ಚಿಕ್ಕನಾಯಕನಹಳ್ಳಿ: ಪರಿಶಿಷ್ಟ ಜಾತಿಯ ಬಡವರ್ಗದವರಿಗೆ ನೀಡುವಂತಹ ಗಂಗಕಲ್ಯಾಣ ಯೋಜನೆಯ ಗುರಿಯನ್ನು ಸರ್ಕಾರ ಹೆಚ್ಚಿಸುವ ಮೂಲಕಅವರಿಗೆ ಆರ್ಥಿಕ ವಾಗಿ ಅನುಕೂಲ ಮಾಡಿಕೊಡಬೇಕಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು. ಪಟ್ಟಣದ ತಾಲ್ಲೂಕು ಕ್ರೀಡಾಂಗಣದ ಆವರ ಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮದವತಿಯಿಂದ ಪಲಾನುಭವಿ ಗಳಿಗೆ ಪಂಪುಮೋಟ್ ವಿತರಣೆ ಮಾಡಿ ಮಾತನಾಡಿದ ಅವರು ಅರ್ಜಿಸಲ್ಲಿಸಿದ ಎಲ್ಲರಿಗೂ ಇದರಲ್ಲಿ ಸೌಲಭ್ಯಗಳು ಸಿಗುತ್ತಿಲ್ಲ ಕಾರಣ ಸರ್ಕಾರ ಇಂತಿಷ್ಟು ಎಂದು ಗುರಿಪಡಿಸಿದ್ದು ಅಷ್ಟು ಮಾತ್ರ ಬರುತ್ತಿವೆ ಅದರಲ್ಲೂ ಆರ್ಥಿಕವಾಗಿ ಹಿಂದುಳಿದಿರುವವರನ್ನು ಗುರುತಿ ಅವರಿಗೆ ಈ ಸೌಲಭ್ಯವನ್ನು ನೀಡಲಾಗುತ್ತಿದ್ದು ಇದರ ಮೂಲಕ ಅವರು ಸೌಲಭ್ಯ ಸದ್ಬಳಕೆ ಮಾಡಿಕೊಂಡು ತಮ್ಮ ಭೂಮಿಯನ್ನು ಉತ್ತಮ ನೀರಾವರಿಯ ಮೂಲಕ ಆರ್ಥಿಕವಾಗಿ ಸಬಲರಾಗಬೇಕಾಗಿದೆ ಇಂದು ೧೫ಜನ ಪಲಾನುಭವಿಗಳಿಗೆ ಒಟ್ಟು ೨೭ಲಕ್ಷದ ೬೦ಸಾವಿರ ವೆಚ್ವದ ಪಂಪು ಮೋಟಾರ್ ವಿತರಣೆ ಮಾಡಲಾಗುತ್ತಿದೆ ಎಂದರು. ಈ ಸಂದರ್ಭಧಲ್ಲಿ ತಹಸೀಲ್ದಾರ್ ಪುರಂದರ ಕೆ, ಅಂಬೇಡ್ಕರ್ ಅಭಿವೃದ್ದಿ ನಿಗಮದ ತಾಲ್ಲೂಕು ಅಭಿವೃದ್ದಿ ಅಧಿಕಾರಿ ಮಹೇಂದ್ರ ಸೇರಿದಂತೆ ಮಾಜಿ ಜಿ.ಪಂ.ಸದಸ್ಯ ರಾಮಚಂದ್ರಯ್ಯ ಹಾಗೂ ಇತರರು ಇದ್ದರು.
Author: News Desk Benkiyabale
ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಕಂದಿಕೆರೆ ಹೋಬಳಿಯ ವಿವಿಧ ಕಡೆಗಳಲ್ಲಿ ಸುಮಾರು ೧೫ಕೋಟಿ ೩೦ಲಕ್ಷ ವೆಚ್ಚದ ಕಾಮಗಾರಿಗಳಿಗೆ ಶಾಸಕ ಸಿ.ಬಿ.ಸುರೇಶ್ ಬಾಬು ಗುದ್ದಲಿ ಪೂಜೆ ನೆರೆವೆರಿಸಿದರು. ತಾಲ್ಲೂಕಿನ ಕಂದಿಕೆರೆ ಹೋಬಳಿಯ ವಿವಿಧ ಕಡೆಗಳಲ್ಲಿ ಸಿಸಿ ರಸ್ತೆ ಹಾಗೂ ಚೆಕ್ ಡ್ಯಾಂ ಕಾಮಗಾರಿಗೆ ಗುದ್ದಲಿ ಪೂಜೆ ನೆರೆವೆರಿಸಿ ಮಾತನಾಡಿದ ಅವರು ಹರಿಯುವ ನೀರನ್ನು ನಿಲ್ಲುವಂತೆಯು ನಿಲ್ಲುವಂತಹ ನೀರನ್ನು ಹಿಂಗುವAತೆ ಮಾಡುವ ಮೂಲಕ ಅಂತರ್ಜಲದ ಮರುಪೂರಣಕ್ಕಾಗಿ ಚೆಕ್ ಡ್ಯಾಂ ಗಳನ್ನು ನಿರ್ಮಿಸಲಾಗುತ್ತದೆ ಈಗಾಗಲೇ ತಾಲ್ಲೂಕಿನ ಹಲವಾರು ಹಳ್ಳಗಳ ಕಡೆಗಳಲ್ಲಿ ಚೆಕ್ ಡ್ಯಾಂ ಗಳನ್ನು ನಿರ್ಮಿಸಿ ಸಾಕಷ್ಟು ನೀರು ಪೋಲಾಗಿ ಹರಿಯುವುದನ್ನು ನಿಲ್ಲಿಸುವಂತಹ ಕೆಲಸ ಮಾಡಲಾಗುತ್ತಿದೆ ನನ್ನ ಈ ಹಿಂದಿನ ಅವಧಿಯಲ್ಲಿ ತೀರ್ಥಪುರ ಯರೇಕಟ್ಟೆ ವಜ್ರದಬಳಿ ಒಂದು ಕೋಟಿ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಿಸಲಾಗಿತ್ತು ಅದೇ ರೀತಿ ಈ ಬಾರಿ ಒಂದು ಕೋಟಿ ವೆಚ್ಚದಲ್ಲಿ ಅಕ್ಕನಹಳ್ಳಿ ಚೆಕ್ ಡ್ಯಾಂ ನಿರ್ಮಿಸಲು ಗುದ್ದಲಿ ಪೂಜೆ ನೆರೆವರೆರಿಸಿದ್ದು ಇದರ ಮೂಲಕ ನೀರು ಹರಿಯುವದಲ್ಲಿ ನಿಲ್ಲಿಸಿ ಅಂತರ್ಜಲ ಹೆಚ್ಚುವಂತೆ ಇದುಅನುಕೂಲವಾಗಲಿದೆ ಇದೇ ರೀತಿ…
ತುರುವೇಕೆರೆ: ಕಳೆದು ಮೂರ್ನಾಲ್ಕು ದಿನಗಳಿಂದ ತಾಲ್ಲೂಕಿನಾದ್ಯಂತ. ಸುರಿದ ಕೃತ್ತಿಕೆ ಮಳೆಯಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದ್ದು, ತಾಲೂಕಿನಾದ್ಯಂತ ಕೃಷಿ ಚಟುವಟಿಕೆಗಳು ಗರಿಗೆದರಿದೆ. ಮಾರ್ಚ್ ತಿಂಗಳ ಕೊನೆಯ ಭರಣಿ ಮಳೆ ತಾಲ್ಲೂಕಿನ ಅಲ್ಲಲ್ಲಿ ಸಾಧಾರಣ ಮಳೆಯಾಗಿದ್ದರಿಂದ ಕೆಲವು ರೈತರು ತಮ್ಮ ಜಮೀನುಗಳನ್ನು ಉಳುಮೆ ಮಾಡಿ ಹೆಸರು, ಉದ್ದು ಬೀಜ ಬಿತ್ತನೆ ಮಾಡಿದ್ದರು. ಕೆಲವು ಭಾಗದಲ್ಲಿನ ರೈತರು ಭೂಮಿ ಹದಮಾಡಿಕೊಂಡರು. ಜೊತೆಗೆ ಪೂರ್ವ ಮುಂಗಾರು ಬಿತ್ತನೆಗೆ ಬೇಕಾದ ಬೀಜ, ಗೊಬ್ಬರವನ್ನು ಸಹ ದಾಸ್ತಾನು ಮಾಡಿಕೊಂಡಿದ್ದರು. ಇದಾದ ಮೇಲೆ ಸಮರ್ಪಕವಾಗಿ ಮಳೆ ಬಾರದ ಕಾರಣ ರೈತರು ಬೀಜ ಭಿತ್ತನೆ ಹಿಂದೇಟು ಹಾಕಿದರು. ತಾಲ್ಲೂಕಿನ ಸಂಪಿಗೆ, ದೊಂಬರನಹಳ್ಳಿ, ಕುರುಬರಹಳ್ಳಿ ಬ್ಯಾಲಾ, ತಾಳ್ಕೆರೆ, ಮಾಯಸಂದ್ರ, ಸೂಳೇಕೆರೆ ಲೋಕಮ್ಮನಹಳ್ಳಿ, ದಂಡಿನಶಿವರ, ಬಾಣಸಂದ್ರ ಸೇರಿದಂತೆ ಬೆರಳೆಣಿಕೆಯಷ್ಟು ಕಡೆಗಳಲ್ಲಿ ಭರಣಿ ಮಳೆ ಬಿದ್ದ ಹಿನ್ನೆಲೆಯಲ್ಲಿ ರೈತರು ಹೆಸರು, ಅಲಸಂದೆ ಭಿತ್ತನೆ ಮಾಡಿದರು ಇದರಿಂದ ಹೆಸರು ಮತ್ತು ಅಲಸಂದೆ ಗಿಡಗಳು ಈಗಾಗಲೇ ಎರಡು ಎಲೆ ಬಂದಿವೆ. ಕೃತ್ತಿಕೆ ಮಳೆ ಚನ್ನಾಗಿ ಬೀಳುತ್ತಿರುವ ಕಾರಣ ಭಿತ್ತನೆ…
ತುಮಕೂರು: ಹಿಂದೆಲ್ಲಾ ಮಕ್ಕಳಿಗೆ ಊಟ ಮಾಡಿಸುವಾಗ ಪೋಷಕರು ಚಂದಮಾಮ ಹಾಗೂ ಪಂಚ ತಂತ್ರದ ಕಥೆಗಳನ್ನು ಹೇಳುತ್ತಿದ್ದರು. ಈಗ ಆ ಕಥೆ ಹೇಳಿ ಊಟ ಮಾಡಿಸುವ ಪೋಷಕರು ಕಾಣುತ್ತಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಚೇತನ್ ಕುಮಾರ್ ಎಂ.ಎನ್. ವಿಷಾದಿಸಿದರು. ತುಮಕೂರಿನ ಬಾಲಭವನದಲ್ಲಿ ರಾಜ್ಯ ಬಾಲಭವನ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲಭವನ ಸಮಿತಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ಈಗ ಮಕ್ಕಳಿಗೆ ಪೋಷಕರು ಊಟ ಮಾಡಿಸುವಾಗ ಮೊಬೈಲ್ ಅನ್ನು ಕೊಡುತ್ತಿದ್ದಾರೆ. ಇದು ಸರಿಯಲ್ಲ ಎಂದು ವಿಷಾದಿಸಿದರು. ಹೀಗಾಗಿ ಚಂದಮಾಮ ಕಥೆಗಳನ್ನು ಮಕ್ಕಳಿಗೆ ಹೇಳಿಕೊಡುವ ಪೋಷಕರ ಸಂಖ್ಯೆ ಹೆಚ್ಚಾಗಲಿ ಎಂದು ಆಶಿಸಿದರು. ಮೊಬೈಲ್ ನಲ್ಲಿ ಮಕ್ಕಳು ಕಳೆದು ಹೋಗಿರುವ ಆಂತಕ ಇದೆ. ಇದು ಮಕ್ಕಳ ಸಮಸ್ಯೆಯಲ್ಲ, ಪೋಷಕರ ಸಮಸ್ಯೆ. ಮನೆಗಳಲ್ಲೂ ಕೂಡ ರೋಬರ್ಟ್ ಗಳು ಬಂದಿವೆ. ಮೊಬೈಲ್ ನಿಂದ ಮಕ್ಕಳು ಹೊರಗೆ ಬರುವುದು…
ತುಮಕೂರು: ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಮತ್ತು ಸ್ಲಂ ಜನಾಂದೋ ಲನ-ಕರ್ನಾಟಕದ ಸಂಚಾಲಕರಾದ ಎ.ನರ ಸಿಂಹಮೂರ್ತಿರವರ ೫೦ನೇ ವರ್ಷದ ಜನ್ಮದಿ ನದ ಅಂಗವಾಗಿ ಕ್ಯಾತ್ಸಂದ್ರ ಎಳ್ಳರಬಂಡೆ, ಮಾರಿಯಮ್ಮ ನಗರ, ಸ್ಲಂ ಭವನದಲ್ಲಿ ಶಾಲಾ ಮಕ್ಕಳಿಗೆ ಬ್ಯಾಗ್ ಮತ್ತು ನೋಟ್ ಬುಕ್ ವಿತರಣೆ, ಅನ್ನದಾನ, ಸ್ನೇಹಕೂಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ರಾಜ್ಯದಲ್ಲಿ ಸ್ಲಂ ಜನರನ್ನು ಸಂವಿಧಾನದ ಆಶ ಯದೊಂದಿಗೆ ಕಳೆದ ೨೫ನೇ ವರ್ಷಗಳಿಂದ ಸ್ಲಂ ಜನಾಂದೋಲನ ಕರ್ನಾಟಕದ ಕಾರ್ಯದರ್ಶಿ ಯಾಗಿ, ಸಂಚಾಲಕರಾಗಿ ಜವಾಬ್ದಾರಿ ತೆಗೆದು ಕೊಂಡು ಸ್ಲಂ ಜನರ ಸಂಘಟನೆಗೆ ಅವಿರತವಾಗಿ ಶ್ರಮಿಸಿ, ಹಲವಾರು ಯಶಸ್ಸುಕಂಡು ರಾಜ್ಯದಲ್ಲಿ ಸ್ಲಂ ಜನರ ಧ್ವನಿಯಾಗಿ ಸ್ಲಂ ಜನರ ಭೂಮಿ, ವಸತಿ ಹೋರಾಟಗಳು ಹಲವಾರು ಜಿಲ್ಲೆಗಳಲ್ಲಿ ಕಾಲಕಾಲಕ್ಕೆ ಹಮ್ಮಿಕೊಳ್ಳುತ್ತ ನಗರಗಳ ಮೇಲಿನ ಹಕ್ಕನ್ನು ಸ್ಪಾಪಿಸಲು ನಗರವಂಚಿತ ಸಮುದಾಯಗಳು ಮುಂದಾಗಿರುವುದು ಶ್ಲಾಘನೀಯವಾದದ್ದು ಹಗಲು ರಾತ್ರಿಯನ್ನದೆ ರಾಜ್ಯಾದ್ಯಂತ ಸ್ಲಂ ಜನರನ್ನು ಎ.ನರಸಿಂಹಮೂರ್ತಿ ಸಂಘಟಿಸಿರುವುದು ಮತ್ತು ಜಾಗೃತರನ್ನಾಗಿಸುತ್ತಿರುವುದು ಅಭಿನಂದನೀಯ ವಾಗಿದೆ ಎಂದು ಉಪಾದ್ಯಕ್ಷರಾದ ದೀಪಿಕಾ ಹೇಳಿದ್ದರು. ಮಾಜಿ ಶಾಸಕರಾದ ಡಾ. ರಫೀಕ್ ಅಹ್ಮದ್…
ಚಿಕ್ಕನಾಯಕನಹಳ್ಳಿ: ಪುಣ್ಯಕ್ಷೇತ್ರಗಳ ದರ್ಶ ನಕ್ಕೆ ತೆರಳಿ ಅಪಘಾತಕ್ಕೆ ಈಡಾಗಿ ಸಾವನ್ನಪ್ಪಿದ ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಕೆಂಕೆರೆ ನವೀನ್ ಬಿಜೆಪಿ ಮುಖಂಡ ಕೆಂಕೆರೆ ಸಂತೋ ಷ್ ಹಾಗೂ ಲೋಕೇಶ್ ರವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಪಟ್ಟಣದ ನೆಹರು ಸರ್ಕಲ್ ನಲ್ಲಿ ನಡೆದ ಶ್ರದ್ಧಾಂಜಲಿ ಸಂದರ್ಭದಲ್ಲಿ ಅ.ಭಾವೀ.ಲಿಂ.ಮ.ಸಭಾ ತಾಲ್ಲೂಕು ಅಧ್ಯಕ್ಷ ಸಾಸಲು ದಿನೇಶ್ ಮಾತನಾಡಿ ಮೃತ ದುರ್ದೈವಿಗಳು ಸಮಾ ಜಕ್ಕೆ ಅನೇಕ ಸೇವೆಸಲ್ಲಿಸಿದ್ದರು. ಕೆಂಕೆರೆ ನವೀನ್ ರಾಜಕೀಯ ಕ್ಷೇತ್ರದಲ್ಲಿ ಸರಳತೆಯ ನಾಯಕತ್ವವನ್ನ ಹೊಂದಿದ್ದರು. ಸಂತೋಷ್ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು ಲೋಕೇ ಶ್ ಕೂಡ ಸಮಾಜದ ಸೇವೇಯಲ್ಲಿ ಸಾಧನೆಯ ಕನಸುಗಳನ್ನ ಕಂಡಿದ್ದರು ಅವರ ಅಕಾಲಿಕ ಮರಣದಿಂದ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಕಂಬನಿ ಮಿಡಿದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ನಿರಂಜನ್ ಮಾತನಾಡಿ ಭಾರತೀಯ ಜನತಾ ಪಾರ್ಟಿ ಯಲ್ಲಿ ಮೃತರು ಪ್ರಾಮಾಣಿಕ ಕಾರ್ಯಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದರು. ಪಕ್ಷ ಸಂಘಟಣೆಯಲ್ಲಿ ನವೀನ್ ಚತುರರಾಗಿದ್ದರು. ಸಂತೋಷ್ ಪಕ್ಷದ ಯುವಮೋರ್ಚರಾಗಿ ಕೆಲಸ ನಿರ್ವಹಿಸಿದ್ದರು ಲೋಕೇಶ್…
ತುಮಕೂರು: ಡಾ: ಡಿ.ಎಂ. ನಂಜುAಡಪ್ಪ ವರದಿಯ ಶಿಫಾರಸ್ಸಿನಂತೆ ಪ್ರಾದೇಶಿಕ ಅಸಮತೋಲನೆಯನ್ನು ನಿವಾರಿಸಲು ರಾಜ್ಯದಲ್ಲಿ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗಾಗಿ ೨೦೦೭-೦೮ ರಿಂದ ೨೦೨೩-೨೪ರವರೆಗೂ ಸರ್ಕಾರದಿಂದ ಬಿಡುಗಡೆಯಾಗಿರುವ ೩೭,೬೬೧.೬೫ ಕೋಟಿ ರೂ.ಗಳ ಅನುದಾನದಲ್ಲಿ ೩೪,೩೮೧.೦೨ ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ ಎಂದು ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಅಧ್ಯಕ್ಷ ಪ್ರೊ: ಎಂ. ಗೋವಿಂದರಾವ್ ತಿಳಿಸಿದರು. ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ದೇಶನದಂತೆ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣೆ ಸಂಬAಧ ಸೆಪ್ಟೆಂಬರ್ ೨೦೨೪ರಲ್ಲಿ ಹೊಸ ಸಮಿತಿಯನ್ನು ರಚಿಸಲಾಗಿದೆ. ರಾಜ್ಯದಲ್ಲಿರುವ ಪ್ರಾದೇಶಿಕ ಅಸಮತೋಲನಾ ನಿವಾರಣೆಗಾಗಿ ಈ ಸಮಿತಿಯು ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡುತ್ತಿದೆ ಎಂದು ಹೇಳಿದರು. ಸಮಿತಿಯು ರಾಜ್ಯದಾದ್ಯಂತ ಪ್ರವಾಸ ಕೈಗೊಂಡು ಡಾ: ನಂಜುAಡಪ್ಪ ಸಮಿತಿ ಶಿಫಾರಸ್ಸುಗಳ ಆಧಾರದ ಮೇಲೆ ಅಸಮತೋಲನೆ ನಿವಾರಣೆಗೆ ಪರಿಣಾಮಕಾರಿಯಾಗಿ ಕೈಗೊಳ್ಳಲಾದ ಕ್ರಮಗಳ ಮೌಲ್ಯಮಾಪನ ಮಾಡಲಿದೆ ಎಂದು ತಿಳಿಸಿದರು. ರಾಜ್ಯದ ಯಾವುದೇ ಸಮುದಾಯ, ಪ್ರದೇಶಗಳು ಅಭಿವೃದ್ಧಿಯಲ್ಲಿ ಹಿಂದುಳಿಯಬಾರದೆAಬುದೇ ಸಮಿತಿ ರಚನೆ ಮುಖ್ಯ ಉದ್ದೇಶವಾಗಿದೆ. ಈ…
ತುಮಕೂರು: ದಿ:೦೧/೦೨/೨೦೨೫ ರಂದು ಸಂಜೆ ೦೬-೧೫ ಗಂಟೆಗೆ ಪಿರ್ಯಾದಿ ಬಸವರಾಜ ಪೂಜಾರಿರವರು ಠಾಣೆಗೆ ಹಾಜರಾಗಿ, ಪಾವಗಡ ತಾ ತಿರುಮಣಿ ಪೊಲೀಸ್ ಠಾಣಾ ವ್ಯಾಪ್ತಿಯ ವಳ್ಳೂರು ಗ್ರಾಮದ ಅವಧಾ ಸೋಲಾರ್ ಪ್ಲಾಂಟ್ನಲ್ಲಿ ದಿ:೨೦/೦೧/೨೦೨೫ ರಂದು ರಾತ್ರಿ ೧೦-೦೦ ಗಂಟೆಯಿAದ ದಿನಾಂಕ:೨೧/೦೧/೨೦೨೫ ರಂದು ಸುಮಾರು ಬೆಳಗ್ಗೆ ೦೭-೦೦ ನಡುವಿನ ಸಮಯದಲ್ಲಿ ಯಾರೋ ಕಳ್ಳರು ಸೋಲಾರ್ ಪ್ಯಾನಲ್ಗೆ ಆಳವಡಿಸಿದ್ದ ಸುಮಾರು ೨,೫೦೦ ಮೀಟರ್ ಡಿ.ಸಿ ಕೇಬಲ್ ವೈರ್ (ಇವುಗಳ ಅಂದಾಜು ಮೌಲ್ಯ ೧.೩೦,೦೦೦/- ರೂಗಳು) ಅನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ತಿರುಮಣಿ ಪೊಲೀಸ್ ಠಾಣೆಯಲ್ಲಿ ಮೊ.ನಂ:೦೭/೨೦೨೫, ಕಲಂ:೩೦೩(೨) ಬಿ.ಎನ್.ಎಸ್ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ. ದಿ:೧೭-೦೫-೨೦೨೫ ರಂದು ಈ ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿಗಳಾದ ೧) ಮಲ್ಲೇಶ್ @ ಮಲ್ಲಿಕಾರ್ಜುನ ಕೋಯಪ್ಪ ಬಿನ್ ಸುಂಕಪ್ಪ, ೨೮ ವರ್ಷ, ಈಚಲು ಪೊರಕೆ ವ್ಯಾಪಾರ, ಆಫ್ ಬಂಡೆ. ಪಾವಗಡ ಟೌನ್. ೨) ಬಾಬು @ ಬಾಬುರಾವ್ ಬಿನ್…
ತುಮಕೂರು: ಸಸ್ಯಗಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ೧೭ ಪೋಷಕಾಂಶಗಳ ಅಗತ್ಯವಿರುತ್ತದೆ. ಇವುಗಳಲ್ಲಿ ಸ್ವಾಭಾವಿಕವಾಗಿ ದೊರೆಯುವ ಇಂಗಾಲ, ಜಲಜನಕ ಮತ್ತು ಆಮ್ಲಜನಕವು ಗಾಳಿ ಮತ್ತು ನೀರಿನ ಮೂಲಕ ಸಸ್ಯಗಳಿಗೆ ಲಭ್ಯವಾಗುತ್ತದೆ. ಸಸ್ಯಗಳಿಗೆ ಪ್ರಧಾನ ಪೋಷಕಾಂಶಗಳಾದ ಸಾರಜನಕ, ರಂಜಕ, ಪೋಟ್ಯಾಷ್ ಹೆಚ್ಚಿನ ಪ್ರಮಾಣದಲ್ಲಿ ಹಾಗೂ ಲಘು ಪೋಷಕಾಂಶಗಳಾದ ಕಾಲ್ಸಿಯಂ, ಮೆಗ್ನಿಷಿಯಂ, ಗಂಧಕ, ಕಬ್ಬಿಣ, ಜಿಂಕ್, ಬೋರಾನ್, ತಾಮ್ರ, ಮ್ಯಾಂಗನೀಸ್, ಮಾಲಿಬಿನಂ, ಕ್ಲೋರಿನ್ ಮತ್ತು ನಿಕಲ್ ಕಡಿಮೆ ಪ್ರಮಾಣದಲ್ಲಿ ಅಗತ್ಯವಿರುತ್ತದೆ. ಇವುಗಳಲ್ಲಿ ಯಾವುದೇ ಒಂದು ಪೋಷಕಾಂಶದ ಕೊರತೆಯಾದರೂ ಸಸ್ಯಗಳ ಬೆಳವಣಿಗೆ ಮತ್ತು ಅಭಿವೃದ್ಧಿಯ ಮೇಲೆ ಪರಿಣಾಮ ಬೀರಿ ಇಳುವರಿ ಕುಂಠಿತವಾಗಿರುತ್ತದೆ. ಪ್ರಧಾನ ಪೋಷಕಾಂಶಗಳು ಮತ್ತು ಲಘು ಪೋಷಕಾಂಶಗಳಿಗೆ ಭೂಮಿಯೇ ಮುಖ್ಯ ಆಧಾರ, ಮಣ್ಣಿನಿಂದ ಎಲ್ಲಾ ಪೋಷಕಾಂಶಗಳು ಬೇಕಾದ ಪ್ರಮಾಣದಲ್ಲಿ ಬೆಳೆಗಳಿಗೆ ದೊರೆಯುವುದಿಲ್ಲವಾದ್ದರಿಂದ ಬಾಹ್ಯವಾಗಿ ನೀಡುವುದು ಅನಿವರ್ಯ. ಬೆಳೆಗಳಿಗೆ ಬೇಕಾಗುವ ಈ ಬಾಹ್ಯ ಪೋಷಕಾಂಶಗಳನ್ನು ಸಾವಯವ (ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ, ಹಿಂಡಿ ಇತ್ಯಾದಿ) ಮತ್ತು ರಸಗೊಬ್ಬರಗಳಿಂದ ಒದಗಿಸಬೇಕು. ರಸಗೊಬ್ಬರಗಳಲ್ಲಿ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ಮತ್ತು ನೇರವಾಗಿ…
ತುಮಕೂರು: ಕಲ್ಪತರುನಾಡು ತುಮಕೂರು ಜಿಲ್ಲೆಯಲ್ಲಿ ಕಳೆದ ೨ ದಿನಗಳಿಂದ ವರುಣನ ಆರ್ಭಟ ಜೋರಾಗಿದ್ದು, ಮುಂಜಾನೆಯಿAದಲೇ ಬಿಟ್ಟು ಬಿಡದೆ ಸುರಿದ ಮಳೆಯಿಂದಾಗಿ ಜನ ಹೈರಾಣಾಗಿದ್ದಾರೆ. ಕಳೆದ ೨ ದಿನಗಳಲ್ಲಿ ತುಮಕೂರು ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ವರುಣ ಅಬ್ಬರಿಸಿದ್ದು, ತಗ್ಗುಪ್ರದೇಶಗಳು, ಕೆಲ ಬಡಾವಣೆಗಳ ರಸ್ತೆಗಳು, ತೋಟಗಳು ಜಲಾವೃತಗೊಂಡಿವೆ. ಇAದು ಮುಂಜಾನೆಯಿAದಲೇ ಸಾಧಾರಣ ಮಳೆಯಾಗಿದ್ದು, ದಿನನಿತ್ಯದ ಕೆಲಸ ಕಾರ್ಯಗಳಿಗೆ ತೆರಳುವ ಸರ್ಕಾರಿ ನೌಕರರು, ಕೂಲಿ ಕಾರ್ಮಿಕರು, ಕಾಲೇಜು ವಿದ್ಯಾರ್ಥಿಗಳು ತೆರಳಲು ಪರದಾಡುವಂತಾಯಿತು. ಮುAಜಾನೆಯಿAದ ಆರಂಭವಾದ ಮಳೆ ಬೆಳಿಗ್ಗೆ ೯.೩೦ ಗಂಟೆಯಾದರೂ ಸುರಿದಿದ್ದರಿಂದ ಮಳೆಯಲ್ಲೇ ಸರ್ಕಾರಿ ನೌಕರರು, ಕಾಲೇಜು ವಿದ್ಯಾರ್ಥಿಗಳು ಜರ್ಕಿನ್ ಧರಿಸಿ ಛತ್ರಿಗಳನ್ನು ಹಿಡಿದು ತೆರಳುತ್ತಿದ್ದ ದೃಶ್ಯಗಳು ಕಂಡು ಬಂದವು. ನಗರದ ದಿಬ್ಬೂರಿಗೆ ಸಂಪರ್ಕ ಹೊಂದಿರುವ ಗಾರ್ಡನ್ ರಸ್ತೆಯಲ್ಲಿ ಮ್ಯಾನ್ ಹೋಲ್ ತುಂಬಿ ಕೊಳಚೆ ನೀರು ಮಳೆ ನೀರಿನೊಂದಿಗೆ ರಸ್ತೆಯಲ್ಲಿ ಹರಿಯುತ್ತಿರುವುದರಿಂದ ಈ ಭಾಗದಲ್ಲಿ ಸಂಚರಿಸುವ ಪಾದಚಾರಿಗಳು, ವಾಹನ ಸವಾರರು ತೀವ್ರ ಪ್ರಯಾಸ ಪಡುವಂತಾಗಿದೆ. ಮಳೆ ನೀರಿದೊಂದಿಗೆ ಕೊಳಚೆ ನೀರು ಮಿಶ್ರಣಗೊಂಡಿರುವುದರಿAದ ಈ ರಸ್ತೆಯಲ್ಲಿ…