ಹುಳಿಯಾರು : ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳಿಗೆ ಕೊರೊನಾ ಪರೀಕ್ಷೆಗೆ ಕಡ್ಡಾಯವಾಗಿ ಒಳಗಾಗುವ ಅನಿವಾರ್ಯತೆ ಎದುರಾಗಿದೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೆ ಮುನ್ನ ಆರೋಗ್ಯ ಸ್ಥಿತಿ ಅಂಕಿ-ಅಂಶಗಳನ್ನೂ ದಾಖಲಿಸಬೇಕಾಗಿದೆ. ಇದು ಕಡ್ಡಾಯವಾಗಿದೆ. ಸರ್ಕಾರ ರೂಪಿಸಿರುವ ಎಲ್ಲ ರೀತಿ ಮುನ್ನೆಚ್ಚರಿಕೆ ಮಾರ್ಗಸೂಚಿಗಳನ್ನು ಪಾಲಿಸಬೇಕಿರುವುದು ಅಭ್ಯರ್ಥಿಗಳ ಮೇಲಿ ನ ಹೆಚ್ಚುವರಿ ಹೊಣೆ ಯಾಗಿದೆ. ಇದಕ್ಕಾಗಿ ಗ್ರಾಮ ಪಂಚಾಯ್ತಿಯಿಂದ ಓರ್ವ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇವರು ನಾಮಪತ್ರ ಸಲ್ಲಿಸಲು ಬರುವ ಅಭ್ಯರ್ಥಿಗಳು ಹಾಗೂ ಅವರ ಜತೆ ಬರುವ ಬೆಂಬಲಿಗರ ದೇಹದ ಉಷ್ಣಾಂಶ ಪರೀಕ್ಷೆ (ಥರ್ಮಲ್ ಸ್ಕ್ಯಾನಿಂಗ್) ಮಾಡುವ ಜೊತೆಗೆ ಕೈಗಳೀಗೆ ಸಾನಿಟೈಸ್ ಮಾಡುತ್ತಿದ್ದಾರೆ. ಅಲ್ಲದೆ ಕಡ್ಡಾಯವಾಗಿ ಅಂತರ ಪಾಲನೆ ಮಾಡಿಸುತ್ತಿದ್ದಾರೆ. ಮಾಸ್ಕ್ ಧರಿಸದೆ ಬರುವವರನ್ನು ನಿರ್ಧಾಕ್ಷ್ಯಿಣ್ಯವಾಗಿ ತಡೆಯುತ್ತಿದ್ದಾರೆ. ಚುನಾವಣೆ ನಾಮಪತ್ರ ಸಲ್ಲಿಕೆ ವೇಳೆ ಗುಂಪು ಗುಂಪಾಗಿ ಜನ ಬರುತ್ತಾರಾದರೂ ಅವರನ್ನು ಕಚೇರಿ ಒಳಗೆ ಬಿಟ್ಟುಕೊಳ್ಳುತ್ತಿಲ್ಲ. ಇದಕ್ಕಾಗಿ ಪೊಲೀಸ್ ಇಲಾಖೆಯಿಂದ…
Author: News Desk Benkiyabale
ತುಮಕೂರು : ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣಾ ಮತದಾನ ಸಂಬಂಧ ತುಮಕೂರು ತಾಲೂಕಿನ 876 ಪಿಆರ್‍ಒ ಮತ್ತು ಎಪಿಆರ್‍ಒಗಳಿಗೆ ನಗರದ ಎಂಪ್ರೆಸ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ತರಬೇತಿ ನೀಡಲಾಯಿತು. ಈ ಸಂದರ್ಭದಲ್ಲಿ ತಹಶೀಲ್ದಾರ್ ಮೋಹನ್ ಕುಮಾರ್ ಅವರು ಮಾತನಾಡಿ, ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಒಟ್ಟು 20 ಕೊಠಡಿಗಳಲ್ಲಿ ತರಬೇತಿ ನೀಡಲಾಗುತ್ತಿದ್ದು, ಒಂದು ಕೊಠಡಿಯಲ್ಲಿ 43 ಪಿಆರ್‍ಓ ಮತ್ತು ಎಪಿಆರ್‍ಓಗಳಿಗೆ ಗ್ರಾಮ ಪಂಚಾಯಿತಿ ಚುನಾವಣಾ ಮತದಾನದಲ್ಲಿ ನಿರ್ವಹಿಸಬೇಕಾಗಿರುವ ಕಾರ್ಯಗಳ ಬಗ್ಗೆ ತರಬೇತಿಯಲ್ಲಿ ಪಿಆರ್‍ಓ ಹಾಗೂ ಎಪಿಆರ್‍ಓಗಳಿಗೆ ತಿಳಿಸಲಾಯಿತು.
ತುಮಕೂರು : ಚಿತ್ರಕಲೆ ಅನ್ನೋದು ಒಂದೇ ನೋಟಕ್ಕೆ ಎಂಥವರನ್ನೂ ಸೆಳೆದು ಬಿಡುತ್ತೆ, ಅದಲ್ಲೂ ಕಲಾವಿದನ ಕುಂಚದಲ್ಲಿ ಅರಳುವ ಚಿತ್ರಗಳು ಸುಂದರವಾಗಿದ್ದರೆ ನೋಡುಗರು ಫಿದಾ ಆಗಿ ಬಿಡುತ್ತಾರೆ, ಅಂಥ ತಾಕತ್ತು ಚಿತ್ರ ಕಲೆಗಿದೆ. ತುಮಕೂರಿನ ಶಾಲೆಯೊಂದರ ಗೋಡೆ ಮೇಲೆ ಗೋಡೆ ಮೇಲೆ ಹಾಗೂ ಶಾಲಾ ಕೊಠಡಿ ಒಳಗೆ ಅರಳಿರುವ ಚಿತ್ರಗಳನ್ನು ನೋಡಿದ್ರೆ ಸಾಕು ಎಂಥವರು ತಲೆದೂಗದೇ ಇರಲಾರರು. ಹೌದು, ನಗರದ ಎಂಪ್ರೆಸ್ ಶಾಲೆಯಲ್ಲಿ ಶಾಲಾ ಕೊಠಡಿ ಹಾಗೂ ಗೋಡೆಯ ಮೇಲೆ ವಿವಿಧ ರೀತಿಯ ಬಣ್ಣದ ಚಿತ್ತಾರ ನೋಡುಗರ ಕಣ್ಣಿಗೆ ಹಬ್ಬದಂತೆ ಭಾಸವಾಗುತ್ತವೆ, ಇಲ್ಲಿನ ಯುಕೆಜಿ, ಎಲ್‍ಕೆಜಿ ಮಕ್ಕಳಿಗಾಗಿ ಬಣ್ಣದ ಲೋಕವನ್ನೇ ಸೃಷ್ಟಿಸಲಾಗಿದೆ. ಮಕ್ಕಳಿಗೆ ಇಷ್ಟವಾಗುವ ರೀತಿಯ ಚಿತ್ರಗಳನ್ನೇ ಬರೆಯಲಾಗಿದ್ದು, ಇವು ಮಕ್ಕಳ ಕಲಿಕಾ ಆಸಕ್ತಿ ಹೆಚ್ಚಿಸಲಿವೆ. ಚಿತ್ರಕಲಾ ಶಿಕ್ಷಕರ ತಂಡ ಇಲ್ಲಿನ ಶಾಲೆ ಗೋಡೆಗಳ ಮೇಲೆ ವಿಶೇಷ ಚಿತ್ರಗಳನ್ನು ಬರೆದಿದ್ದಾರೆ, ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲಿವೆ, ಗಣಿತದ ಆಯಾಮ ರಚನೆ,…
ಕೊರಟಗೆರೆ: ರಾಜ್ಯದಲ್ಲಿ ಈಗಾಗಲೇ ಗ್ರಾ.ಪಂ.ಯ ಚುನಾವಣೆ ನೆಡೆಯುತ್ತಿದ್ದು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಕೊರೊನ ಇರುವ ಕಾರಣ ಹೆಚ್ಚು ಜನ ಸೇರಿಸಿಕೊಳ್ಳದೇ ತಮ್ಮ ಮತವನ್ನ ಕೇಳಬೇಕು. ಯಾವುದೇ ಅಹಿತಕರ ಘಟನೆ ನೆಡೆಯದಂತೆ ಚುನಾವಣೆಗೆ ಸಹಕರಿಸಬೇಕು ಎಂದು ಕೊರಟಗೆರೆ ಎಎಸ್‍ಐ ಯೋಗಿಶ್ ತಿಳಿಸಿದರು. ತಾಲೂಕಿನ ಹೊಳವನಹಳ್ಳಿ, ಅಕ್ಕಿರಾಂಪುರ ಗ್ರಾಪಂ ಚುನಾವಣೆಯ ನಾಮಪತ್ರ ಹಿಂಪಡೆಯುವ ಹಾಗೂ ಅಭ್ಯರ್ಥಿಗಳಿಗೆ ತುಮಕೂರು ಜಿಲ್ಲಾ ಪೊಲೀಸ್ ಹಾಗೂ ಕೊರಟಗೆರೆ ಪೊಲೀಸ್ ಠಾಣೆವತಿಯಿಂದ ಅಪರಾದ ತಡೆ ಮಾಸಾಚರಣೆ ಡಿ.2020 ಹಾಗೂ ಗ್ರಾಪಂ ಚುನಾವಣೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನ ಮಕ್ಕಳು ದ್ವಿಚಕ್ರ ವಾಹನ ಹಾಗೂ ಕಾರುಗಳನ್ನ ಚಲಾಯಿಸುತ್ತಿರುವುದು ಕಾನೂನಿನಲ್ಲಿ ಅವಕಾಶವಿಲ್ಲ. ದೊಡ್ಡವರು ಮಕ್ಕಳ ಕೈಯಲ್ಲಿ ವಾಹನ ನೀಡಬಾರದು. ಬೈಕ್ ವಾಹನ ಸವಾರರು ಕಡ್ಡಾಯವಾಗಿ ಪರವಾನಿಗೆ ಹಾಗೂ ಹೆಲ್ಮಟ್ ಬಳಸಿಕೊಂಡು ಸಂಚಾರ ಮಾಡಬೇಕು. ಇದರ ಜೊತೆಗೆ ಬೈಕ್ ಸೇರಿದಂತೆ ಯಾವುದೇ ವಾಹನವಾದರೂ ಸಹ ಕಡ್ಡಾಯವಾಗಿ…
ಗುಬ್ಬಿ: ಪಟ್ಟಣದ ಐತಿಹಾಸಿಕ ಪ್ರಸಿದ್ದ ಗೋಸಲ ಶ್ರೀ ಚನ್ನಬಸವೇಶ್ವರಸ್ವಾಮಿ, ಪಾರ್ವತಮ್ಮ ಸಮೇತ ಅಮರಗೊಂಡ ಮಲ್ಲಿಕಾರ್ಜುನಸ್ವಾಮಿ ಹೂವಿನ ವಾಹನಗಳ ಮಹೋತ್ಸವ ಸೋಮವಾರ ರಾತ್ರಿ ಧಾರ್ಮಿಕ ವಿಧಿವತ್ತಾಗಿ ಜರುಗಿತು. ಕಾರ್ತಿಕ ಅಮಾವಾಸ್ಯೆಯ ಪ್ರಯುಕ್ತ ಪ್ರತಿವರ್ಷದಂತೆ ಎರಡು ರಥಗಳನ್ನು ಸಂಪೂರ್ಣ ಪುಷ್ಪಾಲಂಕರಗೊಳಿಸಿ ರಾತ್ರಿ 11 ರ ಸಮಯಕ್ಕೆ ಆರಂಭವಾಗುವ ವಾಹನ ಮಹೋತ್ಸವ ಪಟ್ಟಣದ ಪ್ರಮುಖಬೀದಿಗಳಲ್ಲಿ ಸಂಚರಿಸಿತು. ವಿದ್ಯುತ್ ದೀಪಾಲಂಕರದಿಂದ ಕಂಗೊಳಿಸುತ್ತಿದ್ದ ರಥಗಳು ಚಲಿಸಿದಂತೆ ಭಕ್ತರು ಬಾಳೆಯ ಅಂಬು ಹಾಯುವ ಮೂಲಕ ಪೂಜೆ, ಹರಕೆ ಸಲ್ಲಿಸುವುದು ಹಿಂದಿನಿಂದ ನಡೆದು ಪದ್ದತಿ. ಇಂದಿಗೂ ಹಲವು ಭಕ್ತರ ಕುಟುಂಬ ಪದ್ದತಿಯನ್ನು ಚಾಚು ತಪ್ಪದೇ ನಡೆಸಿದರು. ಭಕ್ತರು ತಮ್ಮ ಮನೆ ಹಾಗೂ ಅಂಗಡಿಗಳ ಮುಂದೆ ಬಾಳೆಗಿಡವನ್ನು ಅಲಂಕರಿಸಿ ವಾಹನ ಬರುವಿಕೆಗೆ ಕಾಯುತ್ತಾರೆ. ಬಾಳೆಗಿಡದ ಅಂಬುವಿಗೆ ಮಾಡಿದ ಅಲಂಕಾರ, ರಂಗೋಲಿ ಚಿತ್ತಾರವು ನೋಡಿಗರನ್ನು ಆಕರ್ಷಿಸುತ್ತಿತ್ತು. ಇಡೀ ರಾತ್ರಿ ಪಟ್ಟಣದಲ್ಲಿ ಸಂಚರಿಸಿದ ವಾಹನ ಬಂಗ್ಲೋಮಠದ ಬಳಿ ನಿಂತ ನಂತರ ಮುಂಜಾನೆಯಿಂದ ಆರಂಭವಾಗುವ…
ಹುಳಿಯಾರು: ಹುಳಿಯಾರಿನ ಹೃದಯ ಭಾಗದಲ್ಲಿನ ಕರ್ನಾಟಕ ಪಬ್ಲಿಕ್ ಸ್ಕೂಲ್‍ನ ಆವರಣದಲ್ಲಿ ಕುಡುಕರ ಹಾವಳಿ ತಪ್ಪಿಸಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ನೆಮ್ಮದಿಯ ಓಡಾಟಕೆ ಅನುವು ಮಾಡಿಕೊಡುವಂತೆ ಕಾಮಶೆಟ್ಟಿಪಾಳ್ಯದ ಚನ್ನಬಸವಯ್ಯ ಮನವಿ ಮಾಡಿದ್ದಾರೆ. ಕೊರೊನಾದಿಂದಾಗಿ ಕಳೆದ ಎಂಟತ್ತು ತಿಂಗಳಿಂದ ಶಾಲೆ ಬಾಗಿಲು ತೆರೆದಿಲ್ಲ. ಇದನ್ನೇ ನೆಪ ಮಾಡಿಕೊಂಡಿರುವ ಕೆಲ ಕಿಡಿಕೇಡಿಗಳು ಸಂಜೆ 7 ಗಂಟೆಯ ನಂತರ ಶಾಲಾ ಮೈದಾನದಲ್ಲಿ ಕುಳಿತು ಮದ್ಯಪಾನ ಮಾಡುತ್ತಿದ್ದಾರೆ. ನಂತರ ಖಾಲಿ ಬಾಟಲಿಗಳು, ಸಾಚೆಟ್‍ಗಳು, ಗುಟುಕದ ಕವರ್‍ಗಳು ಬೀಡಿ ಸೀಗರೇಟಿನ ತುಂಡುಗಳನ್ನು ಶಾಲೆಯ ಬಾಗಿಲ ಮಂಭಾಗದಲ್ಲೇ ಎಸೆದು ಹೋಗುತ್ತಿದ್ದಾರೆ. ಇದರಿಂದ ಶಾಲೆಗೆ ಬರುವ ಶಿಕ್ಷಕರು ಹಾಗೂ ಇಲ್ಲಿ ಓಡಾಡುವಂತಹ ಜನರಿಗೆ ತೊಂದರೆಯಾಗುತ್ತಿದೆ ಎಂದು ದೂರಿದ್ದಾರೆ. ಬೆಳಗ್ಗೆ ಮತ್ತು ಸಂಜೆ ಮಕ್ಕಳು ಆಡಲಿಕ್ಕೆ ಈ ಮೈದಾನಕ್ಕೆ ಬರುತ್ತಾರೆ. ವೃದ್ಧರು, ಮಹಿಳೆಯರು ಬೆಳಗ್ಗೆ, ಸಂಜೆ ವಾಯು ವಿಹಾರಕ್ಕೆ ಬರುತ್ತಾರೆ. ಶಾಲಾ ಮೈದಾನದಲ್ಲಿ ಬಿದ್ದಿರುವ ಮದ್ಯದ ಬಾಟಲಿಗಳು, ಗುಟುಕದ ಪಾಕೇಟ್‍ಗಳು ಇವರ…
ತುಮಕೂರು : ಸಾರಿಗೆ ಸಂಸ್ಥೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ರಾಜ್ಯದ ಜನತೆಗೆ ಪ್ರಯಾಣಿಸಲು ತೊಂದರೆಯಾಗದ ರೀತಿಯಲ್ಲಿ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷ ಈಶ್ವರಪ್ಪ ತಿಳಿಸಿದರು. ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿಂ. ಹಿರಿಯ ಶ್ರೀಗಳಾದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು, ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸಂದಿಗ್ದ ಪರಿಸ್ಥಿತಿಯಲ್ಲಿ ಸಾರಿಗೆ ಸಿಬ್ಬಂದಿ ಮುಷ್ಕರ ನಡೆಸುತ್ತಿರುವುದು ಸರಿಯಲ್ಲ. ಇದರಿಂದ ಸರ್ಕಾರ ಮತ್ತು ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದರು. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಸರ್ಕಾರ ಸಾರಿಗೆ ನೌಕರರ ವೇತನ ಭರಿಸಿದೆ. ಆದರೂ ನೌಕರರು ಇದ್ಯಾವುದನ್ನೂ ಲೆಕ್ಕಿಸದೆ ಏಕಾಏಕಿ ಮುಷ್ಕರ ನಡೆಸಬಾರದಿತ್ತು. ಈ ಮುಷ್ಕರಕ್ಕೆ ಸಾರಿಗೆ ನೌಕರರಲ್ಲೇ ಒಮ್ಮತ ಇಲ್ಲ. ಕೆಲ ಸಂಘಟನೆಗಳು ನೌಕರ ಮುಖಂಡರನ್ನು ಒಳಗಾಗಿಕೊಂಡು ಬಾಹ್ಯ…
ಗುಬ್ಬಿ: ಗೋಮಾಂಸ ರಫ್ತು ಮಾಡುವ ಕಂಪೆನಿಗಳು ಅತೀ ಹೆಚ್ಚು ಬಿಜೆಪಿ ಮುಖಂಡರ ಒಡೆತನದಲ್ಲಿವೆ. ಮೋದಿ ಅವರು ಪ್ರಧಾನಿ ಆದ ಬಳಿಕ ದೇಶದಿಂದ ಗೋಮಾಂಸ ರಫ್ತು ದ್ವಿಗುಣಗೊಂಡಿರುವುದು ಅಂಕಿಅಂಶದಲ್ಲಿವೆ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಅಚ್ಚರಿ ವ್ಯಕ್ತಪಡಿಸಿದರು. ತಾಲ್ಲೂಕಿನ ಸುರಿಗೇನಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಗೆ ಮುನ್ನ ಮಾತನಾಡಿದ ಅವರು ಗೋಹತ್ಯೆ ನಿಷೇಧ ಕಾನೂನು ತರುವ ಮುನ್ನ ಅದರ ಆಗುಹೋಗು ಚರ್ಚಿಸಬೇಕಿತ್ತು. ಕೇವಲ ಕಾರ್ಪೋರೆಟ್ ಸಂಸ್ಥೆಗಳ ಅಧೀನದಲ್ಲಿ ಕೇಂದ್ರ ಸರ್ಕಾರ ನಡೆದಿದೆ. ಎಲ್ಲವೂ ಬಂಡವಾಳಶಾಹಿಗಳ ಕಂಪೆನಿಯದ್ದಾಗಿದೆ. ನಾಲ್ಕನೇ ಅಂಗವಾದ ಮಾಧ್ಯಮ ಸಂಸ್ಥೆಗಳು ಕಾರ್ಪೋರೆಟ್ ಸಂಸ್ಥೆಗಳು ನಡೆಸಿರುವುದು ಮತ್ತೊಂದು ವಿಪರ್ಯಾಸ ಎನಿಸಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು. ದೇಶದೆಲ್ಲಡೆ ಗೋಹತ್ಯೆ ನಿಷೇಧದ ಒಂದೇ ಕಾನೂನು ಜಾರಿ ಮಾಡಲಾಗದೆ ಆಯ್ದ ಕೆಲ ರಾಜ್ಯಗಳಲ್ಲಿ ಕಾಯಿದೆ ಜಾರಿಯ ಹಿಂದೆ ಕೂಡಾ ಬಂಡವಾಳಶಾಹಿಗಳ ಕಂಪೆನಿ ಗಳಿವೆ. ಒಟ್ಟಾರೆ ಅನಿಯಮಿತ ಎಮೆರ್ಜೆನ್ಸಿ ದೇಶದಲ್ಲಿ ಕಣ್ಣಿಗೆ ಕಾಣದಂತೆ ಜಾರಿ ಯಾಗುತ್ತಿದೆ.…
ತುಮಕೂರು : ಭಾರತ ಸರಕಾರದ ಸ್ವಚ್ಛ ಸರ್ವೆಕ್ಷಣ ಅಭಿಯಾನ-2020ರಲ್ಲಿ ಎನ್.ಸಿ.ಸಿ, ಎನ್.ಎಸ್.ಎಸ್ ನಂತಹ ಸ್ವಯಂ ಸೇವಾ ಕಾರ್ಯಗಳಲ್ಲಿ ತೊಡಗಿರುವ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಅಭಿಯಾನ ವನ್ನು ಯಶಸ್ವಿಗೊಳಿಸುವಂತೆ ತುಮಕೂರು ಮಹಾನಗರ ಪಾಲಿಕೆ ಮೇಯರ್ ಶ್ರೀಮತಿ ಫರೀಧಾ ಬೇಗಂ ಯುವಜನರಿಗೆ ಕರೆ ನೀಡಿದ್ದಾರೆ. ನಗರದ ಎಸ್.ಎಸ್.ಸರ್ಕಲ್‍ನಲ್ಲಿರುವ 4ನೇ ಎನ್.ಸಿ.ಸಿ. ಬ್ಯಾಟಾಲಿಯನ್ ಕಚೇರಿ ಆವರಣದಲ್ಲಿ ನಗರಪಾಲಿಕೆ, ಎನ್.ಸಿ.ಸಿ. ತಂಡಗಳು ಆಯೋಜಿಸಿದ್ದ ಸ್ವಚ್ಛ ಸರ್ವೆಕ್ಷಣ ಅಭಿಯಾನ-2020ಯ 2ನೇ ಹಂತದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸೈನಿಕರಿಗೆ ಪೂರಕವಾಗಿ ಕೆಲಸ ಮಾಡುತ್ತಿರುವ ಎನ್.ಸಿ.ಸಿ. ಯಂತಹ ಶಿಸ್ತುಬದ್ಧ ಸಂಸ್ಥೆಗಳು ಕೈಜೋಡಿಸಿದರೆ ಸರಕಾರ ಅಭಿಯಾನಗಳು ಯಾವುದೇ ಅಡೆತಡೆಗಳಿಲ್ಲದೆ ಸಾಗುತ್ತೇವೆ ಎಂಬ ನಂಬಿಕೆ ನಮ್ಮದು ಎಂದರು. ಸುಮಾರು 1000ಕ್ಕೂ ಹೆಚ್ಚು ಎನ್.ಸಿ.ಸಿ.ಕ್ಯಾಡೆಟ್‍ಗಳು ಈ ಅಭಿಯಾನದಲ್ಲಿ ಕಳೆದ ಒಂದು ವಾರದಿಂದ ನಗರದಲ್ಲಿ ಸ್ವಚ್ಛತಾ ಕಾರ್ಯದ ಜೊತೆಗೆ,ಗೋಡೆ ಚಿತ್ರ,ಪ್ರಬಂಧ ಸ್ಪರ್ಧೆ,ಚಿತ್ರಕಲಾ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಸಾರ್ವಜನಿಕರಿಗೆ ಅರಿವು…
ತುಮಕೂರು : ಜಿಲ್ಲೆಯಲ್ಲಿ ಗ್ರಾಮಪಂಚಾಯತಿ ಚುನಾವಣೆಯಲ್ಲಿ ಸದಸ್ಯರ ಸ್ಥಾನಗಳಿಗೆ ಹರಾಜು ಪ್ರಕ್ರಿಯೆ/ ಬಲವಂತದ ಅವಿರೋಧ ಆಯ್ಕೆಯ ಕುರಿತು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದು, ಅಂತಹ ಪ್ರಕರಣಗಳ ಬಗ್ಗೆ ಪರಿಶೀಲಿಸಿ ಸಂಬಂಧಪಟ್ಟವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಅವರು ಉಪವಿಭಾಗಾಧಿಕಾರಿಗಳಿಗೆ ಹಾಗೂ ತಹಶೀಲ್ದಾರ್‍ಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ಗ್ರಾಮಪಂಚಾಯತಿ ಚುನಾವಣೆ ಸಂಬಂಧ ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರ್‍ಗಳು ಮತ್ತು ನೋಡೆಲ್ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಅವರು ಮಾತನಾಡಿದರು. ಗ್ರಾಮಪಂಚಾಯತಿಗಳ ಸದಸ್ಯರ ಸ್ಥಾನಗಳಿಗೆ ಹರಾಜು/ಅವಿರೋಧ ಆಯ್ಕೆಯಾಗುವುದಕ್ಕೆ ಒಪ್ಪಂದ ಆಗಿರುವುದರ ಬಗ್ಗೆ ಮಾಧ್ಯಮಗಳಲ್ಲಿ/ದೂರುಗಳು ಬಂದಲ್ಲಿ ಕೂಡಲೇ ಪರಿಶೀಲನೆ ನಡೆಸಿ, ಮೇಲ್ನೋಟಕ್ಕೆ ನಿಜವೆಂದು ಕಂಡು ಬಂದರೆ ಅಂತಹವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ನಿಯಮಾನುಸಾರ ಕ್ರಮಕೈಗೊಳ್ಳಲು ಈಗಾಗಲೇ ಸಬ್ ಡಿವಿಷನ್ ಮ್ಯಾಜಿಸ್ಟ್ರೇಟ್‍ರವರಿಗೆ ನಿರ್ದೇಶನ ನೀಡಲಾಗಿದೆ. ಅಲ್ಲದೆ ಪೊಲೀಸ್ ಇಲಾಖೆಗೂ ಸೂಚನೆ ನೀಡಲಾಗಿದೆ ಎಂದರು. …











