Author: News Desk Benkiyabale

 ತುಮಕೂರು:        ಜಿಲ್ಲೆಯಲ್ಲಿ ಕ್ಷಯರೋಗಿಗಳ ಕಾಂಟ್ಯಾಕ್ಟ್ ಟ್ರೇಸಿಂಗ್ ಸಪ್ತಾಹವು ಆಗಸ್ಟ್ 17ರವರೆಗೆ ಹಮ್ಮಿಕೊಂಡಿದ್ದು, ಇದರ ಅಂಗವಾಗಿ ಹೊರವಲಯದಲ್ಲಿ ಅನುಕೂಲವಾಗುವಂತೆ ಇಂದು ಮೊಬೈಲ್ ಎಕ್ಸ್-ರೇ ವಾಹನಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ|| ಸನತ್‍ಕುಮಾರ್ ಜಿ.ಕೆ ಅವರು ಚಾಲನೆ ನೀಡಿದರು.       ಸಪ್ತಾಹದಲ್ಲಿ ಆರೋಗ್ಯ ಕಾರ್ಯಕರ್ತರ ಕ್ಷಯರೋಗಿಗಳ ಮನೆಯ ಸುತ್ತ ಅಂದರೆ ಕನಿಷ್ಠ 100 ಮೀಟರ್ ಸುತ್ತಳತೆಯಲ್ಲಿರುವ ಜನರಿಗೆ ಯಾವುದೇ ಕ್ಷಯರೋಗದ ಲಕ್ಷಣಗಳಾದ(ಕೆಮ್ಮು,ರಾತ್ರಿ ವೇಳೆ ಜ್ವರ, ತೂಕ ಕಡಿಮೆ ಆಗುವುದು, ಹಸಿವಾಗದೇ ಇರುವುದು ಕಫದಲ್ಲಿ ರಕ್ತ ಬೀಳುವುದು) ಇಂತಹ ಯಾವುದೇ ಲಕ್ಷಣಗಳು ಕಂಡು ಬಂದಲ್ಲಿ ಅಂತಹವರಿಗೆ ತಕ್ಷಣವೇ ಕಫ ಪರೀಕ್ಷೆ ಒಳಪಡಿಸಿ ಕ್ಷಯರೋಗ ದೃಡಪಟ್ಟರೆ ಆ ದಿನವೇ ಚಿಕಿತ್ಸೆಯನ್ನು ಪ್ರಾರಂಭಿಸುವುದು ಈ ಸಪ್ತಾಹದ ಮುಖ್ಯ ಉದ್ದೇಶವಾಗಿದೆ.       ಸಾರ್ವಜನಿಕರು ಕ್ಷಯರೋಗದ ಲಕ್ಷಣಗಳು ಕಂಡು ಬಂದರೆ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಕಫ ಪರೀಕ್ಷೆ ಮಾಡಿಸಿ…

Read More

ತುಮಕೂರು:       ಕೋವಿಡ್-19 ರ ರೋಗದ ಹರಡುವಿಕೆಯ ನಂತರ ವಿಶ್ವದಾದ್ಯಂತ ಆಗುತ್ತಿರುವ ಸಾಮಾಜಿಕ ಪರಿಣಾಮ ಮತ್ತು ಬದಲಾವಣೆಗಳು ಶಿಕ್ಷಣ ಕ್ಷೇತ್ರದ ಮೇಲೂ ಬೀರಿದ್ದು, ಪ್ರಾಥಮಿಕ ಶಿಕ್ಞಣದಿಂದ ಉನ್ನತ ಶಿಕ್ಷಣದವರಗೆ ಆನ್‍ಲೈನ್ ಶಿಕ್ಷಣ ಅನಿವಾರ್ಯವಾಗಿರುವುದು ತಂತ್ರಜ್ಞಾನದ ಬೆಳವಣಿಗೆ ಗಮನ ಹರಿಸುವ ಅಗತ್ಯವಿದೆ ಎಂದು ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮತ್ತು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಅಭಿಮತ ವ್ಯಕ್ತಪಡಿಸಿದ್ದಾರೆ.       ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ವಜ್ರಮಹೋತ್ಸವದ ಅಂಗವಾಗಿ ನಗರದ ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯೂನಿಕೇಷನ್ ಇಂಜಿನಿಯರಿಂಗ್ ವಿಭಾಗ ಮತ್ತು ಟೆಕ್ನಿಕಲ್ ಇನ್ಸಿಟ್ಯೂಟ್ ಪಾರ್ ಇಂಜಿನಿಯರ್ಸ್ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ‘ ¨ಭವಿಷ್ಯದ ತಂತ್ರಜ್ಞಾನದಲ್ಲಿ ಇಂಜಿನಿಯರಿಂಗ್ ವಿಜ್ಞಾನದ ಆವಿಷ್ಕಾರದ ಪ್ರವೃತ್ತಿಗಳು’ ವಿಷಯ ಕುರಿತ ಒಂದು ದಿನದ ರಾಷ್ಟ್ರೀಯ ಮಟ್ಟದ ವೆಬಿನಾರ್ ಉದ್ಗಾಟಿಸಿ ಅವರು ಮಾತನಾಡಿದರು.       ಕರೋನ ಸೋಂಕಿನಿಂದ ಜಗತ್ತಿನಲ್ಲಿ ಆಗುತ್ತಿವ ಅನೇಕ ಬದಲಾವಣೆಯ ಪ್ರವೃತ್ತಿಗಳ ವೇದಿಕೆಯನ್ನು ಆನ್‍ಲೈನ್ ತಂತ್ರಜ್ಞಾನ…

Read More

ತುಮಕೂರು:       ಕಾರ್ಮಿಕರ ಗಳಿಕೆ ಪಟ್ಟಿಯಲ್ಲಿರುವ ರಜೆಗಳನ್ನು ಕಡಿತಗೊಳಿಸದೆ ಪ್ರತಿ ತಿಂಗಳು 7ನೇ ತಾರೀಖಿನಂದು ವೇತನ ನೀಡಬೇಕು, ತುಟ್ಟಿಭತ್ಯ ನೀಡಬೇಕು, ಇಎಲ್ ನಗದೀಕರಣ ನೀಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಸಂಘ ಸಿಐಟಿಯು ನೇತೃತ್ವದಲ್ಲಿ ಸಾರಿಗೆ ಸಿಬ್ಬಂದಿ ತುಮಕೂರಿನ ಕೆಎಸ್‍ಆರ್‍ಟಿಸಿ ನಿಗಮದ ಎದುರು ಪ್ರತಿಭಟನೆ ನಡೆಸಿದರು.       ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಗೌರವಾಧ್ಯಕ್ಷ ಸೈಯದ್ ಮುಜೀಬ್, ಸಾರ್ವಜನಿಕ ಉದ್ದಿಮೆಯಾದ ಸಾರಿಗೆ ನಿಗಮಗಳನ್ನು ಯಾವುದೇ ಕಾರಣಕ್ಕೂ ಖಾಸಗೀಕರಣಗೊಳಿಸಬಾರದು. ಇದರಿಂದ ರಿಯಾರಿತಿ ದರದ ಪಾಸ್ ಪಡೆದಿರುವ ವಯೋವೃದ್ದರು, ಸ್ವಾತಂತ್ರ್ಯ ಹೋರಾಟಗಾರರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎಂದು ಹೇಳಿದರು.        ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಬೇಕು. ತೈಲ ಉತ್ಪನ್ನಗಳನ್ನು ರಿಯಾಯಿತಿ ದರದಲ್ಲಿ ನೀಡಬೇಕು. ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‍ಟಿ ವ್ಯಾಪ್ತಿಗೆ ತರಬೇಕು ಫ್ಯಾಬ್ರಿಕೇಶನ್…

Read More

ತುಮಕೂರು:       ವಸತಿಹೀನ ಅಲೆಮಾರಿ ಜನಾಂಗದವರನ್ನು ಗುರುತಿಸಿ ಪಟ್ಟಿ ತಯಾರಿಸುವಲ್ಲಿ ಪಿಡಿಓಗಳ ಕಾರ್ಯ ತೃಪ್ತಿ ತಂದಿಲ್ಲ. ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿಗಳು ಖುದ್ದು ಸರ್ವೆ ನಡೆಸಿ ಯಾರೊಬ್ಬ ಫಲಾನುಭವಿಗೂ ವಸತಿ ತಪ್ಪದಂತೆ ಕ್ರಮವಹಿಸಲು ಮಾಜಿ ಸಚಿವ ಹಾಗೂ ಶಾಸಕ ಎಸ್.ಆರ್.ಶ್ರೀನಿವಾಸ್ ಸೂಚಿಸಿದರು.       ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ತಾಲ್ಲೂಕಿನ 34 ಗ್ರಾಮ ಪಂಚಾಯಿತಿಯಿಂದ 1390 ಫಲಾನುಭವಿಗಳನ್ನು ಗುರುತಿಸಿರುವುದಾಗಿ ಪಟ್ಟಿ ಸಿದ್ದವಾಗಿದೆ. ಆದರೆ ವಾಸ್ತವದಲ್ಲಿ ಎರಡು ಪಟ್ಟು ಫಲಾನುಭವಿಗಳು ಸಿಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಅರ್ಹರನ್ನು ಗುರುತಿಸಿ ಏಳು ದಿನದಲ್ಲಿ ಪಟ್ಟಿ ತಯಾರಿಸಿ ತಾಲ್ಲೂಕು ಪಂಚಾಯಿತಿಗೆ ಒಪ್ಪಿಸಬೇಕು ಎಂದು ತಿಳಿಸಿದರು.      ನಮ್ಮಲ್ಲಿ ಅಲೆಮಾರಿಗಳು, ಬುಡಕಟ್ಟು ಜನಾಂಗದ ಪೈಕಿ ಗೊಲ್ಲ ಸಮಾಜವೇ ಅತಿ ಹೆಚ್ಚು ಕಂಡು ಬರುತ್ತದೆ. ಈಗಾಗಲೇ ಹಲವು ವಸತಿ ಯೋಜನೆಯಲ್ಲಿ ಮನೆ ನೀಡಲಾಗಿದೆ. 7 ಸಾವಿರಕ್ಕೂ ಅಧಿಕ ಮನೆಗಳನ್ನು ಒದಗಿಸಲಾಗಿದೆ. ಆದರೂ…

Read More

ಗುಬ್ಬಿ:       ಹೇಮೆ ಹರಿಸಿಕೊಳ್ಳುವ ವಿಚಾರದಲ್ಲಿ ಕಳೆದ ಬಾರಿ ಹಾಸನದಲ್ಲಿ ದೇವೇಗೌಡರ ಪುತ್ರರ ರಾಜಕಾರಣದಿಂದ 18.5 ಟಿಎಂಸಿ ಮಾತ್ರ ನೀರು ಸಿಕ್ಕಿತ್ತು. ಈ ಬಾರಿ ಜಿಲ್ಲೆಯತ್ತ ಹರಿಸಲಾಗುತ್ತಿರುವ ಹೇಮೆಯನ್ನು ನಮ್ಮ ಪಾಲಿನ ಸಂಪೂರ್ಣ 25 ಟಿಎಂಸಿ ನೀರನ್ನು ಹರಿಸಿಕೊಳ್ಳುತ್ತೇವೆ ಎಂದು ಸಂಸದ ಜಿ.ಎಸ್.ಬಸವರಾಜು ವಿಶ್ವಾಸ ವ್ಯಕ್ತಪಡಿಸಿದರು.       ತಾಲ್ಲೂಕಿನ ಹಾಗಲವಾಡಿ ಹೋಬಳಿ ಬೆಟ್ಟದಹಳ್ಳಿ ಗ್ರಾಮದಲ್ಲಿ ಶನಿವಾರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಬಾರ್ಡ್‍ನ 22 ಲಕ್ಷ ರೂಗಳ ನೂತನ ಕಟ್ಟಡಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಹೇಮಾವತಿ ಬಳಸಿಕೊಳ್ಳುವ ಎಲ್ಲಾ ಕೆರೆಗಳಿಗೆ ನೀರು ಹರಿಸಲಾಗಿತ್ತು. 18 ಟಿಎಂಸಿ ನೀರಿನಲ್ಲೇ ಬಹುತೇಕ ಕೆರೆಗಳಿಗೆ ನೀರು ನೀಡಲಾಗಿತ್ತು. ಈ ಬಾರಿ ಸಹ ನಿಯಮಾನುಸಾರ ಎಲ್ಲಾ ಕೆರೆಗಳನ್ನೂ ಭರ್ತಿ ಮಾಡುವ ಭರವಸೆ ನೀಡಿದರು.       ಕಡಬ ಕೆರೆಯು ಕಳೆದ ಬಾರಿಯೇ ತುಂಬಿಸಲಾಗುತ್ತಿತ್ತು. ಇಲ್ಲಿನ ಕೆಟ್ಟ ರಾಜಕಾರಣದಿಂದ ಕಡಬ ಕೆರೆಗೆ ನೀರು ಕಡಿಮೆಯಾಯಿತು. ಈಗಾಗಲೇ ಹೇಮಾವತಿ ಡ್ಯಾಂ ನಿಂದ…

Read More

ತುಮಕೂರು:       ತುಮಕೂರು ಮಹಾನಗರ ಪಾಲಿಕೆ ವತಿಯಿಂದ ದಿನಾಂಕ: 18/7/2020 ರಂದು ಕರೆದಿದ್ದ ಅಭಿವೃದ್ಧಿ ಕಾಮಗಾರಿಗಳ ಟೆಂಡರ್‍ನಲ್ಲಿ ಲಂಚಪಡೆದು ಭ್ರಷ್ಟಾಚಾರವೆಸಗಿ ತಮಗೆ ಬೇಕಾದ ಗುತ್ತಿಗೆದಾರರ ಹೆಸರಿಗೆ ಟೆಂಡರ್ ನಿಲ್ಲಿಸಲು ಹೊರಟಿದ್ದ ಕಿರಿಯ ಅಭಿಯಂತರ ಕಿರಣ್.       ತುಮಕೂರು ಮಹಾನಗರ ಪಾಲಿಕೆಯ ವತಿಯಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ದಿನಾಕ: 18-7-2020 ರಂದು ಟೆಂಡರ್ ಕರೆಯಲಾಗಿದ್ದು, ದಿನಾಂಕ:3-8-2020ಕ್ಕೆ ಆನ್‍ಲೈನ್ ಟೆಂಡರ್ ಸಲ್ಲಿಸುವ ಅವಧಿ ಮುಕ್ತಾಯವಾಗಿರುತ್ತದೆ. ಅವುಗಳ ಪೈಕಿ ವಿದ್ಯುತ್ ಮತ್ತು ನೀರು ಸರಬರಾಜು ಕುರಿತು ಟೆಂಡರ್ ಕರೆಯಲಾಗಿದ್ದು, ಟೆಂಡರ್ ಸಮಯದಲ್ಲಿ ಕಿರಿಯ ಅಭಿಯಂತರರಾದ ಕಿರಣ್ ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಪಿ.ಆರ್.ವಸಂತಕುಮಾರ್‍ರವರುಗಳು ಉದ್ದೇಶಪೂರ್ವಕವಾಗಿ ಸರ್ಕಾರದ ಮಾರ್ಗದರ್ಶಿ, ಸೂಚನೆಗಳನ್ನು ಬದಿಗೆ ಸರಿಸಿ ಅಕ್ರಮ ಟೆಂಡರ್ ಕರೆದಿರುತ್ತಾರೆ. ಸ್ಟ್ಯಾಂಡರ್ಡ್ ಬಿಡ್ ಡಾಕ್ಯುಮೆಂಟ್ (ಏW 1) ಅಧಿನಿಯಮದ ಅಡಿಯಲ್ಲಿ ಟೆಂಡ್ ಕೆರೆಯಲಾಗಿದ್ದು, ಸದರಿ ನಿಯಮಾವಳಿಗಳನ್ನು ಧಿಕ್ಕರಿಸಿ ತಮಗೆ ಬೇಕಾದವರಿಗೆ ಅಕ್ರವಾಗಿ ಟೆಂಡರ್ ನಿಲ್ಲಿಸುವ ದುರುದ್ದೇಶದಿಂದ ಲಂಚದ ಹಣ ಪಡೆದು ಭ್ರಷ್ಟಾಚಾರವೆಸಗಿ ಪಾರದರ್ಶಕ…

Read More

ತುಮಕೂರು:       ಜಿಲ್ಲೆಯಲ್ಲಿ 98 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2509 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ.       ಜಿಲ್ಲೆಯಲ್ಲಿ ತುಮಕೂರು ತಾಲ್ಲೂಕಿನಲ್ಲಿ 28, ಪಾವಗಡ-09 ಕುಣಿಗಲ್-17 ಮಧುಗಿರಿ-06, ಕೊರಗಟಗೆರೆ-03, ತುರುವೇಕೆರೆ-13, ಶಿರಾ-02, ತಿಪಟೂರು-02, ಗುಬ್ಬಿ-14, ಚಿಕ್ಕನಾಯಕನಹಳ್ಳಿ-04 ಮಂದಿ ಸೇರಿ ತಾಲೂಕಿನಲ್ಲಿ ಒಟ್ಟು 98 ಜನರಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ.        ಜಿಲ್ಲಾಸ್ಪತ್ರೆಯಿಂದ 90 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 1459 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 976 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 74 ಸಾವನ್ನಪ್ಪಿದ್ದು, ಶನಿವಾರ-04 ಮಂದಿ ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Read More

ತುಮಕೂರು:       ಆರೋಗ್ಯ ಬಿಸಿಯೂಟ, ಶಿಕ್ಷಣ ಮೊದಲಾದ ಅಗತ್ಯ ಮೂಲಭೂತ ಸೇವೆಗಳ ಖಾಸಗಿಕರಣದ ಪ್ರಸ್ತಾಪಗಳನ್ನು ಹಿಂಪಡೆಯಬೇಕು. ಸಾರ್ವಜನಿಕ ವಲಯದ ಉದ್ದಿಮೆಗಳ ಮತ್ತು ಸೇವೆಗಳ ಖಾಸಗಿಕರಣ ನಿಲ್ಲಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಆಗಸ್ಟ್ 7ರಂದು ಪ್ರತಿಭಟನೆ ನಡೆಸಿದರು.       ಅಂಗನವಾಡಿ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಿ ಖಾಯಂ ಮಾಡಿ. ಪ್ರತಿ ತಿಂಗಳಿಗೆ 21000 ರೂ. ಕನಿಷ್ಟ ವೇತನ ನೀಡಬೇಕು. ಮಾಸಿಕ ಪಿಂಚಣಿ 10,000 ರೂ. ಕೊಡಬೇಕು. ಇಎಸ್.ಐ ಮತ್ತು ಪಿಎಫ್ ನೀಡಬೆಕು ಎಂದು ಆಗ್ರಹಿಸಿದರು.        ಕಾರ್ಮಿಕ ಕಾನೂನುಗಳನ್ನು ಮಾಲಿಕರ ಪರವಾಗಿ ಬದಲಾಯಿಸುವುದನ್ನು ನಿಲ್ಲಿಸಬೇಕು. ಕೋವಿಡ್ ಅವಧಿಯ ನೆಪವೊಡ್ಡಿ ಕೆಲಸದ ಅವಧಿ ಹೆಚ್ಚಿಸುವುದನ್ನು ಕೈಬಿಡಬಬೇಕು. ಆದಾಯ ತೆರಿಗೆ ಪಾವತಿಸಲಾಗದ ಎಲ್ಲಾ ಬಡ ಕುಟುಂಬಗಳಿಗೆ 6 ತಿಂಗಳ ಕಾಲ ಪ್ರತಿ ತಿಂಗಳಿಗೆ 7500 ರೂ. ನೀಡಬೇಕು. ಉಚಿತ ರೇಷನ್ ಮತ್ತು ಆಹಾರ…

Read More

ಹುಳಿಯಾರು:       ಕೃಷಿ ಚಟುವಟಿಕೆಗಳಿಗೆ ಸಮರ್ಪಕ ವಿದ್ಯುತ್ ಪೂರೈಸುವ ಸಲುವಾಗಿ ಕೇಂದ್ರ ಸರ್ಕಾರದ ಆರ್ಥಿಕ ನೆರವಿನೊಂದಿಗೆ ಪ್ರಾಯೋಗಿಕವಾಗಿ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ದೂರವಿದ್ದರೆ ಒಂದು ಐಪಿ ಸೆಟ್‍ಗೆ, ಹತ್ತಿರವಿದ್ದರೆ ಎರಡು ಐಪಿ ಸೆಟ್ಟಿಗೊಂದರಂತೆ ಪ್ರತ್ಯೇಕ ಟ್ರಾನ್ಸ್‍ಫಾರ್ಮರ್ ಅಳವಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.       ಹುಳಿಯಾರು ಹೋಬಳಿಯ ಭಟ್ಟರಹಳ್ಳಿ ಗ್ರಾಮದಲ್ಲಿ ಭದ್ರಾ ನಾಲಾ ಕಾಮಗಾರಿಯ ಭೂಮಿ ಪೂಜಾ ಕಾರ್ಯಕ್ರಮದ ಉದ್ಘಾಟಿಸಿ ಅವರು ಮಾತನಾಡಿದರು.       ಚಿಕ್ಕನಾಯಕನಹಳ್ಳಿ ತಾಲೂಕಿನ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಸಲುವಾಗಿ ತಾಲೂಕಿನ ಗಡಿಭಾಗವಾದ ಡಿಂಕನಹಳ್ಳಿಯಲ್ಲಿ 400 ಕೋಟಿ ರೂ. ವೆಚ್ಚದ 400 ಕೆವಿ ಸಾಮಧ್ರ್ಯದ ಸ್ವಿಚ್ ಗೇರ್ ಸ್ಟೇಷನ್ ಮಾಡಲಾಗುವುದು. ಇನ್ನೊಂದು ತಿಂಗಳಲ್ಲಿ ಈ ಕಾಮಗಾರಿಯ ಭೂಮಿ ಪೂಜೆ ಮಾಡಲಾಗುವುದು ಎಂದರಲ್ಲದೆ ದೊಡ್ಡಎಣ್ಣೇಗೆರೆ, ಮತಿಘಟ್ಟ, ಜೆ.ಸಿ.ಪುರ, ಬೆಳಗುಲಿ, ದೊಡ್ಡಅಗ್ರಹಾರದಲ್ಲಿ ಬೆಸ್ಕಾಂ ಎಂವಿಎಸ್‍ಎಸ್ ಮಾಡಲಾಗುವುದು ಎಂದು ಭರವಸೆ ನೀಡಿದರು.       ಕೊಳವೆ ಬಾವಿ…

Read More

 ತುಮಕೂರು :       ಜಿಲ್ಲೆಯಲ್ಲಿಂದು 133 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2411ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ.       ಜಿಲ್ಲೆಯಲ್ಲಿ ಇಂದು ತುಮಕೂರು-44, ಕುಣಿಗಲ್-13, ಕೊರಟಗೆರೆ-15, ಚಿಕ್ಕನಾಯಕನಹಳ್ಳಿ-4, ಶಿರಾ-5, ಮಧುಗಿರಿ-4, ಗುಬ್ಬಿ-7, ಪಾವಗಡ-5, ತಿಪಟೂರು-25, ತುರುವೇಕೆರೆ-11 ಸೇರಿದಂತೆ ಒಟ್ಟು 133 ಮಂದಿಯಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ.       ಇಂದು ಜಿಲ್ಲಾಸ್ಪತ್ರೆಯಿಂದ 104 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 1369 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.       ಜಿಲ್ಲೆಯಲ್ಲಿ ಒಟ್ಟು 972 ಸಕ್ರಿಯ ಪ್ರಕರಣಗಳಿದ್ದು, ಇಂದು ಮೂವರು ಮೃತಪಟ್ಟಿದ್ದಾರೆ. ಈವರೆಗೆ 70 ಮಂದಿ ಕೋವಿಡ್-19 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More