Author: News Desk Benkiyabale

ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕು ಶೆಟ್ಟಿಕೆರೆ ಹೋಬಳಿಯ ಅಗಸರಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆ-ಗಾಳಿಯಿಂದ ಸುದರ್ಶನ ಬಿನ್ ಕುಮಾರಸ್ವಾಮಿ ಅವರ ಸರ್ವೆ ಸಂಖ್ಯೆ ೪೧ರ ಜಮೀನಿನಲ್ಲಿ ಬೆಳೆದಿದ್ದ ಅಡಿಕೆ ಮತ್ತು ತೆಂಗಿನ ಮರಗಳು ಹಾಳಾಗಿದ್ದು, ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ವಸತಿ ನಿರ್ಮಾಣ ಪ್ರಗತಿ ಪರಿಶೀಲನೆ ನಂತರ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಕೈಗೊಂಡಿರುವ ವಸತಿ ನಿರ್ಮಾಣ ಕಾಮಗಾರಿ ಪ್ರಗತಿಯನ್ನು ಪರಿಶೀಲಿಸಿ ಮಾತನಾಡಿದ ಅವರು, ಯೋಜನೆಯಡಿ ಮಂಜೂರಾಗಿರುವ ೮೦೦ ಮನೆಗಳ ಪೈಕಿ ೪೩೬ ಮನೆಗಳನ್ನು ಪಟ್ಟಣದ ಕಸಬ ಸರ್ವೆ ನಂ. ೧೧೯ ಮತ್ತು ೧೨೧/೨ರ ೫ ಎಕರೆ ೩೫ ಗುಂಟೆ ಜಾಗದಲ್ಲಿ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು. ವಸತಿಗಳ ನಿರ್ಮಾಣದಲ್ಲಿ ಗುಣಮಟ್ಟ ಕಾಪಾಡುವಂತೆ ಸೂಚನೆ ನೀಡಿದರಲ್ಲದೆ, ಫಲಾನುಭವಿಗಳು ಶೀಘ್ರದಲ್ಲಿ ಮನೆಗಳನ್ನು ಪಡೆಯಬಹುದೆಂಬ ನಂಬಿಕೆಯಿಟ್ಟುಕೊAಡಿದ್ದಾರೆ. ಆದ ಕಾರಣ ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಳಿಕ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕಸಬಾ…

Read More

ತುಮಕೂರು: ದಿ: ೨೩/೦೯/೨೦೨೨ ರಂದು ಹಾಸ್ಟೆಲ್ ವಾರ್ಡನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರನ್ನು ಪಡೆದು ತುಮಕೂರು ಮಹಿಳಾ ಪೊಲೀಸ್ ಠಾಣಾ ಮೊನಂ: ೧೨೪/೨೦೨೨ ಕಲಂ: ೩೭೭, ಐಪಿಸಿ ಮತ್ತು ಕಲಂ: ೦೪, ೫(m), ೦೬ ಪೋಕೋ ಆಕ್ಟ್ ಪ್ರಕರಣವನ್ನು ಪದ್ಮಾವತಿ ಪಿ.ಎಸ್.ಐ ರವರು ದಾಖಲಿಸಿರುತ್ತಾರೆ. ನಂತರ ಪೊಲಿಸ್ ಇನ್ಸ್ಪೆಕ್ಟರ್ ನವೀನ್ ಕುಮಾರ್ ಒ.ಃ ಮಹಿಳಾ ಪೊಲೀಸ್ ಠಾಣೆ ರವರು ಪ್ರಕರಣದ ತನಿಖೆಯನ್ನು ಕೈಗೊಂಡು ಆರೋಪಿಯಾದ ಬಸವರಾಜು ಬಿನ್ ಈರಣ್ಣ ೩೫ ವರ್ಷ ವಾಸ: ಗೊಲ್ಲಹಳ್ಳಿ ಪಟ್ಟನಾಯಕನಹಳ್ಳಿ ಹೋಬಳಿ ಸಿರಾ ತಾಲ್ಲೂಕ್ ರವರನ್ನು ದಸ್ತಗಿರಿ ಮಾಡಿ ತನಿಖೆಯನ್ನು ಪೂರ್ಣಗೊಳಿಸಿ ಆರೋಪಿಯ ವಿರುದ್ಧ ದೋಷಾರೋಪಣ ಪತ್ರವನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿಕೊಂಡಿರುತ್ತಾರೆ. ಸದರಿ ಪ್ರಕರಣವನ್ನು ಸ್ಪೆಷಲ್ ಸಿ.ಸಿ ನಂ: ೭೯೪/೨೦೨೨ ರಲ್ಲಿ ಮಾನ್ಯ ತುಮಕೂರು ಎಫ್.ಟಿ.ಎಸ್.ಸಿ -೧ ನ್ಯಾಯಾಲಯದ ನ್ಯಾಯಾಧೀಶರು ವಿಚಾರಣೆ ನಡೆಸಿ ಆರೋಪಿಯ ವಿರುದ್ಧ ಆರೋಪವು ಸಾಬೀತಾದ ಹಿನ್ನೆಲೆಯಲ್ಲಿ ದಿ:೨೩/೦೪/೨೦೨೫ ರಂದು ಈ ಪ್ರಕರಣದ ಆರೋಪಿ ಬಸವರಾಜು ರವರಿಗೆ ಜೀವಾವಧಿ ಶಿಕ್ಷೆ ಮತ್ತು…

Read More

ತುಮಕೂರು: ವರನಟ, ನಟ ಸಾರ್ವಭೌಮ ಡಾ: ರಾಜ್ ಕುಮಾರ್ ಅವರು ತಮ್ಮ ಅಮೋಘ ನಟನೆ, ಗಾಯನದ ಮೂಲಕ ಕನ್ನಡ ಸಾಂಸ್ಕೃತಿಕ ಲೋಕದ ರಾಯಭಾರಿಯಾಗಿದ್ದರೆಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ಬಣ್ಣಿಸಿದರು. ನಗರದ ಕನ್ನಡ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು,  ಡಾ:ಬಿ.ಆರ್. ಅಂಬೇಡ್ಕರ್ ಯುವಜನ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಡಾ: ರಾಜ್ ಕುಮಾರ್ ಜಯಂತಿ ಅಂಗವಾಗಿ ಏರ್ಪಡಿಸಿದ್ದ “ರಾಜರಸ” ಸಂಗೀತ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಡು ಮುಟ್ಟದ ಸೊಪ್ಪಿಲ್ಲ ಎಂಬAತೆ ಡಾ: ರಾಜ್ ಅವರು ಅಭಿನಯಿಸದ ಪಾತ್ರಗಳಿಲ್ಲ. ಕರ್ನಾಟಕದಲ್ಲಿ ಡಾ: ರಾಜ್‌ಕುಮಾರ್ ಎಂದರೆ ಅಣ್ಣಾವ್ರು ಎಂದೇ ಪ್ರಸಿದ್ಧಿ. ಅವರ ಚಿತ್ರಗಳು ಇಡೀ ಕುಟುಂಬ ಒಟ್ಟಿಗೇ ಕುಳಿತು ವೀಕ್ಷಿಸುವಂತಹದಾಗಿದ್ದವು.  ಅವರು ನಟಿಸಿರುವ ಚಿತ್ರದ ಗೀತೆಗಳ ಸಾಹಿತ್ಯ ಅರ್ಥಪೂರ್ಣವಾಗಿರುತ್ತಿದ್ದವು.  ಅಣ್ಣಾವ್ರ ನಟನೆ ಹಾಗೂ ಗಾಯನಕ್ಕೆ ಅವರೇ ಸಾಟಿಯಾಗಿದ್ದರು ಎಂದು ತಿಳಿಸಿದರು. ರಾಜ್‌ಕುಮಾರ್ ಅವರು ಗೋಕಾಕ್ ಚಳುವಳಿಯ ನೇತೃತ್ವವಹಿಸುವ…

Read More

ಗುಬ್ಬಿ: ತಾಲ್ಲುಕಿನ ಚೆಳೂರು ಹೋಬಳಿಯ ಸೊರೆಕಾಯಿಪೇಟೆ ಯ ಸರ್ವೆ ನಂ:೨೦ ಸಾಗುವಳಿ ಮಾಡುತ್ತಿದ್ದ ರೈತ ಮಹಿಳೆ ಮೇಲೆ ಏ. ೨೨ ರಂದು ಅನುಭವದಲ್ಲಿರುವ ಭೂಮಿಗೆ ಬಂದು ಗುಡಿಸಲುಗೆ ಬೆಂಕಿಹಚ್ಚಿರುವು ಸೇರಿದಂತೆ ಇತರೆ ಕೃಷಿ ಉಪಕರಣಗಳನ್ನು ಒಡೆದು ಹಾಕಿ ದಾಂದಲೆ ಮಾಡಿರುವ ಅರಣ್ಯ ಇಳಾಖೆಯ ಸಿಬ್ಬಂದಿಯನ್ನು ಅಮಾನತ್ತು ಮಾಡಲು ಮತ್ತು ಬಗೇರ್ ಹುಕುಂ ಸಾಗುವಳಿದಾರರ ಸಮಸ್ಯೆ ಪರಿಹರಿಸಲು ಒತ್ತಾಯಿಸಿ ಸಲ್ಲಿಸಿದ ಮನವಿ ಪತ್ರ. ಗುಬ್ಬಿ ತಾಲ್ಲುಕು ಅರಣ್ಯ ಭೂಮಿ ಒತ್ತುವರಿ ಮಾಡಿದ್ದೀರ ಎಂದು ಅರಣ್ಯ ಇಲಾಖೆ ಸಿಬ್ಬಂದಿ ದಿನಾಂಕ;೨೨-೦೪-೨೦೨೫ ರಂದು ಸುಮಾರು ೧೦.೩೦ ಗಂಟೆಯ ಸಮಯದಲ್ಲಿ ಗುಬ್ಬಿ ತಾಲ್ಲುಕು ಚೆಳೂರು ಹೋಬಳಿ ಯ ಕಾಡುಗೊಲ್ಲ ಬುಡಕಟ್ಟು ವಿಧವೆ ಯ ರೇಣುಕಮ್ಮ ಕೋಂ ಲೇಟ್,ಕೃಷ್ಣಮೂರ್ತಿ ಯವರು ಸೊರೆಕಾಯಿ ಪೇಟೆಯ ಸರ್ವೆ ನಂ:೨೦ ರಲ್ಲಿ ಸ್ವಾಧಿನದಲ್ಲಿರುವ ಭೂಮಿಯಲ್ಲಿ ಕಳೆದ ೨೦ ವರ್ಷಗಳಿಂದ ಉಳಿಮೆ ಮಾಡಿಕೊಂಡು ಅನುಭವನದಲ್ಲಿದ್ದಾರೆ. ಏಕಾಎಕಿ ಭೂಮಿಗೆ ನುಗ್ಗಿ ಆರಣ್ಯ ಇಲಾಖೆಯ ಸಿಬ್ಬಂದ್ದಿಗಳು ಗುಡಿಸಲಿಗೆ ಬೆಂಕಿ ಹಚ್ಚಿ ಗುಡಿಸಿಲಿನ ಒಳಗಿದ್ದ ದಿನಸಿ,ಬಟ್ಟೆ,ಬರೆ,ಹೂದಿಕೆ ಸುಟ್ಟು ಮತ್ತು…

Read More

ಶಿರಾ: ವೃದ್ಧರ ಕಣ್ಣುಗಳಿಗೆ ನವ ಚೈತನ್ಯದ ಬೆಳಕು ನೀಡುವುದೇ ನಮ್ಮ ಸಂಕಲ್ಪ, ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂದು ಗ್ರಾಮದಲ್ಲಿ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ಶಿಬಿರ ಆಯೋಜನೆ ಮಾಡಿ ಬಡ ಕುಟುಂಬಗಳ ವೃದ್ಧರ ಕಣ್ಣಿಗೆ ಬೆಳಕನ್ನು ನೀಡುವ ಸೇವೆ ಹೆಚ್ಚು ಹರ್ಷ ನೀಡುತ್ತದೆ ಎಂದು ಜೆಡಿಎಸ್ ಹಿರಿಯ ಮುಖಂಡ ಆರ್.ಉಗ್ರೇಶ್ ಹೇಳಿದರು. ಶಿರಾ ತಾಲೂಕಿನ ಲಕ್ಕನಹಳ್ಳಿ ಅರುಣೋದಯ ವಿದ್ಯಾ ಸಂಸ್ಥೆ ಶಿರಾ ಲಯನ್ಸ್ ಕ್ಲಬ್ ಹಾಗೂ ಆರ್. ಉಗ್ರೇಶ್ ಅಭಿಮಾನಿ ಬಳಗ ಸಹಯೋಗದೊಂದಿಗೆ ಬುಧವಾರ ನಡೆದ ಉಚಿತ ಕಣ್ಣಿನ ತಪಾ ಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಮತ್ತೊಬ್ಬರ ಕಣ್ಣಿನ ದೃಷ್ಟಿ ಪ್ರಜ್ವಲಿಸುವಂತೆ ಮಾಡಿ ಕಣ್ಣುಗಳನ್ನು ಕಾಣುವಂತೆ ಮಾಡುವುದು ಶ್ರೇಷ್ಠ ಸೇವೆ. ಶಿರಾ ತಾಲೂಕಿನ ಸಾವಿರಾರು ಜನರಿಗೆ ನೀಡುವ ಇಂತಹ ಸೇವೆ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಲಿವೆ. ಕಣ್ಣಿಗೆ ಬೆಳಕು ನೀಡುವ ಸೇವೆ ನನಗೆ ಹೆಚ್ಚು ತೃಪ್ತಿ ನೀಡುತ್ತದೆ ಎಂದರು. ಅರುಣೋದಯ ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ. ಮಂಜುನಾಥ್ ಮಾತನಾಡಿ ಕಣ್ಣಿನ ಶಸ್ತ್ರಚಿಕಿತ್ಸೆ…

Read More

ಕೊರಟಗೆರೆ: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ವರ್ಷ ಕಳೆದರೂ ಯಾವುದೇ ಅಭಿವೃದ್ದಿ ಕೆಲಸಗಳು ಆಗುತ್ತಿಲ್ಲ, ೫ ಗ್ಯಾರಂಟಿ ಯೋಜನೆಯ ಅನುಷ್ಠಾನ ಮಾಡುವುದರಲ್ಲೆ ಕಾಲಹರಣ ಮಾಡುತ್ತಿರುವ ರಾಜ್ಯ ಸರ್ಕಾರದಿಂದ ಅಭಿವೃದ್ದಿ ಶೂನ್ಯವಾಗುವುದರೊಂದಿಗೆ ದಿನಬಳಕೆಯ ಹಾಲಿ ನಿಂದ ಆಲ್ಕೋಹಾಲ್ ದಿನದಿಂದ ದಿನಕ್ಕೆ ಬೆಲೆ ಏರಿಕೆ ಮಾಡಿ ಸಾರ್ವಜನಿಕರ ಮೇಲೆ ಬರೆ ಎಳೆದಿದ್ದು ಬೆಲೆ ಏರಿಕೆ ವಿರೋದಿಸಿ ಇಂದು ತುಮಕೂರಿನಲ್ಲಿ ಜನಾಕ್ರೋಶ ಯಾತ್ರೆ ನಡೆಯುತ್ತಿದ್ದು ಪಕ್ಷದ ಕಾರ್ಯಕರ್ತರೊಂದಿಗೆ ಸಾರ್ವ ಜನಿಕರು ಭಾಗವಹಿಸುವಂತೆ ಬಿಜೆಪಿ ಮುಖಂಡ ಹಾಗೂ ಐಎಎಸ್ ನಿವೃತ್ತ ಅಧಿಕಾರಿ ಅನಿಲ್ ಕುಮಾರ್ ತಿಳಿಸಿದರು. ಅವರು ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಜನರು ಆತಂಕ ಗೊಂಡಿದ್ದಾರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಮಾಜಿಕ ನ್ಯಾಯದ ಹರಿಕಾರರು ಎನ್ನುವ ಹೆಸರಿನಲ್ಲಿ ಅಧಿಕಾರ ಪಡೆದು ಬಡವರು, ದಲಿತರು, ಹಿಂದುಳಿದವರನ್ನು ಸಂಪೂರ್ಣ ಕಡೆಗಣಿಸಿದ್ದು ಕಾಂಗ್ರೆಸ್ ಸರ್ಕಾರದಿಂದ ಬಡಜನರು ಜೀವನ ನಿರ್ವಹಣೆ ಕಷ್ಟ…

Read More

ಪಾವಗಡ: ಕಾಶ್ಮೀರದ ಪಹಲ್ಕಾಮ್ ನಲ್ಲಿ ಮೂವರು ಕನ್ನಡಿಗರು ಸೇರಿದಂತೆ ೨೬ ಜನರನ್ನು ಬರ್ಬರವಾಗಿ ಹತ್ಯೆ ಮಾಡಿದ ಪಾಕಿಸ್ತಾನ ಬೆಂಬಲಿತ ಉಗ್ರರು ಅದೇ ರೀತಿ ಬುದ್ಧಿ ಕಲಸ ಬೇಕು ಇಡೀ ಪಾವಗಡ ಮುಸ್ಲಿಂ ಸಮುದಾಯದವರು ಖಂಡಿಸಿ ದಾಳಿಗೆ ಕಾರಣರಾದ ಉಗ್ರರನ್ನು ಪತ್ತೆ ಹಚ್ಚಿ ಶಿಕ್ಷಿಸಲು ಪಣತೊಟ್ಟಿಲು ಒಂದಾಗಬೇಕು ಎಂದರು. ಇAತಹ ದಾಳಿಗಳಿಗೆ ಕುಮ್ಮಕ್ಕು ನೀಡಿರುವ ಪಾಕಿಸ್ತಾನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಬೇಕು. ಇದೇ ಸಂದರ್ಭದಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ ದೇಶದ ೨೬ ಜನರ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ತಾಲೂಕು ಕಚೇರಿ ಮುಂದೆ ಮುಸ್ಲಿಂ ಸಮುದಾಯದವರು ಎರಡು ನಿಮಿಷ ಮೌನ ಚರಣೆ ನಿರ್ವಹಿಸಿ ತದನಂತರ ತಹಸಿಲ್ದಾರ್ ಅವರಿಗೆ ಮನವಿಪತ್ರ ಸಲ್ಲಿಸಿದ್ದು ವಿಶೇಷವಾಗಿತ್ತು.ಇದೇ ವೇಳೆ ಪುರಸಭೆ ಸದಸ್ಯ ಮಹಮದ್ ಇಮ್ರಾನ್ ಮಾತನಾಡಿ ಭಾರತ ಶಾಂತಿಯ ತೋಟ ಇದ್ದಂತೆ ಇಲ್ಲಿ ಎಲ್ಲಾರೂ ಒಗ್ಗೂಟದಿಂದ ಜೀವನ ಮಾಡುತ್ತಿದ್ದೇವೆ ಹಾಗೂ ನೆಮ್ಮದಿಯ ಜೀವನ ಮಾಡುತ್ತಿದ್ದೇವೆ. ಇಂತಹದರಲ್ಲಿ ಕಿಡಿಗೇಡಿಗಳು ಇಂತಹ ಕೃತಗಳು ಮಾಡಿ ನಮ್ಮಲ್ಲಿ ನಮ್ಮಗೆ ಶತ್ರುತ್ವ…

Read More

ತುಮಕೂರು: ನಗರದ ಎಸ್.ಎಸ್.ಪುರಂ ಮುಖ್ಯ ರಸ್ತೆಯಲ್ಲಿರುವ ಅರಳೀಮರದ ಸಮೀಪ ಮಯೂರ ವೇದಿಕೆ ವತಿಯಿಂದ ಪದ್ಮಭೂಷಣ, ವರನಟ ಡಾ. ರಾಜ್‌ಕುಮಾರ್ ರವರ ಜನ್ಮದಿನವನ್ನು ಆಚರಿಸಲಾಯಿತು. ವರನಟ ಡಾ. ರಾಜ್‌ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಿ ಅವರ ಕಲಾ ಸೇವೆಯನ್ನು ಗುಣಗಾನ ಮಾಡಲಾಯಿತು. ಮಯೂರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಎನ್.ಆರ್. ಸ್ವಾಮಿ ಮಾತನಾಡಿ, ಪ್ರತಿ ವರ್ಷವೂ ಕರುನಾಡಿನ ವರನಟ ಡಾ. ರಾಜ್‌ಕುಮಾರ್‌ರವರ ಹುಟ್ಟುಹಬ್ಬವನ್ನು ವೇದಿಕೆ ವತಿಯಿಂದ ಆಚರಿಸುತ್ತಾ ಬಂದಿದ್ದೇವೆ ಎಂದರು. ಡಾ. ರಾಜ್‌ಕುಮಾರ್ ರವರಿಗೂ ತುಮಕೂರಿಗೂ ಅವಿನಾಭಾವ ಸಂಬAಧ ಇದೆ. ಡಾ. ಗುಬ್ಬಿ ವೀರಣ್ಣರವರ ಕಂಪೆನಿಯಲ್ಲಿ ಡಾ. ರಾಜ್‌ಕುಮಾರ್ ಅವರು ನಾಟಕಗಳಲ್ಲಿ ಬಣ್ಣ ಹಚ್ಚಿ ಹಲವಾರು ಪಾತ್ರಗಳಲ್ಲಿ ಅಭಿನಯಿಸಿದ್ದರು. ಈ ಮೂಲಕ ತುಮಕೂರು ಜಿಲ್ಲೆಯೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ನಂತರ ದಿನಗಳಲ್ಲಿ ಚಲನಚಿತ್ರ ರಂಗದಲ್ಲೂ ವರನಟರಾಗಿ, ಹಿರಿಯಣ್ಣನಾಗಿ ಕರುನಾಡಿನ ಕೀರ್ತಿಯನ್ನು ವಿಶ್ವದಾದ್ಯಂತ ಎತ್ತಿ ಹಿಡಿದಿದ್ದಾರೆ. ಡಾ. ರಾಜ್‌ಕುಮಾರ್ ರವರು ಅಭಿನಯಿಸಿದ ಸಿನಿಮಾಗಳನ್ನು ಇಡೀ ಕುಟುಂಬವೇ ಕುಳಿತು ನೋಡುವಂತಿತ್ತು. ಅವರ ಸಿನಿಮಾಗಳಲ್ಲಿ…

Read More

ತುಮಕೂರು: ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಏಕಸದಸ್ಯ ವಿಚಾರಣಾ ಆಯೋಗದ ಮಧ್ಯಂತರ ವರದಿಯನ್ವಯ ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿರುವ ಉಪಜಾತಿಗಳ ವೈಜ್ಞಾನಿಕ ವರ್ಗೀಕರಣ ಮಾಡಲು ಹೊಸದಾಗಿ ಸಮೀಕ್ಷೆ ನಡೆಸಿ ದತ್ತಾಂಶ ಸಂಗ್ರಹಿಸಲು ಸರ್ಕಾರ ನಿರ್ದೇಶನ ನೀಡಿದ್ದು, ದತ್ತಾಂಶ ಸಂಗ್ರಹಕ್ಕಾಗಿ ಜಿಲ್ಲೆಯಲ್ಲಿ ಮೇ ೫ ರಿಂದ ಮನೆ-ಮನೆ ಸಮೀಕ್ಷೆ ಕಾರ್ಯವನ್ನು ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿ ಕೇಸ್ವಾನ್ ಸಭಾಂಗಣದಲ್ಲಿ ಬುಧವಾರ ವಿಕಾಸ ಸೌಧದಿಂದ ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ ಅವರು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣ ಸಮೀಕ್ಷೆ ಕುರಿತು ನಡೆಸಿದ ವಿಡಿಯೋ ಸಂವಾದದ ಸಭೆಯ ನಂತರ ಜಿಲ್ಲೆಯ ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿ, ಮನೆ-ಮನೆ ಭೇಟಿ ನೀಡಿ ಸಮೀಕ್ಷೆ ನಡೆಸಿ ದತ್ತಾಂಶ ಸಂಗ್ರಹಿಸಲು ಗಣತಿದಾರರನ್ನಾಗಿ ಶಿಕ್ಷಕರನ್ನು ಮಾತ್ರ ನೇಮಕ ಮಾಡಲಾಗುವುದು. ಆಶಾ…

Read More

ತುಮಕೂರು: ವರನಟ ಡಾ.ರಾಜ್‌ಕುಮಾರ್ ಅವರು ಈ ನಾಡಿನ ಹೆಮ್ಮೆ. ನಮ್ಮ ಸಾಂಸ್ಕೃತಿಕ ನಾಯಕ. ಕನ್ನಡ ನಾಡು, ನುಡಿ, ನೆಲ, ಜಲ ರಕ್ಷಣೆಗೆ ಸಂಕಲ್ಪ ಮಾಡುವ ದಿನವಾಗಿ ಅವರ ಜನ್ಮದಿನವನ್ನು ಕನ್ನಡಿಗರು ಆಚರಿಸಬೇಕು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು. ಗುರುವಾರ ನಗರದ ಹೊರಪೇಟೆ ರಸ್ತೆಯ ಡಾ. ರಾಜ್‌ಕುಮಾರ್ ಹೋಟೆಲ್ ಎಂದೇ ಹೆಸರಾದ ಹರಳೂರು ಶಿವಕುಮಾರ್ ಹೋಟೆಲ್ ಬಳಗದಿಂದ ನಡೆದ ಡಾ.ರಾಜ್‌ಕುಮಾರ್ ಅವರ ೯೭ನೇ ಹುಟ್ಟು ಹಬ್ಬದ ಅಂಗವಾಗಿ ಡಾ.ರಾಜ್ ಅವರ ಬೆಳ್ಳಿ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದ ಶಾಸಕರು, ಹರಳೂರು ಶಿವಕುಮಾರ್ ಅವರು ಡಾ.ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾ ನಿಯಾಗಿ ಅವರ ಎಲ್ಲಾ ಕಾರ್ಯಕ್ರಮಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಅವರು ನಿಧನರಾದ ನಂತರ ಶಿವಕುಮಾರ್ ಅವರ ಪುತ್ರ ಮನು ಅವರು ಆ ಪರಂಪರೆಯನ್ನು ಮುಂದುವರೆಸಿಕೊAಡು ಬರು ತ್ತಿದ್ದಾರೆ ಎಂದು ಶ್ಲಾಘಿಸಿದರು. ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್ ಮಾತನಾಡಿ, ಡಾ.ರಾಜ್‌ಕುಮಾರ್ ಅವರು ಶ್ರೇಷ್ಠ ಕಲಾವಿದ ಅವರು ಅಭಿನಯಿಸಿದ್ದ ಪೌರಾಣಿಕ ಪಾತ್ರಗಳನ್ನು ಅಷ್ಟೊಂದು ಪರಿಣಾಮಕಾರಿಯಾಗಿ…

Read More