ಮಧುಗಿರಿ: ತಾಲೂಕಿನಲ್ಲಿ ಕರೊನಾ ಕಾಟ ಮುಂದುವರೆದಿದ್ದು ಶುಕ್ರವಾರವೂ ಸಹ ಎಂಟು ಮಂದಿಗೆ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಇಲ್ಲಿಯವರೆಗೂ 84ಮಂದಿಗೆ ಸೋಂಕು ದೃಢಪಟ್ಟು ಶತಕದ ಹಂಚಿಗೆ ತಲುಪಿದೆ. ಈ ಪೈಕಿ ಶುಕ್ರವಾರ ಒಬ್ಬರು ಅಸ್ಪತ್ರೆಯಿಂದ ಬಿಡುಗಡೆ ಯಾಗಿದ್ದು,ಇಲ್ಲಿಯವರೆಗೂ 84ಸೋಂಕಿತರಲ್ಲಿ 46 ಸೋಂಕಿತರು ಅಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ. ಒಬ್ಬರು ಮೃತಪಟ್ಟಿದ್ದು, 37ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರದ ವರದಿ: ತಾಲೂಕಿನ ರಂಗನಹಳ್ಳಿ ಗ್ರಾಮದ ಇಬ್ಬರಿಗೆ, ಮತ್ತು ಐ.ಡಿ.ಹಳ್ಳಿ ಹೋಬಳಿ ಹೊಸಇಟಕಲೋಟಿ,ದೊಡ್ಡೇರಿ ಹೋಬಳಿ ಎಂ.ಗೊಲ್ಲರಹಟ್ಟಿಯ ಯುವಕನೊಬ್ಬನಿಗೆ ಸೋಂಕು ತಗುಲಿದೆ. ಪಟ್ಟಣದ ಕೆ.ಹೆಚ್ ರಸ್ತೆಯ ದಿನಸಿ ಅಂಗಡಿಯ ದಂಪತಿಗಳಿಗೆ ಸೋಂಕು ತಗುಲಿದ್ದು ಆತಂಕ ಹೆಚ್ಚಾಗಿದೆ. ಸೋಂಕಿತರ ಸಂಖ್ಯೆ 84 ಕ್ಕೇರಿದ್ದು ಶತಕದ ಗಡಿ ಸಮೀಪಿಸಿದ್ದು ಸಹಜವಾಗಿ ಸಾರ್ವಜನಿಕರು ಗಾಬರಿಗೊಂಡಿದ್ದಾರೆ. ಗುರುವಾರದ ವರದಿ: ಗುರುವಾರದಂದು7ಸೋಂಕಿತರು ಪತ್ತೆಯಾಗಿದ್ದವು.ಪಟ್ಟಣದ ಪಿಎಲ್ಡಿ ಬ್ಯಾಂಕ್ ರಸ್ತೆ ಎಂಟು ವರ್ಷದ ಬಾಲಕಿ ,ಕೆ.ಆರ್.ಬಡಾವಣೆಯ ಎಪ್ಪತ್ತು ವರ್ಷದ ವ್ಯಕ್ತಿ ಸೇರಿದಂತೆ…
Author: News Desk Benkiyabale
ಮಧುಗಿರಿ: ಅಪ್ರಾಪ್ತೆ ಬಾಲಕಿಯೊಬ್ಬಳಿಗೆ ಅದೇ ಗ್ರಾಮದ ಯುವಕನೊಂದಿಗೆ ವಿವಾಹ ವಾಗಿರುವ ಘಟನೆ ಗುರುವಾರ ನಡೆದಿದೆ. ತಾಲ್ಲೂಕಿನ ಐ ಡಿ ಹಳ್ಳಿ ಹೋಬಳಿಯ ಹೂವಿನಹಳ್ಳಿ ಗ್ರಾಮದ ಪ್ರಾಪ್ತ ಯುವಕ ನೊಬ್ಬ ಅದೇ ಗ್ರಾಮದ ವಾಸಿ ಇತ್ತೀಚೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯ ಕೊನೆಯ ವಿಷಯವನ್ನು ಬರೆಯಲು ಹೋಗಿದ್ದ ಬಾಲಕಿಯೊಬ್ಬಳು ಮನೆಗೆ ಹಿಂದಿರುಗದೆ ಅದೇ ಗ್ರಾಮದ ಯುವಕ ನೊಂದಿಗೆ ವಿವಾಹವಾಗಿದ್ದಾಳೆಂದು ತಿಳಿದು ಬಂದ ಹಿನ್ನೆಲೆಯಲ್ಲಿ ಸಿಡಿಪಿಓ ಇಲಾಖೆಯ ಅಧಿಕಾರಿ ಮಿಡಗೇಶಿ ಪೊಲೀಸ್ ಠಾಣೆಯಲ್ಲಿ ಬಾಲ್ಯ ವಿವಾಹದಲ್ಲಿ ಭಾಗಿರುವವರ ವಿರುದ್ದ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.
ತುರುವೇಕೆರೆ: ನನಗೂ ಹಾಗೂ ನಮ್ಮ ಗ್ರಾಮದ ಉಮರ್ ಎಂಬುವವರಿಗೂ ನಡೆದ ಜಮೀನು ವಿವಾದದ ಪ್ರಕರಣದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿರುವ ಜೆಡಿಎಸ್ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಹಿಂದೂ ಮುಸಲ್ಮಾನರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆಂದು ನಾಗಲಾಪುರದ ಮಂಜುನಾಥ್ ಆರೋಪಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಮ್ಮ ಗ್ರಾಮದಲ್ಲಿ ನಮ್ಮ ತಾತನವರ ಕಾಲದಿಂದಲೂ ಉಳಿಮೆ ಮಾಡುತ್ತಿದ್ದ ಜಮೀನನ್ನು ಅಕ್ರಮವಾಗಿ ಮುಸಲ್ಮಾನ್ ಜನಾಂಗದ ಉಮರ್ ಎಂಬುವವರು ಉಳಿಮೆ ಮಾಡಲು ಮುಂದಾದಾ, ತಡೆಯಲು ಹೋದ ನನ್ನ ಮೇಲೆ ಟ್ರಾಕ್ಟರ್ ಹರಿಸಲು ಪ್ರಯತ್ನಿಸಿದರು ತಕ್ಷಣ ನಾನು ಪಕ್ಕಕ್ಕೆ ಬಿದ್ದೆ ಆದರೂ ಟ್ರಾಕ್ಟರ್‍ನ ನೇಗಿಲು ನನ್ನ ತೊಡೆ ಹಾಗೂ ಕೈಗೆ ತಾಕಿ ರಕ್ತಸ್ರಾವ ಉಂಟಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದೆ, ಆದರೆ ಅಷ್ಟರೊಳಗಾಗಲೇ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನ ಸಹಾಯದಿಂದ ಪೋಲೀಸ್ ಠಾಣೆಗೆ ನನ್ನ ಮೇಲೆಯೇ ದೂರು ನೀಡಿದ್ದಾರೆ, ಅಲ್ಲದೆ ವಾಸ್ತವದ ಅರಿವಿಲ್ಲದ ಮಾಜಿ ಶಾಸಕರು…
ತುಮಕೂರು: ದೇಶದಲ್ಲಿ ಕೊರೊನಾ ಮಹಾಮಾರಿಯಿಂದಾಗಿ ಲಕ್ಷಾಂತರ ಜನರು ಸಾವೀಗೀಡಾಗುತ್ತಿವುದು ದುರದೃಷ್ಟಕರ ಸಂಗತಿ. ಇಂತಹ ಸಂದರ್ಭದಲ್ಲಿ ನೇಕಾರಿಕೆಯನ್ನೆ ನಂಬಿ ಬದುಕುತ್ತಿದ್ದವರ ಬದುಕು ದುಸ್ಥಿರವಾಗಿದೆ ಈ ಹಿನ್ನೆಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪರವರು ನೇಕಾರರತ್ತ ಗಮನಹರಿಸಬೇಕೆಂದು ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ ಅಧ್ಯಕ್ಷ ಹಾಗೂ ತುರುವೇಕೆರೆ ಕ್ಷೇತ್ರದ ಮಾಜಿ ಶಾಸಕರಾದ ಎಂ.ಡಿ.ಲಕ್ಷ್ಮೀನಾರಾಯಣ್ ಮನವಿ ಮಾಡಿದ್ದಾರೆ. ನಿನ್ನೆ ಬೆಳಿಗ್ಗೆ ಬೆಂಗಳೂರು ಯಲಹಂಕ ಕೋಗಿಲು ಅಗ್ರಹಾರದ ನೇಕಾರರ ಕಾಲೋನಿಯ ಲಕ್ಷ್ಮೀಪತಿ (60) ವರ್ಷದ ಬಡ ನೇಕಾರ ಕೊರೋನಾ ಖಾಯಿಲೆ ಹಾಗೂ ಮಾಡಿದ ಸಾಲ ತೀರಿಸಲಾಗದೆ ಶುಕ್ರವಾರ ಬೆಳಿಗ್ಗೆ ನೇಕಾರಿಕೆ ಮಾಡುತ್ತಿರುವ ಜಾಗದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನೇಕ ಬಾರಿ ತಮಗೆ ಹಾಗೂ ಜವಳಿ ಮಂತ್ರಿಗಳಿಗೆ ನೇಕಾರರ ಸಮಸ್ಯೆಗಳನ್ನು ಬಗೆಹರಿಸಲು ಪತ್ರ ನೀಡಿದ್ದೂ ಇದುವರೆವಿಗೂ ಆತ್ಮಹತ್ಯೆ ಮಾಡಿಕೊಂಡಿರುವ ಕುಟುಂಬಗಳಿಗೆ ಪರಿಹಾರ ನೀಡಿರುವುದಿಲ್ಲ. ಹಾಗೂ ನೇಕಾರರ ಸಮಸ್ಯೆಗಳನ್ನು ಪರಿಹಾರ ಮಾಡಿರುವುದಿಲ್ಲ. ತಕ್ಷಣ ನೇಕಾರರ ಸಮಸ್ಯೆಗಳನ್ನು ಬಗೆಹರಿಸಲು ಸಭೆ ಕರೆಯಬೇಕು.…
ತುಮಕೂರು : ಜಿಲ್ಲೆಯಲ್ಲಿ ಇಂದು 59 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 991 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಇಂದು ತುಮಕೂರು-22, ಮಧುಗಿರಿ-8, ಗುಬ್ಬಿ ಹಾಗೂ ತಿಪಟೂರಿನಲ್ಲಿ ತಲಾ 7, ಕುಣಿಗಲ್ ಹಾಗೂ ತುರುವೇಕೆರೆಯಲ್ಲಿ ತಲಾ 5, ಚಿಕ್ಕನಾಯಕನಹಳ್ಳಿ-2, ಕೊರಟಗೆರೆ, ಪಾವಗಡ ಹಾಗೂ ಶಿರಾ ತಲಾ 1 ಸೇರಿದಂತೆ ಒಟ್ಟು 67 ಜನರಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ. ಜಿಲ್ಲಾಸ್ಪತ್ರೆಯಿಂದ 35 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 523 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 430 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 38 ಮಂದಿ ಸಾವನ್ನಪ್ಪಿದ್ದು, ಶುಕ್ರವಾರ-03 ಮಂದಿ ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ತುಮಕೂರು: ಗುರುವಾರ ಸಂಜೆ ಸುರಿದ ಮಳೆಗೆ ತುಮಕೂರಿನ ಅಮಾನಿಕೆರೆ ಸಮೀಪವಿರುವ ಕನ್ನಡ ಭವನದ ಸುವರ್ಣ ಭವನಕ್ಕೆ ಮಳೆನೀರು ನುಗ್ಗಿ ಪೀಠೋಪಕರಣಗಳು ಮತ್ತು ನೂರಾರು ಬಂಡಲ್ ಹಳೆಯ ಪೇಪರ್ ನೀರಿನಲ್ಲಿ ಮುಳುಗಿ ಹೋಗಿದೆ. ಸ್ಮಾರ್ಟ್‍ಸಿಟಿ ಅಸಮರ್ಪಕ ಕಾಮಗಾರಿಗಳು ಅರ್ಧಕ್ಕೆ ನಿಂತುಹೋಗಿದ್ದು ಸುವರ್ಣಭವನಕ್ಕೆ ನೀರು ನುಗ್ಗಲು ಕಾರಣ. ಈ ಸಮಸ್ಯೆಯನ್ನು ಮಹಾನಗರ ಪಾಲಿಕೆ ಆಯುಕ್ತರು ಮತ್ತು ಸ್ಮಾರ್ಟ್‍ಸಿಟಿ ಇಂಜಿನಿಯರ್ ಗಮನಕ್ಕೆ ತಂದರೂ ನೀರು ಹೊರಹಾಕಿಸಲು ಕ್ರಮ ಕೈಗೊಳ್ಳಲಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಾ.ಹ.ರಮಾಕುಮಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದ ಮುಖ್ಯಾಧಿಕಾರಿ ಮಹಲಿಂಗಪ್ಪ ಅವರನ್ನು ಸಂಪರ್ಕಿಸಿ ಸುವರ್ಣ ಸಭಾ ಭವನದಲ್ಲಿರುವ ಮಳೆ ನೀರು ಹೊರಹಾಕಿಕೊಡುವಂತೆ ಮನವಿ ಮಾಡಲಾಯಿತು. 2 ಅಗ್ನಿಶಾಮಕ ವಾಹನಗಳು ಮತ್ತು 10 ಸಿಬ್ಬಂದಿ ಬಂದು ಸಭಾಭವನದಲ್ಲಿ ತುಂಬಿಕೊಂಡಿದ್ದ ನೀರನ್ನು ಪಂಪ್ ಮೂಲಕ ಹೊರಹಾಕಿದರು. ಇದಕ್ಕಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು. …
ತುಮಕೂರು : ಜಿಲ್ಲೆಯಲ್ಲಿ ಇಂದು 67 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 931 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ತುಮಕೂರು ತಾಲ್ಲೂಕಿನಲ್ಲಿ 26, ಪಾವಗಡ-06, ಗುಬ್ಬಿ-09, ಕುಣಿಗಲ್-05, ಮಧುಗಿರಿ-07, ಶಿರಾ-04, ತಿಪಟೂರು-02, ತುರುವೇಕೆರೆ-05, ಚಿಕ್ಕನಾಯಕನಹಳ್ಳಿ-02, ಕೊರಟಗೆರೆ-01 ಮಂದಿ ತಾಲೂಕಿನಲ್ಲಿ ಒಟ್ಟು 67 ಜನರಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ. ಜಿಲ್ಲಾಸ್ಪತ್ರೆಯಿಂದ 03 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 488 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 408 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 35 ಸಾವನ್ನಪ್ಪಿದ್ದು, ಗುರುವಾರ-05 ಮಂದಿ ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಪಾವಗಡ: ತಾಲ್ಲೂಕಿನ ನಿಡಗಲ್ ಹೋಬಳಿ ಗುಜ್ಜನಡು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಟಿ.ಎನ್.ಬೆಟ್ಟ ಗ್ರಾಮದ ತಿಮ್ಮಪ್ಪನ ಬೆಟ್ಟದ ತಪ್ಪಲಿನಲ್ಲಿರುವ ಸನಾತನ ಪುಷ್ಕರಣಿಯನ್ನು ಕಳೆದ ಒಂದು ವಾದದಿಂದ ಸ್ವಚ್ಛಮಾಡಲಾಗುತ್ತಿದೆ. ಇದರಲ್ಲಿ 18 ಮತ್ತು19 ನೇ ಶತಮಾನದ ನಾಣ್ಯಗಳು ದೊರೆತಿವೆ. ಈ ಅಪರೂಪದ ನಾಣ್ಯಗಳು ದೊರೆತಿರುವುದನ್ನು ಪೆಮ್ಮನಹಳ್ಳಿಯ ಗ್ರಾಮಸ್ಥರು ತಾಲ್ಲೂಕು ಆಡಳಿತದ ಗಮನಕ್ಕೆ ತಂದ ಕಾರಣ ಗುರುವಾರ ತಹಸಿಲ್ದರ್ ವರದರಾಜ್ ಅವರು ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು. ನಂತರ ಮಾತನಾಡುತ್ತಾ ಪುರಾತನ ಪುಷ್ಕರಣಿಯನ್ನು ಸ್ವಚ್ಛಗೊಳಿಸುವ ವೇಳೆ ಈ ಅಪರೂಪದ ನಾಣ್ಯಗಳು ದೊರೆತಿವೆ ಇವುಗಳನ್ನು ಗ್ರಾಮಸ್ಥರು ಸಂಗ್ರಹಿಸಿ ಶ್ರೀರಾಮನ ದೇವಸ್ಥಾನದಲ್ಲಿ ಇಟ್ಟಿದ್ದರು. ನಂತರ ಈ ಸಂಂಬಂಧ ಮೇಲಾಧಿಕಾರಿಗಳ ಗಮನಕ್ಕೆ ತಂದು ಅವರ ಮಾರ್ಗದರ್ಶನದಂತೆ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು. ಈ ದೇವಸ್ಥಾನದ ಹತ್ತಿರ ಅನೇಕ ಮೂಲಭೂತ ಸೌಕರ್ಯಗಳ ಕೊರತೆ ಇರುವುದರಿಂದ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಎಲ್ಲಾ ರೀತಿಯ ಸಮಸ್ಯೆಗಳನ್ನು ಈಡೇರಿಸಲು ಪ್ರಮಾಣಿಕ ಪ್ರಯತ್ನ…
ಮಧುಗಿರಿ: ಪಕ್ಷದ ಪದಾಧಿಕಾರಿಗಳು ಕೇವಲ ವಿಸಿಟಿಂಗ್ ಕಾರ್ಡ್ ಗೆ ಸೀಮಿತವಾಗಿರದೆ ಪಕ್ಷದ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಲುಪುವಂತೆ ಮಾಡಿ ತಳ ಮಟ್ಟದಿಂದ ಪಕ್ಷ ಸಂಘಟನೆಗೆ ಮುಂದಾಗ ಬೇಕು ಎಂದು ಮಾಜಿ ಶಾಸಕ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್ ಗೌಡ ಕರೆ ನೀಡಿದರು. ಪಟ್ಟಣದ ಬಿಜೆಪಿ ಪಕ್ಷದ ಕಾರ್ಯಲಯದಲ್ಲಿ ಬುಧವಾರ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಆಯ್ಕೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಜಿ.ಎಸ್ ಬಸವರಾಜುರವನ್ನು ಬಹುಮತದಿಂದ ಇಲ್ಲಿನ ಮತದಾರರು ಆಯ್ಕೆ ಮಾಡಿದಂತೆ ಮುಂಬರುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಭಿವೃದ್ಧಿ ಕಾರ್ಯಗಳನ್ನು ಮನೆ ಮನೆಗೂ ತಲುಪಿಸಿ ಜನರನ್ನು ಸಂಘಟನೆ ಮಾಡಬೇಕಾದ ಜವಾಬ್ದಾರಿ ಹೊಸ ಕಾರ್ಯಕರ್ತರದ್ದಾಗಿದೆ. ಪಕ್ಷ ಸಂಘಟನೆ ಮಾಡುವಾಗ ಹಿರಿಯ ಕಾರ್ಯಕರ್ತರನ್ನು ಗಣನೆಗೆ ತೆಗೆದುಕೊಂಡು ಅವರ ಮಾರ್ಗದರ್ಶನದಲ್ಲಿ ಮುಂದುವರೆಯಬೇಕು ಎಂದು ಕಾರ್ಯಕರ್ತರಿಗೆ ಸೂಚಿಸಿದರು. ಇದೇ ಸಂಧರ್ಭದಲ್ಲಿ ತಾಲ್ಲೂಕಿನ ಘಟಕದ ವಿವಿಧ…
ಮಧುಗಿರಿ: ಪೋಷಕರ ವಿರೋಧದ ಹಿನ್ನೆಲೆಯಲ್ಲಿ ಪ್ರೇಮಿಗಳು ಜೋಡಿಯೊಂದು ಮೌಡ್ಯತೆ ತೊರೆದು ಭೀಮನ ಅಮಾವಾಸ್ಯೆಯಂದೇ ಡಾ. ಬಿ.ಆರ್.ಅಂಬೇಡ್ಕರ್ ಮತ್ತು ವಾಲ್ಮೀಕಿ ಭಾವಚಿತ್ರದ ಎದುರು ನೂತನವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ಮಧುಗಿರಿಯಲ್ಲಿ ನಡೆದಿದೆ. ಕೊರಟಗೆರೆ ತಾಲ್ಲೂಕಿನ ಚಿಂಪುಗಾನಹಳ್ಳಿ ಗ್ರಾಮದ ಯುವತಿ ಚಂದನಾ (18) ಹಾಗೂ ಅದೇ ಗ್ರಾಮದ 25 ವರ್ಷದ ಯುವಕ ಶ್ರೀಧರ್ ಕಳೆದ 6 ತಿಂಗಳಿನಿಂದ ಪರಸ್ಪರ ಪ್ರಿತಿಸುತ್ತಿದ್ದರು. ಇವರ ಪ್ರೀತಿಗೆ ಪೋಷಕರ ವಿರೋಧ ವ್ಯಕ್ತವಾದ ಹಿನ್ನೆಯಲ್ಲಿ ಮನೆ ಬಿಟ್ಟು ಓಡಿ ಹೋಗಿದ್ದ ಪ್ರೇಮಿಗಳು ರಕ್ಷಣೆ ಕೊಡುವಂತೆ ವೀಡಿಯೋ ಮೂಲಕ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದ್ದರು. ಬಳಿಕ ಜು20 ರ ಸೋಮವಾರ ಭೀಮನ ಅಮಾವಾಸ್ಯೆಯಂದು ಮೌಡ್ಯತೆ ತೊರೆದು ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ವಾಲ್ಮಿಕಿ ಭಾವ ಚಿತ್ರದ ಎದುರೇ ಸಂವಿಧಾನ ಪೀಠಿಕೆಯನ್ನೇ ಮಾಂಗಲ್ಯ ಧಾರಣೆಯ ಮಂತ್ರವಾಗಿ ಓದಿ ತಾಳಿಕಟ್ಟುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಳಿಕ…











