ತುಮಕೂರು : ಜಿಲ್ಲೆಯಲ್ಲಿ 2 ಹಂತಗಳಲ್ಲಿ ನಡೆಯಲಿರುವ ಗ್ರಾಮ ಪಂಚಾಯಿತಿ ಚುನಾವಣೆ-2020ಕ್ಕೆ ಸಂಬಂಧಿಸಿದಂತೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅಕ್ರಮ ಮದ್ಯ ಮಾರಾಟ/ ಸಾಗಾಣಿಕೆ/ಶೇಖರಣೆ/ ಇತ್ಯಾದಿ ಅಬಕಾರಿ ಅಕ್ರಮಗಳನ್ನು ತಡೆಗಟ್ಟುವ ಸಲುವಾಗಿ ಅಬಕಾರಿ ಇಲಾಖೆಯಿಂದ ಕಠಿಣ ಕ್ರಮಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾದ ನವೆಂಬರ್ 30 ರಿಂದ ಡಿಸೆಂಬರ್ 10ರವರೆಗೆ 223 ದಾಳಿಗಳನ್ನು ನಡೆಸಿ 32 ಘೋರ ಪ್ರಕರಣ, 111 15(ಎ) ಪ್ರಕರಣ, 12 ಬಿಎಲ್‍ಸಿ ಪ್ರಕರಣಗಳನ್ನು ದಾಖಲಿಸಲಾಗಿದ್ದು, 440.250 ಲೀ. ಮದ್ಯ, 41.200 ಲೀಟರ್ ಬಿಯರ್, 8 ಸೇಂದಿ ಹಾಗೂ 20 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ದೂರು ಸಲ್ಲಿಸಲು ನಿಯಂತ್ರಣ ಕೊಠಡಿ:- ಗ್ರಾಮ ಪಂಚಾಯಿತಿ ಚುನಾವಣೆಯನ್ನು ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ನಡೆಸುವ ಉದ್ದೇಶದಿಂದ ಅಬಕಾರಿ ಉಪ ಆಯುಕ್ತರ ಕಚೇರಿಯಲ್ಲಿ ಅಬಕಾರಿ ನಿಯಂತ್ರಣ ಕೊಠಡಿ(ಕಂಟ್ರೋಲ್ ರೂಂ)ಯನ್ನು ಸ್ಥಾಪಿಸಲಾಗಿದ್ದು, ಅಬಕಾರಿ ಅಕ್ರಮಗಳು ಕಂಡು ಬಂದಲ್ಲಿ ಸಾರ್ವಜನಿಕರು ಅಬಕಾರಿ ಉಪ ಆಯುಕ್ತರ ಕಚೇರಿಯ ಕಂಟ್ರೋಲ್ ರೂಂ…
Author: News Desk Benkiyabale
ತುಮಕೂರು : ಜಿಲ್ಲೆಯ ಮಧುಗಿರಿ, ಶಿರಾ, ತಿಪಟೂರು, ತುರುವೇಕೆರೆ ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕುಗಳ ಒಟ್ಟು 161 ಗ್ರಾಮ ಪಂಚಾಯಿತಿ ವ್ಯಾಪ್ತಿಯ 1189 ಕ್ಷೇತ್ರಗಳ 2543 ಸದಸ್ಯ ಸ್ಥಾನಗಳಿಗೆ 1321 ಮತಗಟ್ಟೆಗಳಲ್ಲಿ ಡಿಸೆಂಬರ್ 27ರಂದು ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ|| ಕೆ.ರಾಕೇಶ್‍ಕುಮಾರ್ ವೇಳಾಪಟ್ಟಿ ಪ್ರಕಟಿಸಿದ್ದಾರೆ. ವೇಳಾಪಟ್ಟಿಯನ್ವಯ ಎರಡನೇ ಹಂತದ ಚುನಾವಣೆ ನಡೆಸಲು ಚುನಾವಣಾಧಿಕಾರಿಗಳು ಶುಕ್ರವಾರ(ಡಿ.11)ಚುನಾವಣಾ ನೋಟೀಸ್ ಅನ್ನು ಹೊರಡಿಸಿದ್ದು, ಅಭ್ಯರ್ಥಿಗಳು ಡಿಸೆಂಬರ್ 16ರಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿದೆ. ನಾಮಪತ್ರ ಪರಿಶೀಲನೆಯು ಡಿಸೆಂಬರ್ 17ರಂದು ನಡೆಯಲಿದ್ದು, ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಡಿಸೆಂಬರ್ 19 ಕಡೆಯ ದಿನವಾಗಿದೆ. ಮತದಾನದ ಅವಶ್ಯವಿದ್ದರೆ ಡಿಸೆಂಬರ್ 27ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಹಾಗೂ ಮರು ಮತದಾನವಿದ್ದಲ್ಲಿ ಡಿಸೆಂಬರ್ 29ರ ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಸಲಾಗುವುದು. ಮತ ಎಣಿಕೆಯು ಡಿಸೆಂಬರ್ 31ರಂದು ಬೆಳಿಗ್ಗೆ 8…
ಕೊರಟಗೆರೆ : ರಾಜ್ಯದ ಸುಪ್ರಸಿದ್ಧ ಐತಿಹಾಸಿಕ ದೇವಸ್ಥಾನ ಕಲ್ಪತರು ನಾಡಿನ ಗೊರವನಹಳ್ಳಿ ಶ್ರೀಮಹಾಲಕ್ಷ್ಮೀ ದೇವಿಯ ಪುಣ್ಯಕ್ಷೇತ್ರದಲ್ಲಿ ಕಾರ್ತಿಕಮಾಸದ ಕಡೆಯ ಶುಕ್ರವಾರ ಶ್ರೀಮಹಾಲಕ್ಷ್ಮೀ ದೇವಿಯ ವೈಭವದ ಬ್ರಹ್ಮರಥೋ ತ್ಸವ, ಲಕ್ಷದೀಪೋತ್ಸವ ಮತ್ತು ಮುತ್ತಿನಪಲ್ಲಕ್ಕಿ ಉತ್ಸವವು ಬಹಳ ವಿಜೃಂಭಣೆಯಿಂದ ನೆರವೇರಿತು. ಪ್ರತಿವರ್ಷದಂತೆ ಕಲ್ಪತರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿ ತೀತಾ ಗ್ರಾಪಂ ವ್ಯಾಪ್ತಿಯಲ್ಲಿ ಸುಪ್ರಸಿದ್ದಿ ಪಡೆದಿರುವ ಗೊರವನಹಳ್ಳಿ ಶ್ರೀಮಹಾಲಕ್ಷ್ಮೀ ಕ್ಷೇತ್ರಕ್ಕೆ ಲಕ್ಷದೀಪೋತ್ಸವದ ಕಾರ್ಯಕ್ರಮದಲ್ಲಿ ಅಜ್ಞಾನವೆಂಬ ಕತ್ತಲನ್ನು ತೊಡೆದೋಡಿಸಿ ಸುಜ್ಞಾನವೆಂಬ ಬೆಳಕು ಚೆಲ್ಲುವ, ಬದುಕನ್ನೆ ಜ್ಯೋತಿಯಂತೆ ಪ್ರಕಾಶಮಾನಗೊಳಿಸುವ ಈ ದೀಪೋತ್ಸವದ ವೈಭವ ಕಣ್ತುಂಬಿಕೊಳ್ಳಲು ಸಹಸ್ರಾರು ಭಕ್ತರು ಆಗಮಿಸಿದ್ದರು. ಮಹಾಲಕ್ಷ್ಮೀ ದೇವಿಯ ವೈಭವದ ಲಕ್ಷದೀಪೋತ್ಸವದ ಪ್ರಯುಕ್ತ ದೇವಾಲಯಕ್ಕೆ ವಿಶೇಷ ಹೂವಿನ ಅಲಂಕಾರ, ವಿದ್ಯುತ್ ಅಲಂಕಾರ, ದೇವಿಗೆ ಬೆಳಿಗ್ಗೆ 7.00ಗಂಟೆಗೆ ಪಂಚಾಮೃತ ಅಭಿಷೇಕ, ಹೋಮಹವನ, ವಿಶೇಷ ಪೂಜೆ, ಮದ್ಯಾಹ್ನ 12.00ಕ್ಕೆ ಬ್ರಹ್ಮರಥೋತ್ಸವ, ಸಂಜೆ 5.15ಕ್ಕೆ ಲಕ್ಷದೀಪೋತ್ಸವ, ರಾತ್ರಿ 7.00ಗಂಟೆಗೆ ಗೊರವನಹಳ್ಳಿ, ನರಸಯ್ಯನಪಾಳ್ಯ ಮತ್ತು ಗೊಲ್ಲರಹಟ್ಟಿ ಗ್ರಾಮಸ್ಥರು…
ತುಮಕೂರು: ತುಮಕೂರು ಮಹಾನಗರ ಪಾಲಿಕೆ, ರಾಕ್ ಯೂತ್ ಕ್ಲಬ್ ಸಹಯೋಗದಲ್ಲಿ ಸ್ಚಚ್ಛ ಸರ್ವೇಕ್ಷಣಾ ಅಭಿಯಾನದ ಅಂಗವಾಗಿ ಏರ್ಪಡಿಸಿರುವ ಮೇಯರ್ಸ್ ಕಪ್ 2020 ಕ್ರೀಡಾಕೂಟಕ್ಕೆ ಸಿದ್ಧಗಂಗಾ ಮಠಾಧೀಶರಾದ ಸಿದ್ಧಲಿಂಗಶ್ರೀಗಳು ಬ್ಯಾಟ್ ಬೀಸುವ ಮೂಲಕ ಚಾಲನೆ ನೀಡಿದರು. ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕ್ರೀಡಾ ಚಟುವಟಿಕೆಗಳಿಂದ ದೈಹಿಕ ಸ್ವಾಸ್ಥ್ಯ ಪಡೆಯಲು ಸಾಧ್ಯವಿದ್ದು, ತುಮಕೂರು ನಗರದಲ್ಲಿ ಕ್ರೀಡಾ ಚಟುವಟಿಕೆಗಳು ನಿರಂತರವಾಗಿ ನಡೆಯುವಂತಾಗಬೇಕು, ಈ ನಿಟ್ಟಿನಲ್ಲಿ ಕ್ರೀಡಾ ಸಂಘಗಳು ಹಾಗೂ ಸ್ಥಳೀಯ ಆಡಳಿತ ಮುಂದಾಗಬೇಕು ಎಂದು ಸಲಹೆ ನೀಡಿದರು. ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಶಕ್ತಿ ಹೆಚ್ಚಳವಾಗಲಿದ್ದು, ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯವಾಗಿದ್ದು, ಸೋಲು- ಗೆಲುವು ಮುಖ್ಯವಲ್ಲ, ಕ್ರೀಡೆಯಿಂದ ಸಮಯ ಪ್ರಜ್ಞೆ, ಶಿಸ್ತು ಬೆಳೆಯುವುದಲ್ಲದೇ, ಸೋಲನ್ನು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವನೆ ಬೆಳೆಯುವುದು ಎಂದು ಹೇಳಿದರು. ಕೋವಿಡ್ ಸಂದರ್ಭದಿಂದ ಮನೆಯಲ್ಲಿ ಉಳಿದಿರುವವರು ಹೊರಗೆ ಬಂದು ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದು…
ತುಮಕೂರು: ಎಟಿಎಮ್ ಮಿಷಿನ್‍ಗಳಿಗೆ ಸ್ಕಿಮ್ಮಿಂಗ್ ಮಿಷನ್ ಅಳವಡಿಸಿ ನಕಲಿ ಎಟಿಎಮ್ ಕಾರ್ಡ್ ತಯಾರಿಸಿಕೊಂಡು ಹಣ ಮಾಡುತ್ತಿದ್ದ ಇಬ್ಬರು ವಿದೇಶಿ ನಯವಂಚಕರನ್ನು ಬಂಧಿಸಲಾಗಿದೆ ಎಂದು ಐಜಿಪಿ ಸೀಮಂತ್‍ಕುಮಾರ್‍ಸಿಂಗ್ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ತಾವು ಇದ್ದ ಸ್ಥಳದಿಂದಲೇ ಡೂಪ್ಲಿಕೇಟ್ ಎಟಿಎಂ ಬಳಸಿ ಸಾರ್ವಜನಿಕರ ಹಣವನ್ನು ದರೋಡೆ ಮಾಡುತ್ತಿದ್ದ ಅಂತರಾಷ್ಟ್ರೀಯ ಆರೋಪಿಗಳನ್ನು ಬಂಧಿಸುವಲ್ಲಿ ತುಮಕೂರಿನ ಸಿಇಎನ್ ಕ್ರೈಂ ಪೊಲೀಸರು ಯಶಸ್ವಿಯಾಗಿದ್ದಾರೆ. ಇದೇ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಸಾರ್ವಜನಿಕರು ತಮ್ಮ ಖಾತೆಯಲ್ಲಿದ್ದ ಹಣವನ್ನು ಯಾರೋ ದೋಚಿದ್ದಾರೆ ಎಂದು ಪೊಲೀಸ್ ಸ್ಟೇಷನ್‍ಗೆ ದೂರು ನೀಡಿದ್ದರು. ಈ ಭೀಮಸಂದ್ರದ ಇಂಡಿಯಾ 1 ಎಟಿಎಂ, ಕುಣಿಗಲ್ ಟೌನ್‍ನ ಕೆನರಾ ಬ್ಯಾಂಕ್ ಎಟಿಎಮ್‍ಗಳಲ್ಲಿ ಗ್ರಾಹಕರ ಹಣವನ್ನು ದೋಚಿದ್ದರು. ಕುಣಿಗಲ್ ಎಟಿಎಮ್‍ನಲ್ಲಿ 42 ಪ್ರಕರಣ, ಭೀಮಸಂದ್ರ ಎಟಿಎಮ್‍ನಿಂದ 16, ನಿಟ್ಟೂರು ಎಟಿಎಮ್‍ನಿಂದ2 ಒಟ್ಟು 60 ವಂಚನೆ ಪ್ರಕರಣಗಳು ದಾಖಲಾಗಿದ್ದು ಗ್ರಾಹಕರಿಂದ 25 ಲಕ್ಷಕ್ಕೂ ಅಧಿಕ ಮೊತ್ತ ವಂಚನೆಯಾಗಿತ್ತು. …
ತುಮಕೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ಸಂಸ್ಥೆಯ ನೌಕರರು ನಗರದಲ್ಲೂ ಬಸ್ ಸಂಚಾರವನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸಿದ್ದಾರೆ. ನಗರದಲ್ಲಿ ದಿಢೀರನೆ ಸಾರಿಗೆ ಸಂಸ್ಥೆಯ ಸಿಬ್ಬಂದಿ ಮುಷ್ಕರಕ್ಕೆ ಮುಂದಾದ್ದರಿಂದ ಬೇರೆ ಬೇರೆ ಊರುಗಳಿಗೆ ತೆರಳಲು ಕೆಎಸ್ಸಾರ್ಟಿಸಿ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು ಬಸ್‍ಗಳ ಸಂಚಾರ ಇಲ್ಲದೆ ಪರದಾಡುವಂತಾಯಿತು. ಕೆಎಸ್ಸಾರ್ಟಿಸಿ ಬಸ್‍ಗಳ ಚಾಲಕರು, ನಿರ್ವಾಹಕರು ದಿಢೀರನೆ ಮುಷ್ಕರ ಬೆಂಬಲಿಸಿ ಬಸ್ ಸಂಚಾರ ಬಂದ್ ಮಾಡಿ ನಿಲ್ದಾಣದಲ್ಲೇ ಧರಣಿಗೆ ಮುಂದಾದರು. ಈ ದಿಢೀರ್ ಬೆಳವಣಿಗೆಯಿಂದ ಬೆಳಿಗ್ಗೆಯೇ ಬೆಂಗಳೂರು, ಮದ್ದೂರು, ಶಿವಮೊಗ್ಗ ಸೇರಿದಂತೆ ಬೇರೆ ಬೇರೆ ಸ್ಥಳಗಳಿಗೆ ತೆರಳಲು ಬಸ್‍ಗಾಗಿ ಕಾದು ಕುಳಿತಿದ್ದ ಪ್ರಯಾಣಿಕರ ಪಾಡಂತೂ ಹೇಳತೀರದಾಗಿತ್ತು. ಮುಂಜಾನೆ 5 ಗಂಟೆ ಸಮಯದಲ್ಲಿ ತುಮಕೂರು ನಿಲ್ದಾಣದಿಂದ ತೆರಳಿದ ಬಸ್‍ಗಳನ್ನು ಹೊರತುಪಡಿಸಿದರೆ ಇನ್ಯಾವುದೇ ಬಸ್‍ಗಳು ಸಂಚಾರ ಆರಂಭಿಸಿಲ್ಲ. ಬೇರೆ…
ಹುಳಿಯಾರು: ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 2 ನೇ ಹಂತದ ಚುನಾವಣೆ ನಡೆಯಲಿದ್ದು ಇದಕಾಗಿ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಶುಕ್ರವಾರ ನಾಮಪತ್ರ ಸಲ್ಲಿಕೆ ಕಾರ್ಯ ಶುರುವಾಗಿದೆ. ಡಿ.11 ರಿಂದ ಡಿ. ಡಿ.16 ರ ವರೆವಿಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಿದ್ದರಿಂದ ವಿವಿಧ ಪಂಚಾಯಿತಿಗಳಲ್ಲಿ ನೇಮಕಗೊಂಡ ಮತಗಟ್ಟೆ ಅಧಿಕಾರಿಗಳು ನಾಮಪತ್ರ ಸ್ವೀಕಾರಕ್ಕೆ ವೇದಿಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಆಕಾಕ್ಷಿಗಳು ಅಗತ್ಯ ಮಾಹಿತಿಯನ್ನು ಸಂಗ್ರಹಿಸಿಕೊಳ್ಳಲು ಉತ್ಸುಕರಾಗಿದ್ದಾರೆ. ಕೋವಿಡ್ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ ಚುನಾವಣಾ ಕಾರ್ಯವನ್ನು ನಿಭಾಯಿಸಲಾಗುತ್ತಿದೆ. ಹಾಗೆಯೇ ಕಚೇರಿಗೆ ಬರುವ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಅಂತರ ಕಾಯ್ದುಕೊಳ್ಳುವುದು, ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸಿಕೊಳ್ಳುವುದು ಸೇರಿ ಇನ್ನಿತರ ನಿಯಮಗಳನ್ನು ಪಾಲಿಸುವಂತೆ ಸೂಚಿಸಲಾಗುತ್ತಿದೆ. ಅಲ್ಲದೆ ಕೊರೊನಾ ಪಾಸಿಟಿವ್ ಬಂದಿರುವ ವ್ಯಕ್ತಿಯೂ ಸಹ ಚುನಾವಣೆಗೆ ಸ್ಪರ್ಧಿಸಬಹುದಾಗಿದ್ದು ನಾಮಪತ್ರವನ್ನು ಸೂಚಕರ ಮೂಲಕ ಸಲ್ಲಿಸಬೇಕಿದೆ. ಶೌಚಾಲಯ ಇಲ್ಲದವರು 1 ವರ್ಷದ ಬಳಿಕ ಕಟ್ಟುವ ಪ್ರಮಾಣ ಪತ್ರ…
ಹುಳಿಯಾರು: ಕೊರೊನಾ ಸೋಂಕಿನ ಆತಂಕ 40 ವರ್ಷಗಳಿಂದ ಎಡೆಯೂರು ಸಿದ್ದಲಿಂಗೇಶ್ವರ ಲಕ್ಷ ದೀಪೋತ್ಸವಕ್ಕೆ ತೆರಳುತ್ತಿರುವ ಪಾದಯಾತ್ರಿಗಳನ್ನೂ ಕಾಡಿದೆ. ಪರಿಣಾಮ ಬರೋಬ್ಬರಿ ನಾಲ್ಕು ನೂರಕ್ಕೂ ಹೆಚ್ಚು ಮಂದಿ ತೆರಳುತ್ತಿದ್ದ ಈ ಪಾದಯಾತ್ರೆಗಳ ಸಂಖ್ಯೆ ಈಗ ಕೇವಲ ಐವತಕ್ಕೆ ಕುಸಿದಿದೆ. ಹೌದು, ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಶಲವಡಿಯ ಸಿದ್ದಲಿಂಗೇಶ್ವರ ಭಕ್ತ ಮಂಡಳಿ ಪ್ರತಿ ವರ್ಷ ಕಾರ್ತೀಕ ಮಾಸದಲ್ಲಿ ಎಡೆಯೂರಿಗೆ ಪಾದಯಾತ್ರೆ ಕೈಗೊಳ್ಳುತ್ತದೆ. ಜಾತಿಮತ ಭೇದವಿಲ್ಲದೇ ಪಾದಯಾತ್ರೆ ನಡೆಸುವ ಇವರು ಶಲವಡಿಯಿಂದ ಕುರ್ತುಕೋಟಿ, ಮುಳಗುಂದ, ಬಟ್ಟೂರ, ಸುರಣಿಗಿ, ಹಾಲಗಿ, ಗುತ್ತಲ, ಅನ್ವೇರಿ, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಹೊಳಲ್ಕೆರೆ, ಹೊಸದುರ್ಗ ಮಾರ್ಗವಾಗಿ ಶ್ರೀರಾಂಪುರ, ಹುಳಿಯಾರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ ಮೂಲಕ ಯಡೆಯೂರು ತಲುಪಲಿದ್ದಾರೆ. ಪಾದಯಾತ್ರೆಯ ಯಾತ್ರಿಗಳು ನಿತ್ಯ 35 ರಿಂದ 40 ಕಿ.ಮೀ. ಕ್ರಮಿಸಿ, ಸಂಜೆ ನಂತರ ಮೊದಲೇ ನಿಗದಿಯಾದ ಸ್ಥಳಗಳಲ್ಲಿ, ದೇವಾಲಯಗಳಲ್ಲಿ ತಂಗುತ್ತಾರೆ. ವಿಶ್ರಮಿಸಿಕೊಂಡು, ದೇವರ ಭಜನೆ ಮಾಡಿ ಭಕ್ತಾಧಿಗಳು ನೀಡುವ ಪ್ರಸಾದವನ್ನು…
ಮಧುಗಿರಿ: ಬೆಳಿಗ್ಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಇಬ್ಬರು ಮಹಿಳೆಯರ ಮೇಲೆ ಮರಿ ಕರಡಿಯೊಂದು ಕರಡಿಗಳು ದಾಳಿ ಮಾಡಿದ ಹಿನ್ನೆಲೆಯಲ್ಲಿ ಮಹಿಳೆಯರಿಬ್ಬರೂ ಗಂಬೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಕಸಬಾ ವ್ಯಾಪ್ತಿಯ ಸಿದ್ದಾಪುರ ಗ್ರಾಮದ ಲಕ್ಷ್ಮಮ್ಮ ಮತ್ತು ಬಸವನಹಳ್ಳಿ ಗ್ರಾಮದ ಜ್ಯೋತಿ ಗಂಬೀರವಾಗಿ ಗಾಯಗೊಂಡವರು. ಬೆಳಗ್ಗೆ 11 ಗಂಟೆ ಸಮಯದಲ್ಲಿ ಸಿದ್ದಾಪುರ ಗ್ರಾಮದ ಲಕ್ಮಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಕರಡಿ ದಾಳಿ ಮಾಡಿ ಗಂಬೀರವಾಗಿ ಗಾಯಗೊಳಿಸಿದೆ. ಮತ್ತೆ ಒಂದು ಗಂಟೆ ಅವಧಿಯಲ್ಲಿ ಅದೇ ಕರಡಿ ಕಸಬಾ ವ್ಯಾಪ್ತಿಯ ಬಸವಹಳ್ಳಿಯ ಕೆ.ಎಸ್.ಆರ್.ಟಿ.ಸಿ ಡಿಪೋ ಹಿಂಬಾಗದಲ್ಲಿರುವ ಹೊಲದಲ್ಲಿ ಜ್ಯೋತಿ ಎಂಬುವವರು ತೊಗರಿಕಾಯಿ ಕೀಳುವಾಗ ಅವರ ಮೇಲೂ ದಾಳಿ ಮಾಡಿ ಗಂಬೀರವಾಗಿ ಗಾಯಗೊಳಿಸಿದೆ. ಗಾಯಾಳುಗಳಿಬ್ಬರನ್ನೂ ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ವಲಯ ಅರಣ್ಯಾಧಿಕಾರಿ ವಾಸುದೇವನ್ ಬೇಟಿ ನೀಡಿದ್ದು, ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಕರಡಿ ದಾಳಿಯಿಂದ ಗ್ರಾಮಸ್ಥರು ಭಯಭೀತರಾಗಿದ್ದು, ಕರಡಿಗಳನ್ನು…
ಹುಳಿಯಾರು: ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಪಕ್ಷಕ್ಕಾಗಿ ದುಡಿಯುತ್ತಿರುವ ನಿಷ್ಟಾವಂತ ಕಾರ್ಯಕರ್ತರನ್ನು ಗೆಲ್ಲಿಸಲು ಹಗಲಿರುಳೆನ್ನದೆ ದುಡಿಯುವಂತೆ ಚಿಕ್ಕನಾಯಕನಹಳ್ಳಿ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಸಿ.ಬಿ.ಸುರೇಶ್‍ಬಾಬು ಕರೆ ನೀಡಿದರು. ಗ್ರಾಮ ಪಂಚಾಯ್ತಿ ಚುನಾವಣೆಯ ಹಿನ್ನೆಲೆಯಲ್ಲಿ ಹಂದನಕೆರೆ ಹೋಬಳಿ ಬರಗುರು ಪಂಚಾಯ್ತಿಯ ಉಪ್ಪಾರಹಳ್ಳಿಯಲ್ಲಿ ನಡೆದ ಜೆಡಿಎಸ್ ಮುಖಂಡರ ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ನಾವು ಗೆಲ್ಲುವುದು ಎಷ್ಟು ಮುಖ್ಯವೋ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವುದು ಅಷ್ಟೇ ಮುಖ್ಯ. ಹಾಗಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿಯೊಂದು ವಾರ್ಡ್‍ನಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನು ಹಾಕಬೇಕು. ಸಾಮಜಿಕ ಸ್ಥಾಯಿ ಸಮಿತಿ ಅಧ್ಯಕ್ಷರು ರಾಮಚಂದ್ರಯ್ಯ, ಯಶಸ್, ಮುನಿಯಪ್ಪ, ಹನುಮಂತಯ್ಯ, ರಾಮಚಂದ್ರಯ್ಯ, ಬಸವರಾಜು ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.











