Author: News Desk Benkiyabale

ತುಮಕೂರು : ಹೇಮಾವತಿ ಲಿಂಕ್ ಕೆನಾಲ್ ಯೋಜನೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಸ್ವಾಮೀಜಿಗಳು ಹಾಗೂ ರೈತರು ಸೇರಿದಂತೆ ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ಮತ್ತು ಯೋಜನೆ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿ ಮಾಜಿ ಸಚಿವ ಸೊಗಡು ಶಿವಣ್ಣ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಮರನಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಒಳಗೆ ಚಾಪೆ, ದಿಂಬು, ಹೊದಿಕೆಯೊಂದಿಗೆ ಉಪವಾಸ ಆರಂಭಿಸಿದ್ದಾರೆ. ಸ್ಥಳದಲ್ಲಿ ಪೊಲೀಸ್ ಅಧಿಕಾರಿಗಳು ಮೊಕ್ಕಾಮ್ ಹೂಡಿದ್ದಾರೆ. ಹೇಮಾವತಿ ಲಿಂಕ್ ಕೇನಾಲ್ ಯೋಜನೆ ವಿರೋಧಿಸಿ ಹೋರಾಟಕ್ಕೆ ಬೆಂಬಲಿಸಿ ಭಾಗಿಯಾಗಿದ್ದ ಸ್ವಾಮೀಜಿಗಳ ಮೇಲೆ ಎಫ್ ಐ ಆರ್ ದಾಖಲು ಮಾಡಿ ಸರ್ಕಾರ ಅವರನ್ನು ಹೆದರಿಸಲು ಮುಂದಾಗಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆರೋಪಿಸಿದ್ದಾರೆ. ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸರ್ಕಾರದ ನಿರ್ಧಾರ ಖಂಡಿಸಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದು ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹೋರಾಟಗಾರರ ಮೇಲಿನ ಪೊಲೀಸರ ದೌರ್ಜನ್ಯ ನೋಡಲು ಆಗದೆ ಸಂಕಟ ವಾಗುತ್ತಿದೆ ಎಂದರು. ಮಠಾಧೀಶರನ್ನು ಬಂಧಿಸುತ್ತೇವೆ ಎಂದರೆ ಅದು ದೇವಸ್ಥಾನಗಳ ಬಾಗಿಲನ್ನು ಹಾಕಿದಂತೆ.…

Read More

ಕೊರಟಗೆರೆ: ಸರ್ಕಾರ ೧೯೬೦ರ ಇಸವಿಯಲ್ಲಿ ಶ್ರೀ ಚೆಲುವ ಚೆನ್ನಿಗರಾಯ ದೇವಾಲಯಕ್ಕೆ ಸರ್ವೇ ನಂ. ೧೩೦ರಲ್ಲಿ ೪ ಎಕೆರೆ ೬ ಗುಂಟೆ ಜಮೀನು ಮಂಜೂರು ಮಾಡಿದೆ. ಈ ದೇವಾಲಯ ಮುಜರಾಯಿ ಇಲಾಖೆ ಒಳಪಡಲಿದ್ದು. ಇಲಾಖೆಗೆ ಗೊತ್ತಿಲ್ಲದೆ ಅರ್ಚಕರ ಕುಟುಂಬ ನೆಲಮಂಗಲದ ಮಹಿಳೆಗೆ ಕ್ರಯ ಮಾಡಿದ್ದಾರೆ ಎಂಬ ಆರೋಪ ಗ್ರಾಮಸ್ಥರಿಂದ ಕೇಳಿ ಬಂದಿದೆ. ಕೊರಟಗೆರೆ ತಾಲ್ಲೂಕಿನ ಹೊಳವಹಳ್ಳಿ ಹೋಬಳಿ ತೊಗರಿಘಟ್ಟ ಗ್ರಾಮದ ಶ್ರೀ ಚೆನ್ನಿಗರಾಯ ಸ್ವಾಮಿ ದೇವಾಲಯ ಮುಜರಾಯಿ ಇಲಾಖೆ ಸೇರಿದೆ. ಸರ್ಕಾರದ ಜಮೀನನ್ನು ಕ್ರಯ ಮಾಡುವ ಮುನ್ನ ಇಲಾಖೆ ಗಮನಕ್ಕೆ ತರದೇ ನೆಲಮಂಗಲ ಭಾಗ್ಯಮ್ಮ ಮತ್ತು ದೀಪ.ಜೆ ಎಂಬುವವರಿಗೆ ಮಾರಾಟ ಮಾಡಿದ್ದು, ಒತ್ತಡಕ್ಕೆ ಮಣಿದ ಕುಣಿಗಲ್ ಉಪ ನೋಂದಾಣಾಧಿಕಾರಿಗಳು ಜಮೀನಿನ ದಾಖಲೆಗಳನ್ನು ಪರಿಶೀಲಿಸದೆ ಕ್ರಯ ಮಾಡಿದ್ದರೆಂದು ತಾಲ್ಲೂಕು ಕಚೇರಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿ ಪ್ರತಿಭಟನೆಯಲ್ಲಿ ಆಕ್ರೋಶ ಹೊರ ಹಾಕಿದರು. ಸರ್ಕಾರದಿಂದ ದೇವಾಲಯಕ್ಕೆ ಜಮೀನು ಮಂಜುರಾದ ವೇಳೆ ಲ್ಯಾಂಡ್ ಟ್ಯೂಬುನಲ್ ಅಡಿಯಲ್ಲಿ ಸದರಿ ದೇವಾಲಯದ ಅರ್ಚಕ ಚೆನ್ನಕೇಶವಚಾರ್ ಮತ್ತು ಪತ್ನಿ ಪುಟ್ಟಲಕ್ಷಮ್ಮನವರು ಖಾತೆ,ಪಹಣಿ ಮಾಡಿಸಿಕೊಂಡಿದ್ದರು,…

Read More

ತುಮಕೂರು: ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಜಾರಿ ಕುರಿತು ರಚಿಸಿದ್ದ ತಾಂತ್ರಿಕ ಸಮಿತಿ ಕೇವಲ ಕಣ್ಮರೆಸುವ ತಂತ್ರ ಎಂದು ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ ಹೇಳಿದರು. ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿ, ನಿವೃತ್ತರನ್ನು, ನಮ್ಮ ಕೈಕೆಳಗೆ ಇರುವವರನ್ನು ಸಮಿತಿಗೆ ನೇಮಿಸಿದರೆ, ನಾವು ಹೇಳಿದಂತೆ ವರದಿ ಬರೆದು ಕೊಡುತ್ತಾರೆ. ಸಮಿತಿ ಸದಸ್ಯರನ್ನು ಅವರ ಪಾಡಿಗೆ ಅವರು ಕೆಲಸ ಮಾಡಲು ಬಿಟ್ಟರೆ ಸರಿಯಾದ ವರದಿ ನೀಡುತ್ತಾರೆ. ಜನರಿಗೆ ಅನಾನುಕೂಲವಾಗದ ರೀತಿಯಲ್ಲಿ ಕಾಮಗಾರಿ ನಡೆಸಬೇಕು ಎಂದರು. ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ನಿರ್ಮಾಣದಿಂದ ಹೇಮಾವತಿ ನೀರು ಹರಿಯುವ ತಾಲ್ಲೂಕುಗಳಿಗೆ ತೊಂದರೆಯಾಗುತ್ತದೆ. ಯೋಜನೆ ಪ್ರಾರಂ ಭದಿಂದಲೂ ವಿರೋಧ ವ್ಯಕ್ತಪಡಿಸಿದ್ದೇನೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಚರ್ಚಿಸುತ್ತೇನೆ ಎಂದು ತಿಳಿಸಿದರು.

Read More

ತುಮಕೂರು: ನಕ್ಸಲ್ ನಿಗ್ರಹ ಪಡೆ ಮಾದರಿಯಲ್ಲೇ ಮುಂದಿನ ವಾರದಿಂದ ‘ಕೋಮು ಹಿಂಸೆ ನಿಗ್ರಹ ಕಾರ್ಯಪಡೆ’ ಕಾರ್ಯಾರಂಭ ಮಾಡಲಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕೋಮು ಗಲಭೆ ನಿಯಂತ್ರಣಕ್ಕೆ ಕಾರ್ಯಪಡೆ ರಚಿಸಲಾಗಿದೆ. ಈಗಾಗಲೇ ಕಾರ್ಯಪಡೆ ರಚಿಸಿ ಅಧಿಕೃತವಾಗಿ ಆದೇಶ ಹೊರಡಿಸಲಾಗಿದೆ ಎಂದು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಡಿಐಜಿ, ಪೊಲೀಸ್ ವರಿಷ್ಠಾಧಿಕಾರಿ(ಎಸ್.ಪಿ), ಡಿವೈಎಸ್‌ಪಿ, ಸಬ್ ಇನ್‌ಸ್ಪೆಕ್ಟರ್ ಸೇರಿ ಸುಮಾರು ೩೦೦ ಸಿಬ್ಬಂದಿಯನ್ನು ನೇಮಿಸಲಾಗುತ್ತದೆ. ಅವರಿಗೆ ಪ್ರತ್ಯೇಕ ಅಧಿಕಾರ, ಸಮವಸ್ತ್ರ, ವಾಹನ ಸೌಲಭ್ಯ ಕಲ್ಪಿಸಲಾಗುತ್ತದೆ. ಕಾರ್ಕಳದ ತರಬೇತಿ ಕೇಂದ್ರದಲ್ಲಿ ಅಗತ್ಯ ತರಬೇತಿ ನೀಡಲಾಗುತ್ತದೆ ಎಂದರು. ಯಾವುದೇ ಸಮುದಾಯವನ್ನು ಗುರಿಯಾಗಿಸಿಕೊಂಡು ಕ್ರಮ ಜರುಗಿಸುವುದಿಲ್ಲ. ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡವರ ಮೇಲೆ ಕ್ರಮ ವಹಿಸಲಾಗುತ್ತದೆ. ರಾಜ್ಯದಲ್ಲಿ ಕೊಲೆ, ಅಪರಾಧ ಪ್ರಕರಣ ನಿಯಂತ್ರಣಕ್ಕೆ ಬರುತ್ತಿವೆ ಎಂದು ಅವರು ತಿಳಿಸಿದರು.

Read More

ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಸೊರವನಹಳ್ಳಿ ಪಿಡಿಒ ಕಾರ್ಯವೈಖರಿ ಖಂಡಿಸಿ ಕೆಲ ಸದಸ್ಯರು ಮತ್ತು ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು. ಸಮಸ್ಯೆ ಆಗಿದೆ. ಬೋರ್‌ವೆಲ್ ಕೆಟ್ಟು ಹೋಗಿದೆ. ಅದನ್ನು ಕೂಡಲೇ ಸರಿಪಡಿಸಿ ನೀರಿನ ಸಮಸ್ಯೆ ಬಗೆಹರಿಸುವ ಪ್ರಯತ್ನವನ್ನು ಪಿಡಿಒ ಹನುಮಂತರಾಜು ಮಾಡುತ್ತಿಲ್ಲ’ ಎಂದು ಕೊಮ್ಮರದೇವರಹಳ್ಳಿಯ ನಿವಾಸಿ ವಕೀಲ ನಾಗರಾಜು ಆರೋಪಿಸಿದರು. `ಗ್ರಾಮದಲ್ಲಿ ಉದ್ಭವಿಸಿರುವ ಸಮಸ್ಯೆಯ ಕುರಿತು ಪಿಡಿಒಗೆ ಕರೆ ಮಾಡಿದರೆ ಉಡಾಫೆ ಉತ್ತರ ನೀಡುತ್ತಾರೆ. ಹಲವಾರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಶುಚಿತ್ವ ಮರೀಚಿಕೆಯಾಗಿದೆ. ಬೀದಿ ದೀಪ ಸೌಲಭ್ಯ ಇಲ್ಲದಾಗಿದೆ. ದೀಪ ಹಾಕಿಸಿ ಎಂದರೆ ಹಣಕೊಡಿ ಹಾಕಿಸುತ್ತೇನೆ ಎಂದು ಉತ್ತರ ನೀಡುತ್ತಾರೆ. ಪಂಚಾಯಿತಿಯ ಸೌಲಭ್ಯವನ್ನು ಜನರಿಗೆ ನೀಡುತ್ತಿಲ್ಲ. ಜನರಿಂದ ಹಣ ಸುಲಿಗೆ ಮಾಡುವುದೇ ಕಾಯಕವಾಗಿಬಿಟ್ಟಿದೆ’ ಎಂದರು. ಗ್ರಾಮದಲ್ಲಿ ಜಾರಿಗೆ ತಂದಿರುವ ಜಲಜೀವನ್ ಯೋಜನೆಯೂ ಸಹ ಪಿಡಿಒ ಬೇಜವಾಬ್ದಾರಿತನದಿಂದ ವಿಫಲವಾಗಿದೆ’ ಎಂದು ದೂರಿದರು. ಗ್ರಾಮಗಳಲ್ಲಿ ಕಳೆದ ಏಳೆಂಟು ದಿನಗಳಿಂದ ಕುಡಿಯುವ ನೀರಿಗೆ ಸಮಸ್ಯೆ ಆಗಿದೆ. ಬೋರ್‌ವೆಲ್ ಕೆಟ್ಟು ಹೋಗಿದೆ. ಅದನ್ನು ಕೂಡಲೇ…

Read More

ಕೊರಟಗೆರೆ: ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ ೧೯ನೇ ವರ್ಷದ ವಾಷಿಕೋತ್ಸವ ಅಂಗವಾಗಿ ಜೂ.೮ರಂದು ಶ್ರೀಜಗದ್ಗುರು ರೇಣುಕಾಚಾರ್ಯರ, ಶ್ರೀಜಗಜ್ಯೋತಿ ಬಸವೇಶ್ವರರ ಜಯಂತ್ಯೋತ್ಸವ ಹಾಗೂ ಸಾಮೂಹಿಕ ವಿವಾಹಗಳು. ಜನಜಾಗೃತಿ ಧರ್ಮ ಸಮಾರಂಭ ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಿದ್ದರಬೆಟ್ಟ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಪೀಠಾಧ್ಯಕ್ಷ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ಪಟ್ಟಣದ ಶ್ರೀಬಸವೇಶ್ವರ ದೇವಾಲಯದಲ್ಲಿ ಸಿದ್ದರಬೆಟ್ಟ ಶ್ರೀಮಠದಿಂದ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಪ್ರತಿವರ್ಷದಂತೆ ಈ ವರ್ಷವು ಸಹ ಮಠದ ವಾರ್ಷಿಕೋತ್ಸವದ ಅಂಗವಾಗಿ ಜೂ.೬ರಿಂದ ೮ರವರೆಗೆ ಮೂರು ದಿನಗಳ ಕಾಲ ಧಾರ್ಮಿಕ ಪೂಜೆ ಕಾರ್ಯಕ್ರಮಗಳು ನಡೆಯಲಿವೆ. ಮೊದಲ ದಿನ(ಜೂ.೬) ಗಂಗಾ ಪೂಜೆ, ಗಣಪತಿಪೂಜೆ, ಪುಣ್ಯಾಹ ನಾಂದಿ, ಪಂಚ ಕಳಸ ಸ್ಥಾಪನೆ, ನವಗ್ರಹ ಮತ್ತು ಶ್ರೀರುದ್ರ ಹೋಮ, ಎರಡನೇ ದಿನ (ಜೂನ್.೭) ರಾಜ್ಯದ ಹಲವು ಶ್ರೀಮಠದ ದಿವ್ಯಸಾನಿದ್ಯದಲ್ಲಿ ಪುಸ್ತಕ ದಾಸೋಹ ಸಮಾರಂಭ ನಡೆಯಲಿದೆ ಎಂದು ಹೇಳಿದರು. ಮೂರನೇ ದಿನ(ಜೂ.೮) ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀಕ್ಷೇತ್ರನಾಥ ಸಿದ್ದೇಶ್ವರ ಸ್ವಾಮಿ, ಮಹಾಗಣಪತಿ, ಶ್ರೀಜಗದ್ಗುರು ರೇಣುಕಾಚಾರ್ಯರ…

Read More

ತುರುವೇಕೆರೆ: ೨೦೨೫-೨೬ನೇ ಸಾಲಿನ ತಾಲ್ಲೂಕಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವನ್ನು ಪಟ್ಟಣದ ಎನ್.ಎಚ್.ಪಿ.ಎಸ್ ಶಾಲೆಯಲ್ಲಿನ ಮಕ್ಕಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಸೋಮಶೇಖರ್ ಹೂಗುಚ್ಚ ನೀಡುವ ಮೂಲಕ ಶುಕ್ರವಾರ ಚಾಲನೆ ನೀಡಿದರು. ಮಕ್ಕಳ ಶೈಕ್ಷಣಿಕ ಹಿತ ದೃಷ್ಟಿಯಿಂದ ಇಲ್ಲಿನ ಮುಖ್ಯಶಿಕ್ಷಕರು ಎಲ್.ಕೆ.ಜಿ ಮತ್ತು ಯು.ಕೆ.ಜಿಯನ್ನು ಎಸ್.ಡಿ.ಎಂಸಿ ಸದಸ್ಯರು, ಇಲಾಖೆಯ ಸಹಮತದಲ್ಲಿ ಪ್ರಾರಂಭಿಸಿದ್ದಾರೆ. ಇದರ ಜೊತೆಗೆ ೬ ಮತ್ತು ೭ ತರಗತಿಗಳಿಗೂ ಆಂಗ್ಲಮಾಧ್ಯಮ ನೀಡ ಬೇಕೆಂಬ ಮನವಿಯೂ ಸಹ ಬಂದಿದೆ. ಅದನ್ನೂ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಪಟ್ಟಣ ಪಂಚಾಯಿತಿಯಿAದ ಶೌಚಾಲಯವನ್ನು ನಿರ್ಮಿಸಿದ್ದಾರೆ. ವಿವೇಕ ಯೋಜನೆಯಡಿ ನೂತನ ಕೊಠಡಿಯನ್ನು ಸಹ ನಿರ್ಮಾಣ ಮಾಡಿಕೊಡಲಾಗಿದೆ ಎಂದರು. ಶಿಕ್ಷಕರು, ಪೋಷಕರು ಮತ್ತು ಅಧಿಕಾರಿಗಳ ಪರಿಶ್ರಮದಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲೇ ತುರುವೇಕೆರೆ ಸತತ ಎರಡನೇ ಸ್ಥಾನ ಗಳಿಸಿರುವುದು ಹೆಮ್ಮೆಯ ಸಂಗತಿ. ಈಗಾಗಲೇ ತಾಲ್ಲೂಕಿನ ಪ್ರಾಥಮಿಕ, ಪ್ರೌಢ ಶಾಲೆ, ಅನುಧಾನಿತ ಮತ್ತು ಖಾಸಗಿ ಶಾಲೆಗಳಿಗೆ ಪಠ್ಯ ಪುಸ್ತಕಗಳನ್ನು ವಿತರಣೆ ಮಾಡಲಾಗಿದ್ದು. ದಾಖಲಾತಿ ಹಾಜರಾತಿ ಹೆಚ್ಚಿಸುವಂತೆ ಕ್ರಮ ವಹಿಸಲಾಗಿದೆ. ಈ ಬಾರಿ ಸರ್ಕಾರಿ ಶಾಲೆಗಳ ಎಸ್.ಎಸ್.ಎಲ್.ಸಿ…

Read More

ತುಮಕೂರು: ಚಿನ್ನದ ಪದಕ ಪಡೆಯುವುದು ಮುಖ್ಯವಾದದ್ದಲ್ಲ, ಚಿನ್ನದಂತ ಗುಣ ಇರಬೇಕು. ಜೀವನದಲ್ಲಿ ಪದವಿ,ಅಂಕ ಪಡೆಯುವುದು ಶಿಕ್ಷಣವಲ್ಲಾ ನಿಜವಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದೇ ಶಿಕ್ಷಣ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ವಿಶ್ರಾಂತ ನಿರ್ದೇಶಕರು, ಖ್ಯಾತ ವಾಗ್ಮಿಗಳು ಹಾಗೂ ಸಾಹಿತಿಗಳಾದ ಡಾ. ಕೆ.ಪಿ. ಪುತ್ತೂರಾಯ ಹೇಳಿದರು. ತುಮಕೂರು ವಿಶ್ವವಿದ್ಯಾನಿಲಯ ಸರ್ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಶುಕ್ರವಾರ ನಡೆದ “ಶಿಕ್ಷಣ- ಯುವಜನತೆ ಮತ್ತು ರಾಷ್ಟ್ರ ನಿರ್ಮಾಣ”ವಿಷಯದ ಕುರಿತಾದ ಪ್ರೇರಣಾ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇವರು ಶಿಕ್ಷಣ ವ್ಯವಸ್ಥೆಯಲ್ಲಿ ಪಾಠ ಮುಗಿದ ನಂತರ ಪರೀಕ್ಷೆ ನಡೆಸಲಾಗುತ್ತದೆ ಆದರೆ ನಿಜ ಜೀವನದಲ್ಲಿ ಪರೀಕ್ಷೆಯಾದ ಮೇಲೆ ಪಾಠ ಕಲಿಯುತ್ತಾರೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಧಾರಿತ ಶಿಕ್ಷಣ ಮಾತ್ರ ದೊರೆಯುತ್ತಿದ್ದು ಮೌಲ್ಯಾಧಾರಿತ ಶಿಕ್ಷಣವಿಲ್ಲದಂತಾಗಿದೆ. ವ್ಯಕ್ತಿತ್ವ ನಿರ್ಮಾಣಕ್ಕೆ ಯಾವುದೇ ತರಬೇತಿಯ ಅವಶ್ಯಕತೆ ಇಲ್ಲ, ಇಲ್ಲಿ ಯಾರು ನಿಷ್ಪ್ರಯೋಜಕರಲ್ಲ, ಯಾರು ಪರಿಪೂರ್ಣರಲ್ಲ ಎನ್ನುವ ಎರಡು ಸೂತ್ರಗಳು ತಿಳಿದಿದ್ದರೆ ಸಾಕು. ಕೊಠಡಿಯಲ್ಲಿ ಕುಳಿತು ಕಲಿಯುವ ಶಿಕ್ಷಣದ ಜೊತೆಗೆ ಆರೋಗ್ಯ ಶಿಕ್ಷಣ, ಆಧ್ಯಾತ್ಮ…

Read More

ತಿಪಟೂರು: ಹವಾಮಾನ ವೈಪರೀತ್ಯದಿಂದ ಆಗಿರುವ ತೆಂಗು ಬೆಳೆ ನಷ್ಟವನ್ನು ಸರ್ಕಾರಗಳು ತುಂಬಿಕೊಡಬೇಕೆAದು ಹಾಗೂ “ಹವಮಾನ ಆಧಾರಿತ ಬೆಳೆ ವಿಮೆಯನ್ನು ತೆಂಗು ಬೆಳೆಗೂ ವಿಸ್ತರಿಸಬೇಕೆಂದು ಹಾಗೂ ಪ್ರಾದೇಶಿಕ ತೆಂಗು ಅಭಿವೃದ್ಧಿ ಮಂಡಳಿ ಕಚೇರಿಯನ್ನು ತಿಪಟೂರಿನಲ್ಲಿ ತೆರೆಯಬೇಕೆಂದು ಕೋರಿ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಿಗೆ ರೈತರು ಮನವಿ ಸಲ್ಲಿಸಿದರು. ಮನವಿಯಲ್ಲಿ ಪ್ರತಿ ವರ್ಷ ತಾಪಮಾನ ಜಾಗತಿಕವಾಗಿ ಸಾಕಷ್ಟು ಹೆಚ್ಚಳವಾಗಿದ್ದು, ೧೯೮೮ ರ ರಾಷ್ಟ್ರೀಯ ಅರಣ್ಯ ನೀತಿಯು ಬೌಗೋಳಿಕ ಪ್ರದೇಶದ ೩೩ % ರಷ್ಟು ಅರಣ್ಯ ಮತ್ತು ಮರಗಳ ವ್ಯಾಪ್ತಿಯನ್ನು ಸಾಧಿಸುವ ಗುರಿಯನ್ನು ಹೊಂದಿದೆ. ಕರ್ನಾಟಕ ಈಗ ಕೇವಲ ಶೇಕಡ ೨೦% ಅರಣ್ಯ ಪ್ರದೇಶವನ್ನು ಹೊಂದಿದೆ ನಾವು ಮುಂದಿನ ದಿನಗಳಲ್ಲಿ ೩೩ % ಗುರಿಯನ್ನು ಸಾಧಿಸುತ್ತೇವೆ ಎಂದು ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ೨೦೨೩ರ ಸೆಪ್ಟಂಬರ್೩೦ ರಲ್ಲಿ ಹೇಳಿಕೆ ನೀಡಿದ್ದರು. ಇವರ ಹೇಳಿಕೆಯ ಆಧಾರವನ್ನು ಇಟ್ಟುಕೊಂಡು ನೋಡಿದರೆ ಹವಮಾನ ವೈಪರೀತ್ಯದಿಂದ ಶೇಕಡ ೩೩ ರಷ್ಟು ಅರಣ್ಯ ಪ್ರದೇಶದ ಗುರಿಯನ್ನು ಸಾಧಿಸುವುದರ ಬದಲಾಗಿ ಅದು…

Read More

ಗುಬ್ಬಿ: ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ಹೋರಾಟ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ತಾಲ್ಲೂಕಿನ ನಿಟ್ಟೂರು ಬಳಿ ಪೊಲೀಸರು ಶನಿವಾರ ವಶಕ್ಕೆ ಪಡೆದರು. ತಾಲ್ಲೂಕಿನ ಸಂಕಾಪುರ, ಡಿ.ರಾಂಪುರ ಗ್ರಾಮದ ಬಳಿ ಕೆನಾಲ್ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಸ್ಥಳದ ಸುತ್ತಮುತ್ತಲಿನ ೧೦ ಕಿಲೊ ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಗುಬ್ಬಿ ತಹಶೀಲ್ದಾರ್ ಬಿ.ಆರತಿ ಆದೇಶ ಹೊರಡಿಸಿದ್ದಾರೆ. ಮೇ ೩೧ರ ಬೆಳಿಗ್ಗೆ ೬ ಗಂಟೆಯಿAದ ಜೂನ್ ೧ರ ಬೆಳಿಗ್ಗೆ ೬ ಗಂಟೆಯ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಹೋರಾಟ ಸಮಿತಿ ಬೃಹತ್ ಹೋರಾಟಕ್ಕೆ ಕರೆ ನೀಡಿತ್ತು. ಪ್ರತಿಭಟನಾಕಾರರು ಕಾಮಗಾರಿ ಸ್ಥಳಕ್ಕೆ ತೆರಳದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ ಸುರೇಶ್ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ ಸೇರಿದಂತೆ ೧೦ ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗುಬ್ಬಿ ತಾಲೂಕಿನ ಚೇಳೂರಿನ ಫಾರ್ಮ್ ಹೌಸ ವೊಂದ ರಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.…

Read More