ಹುಳಿಯಾರು: ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದ್ದು ಕಾನೂನು ಉಲ್ಲಂಘಿಸಿ ಗೋಹತ್ಯೆ ಮಾಡಿದರೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ಹುಳಿಯಾರು ಪಿಎಸ್‍ಐ ಕೆ.ಟಿ.ರಮೇಶ್ ಎಚ್ಚರಿಸಿದ್ದಾರೆ. ಇಲ್ಲಿನ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಗೋಹತ್ಯೆ ನಿಯಂತ್ರಣ ಮತ್ತು ಜಾನುವಾರು ಸಂರಕ್ಷಣೆ ವಿದೇಯಕ ಯಥಾವತ್ತು ಜಾರಿ ಕುರಿತು ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. 15 ವರ್ಷ ಆಗಿರುವ ಹಾಲು ಕೊಡಲು ಯೋಗ್ಯವಲ್ಲ, ಉಳಿಮೆ ಮಾಡಲು ಯೋಗ್ಯವಲ್ಲ ಎನ್ನುವ ಪ್ರಮಾಣ ಪತ್ರವನ್ನು ಪಶು ವೈದ್ಯರು ಕೊಟ್ಟ ನಂತರ ಗೋಹತ್ಯೆ ಮಾಡಬಹುದಿದೆ. ಮಾರುವವನೂ ಸಹ ಗ್ರಾಪಂನಿಂದ ಹಸು ಸಾಕುತ್ತಿರುವ ಬಗ್ಗೆ ದಾಖಲಾತಿ ಇಟ್ಟಿರಬೇಕು. ಹಾಗಾಗಿ ಇನ್ಮುಂದೆ ಗೋಹತ್ಯೆ ಮಾಡುವುದು ಅಸಾಧ್ಯವಾಗಿದ್ದು ಕೋಳಿ, ಕುರಿ ಮಾಂಸ ಮಾರಿ ಜೀವನ ನಿರ್ವಹಿಸಿ. ಇಲ್ಲವಾದಲ್ಲಿ ಪರ್ಯಾಯ ಉದ್ಯೋಗ ನೋಡಿಕೊಳ್ಳಿ ಎಂದು ಸಲಹೆ ನೀಡಿದರು. ಸರ್ಕಾರದಿಂದ ಗೋಶಾಲೆ ತೆರೆಯುತ್ತಿದ್ದು ಹಸುಗಳನ್ನು ಸಾಕಲಾಗುವುದಿಲ್ಲ ಎನ್ನುವ ರೈತರು ಗೋಶಾಲೆಗೆ ಬಿಡಬಹುದಾಗಿದೆ. ಸರ್ಕಾರವೇ ಅವುಗಳ ಆರೈಕೆಯ ಹೊಣೆ ಹೊರಲಿದೆ. ಈ…
Author: News Desk Benkiyabale
ತುಮಕೂರು: ರಾಜ್ಯ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಬದಲಾಯಿಸಲು ಅವರ ಪಕ್ಷದವರೇ ಹೊರಟಿರುವುದು ದುರಾದೃಷ್ಟಕರ ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೇಳಿದರು. ಯಡಿಯೂರಪ್ಪನವರು ಶಾಸಕರುಗಳನ್ನು ಖರೀದಿ ಮಾಡಿ ಕಷ್ಟಬಿದ್ದು ಸರ್ಕಾರ ರಚನೆ ಮಾಡಿದ್ದಾರೆ. ಬಹಳ ಆಸೆ ಇಟ್ಟುಕೊಂಡು ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಸಂಪುಟದಲ್ಲಿದ್ದುಕೊಂಡು ಸಂಪುಟದ ಮುಖ್ಯಸ್ಥರನ್ನೆ ಬದಲಾಯಿಸಲು ಕೆಲವರು ಹೊರಟಿದ್ದಾರೆ. ಯಡಿಯೂರಪ್ಪನವರು ಶಕ್ತಿಯುತವಾಗಿದ್ದರೆ ಅಂತಹವರನ್ನು ಸಂಪುಟದಿಂದ ಕೈ ಬಿಡಬೇಕು ಎಂದರು. ನಗರದಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರನ್ನು ಬದಲಾಯಿಸಲು ಹೊರಟಿರುವವರು ಶಕ್ತಿಯುತವಾಗಿದ್ದರೆ ಮುಖ್ಯಮಂತ್ರಿಗಳನ್ನು ಬದಲಾಯಿಸಬೇಕು. ಇದ್ಯಾವುದನ್ನೂ ಮಾಡದೆ ವಿನಾ ಕಾರಣ ಕಾಲ ಹರಣ ಮಾಡುತ್ತಿರುವುದರಿಂದ ರಾಜ್ಯದ ಆಡಳಿತ ಮತ್ತು ಜನಸಮುದಾಯದ ಮೇಲೆ ಭಾರೀ ಪರಿಣಾಮ ಬೀರುತ್ತಿದೆ ಎಂದರು. ಸರ್ಕಾರದ ಜಿಲ್ಲಾ ಪಂಚಾಯ್ತಿಗಳಿಗೆ ಹಣ ಬಿಡುಗಡೆ ಮಾಡುತ್ತಿಲ್ಲ. ಕಾಮಗಾರಿಗಳು ಮಾಡಿರುವ 15 ಸಾವಿರ ಕೋಟಿ ಬಿಲ್‍ಗಳು ಬಾಕಿ ಇವೆ. ಪಿಡಬ್ಯ್ಲೂಡಿ ಇಲಾಖೆ ಒಂದರದ್ದೇ 5 ಸಾವಿರ ಕೋಟಿ ಬಾಕಿ ಇದೆ.…
ತುಮಕೂರು: ರಾಜಕಾರಣದಲ್ಲಿ ಬಡವರು ಮತ್ತು ಯಾರು ಅರ್ಹರಿರುತ್ತಾರೆ ಅವರೆಲ್ಲಾ ಅಧಿಕಾರಕ್ಕೆ ಬರುವಂತಹ ವಾತಾವರಣ ಸೃಷ್ಠಿಯಾದಾಗ ಮಾತ್ರ ಉತ್ತಮ ಅಭಿವೃದ್ಧಿ ಕೆಲಸಗಳನ್ನು ನಿರೀಕ್ಷೆ ಮಾಡಬಹುದು ಎಂದು ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟರು. ನಗರದ ಹೊರಪೇಟೆಯಲ್ಲಿರುವ ಶ್ರೀ ವಾಲ್ಮೀಕಿ ಕನ್ವೆಷನ್ ಹಾಲ್‍ನಲ್ಲಿ ಶ್ರೀ ವಾಲ್ಮೀಕಿ ವಿದ್ಯಾವರ್ಧಕ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ತುಮಕೂರು ಮಹಾನಗರಪಾಲಿಕೆ ಮೇಯರ್ ಬಿ.ಜಿ.ಕೃಷ್ಣಪ್ಪ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ದುಡ್ಡಿರುವವರು, ಕಳ್ಳ ದುಡ್ಡಿರುವವರು ಮುಂದೆ ಕಳ್ಳ ದುಡ್ಡು ಮಾಡುವವರು ಇಂತಹವರೇ ಅಧಿಕಾರಕ್ಕೆ ಬಂದರೆ ನಾವು ಅವರಿಂದ ಏನೂ ನಿರೀಕ್ಷೆ ಮಾಡುವುದಕ್ಕಾಗುವುದಿಲ್ಲ ಆದುದರಿಂದ ಬಡವರು ಮತ್ತು ಅರ್ಹರನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕಾಗುತ್ತದೆ ಎಂದರು. ಇಂದು ಯಾರೂ ಸಹ ಪ್ರಾಮಾಣಿಕವಾಗಿ ಬದುಕುವುದಕ್ಕೆ ರಾಜಕಾರಣದ ವ್ಯವಸ್ಥೆ ಬಿಡುತ್ತಿಲ್ಲ, ಇಂದು ಗ್ರಾಮ ಪಂಚಾಯಿತಿ ಸದಸ್ಯರಾಗಬೇಕೆಂದರೆ ಎರಡು ಎಕರೆ ಹೊಲ ಮಾರಬೇಕಾದ ಪರಿಸ್ಥಿತಿ ಬಂದೊದಗಿದೆ. ಸೋತವರು ಮಾರಬೇಕು, ಗೆದ್ದವರು ಮಾರಬೇಕು…
ತುಮಕೂರು: ಕೈಗಾರಿಕಾ ಪ್ರದೇಶಗಳ ಸಮಸ್ಯೆ ಬಗೆಹರಿಸಲು ಕೆಎಸ್ ಎಸ್ ಐಡಿಸಿ, ಕೆಐಎಡಿಬಿ, ಮಹಾನಗರ ಪಾಲಿಕೆ ಸಂಯೋಜಿತ ಕಾರ್ಯನಿರ್ವಹಿಸುವ ಮೂಲಕ ಬಗೆಹರಿಸಬೇಕು ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ. ನಗರದ ಎಪಿಎಂಸಿ ಆವರಣದಲ್ಲಿರುವ ಟಿಡಿಸಿಸಿಐ ಕಚೇರಿ ಸಭಾಂಗಣದಲ್ಲಿ ಟಿಡಿಸಿಸಿಐ, ಅಂತರಸನಹಳ್ಳಿ ಸಣ್ಣ ಕೈಗಾರಿಕೆಗಳ ಸಂಘ, ಅಂತರಸನಹಳ್ಳಿ ಮತ್ತು ಸತ್ಯ ಮಂಗಲ ಕೈಗಾರಿಕೆಗಳ ಸಂಘ, ಕೆಎಸ್‍ಎಸ್‍ಐಡಿಸಿ,ನಗರ, ಹಿರೇಹಳ್ಳಿ ಹಾಗೂ ಇತರೆ ಕೈಗಾರಿಕೆಗಳ ಸಂಘಗಳ ವತಿಯಿಂದ ಹಮ್ಮಿಕೊಂಡಿದ್ದ ಕೈಗಾರಿಕ ಪ್ರದೇಶದ ಕುಂದುಕೊರತೆ ಬಗ್ಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತಿದ್ದ ಅವರು, ನೀರಾವರಿ ಮತ್ತು ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತು ನೀಡಿದ್ದು, ಕೈಗಾರಿಕೆಗಳಿಗೆ ಉತ್ತಮ ವಿದ್ಯುತ್ ಪೂರೈಕೆ ಮಾಡಲು ಕ್ರಮ ವಹಿಸಲಾಗಿದೆ ಎಂದರು. ಭೂಗತ ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ಕೈಗಾರಿಕ ಪ್ರದೇಶಗಳಿಗೆ ನೀಡಬೇಕಿದೆ, ಕೈಗಾರಿಕೆಗಳಿಗೆ ಈಗ ಇರುವ ವ್ಯವಸ್ಥೆ ಸರಿಯಲ್ಲ, ಒಂದು ಟಿಸಿ ಹೋದರೆ ಇಡೀ ಕೈಗಾರಿಕಾ ಪ್ರದೇಶದ ವಿದ್ಯುತ್ ಸಂಪರ್ಕ ಕಡಿತವಾದರೆ ಹೇಗೆ ಎಂದು ಪ್ರಶ್ನಿಸಿದ ಅವರು,ಚಿಕ್ಕನಾಯಕನಹಳ್ಳಿ,…
ತುಮಕೂರು : ಜಿಲ್ಲಾದ್ಯಂತ ಜುಲೈ 19 ಹಾಗೂ 22ರಂದು ನಡೆಯಲಿರುವ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಚಿಕ್ಕನಾಯಕನಹಳ್ಳಿಯ 2534, ಗುಬ್ಬಿ ತಾಲ್ಲೂಕಿನ 3295, ಕುಣಿಗಲ್‍ನ 2856, ತಿಪಟೂರಿನ 2869, ತುಮಕೂರಿನ 10094, ಹಾಗೂ ತುರುವೇಕೆರೆಯ 2037 ಸೇರಿದಂತೆ ಒಟ್ಟು 23,686 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ. ನಂಜಯ್ಯ ತಿಳಿಸಿದ್ದಾರೆ. ದಕ್ಷಿಣ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ 18, ಗುಬ್ಬಿ-22, ಕುಣಿಗಲ್-17, ತಿಪಟೂರು-14, ತುಮಕೂರು-53 ಹಾಗೂ ತುರುವೇಕೆರೆ 15 ಸೇರಿದಂತೆ ಒಟ್ಟು 139 ಪರೀಕ್ಷಾ ಕೇಂದ್ರಗಳಿದ್ದು, 13198 ಬಾಲಕರು ಹಾಗೂ 10488 ಬಾಲಕಿಯರು ಸೇರಿದಂತೆ ಒಟ್ಟು 23686 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಜಿಲ್ಲಾಡಳಿತದಿಂದ ಸಕಲ ಸಿದ್ಧತೆ :- ಕೋವಿಡ್-19ರ ಮಾರ್ಗಸೂಚಿ ಪ್ರಕಾರ ಸುರಕ್ಷತೆಯೊಂದಿಗೆ ಪರೀಕ್ಷೆ ನಡೆಸಲು ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ…
ತುಮಕೂರು: ಡಿಜಿಟಲ್ ಸಹಿಯ ಮುಖಾಂ ತರವೇ ಜನನ ಮರಣ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಿದರು. ನಾಗರಿಕ ನೋಂದಣಿ ಪದ್ಧತಿಯಡಿ ಜನನ-ಮರಣ ನೋಂದಣಿಯನ್ನು ಸುವ್ಯವಸ್ಥಿತವಾಗಿ ನಡೆಸುವ ಸಂಬಂಧ ಜೂಮ್ ಮೀಟ್ ಮೂಲಕ ನಡೆದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು, ಸಕಾಲಕ್ಕೆ ಸರಿಯಾಗಿ ಜನನ-ಮರಣ ಪ್ರಮಾಣ ಪತ್ರಗಳು ನೋಂದಣಿಯಾಗಲು ಸೂಕ್ತ ಕ್ರಮವಹಿಸಬೇಕು. ಜನನ ಮತ್ತು ಮರಣ ಪ್ರಮಾಣ ಪತ್ರಗಳ ನೋಂದಣಿಯಲ್ಲಿ ಯಾವುದೇ ಕಾರಣಕ್ಕೂ ವಿಳಂಬವಾಗಬಾರದು ಎಂದು ಸೂಚಿಸಿದರು. ಮಾರ್ಗಸೂಚಿ ಅನ್ವಯ ಸಕಾಲಕ್ಕೆ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಬೇಕು. ಇದರಿಂದ ಫಲಾನುಭವಿಗಳಿಗೆ ನೂರಕ್ಕೆ ನೂರರಷ್ಟು ಸೌಲಭ್ಯ ಲಭ್ಯವಾಗುತ್ತದೆ. ತಡವಾಗಿ ವಿತರಿಸಿದರೆ ಸೌಲಭ್ಯ ಕೈತಪ್ಪುವ ಸಾಧ್ಯತೆ ಇದೆ. ಹಾಗಾಗಿ ಈ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಎಂದರು. ಪ್ರಮಾಣ ಪತ್ರಗಳಲ್ಲಿ ಯಾವುದೇ ಲೋಪದೋಷಗಳಿಲ್ಲದಂತೆ ಸಮರ್ಪಕವಾದ…
ಕೊರಟಗೆರೆ: ಎಸ್‍ಎಸ್‍ಎಲ್‍ಸಿ ಪರೀಕ್ಷೆ ತೆಗೆದುಕೊಳ್ಳಲು ಸಾಧ್ಯವಾಗದೆ ಆತ್ಮಹತ್ಯೆಗೆ ಯತ್ನಿಸಿದ ಕೊರಟಗೆರೆ ಪಟ್ಟಣದ ವಿದ್ಯಾರ್ಥಿನಿಯೊಬ್ಬರ ಮನೆಗೆ ಪ್ರಾಥಮಿಕ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಶನಿವಾರ ಬೆಳಿಗ್ಗೆ ಭೇಟಿ ನೀಡಿ ಸಮಸ್ಯೆ ಆಲಿಸಿದರು. ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿನಿ ಅಭ್ಯಾಸ ಮಾಡುತ್ತಿದ್ದರು. ಪರೀಕ್ಷೆ ಬರೆಯಲು ಸಾಧ್ಯವಾಗುತ್ತಿಲ್ಲ ಎಂದು ಆತ್ಮಹತ್ಯೆಗೆ ಯತ್ನಿಸಿದ್ದು, ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದನ್ನು ಗಮನಿಸಿ ಸಚಿವರು ಭೇಟಿ ನೀಡಿದರು. ಕೋವಿಡ್ ಲಾಕ್‍ಡೌನ್‍ನಿಂದಾಗಿ ವಿದ್ಯಾರ್ಥಿನಿ 10ನೇ ತರಗತಿಯ ಶುಲ್ಕ ಪಾವತಿಸಿ, ಪ್ರವೇಶ ಪಡೆಯಲು ಸಾಧ್ಯವಾಗಿಲ್ಲ. ಜತೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಶುಲ್ಕವನ್ನೂ ಪಾವತಿಸಿ ನೋಂದಣಿ ಮಾಡಿಸಿಲ್ಲ. ಕೋವಿಡ್‍ನಿಂದಾಗಿ ಪರೀಕ್ಷೆ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಬಾಲಕಿ ಆತ್ಮಹತ್ಯೆಗೆ ಮುಂದಾಗಿದ್ದರು ಎಂದು ತಿಳಿದು ಬಂದಿದೆ. ಬಾಲಕಿ ಮನೆಗೆ ಭೇಟಿ ನೀಡಿದ ಸಚಿವರು ಸಾಂತ್ವನ ಹೇಳಿದರು. ಮುಂದಿನ ಆಗಸ್ಟ್‍ನಲ್ಲಿ ಪೂರಕ ಪರೀಕ್ಷೆ ನಡೆಯಲಿದ್ದು, ಆಗ ಅವಕಾಶ ಮಾಡಿಕೊಡಲಾಗುವುದು. ನಿಮ್ಮಂತೆಯೇ ಕೋವಿಡ್…
ತುಮಕೂರು : ಜಿಲ್ಲೆಯಲ್ಲಿ ಬಾಲ್ಯವಿವಾಹಗಳು ನಡೆಯದಂತೆ ತಡೆಯಬೇಕೆಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜರುಗಿದ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ, ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ಸಂರಕ್ಷಣಾ ಅಧಿನಿಯಮ 2005ರಡಿಯ ಮತ್ತು ಸಖಿ ಯೋಜನೆಯ ಅನುಷ್ಠಾನ ಕುರಿತ ಜಿಲ್ಲಾ ಸಮನ್ವಯ ಸಮಿತಿ ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆಯ ಸಮರ್ಪಕ ಅನುಷ್ಠಾನ, ಸ್ಥೈರ್ಯನಿಧಿ ಯೋಜನೆಯ ಸಮರ್ಪಕ ಅನುಷ್ಠಾನ ಕುರಿತ ಜಿಲ್ಲಾ ಸಮಿತಿ ಮತ್ತು ಜಿಲ್ಲಾ ಮಟ್ಟದ ವಿಧವಾ ಕೋಶ ಮತ್ತು ಶೆಲ್ಟರ್ ಹೋಮ್ಸ್‍ಗಳ ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮ ಮಟ್ಟದ ಅಧಿಕಾರಿಗಳು ಸೇರಿದಂತೆ ಬೀಟ್ ಪೆÇಲೀಸರು ಬಾಲ್ಯ ವಿವಾಹ ತಡೆಯವ ಕಾರ್ಯಕ್ಕೆ ಮೊದಲಾದ್ಯತೆ ನೀಡಬೇಕು ಎಂದು ನಿರ್ದೇಶಿಸಿದರು. ಸಾಮಾಜಿಕ ಪಿಡುಗಾಗಿ ಕಾಡುತ್ತಿರುವ ಹಾಗೂ ಸಮಾಜದಲ್ಲಿ ಅನಿಷ್ಟ ಪದ್ಧತಿಗಳಲ್ಲಿ ಒಂದಾದ ಬಾಲ್ಯವಿವಾಹಗಳನ್ನು ತಡೆಯಲು ಸರ್ಕಾರವು ಎಲ್ಲಾ ಇಲಾಖೆಗಳ ಗ್ರಾಮ ಹಾಗೂ ತಾಲೂಕು…
ತುಮಕೂರು: ಬೆಂಗಳೂರು ಆರ್‍ಟಿಓ ಇನ್ಸ್‍ಪೆಕ್ಟರ್ ಕೃಷ್ಣಮೂರ್ತಿ ಅವರ ಮನೆ ಮೇಲೆ ಎಸಿಬಿ ದಾಳಿ ನಡೆದಿದೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ದೇವರ ಹಳ್ಳಿಯಲ್ಲಿರುವ ಫಾರಂ ಹೌಸ್ ಮೇಲೆ ಹತ್ತಕ್ಕೂ ಹೆಚ್ಚು ಮಂದಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಅಕ್ರಮ ಆಸ್ತಿ ಸಂಪಾದನೆಯ ಬಗ್ಗೆ ಪರಿಶೀಲನೆ ನಡೆಸಿದರು. ಬೀದರ್, ತುಮಕೂರು, ದಾವಣಗೆರೆಯಲ್ಲಿ ಎಸಿಬಿ ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನೆಲೆ ಅಧಿಕಾರಿಗಳ ಮನೆ ಮೇಲೆ ದಾಳಿ ಮಾಡಿದೆ. ದಾವಣಗೆರೆಯ ಯೋಜನಾ ನಿರ್ದೇಶಕ ಎಚ್.ಆರ್.ಕೃಷ್ಣಪ್ಪ ಹಾಗೂ ತುಮಕೂರಿನ ಆರ್‍ಟಿಓ ಇನ್ಸ್‍ಪೆಕ್ಟರ್ ಕೃಷ್ಣಮೂರ್ತಿ ಮನೆ ಹಾಗೂ ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ
ತುಮಕೂರು: ತುಮಕೂರು ನಗರ ಠಾಣೆಯ ಪಿಎಸ್‍ಐ ಮಂಜುನಾಥ್ ಅಮಾನತ್ತಾಗಿರುತ್ತಾರೆ. ನಗರದ ಸಬ್‍ಇನ್ಸ್‍ಪೆಕ್ಟರ್ ಮಂಜುನಾಥ್‍ರವರನ್ನು ಅಮಾನತ್ತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಾನತ್ತು ಆದೇಶವನ್ನು ಹೊರಡಿಸಿರುತ್ತಾರೆ. ಕರ್ತವ್ಯ ಲೋಪ ಮತ್ತು ಅಧಿಕಾರ ದುರ್ಬಳಕೆ ಮಾಡಿಕೊಂಡ ಬಗ್ಗೆ ದೂರು ನೀಡಿದ ಹಿನ್ನೆಲೆಯಲ್ಲಿ ದೂರನ್ನು ಆಧರಿಸಿ ಪ್ರಾಥಮಿಕ ತನಿಖೆ ಕೈಗೊಂಡು ತನಿಖಾ ವರದಿಯ ಆಧಾರದ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರವಾಡ್‍ರವರು ಅಮಾನತ್ತು ಮಾಡಿರುತ್ತಾರೆ. ನೂತನ ಎಸ್ಪಿ ಆಗಿ ಅಧಿಕಾರ ಸ್ವೀಕರಿಸಿದ ನಂತರ ಪಿಎಸ್‍ಐರವರನ್ನು ಅಮಾನತ್ತು ಮಾಡುವ ಮುಖೇನ ಕಾನೂನಿಗೆ ಯಾರೂ ದೊಡ್ಡವರಲ್ಲ, ಇಲಾಖೆಯೊಳಗಿನ ಅಧಿಕಾರಿಗಳು ಸಹ ಯಾವುದೇ ತಪ್ಪು ಮಾಡಬಾರದು, ಮಾಡಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇನೆ ಎಂಬ ಸ್ಪಷ್ಟ ಸಂದೇಶವನ್ನು ಈ ಆದೇಶದ ಮುಖಾಂತರ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಇದೀಗ ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಎಸ್ಪಿರವರ ಈ ಕಾರ್ಯ ಕ್ಷಮತೆಗೆ ಪ್ರಶಂಸನೀಯ ಮಾತುಗಳು ಕೇಳಿ ಬರುತ್ತವೆ.











