ತು ಕಲಾಸಕ್ತರು ಇಬ್ಬರಿಗೂ ಸೇರಿದೆ ಎಂದರು. ರAಗಗೌರವ ಸ್ವೀಕರಿಸಿ ಮಾತನಾಡಿದ ನಗರ ಉಪವಿಭಾಗದ ಡಿವೈಎಸ್ಪಿ ಚಂದ್ರಶೇಖರ್, ನಾನು ಕಾಲೇಜು ದಿನಗಳಲ್ಲಿ ಬೀದಿ ನಾಟಕಗಳಿಗೆ ಬಣ್ಣ ಹಚ್ಚಿದ್ದೆ. ಅಕರ್ಷಣೆಯಂತು ಇತ್ತು.…
Author: News Desk Benkiyabale
ಪಾವಗಡ: ಪುರಸಭಾ ಚುನಾವಣೆ ಸಮೀಪಿಸುತ್ತಿದ್ದು, ಆ ಹಿನ್ನೆಲೆಯಲ್ಲಿ ಪ್ರತೀ ವಾರ್ಡ್ ನಲ್ಲಿ ಕೆಲಸ ಮಾಡುವ ಹಾಗೂ ಸೇವಾ ಮನೋಭಾವ ಹೊಂದಿರುವ ಅರ್ಹರಿಗೆ ಮಾತ್ರ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಲಾಗುವುದು ಎಂದು ಮಾಜಿ ಸಚಿವರಾದ ವೆಂಕಟರಮಣಪ್ಪ ನವರು ತಿಳಿಸಿದರು ಪುರಸಭಾ ಕಾರ್ಯಾಲಯದಲ್ಲಿ ನೂತನ ಸಭಾಂಗಣವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಗೆಲ್ಲಿಸಿದ್ದಾರೆ ಅವರ ಋಣ ತೀರಿಸುವ ಸಲುವಾಗಿ ಕಾರ್ಯಪ್ರವೃತ್ತರಾಗಬೇಕಾಗಿದೆ, ಪ್ರತೀ ವಾರ್ಡ್ ಗೆ ಬೇಟಿ ನೀಡಿ ಜನರ ಸಮಸ್ಯೆ ಗಳನ್ನು ಸ್ಪಂದಿಸಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ, ಜನಾಭಿಪ್ರಾಯ ಪಡೆದು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದರು ನಂತರ ಮಾತನಾಡಿದ ತುಮಕೂರು ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರು ಹಾಗೂ ಶಾಸಕರಾದ ಹೆಚ್.ವಿ.ವೆಂಕಟೇಶ್ ರವರು ಪಾವಗಡ ಪಟ್ಟಣ ಅತ್ಯಂತ ವೇಗವಾಗಿ ಬೆಳೆಯುತ್ತಿದೆ, ಈ ಹಿನ್ನೆಲೆಯಲ್ಲಿ ಪುರಸಭಾ ವ್ಯಾಪ್ತಿಯನ್ನು ಹೆಚ್ಚಿಸಿ ನಗರಸಭೆಯನ್ನಾಗಿ ಮಾಡಲು ಸಂಬAಧಪಟ್ಟ ಸಚಿವರು ಮತ್ತು…
ತುಮಕೂರು: ವಿಶ್ವವಿದ್ಯಾನಿಲಯದ ನೂತನ ಕ್ಯಾಂಪಸ್ ‘ಜ್ಞಾನಸಿರಿ’ಯಲ್ಲಿ ನಿರ್ಮಿಸಲಾಗಿರುವ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ರಾಜ್ಯ ಸಣ್ಣ ನೀರಾವರಿ, ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಮಾನ್ಯ ಶ್ರೀ ಎನ್. ಎಸ್. ಬೋಸರಾಜು ಅವರು ದಿನಾಂಕ: ೨೮-೦೩-೨೦೨೫ರಂದು ಶುಕ್ರವಾರ ಬೆಳಗ್ಗೆ ೧೦:೦೦ಕ್ಕೆ ಲೋಕಾರ್ಪಣೆಗೊಳಿಸಲಿದ್ದಾರೆ. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಮೋಶನ್ ಸೊಸೈಟಿ (ಕೆಸ್ಟೆಪ್ಸ್) ಅನುದಾನದಲ್ಲಿ ಈ ವಿಜ್ಞಾನ ಕೇಂದ್ರವನ್ನು ನಿರ್ಮಿಸಲಾಗಿದೆ. ಕೇಂದ್ರ ಜಲಶಕ್ತಿ ಹಾಗೂ ರೈಲ್ವೇ ಖಾತೆ ರಾಜ್ಯ ಸಚಿವರು ಹಾಗೂ ತುಮಕೂರು ಸಂಸದರಾದ ಮಾನ್ಯ ಶ್ರೀ ವಿ. ಸೋಮಣ್ಣ, ಕರ್ನಾಟಕದ ಗೃಹಸ ಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಮಾನ್ಯ ಡಾ. ಜಿ. ಪರಮೇಶ್ವರ, ಉನ್ನತ ಶಿಕ್ಷಣ ಸಚಿವರಾದ ಮಾನ್ಯ ಡಾ. ಎಂ. ಸಿ. ಸುಧಾಕರ್, ಸಹಕಾರ ಸಚಿವರಾದ ಮಾನ್ಯ ಶ್ರೀ ಕೆ. ಎನ್. ರಾಜಣ್ಣ ಅವರು ಈ ಕಾರ್ಯಕ್ರಮದಲ್ಲಿ ಘನ ಉಪಸ್ಥಿತಿ ವಹಿಸಲಿದ್ದಾರೆ. ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಮಾನ್ಯ…
ಹುಳಿಯಾರು: ದೀಪದ ಕೆಳಗೆ ಕತ್ತಲೆ ಎನ್ನುವಂತ್ತಾಗಿದೆ ಹುಳಿಯಾರು ಹೋಬಳಿಯ ತಿಮ್ಲಾಪುರ ಗ್ರಾಮ ಪಂಚಾಯ್ತಿ. ಈ ಪಂಚಾಯ್ತಿ ವ್ಯಾಪ್ತಿಗೆ ಹತ್ತಾರು ಹಳ್ಳಿಗಳು ಬರುತ್ತವಾದರೂ ಪಂಚಾಯ್ತಿ ಕಛೇರಿ ಇರುವ ನಿತ್ಯ ಪಿಡಿಒ, ಅಧ್ಯಕ್ಷರು, ಸದಸ್ಯರು, ಸಿಬ್ಬಂದಿ ಓಡಾಡುವ ತಿಮ್ಲಾಪರ ಗ್ರಾಮದಲ್ಲೇ ಸ್ವಚ್ಛತೆ ಕಾಣದಾಗಿದೆ. ಪಂಚಾಯ್ತಿ ಸುತ್ತಮುತ್ತಲೇ ನೈರ್ಮಲ್ಯ ಕೊರತೆ ಎದ್ದು ಕಾಣುತ್ತಿರುವಾಗ ಉಳಿದ ಹಳ್ಳಿಗಳ ಸ್ವಚ್ಚತೆಯನ್ನು ನಿರೀಕ್ಷಿಸಬಹುದೇ ಎನ್ನುವಂತಾಗಿದೆ. ತಿಮ್ಲಾಪುರ ಗ್ರಾಮ ಧಾರ್ಮಿಕವಾಗಿ ತಾಲೂಕಿನಾಧ್ಯಂತ ಪ್ರಸಿದ್ದಿ ಪಡೆದಿದೆ. ಇಲ್ಲಿ ಚಂದ್ರಮೌಳೇಶ್ವರ ಸ್ವಾಮಿ, ಕೊಲ್ಲಾಪುರದಮ್ಮ, ಆಂಜನೇಯಸ್ವಾಮಿ ಹೀಗೆ ವಿವಿಧ ದೇವರುಗಳ ಧಾರ್ಮಿಕ ಕಾರ್ಯಕ್ರಮಗಳು ಆಗಾಗ ನೆರವೇರುತ್ತಿರುತ್ತವೆ. ಆ ಸಂದರ್ಭದಲ್ಲಿ ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು ವೈಭವದಿಂದ ನೆರವೇರುತ್ತವೆ. ಪರಿಣಾಮ ಸುತ್ತಮುತ್ತಲ ಹಳ್ಳಿಗಳ ಸವಿರಾರು ಜನರು ಬರುತ್ತಾರೆ. ಇಲ್ಲಿನ ಅಂಚೆ ಕಛೇರಿಗೆ ಹೊಸಹಳ್ಳಿ, ಹೊಸಹಳ್ಳಿಪಾಳ್ಯ, ಸೀಗೆಬಾಗಿ, ತೊರೆಮನೆ ಗ್ರಾಮಗಳ ಜನರು ನಿತ್ಯ ಬಂದೋಗುತ್ತಾರೆ. ಗ್ರಾಪಂ ಕಛೇರಿಗಂತೂ ಹತ್ತಾರು ಹಳ್ಳಿಗಳ ಜನರು ನಿತ್ಯ ಬರುತ್ತಿರುತ್ತಾರೆ. ಹೀಗೆ ಸುತ್ತಮುತ್ತಲ ಹಳ್ಳಿಗಳು ಬಂದೋಗುವ ಊರಿನ ಸ್ವಚ್ಚತೆಗೆ ಗ್ರಾಪಂ ಮೊದಲ ಆಧ್ಯತೆ ನೀಡಬೇಕಿದೆ. ಆದರೆ…
ಗುಬ್ಬಿ: ಬಗರ್ ಹುಕ್ಕುಂ ಸಾಗುವಳಿ ಹಾಗೂ ಭೂಹೀನ ರೈತರ ಸಮಸ್ಯೆಗಳ ಪರಿಹಾರಕ್ಕೆ ಪ್ರತಿಭಟಿಸಿದ ರೈತರನ್ನು ಹಾಗೂ ರೈತರ ಚಳುವಳಿಯನ್ನು ಅಪಮಾನಿಸಿದ ಗುಬ್ಬಿ ತಾಲ್ಲೂಕು ತಹಶೀಲ್ದಾರ್ ಕ್ಷಮೆ ಕೇಳುವಂತೆ ಒತ್ತಾಯಿಸಿ ಬುಧವಾರ ತಹಶೀಲ್ದಾರ್ ಕಛೇರಿ ಎದುರು ಕರ್ನಾಟಕ ಪ್ರಾಂತ ರೈತ ಸಂW ಮತ್ತು ಬಗರ್ ಹುಕ್ಕುಂ ಸಾಗುವಳಿದಾರ ರೈತರ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸಿ ಮನವಿ ನೀಡಿ ವಾಪಾಸ್ ಆಗುವ ಸಂದರ್ಭದಲ್ಲಿ ಗುಬ್ಬಿ ಶಾಸಕ ಎಸ್. ಆರ್. ಶ್ರೀನಿವಾಸ್ ಮದ್ಯ ಪ್ರವೇಶ ಮಾಡಿದ್ದಲ್ಲದೆ, ತಹಶೀಲ್ದಾರಗೆ ತಿಳಿಹೇಳುವ ಬದಲು ರೈತ ಚಳುವಳಿಯನ್ನು ಸರ್ವಾಧಿಕಾರಿ ಗೂಂಡ ವರ್ತನೆಯಿಂದ ಅಪಮಾನಿಸಿರುವುದನ್ನು ಸಿ.ಪಿ.ಐ.(ಎಂ) ಪಕ್ಷದ ತುಮಕೂರು ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ, ಆಡಳಿತ ಪಕ್ಷದ ಶಾಸಕ ಎಂಬುದನ್ನು ಮರೆತು ದರ್ಪದಿಂದ ರೈತಸಂಘ ಮುಂಖಡರ ಮೇಲೆ ಕ್ರಿಮಿನಲು ಕೇಸ್ ದಾಖಲಿಸುವಂತೆ ಪೋಲಿಸರ ಮೇಲೆ ಬಹಿರಂಗವಾಗಿ ಒತ್ತಡ ಹಾಕಿದ್ದಾರೆ ಬಗರ್ ಹುಕ್ಕುಂ ಸಾಗುವಳಿ ಮತ್ತು ಭೂಹೀನ ರೈತರು ಸಂಘಟಿತವಾಗಿ ಪ್ರಜಾಪ್ರಭುತ್ವ ರೀತಿಯಲ್ಲಿ ತಮ್ಮ ಬೇಡಿಕೆಗಳ ಹೀಡೆರಿಕೆಗೆ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಆರ್ಜಿ…
ಹುಳಿಯಾರು: ಪಟ್ಟಣ ಪಂಚಾಯಿತಿಯ ೨೦೨೫-೨೬ ನೇ ಸಾಲಿನ ಆಯವ್ಯಯವನ್ನು ಅಧ್ಯಕ್ಷೆ ರತ್ನಮ್ಮ ಮಂಗಳವಾರ ಮಂಡಿಸಿದ್ದು ಪಟ್ಟಣ ಪಂಚಾಯಿತಿಗೆ ವಿವಿಧ ಮೂಲಗಳಿಂದ ಒಟ್ಟು ೩೩,೦೮,೬೨,೦೦೦ ರೂ ಆದಾಯ ನಿರೀಕ್ಷಿಸಲಾಗಿದ್ದು ಹಾಗೂ ೪೧, ೪೧,೨೪,೨೪೪ ರೂ ವೆಚ್ಚ ನಿರೀಕ್ಷಿಸಲಾಗಿದ್ದು ಒಟ್ಟು ೪೦,೪೮,೫೧೫ ರೂಪಾಯಿ ಆಖೈರು ಶಿಲ್ಕಿನೊಂದಿಗೆ ಉಳಿತಾಯ ಬಜೆಟ್ ಮಂಡಿಸಲಾಯಿತು. ಬಜೆಟ್ ಪ್ರಮುಖ ಅಂಶಗಳು: ಸ್ವಯಂಘೋಷಿತ ಆಸ್ತಿ ತೆರಿಗೆಯಿಂದ ೧೨೦ ಲಕ್ಷ ರೂಪಾಯಿ, ನೀರು ಸರಬರಾಜು ಸಂಪರ್ಕಗಳಿAದ ೩೦ ಲಕ್ಷ ರೂಪಾಯಿ, ವಾಣಿಜ್ಯ ಸಂಕೀರ್ಣಗಳ ಬಾಡಿಗೆಯಿಂದ ೫೦ ಲಕ್ಷ ರೂಪಾಯಿ, ಪರಿವೀಕ್ಷಣ ಶುಲ್ಕ- ಉದ್ಯಮ ಪರವಾನಿಗೆ-ಕಟ್ಟಡ ಪರವಾನಿಗೆ -ಖಾತಾ ನಕಲು ಮತ್ತಿತರ ಶುಲ್ಕಗಳಿಂದ ೧೦೫.೩೭ ಲಕ್ಷ ರೂಪಾಯಿ, ವೇತನ ಮತ್ತು ವಿದ್ಯುತ್ ಅನುದಾನ ಮೂಲಗಳಿಂದ ೫೪೮ ಲಕ್ಷ, ಎಸ್‌ಎಫ್‌ಸಿ ವಿಶೇಷ ಮತ್ತು ಇತರೆ ಮೂಲಗಳಿಂದ ೬೯ ಲಕ್ಷ ರೂಪಾಯಿ, ಬರಪರಿಹಾರ, ಕುಡಿಯುವ ನೀರು ಇತರೆ ಕಾಮಗಾರಿ ಅನುದಾನ ೫೫ ಲಕ್ಷ, ೧೫ ನೇ ಹಣಕಾಸು ಯೋಜ ನೆಯಿಂದ ೧೨೫ ಲಕ್ಷ, ಸೂಚನಫಲಕ, ಜಾಹೀರಾತು ತೆರಿಗೆಯಿಂದ…
ತುಮಕೂರು: ದೇಶದ ಪ್ರಜೆಗಳು ಪ್ರಮಾಣಿಕವಾಗಿ ತೆರಿಗೆಯನ್ನು ಸರ್ಕಾರಕ್ಕೆ ಸಲ್ಲಿಸಿದಾಗ ಮಾತ್ರ ದೇಶದ ಆರ್ಥಿಕ ವ್ಯವಸ್ಥೆ ಸದೃಢವಾಗಿ ಅಭಿವೃದ್ಧಿಯತ್ತ ಮುಂದೆ ಸಾಗುತ್ತದೆ ಎಂದು ತುಮಕೂರು ವಿಭಾಗದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಾದ ಅರುಣ್ ಕುಮಾರ್ ತಿಳಿಸಿದರು. ನಗರದ ಅಗಳಕೋಟೆಯಲ್ಲಿರುವ ಶ್ರೀ ಸಿದ್ಧಾ ರ್ಥ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಮಂಗಳವಾರ (ಇಂದು ) ಸಾಹೇ ವಿಶ್ವವಿದ್ಯಾ ನಿಲಯ ಹಾಗೂ ಆದಾಯ ತೆರಿಗೆ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ‘ ಟಿಡಿಎಸ್ ಜಾಗೃತಿ’ ಕುರಿತು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತೆರಿಗೆ ಪಾವತಿಯ ವಿವಿಧ ಹಂತಗಳನ್ನು ವಿವರಿಸಿದರು. ಸಾಹೇ ವಿಶ್ವ ವಿದ್ಯಾಲಯದ ಉಪಕುಲ ಪತಿಗಳಾದ ಡಾ. ಕೆ.ಬಿ ಲಿಂಗೇಗೌಡ ರವರು ಮಾತನಾಡಿ ನಾವು ದೇಶಕ್ಕೆ ಸಲ್ಲಿಸುವ ತೆರಿಗೆಯನ್ನು ದೇಶ ಸೇವೆ ಅಂದುಕೊಳ್ಳಬೇಕು. ಹಾಗಾಗಿ ಪ್ರಜೆಗಳು ಪ್ರಮಾಣಿಕವಾಗಿ ತೆರಿಗೆಯನ್ನು ಸಲ್ಲಿಸಬೇಕು. ಆದಾಯ ತೆರಿಗೆಯ ಜಾಗೃತಿ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಮುಂದಿನ ಅಧ್ಯಯನಕ್ಕೆ ಬಹಳ ಸಹಕಾರಿಯಾಗುತ್ತದೆ ಎಂದು ತಿಳಿದರು. ಕಾರ್ಯಕ್ರಮದಲ್ಲಿ ವಾಣಿಜ್ಯ ತೆರಿಗೆ ವಿಭಾಗದ ಇನ್ಸ್ ಪೆಕ್ಟರ್ ಸುನಿಲ್ ಗುಪ್ತಾ, ಸಾಹೇ ವಿ.ವಿ.…
ಪಾವಗಡ: ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಸಂಘಟನೆಗಳ ವತಿಯಿಂದ ಪಟ್ಟಣದ ಕುಮಾರಸ್ವಾಮಿ ಬಡಾವಣೆ ವಾಲ್ಮೀಕಿ ದೇವಸ್ಥಾನ ಆವರಣದಲ್ಲಿ ಎಲ್ .ಜಿ. ಹಾವನೂರು ರವರ ೧೦೦ನೇ ವರ್ಷದ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ನಿಡುಗಲ್ಲು ವಾಲ್ಮೀಕಿ ಆಶ್ರಮದ ಪೀಠಧ್ಯಕ್ಷರಾದ ಶ್ರೀ ವಾಲ್ಮೀಕಿ ಸಂಜಯ್ ಕುಮಾರ ಸ್ವಾಮೀಜಿಗಳು ಎಲ್ .ಜಿ. ಹಾವನೂರು ಒಬ್ಬ ಮಹಾನ್ ಚೇತನ ಆದರ್ಶ ವ್ಯಕ್ತಿ ಒಬ್ಬ ಕಾನೂನು ಪಂಡಿತರಾಗಿ ಅವರ ಸೇವೆ ಅನನ್ಯವಾದುದು ನಮ್ಮ ನಾಡಿಗೆ ಹಿಂದುಳಿದ ತಳ ಸಮುದಾಯದ ಏಳಿಗೆಗೆ ಶ್ರಮಿಸಿದ ಮಹಾನ್ ನಾಯಕರು ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಸಮುದಾಯದಕ್ಕೆ ಅವರ ಆಯೋಗ ನೀಡಿದ ವರದಿ ಹಿಂದುಳಿದ ವರ್ಗಗಳ ಬೈಬಲ್ ಆಗಿದೆ. ಅಂದಿನ ಮುಖ್ಯಮಂತ್ರಿ ಡಿ ದೇವರಾಜು ಅರಸು ರವರು ಸಚಿವ ಸಂಪುಟದಲ್ಲಿ ಹಾವನೂರು ವರದಿಯನ್ನು ಅನುಮೋದನೆ ಮಾಡಿ ಹಿಂದುಳಿದ ಸಮುದಾಯದಕ್ಕೆ ಕ್ರಾಂತಿಕಾರಿ ಸಾಮಾಜಿಕ ನ್ಯಾಯ ಕೊಡಿಸಿದ ಕೀರ್ತಿ ಹಾವನೂರು ರಚಿಸಿದ ಆಯೋಗ ಆಯೋಗಕ್ಕೆ ಸಲ್ಲುತ್ತದೆ . ಇಂತಹ ಮಹಾನ್ ನಾಯಕನನ್ನು ನಾವು…
ಪಾವಗಡ: ರಾಜ್ಯ ಸರ್ಕಾರವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯಡಿ ೬ ವರ್ಷದ ಮಕ್ಕಳ ಮತ್ತು ಗರ್ಭಿಣಿ ಹಾಗೂ ಬಾಣಂತಿ ತಾಯಂದಿರಿಗೆ ಪೂರಕ ಪೌಷ್ಟಿಕ ಆಹಾರ ಕಾರ್ಯಕ್ರಮದ ಅನುಸಾರ ಅಕ್ಕಿ, ತರಕಾರಿ, ಬೆಳೆಗಳು, ಗೋಧಿ ಸಕ್ಕರೆ ಮೊಟ್ಟೆ ಇತ್ಯಾದಿಗಳನ್ನು ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುವ ಮೂಲಕ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಹಾಗೂ ದೈಹಿಕ ಆರೋಗ್ಯಕ್ಕೆ ಬಲ ನೀಡುವ ಸದುದ್ದೇಶದಿಂದ ಪೋಶಣ್ ಅಭಿಯಾನ ಯೋಜನೆ, ಮಾತೃಪೂರ್ಣ ಯೋಜನೆ, ಕ್ಷೀರಭಾಗ್ಯ ಹಾಗೂ ಸೃಷ್ಟಿ ಇತ್ಯಾದಿ ಯೋಜನೆಗಳನ್ನು ಪ್ರತಿಷ್ಠಾತ್ಮಕವಾಗಿ ಜಾರಿಗೊಳಿಸಲು ಪ್ರಯತ್ನಿಸುತ್ತಿದ್ದಗ್ಯೂ ಅಧಿಕಾರಿಗಳ ಹಣದಾಸೆ ಮತ್ತು ಅಧಿಕಾರ ದುರುಪಯೋಗ ದಿಂದಾಗಿ ಯಾವುದೇ ಯೋಜನೆಯು ಸಂಪೂರ್ಣವಾಗಿ ಫಲಾನುಭವಿಗಳಿಗೆ ಹಾಗೂ ಸಾರ್ವಜನಿಕರಿಗೆ ತಲುಪದೆ ಇರುವುದರಿಂದ ಸಫಲತೆ ಕಾಣ ದೆ ಸರ್ಕಾರದ ಹಣ ಪೋಲಾಗುತ್ತಿರುವುದು ವಿಪರ್ಯಾ ಸವೆ ಸರಿ. ಇದಕ್ಕೆ ನಿದರ್ಶನ ಪಾವಗಡ ಶಿಶುಅಭಿವೃದ್ಧಿ ಯೋಜನೆಯ ಅಕ್ರಮಗಳ ಕರ್ಮಕಾಂಡವೇ ಸಾಕ್ಷಿ ಆಗಿರುತ್ತದೆ. ಪಾವಗಡ ಸಮಗ್ರ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಬರುವ ಸುಮಾರು ೩೩೬ ಅಂಗನವಾಡಿ ಕೇಂದ್ರಗಳಿಗೆ ಪೂರಕ ಪೌಷ್ಟಿಕ…
ಕೊರಟಗೆರೆ: ಮಹಿಳೆಯರು ಸ್ವಾವಲಂಬಿಗಳಾದರೆ ಸಮಾಜವು ಶಕ್ತಿವಂತಾಗುತ್ತದೆ ಮಹಿಳೆಯರಿಗೆ ಅವಕಾಶ ಕಲ್ಪಿಸಿಲು ನಮ್ಮ ಆಕ್ವಿನ್ ಪೈನಾನ್ಸಿಯಲ್ ಸೊಲ್ಯೂಷನ್ಸ್ ಸಂಸ್ಥೆ ಸದಾ ಬೀಮ್ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಮೂಲಕ ನಿಮ್ಮೊಂದಿಗೆ ಇರುತ್ತದೆ ಎಂದು ಅಕ್ವಿನ್ ಸಂಸ್ಥೆಯ ಉಪಾದ್ಯಕ್ಷರಾದ ರೇಷ್ಮಾಗೋಯಲ್ ತಿಳಿಸಿದರು. ಅವರು ಕೊರಟಗೆರೆ ಪಟ್ಟಣದಲ್ಲಿ ಉಚಿತ ಕಂಪ್ಯೋಟರ್ ಮತ್ತು ಹೊಲಿಗೆ ತರಬೇತಿ ನೀಡು ತ್ತಿರುವ ಬೀಮ್ ಗ್ರಾಮೀಣಾಭಿವೃದ್ದಿ ಸಂಸ್ಥೆ ಯಲ್ಲಿ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚೆಣೆ ಮತ್ತು ತರಬೇತಿ ಪಡೆದ ೪೦೦ ಫಲಾನುಭವಿಗಳಿಗೆ ಪ್ರಮಾ ಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತ ನಾಡಿ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಸದಾ ಕ್ರೀಯಾಶೀಲರಾಗಿ ಉದ್ಯಮಶೀಲತೆಯನ್ನು ಮೈಗೊಡಿಸಿಕೊಳ್ಳಬೇಕು, ಸಮಾಜದ ಎಲ್ಲಾ ಕ್ಷೇತ್ರಗ ಳಲ್ಲಿಯೂ ಮಹಿಳೆಯು ಸಾಧನೆಗೈಯುವ ಮೂಲಕ ಹೆಣ್ಣು ಅಬಲೆಯಲ್ಲ ಸಬಲೆ ಎಂದು ತಿಳಿಸಿದರು. ಬೆಂಗಳೂರು ಅಕ್ವಿನ್ ಫೈನಾನ್ಸಿಯಲ್ ಸೊಲ್ಯೋ ಷನ್ ಸಂಸ್ಥೆಯ ಅಧ್ಯಕ್ಷ ವಿಜಯ್‌ಕುಮಾರ್ ಮಾತ ನಾಡಿ, ಮಹಿಳೆಯರ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಸಮಾಜದ ಮುಖ್ಯವಾಹಿನಿಯ ಮುನ್ನಡೆಗೆ ತರತಕ್ಕದ್ದು ಪುರುಷರ ಕೆಲಸವಾಗಿದೆ, ಕೊರಟಗೆರೆಯಲ್ಲಿ ಬೀಮ್ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಮೂಲಕ…