Author: News Desk Benkiyabale

ತುಮಕೂರು: ಅಖಿಲ ಕರ್ನಾಟಕ ಸರಕಾರಿ ಪರವಾನಗಿ ಭೂಮಾಪಕರ ಸಂಘ(ರಿ), ಬೆಂಗಳೂರು ಇವರು ನಗರದ ಜೈನಭವನದಲ್ಲಿ ಸಂಘದ ರಾಜ್ಯಾಧ್ಯಕ್ಷರಾದ ತಿರುಮಲೇಗೌಡ ಅವರ ನೇತೃತ್ವದಲ್ಲಿರಾಜ್ಯ ಸಂಘದ ಸದಸ್ಯತ್ವ ನೊಂದಣಿ ಹಾಗೂ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ರಾಜ್ಯಾಧ್ಯಕ್ಷ ತಿರುಮಲೇಗೌಡ, ರಾಜ್ಯದಲ್ಲಿ ಕಳೆದ ೨೩ ವರ್ಷಗಳಿಂದ ೩೫೦೦ ರಿಂದ ೪೦೦೦ ಜನ ಪರವಾನಗಿ ಪಡೆದ ಭೂಮಾಪಕರು ಕೆಲಸ ಮಾಡುತ್ತಿದ್ದು, ಸರಕಾರ ನೀಡಿದ ಎಲ್ಲಾ ಕೆಲಸ, ಕಾರ್ಯಗಳನ್ನು ಚಾಚು ತಪ್ಪದೆ ನಡೆಸಿಕೊಂಡು ಬಂದಿರುತ್ತೇವೆ. ಆದರೆ ಸರಕಾರದಿಂದ ನಮಗೆ ತಲುಪಬೇಕಾದ ಸೌಲಭ್ಯಗಳು ಸರಿಯಾದರೀತಿಯಲ್ಲಿತಲುಪಿಲ್ಲದಿರುವುದು ವಿಷಾದದ ಸಂಗತಿಯಾಗಿದೆ.ಜನರ ನಡುವೆ ನೇರವಾಗಿ ಕೆಲಸ ಮಾಡುವ ನಮಗೆ ಕೆಲಸ,ಕಾರ್ಯದ ವೇಳೆ ಎಡರು, ತೊಡರುಗಳಿದ್ದರೂ ಅವುಗಳನ್ನು ನಿಭಾಯಿಸಿಕೊಂಡು, ಸರಕಾರ ನಿಗಧಿ ಮಾಡಿದ ಸಮಯಕ್ಕೆಕೊಟ್ಟ ಕೆಲಸವನ್ನು ಮಾಡಿ, ಮುಗಿಸಿ ವರದಿ ನೀಡಿರುತ್ತೇವೆ. ಆದರೆ ಸರಕಾರ ಮಾತ್ರ ನಮ್ಮನ್ನು ಮಲತಾಯಿ ಮಕ್ಕಳಂತೆ ನೋಡುತ್ತಿದೆ.ಹಾಗಾಗಿ ಕಳೆದ ೨೩ ವರ್ಷಗಳ ನಮ್ಮಗಳ ಸೇವೆಯನ್ನು ಪರಿಗಣಿಸಿ,ನಮ್ಮ ಸೇವೆಯನ್ನು ಖಾಯಂಗೊಳಿಸಿ, ನಮ್ಮನ್ನು ಸರಕಾರಿ ಭೂಮಾಪಕರೆಂದು ಪರಿಗಣಿಸಬೇಕೆಂಬುದು ನಮ್ಮಆಗ್ರಹವಾಗಿದೆಎಂದರು. ಕಳೆದ…

Read More

ತುಮಕೂರು: ಜಿಲ್ಲೆಯಲ್ಲಿ ಕೈಗೊಂಡಿರುವ ಪರಿಶಿಷ್ಟ ಜಾತಿ ಸಮೀಕ್ಷಾ ಕಾರ್ಯದಲ್ಲಿ ಯಾವುದೇ ಮಕ್ಕಳು ಹೊರಗುಳಿಯದಂತೆ ಸಮೀಕ್ಷೆಗೆ ಒಳಪಡಿಸಬೇಕೆಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಗಣತಿದಾರರಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಗುರುವಾರ ಸಮೀಕ್ಷೆ ಕುರಿತು ಅಭಿಪ್ರಾಯ ಹಾಗೂ ಸಲಹೆ ಬಗ್ಗೆ ಚರ್ಚಿಸುವ ಸಲುವಾಗಿ ದಲಿತ ಮುಖಂಡರೊAದಿಗೆ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇದುವರೆಗೆ ಪ್ರತಿ ದಿನ ಸರಾಸರಿ ೮೨೦೭ ಕುಟುಂಬಗಳ ಸಮೀಕ್ಷೆ ನಡೆಸಲಾಗಿದ್ದು, ಶೇಕಡಾ ೧೦೩ರಷ್ಟು ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ ಎಂದು ತಿಳಿಸಿದರು. ಸಮೀಕ್ಷೆಯಿಂದ ಹೊರಗುಳಿದಿರುವ ಕುಟುಂಬಗಳ ಸಮೀಕ್ಷೆಯನ್ನು ಮುಂದಿನ ಮೂರು ದಿನಗಳಲ್ಲಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರಲ್ಲದೆ, ಸಮೀಕ್ಷೆಯ ಕೊನೆಯ ದಿನಾಂಕದ ಬಗ್ಗೆ ನಗರ ಸೇರಿದಂತೆ ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲಿ ಜನಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು. ಸಭೆಯಲ್ಲಿದ್ದ ದಲಿತ ಮುಖಂಡರು ಮಾತನಾಡಿ ಪರಿಶಿಷ್ಟ ಜಾತಿಯೇತರ ಸಮುದಾಯದವರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಸಮೀಕ್ಷೆಯಲ್ಲಿಯೂ ಗಣತಿದಾರರಿಗೆ ನೈಜ ಮಾಹಿತಿಯನ್ನು ಮರೆಮಾಚಿ ಸುಳ್ಳು ಮಾಹಿತಿ ನೀಡುತ್ತಿದ್ದು, ಸೂಕ್ತ…

Read More

ತುಮಕೂರು: ನಾವು ಸಮಾನವಾಗಿ, ಭ್ರಷ್ಟಾಚಾರ ರಹಿತ, ಶೋಷಣೆ ಇಲ್ಲದ, ಸಮಾಜದಲ್ಲಿ ಬದುಕಬೇಕು. ಅದಕ್ಕಾಗಿ ಹೋರಾಟ ಬಹಳ ಮುಖ್ಯ. ಎಲ್ಲಿಯವರೆಗೆ ನಾವು ಧ್ವನಿ ಎತ್ತಿ ಪ್ರಶ್ನಿಸದೆ ಸಹಿಸಿಕೊಳ್ಳುತ್ತೇವೋ ಅಲ್ಲಿಯವರೆಗೆ ದೌರ್ಜನ್ಯ ನಡೆಯುತ್ತಲೇ ಇರುತ್ತದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷಿö್ಮ ಚೌದರಿ ಹೇಳಿದರು. ತುಮಕೂರು ವಿಶ್ವವಿದ್ಯಾನಿಲಯದ ಡಾ. ಬಿ. ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರ, ಡಾ. ಬಿ.ಆರ್ ಅಂಬೇಡ್ಕರ್ ತರಬೇತಿ ಸಂಶೋಧನೆ ಹಾಗೂ ವಿಸ್ತರಣ ಕೇಂದ್ರ, ಬೆಂಗಳೂರು ಮತ್ತು ಈದಿನ ಡಾಟ್ ಕಾಮ್ ಸಹಯೋಗದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ‘ಅರಿವೇ ಅಂಬೇಡ್ಕರ’ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಪ್ರತಿಯೊಬ್ಬ ಪ್ರಜೆಯು ಕಾನೂನು ಜ್ಞಾನವನ್ನು ಹೊಂದಿರಬೇಕು. ಅಸಮಾನತೆ ಗುಲಾಮಗಿರಿಯ ಬದುಕನ್ನು ಬದುಕದೆ ತಮ್ಮ ಹಕ್ಕುಗಳ ಬಗ್ಗೆ ತಿಳಿಯಲು ಹೋರಾಡಿ, ಅನ್ಯಾಯದ ವಿರುದ್ಧ ತಲೆಯೆತ್ತಿದರೆ ಮಾತ್ರ ನಾವು ಬದಲಾವಣೆಯನ್ನು ತರಲು ಸಾಧ್ಯ. ಉತ್ತಮ ಶಿಕ್ಷಣ ಪಡೆದ ಪ್ರತಿಯೊಬ್ಬ ವ್ಯಕ್ತಿಯು ಸಹ ತಮ್ಮ ಸುತ್ತಲಿನ ಪ್ರದೇಶದ ಜನರ ಅಭಿವೃದ್ಧಿಯನ್ನು ಬಯಸಿದರೆ ಅಂತಹವರಲ್ಲಿ ಅಂಬೇಡ್ಕರ್ ಅವರನ್ನು…

Read More

ತುಮಕೂರು:  ನಗರದ ಜಿಲ್ಲಾ ಕಾಂಗ್ರೆಸ ಕಚೇರಿಯಲ್ಲಿ ಮಾಜಿ ಪ್ರಧಾನಿ ದಿ.ರಾಜೀವ್‌ಗಾಂಧಿಯವರ ೩೫ನೇ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಭಯೋತ್ಪಾಧನಾ ವಿರೋಧಿ ದಿನವನ್ನಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಅವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು. ಕಾಂಗ್ರೆಸ ಕಚೇರಿಯಲ್ಲಿ ಇರಿಸಿದ್ದ ಮಾಜಿ ಪ್ರಧಾನಿ ದಿ.ರಾಜೀವ್‌ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಮಾಜಿ ಪ್ರಧಾನಿಗಳ ಜೀವನ ಮತ್ತು ಸಾಧನೆಯನ್ನು ನೆನಪು ಮಾಡಿಕೊಳ್ಳುವ ಮೂಲಕ ಮಾನವ ಬಾಂಬ್‌ಗೆ ತುತ್ತಾದ ಪಕ್ಷದ ನಾಯಕರಿಗೆ ಮುಖಂಡರುಗಳು ಶ್ರದ್ದಾಂಜಲಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ರಾಮಕೃಷ್ಣ, ದೇಶ ಅಭಿವೃದ್ದಿಯಾಗಬೇಕಾದರೆ, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂಬ ಸತ್ಯವನ್ನು ಅರಿತು,ವಿಜ್ಞಾನದ ತಳಹದಿಯ ಮೇಲೆ ದೇಶಕಟ್ಟುವ ಮುಂದಾದ ಪ್ರಧಾನಿ ರಾಜೀವಗಾಂಧಿಯವರು, ತಂತ್ರಜ್ಞಾನದ ಒಂದು ಭಾಗವಾದ ಮಾನವ ಬಾಂಬ್‌ಗೆ ಬಲಿಯಾಗಿದ್ದು ವಿಪರ್ಯಾಸ.ಕಂಪ್ಯೂಟರ್,ಟಿ.ವಿ. ಮೊಬೈಲ್‌ನಂತಹ ಅತ್ಯಾಧುನಿಕ ಸಕಲರಣೆಗಳು ಅಭಿವೃದ್ದಿಯ ಭಾಗವಾಗಿ ಬಳಕೆ ಮಾಡುವ ಮೂಲಕ ದೇಶವನ್ನು ಮುಂದುವರೆದ ರಾಷ್ಟçಗಳ ಸಾಲಿಗೆ ನಿಲ್ಲಿಸಿದ್ದು ನಮ್ಮ ರಾಜೀವಗಾಂಧಿಯವರು,ಪೈಲೇಟ್ ಆಗಬೇಕಾದವರು, ಪ್ರಧಾನಿಯಾಗಿ ಅಪಾರ ಜನಮನ್ನಣೆಯ ಜೊತೆಗೆ, ದೇಶದ ಅಭಿವೃದ್ದಿಗೆ…

Read More

ತುಮಕೂರು: ಶ್ರೀ ಸಿದ್ಧಾರ್ಥ ಮಾಧ್ಯಮ ಕೇಂದ್ರದ ವಿದ್ಯಾ ರ್ಥಿಗಳು ಪ್ರಾಯೋಗಿಕವಾಗಿ ಪ್ರಕಟಿಸುತ್ತಿರುವ “ಸಿದ್ಧಾರ್ಥ ಸಂಪದ” ಸಂಚಿಕೆ ೨೪, ಸಂಪುಟ ೨೦ರ ಪತ್ರಿಕೆಯನ್ನು ಪತ್ರಕರ್ತ ಚಂದನ್ ಬಿಡುಗಡೆಗೊಳಿಸಿದರು. ಪ್ರಾಯೋಗಿಕ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಪತ್ರಕರ್ತ ಚಂದನ್ ಅವರು, ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕ ವಾಗಿ ಅಗತ್ಯವಿರುವ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು. ವಿಭಿನ್ನ ಆಲೋ ಚನಾಶಕ್ತಿ ಬೆಳಸಿಕೊಂಡರೆ, ಅವಕಾಶಗಳು ಒದಗಿ ಬರುತ್ತದೆ. ವಿದ್ಯಾರ್ಥಿಗಳಿಗೆ ಬರಹ ಮತ್ತು ಓದುವಿನ ಕಡೆ ಗಮನ ಹರಿಸಬೇಕು. ಪ್ರತಿ ದಿನ ಹೊಸ ಹೊಸ ವಿಚಾರಗಳನ್ನು ಕಲಿತುಕೊಳ್ಳಬೇಕು. ಅದನ್ನು ಸಾರ್ವಜನಿಕರಿಗೆ ತಲುಪಿಸುವ ಪ್ರಯತ್ನ ಮಾಡಬೇಕು ಎಂದರು. ಹೊಸ ವಿಚಾರಗಳೊಂದಿಗೆ ಮಾತನಾಡುವುದನ್ನು ರೂಢಿಸಿಕೊ ಳ್ಳಬೇಕು ಆಗ ಮಾತ್ರ ಸುದ್ದಿ, ಲೇಖನ ಮತ್ತು ಬರಹಗಳನ್ನು ಹೊರತರಲು ಸಾಧ್ಯವಾಗುತ್ತದೆ. ಇದರ ಜತೆಗೆ ಪ್ರಶ್ನೆಗಳನ್ನು ಕೇಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ನವ ಮಾಧ್ಯಮಕ್ಕೆ ಅತಿ ಹೆಚ್ಚಾಗಿ ವಿಚಾರ ಅಥವಾ ವಿಷಯ ಆಯ್ಕೆ ಬಹಳ ಮುಖ್ಯ ವಾಗಿರುತ್ತದೆ. ಅದರ ಜತೆಗೆ ಮಾಧ್ಯಮವನ್ನು ಬಳಸಿಕೊಂಡು ಜನರಿಗೆ ಆ ವಿಚಾರಗಳನ್ನು ತಲುಪಿಸುವುದು ಮುಖ್ಯ ಎಂದು…

Read More

ಹುಳಿಯಾರು: ಸಾದಾರಣ ಮಳೆ ಬಂದರೂ ಸಾಕು ಹುಳಿಯಾರಿನ ವಾಲ್ಮೀಕಿ ಸರ್ಕಲ್‌ನಲ್ಲಿನ ರಾಷ್ಟಿçÃಯ ಹೆದ್ದಾರಿಯಲ್ಲಿ ನೀರು ನಿಂತು ಕೆರೆಯಂತಾಗುತ್ತದೆ. ಭಾರಿ ಮಳೆ ಬಂದರೆ ಮಳೆ ನೀರಿನ ಜೊತೆಗೆ ಚರಂಡಿಯ ಕೊಳಚೆ ನೀರು ಹೆದ್ದಾರಿ ಪಕ್ಕದ ಮನೆ, ಅಂಗಡಿಳಿಗೆ ನುಗ್ಗುತ್ತದೆ. ಈ ಸಮಸ್ಯೆ ಕಳೆದ ಐದಾರು ವರ್ಷಗಳಿಂದ ಇದ್ದರೂ ಸಹ ಯಾರೊಬ್ಬರೂ ಸ್ಪಂದಿಸದಿರುವುದು ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಮಂಗಳೂರುನಿAದ ವಿಶಾಖಪಟ್ಟಣ ರಾಷ್ಟಿçÃಯ ಹೆದ್ದಾರಿ ೬೯ ರ ಕಾಮಗಾರಿ ಅವೈಜ್ಞಾನಿಕವಾಗಿದ್ದು ಸಮರ್ಪಕವಾಗಿ ಚರಂಡಿ ನೀರು ಹರಿಯುವುದಿಲ್ಲ. ರಸ್ತೆ ಮೇಲೆ ಬಿದ್ದ ಮಳೆಯ ನೀರು ಸರಾಗವಾಗಿ ಹರಿದು ಚರಂಡಿ ಪಾಲಾಗದೆ ರಸ್ತೆಯಲೇ ನಿಲ್ಲುತ್ತದೆ. ಇದು ಅನೇಕ ಅವಘಡಗಳಿಗೆ ಕಾರಣವಾಗಿ ಸ್ಥಳೀಯರು ಪ್ರತಿಭಟನೆ ಮಾಡಿದರೂ ಸಹ ಇಲ್ಲಿಯವರೆವಿಗೆ ಯಾರೊಬ್ಬರೂ ಸ್ಪಂಧಿಸಿಲ್ಲ. ಪರಿಣಾಮ ಕಳೆದೈದಾರು ವರ್ಷಗಳಿಂದ ಪ್ರತಿ ಬಾರಿ ಮಳೆ ಬಂದಾಗಲೂ ಇಲ್ಲಿನ ಪರಿಸ್ಥಿತಿ ನೀರು ನಿಂತು ಸಂಚಾರಕ್ಕೆ ಕಿರಿಕಿರಿಯೊಡ್ಡುವುದೇ ಆಗಿದೆ. ಅಲ್ಲದೆ ಭಾರಿ ಮಳೆ ಬಂದಾಗ ಹೈವೆ ಪಕ್ಕದಲ್ಲಿರುವ ಮನೆ ಹಾಗೂ ಅಂಗಡಿ ಮಳಿಗೆಗಳಿಗೆ ಮಳೆಯ ನೀರಿನ…

Read More

ಶಿರಾ: ಬಾಲ್ಯದಿಂದ ೩೫ ವರ್ಷಗಳ ವರಗೆ ಅಂಗವಿಕಲತೆಯಿAದ ಬಳಲುತ್ತಿದ್ದ ಶಿರಾ ತಾಲೂಕಿನ ಬೇವಿನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದಾಪುರ ಗ್ರಾಮದ ೩೫ ವರ್ಷದ ಯುವತಿ ಪುಷ್ಪಲತಾ ರವರ ಕಷ್ಟಕ್ಕೆ ಸ್ಪಂದಿಸಿದ ಶಿರಾ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವು ಚಂಗಾವರ ಬುಧವಾರ ಪುಷ್ಪಲತಾ ರವರನ್ನು ಭೇಟಿ ಮಾಡಿ ಕುಶಲೋಪರಿ ವಿಚಾರಿಸಿ ಆರ್ಥಿಕ ಸಹಾಯ ಮಾಡುವುದರ ಮೂಲಕ ಮಾನವೀಯತೆಯ ಮೌಲ್ಯ ಹೆಚ್ಚಿಸಿದರು. ಈ ಬಗ್ಗೆ ಮಾತನಾಡಿದ ಶಿವು ಚಂಗಾವರ ೩೫ ವರ್ಷಗಳಿಂದ ಅಂಗವಿಕಲೆಯಾಗಿ ಮನೆಯ ಲ್ಲಿಯೇ ಇರುವ ಪುಷ್ಪಲತಾ ರವರ ಸೇವೆ, ಅವರ ತಾಯಿ ಗೌರಮ್ಮ ನಿತ್ಯ ಮಾಡುತ್ತಿರುವುದು ಅಮ್ಮ ಎನ್ನುವ ಪದಕ್ಕೆ ನಿಜಾರ್ಥ ದೊರೆತಂತಾಗಿದೆ. ಉಳ್ಳವರು ಇಂತಹವರಿಗೆ ಸಹಾಯ ಮಾಡುವ ಮೂಲಕ ಸೇವೆಯಲ್ಲಿ ಭಗವಂತನನ್ನು ಕಾಣಬೇಕು. ೧. ವರ್ಷದಿಂದ ಸರ್ಕಾರ ನೀಡುವ ಅಂಗವಿ ಕಲರ ವೇತನ ನೀಡದ ಕಾರಣ ಕುಟುಂಬ ಕಂಗಾಲಾಗಿದೆ, ಎಂಬ ಮನವಿಗೆ ಸ್ಪಂದಿಸಿ ಶಿರಾ ಕ್ಷೇತ್ರದ ಶಾಸಕರಾದ ಟಿ.ಬಿ.ಜಯಚಂದ್ರ ಕರೆ ಮಾಡಿ ಪುಷ್ಪಲತಾ ರವರ ಪಿಂಚಣಿ ಸಮಸ್ಯೆ ಬಗ್ಗೆ…

Read More

ತುಮಕೂರು: ನಗರದ ಶ್ರೀರಾಮನಗರದಲ್ಲಿ ರುವ ಅಂದರೆ ಅಮಾನಿಕೆರೆ ಮುಖ್ಯದ್ವಾರದ ಮುಂಭಾಗದಲ್ಲಿರುವ ಸರ್ಕಾರಿ ಶಾಲೆಯನ್ನು ಆಂಗ್ಲ ಮಾಧ್ಯಮ ಶಾಲೆಯನ್ನಾಗಿ ಪರಿವರ್ತನೆ ಮಾಡಬೇಕೆಂದು ಕರ್ನಾಟಕ ಪಿಂಜಾರ/ನದಾಫ್ ಜನಾಂಗದ ಕ್ಷೇಮಾಭಿವೃದ್ಧಿ ರಾಜ್ಯ ಸಂಘದ ರಾಜ್ಯದಕ್ಷರು ಹಾಗೂ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಬಷೀರ್ ಅಹಮದ್‌ರವರು ರಾಜ್ಯ ಶಿಕ್ಷಣ ಸಚಿವರಿಗೆ ಸೇರಿದಂತೆ ಸ್ಥಳೀಯ ಶಿಕ್ಷಣ ಅಧಿಕಾರಿಗಳು, ಬಿ.ಇ.ಓ. ರವರುಗಳಿಗೆ ಮನವಿ ಯನ್ನು ಸಲ್ಲಿಸಿದ್ದಾರೆ. ತಮ್ಮ ಮನವಿಯಲ್ಲಿ ವಿವರಿಸಿರುವಂತೆ ಶ್ರೀರಾಮನಗರ ಸರ್ಕಾರಿ ಶಾಲೆಯು ಒಂದರಿAದ ಏಳನೇ ತರಗತಿವರೆಗೂ ತರಗತಿಗಳು ನಡೆಯುತ್ತಿರುತ್ತವೆ, ಈ ಶಾಲೆಯು ಪ್ರಸ್ತುತ ಕನ್ನಡ ಮೀಡಿಯಂ ಶಾಲೆಯಾಗಿರುತ್ತದೆ, ಆದರೆ ಕೆಲವು ವರ್ಷಗಳಿಂದ ಇಲ್ಲಿನ ಸ್ಥಳೀಯ ನಿವಾಸಿಗಳು ಹಾಲಿ ಶಾಲೆಯನ್ನು ಇಂಗ್ಲಿಷ್ ಮೀಡಿಯಂ ಶಾಲೆಯನ್ನಾಗಿ ಪರಿವರ್ತನೆ ಮಾಡಬೇಕು ಎಂದು ಒತಾಯಿಸಿಕೊಂಡು ಬರುತ್ತಿದ್ದೇವೆ, ಜೊತೆಗೆ ಇತ್ತೀಚೆಗೆ ಸ್ಥಳೀಯ ಬಿ.ಇ.ಓ. ಸೇರಿದಂತೆ ಇಲಾಖಾ ಉಪ-ನಿರ್ದೇಶಕರಿಗೆ ಮನವಿಯನ್ನು ಸಹ ಸಲ್ಲಿಸಿರುತ್ತೇವೆ, ಈ ಶಾಲೆಯನ್ನು ಆಂಗ್ಲ ಮಾಧ್ಯಮ ಶಾಲೆಯನ್ನಾಗಿ ಪರಿವರ್ತನೆ ಮಾಡಿದರೆ ಅನುಕೂಲವಾಗುತ್ತದೆ ಜೊತೆಗೆ ಈ ಶಾಲೆಯು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿದ್ದು ಪ್ರತಿಯೊಬ್ಬರೂ ಸಹ ಸುಶಿಕ್ಷಿ…

Read More

ತುಮಕೂರು: ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಜೆಜೆಎಂ(ಜಲಜೀವನ್ ಮಿಷನ್) ಯೋಜನೆಯಲ್ಲಿ ಮೊದಲ ಮತ್ತು ಎರಡನೇ ಹಂತದ ಕಾಮಗಾರಿಗಳನ್ನು ಮುಂದಿನ ಮೂರು ತಿಂಗಳ ಒಳಗೆ ಪೂರ್ಣಗೊಳಿಸಿ, ಜನರಿಗೆ ಕುಡಿಯುವ ನೀರು ಕೊಡದಿದ್ದರೆ, ಕರ್ನಾಟಕ ಗ್ರಾಮೀಣ ನೀರು ಸರಬರಾಜು ಮತ್ತು ನೈಮರ್ಲ್ಯ ಇಲಾಖೆಯ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮಕ್ಕೆ ಸರಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆಯುವುದಾಗಿ ಶಾಸಕ ಸುರೇಶಗೌಡ ಎಚ್ಚರಿಕೆ ನೀಡಿದ್ದಾರೆ. ನಗರದ ತಾ.ಪಂ.ಸಭಾAಗಣದಲ್ಲಿAದು ಆಯೋಜಿಸಿದ್ದ ತ್ರೆöÊಮಾಸಿಕ ಕರ್ನಾಟಕ ಅಭಿವೃದ್ದಿಯೋಜನೆ)ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು,ಮೊದಲನೇ ಹಂತದಲ್ಲಿ ೬ ಹಾಗೂ ಎರಡನೇ ಹಂತದಲ್ಲಿ ೯ ವರ್ಕ್ಗಳು ಇಂದಿಗೂ ಆರಂಭವಾಗಿಲ್ಲ.ಯೋಜನೆ ಪ್ರಾರಂಭವಾಗಿ ಐದು ವರ್ಷ ಕಳೆದರೂ ಪ್ರತಿ ಮನೆಗೆ ನಲ್ಲಿ ನೀರು ಎಂಬ ಸರಕಾರದ ಘೋಷಣೆಯಂತೆ ನೀರು ನೀಡಲು ಸಾಧ್ಯವಾಗಿಲ್ಲ.ಹೀಗಾದರೆ ಸರಕಾರದ ಮೇಲೆ ಜನರಿಗೆ ವಿಶ್ವಾಸ ಬರುವುದಾದರೂ ಹೇಗೆ ಎಂದು ಪ್ರಶ್ನಿಸಿದ ಶಾಸಕರು,ಮೊದಲ ಮತ್ತು ಎರಡನೇ ಹಂತದ ಬಾಕಿ ಇರುವ ಕಾಮಗಾರಿಗಳನ್ನು ಮುಂದಿನ ಕೆಡಿಪಿ ಸಭೆಯೊಳಗೆ ಮುಗಿಸಿ, ಪಂಚಾಯಿತಿಗಳಿಗೆ ವಹಿಸಬೇಕು.ಅಲ್ಲದೆ ಮೂರನೇ ಹಂತದಲ್ಲಿ…

Read More

ತುಮಕೂರು: ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸಲು ‘ದುಡಿಯೋಣ ಬಾ ಅಭಿಯಾನ’ದ ಮೂಲಕ ಸ್ಥಳೀಯವಾಗಿ ಕೆಲಸ ನೀಡಲಾಗುವುದು. ಗ್ರಾಮೀಣ ಜನರು ಅಭಿಯಾನದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಹರ್ಷ ಕುಮಾರ್ ಕೆ. ಹೇಳಿದರು. ತಾಲ್ಲೂಕಿನ ಹರಳೂರು ಗ್ರಾಮ ಪಂಚಾ ಯಿತಿ ವ್ಯಾಪ್ತಿಯಲ್ಲಿ ಮಂಗಳವಾರ ನರೇಗಾ ಯೋಜನೆಯಡಿ ‘ದುಡಿಯೋಣ ಬಾ ಅಭಿಯಾನ’ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಡ ಕುಟುಂಬಗಳನ್ನು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವುದು, ಸ್ಥಳೀಯರಿಗೆ ಉದ್ಯೋಗ ನೀಡುವ ಮೂಲಕ ಸ್ವಾವಲಂಬಿ ಬದುಕು ಸಾಗಿಸುವಂತೆ ಮಾಡುವುದು, ಗ್ರಾಮೀಣ ಭಾಗದಲ್ಲಿ ವಲಸೆ ತಪ್ಪಿಸಿ ಕೂಲಿಕಾ ರರಿಗೆ ಕೆಲಸ ಒದಗಿಸುವುದು ನರೇಗಾ ಯೋಜ ನೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು. ತಾಲೂಕಿನಲ್ಲಿ ದುಡಿಯೋಣ ಬಾ ಅಭಿಯಾನವನ್ನು ಗ್ರಾಮೀಣ ಜನರು ಸದ್ಬಳಕೆ ಮಾಡಿಕೊಂಡಾಗ ಮಾತ್ರ ಸರ್ಕಾರದ ಯೋಜನೆ ಯಶಸ್ವಿಯಾಗಲಿದೆ. ಈ ನಿಟ್ಟಿನಲ್ಲಿ ವೈಯಕ್ತಿಕ ಅಥವಾ ಸಾಮೂಹಿಕ ಕೂಲಿಯನ್ನು ಸೃಷ್ಟಿಸಲು ದುಡಿಯೋಣ ಬಾ ಅಭಿಯಾನ ಸಹಕಾರಿಯಾಗಿದೆ. ಹರಳೂರು ಗ್ರಾಮದ ರೈತರಿಗೆ ಉದ್ಯೋಗ ಖಾತರಿ ಯೋಜನೆಯ ಮಾಹಿತಿಯುಳ್ಳ…

Read More