Author: News Desk Benkiyabale

ತುಮಕೂರು:       ಸ್ಮಾರ್ಟ್ ಸಿಟಿ ಯೋಜನೆಯಡಿ ಈಗಾಗಲೇ ಕೈಗೊಂಡಿರುವ ಕಾಮಗಾರಿಗಳನ್ನು ನಿಗಧಿತ ಸಮಯದಲ್ಲಿ ಪೂರ್ಣಗೊಳಿಸಿದ ಬಳಿಕ ಹೊಸ ಕಾಮಗಾರಿಗಳನ್ನು ಕೈಗೊಳ್ಳುವಂತೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ಅವರು ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಸೂಚನೆ ನೀಡಿದರು.       ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಸ್ಮಾರ್ಟ್ ಸಿಟಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.       ತುಮಕೂರು ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳಿಗೆ ವೇಗ ನೀಡಿ ನಿಗಧಿತ ಸಮಯದಲ್ಲಿ ಪೂರ್ಣಗೊಳಿಸಬೇಕು. ಈಗ ಕೈಗೊಂಡಿರುವ ರಸ್ತೆ ಕಾಮಗಾರಿಗಳಿಂದ ಸಾರ್ವಜನಿಕರ ರಸ್ತೆ ಸಂಚಾರಕ್ಕೆ ತೊಂದರೆಯಾಗದ ರೀತಿಯಲ್ಲಿ ಸೈನೇಜ್ ಬೋರ್ಡ್‍ಗಳನ್ನು ಅಳವಡಿಸಿ ಎಂದು ಅವರು ತಿಳಿಸಿದರು.      ರಸ್ತೆ ಕಾಮಗಾರಿಗಳನ್ನು ಕೈಗೊಳ್ಳುವಾಗ ಲಭ್ಯವಿರುವ ಜಾಗ ಆಧಾರದ ಮೇಲೆ ರಸ್ತೆ ಮತ್ತು ಪುಟ್‍ಪಾತ್‍ನ್ನು ನಿರ್ಮಾಣ ಮಾಡಬೇಕು. ನಗರದಲ್ಲಿ ಏಕಕಾಲಕ್ಕೆ ರಸ್ತೆಗಳನ್ನು ಅಗೆದು…

Read More

ಮಧುಗಿರಿ:      ಮಧುಗಿರಿ ಪಟ್ಟಣದ 14ನೇವಾರ್ಡ್‍ನಲ್ಲಿ ಡಿವೈಎಸ್‍ಪಿ ಆಫೀಸ್ ಹಿಂಬಾಗ ನಕಲಿ ದಾಖಲೆ ಸೃಷ್ಟಿಸಿ ಜಮೀನು ಗುಳುಂ ಮಾಡಿರುವ ಘಟನೆ ಜರುಗಿದೆ.       ಜಿಲ್ಲಾಧಿಕಾರಿಗಳಿಂದ ಆಶ್ರಯ ನಿವೇಶ ನಕ್ಕಾಗಿ ಮಧುಗಿರಿ ಸರ್ವೆ ನಂ.15 ರಲ್ಲಿ 35ಗುಂಟೆ ಜಮೀನು ಮಂಜೂರಾಗಿದ್ದು, ಕೆಲ ಪಟ್ಟಭದ್ರ ಹಿತಾಸಕ್ತಿಗಳು ನಕಲಿ ದಾಖಲೆ ಸೃಷ್ಟಿಸಿ ಪುರಸಭೆ ಯಿಂದ ಖಾತೆ ಹಾಗು ಹಕ್ಕುಪತ್ರ ಪಡೆದಿದ್ದಾರೆಂದು ಆರೋಪಿಸಿ ಮಧುಗಿರಿ ಪುರಸಭೆಯ 14ನೇ ವಾರ್ಡ್ ವಾಲ್ಮೀಕಿ ಬಡಾವಣೆ (ಮಂಡರಕಾಲೋನಿ) ನಿವಾಸಿಗಳು ಈ ಹಿಂದೆ ತಹಸೀಲ್ದಾರ್ ರವರಿಗೆ ಇಲ್ಲಿನ ನಿವಾಸಿಗಳು ಮನವಿಯನ್ನು ನೀಡಿದ್ದಾರೆ. ಹಾಗು ಇದೇ ಜಮೀನು ನಲ್ಲಿ ವಾಲ್ಮಿಕಿ ಸಮುದಾಯಭವನ ನಿರ್ಮಾಣ ಮಾಡಿಕೋಡಿ ಎಂದು ಉಪವಿಭಾಗಾಧಿಕಾರಿ ಕಛೇರಿ ಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.       ಮಧುಗಿರಿ ಗ್ರಾಮದ ಸರ್ವೆ ನಂಬರ್ 15ರಲ್ಲಿ ಕೆಲವು ಪಟ್ಟಾಭದ್ರ ಹಿತಾಸಕ್ತಿಗಳು ಮೃತ ತಹಶೀಲ್ದಾರ್ ಒಬ್ಬರ ಸಹಿ ದುರುಪಯೋಗಪಡಿಸಿಕೊಂಡು ನಕಲಿ ದಾಖಲೆ ಸೃಷ್ಟಿಸಿಕೊಂಡಿದ್ದು ಅಲ್ಲದೆ ಈಗ ಅದೇ ಜಾಗದಲ್ಲಿ ಶೆಡ್ ನಿರ್ಮಿಸಿ…

Read More

ತುಮಕೂರು :        ಬಿಡಿಎ ಅಧಿಕಾರಿಗಳು ಎಂದು ಜನರನ್ನು ನಂಬಿಸಿ ಟೂಡಾಕ್ಕೆ ಸೇರಿದ ಖಾಲಿ ಜಾಗಗಳನ್ನು ಹರಾಜಗಿಂತ ಮುಂಚೆಯೇ ಕಡಿಮೆ ದರಕ್ಕೆ ಮಾರಾಟ ಮಾಡಿಸಿಕೊಡುವುದಾಗಿ ನಂಬಿಸಿ ಟೂಡಾ ಆಯುಕ್ತರ ಹೆಸರಿನಲ್ಲಿ ಡಿಡಿಗಳನ್ನು ಪಡೆದು ಲಕ್ಷಾಂತರ ಹಣವನ್ನು ವಂಚಿಸಿರುವ ಕತರ್ನಾಕ್ ಗ್ಯಾಂಗನ್ನು ತಿಲಕ್ ಪಾರ್ಕ್ ಪೊಲೀಸರು ಪತ್ತೆ ಹಚ್ಚಿ ಮಾಲು ಸಮೇತ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.       10 ಲಕ್ಷ ನಗದು 6 ಲಕ್ಷ ಬೆಲೆಬಾಳುವ ಕಾರು ಎರಡು ಲಕ್ಷ ಬೆಲೆಬಾಳುವ ಬುಲೆಟ್ ಸಮೇತ ಬಂಧಿಸಿದ್ದಾರೆ. ಬಂಧಿತರಲ್ಲಿ ಮಧುಕುಮಾರ್ ಆಲಿಯಾಸ್ ಮಧು( 40) ತುಮಕೂರಿನ ಹೊರಭಾಗದಲ್ಲಿರುವ ಶಿರಾಗೇಟ್ ಬಳಿಯಿರುವ ಸಾಡೆಪುರ ಗ್ರಾಮದ ನಿವಾಸಿಯಾದ ಈತ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದಾನೆ. ಈತನ ದಂದೆಯ ಪ್ರಮುಖ ರೂವಾರಿಯಾಗಿದ್ದಾನೆ. ಗುರು ಪ್ರಸಾದ್ (36) ಬನಶಂಕರಿ ಬಡಾವಣೆಯ ವಿನಾಯಕ ಆಸ್ಪತ್ರೆಯ ಪಕ್ಕದಲ್ಲಿರುವ ಹರಳ ಶೆಟ್ಟಿಕೆರೆಪಾಳ್ಯ ನಿವಾಸಿಯಾದ ಈತ ಬ್ಯಾಂಕಿನಲ್ಲಿ ಎಸ್‍ಡಿಸಿ ಕೆಲಸ ನಿರ್ವಹಿಸುತ್ತಿದ್ದಾನೆ.       ಶ್ರೀನಿವಾಸ್ ಅಲಿಯಾಸ್ ಗುಂಡ (48)…

Read More

ಕೊರಟಗೆರೆ:       ದೇವರಾಯನದುರ್ಗ ಸಮೀಪದ ಇತಿಹಾಸವುಳ್ಳ ಜರಿಬೆಟ್ಟ ವನ್ಯಜೀವಿಗಳ ಆವಾಸಸ್ಥಾನ. ಪಿತ್ರಾರ್ಜಿತ ಆಸ್ತಿಯನ್ನು ಭೂಸ್ವಾಧೀನ ಮಾಡಿಕೊಳ್ಳಲು ರೈತರ ಒಪ್ಪಿಗೆ ಇಲ್ಲದೇ ಅನಧಿಕೃತವಾಗಿ ಭೂಸ್ವಾಧೀನ ಪೂರ್ಣಗೊಂಡಿದೆ. ಖಾಸಗಿ ಕಂಪನಿ ನೀಡುವ ಚಿಲ್ಲರೇ ಕಾಸು ನಮಗೆ ಬೇಡ. ನಮಗೆ ನಮ್ಮ ಕೃಷಿ ಭೂಮಿಯೇ ಸಾಕು. ನಾವು ನಮ್ಮ ಪ್ರಾಣವನ್ನು ಬೇಕಾದರೇ ಬಿಡ್ತೀವಿ. ಆದರೆ ನಮ್ಮ ಕೃಷಿ ಭೂಮಿಯನ್ನು ಮಾತ್ರ ಬಿಡೆವು ಎಂಬುದು ರೈತರ ಮನದಾಳದ ನೋವಾಗಿದೆ.       ಕಲ್ಪತರು ನಾಡು ತುಮಕೂರು ಗ್ರಾಮಾಂತರ ಮತ್ತು ಕೊರಟಗೆರೆ ಕ್ಷೇತ್ರದ ನಡುವಿನ ತಂಗನಹಳ್ಳಿ ಜರಿಬೆಟ್ಟದಲ್ಲಿ ಗಣಿಗಾರಿಕೆ ನಡೆಸಲು 49ಎಕರೇ ಕೃಷಿ ಜಮೀನು ಭೂಸ್ವಾಧೀನಕ್ಕಾಗಿ ಕಳೆದ 2ವರ್ಷದಿಂದ ವಿವಿಧ ರೀತಿಯ ಕಸರತ್ತು ನಡೆಯುತ್ತಿದೆ. ಎತ್ತಿನಹೊಳೆಗೆ ಜಮೀನು ಹೋಗಲಿದೆ. ಜಮೀನು ಅಭಿವೃದ್ಧಿ ಪಡಿಸಿ ಕೊಳವೆಬಾವಿ ಹಾಕಿಸುತ್ತೇವೆ. ಕೃಷಿಗೆ ಸಹಾಯ ಮಾಡ್ತೇವೆ ಎಂದು ಲಕ್ಷಾಂತರ ರೂ ಹಣದ ಆಸೆ ತೋರಿಸಿ ಕೃಷಿ ಭೂಮಿ ಕಬಳಿಸುವ ಯತ್ನ ಈಗಾಗಲೇ ನಡೆದಿದೆ.       ರೈತರಿಂದ ಕೃಷಿ…

Read More

ತುರುವೇಕೆರೆ:      ಹೇಮಾವತಿಗೆ ನಾಲೆಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆಗೆ ಅಕ್ಕಪಕ್ಕ ತಡೆಗೋಡೆ ಇಲ್ಲದಿರುವುರಿಂದ ಇಲ್ಲಿ ಓಡಾಡುವ ಪ್ರಾಣಕ್ಕೆ ಕುಂದುಂಡಾಗಲಿದೆ ಎಂದು ಕರ್ನಾಟಕ ವಿಜಯಸೇನೆಯ ತಾಲ್ಲೂಕು ಪದಾಧಿಕಾರಿಗಳು ಸ್ಥಳದಲ್ಲಿ ಹೇಮಾವತಿ ಇಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡರು.       ತಾಲ್ಲೂಕಿನ ಅರೆಮಲ್ಲೇನಹಳ್ಳಿ ಮುಖ್ಯರಸ್ತೆಯಲ್ಲಿ ಹೆಡಗೀಹಳ್ಳಿ ಬಳಿ ಮುಖ್ಯರಸ್ತೆಗೆ ಅಡ್ಡಲಾಗಿ ಹಾದುಹೋಗಿರುವ ಎನ್‍ಬಿಸಿ ಹೇಮಾವತಿ ನಾಲಾವಲಯದಲ್ಲಿ ಇತ್ತೀಚೆಗಷ್ಟೇ ನಿರ್ಮಾಣಗೊಂಡಿದ್ದು ತಡೆಗೋಡೆ ಹಾಕದೆ ಸಾರ್ವಜನಿಕರಿಗೆ ಓಡಾಡಲು ಅನುವು ಮಾಡಿಕೊಟ್ಟಿದ್ದಾರೆ. ಇದರಿಂದ ಯಾವುದೇ ಸಂದರ್ಭದಲ್ಲಿಯಾದರೂ ಅಪಘಾತವಾಗುವ ಸಂಭವವಿದೆ. ನಾಲೆ ತುಂಬಾ ಆಳವಾಗಿದ್ದು ಯಾವುದೇ ಸಂದರ್ಭದಲ್ಲಿ ಅಪಾಯದ ಸಂಭವವಿದ್ದು ಕೂಡಲೇ ತಡೆಗೋಡೆ ನಿರ್ಮಾಣಮಾಡಿ ತದನಂತರ ಸಾರ್ವಜನಿಕರಿಗೆ ಸೇತುವೆ ಮೇಲೆ ಓಡಾಡಲು ಅನುವು ಮಾಡಿಕೊಡಲಿ. ಅದು ಬಿಟ್ಟು ತಡೆಗೋಡೆ ನಿರ್ಮಾಣ ಮಾಡದೆ ಓಡಾಡಲು ರಸ್ತೆ ತೆರವು ಮಾಡಿರುವುದು ಸರಿಯಲ್ಲ ಎಂದು ಇಂಜಿನಿಯರ್‍ನ್ನು ತರಾಟೆಗೆ ತೆಗೆದುಕೊಂಡರು.       ಕರ್ನಾಟಕ ವಿಜಯಸೇನೆಯ ತಾಲ್ಲೂಕು ಅಧ್ಯಕ್ಷ ಗಿರೀಶ್ ಮಾತನಾಡಿ ಹೇಮಾವತಿ ನಾಲೆಗೆ ಅಡ್ಡಲಾಗಿ 29.5 ಮೀ. ಉದ್ದ ಹಾಗೂ…

Read More

ಗುಬ್ಬಿ :       ನೀರು ಇಂಗಿಸಿ ಅಂತರ್ಜಲ ವೃದ್ಧಿ ಮಾಡುವ ಯೋಜನೆಗಳಲ್ಲಿ ಬಚ್ಚಲುಗುಂಡಿ ಯೋಜನೆ ಕೂಡಾ ವಿಶೇಷ ಅಭಿಯಾನವಾಗಿದೆ. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ 50 ಗುಂಡಿಗಳ ಕಾಮಗಾರಿ ನಡೆಸಲು ಸರ್ಕಾರ ಮುಂದಾಗಿದೆ. ಈ ವಿಶೇಷ ಅಭಿಯಾನ ಅನುಷ್ಠಾನಕ್ಕೆ ಸಮುದಾಯ ಸಹಕಾರ ನೀಡಬೇಕು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಅನುಸೂಯ ನರಸಿಂಹಮೂರ್ತಿ ತಿಳಿಸಿದರು.       ತಾಲ್ಲೂಕಿನ ಎಂ.ಎಚ್.ಪಟ್ಟಣ ಗ್ರಾಮದಲ್ಲಿ ಶುಕ್ರವಾರ ಸಾಂಕೇತಿಕವಾಗಿ ಆರಂಭವಾದ ಬಚ್ಚಲುಗುಂಡಿ ಅಭಿಯಾನ ಅನುಷ್ಠಾನಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ಉದ್ಯೋಗ ಖಾತ್ರಿ ಯೋಜನೆಗೆ ಮರು ರೂಪ ನೀಡುತ್ತಿರುವ ಹಲವು ಯೋಜನೆಯಲ್ಲಿ ಈ ಬಚ್ಚಲುಗುಂಡಿ ಯೋಜನೆ ಕೂಡಾ ಒಂದಾಗಿದೆ. ಈ ಜತೆಯಲ್ಲಿ ಪೌಷ್ಠಿಕ ತೋಟ ನಿರ್ಮಾಣ, ಅಣಬೆ ಬೇಸಾಯ ಶೆಡ್ ನಿರ್ಮಾಣಕ್ಕೂ ಆದ್ಯತೆ ನೀಡಲಾಗಿದೆ ಎಂದರು.       ಬಚ್ಚಲುಗುಂಡಿ ಕಾಮಗಾರಿಗೆ ಸರ್ಕಾರ 17 ಸಾವಿರ ರೂಗಳನ್ನು ಪಂಚಾಯಿತಿ ಮೂಲಕ ನೀಡಲಿದೆ. ಎನ್‍ಆರ್‍ಇಜಿಎ ಯೋಜನೆ ಮೂಲಕ ಇದರ ಉಪಯೋಗ ಪಡೆದುಕೊಳ್ಳಲು ಗ್ರಾಮಸ್ಥರು ಮುಂದಾಗಬೇಕು.…

Read More

ತುಮಕೂರು:      ಇಂದು ನಾವೆಲ್ಲರೂ ಪರಿಸರದ ಶ್ರೀರಕ್ಷೆಯಲ್ಲಿದ್ದೇವೆ. ಪರಿಸರ ತುಂಬಾ ಮಹತ್ವದ್ದು, ಪರಸ್ಪರ ದೇವೋಭವ ಎಂದು ಹೇಳುವ ಹಾಗೆ ಪರಿಸರ ದೇವೋಭವ ಎಂದು ಹೇಳಬೇಕಾದ ಕಾಲಘಟ್ಟವಿದು. ಪರಿಸರವನ್ನು ನಾವು ಕಾಪಾಡಿದರೆ, ಪರಿಸರ ನಮ್ಮನ್ನು ಕಾಪಾಡುತ್ತದೆ ಎಂದು ಹಿರೇಮಠಾಧ್ಯಕ್ಷರಾದ ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.      ತಾಲ್ಲೂಕಿನ ಬೊಮ್ಮನಹಳ್ಳಿ ಸಿದ್ಧಗಿರಿ ಶನೇಶ್ಚರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ದಲಿತ ಸ್ವಾಭಿಮಾನಿ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಕೆ.ಎಚ್.ಶಿವಕುಮಾರ್ (ಬಂಡೆಕುಮಾರ್) ಅವರ 40ನೇ ಜನ್ಮದಿನಾಚರಣೆ ಅಂಗವಾಗಿ ಗುರುವಾರ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೊಮ್ಮನಹಳ್ಳಿ ಸಿದ್ಧಗಿರಿ ಶನೇಶ್ಚರ ದೇವಸ್ಥಾನದ ಸನ್ನಿಧಾನದಲ್ಲಿ ವೃಕ್ಷವನ್ನು ಆರೋಪಣ ಮಾಡುವಂತಹ ಕಾರ್ಯಕ್ರಮವನ್ನು ಬಂಡೆ ಕುಮಾರ್ ಅವರು ಮಾಡಿದ್ದಾರೆ. ಇದು ಅವರ ಪರಿಸರ ಪ್ರೇಮ, ಪರಿಸರ ಕಾಳಜಿಯನ್ನು ತೋರಿಸುತ್ತದೆ ಎಂದರು.      ಪರಿಸರ ಕಾಳಜಿಯನ್ನು ಹೊಂದಿರುವ ಬಂಡೆ ಕುಮಾರ್ ಅವರು, ಈ ಹಿಂದೆಯೂ ಕೂಡ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಮೀಪ ಸಸಿ ಆರೋಪಣವನ್ನು ನಮ್ಮ…

Read More

ತುಮಕೂರು :      ಜಿಲ್ಲೆಯಲ್ಲಿ 222 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 6662 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ.       ಜಿಲ್ಲೆಯಲ್ಲಿ ತುಮಕೂರು ತಾಲ್ಲೂಕಿನಲ್ಲಿ 57, ಪಾವಗಡ-27, ಕುಣಿಗಲ್-21, ಮಧುಗಿರಿ-20, ಕೊರಗಟಗೆರೆ-09, ತುರುವೇಕೆರೆ-16, ಶಿರಾ-09, ತಿಪಟೂರು-27, ಗುಬ್ಬಿ-13, ಚಿಕ್ಕನಾಯಕನಹಳ್ಳಿ-23 ಮಂದಿ ಸೇರಿ ತಾಲೂಕಿನಲ್ಲಿ ಒಟ್ಟು 222 ಜನರಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ.        ಜಿಲ್ಲಾಸ್ಪತ್ರೆಯಿಂದ 189 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 4707 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1778 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 171 ಮಂದಿ ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Read More

ತುಮಕೂರು :     ಜಿಲ್ಲೆಯಲ್ಲಿ 292 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 6440 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ.       ಜಿಲ್ಲೆಯಲ್ಲಿ ತುಮಕೂರು ತಾಲ್ಲೂಕಿನಲ್ಲಿ 124, ಪಾವಗಡ-37, ಕುಣಿಗಲ್-07, ಮಧುಗಿರಿ-10, ಕೊರಗಟಗೆರೆ-07, ತುರುವೇಕೆರೆ-12, ಶಿರಾ-32, ತಿಪಟೂರು-33, ಗುಬ್ಬಿ-10, ಚಿಕ್ಕನಾಯಕನಹಳ್ಳಿ-10 ಮಂದಿ ಸೇರಿ ತಾಲೂಕಿನಲ್ಲಿ ಒಟ್ಟು 292 ಜನರಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ.        ಜಿಲ್ಲಾಸ್ಪತ್ರೆಯಿಂದ 140 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 4515 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1752 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 165 ಮಂದಿ ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Read More

ತುಮಕೂರು:       ನಗರದ ವಾರ್ಡ್ ನಂ 15 ರಲ್ಲಿ ನಡೆಯುತ್ತಿರುವ ಸ್ಮಾರ್ಟಸಿಟಿ ಕಾ ಸಮಗಾರಿಗಳನ್ನು ಮುಂದಿನ 15 ದಿನಗಳಲ್ಲಿ ಮುಗಿಸಿ, ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಡುವಂತೆ ಸ್ಮಾರ್ಟ್‍ಸಿಟಿ ಅಧಿಕಾರಿಗಳಿಗೆ ಆಯುಕ್ತರಾದ ಶ್ರೀಮತಿ ರೇಣುಕ ಸೂಚಿಸಿದರು.        ಹದಿನೈದನೇ ವಾರ್ಡಿನ ಕಾರ್ಪೋರೇಟರ್ ಮತ್ತು ನಾಗರಿಕರ ದೂರಿನ ಹಿನ್ನೆಲೆಯಲ್ಲಿ ಇಂದು ವಾರ್ಡಿನ ಹಲವು ರಸ್ತೆಗಳನ್ನು ಪರಿವೀಕ್ಷಣೆ ನಡೆಸಿದ ಆಯುಕ್ತರು, ವಾರ್ಡಿನ ಸಿ ಎಸ್ ಐ ಲೇಔಟ್, ಎಸ್.ಎಸ್.ಪುರಂನ ಹಲವರು ರಸ್ತೆಗಳಲ್ಲಿ ಪೈಪ್‍ಲೈನ್ ಕಾಮಗಾರಿ,ಡಕ್ ನಿರ್ಮಾಣಕ್ಕೆ ಅಗೆದಿರುವ ಜಾಗವನ್ನು ಸರಿಯಾಗಿ ಮುಚ್ಚಿಲ್ಲ. ಇದರಿಂದ ಆಯಾಯ ಬಡಾವಣೆಯ ನಾಗರಿಕರು ಒಡಾಡಲು ತೊಂದರೆಯಾಗುತ್ತಿದೆ.ಈ ಬಗ್ಗೆ ಹಲವರು ಪೋನ್ ಮೂಲಕ ದೂರು ನೀಡಿದ್ದರು,ಅಲ್ಲದೆ ಎಸ್.ಎಸ್.ಪುರ ಮೊದಲನೇ ಕ್ರಾಸ್‍ನ ಬಾಲಾಜಿ ನರ್ಸೀಂಗ ಹೋಂ ಬಳಿ ಗುಂಡಿ ತೆಗೆದು ವಾರಗಳೇ ಕಳೆದಿದ್ದರೂ ಮುಚ್ಚಿಲ್ಲ. ಇದರಿಂದ ಆ ಭಾಗದಲ್ಲಿ ಅಂಬುಲೇನ್ಸ್‍ಗಳ ಓಡಾಟಕ್ಕೆ ತೊಂದರೆಯಾಗಿದೆ ಎಂದು ಖುದ್ದ ವೈದ್ಯರೇ ಆಯುಕ್ತರಲ್ಲಿ ದೂರಿದರು.        ಸಾರ್ವಜನಿಕರ ಮನವಿಯನ್ನು ಆಲಿಸಿದ…

Read More