ಮಧುಗಿರಿ : ಪಟ್ಟಣದ ಶ್ರೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಚಕ್ರವರ್ತಿ ಸೂಲಿಬೆಲೆ ನೇತೃತ್ವದ ಯುವಬ್ರಿಗೇಡ್ ತಂಡದ ಯುವಕರಿಂದ ಸ್ವಯಂ ಪ್ರೇರಣೆಯಿಂದ ದೇಗುಲ ಸ್ವಚ್ಚತಾ ಕಾರ್ಯ ನಡೆಸಿದರು. ಪುರಾತನ ಐತಿಹಾಸಿಕ ಶ್ರೀ ವೆಂಕಟರಮಣ ಸ್ವಾಮಿ ದೇಗುಲದ ಗೋಪುರ ಹಾಗು ಪ್ರಭಾವಳಿಗಳಲ್ಲಿ ಗಿಡಗಳು ಬೆಳೆದು ದೇಗುಲದ ಕಟ್ಟಡಕ್ಕೆ ಹಾನಿಯಾಗುತಿತ್ತು, ಈ ವಿಚಾರವನ್ನು ಯುವ ಬ್ರಿಗೇಡ್ ಗಮನಕ್ಕೆ ಅರ್ಚಕ ಅನಂತಭಟ್ ತಿಳಿಸಿದ್ದು ಮಧುಗಿರಿ , ಪಾವಗಡ , ತುಮಕೂರು, ಹಾಗು ಕೊರಟಗೆರೆ ಯ ಕೆಲ ಸ್ನೇಹಿತರು ಸೇರಿ ದೇಗುಲಕ್ಕೆ ಹಾನಿಯುಂಟು ಮಾಡುತ್ತಿದ್ದ ಗಿಡಗಳನ್ನು ತೆಗೆದು ಸ್ವಚ್ಚಗೊಳಿಸಿದರು. ನಂತರ ಯುವಬ್ರಿಗೇಡ್ ನ ಸಂಚಾಲಕ ಅಭಿಷೇಕ್ ಜಯರಾಂ ಮಾತನಾಡಿ, ಇಂತಹ ಸಾಮಾಜಿಕ ಕಾರ್ಯಗಳಿಗೆ ನಮಗೆ ಚಕ್ರವರ್ತಿ ಸೂಲಿಬೆಲೆ ಸ್ಪೂರ್ತಿಯಾಗಿದ್ದಾರೆ. ಇಂತಹ ಅನೇಕ ಸಮಾಜಮುಖಿ ಕಾರ್ಯಗಳನ್ನು ಜಿಲ್ಲಾದ್ಯಂತ ಮಾಡುತ್ತಿದ್ದು ಸಂಘಟನೆಯು ಜಿಲ್ಲೆಯಲ್ಲಿ ಬೆಳೆಯುತ್ತಿದೆ. ಈಗ ಮಧುಗಿರಿಯಲ್ಲಿ ಕಲ್ಯಾಣಿಗಳ ಹಾಗೂ ಪುರಾತನ ದೇಗುಲಗಳ ಸ್ವಚ್ಚತೆಗೆ ಆದ್ಯತೆ ನೀಡಿದ್ದು ಅರ್ಚಕರ ಮನವಿ…
Author: News Desk Benkiyabale
ತುಮಕೂರು : ತ್ರಿವಿಧ ದಾಸೋಹಮೂರ್ತಿ, ನಡೆದಾಡುವ ದೇವರೆಂದೇ ನಾಡಿನ ಉದ್ದಗಲಕ್ಕೂ ಹೆಸರಾಗಿದ್ದ ಸಿದ್ದಗಂಗಾ ಮಠದ ಲಿಂಗೈಕ್ಯ ಹಿರಿಯ ಶ್ರೀಗಳಾದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಅವರು ಕ್ಯಾತ್ಸಂದ್ರದ ರೈಲ್ವೆ ನಿಲ್ದಾಣದ ಬಳಿ ಪ್ರತಿಭಟನಾ ಸತ್ಯಾಗ್ರಹ ನಡೆಸಿದರು. ನಗರದ ಕ್ಯಾತ್ಸಂದ್ರದ ರೈಲ್ವೆ ನಿಲ್ದಾಣದ ಬಳಿ ರೈಲ್ವೆ ಹಳಿಯ ಮೇಲೆ ಕುಳಿತು ಸತ್ಯಾಗ್ರಹ ನಡೆಸಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದರು. ಸಿದ್ದಗಂಗಾ ಮಠದ ಲಿಂಗೈಕ್ಯ ಶ್ರೀಗಳು ದೇಶ ಕಂಡಂತಹ ಉತ್ತಮ ಆದರ್ಶ, ಅದ್ಭುತವಾದಂತಹ ವ್ಯಕ್ತಿತ್ವವುಳ್ಳವರು. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಈ ಮೂರು ರಾಜಕೀಯ ಪಕ್ಷಗಳವರು ಅಧಿಕಾರಕ್ಕಾಗಿ, ರಾಜಕೀಯಕ್ಕಾಗಿ ಶ್ರೀಗಳ ಪ್ರಭಾವವನ್ನು ಬಳಸಿಕೊಂಡಿದ್ದಾರೆ. ಆದರೆ ಶ್ರೀಗಳಿಗೆ ಭಾರತ ರತ್ನ ಕೊಡಿಸುವ ಬಗ್ಗೆ ಯಾರೂ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ ಎಂದು…
ತುರುವೇಕೆರೆ : ಕೃಷಿ ಇಲಾಖೆಯಲ್ಲಿ ಅನುವುಗಾರರಾಗಿ ವೃತ್ತಿ ನೈಪುಣ್ಯತೆ ಪಡೆದಿದ್ದ, ತಾಲ್ಲೂಕಿನ ಮೇಲಿನವಳಗೆರೆಹಳ್ಳಿ ಗ್ರಾಮದ ರಂಗಸ್ವಾಮಿ ಜೇನು ಕೃಷಿಯಲ್ಲಿ ಜಿಕೆವಿಕೆಯಲ್ಲಿ ಜೇನುಸಾಕಾಣಿಕೆ ತರಬೇತಿ ಪಡೆದು ಬದುಕಟ್ಟಿಕೊಳ್ಳುವ ಮೂಲಕ ಯುವ ಸಮುದಾಯಕ್ಕೆ ಮಾದರಿಯಾಗಿ ನಿಂತಿದ್ದಾರೆ. ಸರ್ಕಾರದಿಂದ ಜೇನು ಕೃಷಿಗೆ ತೋಟಗಾರಿಕೆ ಇಲಾಖೆಯಿಂದ ಸಿಗುವ ಸವಲತ್ತನ್ನು ಸದುಪಯೋಗ ಪಡಿಸಿಕೊಂಡಿರು ರಂಗಸ್ವಾಮಿ 15 ಪೆಟ್ಟಿಗೆಗಳ ಜೇನು ಸಾಕಾಣಿಕೆ ಮಾಡುವ ಮೂಲಕ ಜೇನು ಸಾಕಾಣಿಕೆಯ ಎಲ್ಲಾ ಪರಿಕರಗಳೊಂದಿಗೆ ಜೇನುತುಪ್ಪ ಸಂಗ್ರಹಣೆಗೆ ಯಂತ್ರೋಪಕರಣ ಸಹ ತಂದು ವೃತ್ತಿಪರ ಜೇನುಸಾಕಾಣಿಕೆದಾರರೆನಿಸಿದ್ದಾರೆ. ವಾರ್ಷಿಕವಾಗಿ 3 ತಿಂಗಳಿಗೆ 1 ಬೆಳೆಯಂತೆ ಈಗಾಗಲೇ 3-4 ಬೆಳೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರತಿ ಭಾಕ್ಸ್‍ನಿಂದ ಸುಮಾರು 2 -3 ಕೆಜಿ ತುಪ್ಪ ಸಂಗ್ರಹಿಸುತ್ತಾ 30-35 ಸರಾಸರಿ ಉತ್ಪಾದನೆಯೊಂದಿಗೆ ಶುದ್ದ ಜೇನು ಸರಬರಾಜಿಗೆ ಹೆಸರು ಪಡೆದಿದ್ದಾರೆ. ಜೇನು ಸಾಕಾಣಿಕೆಗೆ ಅನುಗುಣವಾಗಿ ಜಮೀನಿನಲ್ಲಿ ತೆಂಗು, ಅಡಿಕೆ, ಬಾಳೆ, ಖುಷ್ಕಿಯಲ್ಲಿ ರಾಗಿ, ಅವರೆ, ತೊಗರಿ…
ತುಮಕೂರು : ಸಕಾಲ ಸಪ್ತಾಹದಲ್ಲಿ “ಸಕಾಲ”ದ ಬಗ್ಗೆ ಜನರಿಗೆ ಅರಿವು ಮೂಡಿಸುವುದರ ಜೊತೆಗೆ ಬಾಕಿ ಇರುವ ಸಕಾಲದ ಅರ್ಜಿಗಳನ್ನು ವಿಲೇವಾರಿ ಮಾಡಲು ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಸಕಾಲ ಮಿಷನ್‍ನ ಅಡಿಷನಲ್ ಮಿಷನ್ ಡೈರೆಕ್ಟರ್ ಡಾ: ಬಿ.ಆರ್. ಮಮತ ಅವರು ತಿಳಿಸಿದರು. ಸಕಾಲ ಸಪ್ತಾಹದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ ಕಛೇರಿಗೆ ಇಂದು ಭೇಟಿ ನೀಡಿ ಸಕಾಲ ಅಡಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಲೇವಾರಿ ಕುರಿತಂತೆ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ನೀಡುವ ಪ್ರೋತ್ಸಾಹಧನದ 174 ಅರ್ಜಿಗಳು ಸಕಾಲದಡಿ ವಿಲೇವಾರಿ ಮಾಡಲು ಸಮಾಜ ಕಲ್ಯಾಣ ಇಲಾಖೆಯಲ್ಲಿ ಬಾಕಿ ಇವೆ. ಈ ಅರ್ಜಿಗಳನ್ನು ಒಂದು ವಾರದೊಳಗೆ ವಿಲೇವಾರಿ ಮಾಡಬೇಕು ಎಂದು ಅವರು ಸೂಚಿಸಿದರು. ಇಲಾಖೆಯಲ್ಲಿ ಲಭ್ಯವಿರುವ ಸಕಾಲ ಸೇವೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಕಛೇರಿಯ ಮುಂದೆ ಮಾಹಿತಿ ಫಲಕ ಪ್ರದರ್ಶಿಸಬೇಕು…
ಹುಳಿಯಾರು: ಚಲಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹುಳಿಯಾರು ಸಮೀಪದ ಯರೇಕಟ್ಟೆ-ಬೆಳಗುಲಿ ರಸ್ತೆಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಹುಳಿಯಾರು ಹೋಬಳಿಯ ಅವಳಗೆರೆ ಭೋವಿ ಕಾಲೋನಿಯ ಮಹದೇವ್ (22) ಎಂದು ಗುರುತಿಸಲಾಗಿದೆ. ಈತ ಯರೇಕಟ್ಟೆಯಿಂದ ಸ್ವಗ್ರಾಮಕ್ಕೆ ಟ್ರ್ಯಾಕ್ಟರ್‍ನಲ್ಲಿ ಹೋಗುವಾಗ ಮಾರ್ಗಮಧ್ಯೆ ಯರೇಹಳ್ಳಿ ಬಳಿ ಟ್ರ್ಯಾಕ್ಟರ್ ಪಲ್ಟಿಯಾಗಿ ತೆಂಗಿನ ತೋಟಕ್ಕೆ ಉರುಳಿ ಬಿದಿದೆ. ಪರಿಣಾಮ ಮಹದೇವ್ ಟ್ರ್ಯಾಕ್ಟರ್‍ನ ಕೆಳಗೆ ಸಿಕ್ಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಹಂದನಕೆರೆ ಪಿಎಸ್‍ಐ ಶಿವಪ್ಪ ಭೇಟಿ ನೀಡಿ ಘಟನೆಯ ವಿವರ ಪಡೆದುಕೊಂಡಿದ್ದಾರೆ. ಹಂದನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರು : ರಾಷ್ಟ್ರೀಯ ಹೆದ್ದಾರಿ-206ಕ್ಕಾಗಿ ಭೂ ಸ್ವಾಧೀನ ಪಡಿಸಿಕೊಂಡಿರುವ ಭೂಮಿ ಹಾಗೂ ಶ್ರೀಗಂಧ ಮರಗಳಿಗೆ ಪರಿಹಾರವನ್ನು ನೀಡದೇ ಶ್ರೀಗಂಧ ಬೆಳೆಗಾರರಿಗೆ ತೊಂದರೆ ನೀಡಲಾಗುತ್ತಿದೆ ಎಂದು ಶ್ರೀಗಂಧ ಬೆಳೆಗಾರರು ಮತ್ತು ಬಳಕೆದಾರರ ಸಂಘದ ರಾಜ್ಯಾಧ್ಯಕ್ಷ ರಘುರಾವ್.ಬಿ.ಆರ್. ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ-206 ನಿರ್ಮಾಣಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಯೋಜನಾ ಪ್ರಾಧಿಕಾರ ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಭೂಸ್ವಾಧೀನ ಪಡಿಸಿಕೊಂಡಿದ್ದು, 22 ರೈತರ ಶ್ರೀಗಂಧ ಬೆಳೆಗೆ 62 ಕೋಟಿ ಪರಿಹಾರವನ್ನು ನಿಗದಿ ಪಡಿಸಿ, ಅರಣ್ಯ ಇಲಾಖೆ ವರದಿ ನೀಡಿದ್ದರು ಸಹ ಕಳೆದ ನಾಲ್ಕು ವರ್ಷಗಳಿಂದ ಪರಿಹಾರವನ್ನು ನೀಡಿಲ್ಲ ಎಂದು ದೂರಿದರು. ಅರಣ್ಯ ಕೃಷಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ 2002ರಲ್ಲಿ ಸರ್ಕಾರ ಶ್ರೀಗಂಧ ಬೆಳೆಯಲು ಮುಕ್ತ ಅವಕಾಶವನ್ನು ಕಲ್ಪಿಸಿದ್ದು, ಮಳೆಯಾಶ್ರಿತ ಭೂಮಿಯಲ್ಲಿ ಶ್ರೀಗಂಧ ಬೆಳೆಯುವುದರಿಂದ ಉತ್ತಮ ಲಾಭವನ್ನು ರೈತರು ಪಡೆದುಕೊಳ್ಳಬಹುದಾಗಿದ್ದು, ಪರಿಸರ ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿಯೂ ಅರಣ್ಯ ಕೃಷಿ ಮಾಡುವುದು…
ಕೊರಟಗೆರೆ: ನೊಂದಾಯಿತ ಗುತ್ತಿಗೆದಾರ ಮತ್ತು ಗ್ರಾಪಂಯ ಕಾಮಗಾರಿ ಕರಾರು ಒಪ್ಪಂದ ಇರುವಂತಹ ಗುತ್ತಿಗೆದಾರನಿಗೆ ಗ್ರಾಪಂ ಚುನಾವಣೆಗೆ ಸ್ಪರ್ಧಿಸಲು ಅನರ್ಹ ಎಂದು ಸ್ಪಷ್ಟಿಕರಣ ನೀಡಿದ ರಾಜ್ಯ ಚುನಾವಣಾ ಆಯೋಗ. ಗ್ರಾಪಂ ಚುನಾವಣೆಗೆ ಸ್ಪರ್ಧಿಸುವ ಉದ್ದೇಶದಿಂದಲೇ ಜೀವನಕ್ಕೆ ಆಧಾರವಾದ ಗುತ್ತಿಗೆಯ ಪರವಾನಗಿ ನೊಂದಣಿಯನ್ನೇ ನೂರಾರು ಜನ ಗುತ್ತಿಗೆದಾರರು ನೊಂದಣಿಯನ್ನು ರದ್ದುಪಡಿಸಿಕೊಂಡ ಪತ್ರದೊಂದಿಗೆ ಗ್ರಾಪಂಯ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಘಟನೆ ನಡೆದಿದೆ. ಗುತ್ತಿಗೆದಾರರ ಮನವಿಯನ್ನು ಪರಿಶೀಲನೆ ನಡೆಸಿರುವ ಪಂಚಾಯತ್‍ರಾಜ್ ಅಧೀಕ್ಷಕ ಅಭಿಯಂತರವರ ಕಚೇರಿಯು ಹತ್ತಾರು ಷರತ್ತುಗಳಿಗೆ ಒಳಪಡಿಸಿ ಗುತ್ತಿಗೆದಾರನ ಗುತ್ತಿಗೆ ರದ್ದುಪಡಿಸಿ ಆದೇಶ ಮಾಡಿದ್ದಾರೆ. ಗ್ರಾಪಂ ಚುನಾವಣೆಗೆ ಸ್ಪರ್ಧಿಸುವ ಉದ್ದೇಶದಿಂದ ಕೊರಟಗೆರೆಯ ಮಾವತ್ತೂರು, ಜೆಟ್ಟಿ ಅಗ್ರಹಾರ, ಹೊಳವನಹಳ್ಳಿ, ಹುಲೀಕುಂಟೆ ಮತ್ತು ತುಂಬಾಡಿ ಗ್ರಾಪಂ ಸೇರಿದಂತೆ ತುಮಕೂರು ಜಿಲ್ಲೆಯ ವಿವಿಧ ಕಡೆಗಳಲ್ಲಿ ಗ್ರಾಪಂಚುನಾವಣೆಗೆ ಸ್ಪರ್ಧಿಸುವ ಉದ್ದೇಶದಿಂದ ತಮ್ಮ ಗುತ್ತಿಗೆ ನೊಂದಣಿಯನ್ನು ರದ್ದು ಪಡಿಸಿಕೊಂಡು ನಾಮಪತ್ರ ಸಲ್ಲಿಸಿರುವುದು ಕಂಡುಬಂದಿದೆ. ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಕೇಂದ್ರ ಮತ್ತು…
ತುಮಕೂರು: ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆ-2020ರ ಮೊದಲ ಹಂತದ ಹಾಗೂ ಎರಡನೇ ಹಂತದ ಚುನಾವಣೆ ಮತದಾನ ನಡೆಯುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮತದಾನ ಮುಗಿಯುವ ಸಮಯಕ್ಕೆ 48 ಗಂಟೆಗಳ ಮುಂಚಿತವಾಗಿ ಮದ್ಯದಂಗಡಿ ಹಾಗೂ ತಯಾರಿಕಾ ಘಟಕ ಮುಚ್ಚಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಡಿಸೆಂಬರ್ 22ರಂದು ಮೊದಲನೇ ಹಂತದ ಚುನಾವಣೆ ನಡೆಯಲಿದ್ದು, ಡಿಸೆಂಬರ್ 20ರ ಸಂಜೆ 5 ಗಂಟೆಯಿಂದ 22ರ ಸಂಜೆ 5 ಗಂಟೆಯವರೆಗೆ ಹಾಗೂ ಡಿ.27ರಂದು ಎರಡನೇ ಹಂತದ ಚುನಾವಣೆ ನಡೆಯಲಿದ್ದು, ಡಿಸೆಂಬರ್ 25ರ ಸಂಜೆ 5 ಗಂಟೆಯಿಂದ 27ರ ಸಂಜೆ 5 ಗಂಟೆಯವರೆಗೆ ಎಲ್ಲಾ ಮದ್ಯದಂಡಗಡಿಗಳನ್ನು ಮತ್ತು ಮದ್ಯ ತಯಾರಿಕಾ ಘಟಕಗಳನ್ನು ಅದರ ಮಾಲೀಕರು, ಅಧಿಭೋಗದಾರರು ಮತ್ತು ಸಂದರ್ಭನುಸಾರ ವ್ಯವಸ್ಥಾಪಕರು ಮುಚ್ಚತಕ್ಕದ್ದು ಹಾಗೂ ಮೊಹರ್ ಮಾಡಿ ಅದರ ಕೀ ಅನ್ನು ಜಿಲ್ಲಾಧಿಕಾರಿಗಳಿಗೆ ಅಥವಾ ಅಧಿಕಾರ ವ್ಯಾಪ್ತಿಯುಳ್ಳ ಕಾರ್ಯರ್ವಾಹಕ ಮ್ಯಾಜಿಸ್ಟ್ರೇಟರ್‍ರಿಗೆ…
ತುಮಕೂರು : ತುಮಕೂರು ನಗರದ ಪ್ರಮುಖ ರಸ್ತೆಗಳನ್ನು ಸ್ಮಾರ್ಟಸಿಟಿ ಅನುದಾನದಲ್ಲಿ ಅಭಿವೃದ್ಧಿ ಪಡಿಸಿ, ಟಾರ್ ಹಾಕುವ ಕೆಲಸ ಶೇ 80ರಷ್ಟು ಮುಕ್ತಾಯಗೊಂಡಿದ್ದು, ನಗರದ ಹಲವು ದಿನಗಳ ಸಮಸ್ಯೆಗೆ ತೆರೆ ಬಿಳಲಿದೆ ಎಂದು ನಗರ ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿ ದ್ದಾರೆ. ನಗರದ ಬಿ.ಹೆಚ್.ರಸ್ತೆಯಿಂದ ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮಹಾವೀರ ರಸ್ತೆಗೆ ಡಾಂಬರ್ ಹಾಕುವ ಕಾಮಗಾರಿಗೆ ಪೂಜೆ ನೆರವೇರಿಸಿ ಮಾತನಾಡುತಿದ್ದ ಅವರು,ಅಶೋಕ ರಸ್ತೆ,ಎಂ.ಜಿ.ರಸ್ತೆ,ರೈಲ್ವೆ ನಿಲ್ದಾಣ ರಸ್ತೆ,ಎಸ್.ಎಸ್.ಪುರಂನ ಮುಖ್ಯರಸ್ತೆ ಜೊತೆಗೆ, ಸಂಪರ್ಕ ರಸ್ತೆಗಳ ಡಾಂಬರೀಕರಣ ಕಾಮಗಾರಿಗಳು ಪೂರ್ಣಗೊಂಡಿವೆ.ಸಣ್ಣ,ಪುಟ್ಟ ಕೆಲಸಗಳನ್ನು ತ್ವರಿತವಾಗಿ ಮುಕ್ತಾಯಗೊಳಿಸಿ, ತಕ್ಷಣವೇ ಜನಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದರು. ಕಳೆದ ಒಂದು ವರ್ಷಗಳಿಂದ 15ನೇ ವಾರ್ಡು, 16ನೇ ವಾರ್ಡು ಹಾಗೂ ಇನ್ನಿತರ ವಾರ್ಡುಗಳಲ್ಲಿ ರಸ್ತೆ, ಕುಡಿಯುವ ನೀರು, ಡಾಂಬರೀಕರಣ,ಗ್ಯಾಸ್ ಲೈನ್ ಸೇರಿದಂತೆ ಹಲವು ಅಭಿವೃದ್ದಿ ಕಾಮಗಾರಿಗಳು ಸ್ಮಾರ್ಟ್‍ಸಿಟಿಯಿಂದ ನಡೆಯುತ್ತಿದೆ. ಜನರಿಗೆ ಕಾಮಗಾರಿಗಳು ನಡೆಯುವ ಸಂದರ್ಬದಲ್ಲಿ ತೊಂದರೆಗಳಾದರೂ ಸಹಿಸಿಕೊಂಡು ಸಹಕಾರ ನೀಡಿದ್ದಾರೆ. ಇದಕ್ಕಾಗಿ ನಗರದ ಜನರಿಗೆ…
ಮಧುಗಿರಿ: ಇಲ್ಲಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಇಪ್ಪತ್ತು ಸ್ಥಾನಗಳ ನಿರ್ದೇಶಕ ಸ್ಥಾನಗಳಿಗೆ ಮಂಗಳವಾರ ಚುನಾವಣೆ ನಡೆದು 980 ಮತದಾರರ ಪೈಕಿ 956 ಶಿಕ್ಷಕರು ಮತ ಚಲಾವಣೆ ಮಾಡಿ ಶೇ97.55ರಷ್ಟು ಮತದಾನವಾಗಿದೆ. ಈ ಮತದಾನವು ಮಧುಗಿರಿ ಶಕ್ತಿ ಕೇಂದ್ರ ಮಿನಿವಿಧಾನಸೌಧ ಮುಂಭಾಗದಲ್ಲಿರುವ ಸರ್ಕಾರಿ ಪ್ರೌಢಶಾಲೆ 3ಕೊಠಡಿಗಳಲ್ಲಿ ನಡೆಯಿತು. ಮೊದಲ ಕೊಠಡಿಯಲ್ಲಿ 336-328,ಎರಡನೇ ಕೊಠಡಿಯಲ್ಲಿ 314-304ಮತ್ತು ಮೂರನೇ ಕೊಠಡಿಯಲ್ಲಿ 330-324 ಮತಗಳು ಚಲಾವಣೆಗೊಂಡವು. ಉಳಿದ ಇಪ್ಪತ್ತಾರು ಮತದಾರರಲ್ಲಿ 1ಮತ ಡಬ್ಬಲ್ ಎಂಟ್ರಿಯಾಗಿದ್ದು ಮೂವರು ಶಿಕ್ಷಕರು ಬಡ್ತಿ ಹೊಂದಿ ಹೈಸ್ಕೂಲ್ ಹೋದ ಕಾರಣ ಇನ್ನೂ ಇಪ್ಪತ್ತು ಶಿಕ್ಷಕರು ಮಾತ್ರ ಮತದಾನದಿಂದ ದೂರ ಉಳಿದರು. 20 ಸ್ಥಾನಗಳ ಪೈಕಿ 13ಶಿಕ್ಷಕರು 7ಶಿಕ್ಷಕರು ಆಯ್ಕೆಯಾಗಬೇಕು,ಪ್ರತೇಕ ಮತಪತ್ರಗಳನ್ನು ಶಿಕ್ಷಕ ಶಿಕ್ಷಕಿಯರ ಆಯ್ಕೆಗೆ ಉಪಯೋಗಿಸಲಾಯಿತು. ಗುರು ಮಿತ್ರ ಮತ್ತು ಶಿಕ್ಷಕರ ಸ್ನೇಹ ಬಳಗದ ಎರಡೂ ತಂಡಗಳಿಂದ ತಲಾ ಇಪ್ಪತ್ತು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 8ಪಕ್ಷೇತರರಲ್ಲಿ ಏಕ್ಯೆಕ ಮಹಿಳಾ ಅಭ್ಯರ್ಥಿ ಸ್ಪರ್ಧಿಸಿದ್ದರು.…











