Author: News Desk Benkiyabale

ತುಮಕೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟಕರೆ ನೀಡಿರುವ ಈ ತಿಂಗಳ ೧೩ರ ಕರ್ನಾಟಕ ಬಂದ್‌ಗೆ ನಗರದ ಕನ್ನಡಪರ ಹಾಗೂ ಇತರೆ ಸಂಘಗಳ ಒಕ್ಕೂಟ ಬೆಂಬಲ ನೀಡಿದೆ. ಈ ಸಂಬAಧ ನಗರದಲ್ಲಿ ಸಭೆ ಸೇರಿ ಚರ್ಚಿಸಿದ ಸಂಘಟನೆಗಳ ಮುಖಂಡರು ೧೩ರ ಬಂದ್ ಹೋರಾಟದಲ್ಲಿ ಭಾಗವಹಿಸಲು ತೀರ್ಮಾನಿಸಿದರು. ಒಕ್ಕೂಟದ ಅಧ್ಯಕ್ಷ ಎಂ ಗೋಪಿ ಮಾತನಾಡಿ, ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ರಾಜ್ಯದ ಜನರಿಗೆ ಮಾರಕವಾಗಿದೆ. ಮಳೆ ಇಲ್ಲದೆ, ಕುಡಿಯುವ ನೀರಿಗೂ ತೊಂದರೆಯಾಗಿ ಹಾಹಾಕಾರ ಪರಿಸ್ಥಿತಿ ಇರುವಾಗ ತಮಿಳುನಾಡಿಗೆ ಕಾವೇರಿ ನೀರು ಹರಿಸುವ ನಿರ್ಧಾರ ಅಮಾನವೀಯ. ಇದರ ವಿರುದ್ಧ ರಾಜ್ಯದ ಎಲ್ಲಾ ಶಾಸಕರು, ಸಂಸದರು ಪಕ್ಷಾತೀತವಾಗಿಧ್ವನಿ ಎತ್ತಬೇಕು, ಕನ್ನಡಿಗರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದರು. ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್. ರಾಮಯ್ಯ ಮಾತನಾಡಿ, ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶವನ್ನು ರಾಜ್ಯದ…

Read More

ತುಮಕೂರು: ಪರಸ್ಪರ ಸಹಕಾರ, ಸೌಹಾರ್ದತೆಯಿಂದ ಕೂಡಿ ನೆರವಾಗುವ ಸಹಕಾರಿ ಸಂಸ್ಥೆಯನ್ನು ಕಟ್ಟಿ ಬೆಳೆಸಬೇಕು. ಆ ಮೂಲಕ ಸಾಲ ಸೌಲಭ್ಯ ಪಡೆದು ತಮ್ಮ ಅಭಿವೃದ್ಧಿಗೂ ಅವಕಾಶ ಮಾಡಿಕೊಂಡು ಬೆಳೆಯಬೇಕು. ಈ ಸಹಕಾರಿ ಸಂಘ ಯಶಸ್ವಿಯಾಗಿ ಮುನ್ನೆಡೆಯಬೇಕಾದರೆ ಸಾಲ ಪಡೆದ ಗ್ರಾಹಕರು ಸಕಾಲಕ್ಕೆ ಮರು ಪಾವತಿ ಮಾಡುವುದು ಅತ್ಯಾವಶ್ಯಕ. ಬಾಕಿ ಉಳಿಸಿಕೊಂಡರೆ ಸಹಕಾರಿ ಸಂಘಗಳು ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಮಾಜಿ ಸಹಕಾರ ಸಚಿವ, ಶಾಸಕ ಕೆ.ಎನ್. ರಾಜಣ್ಣ ಹೇಳಿದರು. ಭಾನುವಾರ ನಗರದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಹೋಟೆಲು ಮತ್ತು ಉಪಹಾರ ಮಂದಿರಗಳ ಸಂಘದ ೮೦ನೆ ವರ್ಷದ ಅಮೃತ ಮಹೋತ್ಸವ ಹಾಗೂ ಹೋಟೆಲು ಮಾಲೀಕರ ಸೌಹಾರ್ದ ಸಹಕಾರಿ ಸಂಘದ ೫೦ನೆ ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ೮ ದಶಕಗಳ ಇತಿಹಾಸದ ತುಮಕೂರಿನ ಹೋಟೆಲ್ ಮತ್ತು ಉಪಹಾರ ಮಂದಿರಗಳ ಸಂಘದವರು ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡವರ ಅನುಕೂಲಕ್ಕಾಗಿ ಐದು ದಶಕದ ಹಿಂದೆ ಸ್ಥಾಪಿಸಿದ ಸಹಕಾರಿ ಸಾರ್ಥಕ ೫೦ ವರ್ಷಗಳನ್ನು ಕಂಡಿರುವುದು ಪ್ರಶಂಸನಾರ್ಹ. ಯಾವುದೇ ಸಹಕಾರಿ ಸಂಘವಾಗಲಿ,…

Read More

ತುಮಕೂರು: ತಮಿಳುನಾಡಿಗೆ ಪ್ರತಿದಿನ ೩,೫೦೦ ಕ್ಯೂಸೆಕ್ಸ್ ನೀರು ಬಿಡಬೇಕೆಂದುಕಾವೇರಿ ನೀರು ನಿಯಂತ್ರಣಾ ಸಮಿತಿ ಮಾಡಿರುವ ಶಿಫಾರಸ್ಸಿಗೆ ಕನ್ನಡಪರ ಸಂಘಟನೆಗಳ ಒಕ್ಕೂಟ ವೀವ್ರ ವಿರೋಧ ವ್ಯಕ್ತಪಡಿಸಿದೆ. ನಮ್ಮನೀರನ್ನು ಉಳಿಸಿಕೊಳ್ಳಲು, ಕಾವೇರಿ ಸಮಿತಿ ಶಿಫಾರಸು ವಿರೋಧಿಸಿ ರಾಜ್ಯ ಸಂಘಟನೆಗಳು ರೂಪಿಸುವ ಹೋರಾಟವನ್ನು ಬೆಂಬಲಿಸಿ ಹೋರಾಟ ನಡೆಸಲು ಒಕ್ಕೂಟದ ಮುಖಂಡರು ತೀರ್ಮಾನ ಮಾಡಿದರು. ನಗರದ ಪ್ರವಾಸಿ ಮಂದಿರದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳ ಪ್ರಮುಖರು ಸಭೆ ಸೇರಿ ಕಾವೇರಿ ನೀರು ಹೋರಾಟ ಕುರಿತು ಚರ್ಚಿಸಿದರು.ಕನ್ನಡ ಸೇನೆ ಜಿಲ್ಲಾಧ್ಯಕ್ಷ ಡಾ.ಧನಿಯಾ ಕುಮಾರ್ ಮಾತನಾಡಿ ಮಳೆ ಬೀಳದೆ ನಮ್ಮಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿರುವಾಗ, ಜಲಾಶಯಗಳು ಬತ್ತಿಹೋಗಿರುವಾಗ ತಮಿಳುನಾಡಿಗೆ ಪ್ರತಿದಿನ ೩೫೦೦ ಕ್ಯೂಸೆಕ್ಸ್ ನೀರು ಹರಿಸಬೇಕು ಎಂದು ಕಾವೇರಿ ನೀರು ನಿಯಂತ್ರಣಾ ಸಮಿತಿ ಮಾಡಿರುವ ಶಿಫಾರಸು ಅಮಾನವೀಯ. ಸರ್ಕಾರ ಈ ಶಿಫಾರಸ್ಸನ್ನು ತಿರಸ್ಕರಿಸಿ ನಾಡಿನ ಜನರ ರಕ್ಷಣೆಗೆ ಬದ್ಧತೆ ತೋರಬೇಕು.ಕಾವೇರಿ ನೀರಿನ ವಿಚಾರದಲ್ಲಿ ಪ್ರತಿಬಾರಿಯೂ ನಮ್ಮ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ರಾಜ್ಯದ ಬರ ಪರಿಸ್ಥಿತಿಯ ವಸ್ತುಸ್ಥಿತಿಯನ್ನು ಸಮರ್ಥವಾಗಿ ಮಂಡನೆ ಮಾಡುವಲ್ಲಿ…

Read More

ತುಮಕೂರು: ಉನ್ನತಿಯ ಜೀವನ ಸಾಧ್ಯವಾಗಬೇಕೆಂದರೆ ಮನುಷ್ಯ ತನ್ನನ್ನು ತಾನು ತಿಳಿಯುವ ಪ್ರಯತ್ನ ಮಾಡಬೇಕು. ಸ್ವಧ್ಯಾಯ ಪ್ರತಿಯೊಂದು ಜೀವಿಗೂ ಅವಶ್ಯಕ ಎಂದು ಆಚಾರ್ಯಶ್ರೀ ೧೦೮ ಪ್ರಮುಖ್ ಸಾಗರ್‌ಜೀ ಮಹಾರಾಜ್ ಸ್ವಾಮೀಜಿ ಸಂದೇಶ ನೀಡಿದರು. ಚಾತುರ್ಮಾಸ ಕಳಸ ಸ್ಥಾಪನೆ ಅಂಗವಾಗಿ ಶುಕ್ರವಾರ ನಗರದ ಜೈನ ಭವನದಲ್ಲಿ ನಡೆದ ವೀರ ಶಾಸನ ಜಯಂತಿ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಜೈನ ಧರ್ಮವು ಎಲ್ಲಾ ಜೀವಿಗಳ ಕಲ್ಯಾಣ ಬಯಸುತ್ತದೆ. ಅಹಿಂಸೆ, ಪರಸ್ಪರ ಶಾಂತಿ, ಸೌಹಾರ್ದಯುತ ಜೀವನ ಜೈನ ಧರ್ಮದ ಸಂದೇಶವಾಗಿದೆ ಎಂದು ತಿಳಿಸಿದರು. ೨೪ನೇ ತೀರ್ಥಂಕರರಾದ ಮಹಾವೀರರ ಉಪದೇಶ ಅನುಷ್ಠಾನಗೊಂಡ ದಿನವನ್ನು ವೀರ ಶಾಸನ ದಿವಸನ್ನಾಗಿ ಇಂದು ಆಚರಿ ಸುತ್ತಿದ್ದೇವೆ. ಪ್ರತಿಯೊಂದು ಜೀವಿಗೂ ಮಹಾವೀರರ ಸಂದೇಶಗಳು ಪ್ರಸ್ತುತ ದಿನಕ್ಕೂ ಅನ್ವಯವಾಗುತ್ತವೆ. ಸರ್ವ ಜೀವಿಯ ಒಳಿತಿಗೆ ಮಹಾವೀರರ ಸಾರ್ವಕಾಲಿಕ ಸಂದೇಶಗಳನ್ನು ಸಮಾಜದ ಪ್ರತಿಯೊಬ್ಬರೂ ಪಾಲನೆ ಮಾಡಿದರೆ ಎಲ್ಲರೂ ಶಾಂತಿ, ನೆಮ್ಮದಿಯಿಂದ ಬಾಳಲು ಸಾಧ್ಯವಾಗುತ್ತದೆ. ಗುರು ಪೂರ್ಣಿಮೆ ಧಾರ್ಮಿಕ ಸಭೆಗೆ ಮಹಿಳೆಯರು ಬಿಳಿ ಬಣ್ಣದ ಸೀರೆ ಉಟ್ಟು,…

Read More

ತುಮಕೂರು: ರಸ್ತೆ ತಡೆಗೋಡೆಗೆ ಆಟೋ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಸಾವನ್ನಪ್ಪಿದ್ದು ಮೂವರು ಮಕ್ಕಳು ಸೇರಿ ಐವರು ಗಂಭೀರವಾಗಿ ಗಾಯಗೊಂಡಿರುವ ಟನೆ ಗುರುವಾರ ನಗರದ ಹೊರವಲಯದ ಊರುಕೆರೆ ಬಳಿ ರಾಷ್ಟಿçÃಯ ಹೆದ್ದಾರಿ ೪೮ರಲ್ಲಿ ನಡೆದಿದೆ. ರಾಯಚೂರು ಜಿಲ್ಲೆ ಲಿಂಗಸೂರು ಮೂಲದ ದ್ಯಾವಪ್ಪ (೬೫), ದುರ್ಗವ್ವ (೬೦) ಮೃತ ದುರ್ದೆÊವಿಗಳು. ಆಟೋ ಚಾಲಕ ವೆಂಕಟೇಶ್ (೩೮), ಶಾಂತಮ್ಮ (೩೮) ಹಾಗೂ ಅವರ ಮಕ್ಕಳಾದ ಅಂಬಿಕಾ (೭), ಮಂಜುನಾಥ್? (೧೩) ಸಂಬAಧಿಕರ ಪುತ್ರ ದೇವೇಗೌಡ (೧೧) ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು ಚೇತರಿಸಿಕೊಂಡಿದ್ದಾರೆ. ಜಾತ್ರೆಗೆ ತೆರಳಿದ್ದ ಕುಟುಂಬ: ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ದ್ಯಾವಪ್ಪ ಕುಟುಂಬ ಹುಟ್ಟೂರಿಗೆ ಜಾತ್ರೆಗೆ ತೆರಳಿತ್ತು. ಜಾತ್ರೆ ಮುಗಿಸಿಕೊಂಡು ಗುರುವಾರ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಊರುಕೆರೆ ಬಳಿ ಚಾಲಕನ ನಿಯಂತ್ರಣ ತಪ್ಪಿದ ಆಟೋರಿಕ್ಷಾ ರಸ್ತೆಬದಿಯ ತಡೆಗೋಡೆಗೆ ಗುದ್ದಿದ್ದು ಈ ಅವಘಡ ಸಂಭವಿಸಿದೆ. ದಂಪತಿ ಮೃತದೇಹವನ್ನು ಶುಕ್ರವಾರ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ತುಮಕೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸೆ÷್ಟÃಬಲ್ (ಸಿವಿಲ್) ವೃಂದದ ಹುದ್ದೆಗಳ ನೇರ ನೇಮಕಾತಿ ಹಿನ್ನೆಲೆ ನಗರದ ೨೭ ಪರೀಕ್ಷಾ ಕೇಂದ್ರಗಳಲ್ಲಿ ಆ.೨ರಂದು ಲಿಖಿತ ಪರೀಕ್ಷೆ ನಡೆಯಲಿದೆ. ಪರೀಕ್ಷೆಯನ್ನು ಯಾವುದೇ ಲೋಪದೋಷವಿಲ್ಲದಂತೆ ಹಾಗೂ ಅಹಿತಕರ ಘಟನೆ ಸಂಭವಿಸದAತೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿಯು ಆದ ಜಿಲ್ಲಾಧಿಕಾರಿ ಶುಭಕಲ್ಯಾಣ್ ಆದೇಶ ಹೊರಡಿಸಿದ್ದಾರೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ೨೦೦ ಮೀಟರ್ ವ್ಯಾಪ್ತಿಯೊಳಗಿನ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ, ನಿಷೇಧಾಜ್ಞೆಯು ಆ.೨ರಂದು ಬೆಳಗ್ಗೆ ೯ ರಿಂದ ಮಧ್ಯಾಹ್ನ ೨ ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ಪರೀಕ್ಷಾ ಕೇಂದ್ರಗಳ ಸುತ್ತ-ಮುತ್ತವಿರುವ ಜೆರಾಕ್ಸ್ ಮತ್ತು ಕಂಪ್ಯೂಟರ್/ಸೈಬರ್ ಅಂಗಡಿಗಳನ್ನು ಮುಚ್ಚಲು ಆದೇಶಿಸಲಾಗಿದೆ. ಕೆಲವು ಪ್ರಕರಣಗಳಲ್ಲಿ ದುರುದ್ದೇಶದಿಂದ ನಕಲಿ ಪ್ರಶ್ನೆ ಪತ್ರಿಕೆಗಳ ಫೋಟೋಗಳನ್ನು ತೆಗೆದು ವಾಟ್ಸ್ಆ್ಯಪ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಕಳುಹಿಸಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರಿಗೆ ಬೇಸಿಕ್ ಮೊಬೈಲ್ ಇರಿಸಿಕೊಳ್ಳಲು ಅವಕಾಶವಿದ್ದು,…

Read More

ತುಮಕೂರು: ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳು, ದ್ವೀತಿಯ ದರ್ಜೆ ಸಹಾಯಕರಿಗೆ ಪ್ರಥಮ ದರ್ಜೆ ಸಹಾಯಕರಾಗಿ ಹಾಗೂ ರಾಜಸ್ವ ನಿರೀಕ್ಷಕರಾಗಿ ಬಡ್ತಿ ನೀಡಬೇಕು ಎಂದು ರಾಜ್ಯ ಸರ್ಕಾರ ಆದೇಶಿ ಸಿದ್ದರೂ ತುಮಕೂರು ಜಿಲ್ಲೆಯಲ್ಲಿ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ. ಜಿಲ್ಲೆಯಲ್ಲಿ ೭೦೦ಕ್ಕೂ ಹೆಚ್ಚು ಗ್ರಾಮ ಆಡಳಿತ ಅಧಿಕಾರಿಗಳು ಬಡ್ತಿಗಾಗಿ ಚಾತಕ ಪಯಂತೆ ಕಾಯುತ್ತಿದ್ದು ಉದ್ದೇಶಪೂರ್ವಕವಾಗಿ ಬಡ್ತಿ ಪ್ರಕ್ರಿಯೆಯನ್ನು ಜಿಲ್ಲಾಡಳಿತ ತಡಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಜಿಲ್ಲಾಧಿಕಾರಿ ಶುಭಕಲ್ಯಾಣ್ ವಿರುದ್ಧ ಇತ್ತೀಚೆಗೆ ವಿಎಒಗಳು “ತೊಲಗಲಿ ತೊಲಗಲಿ’ ಎಂದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದು ಬಡ್ತಿ ಪ್ರಕ್ರಿಯೆ ತಡವಾಗಲು ನೆಪವಾಗಿದೆ ಎಂಬ ಆರೋಪ ಕೇಳಿಬಂದಿದೆ. ತುಮಕೂರು ಜಿಲ್ಲೆಯ ಕಂದಾಯ ಘಟಕದ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ದ್ವೀತಿಯ ದರ್ಜೆ ಸಹಾಯಕ ವೃಂದದ ಅಂತಿಮ ಸಂಯುಕ್ತ ಜೇಷ್ಟತಾ ಪಟ್ಟಿಯಲ್ಲಿ ೭೦೦ಕ್ಕೂ ಹೆಚ್ಚು ಸಿಬ್ಬಂದಿಗಳಿದ್ದು ೭೫ ಖಾಲಿ ಹುದ್ದೆಗಳಿಗೆ ಬಡ್ತಿ ನೀಡಲು ಅವಕಾಶವಿದೆ. ಜಿಲ್ಲೆಯಲ್ಲಿ ಬಡ್ತಿ ತಡ ಮಾಡುವುದರಿಂದ ಆರ್‌ಐ ಮೇಲ್ಪಟ್ಟ ಮುಂಬಡ್ತಿಯಲ್ಲಿ ವಿಭಾಗ ಮಟ್ಟದ…

Read More

ಹುಳಿಯಾರು: ಪಟ್ಟಣದ ಹೃದಯಭಾಗದಲ್ಲಿರುವ ಬಸ್ ನಿಲ್ದಾಣದ ನೂತನ ಸಾರ್ವಜನಿಕ ಶೌಚಾಲಯಕ್ಕೆ ಕಳೆದ ೧ ವಾರದಿಂದ ಬೀಗ ಜಡಿಯಲಾಗಿದ್ದು, ಪ್ರಯಾಣಿಕರು ಮತ್ತು ವ್ಯಾಪಾರಿಗಳು ಶೌಚಕ್ಕಾಗಿ ಅಲೆದಾಡುವಂತಾಗಿದೆ. ಆದರೂ ಪಟ್ಟಣ ಪಂಚಾಯಿತಿ ಗಮನ ಹರಿಸದೆ ನಿರ್ಲಕ್ಷಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಬಯಲು ಶೌಚಾಲಯವಾದ ಬಸ್ ನಿಲ್ದಾಣ!: ಶೌಚಾಲಯಕ್ಕೆ ಬೀಗ ಬಿದ್ದಿರುವ ಪರಿಣಾಮವಾಗಿ ಬಸ್ ನಿಲ್ದಾಣದ ಆವರಣದಲ್ಲಿ ಮತ್ತೆ ಬಯಲು ಶೌಚದ ಪಿಡುಗು ಆರಂಭವಾಗಿದೆ. ಹೊರ ಊರುಗಳಿಂದ ಬರುವ ಪ್ರಯಾಣಿಕರು, ಅದರಲ್ಲೂ ವಿಶೇಷವಾಗಿ ಮಹಿಳೆಯರು ಶೌಚಾಲಯವಿಲ್ಲದೆ ತೀವ್ರ ಮುಜುಗರ ಮತ್ತು ತೊಂದರೆ ಅನುಭವಿಸುತ್ತಿದ್ದಾರೆ. ಬಸ್ ನಿಲ್ದಾಣದ ಸುತ್ತಮುತ್ತಲಿರುವ ನೂರಾರು ಫುಟ್ಬಾತ್ ಅಂಗಡಿಯವರು ಹಾಗೂ ಪಟ್ಟಣ ಪಂಚಾಯಿತಿಯ ವಾಣಿಜ್ಯ ಮಳಿಗೆಗಳ ಬಾಡಿಗೆದಾರರು ಶೌಚಕ್ಕಾಗಿ ಪರ್ಯಾಯ ವ್ಯವಸ್ಥೆ ಇಲ್ಲದೆ ಕಂಗಾಲಾಗಿದ್ದಾರೆ. ಮಹಿಳೆಯರ ಪಾಡು ಹೇಳತೀರದು: ಬಸ್ ನಿಲ್ದಾಣದ ಸಾರ್ವಜನಿಕ ಶೌಚಾಲಯಕ್ಕೆ ಬೀಗ ಹಾಕಿರುವುದು ಮಹಿಳಾ ಪ್ರಯಾಣಿಕರಿಗೆ, ಮಹಿಳಾ ಕಂಡಕ್ಟರ್‌ಗಳಿಗೆ ಶಾಪವಾಗಿ ಪರಿಣಮಿಸಿದೆ. ತುರ್ತು ಸಂದರ್ಭಗಳಲ್ಲಿ ಶೌಚಾಲಯ ಸಿಗದೆ ಮಹಿಳೆಯರು ಪಡುತ್ತಿರುವ ಸಂಕಷ್ಟ ನೋಡುವವರೂ ಇಲ್ಲದಂತಾಗಿದೆ. ಕೆರೆ…

Read More

ತುಮಕೂರು: ಗ್ರಾಮ ಪಂಚಾಯಿತಿ ಚುನಾವಣೆ ಮೀಸಲಾತಿ ಅಧಿಕೃತ ಅಧಿಸೂಚನೆ ಹೊರಬಿದ್ದಿದ್ದು ಜಿಲ್ಲೆಯ ಎಲ್ಲಾ ಹತ್ತು ತಾಲೂಕುಗಳಲ್ಲಿ ಗ್ರಾಪಂ ರಾಜಕಾರಣ ಗರಿಗೆದರಿದೆ. ಸದಸ್ಯ ಸ್ಥಾನದ ಮೀಸಲಾತಿ ನಿಗದಿಯಲ್ಲಿ ಪ್ರಭಾವಿಗಳ ಹಸ್ತಕ್ಷೇಪದ ದೂರುಗಳು ಕೇಳಿಬಂದಿವೆ. ಮೀಸಲಾತಿ ಪಟ್ಟಿ ರಾಜ್ಯ ಗೆಜೆಟ್?ನಲ್ಲಿ ಪ್ರಕಟವಾದ ಕೂಡಲೇ ವ್ಯಾಟ್ಸಪ್?ಗಳಲ್ಲಿ ಹರಿದಾಡಲಾರಂಭಿಸಿದೆ. ತುಮಕೂರು ಜಿಲ್ಲೆಯ ೩೩೦ ಗ್ರಾಪಂ ಸದಸ್ಯ ಸ್ಥಾನಕ್ಕೆ ಮೀಸಲಾತಿ ಹಂಚಿಕೆ ಪ್ರಕ್ರಿಯೆ ಮುಗಿದಿದ್ದು ಆಕ್ಷೇಪಣೆಗೆ ಅವಕಾಶವಿಲ್ಲದಂತೆ ಅಂತಿಮ ಅಧಿಸೂಚನೆ ಕೂಡ ಪ್ರಕಟಿಸುವುದರಿಂದ ಯಾರಾದರೂ ಮೀಸಲಾತಿ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆಯನ್ನು ಕಡಿಮೆ ಮಾಡಿದೆ. ಆಯಾ ಗ್ರಾಪಂ ವ್ಯಾಪ್ತಿಯಲ್ಲಿರುವ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಹಂಚಲಾಗಿದೆ. ಎAಎಲ್‌ಎ, ಮಾಜಿಗಳ ಪ್ರಭಾವ!: ಇತ್ತೀಚೆಗಷ್ಟೇ ಕಂದಾಯ ಗ್ರಾಮಗಳಾಗಿ ಘೋಷಣೆಯಾದ ನವಗ್ರಾಮಗಳನ್ನು ಬಿಟ್ಟು ಜಿಲ್ಲೆಯಲ್ಲಿ ೨೫೭೪ ಗ್ರಾಮಗಳಿದ್ದು ೩೩೦ ಗ್ರಾಪಂಗಳಿವೆ. ಅವಧಿ ಪೂರ್ಣಗೊಳಿಸದ ಗುಬ್ಬಿ ತಾಲೂಕು ಅಂಕಸAದ್ರ, ಮಂಚಲದೊರೆ ಹೊರತಾಗಿ ಬಹುತೇಕ ಗ್ರಾಪಂಗಳ ಆಡಳಿತಾವಧಿ ಪೂರ್ಣಗೊಂಡಿದ್ದು ಸದ್ಯ ಎಲ್ಲೆಡೆ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದೆ. ಕಳೆದೊಂದು ವಾರದಿಂದ ಜಿಲ್ಲೆಯ ಎಲ್ಲಾ ತಾಲೂಕುಗಳ ಗ್ರಾಪಂ ಸದಸ್ಯ ಸ್ಥಾನಗಳಿಗೆ ಮೀಸಲಾತಿ…

Read More

ತುಮಕೂರು: ಐತಿಹಾಸಿಕ ಮತ್ತು ಚಾರಿತ್ರಿಕ ವಿಷಯಗಳ ಬಗ್ಗೆ ಸಂಶೋಧನೆಗಳು ಕಡಿಮೆ. ಸಾವಿರಾರು ವರ್ಷಗಳ ಹಿಂದೆ ನಡೆದಿರುವ ಕೌತುಕಗಳ ಬಗ್ಗೆ ಮಾಹಿತಿ ಪಡೆಯಲು ಇಂದಿನ ಜನರು ಉತ್ಸುಕರಾಗಿದ್ದಾರೆ. ಆ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳು ಕೆಲಸ ಮಾಡಬೇಕಾಗಿದೆ ಎಂದು ಮಾಜಿ ಸಚಿವರು ಹಾಗೂ ಶಾಸಕರಾದ ಹೆಚ್.ಕೆ.ಪಾಟೀಲ್ ತಿಳಿಸಿದ್ದಾರೆ. ನಗರದ ಶ್ರೀದೇವಿ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಗಳಗನಾಥ ಮತ್ತು ನಾ.ಶ್ರೀರಾಜ ಪುರೋಹಿತ ಪ್ರತಿಷ್ಠಾನವತಿಯಿಂದ ೨೦೨೪ನೇ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಂಡು, ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡುತಿದ್ದ ಅವರು,ನಾಗಾವಿಯಲ್ಲಿ ಮೊದಲ ಕನ್ನಡ ವಿವಿ ಇತ್ತು. ಇಂದಿಗೂ ಘಟಿಕೋತ್ಸವ ಭವನ ಅಲ್ಲಿದೆ, ನೋಡಬಹುದು. ಇದರ ಬಗ್ಗೆ ಅನೇಕರಿಗೆ ಗೊತ್ತಿಲ್ಲ. ಇಂತಹ ಮಹತ್ವದ ವಿಚಾರಗಳು ಸಂಶೋಧನೆಗಳ ಮೂಲಕ ಜನರ ಗಮನಕ್ಕೆ ಬರಬೇಕಿದೆ. ನಾನು ಪ್ರವಾಸೋದ್ಯಮ ಮತ್ತು ಪುರಾತತ್ವ ಮಂತ್ರಿ ಇದ್ದಾಗ,ಹಸ್ತಪ್ರತಿ ಸಂರಕ್ಷಣಾ ಕಾಯ್ದೆ ಜಾರಿಗೆ ತಂದಿದೆ.ಯಾರ ಮನೆಯಲ್ಲಿಯೇ ಯಾವುದೇ ವಿಚಾರಕ್ಕೆ ಸಂಬAಧಿಸಿದ ಹಸ್ತ ಪ್ರತಿಗಳಿದ್ದರು ಅವುಗಳನ್ನು ಸಂಗ್ರಹಿಸಿ,ಅದರಲ್ಲಿನ ಸಾರಾಂಶಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ಕೆಲಸ ಆಗಬೇಕೆಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀದೇವಿ…

Read More