Author: News Desk Benkiyabale

ಕೊರಟಗೆರೆ: ಅರಣ್ಯ ಪ್ರದೇಶದಿಂದ ಆಹಾರ ಹರಸಿ ಬಂದ ಕರಡಿಯೊಂದು ನೇರವಾಗಿ ಕೊರಟಗೆರೆ ಪಟ್ಟಣಕ್ಕೆ ಭೇಟಿ ಕೊಟ್ಟಿದ್ದು ರಸ್ತೆ ದಾಟುತ್ತಿರುವ ವಿಡಿಯೋ ಸಿಸಿಟಿಯಿಯಲ್ಲಿ ಸೆರೆಯಾಗಿದ್ದು ನಗರದಲ್ಲಿ ಭಯದ ವಾತಾವರಣ ಸೃಷ್ಠಿಸಿದೆ. ಮಂಗಳವಾರ ಬೆ.೪ಗಂಟೆ ಸುಮಾರಿಗೆ ಪಟ್ಟಣದ ಶನೇಶ್ವರ ಸ್ವಾಮಿ ದೇವಾಲಯ ರಸ್ತೆಯಿಂದ ಶಿವಗಂಗಾ ಚಿತ್ರಮಂದಿರ ರಸ್ತೆ ಕಡೆಗೆ ದಾಟುತ್ತಿರುವ ವಿಡಿಯೋ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದ್ದು ಮುಂಜಾನೆ ವಾಯುವಿಹಾರಕ್ಕೆಂದು ಹೊರ ಬಂದ ಕೆಲ ಜನರು ಭಯಬೀತರಾಗಿದ್ದಾರೆ. ಅರಣ್ಯಾಧಿಕಾರಿಗಳ ಬೇಜಾವಬ್ದಾರಿ ತನದಿಂದ ಕೊರಟಗೆರೆ ತಾಲ್ಲೂಕಿನ ಸುತ್ತಮುತ್ತ ಅರಣ್ಯ ಪ್ರದೇಶಗಳ ನಾಶ ಜೊತೆಗೆ ಅಕ್ರಮ ಕಲ್ಲು ಗಣಿಗಾರಿಕೆಯಿಂದ ಆಗುತ್ತಿರುವ ಬ್ಲಾಸ್ಟಿಂಗ್ ಶಬ್ದಕ್ಕೆ ರಾತ್ರಿ ಹಗಲೆಗನ್ನದೆ ಪದೇ ಪದೇ ಜನವಸತಿ ಪ್ರದೇಶಗಳಲ್ಲಿ ಕಾಡು ಪ್ರಾಣಿಗಳು ಸಂಚರಿಸುತ್ತಿವೆ. ಮುAಜಾನೆ ಕಾಣಿಸಿಕೊಂಡು ಕರಡಿಯಿಂದ ಯಾವೊಬ್ಬ ವ್ಯಕ್ತಿಗೂ ಯಾವುದೇ ಪ್ರಾಣಹಾನಿಯಾಗಿಲ್ಲಾ, ಅಪಾಯ ಎದುರಾಗುವ ಮುನ್ನ ಅರಣ್ಯಾಧಿಕಾರಿಗಳು ವಿಶೇಷ ಆಸಕ್ತಿ ವಹಿಸಿ ಅಕ್ರಮ ಕಲ್ಲು ಗಣಿಗಾರಿಕೆಯಿಂದ ನಡೆಯುತ್ತಿರುವ ಬ್ಲಾಸ್ಟಿಂಗ್ ಶಬ್ಬಕ್ಕೆ ಕಡಿವಾಣ ಹಾಕುವಂತೆ ಸೋಷಿಯಲ್ ಮೀಡಿಯಾದಲ್ಲಿ ಪ್ರಜ್ಞಾವಂತ ನಾಗರೀಕರು ಅಭಿಪ್ರಾಯ ಹಂಚಿಕೊAಡಿದ್ದಾರೆ.

Read More

ತುಮಕೂರು: ಜಿಲ್ಲೆಯಲ್ಲಿ ಯಾವುದೇ ಪರಿತ್ಯಕ್ತ ಮಕ್ಕಳು, ಇನ್ನಿತರೆ ಮಕ್ಕಳು ಆಧಾರ್ ನೋಂದಣಿಯಿAದ ಹೊರಗುಳಿಯದಂತೆ ಗುರುತಿಸಿ ಆಧಾರ್ ನೋಂದಣಿ ಮಾಡಿಸುವ ಮೂಲಕ ‘ಸಾಥಿ’ ಅಭಿಯಾನ ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ನೂರುನ್ನೀಸ ತಿಳಿಸಿದರು. ಸಾಥಿ ಅಬಿಯಾನ ಸಮಿತಿ ಸದಸ್ಯರಿಗಾಗಿ ಜಿಲ್ಲಾ ನ್ಯಾಯಾಲಯದ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಾಲನೆ ಮತ್ತು ಸಂರಕ್ಷಣೆ ಅಗತ್ಯವಿರುವ ಮಕ್ಕಳಿಗೆ ಆಧಾರ್ ನೋಂದಣಿ, ಸರಕಾರಿ ಯೋಜನೆಗಳ ಸೇರ್ಪಡೆ ಮತ್ತು ಟ್ರಾö್ಯಕಿಂಗ್‌ಗಾಗಿ ‘ಸಾಥಿ’ ಅಭಿಯಾನದ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯ ಸದಸ್ಯರಿಗಾಗಿ ಈ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಸಾಥಿ ಅಭಿಯಾನ ಸಮಿತಿಯ ಅಧ್ಯಕ್ಷರಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಸದಸ್ಯರಾಗಿ ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ, ತಹಶೀಲ್ದಾರರು, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು, ವಕೀಲರು, ಅರೆಕಾಲಿಕ ಸ್ವಯಂ ಸೇವಕರು…

Read More

ತುಮಕೂರು: ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ನಡೆಯುತ್ತಿದ್ದ ಹೋರಾಟಗಾರರ ಮೇಲೆ ಎಫ್ ಐ ಆರ್ ಮಾಡಿರುವುದನ್ನು ವಿರೋಧಿಸಿ ತುಮಕೂರು ಎಸ್ಪಿ ಕಚೇರಿ ಎದುರು ಪ್ರತಿಭಟನೆಗೆ ಕರೆ ಕೊಟ್ಟ ಹಿನ್ನಲೆ, ಎಸ್ ಪಿ ಕಚೇರಿ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ. ಬ್ಯಾರಿಕೇಡ್ ಹಾಕಿ ಪೊಲೀಸ್ ಬಿಗಿಭದ್ರತೆ ಮಾಡಲಾಗಿದೆ. ಇಂದು ಪ್ರತಿಭಟನೆ ನಡೆಸಲು ಶಾಸಕ ಎಂ.ಟಿ.ಕೃಷ್ಣಪ್ಪ ಹಾಗೂ ಶಾಸಕ ಸುರೇಶ್ ಗೌಡ ಕರೆ ಕೊಟ್ಟಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಎಸ್‌ಪಿ ಕಚೇರಿಗೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಪ್ರತಿಭಟನಾಕಾರರು ಯಾರು ಎಸ್ ಪಿ ಕಚೇರಿ ಒಳಹೋಗದಂತೆ ಭದ್ರತೆ ಮಾಡಲಾಗಿದೆ. ನೂರಾರು ಪೊಲೀಸ್ ಸಿಬ್ಬಂದಿಗಳನ್ನ ಹಾಕಿ ಭದ್ರತೆ ಮಾಡಲಾಗಿದೆ.

Read More

ತುಮಕೂರು: ಸರಕಾರದಿಂದ ದಲಿತ ಕುಟುಂಬವೊAದಕ್ಕೆ ಮಂಜೂರಾಗಿದ್ದ ಜಾಗಕ್ಕೆ ಅರಣ್ಯ ಇಲಾಖೆಯವರು ಅತಿಕ್ರಮ ಪ್ರವೇಶ ಮಾಡಿ, ಗಿಡ ನೆಟ್ಟು,ನಮ್ಮನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು, ನಮ್ಮ ಭೂಮಿಯನ್ನು ನಮಗೆ ಉಳಿಸಿಕೊಡುವಂತೆ ಚಿಕ್ಕನಾಯಕನಹಳ್ಳಿಒ ತಾಲೂಕು ಹಂದನಕೆರೆ ಹೋಬಳಿ ಗಾಂಧಿ ನಗರ ನಿವಾಸಿ ಕೃಷ್ಣಯ್ಯ ಬಿನ್ ಕರಿಯಪ್ಪ ಎಂಬುವವರು ಇಂದು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ತಮ್ಮ ಕುಟುಂಬದೊAದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ್ದ ಅವರು, ದಲಿತ ಸಂಘರ್ಷ ಸಮಿತಿ ಅಧ್ಯಕ್ಷರಾದ ನಿಟ್ಟೂರು ರಂಗಸ್ವಾಮಿ ಅವರೊಂದಿಗೆ ತೆರಳಿ ಎಡಿಸಿ ಅವರಿಗೆ ಮನವಿ ಸಲ್ಲಿಸಿದರು. ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ತಾಲೂಕು, ಹಂದನಕೆರೆ ಹೋಬಳಿ, ಮತ್ತಿಘಟ್ಟ ಗ್ರಾಮದ ಸರ್ವೆ ನಂ. ೧೧೪/೨ ರಲ್ಲಿ ೪-೦೦ ಎಕರೆ ಜಮೀನು ದಲಿತ ಸಮುದಾಯಕ್ಕೆ ಸೇರಿದ ಕೃಷ್ಣಯ್ಯ ಬಿನ್ ಕರಿಯಪ್ಪ ಅವರಿಗೆ ೧೯೮೨-೮೩ರಲ್ಲಿ ಮಂಜೂರಾಗಿರುತ್ತದೆ.ಇದೇ ಸರ್ವೆ ನಂಬರನಲ್ಲಿ ಸುಮಾರು ೨೯ ಜನರಿಗೆ ಭೂಮಿ ಮಂಜೂರಾಗಿದ್ದು, ಪ್ರಸ್ತುತ ಮಂಜೂರುದಾರರ ಹೆಸರಿನಲ್ಲಿಯೇ ಪಹಣಿಯಿದೆ.ಕೆಲ ವರ್ಷಗಳಿಂದ ಕುಟುಂಬದ ಹಿರಿಯರ ಅನಾರೋಗ್ಯದಿಂದ ಜಮೀನಿನಲ್ಲಿ…

Read More

ಹುಳಿಯಾರು: ಹುಳಿಯಾರಿನ ಸ್ವಾತಂತ್ರö್ಯ ಹೋರಾಟಗಾರ ಜಿ.ಎಸ್.ವೆಂಕಟಚಲಪತಿ ಶ್ರೇಷ್ಠಿ (೯೬) ಯವರು ಮಂಗಳವಾರ ಮುಂಜಾನೆ ತುಮಕೂರಿನ ತಮ್ಮ ಮಗನ ನಿವಾಸದಲ್ಲಿ ನಿಧನರಾದರು. ಹುಳಿಯಾರು ಟೌನ್ ಪಂಚಾಯಿತಿ ಅಧ್ಯಕ್ಷರಾಗಿ, ಹುಳಿಯಾರಿನ ಗಾಂಧಿ ಭವನ ಸ್ಥಾಪಕರಾಗಿ, ತೊರೆಸೂರಗೊಂಡನಹಳ್ಳಿ ರಸ್ತೆಯಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ ಸ್ಥಾಪಿಸಿ ಸಂಸ್ಥಾಪಕ ಅಧ್ಯಕ್ಷರಾಗಿ, ಹುಳಿಯಾರು ಗ್ರಾಮ ದೇವತೆ ಶ್ರೀ ಹುಳಿಯಾರಮ್ಮ ದೇವಾಲಯದ ಗೌರವಾಧ್ಯಕ್ಷರಾಗಿ, ಹುಳಿಯಾರು ಆರ್ಯವೈಶ್ಯ ಸಮಾಜ, ಥಿಯಾಸಫಿ ಸೊಸೈಟಿ ಹೀಗೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಹುಳಿಯಾರು ಎಸ್‌ಎಲ್‌ಆರ್ ಬಸ್ ಮಾಲೀಕರಾದ ಗೋವಿಂದರಾಜ ಶೆಟ್ರು ಇವರ ಪುತ್ರರಾಗಿದ್ದು, ಎಸ್ ಎಲ್ ಆರ್ ಬಸ್/ ಲಾರಿ ಮಾಲೀಕರಾದ ಪ್ರದೀಪ್- ಪ್ರವೀಣ್ ಇವರ ಮೊಮ್ಮಕ್ಕಳಾಗಿದ್ದಾರೆ. ಮೃತರ ಅಂತ್ಯಕ್ರಿಯೆಯು ತುಮಕೂರಿನಲ್ಲಿ ನೆರವೇರಿತು.

Read More

ತುಮಕೂರು: ಹೇಮಾವತಿ ಹೋರಾಟದಲ್ಲಿ ಐವರ ಬಂಧನ ಹಿನ್ನೆಲೆ ತುಮಕೂರು ಜೈಲಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ ನೀಡಿದರು. ಬಿಜೆಪಿ ಯುವ ಮರ‍್ಚಾ ಜಿಲ್ಲಾಧ್ಯಕ್ಷ ನವಚೇತನ್ ಹಾಗೂ ನಾಲ್ವರು ಯುವ ರೈತರನ್ನ ಭೇಟಿ ಮಾಡಿರುವ ವಿಜಯೇಂದ್ರ‌, ಬಂಧಿತರಿಗೆ ಧರ‍್ಯ ತುಂಬಿದರು. ಅಲ್ಲದೇ ಮುಂದಿನ ಕಾನೂನು ಹೋರಾಟದ ಬಗ್ಗೆ ರ‍್ಚೆ ನಡೆಸಿದರು. ಹೋರಾಟದಿಂದ ಹಿಂದೆ ಸರಿಯದಂತೆ ವಿಜಯೇಂದ್ರ ಸಲಹೆ ನೀಡಿದ್ದಾರೆ. ವಿಜಯೇಂದ್ರ ಜೊತೆ ಎಂಎಲ್ ಸಿ ಸಿ.ಟಿ. ರವಿ, ನಾರಾಯಣ ಸ್ವಾಮಿ, ದೀರಜ್ ಮುನಿರಾಜ್, ಶಾಸಕ ಸುರೇಶ್ ಗೌಡ ಸಾಥ್ ನೀಡಿದರು. ಹೇಮಾವತಿ ಹೋರಾಟಕ್ಕೆ ಸಂಬಂಧಿಸಿದಂತೆ ಇದುವರೆಗೂ ಐವರು ಹೋರಾಟಗಾರನ್ನ ಪೊಲೀಸರು ಬಂಧಿಸಿದ್ದಾರೆ.

Read More

ತುಮಕೂರು: ಕೋವಿಡ್ ಪಾಸಿಟೀವ್‌ನಿಂದ ಜಿಲ್ಲೆಯ ತುರುವೇಕೆರೆ ತಾಲೂಕಿನ ೪೨ ವರ್ಷದ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿ ಸಾವನ್ನಪ್ಪಿರುವ ಪ್ರಕರಣ ಸೋಮವಾರ ವರದಿಯಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಕೆಸ್ವಾನ್ ಸಭಾಂಗಣದಲ್ಲಿ ಮಂಗಳವಾರ ರಾತ್ರಿ ಕೋವಿಡ್ ಸಂಬAಧ ತುರ್ತು ಪತ್ರಿಕಾ ಹೇಳಿಕೆ ನೀಡಿದ ಅವರು ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜೂನ್ ೨ರಂದು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಐಎಲ್‌ಐ ಹಾಗೂ ಸಾರಿ ಪ್ರಕರಣಗಳಿಂದ  ೩೬ ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿ  ಬೆಂಗಳೂರಿಗೆ ಕಳುಹಿಸಲಾಗಿತ್ತು.    ಗುಬ್ಬಿ ತಾಲೂಕಿನ ೧೩ ಹಾಗೂ ಶಿರಾ ತಾಲೂಕಿನ ೧ ಸೇರಿದಂತೆ ಒಟ್ಟು ೧೪ ಪ್ರಕರಣಗಳಲ್ಲಿ ಕೋವಿಡ್ ಪಾಸಿಟೀವ್ ದೃಢಪಟ್ಟ ಬಗ್ಗೆ ಮಂಗಳವಾರ  ಬೆಳಿಗ್ಗೆ ವರದಿ ಬಂದಿದೆ.   ಕೋವಿಡ್ ಪಾಸಿಟಿವ್ ಕಂಡು ಬಂದವರ ಪ್ರೆöÊಮರಿ ಹಾಗೂ ಸೆಕೆಂಡರಿ ಕಾಂಟ್ಯಾಕ್ಟ್ನಲ್ಲಿದ್ದವರನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು. ಆರೋಗ್ಯ ಸಚಿವಾಲಯದ ಕೋವಿಡ್ ಮಾರ್ಗಸೂಚಿಗಳನ್ವಯ ಐಎಲ್‌ಐಮತ್ತು ಸಾರಿಪ್ರಕರಣಗಳನ್ನು ಪರೀಕ್ಷೆಗೊಳಪಡಿಸಲು ನಿರ್ದೇಶನ ನೀಡಿದ್ದು, ಅದರನುಸಾರ…

Read More

ತುಮಕೂರು: ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ನಡೆಯುತ್ತಿದ್ದ ಹೋರಾಟಗಾರರ ಮೇಲೆ ಎಫ್ ಐ ಆರ್ ಮಾಡಿರುವುದನ್ನು ವಿರೋಧಿಸಿ ತುಮಕೂರು ಎಸ್ಪಿ ಕಚೇರಿ ಎದುರು ಪ್ರತಿಭಟನೆಗೆ ಕರೆ ಕೊಟ್ಟ ಹಿನ್ನಲೆ, ಎಸ್ ಪಿ ಕಚೇರಿ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ. ಬ್ಯಾರಿಕೇಡ್ ಹಾಕಿ ಪೊಲೀಸ್ ಬಿಗಿಭದ್ರತೆ ಮಾಡಲಾಗಿದೆ. ಇಂದು ಪ್ರತಿಭಟನೆ ನಡೆಸಲು ಶಾಸಕ ಎಂ.ಟಿ.ಕೃಷ್ಣಪ್ಪ‌ ಹಾಗೂ ಶಾಸಕ ಸುರೇಶ್ ಗೌಡ ಕರೆ ಕೊಟ್ಟಿದ್ದಾರೆ.ಮುಂಜಾಗ್ರತಾ ಕ್ರಮವಾಗಿ ಎಸ್ ಪಿ ಕಚೇರಿಗೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಪ್ರತಿಭಟನಾಕಾರರು ಯಾರು ಎಸ್ ಪಿ ಕಚೇರಿ ಒಳಹೋಗದಂತೆ ಭದ್ರತೆ ಮಾಡಲಾಗಿದೆ. ನೂರಾರು ಪೊಲೀಸ್ ಸಿಬ್ಬಂದಿಗಳನ್ನ ಹಾಕಿ ಭದ್ರತೆ ಮಾಡಲಾಗಿದೆ.

Read More

ತುಮಕೂರು : ಹೇಮಾವತಿ ಲಿಂಕ್ ಕೆನಾಲ್ ಯೋಜನೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಸ್ವಾಮೀಜಿಗಳು ಹಾಗೂ ರೈತರು ಸೇರಿದಂತೆ ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ಮತ್ತು ಯೋಜನೆ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿ ಮಾಜಿ ಸಚಿವ ಸೊಗಡು ಶಿವಣ್ಣ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಮರನಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಒಳಗೆ ಚಾಪೆ, ದಿಂಬು, ಹೊದಿಕೆಯೊಂದಿಗೆ ಉಪವಾಸ ಆರಂಭಿಸಿದ್ದಾರೆ. ಸ್ಥಳದಲ್ಲಿ ಪೊಲೀಸ್ ಅಧಿಕಾರಿಗಳು ಮೊಕ್ಕಾಮ್ ಹೂಡಿದ್ದಾರೆ. ಹೇಮಾವತಿ ಲಿಂಕ್ ಕೇನಾಲ್ ಯೋಜನೆ ವಿರೋಧಿಸಿ ಹೋರಾಟಕ್ಕೆ ಬೆಂಬಲಿಸಿ ಭಾಗಿಯಾಗಿದ್ದ ಸ್ವಾಮೀಜಿಗಳ ಮೇಲೆ ಎಫ್ ಐ ಆರ್ ದಾಖಲು ಮಾಡಿ ಸರ್ಕಾರ ಅವರನ್ನು ಹೆದರಿಸಲು ಮುಂದಾಗಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆರೋಪಿಸಿದ್ದಾರೆ. ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸರ್ಕಾರದ ನಿರ್ಧಾರ ಖಂಡಿಸಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದು ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹೋರಾಟಗಾರರ ಮೇಲಿನ ಪೊಲೀಸರ ದೌರ್ಜನ್ಯ ನೋಡಲು ಆಗದೆ ಸಂಕಟ ವಾಗುತ್ತಿದೆ ಎಂದರು. ಮಠಾಧೀಶರನ್ನು ಬಂಧಿಸುತ್ತೇವೆ ಎಂದರೆ ಅದು ದೇವಸ್ಥಾನಗಳ ಬಾಗಿಲನ್ನು ಹಾಕಿದಂತೆ.…

Read More

ಕೊರಟಗೆರೆ: ಸರ್ಕಾರ ೧೯೬೦ರ ಇಸವಿಯಲ್ಲಿ ಶ್ರೀ ಚೆಲುವ ಚೆನ್ನಿಗರಾಯ ದೇವಾಲಯಕ್ಕೆ ಸರ್ವೇ ನಂ. ೧೩೦ರಲ್ಲಿ ೪ ಎಕೆರೆ ೬ ಗುಂಟೆ ಜಮೀನು ಮಂಜೂರು ಮಾಡಿದೆ. ಈ ದೇವಾಲಯ ಮುಜರಾಯಿ ಇಲಾಖೆ ಒಳಪಡಲಿದ್ದು. ಇಲಾಖೆಗೆ ಗೊತ್ತಿಲ್ಲದೆ ಅರ್ಚಕರ ಕುಟುಂಬ ನೆಲಮಂಗಲದ ಮಹಿಳೆಗೆ ಕ್ರಯ ಮಾಡಿದ್ದಾರೆ ಎಂಬ ಆರೋಪ ಗ್ರಾಮಸ್ಥರಿಂದ ಕೇಳಿ ಬಂದಿದೆ. ಕೊರಟಗೆರೆ ತಾಲ್ಲೂಕಿನ ಹೊಳವಹಳ್ಳಿ ಹೋಬಳಿ ತೊಗರಿಘಟ್ಟ ಗ್ರಾಮದ ಶ್ರೀ ಚೆನ್ನಿಗರಾಯ ಸ್ವಾಮಿ ದೇವಾಲಯ ಮುಜರಾಯಿ ಇಲಾಖೆ ಸೇರಿದೆ. ಸರ್ಕಾರದ ಜಮೀನನ್ನು ಕ್ರಯ ಮಾಡುವ ಮುನ್ನ ಇಲಾಖೆ ಗಮನಕ್ಕೆ ತರದೇ ನೆಲಮಂಗಲ ಭಾಗ್ಯಮ್ಮ ಮತ್ತು ದೀಪ.ಜೆ ಎಂಬುವವರಿಗೆ ಮಾರಾಟ ಮಾಡಿದ್ದು, ಒತ್ತಡಕ್ಕೆ ಮಣಿದ ಕುಣಿಗಲ್ ಉಪ ನೋಂದಾಣಾಧಿಕಾರಿಗಳು ಜಮೀನಿನ ದಾಖಲೆಗಳನ್ನು ಪರಿಶೀಲಿಸದೆ ಕ್ರಯ ಮಾಡಿದ್ದರೆಂದು ತಾಲ್ಲೂಕು ಕಚೇರಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿ ಪ್ರತಿಭಟನೆಯಲ್ಲಿ ಆಕ್ರೋಶ ಹೊರ ಹಾಕಿದರು. ಸರ್ಕಾರದಿಂದ ದೇವಾಲಯಕ್ಕೆ ಜಮೀನು ಮಂಜುರಾದ ವೇಳೆ ಲ್ಯಾಂಡ್ ಟ್ಯೂಬುನಲ್ ಅಡಿಯಲ್ಲಿ ಸದರಿ ದೇವಾಲಯದ ಅರ್ಚಕ ಚೆನ್ನಕೇಶವಚಾರ್ ಮತ್ತು ಪತ್ನಿ ಪುಟ್ಟಲಕ್ಷಮ್ಮನವರು ಖಾತೆ,ಪಹಣಿ ಮಾಡಿಸಿಕೊಂಡಿದ್ದರು,…

Read More