ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಮಲ್ಲೂರು ಗ್ರಾಮದಲ್ಲಿ ಸತತ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸಂಪೂರ್ಣ ಮಳೆ ಅವಾಂತರ ಸೃಷ್ಟಿಯಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ವಿಪರೀತ ಮಳೆಯಿಂದಾಗಿ ಮಲ್ಲೂರು ಗ್ರಾಮದ ಸರ್ಕಾರಿ ಶಾಲಾ ಕಾಂಪೌಂಡ್ ಕುಸಿದು ನೆಲಕ್ಕುರುಳಿದೆ. ಕಳೆದ ಮೂರ್ನಾಲ್ಕು ತಿಂಗಳ ಹಿಂದಷ್ಟೇ ನಿರ್ಮಾಣವಾದ ಕಾಂಪೌಂಡ್ ಮಳೆಯ ರಭಸಕ್ಕೆ ಸಿಲುಕಿ ಕುಸಿದಿರುವುದು ಒಂಡೆದೆಯಾದರೆ ಕೆಲವ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಇನ್ನು ಇದಿಷ್ಟೇ ಅಲ್ಲದೆ ಗ್ರಾಮದ ಅಮಾನಿಕೆರೆ ಕೋಡಿ ಬಿದ್ದಿದ್ದು, ಕೆರೆಯ ಏರಿ ಬಿರುಕು ಬಿಟ್ಟು ಅಪಾಯದ ಅಂಚಿನಲ್ಲಿದೆ. ಇನ್ನು ಮಳೆಯ ಆರ್ಭಟ ಇದೇ ರೀತಿ ಮುಂದುವರೆದರೆ ಗ್ರಾಮಕ್ಕೆ ಸಂಕಷ್ಟ ಎದುರಾಗುವಂತಾಗಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
Author: News Desk Benkiyabale
ಕೊರಟಗೆರೆ: ಸತತವಾಗಿ ಒಂದು ವಾರದಿಂದ ಬೊಬ್ಬಿರಿದು ಅಬ್ಬರಿಸುತ್ತಿರುವ ಮಳೆಯಿಂದಾಗಿ ಕೊರಟಗೆರೆ ಪಟ್ಟಣ ನೀರಿನಿಂದ ಆವೃತವಾಗಿ ಕೆರೆ, ಕಟ್ಟೆಗಳು ತುಂಬಿ ಕೋಡಿ ಬಿದ್ದಿವೆ. ಇನ್ನೂ ನೀರು ಹೆಚ್ಚಾಗಿ ಹೊಲ, ಗದ್ದೆ, ಗ್ರಾಮದ ಅನೇಕ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ. ಹೆಚ್ಚಿದ ಮಳೆಯಿಂದಾಗಿ ಜನರ ದೈನಂದಿನ ವಹಿವಾಟಿಗೆ ಸಮಸ್ಯೆ ಆಗಿದ್ದಲ್ಲದೇ ಜಾನುವಾರುಗಳು ಕೂಡಾ ಮಳೆಯಿಂದ ತತ್ತರಿಸಿವೆ. ಪ್ರಸ್ತುತ ಘಟ್ಟದಲ್ಲಿ ಕೊರಟಗೆರೆ ತಾಲ್ಲೂಕು ಮಲೆನಾಡಿನ ಕಳೆಯನ್ನು ಹೊಂದಿದೆ. ತಾಲ್ಲೂಕಿನ ಪ್ರತಿಯೊಂದು ಹಳ್ಳಿಯೂ ಮಲೆನಾಡಿನ ರೀತಿ ಕಾಣುತ್ತಿದೆ. ಪ್ರತಿ ಗ್ರಾಮದಲ್ಲಿರುವ ಕೆರೆ-ಕಟ್ಟೆಗಳು ತುಂಬಿ ಕೋಡಿ ಹರಿಯುತ್ತಿವೆ. ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಮಳೆಯ ನೀರು ನುಗ್ಗಿದೆ. ಅಂತಹ ಕಡೆ ಇರುವ ಜನರನ್ನು ಬೇರೆಡೆಗೆ ಸ್ಥಳಾಂತರಿಸುವ ಕೆಲಸ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು. ಗುರುವಾರ ಬೆಳಿಗ್ಗೆ 7 ಗಂಟೆಯಿಂದಲೇ ಪ್ರತಿ ಗ್ರಾಮಗಳಿಗೆ ಭೇಟಿ ನೀಡುತ್ತಿರುವ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್, ಎ.ಸಿ ಸೋಮಪ್ಪ ಕಾಡುಗೊಳ ಇವರುಗಳ ಸಹಕಾರದೊಂದಿಗೆ ತಾಲ್ಲೂಕಿನ ತಹಶೀಲ್ದಾರ್ ನಾಹಿದಾ ಜಮ್ ಜಮ್ ಹಾಗೂ…
ತುರುವೇಕೆರೆ: ತಾಲ್ಲೂಕಿನ ದಂಡಿನಶಿವರ ಗ್ರಾಮ ಪಂಚಾಯತಿ ವ್ಯಾಪ್ತಿಯ ಅರಕೆರೆ ಗ್ರಾಮದ ಮುಖ್ಯ ಸಂಪರ್ಕ ರಸ್ತೆ ಸ್ಥಗಿತಗೊಂಡಿದ್ದು, ರಸ್ತೆ ಸಂಪೂರ್ಣ ಹಾಳಾಗಿದೆ. ನರೇಗಾ ಯೋಜನೆಯಡಿಯಲ್ಲಿ ಕಳಪೆ ಕಾಮಗಾರಿ ಮಾಡಲಾಗಿದೆಯೆಂದು ಸ್ಥಳೀಯರು ಆರೋಪಿಸಿದ್ದಾರೆ. ಗ್ರಾಮದ ಪ್ರಮುಖ ರಸ್ತೆ ಇದಾಗಿದ್ದು, ಸಾರ್ವಜನಿಕರು ನಾಗರಿಕರು ಗ್ರಾಮಕ್ಕೆ ತೆರಳದಂತಹ ಸನ್ನಿವೇಶ ಉಲ್ಬಣವಾಗಿದೆ. ಡ್ರೈನೇಜ್ ಮಾಡಲು ಹೋಗಿ ರಸ್ತೆಯನ್ನು ಹಾಳು ಮಾಡಲಾಗಿದೆ. ರಸ್ತೆಯ ಮಧ್ಯಭಾಗದಲ್ಲಿ ಅಗೆದು ಸೀಮೆಂಟ್ ಪೈಪ್ ಹಾಕಲಾಗಿತ್ತು. ಈ ಅವೈಜ್ಞಾನಿಕ ಕಾಮಗಾರಿಯಿಂದ ಓಡಾಟಕ್ಕೆ ಸಮಸ್ಯೆ ಎದುರಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಸಂಬಂಧಪಟ್ಟ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಿವರಾಜು ಮತ್ತು ಇಂಜಿನಿಯರ್ ಲೋಕೇಶ್ ಹಾಗೂ ತಾಲೂಕಿ ಇ.ಓ ಸತೀಶ್ ಅವರಿಗೆ ಗ್ರಾಮಸ್ಥರು ಹಲವು ಸಾರಿ ಮನವಿ ಮಾಡಿದರೂ ಸ್ಪಂದಿಸದ ಅಧಿಕಾರಿಗಳು ಲಂಚದ ಹಣಕ್ಕೆ ಆಸೆಗೆ ಬಿದ್ದು ಕಳಪೆ ಕಾಮಗಾರಿಗೆ ಬಿಲ್ ಪಾವತಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ ಗುತ್ತಿಗೆದಾರ ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಇಬ್ಬರೂ ಸಂಬಂಧಿಕರು ಎಂದು ಹೇಳಲಾಗುತ್ತಿದೆ. ಸಾರ್ವಜನಿಕರ ಮನವಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ…
ತುಮಕೂರು: ನಗರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಮನೆಗೆ ನೀರು ನುಗ್ಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಮೃತಪಟ್ಟಿದ್ದ ಈರಣ್ಣನವರ ಪತ್ನಿ ಭಾಗ್ಯರತ್ನ ಅವರಿಗೆ ಸರ್ಕಾರದ ವತಿಯಿಂದ 5 ಲಕ್ಷ ರೂ. ಪರಿಹಾರವನ್ನು ಶಾಸಕ ಜ್ಯೋತಿಗಣೇಶ್ ವಿತರಿಸಿದರು. ನಗರದ ಉಪ್ಪಾರಹಳ್ಳಿಯ ಶಿವಮೂಕಾಂಬಿಕ ನಗರದಲ್ಲಿ ವಾಸವಾಗಿದ್ದ ಈರಣ್ಣನವರು ಕಳೆದ ಮೂರು ದಿನಗಳ ಹಿಂದೆ ಮಳೆ ನೀರು ಮನೆ ನುಗ್ಗಿ ವಿದ್ಯುತ್ ಅವಘಡದಿಂದ ಸಾವನ್ನಪ್ಪಿದ್ದರು. ಇವರ ಕುಟುಂಬಕ್ಕೆ ಶಾಸಕ ಜ್ಯೋತಿಗಣೇಶ್ ಅವರು ಸಾಂತ್ವನ ಹೇಳಿ, ಸರ್ಕಾರದ ವತಿಯಿಂದ ವಿತರಿಸುವ 5 ಲಕ್ಷ ರೂ. ಪರಿಹಾರ ಚೆಕ್‍ನ್ನು ಕುಟುಂಬದವರಿಗೆ ವಿತರಿಸಿ ಧೈರ್ಯ ತುಂಬಿದರು. ನಂತರ ಮಾತನಾಡಿದ ಶಾಸಕ ಜ್ಯೋತಿಗಣೇಶ್ ಅವರು, ಮಳೆಯಲ್ಲಿ ಉಪ್ಪಾರಹಳ್ಳಿ ಶಿವಮೂಕಾಬಿಂಕ ನಗರದಲ್ಲಿನ ಈರಣ್ಣನವರ ಮನೆಯಲ್ಲಿ ನೀರು ತುಂಬಿಕೊಂಡಿದ್ದರಿಂದ ಉಂಟಾದ ವಿದ್ಯುತ್ ಅವಘಡದಿಂದ ಈರಣ್ಣನವರು ಸಾವನ್ನಪ್ಪಿದ್ದಾರೆ. ಇದು ಅತ್ಯಂತ ದುಃಖಕರ ಸಂಗತಿ. ಅತಿಯಾದ ಮಳೆಯಿಂದಾಗಿ ಅವಾಂತರ, ಅವಘಡಗಳು ಸಂಭವಿಸುತ್ತಲೇ ಇವೆ. ಅವಘಡಗಳು ಆಗದಂತೆ ಅಧಿಕಾರಿಗಳು ಸಹ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುತ್ತಿದ್ದಾರೆ ಎಂದರು.…
ತುಮಕೂರು: ನಗರದಲ್ಲಿ ವರುಣನ ಅಬ್ಬರ ಜಾಸ್ತಿಯಾಗಿರುವ ಹಿನ್ನೆಲೆಯಲ್ಲಿ ಅಕ್ಕತಂಗಿಯರ ಕಟ್ಟೆಯ ಸಮೀಪವಿರುವ ಭಾರತೀ ನಗರಕ್ಕೆ ನೀರು ನುಗ್ಗುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ನಿವಾಸಿಗಳು ಒತ್ತುವರಿಯಾಗಿರುವ ರಾಜಗಾಲುವೆಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಅಕ್ಕತಂಗಿಯರ ಕಟ್ಟೆ ಅಕ್ಕಪಕ್ಕದಲ್ಲಿರುವ ಬಡಾವಣೆಗಳಲ್ಲಿ ಹಾದು ಹೋಗಿದ್ದ ರಾಜಗಾಲುವೆ, ಚರಂಡಿಗಳು ನಾಪತ್ತೆಯಾಗಿರುವುದೇ ಇಂದು ನಮ್ಮ ಮನೆಗಳು ಮಳೆ ನೀರಿನಲ್ಲಿ ಮುಳುಗಡೆಯಾಗಲು ಕಾರಣವಾಗಿದೆ. ಇದಕ್ಕೆ ಅಧಿಕಾರಿಗಳು ರಾಜಗಾಲುವೆಗಳನ್ನು ಲೆಕ್ಕಿಸದೆ ಲೇಔಟ್ಗಳ ನರ್ಮಾಣಕ್ಕೆ ಅನುಮತಿ ನೀಡಿರುವುದು ಪ್ರಮುಖ ಕಾರಣ. ಅಧಿಕಾರಿಗಳ ಲಂಚಬಾಕತನ ಹಾಗೂ ಬೇಜವಾಬ್ದಾರಿಯಿಂದಾಗಿ ಇಂದು ನಾವುಗಳು ಸೂರು ಕಳೆದುಕೊಳ್ಳುವಂತಹ ಪರಿಸ್ಥಿತಿ ಬಂದೊದಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮನೆಗಳು ಮಳೆ ನೀರಿನಲ್ಲಿ ಮುಳುಗಡೆಯಾಗುವುದರಿಂದ ಸ್ಥಳಕ್ಕೆ ಶಾಸಕರು, ಅಧಿಕಾರಿಗಳು ಬಂದು ತಾತ್ಕಾಲಿಕವಾಗಿ 3 ಅಥವಾ 5 ಸಾವಿರ ಪರಿಹಾರ, ದಿನಸಿ, ಊಟ ಕೊಡಬಹುದು. ಆದರೆ ನಿಮಗೆ ಈ ರೀತಿಯ ಪರಿಹಾರ ಬೇಕಾಗಿಲ್ಲ. ನಮಗೇನಿದ್ದರೂ ಶಾಶ್ವತವಾದ ಪರಿಹಾರ ಒದಗಿಸಬೇಕು. ಮುಚ್ಚಿ ಹೋಗಿರುವ ರಾಜಗಾಲುವೆಗಳನ್ನು ತೆರೆದು ಮಳೆ ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಮಾಡಬೇಕು ಎಂದು ಅಲ್ಲಿನ…
ತುರುವೇಕೆರೆ: ತಾಲ್ಲೂಕಿನ ರಂಗನಾಥಪುರ ಗ್ರಾಮದ ದಲಿತ ಕುಟುಂಕ್ಕೆ ಸೇರಿದ ಗಂಗಣ್ಣನವರ ಜಮೀನನ್ನು ಬಲಮಾದಿಹಳ್ಳಿ ಗ್ರಾಮದ ಸವರ್ಣೀಯ ಕುಟುಂಬವೊಂದು ವಾಮ ಮಾರ್ಗದ ಮೂಲಕ ಆಕ್ರಮಿಸಿಕೊಳ್ಳಲು ಮುಂದಾಗಿರುವುದು ಖಂಡನೀಯ ಎಂದು ದ.ಸಂ.ಸ. ತಾಲ್ಲೂಕು ಘಟಕದ ಅಧ್ಯಕ್ಷ ಕುಣಿಕೇನಹಳ್ಳಿ ಜಗಧೀಶ್ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ರಂಗನಾಥಪುರ ಗ್ರಾಮದ ಗಂಗಣ್ಣ ಎಂಬುವವರು ಬಲಮಾದಿಗಳ್ಳಿ ಗ್ರಾಮದ ಸರ್ವೆ ನಂಬರ್ 5ರಲ್ಲಿ 30ಗುಂಟ ಜಮೀನನ್ನು ಹೋದಿದ್ದು, ಸದರಿ ಜಮೀನು ಸರ್ಕಾರದಿಂದಲೇ ಇವರಿಗೆ ಮುಂಜೂರಾಗಿದ್ದು, ಜಮೀನಿಗೆ ಸಂಬಂದಿಸಿದ ಸಾಗುವಳಿ ಚೀಟಿಯನ್ನು ಬಗರ್‍ಹುಕ್ಕುಂ ಕಮಿಟಿಯಲ್ಲಿ ಅಧಿಕೃತವಾಗಿ ಪಡೆದಿದ್ದಾರೆ, ಅಲ್ಲದೆ ಸುಮಾರು ನವತ್ತು ವರ್ಷಗಳಿಂದ ಸದರಿ ಜಮೀನಿನಲ್ಲೆ ಅನುಭವದಲ್ಲಿದ್ದಾರಲ್ಲದೆ ಇಂದಿಗೂ ಇವರೇ ಅನುಭವದಲ್ಲಿದ್ದಾರೆ, ಆದರೂ ಬಲಮಾದಿಹಳ್ಳಿ ಗ್ರಾಮದ ಸವರ್ಣಿಯ ಕುಟುಂಬದವರೊಬ್ಬರು ಇವರನ್ನು ವಾಮ ಮಾರ್ಗದ ಮೂಲಕ ಒಕ್ಕಲೆಬ್ಬಿಸುವ ಹುನ್ನಾರಕ್ಕೆ ಮುಂದಾಗಿದ್ದಾರೆ, ಇದು ಖಂಡನೀಯ ವಿಚಾರ, ಕೂಡಲೇ ತಾಲ್ಲೂಕು ಆಡಳಿತ ಈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿ ಬಲಮಾದಿಹಳ್ಳಿ ಗ್ರಾಮದ ಸವರ್ಣಿಯರಿಗೆ ಸೇರಿದೆ ಎನ್ನಲಾದ ಸರ್ವೆ ನಂಬರ್ 40ರಲ್ಲಿನ…
ತುಮಕೂರು: ಭೀಕರ ರಣ ಮಳೆಯಿಂದ ಹಾನಿಗೊಳಗಾದ ನಗರದ ಕುರಿಪಾಳ್ಯ, ಲೇಬರ್ ಕಾಲೋನಿ, ನಜರಾಬಾದ್, ಪೂರ್‍ಹೌಸ್ ಕಾಲೋನಿ ಮುಂತಾದ ಹಲವು ಪ್ರದೇಶಗಳಿಗೆ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಗೋವಿಂದರಾಜು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ನಗರದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭೀಕರ ಮಳೆಗೆ ಈ ಭಾಗದಲ್ಲಿ ಕೆಲವು ಮನೆಗಳು, ಗೋಡಗಳು ಬಿದ್ದುಹೋಗಿವೆ, ಸರ್ಕಾರ ನೀಡಿರುವಂತಹ ಉಚಿತ ನಿವೇಶನಗಳಲ್ಲಿ ಸಾಲ ಮಾಡಿ 10-15 ವರ್ಷಗಳ ಹಿಂದೆ ಮಣ್ಣಿನಲ್ಲೇ ಮನೆಗಳನ್ನು ನಿರ್ಮಾಣ ಮಾಡಿಕೊಂಡಿರುವ ಹಿನ್ನಲೆಯಲ್ಲಿ ಸತತ ಸುರಿಯುತ್ತಿರುವ ಮಳೆಗೆ ಮನೆಗಳು ಕುಸಿದಿವೆ ಎಂದರು. ತುಮಕೂರು ಮಹಾನಗರಪಾಲಿಕೆ ವ್ಯಾಪ್ತಿಗೆ ಬರುವ ಈ ಪ್ರದೇಶಗಳ ಜನರಿಗೆ ಸರ್ಕಾರ ಗಮನ ಹರಿಸಿ, ಅವರಿಗೆ ಮನೆ ನಿರ್ಮಾಣಕ್ಕೆ ಅಗತ್ಯ ನೆರವು ನೀಡಬೇಕಿದೆ. ಜಿಲ್ಲಾಧಿಕಾರಿಗಳು, ಮಹಾನಗರಪಾಲಿಕೆ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಣ್ಣಿನಿಂದ ನಿರ್ಮಾಣ ಮಾಡಿರುವ ಮನೆಗಳನ್ನು ಪತ್ತೆ ಹಚ್ಚಿ ಅಂತಹವುಗಳಿಗೆ ಅನುದಾನ ಕಲ್ಪಿಸಬೇಕೆಂದು ಮನವಿ ಮಾಡಿದರು. ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ವಸತಿ ನಿರ್ಮಾಣಕ್ಕೆ…
ತುಮಕೂರು: ಧಾರಾಕಾರ ಮಳೆಯಿಂದ ಜಯಮಂಗಲಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ನೀರು ನುಗ್ಗಿ ಜಲಾವೃತಗೊಂಡಿರುವ ಮಧುಗಿರಿ ತಾಲ್ಲೂಕು ಪುರವರ ಹೋಬಳಿ ಚನ್ನಸಾಗರ ಗ್ರಾಮಕ್ಕೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಾತನಾಡಿದ ಅವರು, ನದಿ ನೀರು ಹರಿಯುವ ಪ್ರಮಾಣ ಹೆಚ್ಚಾಗಿರುವುದರಿಂದ ಚನ್ನಸಾಗರ ಗ್ರಾಮದ ಕೆಲವು ಮನೆ, ಶಾಲೆ, ಜಮೀನುಗಳು ಜಲಾವೃತಗೊಂಡಿದ್ದು, ಜನ-ಜಾನುವಾರುಗಳಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಳೆ ನೀರಿನಿಂದ ಬಾಧಿತರಾದವರಿಗೆ ಆಹಾರ ವ್ಯವಸ್ಥೆಗಾಗಿ ಜಿಲ್ಲಾಡಳಿತದ ಕಾಳಜಿ ಕೇಂದ್ರವನ್ನು ತೆರೆಯಲಾಗಿದೆ. ಕಾಳಜಿ ಕೇಂದ್ರದಲ್ಲಿ ಯಾವುದೇ ಸಮಸ್ಯೆ ಬಾರದಂತೆ ನಿಗಾ ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರಲ್ಲದೆ, ಜಲಾವೃತವಾಗಿರುವ ಶಾಲೆಗಳಿಗೆ 2 ದಿನಗಳ ಕಾಲ ರಜೆ ಘೋಷಣೆ ಮಾಡಲು ಸಂಬಂಧಿಸಿದ ಶಾಲಾ ಮುಖ್ಯೋಪಾಧ್ಯಾಯರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಗ್ರಾಮದ ರಸ್ತೆಯಲ್ಲಿ ಸಂಚರಿಸಲು ಅನುವಾಗುವಂತೆ ಈಗಾಗಲೇ ಜೆಸಿಬಿಯಿಂದ ಕಾರ್ಯಾಚರಣೆ ಕೈಗೊಂಡಿದ್ದು, ಮುಂಜಾನೆಗಿಂತ ನೀರಿನ ಹರಿವಿನ ಪ್ರಮಾಣ ಈಗ ಕಡಿಮೆಯಾಗಿದೆ. ಮಳೆ ನೀರಿನಿಂದ ಬಾಧಿತರಾದವರಿಗೆ ರಕ್ಷಣೆ ನೀಡುವಲ್ಲಿ ಸೂಕ್ತ…
ತುಮಕೂರು: ಪ್ರಸ್ತುತ ಸಮಾಜದಲ್ಲಿ ಆದರ್ಶಗಳ ಕೊರತೆ ಕಾಡುತ್ತಿರುವ ನಡುವೆ ದೊಡ್ಡಲಿಂಗಪ್ಪನವರ ಸೇವೆ, ಆದರ್ಶ ಅನುಕರಣೀಯವಾದದ್ದು. ಸಾಧಕರ ಜೀವನ ಚರಿತ್ರೆ ಓದುವ ಮೂಲಕ ಮುಂದಿನ ಪೀಳಿಗೆಗೆ ದಿಶೆ ದೊರಕುತ್ತದೆ. ಸರಳತೆ ಹಾಗೂ ಸ್ನೇಹ ಜೀವ ತುಂಬ ಮುಖ್ಯವಾಗುತ್ತದೆ. ಒಳಿತು ಕೆಡಕು ಮಾಡಿಸುವುದು ಮನಸ್ಸು. ಆತ್ಮದ ಸ್ಥಿತಿಯಲ್ಲಿ ಎಲ್ಲರೂ ಒಂದೇ ಆದರೂ ವ್ಯಕ್ತಿತ್ವದಲ್ಲಿ ಭಿನ್ನತೆಯಿರುತ್ತದೆ. ಅದಕ್ಕೆ ಕಾರಣ ಮನಸ್ಸು. ವ್ಯಕ್ತಿ ಮನಸ್ಸು ಸರಿಯಾದ ರೀತಿಯಲ್ಲಿ ಕೆಲಸ ಮಾಡಿದರೆ ಉತ್ತಮ ಕಾರ್ಯಗಳು ಆಗುತ್ತವೆ. ಜ್ಞಾನೇಂದ್ರಿಯಗಳು, ಕಣೇರ್ಂದ್ರಗಳು ಕೆಲಸ ಮಾಡಬೇಕಾದರೆ ಅದಕ್ಕೆ ಮನಸ್ಸು ಎದ್ದಿರಬೇಕು. ಆಗ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಾಲಾನಂದ ಸ್ವಾಮೀಜಿ ತಿಳಿಸಿದರು. ಅವರು ಒಕ್ಕಲಿಗರ ವಿಕಾಸ ವೇದಿಕೆ ತುಮಕೂರು, ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ ಮತ್ತು ಶಿಂಷಾ ಲಿಟರರಿ ಅಕಾಡೆಮಿ ಸಹಯೋಗದಲ್ಲಿ ಸಮುದಾಯ ಸೇವೆಯಲ್ಲಿ ಆರ್, ದೊಡ್ಡಲಿಂಗಪ್ಪನವರ ಬದುಕಿನ ಚಿತ್ರಣ “ನೋವುಂಡು ಬೆಳಕು ಬೀರುವ ದೀಪ’’ ಕೃತಿ ಲೋಕಾರ್ಪಣೆಗೊಳಿಸಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು. ಧನಾತ್ಮಕ…
ಕುಣಿಗಲ್: ತಾಲ್ಲೂಕಿನ ತಿಪ್ಪೂರು ಗೇಟ್ ಬಳಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬೆಂಗಾವಲು ವಾಹನಕ್ಕೆ ಅಪಘಾತವಾಗಿದೆ. ವಾಹನದಲ್ಲಿದ್ದ ಐವರ ಪೈಕಿ ಮೂವರು ತೀವ್ರವಾಗಿ ಗಾಯಗೊಂಡಿದ್ದರೆ, ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇತ್ತೀಚೆಗಷ್ಟೇ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಹಾಗೂ ಬೆಳ್ಳಾರೆ ಗ್ರಾಮಗಳಿಗೆ ಭೇಟಿ ನೀಡಿ ಫಾಜಿಲ್ ಮಂಗಳಪೇಟೆ ಮತ್ತು ಪ್ರವೀಣ್ ನೆಟ್ಟಾರ್ ಕುಟುಂಬ ಸದಸ್ಯರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಾಂತ್ವನ ಹೇಳಿದ್ದರು. ಮಂಗಳೂರಿನಿಂದ ಬೆಂಗಳೂರಿಗೆ ಹಿಂದಿರುಗುವಾಗ ಅಪಘಾತ ಸಂಭವಿಸಿದೆ. ಬೆಂಗಾವಲು ವಾಹನದಲ್ಲಿದ್ದ ಪೆÇಲೀಸ್ ಸಿಬ್ಬಂದಿ ಮಹೇಶ್, ಮಂಜುನಾಥ್ ತೀವ್ರವಾಗಿ ಗಾಯಗೊಂಡಿದ್ದಾರೆ. ಜಗದೀಶ್, ಆನಂದ್ ಮತ್ತು ಹರೀಶ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಮೃತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಮತ್ತು ಸುರತ್ಕಲ್‍ನ ಪಾಝಿಲ್ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ನಂತರ ಕುಮಾರಸ್ವಾಮಿ ಹೆಲಿಕಾಪ್ಟರ್‍ನಲ್ಲಿ ಬೆಂಗಳೂರಿಗೆ ಹಿಂದಿರುಗಿದ್ದರು. ಮಾಜಿ ಮುಖ್ಯಮಂತ್ರಿಯ ಬೆಂಗಾವಲು ಕರ್ತವ್ಯಕ್ಕೆ ತೆರಳಿದ್ದ ಪೆÇಲೀಸ್ ಸಿಬ್ಬಂದಿ ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ಹಿಂದಿರುಗುತ್ತಿದ್ದಾಗ…










