ಮಧುಗಿರಿ: ಮಧುಗಿರಿ ಪಟ್ಟಣದ ಲಿಂಗೇನ ಹಳ್ಳಿಯಲ್ಲಿ ಸಾರ್ವಜನಿಕ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಪೆಟ್ಟಿಗೆ ಅಂಗಡಿಯನ್ನು ತೆರವುಗೊಳಿಸಬೇಕೆಂದು ಸಾರ್ವಜನಿಕರು ಉಪವಿಭಾಗಾಧಿಕಾರಿ ಡಾ.ಕೆ.ನಂದಿನಿದೇವಿ ಅವರಿಗೆ ಮನವಿ ಸಲ್ಲಿಸಿದ್ದರು. ಅದರಂತೆ ಪುರಸಭೆ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ಪೆಟ್ಟಿಗೆ ಅಂಗಡಿಯನ್ನು ತೆರವುಗೊಳಿಸಲು ಮುಂದಾದಾಗ, ಪೆಟ್ಟಿಗೆ ಅಂಗಡಿ ಮಾಲೀಕರು ಹಾಗೂ ನಿವಾಸಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ಮಧುಗಿರಿ ಪೆÇಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಸಾರ್ವಜನಿಕ ರಸ್ತೆಯಲ್ಲಿ ಹಲವಾರು ತಿಂಗಳಿನಿಂದ ಪೆಟ್ಟಿಗೆ ಅಂಗಡಿ ಹಾಗೂ ರಸ್ತೆಯನ್ನು ಒತ್ತವರಿ ಮಾಡಿಕೊಂಡಿದ್ದರಿಂದ ವೃದ್ಧರು, ಮಹಿಳೆಯರು ಮತ್ತು ಮಕ್ಕಳಿಗೆ ಓಡಾಡಲು ದಾರಿ ಇಲ್ಲದೇ ತುಂಬಾ ತೊಂದರೆ ಅನುಭವಿಸುತ್ತಿದ್ದರು. ಒತ್ತುವರಿ ಜಾಗವವನ್ನು ತೆರವುಗೊಳಿಸಲೇಬೇಕೆಂದು ನಿವಾಸಿಗಳು ಪಟ್ಟು ಹಿಡಿದು ಪ್ರತಿಭಟನೆಗೆ ಮುಂದಾದರು. ಪುರಸಭೆ ಮುಖ್ಯಾಧಿಕಾರಿ ಅಮರನಾರಾಯಣ ಪೆಟ್ಟಿಗೆ ಅಂಗಡಿಯ ಮಾಲೀಕನಿಗೆ ಖಡಕ್ ಎಚ್ಚರಿಕೆ ನೀಡಿ ಒತ್ತುವರಿ ರಸ್ತೆಯನ್ನು ತೆರವುಗೊಳಿಸುವಂತೆ ಸೂಚಿಸಿದಾಗ, ಅಂಗಡಿ ಮಾಲೀಕ ಪೆಟ್ಟಿಗೆ ಅಂಗಡಿಯನ್ನು ಬೇರೆಡೆಗೆ ಸ್ಥಾಳಾಂತರಿಸಿದರು. ಒತ್ತುವರಿಯನ್ನು ತೆರವುಗೊಳಿಸಿದ ಅಧಿಕಾರಿಗಳ…
Author: News Desk Benkiyabale
ಚಿಕ್ಕನಾಯಕನಹಳ್ಳಿ: ದೊಡ್ಡವರ ಬಾಯಿಯ ಮಾತು, ಹುಚ್ಚನ ಕೈನಲ್ಲಿರುವ ಕಲ್ಲು ಯಾರಿಗೆ ಬೇಕಾದರು ಬೀಸಬಹುದು ಎಂಬಂತಾಗಿದೆ ಇಂದು ಸಚಿವ ಜೆ.ಸಿ.ಮಾಧುಸ್ವಾಮಿಯವರ ಹೇಳಿಕೆ ಎಂದು ತಿಮ್ಲಾಪುರ-ಲಕ್ಷ್ಮಗೊಂಡನಹಳ್ಳಿ ಗ್ರಾಮದ ರೈತ ಗಂಗಾಧರಯ್ಯ ನುಡಿದರು. ತಾಲೂಕಿನ ಕುಡಿಯುವ ನೀರಿನ ಹೇಮಾವತಿ ಯೋಜನೆ ಕಾಮಗಾರಿಗೆ ಸ್ವಾಧೀನ ಪಡಿಸಿಕೊಂಡಿರುವ ಜಮೀನಿನ ಪರಿಹಾರ ಕೊಡುವಂತೆ ಒತ್ತಾಯಿಸಿ ಹೇಮಾವತಿ ನಾಲೆಯ ಹತ್ತಿರ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಮಾತನಾಡುತ್ತಿದ್ದರು. ಈ ಬಗ್ಗೆ ಸಚಿವರನ್ನು ಕೇಳಲು ಸಂತ್ರಸ್ತ ರೈತರು ಅವರ ಮನೆಗೆ ಹೋದಾಗ ಬಾಯಿಗೆ ಬಂದಂತೆ ಬೈದು ಅಂದು ನೀವು ಎರಡು ಸಾವಿರ ರೂಪಾಯಿಗಳಿಗೆ ಹೇಸಿಗೆ ತಿಂದಿದ್ದೀರಿ, ಇಂದು ಅದರ ಪರಿಣಾಮವನ್ನು ಅನುಭವಿಸಿ. ಎಂದು ಹೀನಾಯವಾಗಿ ರೈತರನ್ನು ನಿಂದಿಸಿ ಮನೆಯಿಂದ ಹೊರಗೆ ಅಟ್ಟಿದರು ಎಂದು ಸುಮಾರು 40 ವರ್ಷಗಳಿಂದ ಜೆ.ಸಿ.ಮಾಧುಸ್ವಾಮಿಯವರ ಕಟ್ಟಾ ಬೆಂಬಲಿಗರಾಗಿದ್ದ ಗಂಗಾಧರಯ್ಯ ತಮ್ಮ ಆಕ್ರೋಶವನ್ನು ಹೊರಹಾಕಿದರು. 2011 ರಲ್ಲಿ ಆರಂಭವಾದ ಹೇಮಾವತಿ ಕಾಮಗಾರಿಗೆ, ಮೊದಲು ಬಿಟ್ಟುಕೊಟ್ಟದ್ದೆ ನಮ್ಮ…
ತುಮಕೂರು: ಕೊರೊನ ಲಾಕ್‍ಡೌನ್ ಮತ್ತು ಸ್ಮಾರ್ಟ್‍ಸಿಟಿ ಕಾಮಗಾರಿಯಿಂದಾಗಿ ಖಾಸಗಿ ಬಸ್ ನಿಲ್ದಾಣದಲ್ಲಿ ಕಳೆದ ಐದಾರು ತಿಂಗಳಿಂದ ಯಾವುದೇ ವ್ಯಾಪಾರ ವಹಿವಾಟು ನಡೆಯದೇ ಇರುವುದರಿಂದ ಮಾರ್ಚ್ ನಿಂದ ಆಗಸ್ಟ್ ತಿಂಗಳವರೆಗೆ ವಾಣಿಜ್ಯ ಮಳಿಗೆಗಳ ಬಾಡಿಗೆ ಮನ್ನಾ ಮಾಡುವಂತೆ ವ್ಯಾಪಾರಿಗಳು ಮನವಿ ಮಾಡಿದ್ದಾರೆ. ಹರಾಜಿನ ಮೂಲಕ ಮಳಿಗೆಗಳನ್ನು ಬಾಡಿಗೆ ಪಡೆದ ಕೆಲವೇ ದಿನಗಳಲ್ಲಿ ಕೊರೊನ ಸೋಂಕು ವ್ಯಾಪಿಸಿ ಲಾಕ್‍ಡೌನ್ ಹೇರಲಾಯಿತು. ಜೊತೆಗೆ ಸ್ಮಾರ್ಟ್‍ಸಿಟಿ ಯೋಜನೆಯಡಿ ಅಶೋಕ ರಸ್ತೆ ಮತ್ತು ಖಾಸಗಿ ಬಸ್ ನಿಲ್ದಾಣ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಖಾಸಗಿ ಬಸ್‍ಗಳ ಓಡಾಟವೂ ಇಲ್ಲವಾಗಿ ವ್ಯಾಪಾರ ಸಂಪೂರ್ಣ ಸ್ಥಗಿತಗೊಂಡಿತು. ಖಾಸಗಿ ಬಸ್ ನಿಲ್ದಾಣದಲ್ಲಿ ಇರುವ ಮಳಿಗೆಗಳಿಗೆ 10 ರಿಂದ 50 ಸಾವಿರ ರೂಪಾಯಿ ಬಾಡಿಗೆ ನಿಗದಿಪಡಿಸಿದೆ. ಬಾಡಿಗೆ ಪಡೆದ ಆರಂಭದಿಂದಲೇ ಸಂಕಷ್ಟಕ್ಕೆ ಸಿಲುಕಿದ್ದರಿಂದ ವ್ಯಾಪಾರವನ್ನೇ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಆರು ತಿಂಗಳ ಬಾಡಿಗೆ ಮನ್ನಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಲಾಕ್‍ಡೌನ್‍ಗೂ…
ಮಧುಗಿರಿ: “ಉಬ್ಬೆ ಮಳೆ ಬಂದರೆ ಉಬ್ಬಿಬ್ಬಿ ಕೊಂಡು ಬರುತ್ತದೆ’ ಎಂಬುದಕ್ಕೆ ತಾಲ್ಲೂಕಿನಲ್ಲಿ ಸೋಮವಾರ ರಾತ್ರಿ ಸುರಿದ ಮಳೆಯ ಸಾಕ್ಷಿಯಾಗಿದೆ. ಸೋಮವಾರ ರಾತ್ರಿ ಹತ್ತರಿಂದ ಪ್ರಾರಂಭವಾದ ಮಳೆ ಬೆಳಗಿನ ಜಾವದವರೆಗೂ ನಿಂತು ನಿಂತು ಬಂದ ಮಳೆಯಿಂದ ಹಲವು ಹಳ್ಳಗಳು ಮೈದುಂಬಿ ಹರಿದಿದೆ. ತಾಲ್ಲೂಕಿನ ಗಡಿಭಾಗದಲ್ಲಿರುವ ಮಿಡಿಗೇಶಿ ಹೋಬಳಿಯ ರೆಡ್ಡಿಹಳ್ಳಿ ಕೆರೆ ಹಳ್ಳ ಮೈದುಂಬಿ ಹರಿದಿದ್ದು ಉತ್ತರ ಕರ್ನಾಟಕದ ಭಾಗದಲ್ಲಿ ಪ್ರವಾಹದ ಭೀತಿಯಂತೆ ಇಲ್ಲಿ ಅನುಭವ ಉಂಟಾಗಿದೆ. ಹಳ್ಳದ ನೀರು ಹೊಲ ಗದ್ದೆಗಳಿಗೆ ಹರಿದು ಬೆಳೆ ನಷ್ಟವಾಗಿದೆ, ರೆಡ್ಡಿಹಳ್ಳಿ ಕೆರೆಗೆ ಒಂದೇ ರಾತ್ರಿಯ ಮಳೆಯಿಂದಾಗಿ ಶೇ ಎಪ್ಪತ್ತರಷ್ಟು ಭಾಗ ಕೆರೆಗೆ ನೀರು ಹರಿದು ಬಂದಿದೆ. ವಾರ್ಷಿಕ ಬೆಳೆಗಳಿಗೆ ನಷ್ಟವಾಗಿದ್ದು ,ಹತ್ತಿ ಬೆಳೆಗೆ ತೊಂದರೆಯಾಗಿದೆ, ಶೇಂಗಾ ಬೆಳೆ ಒಣಗುವ ಸ್ಥಿತಿ ತಲುಪುತ್ತಿದ್ದರೂ ಅತಿವೃಷ್ಟಿಯ ರೀತಿಯಲ್ಲಿ ಬಿದ್ದ ಮಳೆಯಿಂದಾಗಿ ರೈತರು ಚಿಂತಕ್ರಾಂತರಾಗಿದ್ದಾರೆ. ಹನುಮಂತಪುರ ಕೆರೆ ಹಳ್ಳ, ನೇರಳೆಕೆರೆ, ಹೊಸಕೆರೆ ಕೆರೆಗಳ ಹಳ್ಳಗಳು ಹರಿದಿವೆ…
ತುಮಕೂರು : ಜಿಲ್ಲೆಯಲ್ಲಿ 192 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ತುಮಕೂರು ತಾಲ್ಲೂಕಿನಲ್ಲಿ 95, ಪಾವಗಡ-22, ಕುಣಿಗಲ್-11, ಮಧುಗಿರಿ-10, ಕೊರಗಟಗೆರೆ-07, ತುರುವೇಕೆರೆ-09, ಶಿರಾ-10, ತಿಪಟೂರು-13, ಗುಬ್ಬಿ-07, ಚಿಕ್ಕನಾಯಕನಹಳ್ಳಿ-08 ಮಂದಿ ಸೇರಿ ತಾಲೂಕಿನಲ್ಲಿ ಒಟ್ಟು 192 ಜನರಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ.
ತುಮಕೂರು: ಕನ್ನಡ ಚಿತ್ರರಂಗದಲ್ಲಿ ಡ್ರಗ್ ದಂಧೆ ನಡೆಯುತ್ತಿರುವ ಬಗ್ಗೆ ನನಗೆ ಗೊತ್ತಿಲ್ಲ. ಅಂತೆ ಕಂತೆಗಳ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ನಟ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದಾರೆ. ನಾನು ಕಳೆದ 24 ವರ್ಷದಿಂದ ಕನ್ನಡ ಚಿತ್ರರಂಗದಲ್ಲಿದ್ದೇನೆ. ಆದರೆ ಚಿತ್ರರಂಗದಲ್ಲಿ ರೈಸ್, ದಾಲ್ ಕೇಳಿದ್ದೇನೆ. ಆದರೆ ಡ್ರಗ್ ಮಾಫಿಯಾ ಕೇಳೇ ಇಲ್ಲ ಎಂದರು. ನಗರದ ಸಿದ್ದಗಂಗಾ ಮಠಕ್ಕೆ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಭೇಟಿ ನೀಡಿ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಚಿತ್ರರಂಗದಲ್ಲಿ ಡ್ರಗ್ ಮಾಫಿಯಾ ನಡೆಯುತ್ತಿದೆ ಎಂಬುದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಚಿತ್ರರಂಗವನ್ನು ಎಲ್ಲ ಹಿರಿಯ ಕಲಾವಿದರು ಸೇರಿ ಕಟ್ಟಿದ್ದಾರೆ. ಚಿಕ್ಕ ವಿಚಾರಕ್ಕೆ ಇಡೀ ಚಿತ್ರರಂಗಕ್ಕೆ ಕಳಂಕ ತರುವುದು ಸರಿಯಲ್ಲ ಎಂದರು. ಒಂದೇ ಒಂದು ವಿಚಾರವನ್ನು ಎಳೆದು ತಂದು ಚಿತ್ರರಂಗದ ದೂಷಣೆ ಮಾಡುವುದು ಬೇಡ…
ನವದೆಹಲಿ : ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ನಿಧನರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ನಿನ್ನೆ ರಾತ್ರಿಯಿಂದಲೇ ಅವರ ಆರೋಗ್ಯ ಹದಗೆಟ್ಟಿತ್ತು. ಶ್ವಾಸಕೋಶದ ಸೋಂಕು ಉಲ್ಬಣಗೊಂಡು ಸೆಪ್ಟಿಕ್ ಆಗಿತ್ತು ಎಂದು ಇಂದು ಬೆಳಗ್ಗೆಯಷ್ಟೇ ಆರ್ಮಿ ಆಸ್ಪತ್ರೆ ಮಾಹಿತಿ ನೀಡಿತ್ತು ಮುಖರ್ಜಿ ಅವರು ನಿಧನರಾದ ಸಂಗತಿಯನ್ನು ಸ್ವತಃ ಅವರ ಪುತ್ರ ಅಭಿಜಿತ್ ಮುಖರ್ಜಿ ಅವರು ಸೋಮವಾರ ಟ್ವೀಟ್ ಮಾಡಿ ತಿಳಿಸಿದ್ದಾರೆ. ಮಿದುಳಿನಲ್ಲಿ ಹೆಪ್ಪುಗಟ್ಟಿದ್ದ ರಕ್ತವನ್ನು ಹೊರತೆಗೆಯುವ ಸಲುವಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಲೆಂದು ಆಗಸ್ಟ್ 10ರಂದು ಪ್ರಣವ್ ಮುಖರ್ಜಿ ಅವರು ದೆಹಲಿಯ ಸೇನಾ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಅವರಿಗೆ ಕೋವಿಡ್ ಇರುವುದು ಖಚಿತವಾಗಿತ್ತು. ಶಸ್ತ್ರಚಿಕಿತ್ಸೆ ನಂತರ ಕೋಮಾಕ್ಕೆ ಜಾರಿದ್ದ ಪ್ರಣವ್ ಮುಖರ್ಜಿ ಅವರ ಶ್ವಾಸಕೋಶಕ್ಕೆ ಸೋಂಕು ತಗುಲಿ ಪರಿಸ್ಥಿತಿ ವಿಷಮವಾಗಿತ್ತು. ಇಂದೂ ಕೂಡ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದ ಆಸ್ಪತ್ರೆ, ಪ್ರಣವ್ ಮುಖರ್ಜಿ ಅವರು ದೀರ್ಘ ಕೋಮಾ ಸ್ಥಿತಿಯಲ್ಲಿರುವುದಾಗಿ ಹೇಳಿತ್ತು.…
ತುರುವೇಕೆರೆ: ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯರಿಂದ ಮುಂಬರುವ ವಿಧಾಸಭಾ ಚುನಾವಣೆಯ ಅಭ್ಯರ್ಥಿ ಎಂದು ಘೋಷಿಸಿಕೊಳ್ಳುವ ದುರುದ್ದೇಶದಿಂದ ತಾಲೂಕಿಗೆ ಕರೆಸಿಕೊಂಡರೆ ವಿನಹ ರೈತರಿಗೆ ನ್ಯಾಯ ಒದಗಿಸಿಕೊಡುವ ಉದ್ದೇಶದಿಂದಲ್ಲ ಎಂದು ಶಾಸಕ ಮಸಾಲಜಯರಾಮ್ ಎಂ.ಟಿ.ಕೃಷ್ಣಪ್ಪನ ವಿರುದ್ಧ ಕಿಡಿಕಾರಿದರು. ಪಟ್ಟಣದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗುಡ್ಡೇನಹಳ್ಳಿಯಲ್ಲಿ ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ನಡೆಸಿದ ಕಾರ್ಯಾಚರಣೆ ನನಗೆ ತಿಳಿದ ಮರುದಿನವೇ ರೈತರ ಹಿತ ಕಾಯುವ ದೃಷ್ಠಿಯಿಂದ ಖುದ್ದು ನಾನೇ ಗುಡ್ಡಡೇನಹಳ್ಳಿಗೆ ತೆರಳಿ ರೈತ ಸಂಘದ ಅಧ್ಯಕ್ಷ ಆನಂದ್ ಪಟೇಲ್ ನೇತೃತ್ವದಲ್ಲಿ ತೆಂಗಿನ ಸಸಿನೆಟ್ಟು ರೈತರಿಗೆ ದೈರ್ಯತುಂಬಿ ಪಕ್ಷಾತೀತವಾಗಿ ಜಾತ್ಯಾತೀತವಾಗಿ ಗುಡ್ಡೇನಹಳ್ಳಿ ಗ್ರಾಮಸ್ಥರೆಲ್ಲರಿಗೂ ಜಮೀನು ಮುಂಜೂರು ಮಾಡಿಕೊಡುವುದಾಗಿ ಭರವಸೆ ನೀಡಿದ್ದೆ. ಅದರಂತೆ ಸ್ಥಳೀಯ ರೈತರು ಕೂಡ ಪ್ರತಿಭಟನೆ ಮಾಡುವುದಿಲ್ಲವೆಂದು ಹೇಳಿದ್ದರು. ಆದರೆ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ತನ್ನ ರಾಜಕೀಯ ದುರುದ್ದೇಶದಿಂದ ಗುಡ್ಡೇನಹಳ್ಳಿಯ ಕ್ಷುಲ್ಲಕ ಕಾರಣವನ್ನು ದೊಡ್ಡದಾಗಿ ನಿರ್ಮಿಸಿ ತಾಲೂಕಿನಲ್ಲಿ 144ಸೆಕ್ಷನ್ ಜಾರಿಯಾಗುವಂತೆ…
ತುರುವೇಕೆರೆ: ಅಧಿಕಾರಿಗಳು ಯಾರ ಮುಲಾಜಿಗೂ ಒಳಗಾಗದೆ ಕೆಲಸ ನಿರ್ವಹಿಸಿದ್ದಿದ್ದರೆ ತುರುವೇಕೆರೆಯಲ್ಲಿಂದು 144ಸೆಕ್ಷನ್ ವಾತಾವರಣ ನಿರ್ಮಾಣ ವಾಗುತ್ತಿರಲಿಲ್ಲ ಎಂದು ಮಾಜಿ ಮುಖ್ಯ ಮುಂಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿಷಾಧ ವ್ಯಕ್ತಪಡಿಸಿದರು. ತಾಲೂಕಿನ ಮಾಯಸಂದ್ರ ಹೋಬಳಿ ಗುಡ್ಡೇನಹಳ್ಳಿ ಗ್ರಾಮದ ಜಮೀನಿನ ವಿಚಾರವಾಗಿ ತಾಲೂಕಿಗೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜಕೀಯ ಒತ್ತಡಗಳಿಗೆ ಒಳಗಾಗಿ ಅಧಿಕಾರಿ ವರ್ಗ ಕರ್ತವ್ಯ ನಿರ್ವಹಿಸಿದಾಗ ಮಾತ್ರ ಇಂತಹ ಬಿಗುವಿನ ವಾತಾವರಣ ನಿರ್ಮಾಣ ಮಾಡಲು ಸಾಧ್ಯ. ಡಿ.ಜೆ.ಹಳ್ಳಿ ಕೆ.e.Éಹಳ್ಳಿ ಪ್ರಕರಣದಲ್ಲೇ ಇಂತಹ 144ಸೆಕ್ಷನ್ ಜಾರಿಗೆ ತಂದ ಉದಾಹರಣೆಯಿಲ್ಲ, ಆದರೆ ಕ್ಷುಲ್ಲಕ ಕಾರಣಗಳಿಗೆ 144ಸೆಕ್ಷನ್ ಜಾರಿಗೆ ತಂದು ಸಾರ್ವಜನಿಕರಲ್ಲಿ ಭಯ ಭೀತಿ ಉಂಟುಮಾಡುವ ಕಾರಣವೇನಿತ್ತು. ಶಾಸಕ ಮಸಾಲಜಯರಾಮ್ ಅವರೇ ಜವಬ್ದಾರಿ ಅರಿತು ಸರಿಯಾದ ಸಮಯದಲ್ಲಿ ಸರಿಯಾದ ಕ್ರಮವನ್ನು ತೆಗೆದುಕೊಂಡಿದಿದ್ದರೆ ಗುಡ್ಡೇನಹಳ್ಳಿ ಜಮೀನು ಪ್ರಕರಣವನ್ನು ಬಗೆಹರಿಸಬಹುದಿತ್ತು. ಇಂದು ಜೆಡಿಎಸ್ ಇಷ್ಟೊಂದು ದೊಡ್ಡ ಮಟ್ಟದ ಹೋರಾಟವನ್ನು…
ತುಮಕೂರು: ಶಿರಾ ಕ್ಷೇತ್ರದ ಶಾಸಕ ಬಿ.ಸತ್ಯನಾರಾ ಯಣ್ ಅಕಾಲಿಕ ಮರಣದಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಯುವುದು ನಿಶ್ಚಿತ. ಈ ಉಪಚುನಾವಣೆಯಲ್ಲಿನ ಲೆಕ್ಕಾಚಾರಗಳು ನಿರೀಕ್ಷೆಗೂ ಮೀರಿದಂತೆ ನಡೆಯುತ್ತಿವೆ. ಸೂತಕದ ಮನೆಯಲ್ಲಿಯೇ ರಾಜಕಾರಣದ ರಂಗು ಬಳಿಯಲು ರಾಜಕೀಯ ಪಕ್ಷದ ನಾಯಕರು ಅವಣಿಸುತ್ತಿದ್ದು, ಸಾವಿನ ಮನೆಯ ಸೂತಕದ ಛಾಯೆ ಮರೆಯಾಗುವ ಮುನ್ನವೇ ದಿವಂಗತ ಸತ್ಯನಾರಾಯಣರವರ ಹೆಸರನ್ನ ಬಳಸಿಕೊಂಡು ಚುನಾವಣಾ ಅಕಾಡದಲ್ಲಿ ಸಿದ್ಧತೆಗೆ ರಾಜಕೀಯ ಕತ್ತಿ-ಗುರಾಣಿ ಹಿಡಿಯುವ ದಂಢನಾಯಕನ ಹುಡುಕಾಟದಲ್ಲಿ ಜೆಡಿಎಸ್ ಪಕ್ಷ ಆಲೋಚಿಸುತ್ತಿದೆಯಾದರೂ ಸೂತಕದ ಮನೆಯ ವ್ಯಕ್ತಿಯನ್ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿದರೆ ನಾಯಕನ ಹಗಲಿಕೆಯಿಂದ ಕಂಗಾಲಾದ ಆ ಪಕ್ಷದ ಅನುಯಾಯಿಗಳು ಮತ್ತು ಮತದಾರರ ಮನಸ್ಸಿನಲ್ಲಿ ಕಣ್ಣೀರಿನ ಲೆಕ್ಕಾಚಾರವನ್ನ ಮುಂದಿಟ್ಟುಕೊಂಡು ಕುಟುಂಬದ ಸದಸ್ಯ ಸತ್ಯಪ್ರಕಾಶ್‍ನನ್ನ ಕಣಕ್ಕಿಳಿಸಿದರೆ ಕಳೆದುಕೊಂಡು ಪಕ್ಷದ ನಾಯಕನ ಸಾವಿಗೆ ನ್ಯಾಯ ದೊರಕಿಸಿಕೊಡುವ ನೆಪದಲ್ಲಿ ಪಕ್ಷದಲ್ಲಿ ಕಳೆದುಹೋದ ಒಂದಂಕಿ ಮತ್ತೆ ಒಗ್ಗೂಡಿಸಬಹುದೆಂಬ ಲೆಕ್ಕಾಚಾರ ಜೆಡಿಎಸ್‍ನ ವರಿಷ್ಠ ದೊಡ್ಡಗೌಡರ ಲೆಕ್ಕಾಚಾರದಂತಿದೆ. ಜೆಡಿಎಸ್ ಪಕ್ಷದಲ್ಲಿ ಸತ್ಯನಾರಾಯಣ್‍ರವರ ಆರೋಗ್ಯ…











