ತುಮಕೂರು: ನಗರದ ಶ್ರೀ ಸಿದ್ಧಾರ್ಥ ಎಂಜಿನಿಯರಿAಗ್ ಕಾಲೇಜಿನ ಕ್ಯಾಂಪಸ್‌ನಲ್ಲಿ ಏರ್ಪಟ್ಟಿದ್ದಎರಡು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಕಲಾವೈಭವ ಕಲೋತ್ಸವ-೨೫ದಲ್ಲಿ ಕನ್ನಡಸಿನಿ ತಾರೆಯರದಂಡು ಪಾಲ್ಗೊಳ್ಳುವ ಮೂಲಕ ಮೆರಗುತಂದರೆ, ಇಂಜಿನಿಯರಿAಗ್ ವಿದ್ಯಾರ್ಥಿಗಳ ಕಲಾ ಕೌಶಲ್ಯ ಸಿರಿವಂತಿಕೆ ಅನಾವರಣಗೊಂಡಿದೆ. ಶನಿವಾರ ಸಂಜೆ ನಡೆದ ಸಮರೋಪ ಮತ್ತು ಬಹುಮಾನ ವಿರತಣೆ ಕಾರ್ಯಕ್ರಮದಲ್ಲಿ ಸಿನಿ ತಾರೆಯರರಾದ ನಟ ಅನಿರುದ್ದ ಮತ್ತು ದಿಗಂತ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಇಬ್ಬರೂ ನಟರು ಕ್ಯಾಂಪಸ್‌ನಲ್ಲಿ ಗಿಡನೆಟ್ಟು ಆನಂತರ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸನ್ಮಾನ ಸ್ವೀಕರಿಸಿ ಮಾತನಾಡಿದ ನಟ ಅನಿರುದ್ದ ಅವರು, ಕಾಲೇಜಿನ ಹಸಿರು ಕ್ಯಾಂಪಸ್ ಉಳಿಸಿಕೊಳ್ಳುವ ಆಂದೋಲನದ ಭಾಗವಾಗಿ ಗಿಡ ನೆಟ್ಟು ಪರಿಸರ ಉಳಿಸಿದ್ದರಿ. ಈ ಸಾಮಾಜಿಕ ಕಳಕಳಿಯ ಕೆಲಸ ಮುಂದುವರಿಯಲಿ. ಬುದ್ದನ ತತ್ವಾದರ್ಶಗಳು ಎಲ್ಲರಿಗೂ ಆದರ್ಶವಾಗಲಿ. ಅವರ ಚಿಂತನೆಯ ಮಾತುಗಳು ಭವಿಷ್ಯಕ್ಕೆ ನಾಂದಿ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಯ ಜೊತೆ ಸಾಮಾಜಿಕ ಕಳಕಳಿಯ ಬದ್ದತೆಯನ್ನು ಮೈಗೂಢಿಸಿಕೊಳ್ಳಿ ಎಂದು ಕರೆ ನೀಡಿದರು. ಮತ್ತೋರ್ವ ನಟ ದಿಗಂತ್ ಮಾತನಾಡಿ, ಕಾಲೇಜ್ ವಾತಾವರಣ ಹಸಿರುಮಯವಾಗಿದೆ. ಕಾಲೇಜಿನಲ್ಲಿ…
Author: News Desk Benkiyabale
ತುಮಕೂರು: ಸ್ಲಂ ಜನರಿಗೆ ನೀಡಿರುವ ಚುನಾವಣೆ ಪ್ರಣಾಳಿಕೆಯ ಭರವಸೆಗಳನ್ನು ಹಾಗೂ ಭೂಮಿ, ವಸತಿಗೆ ಸಂಬAಧಿಸಿದ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸಬೇಕು ಎಂದು ತುಮಕೂರು ನಗರ ಶಾಸಕ ಜ್ಯೋತಿಗಣೇಶ್ ತಿಳಿಸಿದರು. ನಗರದಲ್ಲಿ ಭಾನುವಾರ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಸ್ಲಂ ಸಮಿತಿ ಯಿಂದ ಮಹಾನಗರ ಪಾಲಿಕೆ ಆವರಣದಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಅವರ ಪುತ್ತಳಿಗೆ ಪುಷ್ಪ ನಮನ ಸಲ್ಲಿಸಿ ಸ್ಲಂ ಜನರ ಸಾಂಸ್ಕೃತಿಕ ಕಲಾ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ನಗರದಲ್ಲಿರುವ ಸ್ಲಂ ಜನರು ಕನಿಷ್ಟ ಸೌಲಭ್ಯದಲ್ಲಿ ಬದುಕುತ್ತಿದ್ದು ಸಂವಿಧಾನದ ಸಾಮಾಜಿಕ ನ್ಯಾಯವನ್ನು ಈ ಜನರಿಗೆ ತಲುಪಿಸಲು ಈಗಿನ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡ ಞಬೇಕು ಲ್ಯಾಂಡ್ ಬ್ಯಾಂಕ್, ವಸತಿ ಹಕ್ಕು ಕಾಯಿದೆ ಮತ್ತು ನಗರ ಉದ್ಯೋಗ ಖಾತ್ರಿ ಜಾರಿಗೆ ಈಗಾಗಲೇ ವಿಧಾನ ಸಭೆಯಲ್ಲಿ ಸಂಘಟನೆ ನೀಡಿದ ಮಾಹಿತಿ ಆಧಾರಿಸಿ ಪ್ರಶ್ನೆ ಕೇಳಲಾಗಿದೆ. ತುಮಕೂರಿನ ವಸತಿ ರಹಿತರಿಗೆ ಮತ್ತು ಕೋಡಿಹಳ್ಳ, ಇಸ್ಮಾಯಿಲ್ ನಗರ ಹಂದಿ ಜ್ಯೋಗಿಗಳಿಗೆ ಶೀಘ್ರದಲ್ಲೇ ವಸತಿ ಹಂಚಿಕೆ ಮಾಡಲು…
ತುಮಕೂರು: ಪರಿಶಿಷ್ಟ ಜಾತಿಯ ೧೦೧ ಉಪ ಪಂಗಡಗಳ ನಿಖರ ಜನಸಂಖ್ಯೆ ತಿಳಿಯಲು ಹಾಗೂ ಅವರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಔಧ್ಯೋಗಿಕ ಸ್ಥಾನ, ಮಾನಗಳ ತಿಳಿಯಲು ಅನುಕೂಲವಾಗುವಂತೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೆಚ್.ಎಸ್.ನಾಗ ಮೋಹನದಾಸ್ ಆಯೋಗವನ್ನು ಸರ್ಕಾರ ರಚಿಸಿದ್ದು ಈ ಹಿನ್ನೆಲೆಯಲ್ಲಿ ಗಣತಿದಾರರು ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸು ವಾಗ ಪೂರ್ಣ ಮಾಹಿತಿ ಪಡೆಯದೆ ಅಪೂರ್ಣ ಮಾಹಿತಿಯನ್ನು ಒಳಗೊಂಡ ನಮೂನೆಗೆ ಮಾಹಿತಿದಾರರ ಸಹಿ ಪಡೆದು ಬರುತ್ತಿರುವ ಬಗ್ಗೆ ಮಾಹಿತಿ ಬಂದಿರುವುದಾಗಿ ಜಿ.ಪಂ. ಮಾಜಿ ಅಧ್ಯಕ್ಷ ವೈ.ಹೆಚ್. ಹುಚ್ಚಯ್ಯ ತಿಳಿಸಿದರು. ನಗರದಲ್ಲಿ ಇಂದು ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರ ಮತ್ತು ಜಿಲ್ಲಾಡಳಿತ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಗಣತಿದಾರರು ಪೂರ್ಣ ಪ್ರಮಾಣದಲ್ಲಿ ಮಾಹಿತಿ ಪಡೆದು ಒಳ ಮೀಸಲಾತಿ ವರ್ಗೀಕರಣ ಮತ್ತು ನಿಖರ ಜನಸಂಖ್ಯೆ ತಿಳಿಯುವ ಆಯೋಗದ ಉದ್ದೇಶ ಸಂಪೂರ್ಣವಾಗಿ ಯಶಸ್ವಿಗೊಳ್ಳು ವಂತೆ ಅಗತ್ಯ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು. ಒಳ ಮೀಸಲಾತಿ ಸಮೀಕ್ಷೆಯ ಅರ್ಜಿ ನಮೂನೆಯಲ್ಲಿ ೨-೩ ವಿಷಯಗಳನ್ನು ನಮೂದಿಸದೆ ಸಹಿ ಪಡೆಯುತ್ತಿರುವ ಬಗ್ಗೆ ಆರೋಪ…
ಶಿರಾ: ವಿಶೇಷ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ತುಮುಲ್ ನಿರ್ದೇಶಕ ಎಸ್. ಆರ್.ಗೌಡ ಜಿಲ್ಲೆಯಲ್ಲೇ ಪ್ರಥಮ ಭಾರಿಗೆ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಗಳಿಗೆ ಶಿರಾ ನಗರದ ನಂದಿನಿ ಕ್ಷೀರ ಭವನದಲ್ಲಿ ಜಿಲ್ಲಾ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು ತುಮಕೂರು ಜಿಲ್ಲಾ ಸಹಕಾರ ಯೂನಿಯನ್ ನಿ., ತುಮಕೂರು ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ತುಮಕೂರು ಹಾಗೂ ಸಹಕಾರ ಇಲಾಖೆ, ತುಮಕೂರು ಇವರ ಸಹಯೋಗದಲ್ಲಿ ಅಮ್ಮಿಕೊಂಡಿದ್ದು, ಈ ವಿಶೇಷ ತರಬೇತಿಯನ್ನು ತಾಲ್ಲೂಕಿನ ಎಲ್ಲಾ ಹಾಲಿನ ಉತ್ಪಾದಕರ ಸಂಘದ ಕಾರ್ಯದರ್ಶಿಗಳು ಸದುಪಯೋಗ ಪಡಿಸಿಕೊಂಡು, ಈ ತರಬೇತಿ ಕಾರ್ಯಾಗಾರದಲ್ಲಿ ಮುಖ್ಯವಾಗಿ ಕಾರ್ಯದರ್ಶಿಗಳ ಕರ್ತವ್ಯ ಮತ್ತು ಜವಾಬ್ದಾರಿ, ಕಡತಗಳ ನಿರ್ವಹಣೆ ಹಾಗೂ ಸಹಕಾರ ಸಂಘಗಳ ಚುನಾವಣೆ ನಡೆಸುವ ವಿಧಿ ವಿಧಾನಗಳು ಮತ್ತು ಇತ್ತೀಚಿನ ಕಾನೂನು ತಿದ್ದುಪಡಿ ಅಂಶಗಳ ಹಾಗೂ ಪ್ರಮುಖವಾಗಿ ಶುದ್ಧ ಹಾಲು ಉತ್ಪಾದನೆ ಬಗ್ಗೆ ಕುರಿತು ತರಬೇತಿ ನೀಡಲಾಗುವುದು ಎಂದು ತಿಳಿಸಿದರು.…
ಚಿಕ್ಕನಾಯಕನಹಳ್ಳಿ: ಎಸ್ ಸಿ ಎಸ್ ಟಿ ಜನಾಂಗದವರಲ್ಲಿನ ಬಡವರ ಆರ್ಥಿಕ ಸದೃಡತೆಗಾಗಿ ಪಶುಸಂಗೋಪನಾ ಇಲಾಖೆಯವತಿಯಿಂದ ಕುಕ್ಕುಟಪಾಲನೆಗಾಗಿ ಉಚಿತವಾಗಿ ನಾಟಿಕೋಳಿ ಮರಿಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು. ಪಟ್ಟಣದ ಪಶುಸಂಗೋಪನಾ ಇಲಾಖೆಯಲ್ಲಿ ಶುಕ್ರವಾರ ಕುಕ್ಕುಟಪಾಲನೆಗಾಗಿ ಅರ್ಹ ಪಲಾನುಭವಿಗಳಿಗೆ ಕೋಳಿಮರಿಗಳನ್ನು ನೀಡಿ ಮಾತನಾಡಿದ ಅವರು ತಾಲ್ಲೂಕಿನಲ್ಲಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಬಡವರನ್ನು ಗುರುತಿಸಿ ತಾಲ್ಲೂಕಿನ ೬೭ಜನ ಮಹಿಳಾ ಪಲಾನು ಭವಿಗಳಿಗೆ ಒಬ್ಬರಿಗೆ ೨೧ ನಾಟಿ ಕೋಳಿಮರಿಗಳನ್ನು ವಿತರಣೆ ಮಾಡುತ್ತಿದ್ದು ಇದನ್ನು ಮಹಿಳೆಯರು ಚೆನ್ನಾಗಿ ಬೆಳೆಸಿ ಮೊಟ್ಟೆಗಳನ್ನು ಮಾರಾಟ ಮಾಡುವುದು ಹಾಗೂ ತಿನ್ನುವ ಮೂಲಕ ಉತ್ತಮ ಆರೋಗ್ಯ ಪಡೆಯಿರಿ ಕೋಳಿಯನ್ನು ಉತ್ತಮವಾಗಿ ಸಾಕಿ ಅವುಗಳನ್ನೇ ಕುಯ್ದುಕೊಂಡು ತಿನ್ನಬೇಡಿ ನಿಮ್ಮ ಕೌಟುಂಬಿಕ ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ ಎಂದರು. ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ರೆ.ಮ.ನಾಗಭೂಷಣ್ ಮಾತನಾಡಿ ತುಮಕೂರು ಜಿಲ್ಲಾಪಂಚಾಯತಿ ವತಿಯಿಂದ ಕುಕ್ಕುಟಪಾಲನೆಗಾಗಿ ಕೋಳಿ ಮರಿಗಳನ್ನು ಅರ್ಹ ಪಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆಮಾಡಲಾಗಿದೆ ಬಡ ರೈತ ಮಹಿಳೆಯರಿಗಾಗಿ ಇದ್ದು ಚೆನ್ನಾಗಿ ಸಾಕಿ…
ಕೊರಟಗೆರೆ: ೨೦೧೮ರಿಂದ ೨೦೨೫ರವರೆಗೆ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಶಿವಗಂಗಾ ಚಿತ್ರಮಂದಿರದ ಮಾಲೀಕನಿಗೆ ಪ.ಪಂಚಾಯಿತಿ ಅಧಿಕಾರಿ ವರ್ಗ ಶುಕ್ರವಾರ ಬಿಗ್ ಶಾಕ್ ನೀಡಿದ್ದು ಚಿತ್ರಮಂದಿರ, ಕಲ್ಯಾಣಮಂಟಪ, ಹೋಟೆಲ್ ಜಪ್ತಿ ಮಾಡಿ ೩ದಿನದ ಒಳಗೆ ಕಂದಾಯ ಪಾವತಿ ಮಾಡುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಕೊರಟಗೆರೆ ಪಟ್ಟಣ ಪಂಚಾಯಿತಿಯ ವಾರ್ಡ್ ನಂ.೧ರ ಗಂಗಾಧರಯ್ಯ ಬಿನ್ ಬಸೇಟಪ್ಪ ಖಾತೆ ನಂ.೩೭/೩೭ರ ಬಾಕಿ ಇರುವ ಆಸ್ತಿ ತೆರಿಗೆಯನ್ನು ೧೯೬೪ರ ಕಲಂ ಪುರಸಭಾ ಕಾಯ್ದೆ ಮತ್ತು ಸ್ವಯಂ ಘೋಷಣೆ ತೆರಿಗೆ ಪದ್ಧತಿಯಂತೆ ನಿಯಾಮನುಸಾರ ಪಾವತಿಸಬೇಕು. ಪ.ಪಂಚಾಯ್ತಿಯಿAದ ಈಗಾ ಗಲೇ ತೆರಿಗೆ ಪಾವತಿಸುವಂತೆ ೨೦೧೮ರಿಂದ ೨೦೨೨ರವರೆಗೆ ೬ಬಾರಿ ತಿಳುವಳಿಕೆ ನೋಟಿಸ್ ನೀಡಿದ್ದು ಅಂತಿಮವಾಗಿ ನೋಟಿಸ್ ರಿಜಿಸ್ಟರ್ ಮೂಲಕ ಕಳುಹಿಸಲಾಗಿತ್ತು. ತಿಳುವಳಿಕೆ ಪತ್ರ ಸ್ವೀಕರಿಸದೆ ತಿರಸ್ಕೃತ ಮಾಡಿದ ಕಾರಣ ಶಿವಗಂಗಾ ಚಿತ್ರಮಂದಿರಕ್ಕೆ ಮತ್ತು ಕಲ್ಯಾಣ ಮಂಟಪ, ಹೋಟೆಲ್ ಜಪ್ತಿ ಮಾಡಿ ಮಾಲೀಕನಿಗೆ ಪ.ಪಂಚಾಯಿತಿ ಅಧಿಕಾರಿಗಳು ಶುಕ್ರವಾರ ಬಿಗ್ ಶಾಕ್ ನೀಡಿದ್ದು, ಪಾವತಿಸಬೇಕಾಗಿರುವುದು ತಪ್ಪಿದಲ್ಲಿ ೧೪೩ರಂತೆ ಕ್ರಮ ಕೈಗೊಳ್ಳಲಾಗುವುದು ಎಂಬ ಅಂಶವನ್ನು ಅಂತಿಮ…
ತುಮಕೂರು: ಶರಣ ಶರಣೆಯರ ವಚನಗಳಲ್ಲಿ ಬದುಕಿಗೆ ಬೇಕಾದ ಆದರ್ಶ ಮೌಲ್ಯಗಳೇ ತುಂಬಿವೆ ಎಂದು ತುಮಕೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳು, ಖ್ಯಾತ ಮಿಮಿಕ್ರಿ ಹಾಸ್ಯ ಕಲಾವಿದರಾದ ಈಶ್ವರಯ್ಯ ನವರು ನುಡಿದರು. ತುಮಕೂರು ಜಿಲ್ಲಾ, ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು, ಗ್ಲೋಬಲ್ ಪೀಸ್ ಸಂಯುಕ್ತವಾಗಿ “ತುಮಕುರು ಚಂದಯ್ಯ ಟಿ.ಎಸ್. ಭಾಗೀರಥಮ್ಮ’’ ದತ್ತಿ ಉಪನ್ಯಾಸ ನೀಡುತ್ತಿದ್ದರು. ೧೨ನೇ ಶತಮಾನ ಕನ್ನಡ ನಾಡಿನ ಸಾಹಿತ್ಯದ ಆಸ್ತಿ. ನಮ್ಮ ನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ತುಂಬಿಕೊAಡಿದೆ. ಆಬಾಲ ವೃದ್ಧರಾಗಿ ಎಲ್ಲರೂ ಪಾಲಿಸಬೇಕಾದ ಮೌಲ್ಯಗಳು ದಾರಿದೀಪಗಳಾಗಿವೆ ಎಂದು ಶರಣ ಶರಣೆಯರ ವಚನಗಳನ್ನು ಪ್ರಾಸಂಗಿಕವಾಗಿ ಉದಾಹರಿಸುತ್ತಾ ಇಂದಿನ ಆ ಧುನಿಕ ಯುವಜನಾಂಗಕ್ಕೆ ವಚನಗಳ ಅಧ್ಯಯನ ಎಂದಿಗಿAತ ಇಂದು ಮುಖ್ಯ ಎಂದರು. ದೀಪ ಬೆಳಗಿಸಿ ದತ್ತಿ ಕಾರ್ಯಕ್ರಮ ಉದ್ಘಾಟನೆ ಮಾಡಿದ ನಿವೃತ್ತ ಇಂಜಿಯರಿAಗ್ ಪ್ರಾಧ್ಯಾಪಕರಾದ ಪಿ.ಎಂ.ಚAದ್ರಶೇಖರಯ್ಯ ನವರು ಮಾತನಾಡುತ್ತಾ ಶರಣರ ವಚನಗಳು ಕಾವ್ಯಗಳಲ್ಲ, ಪುರಾಣಗಳಲ್ಲ, ಕಾಲ ಕಳೆದು ರಂಜಿಸುವ ಸಾಹಿತ್ಯ ಪ್ರಕಾರಗಳಲ್ಲ. ವಚನಗಳಲ್ಲಿ ಜೀವನದ ಅನುಭವದ ಮೂಸೆಯಿಂದ ಹೊರ ಬಂದ…
ಚಿಕ್ಕನಾಯಕನಹಳ್ಳಿ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಅಧಿಕ ರಕ್ತದೊತ್ತಡದಿನಾರಣೆ ಆಚರಿಸಲಾಯಿತು. ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಸಾರ್ವಜನಿಕ ಆಸ್ಪತ್ರೆಯ ಸಹಯೋಗದಲ್ಲಿ ನಡೆದಕಾರ್ಯಕ್ರಮದಲ್ಲಿ ಹೃದಯರೋಗ ತಜ್ಙ ಡಾ. ನಟರಾಜ್ ರವರು ರಕ್ತದೊತ್ತಡದ ತಪಾಸಣೆ, ಚಿಕಿತ್ಸೆ, ಸಮತೋಲನ ಆಹಾರದ ಕುರಿತು ಮಾಹಿತಿ ನೀಡಿ ದುಶ್ಚಟಗಳಿಂದ ದೂರವಿರಬೇಕೆಂದರು. ಹಿರಿಯ ತಜ್ಞವೈದ್ಯರಾದ ಚೇತನ್ ಮಾತನಾಡಿ, ರಕ್ತದೊತ್ತಡ ನಿಯಂತ್ರಣಿಸಲು ಆಹಾರ ಕ್ರಮದಲ್ಲಿ ಬದಲಾವಣೆ ಹಾಗೂ ದೈಹಿಕ ಹಾಗೂ ಮಾನಸಿಕವಾಗಿ ಶಾಂತಿ ಯಿಂದಿರಲು ಧ್ಯಾನ ಹಾಗೂ ಯೋಗಗಳು ಹೆಚ್ಚು ಪರಿಣಾಮಕಾರಿಯಾಗಲಿದೆ ಎಂದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಯಶವಂತ್ ರವರು ಗೃಹ ಆರೋಗ್ಯ ಹಾಗೂ ಎನ್‌ಸಿಡಿ ವಿಬಾಗದ ಚಟುವಟಿಕೆಗಳ ಮಾಹಿತಿ ನೀಡಿದರು. ಡಾ, ಕವಿತ ಮಾತನಾಡಿ, ಗರ್ಭಿಣಿಯರು ಆ ಸಂದರ್ಭದಲ್ಲಿ ನಿರ್ವಹಿಸಬೇಕಾದ ಆರೋಗ್ಯ ತಪಾಸಣೆ ಹಾಗೂ ವೈದ್ಯರ ಸಲಹೆಯಿಲ್ಲದೆ ಯಾವುದೇ ಔಷಧಪ್ರ ಯೋಗಗಳನ್ನು ಮಾಡಬಾರದಾಗಿ ಎಚ್ಚರಿಸಿದರು. ಆರೋಗ್ಯ ರಕ್ಷಾ ಸಮಿತಿ ಸದಸ್ಯ ಕೆ.ಜೆ. ಕೃಷ್ಣೇಗೌಡ ಹಾಗೂ ಜಾಕೀರ್‌ಹುಸೇನ್ ಮತ್ತು ಕೀರ್ತಿ ಮಾತ ನಾಡಿ, ಸರ್ಕಾರಿ ಆಸ್ಪತ್ರೆಯಲ್ಲಿ ದೊರೆಯುವ ವೈದ್ಯರ ಸೇವೆ ಹಾಗೂ…
ಪಟ್ಟ ನಾಯಕನಹಳ್ಳಿ: ಗ್ರಾಮೀಣ ಪ್ರದೇಶಗಳ ರಸ್ತೆಗಳ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡುವ ಉದ್ದೇಶದಿಂದ ೫೦. ಕೋಟಿ ರೂಪಾಯಿ ವೆಚ್ಚ ದಲ್ಲಿ ಶಿರಾ ತಾಲೂಕಿನ ವಿವಿಧ ಭಾಗಗಳ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಗುಣಮಟ್ಟದ ಕಾಮಗಾರಿ ಮಾಡುವ ಮೂಲಕ ಜನ ಮೆಚ್ಚುವಂತಹ ಕಾಮಗಾರಿ ಮಾಡಿ ಪೂರೈಸಬೇಕು ಎಂದು ದೆಹಲಿ ವಿಶೇಷ ಪ್ರತಿನಿಧಿ ಶಾಸಕ ಟಿ.ಬಿ.ಜಯಚಂದ್ರ ಹೇಳಿದರು. ಶಿರಾ ತಾಲೂಕಿನ ಪಟ್ಟ ನಾಯಕನಹಳ್ಳಿ ಕ್ರಾಸ್ ನಿಂದ ಉದ್ದ ರಾಮನಹಳ್ಳಿ ವರೆಗೆ ೧. ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಂಡಿರುವ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ದೂರ ದೃಷ್ಟಿ ಚಿಂತನೆಯೊAದಿಗೆ ಹೇಮಾವತಿ ನೀರು ಶಿರಾ ತಾಲೂಕಿಗೆ ಹರಿಸಿರುವ ಕಾರಣ ಅಂತರ್ಜಲ ಹೆಚ್ಚಾಗಿ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ನೀಗಿದೆ. ಎತ್ತಿನ ಹೊಳೆ ಕಾಮಗಾರಿ ಕೂಡ ಶೀಘ್ರದಲ್ಲಿಯೇ ಮುಗಿ ಯಲಿದ್ದು, ಈ ಯೋಜನೆಯಿಂದ ಹಲವಾರು ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಕ್ರಿಯಾಯೋಜನೆ ರೂಪುಗೊಂಡಿದೆ ಎಂದರು. ನಾದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್,…
ತುಮಕೂರು: ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ-೨ ಮೇ ೨೬ ರಿಂದ ಜೂನ್ ೨ರವರೆಗೆ ನಡೆಯಲಿದ್ದು, ಪರೀಕ್ಷೆಯನ್ನು ಯಾವುದೇ ಲೋಪ ದೋಷವಿಲ್ಲದಂತೆ ಸುಸೂತ್ರವಾಗಿ ನಡೆಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ನ್ಯಾಯಿಕ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ ೩೫ ಪರೀಕ್ಷಾ ಕೇಂದ್ರಗಳ ಪ್ರತಿ ಕೊಠಡಿಯಲ್ಲಿ ಸಿಸಿ ಟಿವಿ ಅಳವಡಿಸಿರುವ ಹಾಗೂ ಎಲ್ಲಾ ಕೇಂದ್ರಗಳಲ್ಲಿ ಮೂಲಭೂತ ಸೌಲಭ್ಯಗಳಿರುವ ಬಗ್ಗೆ ದೃಢಪಡಿಸಿಕೊಳ್ಳಬೇಕು. ಪರೀಕ್ಷೆಗೆ ನೋಂದಾಯಿಸಿಕೊAಡಿರುವ ೧೧೯೫೧ ಮಕ್ಕಳಿಗೆ ಸುಗಮವಾಗಿ ಪರೀಕ್ಷೆ ಬರೆಯಲು ವ್ಯವಸ್ಥೆ ಕಲ್ಪಿಸಬೇಕು ಎಂದು ನಿರ್ದೇಶನ ನೀಡಿದರು. ಡಿಡಿಪಿಐ ಮನಮೋಹನ ಮಾತನಾಡಿ, ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯಲ್ಲಿ ೨೨ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ೭೪೨೯ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾ ಯಿಸಿಕೊಂಡಿದ್ದಾರೆ ಎಂದು ತಿಳಿಸಿದರು. ಮಧುಗಿರಿ ಡಿಡಿಪಿಐ ಗಿರಿಜಾ ಸಭೆಗೆ ಮಾಹಿತಿ ನೀಡುತ್ತಾ, ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ೧೩ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ೪೫೨೨ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾ ಯಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು. ಪರೀಕ್ಷಾ ಕೇಂದ್ರಗಳಿಗೆ ಸಕಾಲದಲ್ಲಿ…