Author: News Desk Benkiyabale

ಕೊರಟಗೆರೆ: ತಾಲೂಕಿನ ಸಿ.ಎನ್.ದುರ್ಗಾ ಹೋಬಳಿಯ ಬುಕ್ಕಾಪಟ್ಟಣ ಗ್ರಾಮದ ಕಾವಲಮ್ಮನಗರದಲ್ಲಿ ಸ್ವಚ್ಛತೆ ಸಂಪೂರ್ಣ ಮರೀಚಿಕೆಯಾಗಿದ್ದು, ಚರಂಡಿ ನೀರಿನಲ್ಲಿ ಪ್ರತಿನಿತ್ಯ ಅಂಗನವಾಡಿ ಮಕ್ಕಳ, ಗ್ರಾಮಸ್ಥರು ದಿನನಿತ್ಯ ನರಕಯಾತನೆ ಅನುಭವಿಸುತ್ತಿದ್ದು, ಸ್ಥಳಕ್ಕೆ ತಾಪಂ ಇಒ ಬೇಟಿ ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ದೂರಿದರು. ಕಾವಲಮ್ಮನಗರದಲ್ಲಿ ಸುಮಾರು ೫೦ಕ್ಕೂ ಹೆಚ್ಚು ಮನೆಗಳು ನಿರ್ಮಾವಾಗಿದ್ದು ಇಲ್ಲಿಗೆ ಮೂಲ ಸೌಕರ್ಯ ಮರೀಚಿಕಯಾಗಿದೆ. ಚರಂಡಿ ನೀರು ಮುಖ್ಯ ರಸ್ತೆಯಲ್ಲಿರುವ ಅಂಗನವಾಡಿ ಮುಂದೆ ಹರಿಯುತ್ತಿದ್ದು,ಚರಂಡಿ ಇಲ್ಲದೇ ಕೊಳಚೆ ನೀರು ರಸ್ತೆ ತುಂಬ ಹರಿಯುತ್ತಿದ್ದರೂ ಗ್ರಾಪಂ ಅಧಿಕಾರಿಗಳು ಕಚೇರಿಗೆ ಸೀಮಿತವಾಗಿದ್ದಾರೆ ಎಂದು ಗ್ರಾಮಸ್ಥರು ಅಧಿಕಾರಿಗಳ ವಿರುದ್ದ ಗುಡುಗಿದರು. ಇನ್ನೂದು ರಸ್ತೆಯಲ್ಲಿ ಸಿಸಿ ರಸ್ತೆಯ ಮಧ್ಯೆದಲ್ಲಿ ಕಾಲುವೆ ಮಾಡಿ ನೀರು ಹೋಗಲು ಮಾಡಿದ್ದಾರೆ. ಆ ಕಾಲುವೆಗೆ ಈಗಾಗಲೇ ಅನೇಕರು ಬಿದ್ದು ಕೈಕಾಲು ಮುರಿದುಕೊಂಡು ಆಸ್ಪತ್ರೆಗೆ ದಾಖಲಾಗಿರುವ ಪ್ರಕರಣಗಳು ಕಾಣಬಹುದಾಗಿದೆ. ವಾಹನ ಸವಾರರ ಸಂಚಾರಕ್ಕೆ ತೀವ್ರ ಅಡಚಣೆಯುಂಟಾಗಿದೆ. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಕಲಷಿತ ನೀರು ರಸ್ತೆಯ ಮೇಲೆ ಹರಿದು ಕಸ, ಪ್ಲಾಸ್ಟಿಕ್ ತ್ಯಾಜ್ಯ…

Read More

ತುಮಕೂರು: ಶಾಲೆ ಬಿಟ್ಟ ನಂತರ ಸ್ನೇಹಿತರನ್ನು ಭೇಟಿ ಮಾಡುವುದೇ ಕಷ್ಟ ಅಂತಹುದರಲ್ಲಿ ಪ್ರೌಢಶಾಲೆಯಲ್ಲಿ ಕಲಿತ ಎಲ್ಲಾ ಸ್ನೇಹಿತರನ್ನು ಕಲೆ ಹಾಕಿ ತಮಗೆ ವಿದ್ಯಾಭ್ಯಾಸ ಕಲಿಸಿದ ಗುರುಗಳಿಗೆ ಗುರುವಂಧನೆ ಅರ್ಪಿಸಿ ಧನ್ಯತೆ ಮೆರೆದ ಭಾವನಾತ್ಮಕ ಕ್ಷಣಕ್ಕೆ ಊರುಕೆರೆಯ ಸರ್ಕಾರಿ ಪ್ರೌಢಶಾಲೆ ಸಾಕ್ಷಿಯಾಯಿತು. ಊರುಕೆರೆ ಸರ್ಕಾರಿ ಪ್ರೌಢಶಾಲೆಯ ೧೯೯೮-೯೯ ನೇ ಸಾಲಿನಲ್ಲಿ ಪ್ರೌಢಶಾಲೆಯಲ್ಲಿ ವಿದ್ಯಾಬ್ಯಾಸ ಮಾಡಿದ ಎಲ್ಲಾ ವಿದ್ಯಾರ್ಥಿಗಳು ೨೬ ವರ್ಷಗಳ ನಂತರ ಸ್ನೇಹಸಮ್ಮಿಲದ ಹೆಸರಲ್ಲಿ ಒಂದೇ ವೇದಿಕೆಯಡಿ ಸೇರಿ ಕಷ್ಟ ಸುಖ ಹಾಗೂ ಶಾಲಾ ದಿನಗಳನ್ನು ನೆನಪಿಸಿಕೊಂಡು ಸಂಭ್ರಮಿಸಿದರು. ಶಾಲಾ ದಿನಗಳಲ್ಲಿ ತುಂಟಾಟ ಮಾಡಿ ಶಿಕ್ಷಕರಿಂದ ಒದೆ ತಿಂದದ್ದು,ಶಾಲೆಗೆ ಚಕ್ಕರ್ ಹಾಕಿದ ದಿನಗಳು, ಸ್ನೇಹಿತರೊಂದಿಗೆ ಜಗಳ ಆಡಿದ್ದು ಎಲ್ಲಾ ಅಮೂಲ್ಯ ಕ್ಷಣಗಳನ್ನು ಸ್ನೇಹಿತರೆಲ್ಲಾ ಮೆಲಕು ಹಾಕಿದರು. ಪ್ರೌಢಶಾಲಾ ದಿನಗಳಲ್ಲಿ ಸ್ಟಿçಕ್ಟ್ ಪ್ರಾಂಶುಪಾಲರಾದ ಗೋವಿಂದರಾಜು ಅವರು ವಿದ್ಯಾರ್ಥಿಗಳಲ್ಲಿ ಇಟ್ಟಿದ್ದ ಭಯವನ್ನು ೨೬ ವರ್ಷಗಳ ಬಳಿಕವೂ ವಿದ್ಯಾರ್ಥಿಗಳೆಲ್ಲರೂ ನೆನಪಿಸಿಕೊಂಡರು. ತಮ್ಮ ಶಾಲಾ ದಿನಗಳಲ್ಲಿ ಸಹಪಾಟಿಗಳಾಗಿದ್ದು ಮೃತಪಟ್ಟಿರುವ ಸ್ನೇಹಿತರಿಗೆ ಹಾಗೂ ಶಿಕ್ಷಕರಿಗೆ ಇದೇ ವೇಳೆ ಶ್ರದ್ದಾಂಜಲಿ ಸಲ್ಲಿಸಲಾಯಿತು…

Read More

ಹುಳಿಯಾರು: ಹುಳಿಯಾರಿನ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಪತ್ತೆಯಾಗಿರುವ ನೂರಾರು ಸ್ಯಾನಿಟರಿ ಪ್ಯಾಡ್‌ಗಳ ರಾಶಿಯ ಹಿಂದೆ ದಶಕಗಳ ಇತಿಹಾಸವಿರುವ ಭೀಕರ ಬೇಜವಾಬ್ದಾರಿತನ ಹಾಗೂ ಆಡಳಿತಾತ್ಮಕ ನಿರ್ಲಕ್ಷ÷್ಯ ಅಡಗಿರುವುದು ಈಗ ಬೆಳಕಿಗೆ ಬಂದಿದೆ. ಹಿಂದೆ ವಿತರಿಸದೆ ಕೊಠಡಿಯಲ್ಲಿ ಕೂಡಿಟ್ಟು ಹಳತಾಗಿದ್ದ ಈ ಸಾಮಗ್ರಿಗಳನ್ನು, ಈಗ ಕಟ್ಟಡ ದುರಸ್ತಿಯ ನೆಪದಲ್ಲಿ ಕಾಲೇಜಿನ ಕಾಂಪೌAಡ್‌ನ ಮೂಲೆಯಲ್ಲಿ ಅತ್ಯಂತ ಅವೈಜ್ಞಾನಿಕವಾಗಿ ಎಸೆದಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಎಲ್‌ಪಿಬಿಎಸ್ ಶಾಲಾ ಕಟ್ಟಡದಲ್ಲೇ ಉಳಿದಿದ್ದ ಸೌಲಭ್ಯ!: ವಿಶ್ವಸನೀಯ ಮೂಲಗಳ ಪ್ರಕಾರ, ಈ ಸ್ಯಾನಿಟರಿ ಪ್ಯಾಡ್‌ಗಳು ಇತ್ತೀಚಿನವುಗಳಲ್ಲ. ಈ ಹಿಂದೆ ಎಲ್‌ಪಿಬಿಎಸ್ ಶಾಲೆಯ ಹಳೆಯ ಕಟ್ಟಡದಲ್ಲಿ ಬಾಲಕಿಯರ ಕಾಲೇಜು ನಡೆಯುತ್ತಿದ್ದ ಸಂದರ್ಭದಲ್ಲಿ ‘ಶುಚಿ’ ಯೋಜನೆಯಡಿ ವಿದ್ಯಾರ್ಥಿನಿಯರಿಗೆ ವಿತರಿಸಲು ಇವುಗಳನ್ನು ತರಿಸಲಾಗಿತ್ತು. ಆದರೆ, ಅಂದಿನ ಕಾಲೇಜು ಆಡಳಿತ ಮಂಡಳಿಯು ಅರ್ಹ ಕಿಶೋರಿಯರಿಗೆ ಇವುಗಳನ್ನು ಸಕಾಲದಲ್ಲಿ ವಿತರಿಸದೆ ನಿರ್ಲಕ್ಷ÷್ಯ ವಹಿಸಿತ್ತು. ಪರಿಣಾಮವಾಗಿ, ನೂರಾರು ಪ್ಯಾಕೆಟ್‌ಗಳು ಬಳಕೆಯಾಗದೆಯೇ ಕೊಠಡಿಯೊಳಗೆ ಧೂಳು ಹಿಡಿಯುವಂತಾಗಿತ್ತು. ಕಚೇರಿ ಶಿಫ್ಟ್ ಆಯ್ತು, ಜವಾಬ್ದಾರಿ ಶಿಫ್ಟ್ ಆಗಲಿಲ್ಲ!: ಕೆಲವು ವರ್ಷಗಳ…

Read More

ಚಿಕ್ಕನಾಯಕನಹಳ್ಳಿ: ತಾಲೂಕಿನ ಹುಳಿಯಾರ ನಲ್ಲಿ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಎಚ್. ಡಿ. ಕುಮಾರಸ್ವಾಮಿ ಅವರು ಸೋಮವಾರ ಮುಂಜಾನೆ ಕೇರಳದ ಕೊಚ್ಚಿನ್‌ನಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಾನಕ್ಕೆ ತೆರಳಲು ಸಾಂಪ್ರದಾಯಿಕವಾಗಿ ಮಾಲಾಧಾರಣೆ ಮಾಡಿದರು. ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅವರು ಕೈಗೊಂಡಿರುವ ಮೊದಲ ಪವಿತ್ರ ಯಾತ್ರೆ ಇದಾಗಿದೆ. ಕೊಚ್ಚಿಯಲ್ಲಿರುವ ಶ್ರೀ ಸುಬ್ರಮಣ್ಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿದ ಬಳಿಕ, ತುಮಕೂರು ಜಿಲ್ಲೆಯ ಹುಳಿಯಾರಿನ ಪ್ರಸಿದ್ಧ ಗುರುಸ್ವಾಮಿಗಳಾದ ಎಸ್.ಆರ್.ಎಸ್. ದಯಾನಂದ್ ಸ್ವಾಮಿ ಅವರು ಕುಮಾರಸ್ವಾಮಿ ಅವರಿಗೆ ಮಾಲಾಧಾರಣೆ ಮಾಡಿಸಿದರು. ಇರುಮುಡಿ ಹೊತ್ತು ಪ್ರಯಾಣ: ಮಾಲಾ ಧಾರಣೆಯ ನಂತರ ದೇಗುಲದ ಆವರಣದಲ್ಲೇ ಗುರುಸ್ವಾಮಿಗಳ ನೇತೃತ್ವದಲ್ಲಿ ಸಾಂಪ್ರದಾಯಿಕ ‘ಇರುಮುಡಿ’ ಕಟ್ಟನ್ನು ಸಿದ್ಧಪಡಿಸಲಾಯಿತು. ತದನಂತರ ಸಚಿವರು ಇರುಮುಡಿಯನ್ನು ತಲೆಯ ಮೇಲೆ ಹೊತ್ತುಕೊಂಡು ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಘೋಷಣೆಯೊಂದಿಗೆ ಶಬರಿಮಲೆಯತ್ತ ಪ್ರಯಾಣ ಬೆಳೆಸಿದರು. ಸನ್ನಿಧಾನ ತಲುಪಿದ ಬಳಿಕ ಪಂಪಾ ನದಿಯಲ್ಲಿ ಪುಣ್ಯಸ್ನಾನ ಮುಗಿಸಿ, ಸಂಜೆ ನಡೆಯಲಿರುವ ಪ್ರಸಿದ್ಧ ‘ಪಡಿ ಪೂಜೆ’ ಹಾಗೂ ‘ಪುಷ್ಪಾಭಿಷೇಕ’…

Read More

ಹುಳಿಯಾರು: ಮಾರುಕಟ್ಟೆಯ ಜಂಜಾಟ, ದಲ್ಲಾಳಿಗಳ ಕಮಿಷನ್ ದಂಧೆ ಮತ್ತು ಬೆಲೆ ಕುಸಿತದ ಭೀತಿಯ ನಡುವೆ ರೈತರು ಕಂಗಾಲಾಗಿರುವ ಇಂದಿನ ದಿನಗಳಲ್ಲಿ, ಹುಳಿಯಾರಿನ ರೈತರೊಬ್ಬರು ಅಳವಡಿಸಿಕೊಂಡಿರುವ ‘ನೇರ ಮಾರಾಟ’ದ ತಂತ್ರ ಕೃಷಿ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದೆ. ಹುಳಿಯಾರು ಸಮೀಪದ ಕೆಂಕೆರೆ ಅಡಾಣಿಕಲ್ಲು ಗ್ರಾಮದ ರೈತ ಪರಮೇಶ್, ತಾವು ಬೆಳೆದ ನೇರಳೆ ಹಣ್ಣುಗಳನ್ನು ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ಗ್ರಾಹಕರಿಗೆ ತಲುಪಿಸುವ ಮೂಲಕ ಮಾದರಿಯಾಗಿದ್ದಾರೆ. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಸಿಗುವ ಹಣ್ಣುಗಳು ಕೊಯ್ಲು ಮಾಡಿದ ಮರುದಿನವೋ ಅಥವಾ ಎರಡು ದಿನಗಳ ನಂತರವೋ ಗ್ರಾಹಕರ ಕೈ ಸೇರುತ್ತವೆ. ಆದರೆ ಪರಮೇಶ್ ಅವರು ಬೆಳ್ಳಂಬೆಳಗ್ಗೆಯೇ ತೋಟದಲ್ಲಿ ಕೀಳುವ ತಾಜಾ ನೇರಳೆ ಹಣ್ಣುಗಳನ್ನು, ಅದೇ ದಿನ ಹುಳಿಯಾರು ಬಸ್ ನಿಲ್ದಾಣದ ಬಳಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಹಣ್ಣಿನ ತಾಜಾತನ ಮತ್ತು ಪೌಷ್ಟಿಕಾಂಶ ಅಬಾಧಿತವಾಗಿರುತ್ತವೆ. “ಕೃಷಿಯಲ್ಲಿ ಬಂಡವಾಳ ಹಾಕಿದ ರೈತನಿಗೆ ಲಾಭ ಸಿಗುವುದು ಕಷ್ಟದ ಮಾತು. ಆದರೆ, ನೇರವಾಗಿ ಜನರಿಗೆ ಮಾರಾಟ ಮಾಡುವುದರಿಂದ ಗ್ರಾಹಕರಿಗೂ ಕಡಿಮೆ ದರದಲ್ಲಿ ಸಿಗುತ್ತದೆ, ನಮಗೂ…

Read More

ತುಮಕೂರು: ಇ-ಪೌತಿ ಖಾತಾ ಆಂದೋಲನ೨ ಇಂದಿನಿAದ ರಾಜ್ಯಾದ್ಯಂತ ಆರಂಭಗೊAಡಿದ್ದು, ಗ್ರಾಮೀಣ ಪ್ರದೇಶಗಳ ಜನರಿಗೆ ಭೂ ದಾಖಲೆಗಳಿಗೆ ಸಂಬAಧಿಸಿದ ಸೇವೆಗಳನ್ನು ಸುಲಭವಾಗಿ ಮತ್ತು ತ್ವರಿತವಾಗಿ ಒದಗಿಸುವ ಉದ್ದೇಶ ಹೊಂದಿದೆ. ಗ್ರಾಮಸ್ಥರು ಸಂಬAಧಿಸಿದ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಅಗತ್ಯ ದಾಖಲೆಗಳನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮನವಿ ಮಾಡಿದರು. ಉಪಮುಖ್ಯಮಂತ್ರಿ ಡಾ: ಜಿ. ಪರಮೇಶ್ವರ ಅವರ ನಿರ್ದೇಶನದಂತೆ ಸೋಮವಾರ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು, ತುಮಕೂರು ತಾಲ್ಲೂಕಿನ ಬೆಳ್ಳಾವಿ ಹೋಬಳಿಯ ಬುಗುಡನಹಳ್ಳಿ ಗ್ರಾಮ ಹಾಗೂ ಕೋರ ಹೋಬಳಿಯ ಸಿ.ಟಿ.ಕೆರೆ ಗ್ರಾಮಗಳಿಗೆ ಭೇಟಿ ನೀಡಿ, ಇ-ಪೌತಿ ಅರ್ಜಿಗಳ ಸ್ವೀಕೃತಿ ಮತ್ತು ವಿಲೇವಾರಿ ಪ್ರಕ್ರಿಯೆಯ ಪ್ರಗತಿಯನ್ನು ಪರಿಶೀಲಿಸಿದರು. ಜಿಲ್ಲೆಯಲ್ಲಿ ೩,೩೬,೦೦೦ ಇ-ಪೌತಿ ಖಾತೆಗಳನ್ನು ಸೃಜಿಸಬೇಕಾಗಿದ್ದು, ಸಾರ್ವಜನಿಕರು ಸೂಕ್ತ ದಾಖಲಾತಿಗಳನ್ನು ಪಡೆದು ಸಾರ್ವಜನಿಕರ ಅರ್ಜಿಗಳನ್ನು ತ್ವರಿತ ಹಾಗೂ ಪಾರದರ್ಶಕವಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದ ಜಿಲ್ಲಾಧಿಕಾರಿಗಳು, ಜನಸಾಮಾನ್ಯರಿಗೆ ಯಾವುದೇ ತೊಂದರೆ ಉಂಟಾಗದAತೆ ಕ್ರಮವಹಿಸುವಂತೆ ತಿಳಿಸಿದರು.…

Read More

ತುಮಕೂರು: ವಿಶ್ವಕರ್ಮ ಸಮುದಾಯದ ಯುವಜನಾಂಗಕ್ಕೆ ತನ್ನ ಪರಂಪರೆಯ ಅರಿವು ಮೂಡಿಸಬೇಕಿದೆ ಎಂದು ಪಾವಗಡ ರಾಮಕೃಷ್ಣ ಸೇವಾಶ್ರಮದ ಸ್ವಾಮಿ ಜಪಾನಂದಜೀ ಪ್ರತಿಪಾದಿಸಿದರು. ಅವರು ನಗರದ ಚಿಕ್ಕಪೇಟೆಯ ಶ್ರೀ ಕಾಳಿಕಾಂಬ ಪತ್ತಿನ ಸಹಕಾರ ಸಂಘದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಪಂಚಕಸುಬುಗಳ ಮೂಲಕ ಮಾನವನ ಪ್ರತೀಕಾರ್ಯಕ್ಕೂ ನೆರವಾಗುತ್ತಿರುವ ವಿಶ್ವಕರ್ಮ ಸಮಾಜ ಕಲೆಗೆ ಹೆಸರಾದ ಸಮುದಾಯ. ಮಹಾನ್‌ಶಿಲ್ಪಿಗಳು, ಸಂಗೀತವಿದ್ವಾAಸರು, ಕರಕುಶಲ ತಜ್ಞರು ಈ ಸಮುದಾಯದ ಕೀರ್ತಿಯನ್ನು ಬೆಳಗಿದ್ದಾರೆ. ಆದರೆ ಅವರ ಹಿರಿಮೆ-ಗರಿಮೆಗಳ ಬಗ್ಗೆ ಸಮುದಾಯದ ಯುವಪೀಳಿಗೆಯಲ್ಲಿ ಅರಿವಿಲ್ಲ. ಹಾಗಾಗಿ ಸಮುದಾಯ ಅಥವಾ ಅಭಿವೃದ್ಧಿ ನಿಗಮದಿಂದ ಸಮಾಜದ ಸಾಧಕರ ಪ್ರೇರಣಾ ಗ್ರಂಥವನ್ನು ಹೊರತರುವ ಅಗತ್ಯವಿದೆ ಎಂದರು. ನೀವು ಏಕಾಗ್ರತೆಯಿಂದ ಶ್ರಮ ಪಟ್ಟು ಅತ್ಯಂತ ಕ್ಲಿಷ್ಟದಾಯಕವಾದ ಕುಸುರಿ ಕೆಲಸದ ಮೂಲಕ ಸಾಮಾನ್ಯ ಲೋಹಕ್ಕೆ ಆಭರಣದ ಮೌಲ್ಯಕೊಡುತ್ತೀರಿ. ಆದರೆ ಅದನ್ನು ಬ್ರಾö್ಯಂಡಿಗ್ ಹೆಸರಲ್ಲಿ ವರ್ತಕರು ಹೆಚ್ಚಿನ ಲಾಭ ಪಡೆಯುತ್ತಾರೆ. ತೆರೆಯ ಹಿಂದೆ ಉಳಿಯುವ ಸಮುದಾಯದ ಕುಶಲ ಕರ್ಮಿಗಳ ಜೀವನ ಭದ್ರತೆ ಬಗ್ಗೆ ಸಮಾಜದ ಸಂಘಸAಸ್ಥೆಗಳು, ಸರ್ಕಾರ…

Read More

ಕೊರಟಗೆರೆ: ಕೆಪಿಸಿಸಿ ಅಧ್ಯಕ್ಷ, ಗೃಹ ಸಚಿವ, ಗ್ಯಾರಂಟಿ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಸ್ಥಾನ ನೀಡಿದ ಕೊರಟಗೆರೆ ಕ್ಷೇತ್ರದ ಮತದಾರರ ಋಣ ನನ್ನ ಮೇಲಿದೆ. ೨೦೨೮ಕ್ಕೇ ಮತ್ತೇ ನಮ್ಮ ಸರಕಾರ ಬರುತ್ತೇ ಕೊರಟಗೆರೆ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ದಿ ಮಾಡ್ತೇನೆ. ನನ್ನ ಆರೋಗ್ಯಕ್ಕಿಂತ ನಿಮ್ಮಅಭಿಮಾನವೇ ದೊಡ್ಡದುಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ತಿಳಿಸಿದರು. ಕೊರಟಗೆರೆ ಪಟ್ಟಣದ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಬ್ಲಾಕ್ ಕಾಂಗ್ರೇಸ್, ಮಹಿಳಾ, ಯುವ ಕಾಂಗ್ರೇಸ್ ಮತ್ತು ಡಾ.ಜಿ.ಪರಮೇಶ್ವರ ಅಭಿಮಾನಿ ಬಳಗದಿಂದ ಭಾನುವಾರ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಎತ್ತಿನಹೊಳೆ ಯೋಜನೆ ಮಾಡೇ ಮಾಡ್ತೀವಿ.ರೈತರ ನೀರಾವರಿ ಸಮಸ್ಯೆ ನಿವಾರಣೆ ಮಾಡ್ತೀನಿ. ಬೈರಗೊಂಡ್ಲು ರೈತರು ವಿರೋಧ ಪಕ್ಷದವ್ರ ಮಾತು ಕೇಳಿ ನೀರಾವರಿ ಯೋಜನೆ ಹಾಳುಮಾಡಿದ್ರು. ಬೈರಗೊಂಡ್ಲು ಬಳಿ ೨೫೦೦ ವಿಸ್ತೀರ್ಣದ ಜಲಾಶಯ ಈಗ ನಮ್ಮ ಕೈತಪ್ಪಿದೆ..ವಡೇರಹಳ್ಳಿ ಬಳಿ ಈಗ ಕೇವಲ ೫೦೦ಎಕರೇ ನೀಡಿದ್ರೇ ಅನುಕೂಲ ಆಗುತ್ತೇ. ಈಗ ಅದಕ್ಕೂ ವಿರೋಧ ಆಗ್ತಿದೆ ಸರಕಾರ ಕೈ ಕಟ್ಟಿ ಕೋರಲ್ಲ. ವಿನಯವಾಗಿ ಗೌರವದಿಂದ ಕೈ ಮುಗಿದು…

Read More

ಇತ್ತೀಚೆಗೆ ರಾಜ್ಯ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿಯೋಜನೆಯಿಂದ ಬಹಳಷ್ಟು ಜನರಿಗೆ ಉಪಯೋಗವಾದರೂ, ಅದರಲ್ಲೂ ಕೆಲ ಲೋಪಗಳಿಂದ ಸಾಕಷ್ಟು ಜನರಿಗೆ ಬಸ್ ದೊರೆಯದೇ ಪ್ರಯಾಣಕ್ಕಾಗಿ ಇನ್ನೊಂದು ಮತ್ತೊಂದು ಪರ್ಯಾಯ ವ್ಯವಸ್ಥೆಗೆ ಮೊರೆಹೋಗುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಮದ್ಯಮ ಹಾಗೂ ಬಡಜನತೆ ದೂರದ ಪ್ರಯಾಣಕ್ಕೆ ರೈಲ್ವೇ ಉತ್ತಮವೆಂದು, ಹಾಗೂ ಕಡಿಮೆ ವೆಚ್ಚದ ಪರಿಣಾಮ ಅತಿ ಹೆಚ್ಚು ಜನರು ಪ್ರಯಾಣ ಬೆಳೆಸುತ್ತಿದ್ದಾರೆ. ಶ್ರೀಮಂತರು ಹೇಗೋ ಎಸಿ, ಟಯಾರ್೧,೨೩ ಹೀಗೆ ರಿಸರ್‌ವೇಷನ್ ಮಾಡಿಸಿ ಆರಾಮದಾಯಕವಾಗಿ ಪ್ರಯಾಣಿಸುತ್ತಿದ್ದಾರೆ. ಆದರೆ ಮದ್ಯಮ ವರ್ಗದವರು ಹಾಗೂ ಬಡವರಿಗೆ ಮೀಸಲಾದ ಜೆನರಲ್ ಭೋಗಿಗಳಂತೂ ಕುರಿ ತುಂಬಿದ ಹಾಗೇ ತುಂಬಿಸಿ, ಸತ್ರೂ ಕ್ಯಾರೆ ಎನ್ನದ ರೀತಿ ಪ್ರಯಾಣಿಸುತ್ತಿರುವುದು ನೋಡಿ ದಂಗಾದ ಪರಿಸ್ಥಿತಿಯುಂಟು. ಅದರಲ್ಲೂ ನಮ್ಮ ಹಿಂದುಳಿದ ಭಾಗಗಳೆಂದೇ ಗುರುತಿಸಿರುವ ಯಾದಗಿರಿ ರಾಯಚೂರು ಜಿಲ್ಲೆಯ ಜನತೆ ಬೆಂಗಳೂರು ಮೈಸೂರಿಗೆ ಪ್ರಯಾಣಿಸಬೇಂಕೆAದರೇ ಅದರಲ್ಲೂ ಜೆನರಲ್ ಭೋಗಿಗಳಲ್ಲಿ ನರಕಯಾತನೆ ಉಂಟಾಗುವುದ ಸಾಮಾನ್ಯ., ಜಿಲ್ಲೆಗೆ ಅಷ್ಟು ರೈಲುಗಳನ್ನು ತಂದೆ, ಇಷ್ಟು ರೈಲುಗಳನ್ನು ತಂದೆ ಎಂದು ಬೀಗುತ್ತಿರುವವರು ಒಮ್ಮೆಯಾದರು ರಾಯಚೂರು ಮಾರ್ಗವಾಗಿ ತೆರಳುವ…

Read More

ತುರುವೇಕೆರೆ: ವಿದ್ಯುತ್ ಇಲಾಖೆ ಖಾಸಗೀಕರಣ ವಿರೋಧಿಸಿ ಪಟ್ಟಣದ ಬೆಸ್ಕಾಂ ಇಲಾಕೆ ಸಿಬ್ಬಂದಿಗಳು, ಗುತ್ತಿಗೆದಾರ, ಜಿವಿ.ಪಿ ಸಿಬ್ಬಂದಿಗಳು ಬೆಸ್ಕಾಂ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆ ನೆಡೆಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ. ತುಮಕೂರು ಘಟಕದ ಸಂಘಟನಾ ಸಂಚಾಲಕ ನರಸಿಂಹಣ್ಣ ಮಾತನಾಡಿ ಉತ್ತಮವಾಗಿ ಕಾರ್ಯನಿರ್ವಾಹಿಸುತ್ತಿರುವ ವಿದ್ಯುತ್ ಇಲಾಖೆಯ ನ್ನು ಖಾಸಗಿಕರಣ ಮಾಡಲು ಅದಿಸೂಚನೆ ಹೊರಡಿಸಿದ್ದು ಅಕ್ಷೇಪಣೆ ಸಲ್ಲಿಸಲು ಇದೇ ತಿಂಗಳ ೨೩ ರಂದು ಕೊನೆಯ ದಿನವಾಗಿದೆ ಅದ್ದರಿಂದ ಕೆಇಆರ್.ಸಿಗೆ ಸಾರ್ವಜನಿಕರು, ರೈತರು ಅಕ್ಷೇಪಣೆ ಸಲ್ಲಿಸುವಂತೆ ಮನವಿ ಮಾಡಿದರು. ನಾವು ಜನರ ಸೇವೆ ಹಿತ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇವೆ. ಖಾಸಗಿ ಕಂಪನಿಯಾದರೆ ಕೇವಲ ಲಾಭದ ಉದ್ದೇಶದಿಂದ ಕೆಲಸ ಮಾಡುತ್ತವೆ, ಇದರಿಂದ ಸಾಮಾನ್ಯ ಜನರಿಗೆ ಮತ್ತು ಬಡ ವರ್ಗದವರಿಗೆ ವಿದ್ಯುತ್ ದರ ಹೆಚ್ಚಾಗುತ್ತದೆ. ಹೊಸ ನೇಮಕಾತಿಯೂ ಮಾಡುವುದಿಲ್ಲ.ಖಾಸಗಿ ಕಂಪನಿಗಳಿಗೆ ಬಡ, ಮಧ್ಯಮ ದೀನ ದಲಿತರಿಗೆ ಮೀಸಲಾತಿ ಸಿಗದಂತಾಗುತ್ತದೆ. ಸಣ್ಣ ಮತ್ತು ಮಧ್ಯಮ ಗುಡಿ ಕೈಗಾರಿಕೆಗಳಿಗೆ ವಿದ್ಯುತ್ ದರ ಹೆಚ್ಚಳವಾದರೆ ಕೈಗಾರಿಕೆ ಬೆಳವಣಿಗೆ ಕುಂಠಿತಾಗುತ್ತದೆ. ಸರ್ಕಾರವು ಹಲವು ವರ್ಷಗಳ ಕಾಲ ಸಾರ್ವಜನಿಕರ…

Read More