ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದ ಸಮಾಜಕಾರ್ಯ ವಿಭಾಗದ ಹಿರಿಯ ಪ್ರಾಧ್ಯಾಪಕ ಹಾಗೂ ಸಿಂಡಿಕೇಟ್ ಸದಸ್ಯ ಪ್ರೊ. ಕೆ. ಜಿ. ಪರಶುರಾಮ ಅವರು ಸಂತಶ್ರೇಷ್ಠ ಕನಕದಾಸ ಜಯಂತಿಯ ಗೌರವ ಸನ್ಮಾನಕ್ಕೆ ಭಾಜನರಾಗಿದ್ದಾರೆ. ತುಮಕೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತುಮಕೂರು ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಸಾಹಿತ್ಯ ಪರಿಷತ್ ಪ್ರೊ. ಪರಶುರಾಮ ಅವರಿಗೆ ಈ ಪುರಸ್ಕಾರ ನೀಡಿ ಗೌರವಿಸಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ತುಮಕೂರು ವಿಶ್ವವಿದ್ಯಾನಿಲಯವು ವಿಶೇಷ ಘಟಕ ಯೋಜನೆಯಡಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಭಾರತರತ್ನ ಡಾ. ಬಿ. ಆರ್. ಅಂಬೇಡ್ಕರ್ ಓದು ಕಾರ್ಯಕ್ರಮ’ದಲ್ಲಿ ಈ ಗೌರವ ಪ್ರದಾನ ಮಾಡಲಾಯಿತು. ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ನಿವೃತ್ತ ನ್ಯಾಯಾಧೀಶ ಬಾಬಾ ಸಾಹೇಬ್ ಜಿನರಾಳ್ಕರ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರ್ ಮಿರ್ಜಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಪ್ರೊ. ಪರಶುರಾಮ ಅವರು 24 ವರ್ಷಗಳ ಬೋಧನೆ ಹಾಗೂ…
Author: News Desk Benkiyabale
ತುಮಕೂರು : ಜೀತ ಪದ್ಧತಿಯನ್ನು ನಿರ್ಮೂಲನೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ. ಪ್ರಭು ಅವರು ಹೇಳಿದರು. ನಗರದ ಡಾ: ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ‘ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ಮತ್ತು ಕಾರ್ಯಾಗಾರ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರö್ಯ ದೊರೆತು 75 ವರ್ಷಗಳು ಕಳೆದರೂ ಜೀತ ಪದ್ಧತಿ ಇನ್ನೂ ಜೀವಂತವಾಗಿರುವುದು ಶೋಚನೀಯ ಸಂಗತಿ. ಆರ್ಥಿಕವಾಗಿ ಹಿಂದುಳಿದವರು ಜೀತ ಪದ್ಧತಿಗೆ ಒಳಗಾಗುತ್ತಾರೆ. ಜೀತ ಪದ್ಧತಿಯಿಂದ ಮಾನವ ಹಕ್ಕುಗಳಿಗೆ ಚ್ಯುತಿಯುಂಟಾಗುತ್ತದೆ. ದೇಶದಲ್ಲಿ ಸಂವಿಧಾನ ಜಾರಿಗೆ ಬಂದ ನಂತರ ಜೀತ ಪದ್ಧತಿ, ಸತಿ ಸಹಗಮನ, ಅಸ್ಪೃಶ್ಯತೆ, ಮಾನವ ಕಳ್ಳಸಾಗಾಣಿಕೆ, ಮ್ಯಾನ್ಯುಯಲ್ ಸ್ಕಾö್ಯವೆಂಜಿAಗ್‌ಗಳAತಹ ಅನಿಷ್ಠ ಪದ್ಧತಿಗಳನ್ನು ನಿರ್ಮೂಲನೆಗೊಳಿಸುವಲ್ಲಿ ಯಶಸ್ವಿ ಹೆಜ್ಜೆಗಳನ್ನು ಹಾಕುತ್ತಿದ್ದೇವೆ ಎಂದು ತಿಳಿಸಿದರು. ಜೀತ ಪದ್ಧತಿ ನಿರ್ಮೂಲನೆ ಕಾಯ್ದೆಯು 1976ರಲ್ಲಿ ಜಾರಿಗೆ ತರಲಾಗಿದ್ದು, ಕಾಯ್ದೆಯ ಅನುಷ್ಟಾನದ ಜವಾಬ್ದಾರಿಯನ್ನು ಎಲ್ಲ ಅಧಿಕಾರಿಗಳಿಗೆ ನೀಡಲಾಗಿದೆ. ಜೀತ ಪದ್ಧತಿಗೆ ಬಡತನವೇ…
ಹುಳಿಯಾರು: ಮಾಗಡಿಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ವತಿಯಿಂದ ಆಯೋಜಿಸಿದ್ದ ಅಂತರ ಜಿಲ್ಲಾ ಮಟ್ಟದ ಪತ್ರಕರ್ತರ ಡಬಲ್ ಶಟಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ತುಮಕೂರು ಜಿಲ್ಲೆಯನ್ನು ಪ್ರತಿನಿಧಿಸಿದ್ದ ಹುಳಿಯಾರು ಪತ್ರಕರ್ತರಾದ ಯೋಗೀಶ್ ಹಾಗೂ ಸೋಮಶೇಖರ್ ಅವರು ದ್ವಿತೀಯ ಸ್ಥಾನ ಪಡೆದು 5 ಸಾವಿರ ರೂಪಾಯಿ ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ಗೆದ್ದುಕೊಂಡಿದ್ದಾರೆ. ಪಂದ್ಯಾವಳಿಯಲ್ಲಿ ಚಾಮರಾಜ ನಗರ, ಕೊಡಗು, ಮೈಸೂರು, ಮಂಡ್ಯ, ರಾಮನಗರ, ಹಾಸನ, ತುಮಕೂರು ಸೇರಿ ಒಟ್ಟು 19 ತಂಡಗಳು ಭಾಗವಹಿಸಿದ್ದು, ಅದರಲ್ಲಿ ಮಾಗಡಿ ತಂಡದ ಕಿರಣ್ ಕುಮಾರ್ ಹಾಗೂ ಅಭಿಷೇಕ್ ಪ್ರಥಮ ಬಹುಮಾನ ಪಡೆಯುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ತುಮಕೂರಿನ ಸೋಮಶೇಖರ್ ಮತ್ತು ಯೋಗೇಶ್ ಅವರು ರನ್ನರ್ ಆಪ್ ಆಗಿ ದ್ವಿತೀಯ ಸ್ಥಾನ, ಹಾಸನದ ರವಿ ಮತ್ತು ರಾಘವೇಂದ್ರ ತೃತೀಯ ಬಹುಮಾನ ಪಡೆದಿದ್ದಾರೆ. ಶಾಸಕ ಎಚ್.ಸಿ. ಬಾಲಕೃಷ್ಣ ಮಾತನಾಡಿ, ಪತ್ರಕರ್ತರು ಯಾವಾಗಲೂ ಒತ್ತಡದಲ್ಲೇ ಕೆಲಸ ಮಾಡುತ್ತಿರುತ್ತಾರೆ. ಹಾಗಾಗಿ ಪತ್ರಕರ್ತರು ಕ್ರೀಡೆಯಲ್ಲಿ ಭಾಗವಹಿಸುವ ಗುಣ ಬೆಳಸಿಕೊಂಡರೆ ಉತ್ತಮ ಆರೋಗ್ಯ ತಮ್ಮದಾಗಿಸಿಕೊಳ್ಳಬಹುದು ಎಂದು ತಿಳಿಸಿದರು.…
ತುಮಕೂರು: ಸ್ವಾತಂತ್ರಪರ‍್ವದಲ್ಲಿಯೇ ಸ್ವಾತಂತ್ರ ಭಾರತ ಹೇಗಿರಬೇಕು ಎಂಬ ಕನಸು ಕಂಡವರು ಅಂಬೇಡ್ಕರ್, ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ಹಲವು ದೇಶಗಳ ಸಂವಿಧಾನವನ್ನು ಆಧ್ಯಯನ ಮಾಡಿ, ಸಮಾನತೆ, ಭಾತೃತ್ವದ ನೆಲೆಯಲ್ಲಿ ಸಂವಿಧಾನವನ್ನು ರಚಿಸಿ ಎಲ್ಲರೂ ಜಾತಿ, ರ‍್ಮ, ಭಾಷೆ, ಲಿಂಗ ತಾರತಮ್ಯವಿಲ್ಲದೆ ಬದುಕುವಂತಹ ಅವಕಾಶ ಕಲ್ಪಿಸಿದ ಅಂಬೇಡ್ಕರ್ ಇಂದಿನ ಯುವಪೀಳಿಗೆಗೆ ಮಾದರಿ ಎಂದು ತುಮಕೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಅಭಿಪ್ರಾಯಪಟ್ಟಿದ್ದಾರೆ. ತುಮಕೂರು ವಿವಿಯ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತುಮಕೂರು ಅವರು, ತುಮಕೂರು ವಿವಿಯ ವಿವಿಧ ವಿಭಾಗಗಳ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ “ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಓದು “ಕರ‍್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ಅಂಬೇಡ್ಕರ್ ಅವರನ್ನು ಯುವಜನರು ಓದುವುದರಿಂದ ರ‍್ವ ಜವಾಬ್ದಾರಿಯುತ ಪ್ರಜೆಯಾಗಿ ರೂಪಗೊಳ್ಳಲು ಸಹಕಾರಿಯಾಗುತ್ತದೆ ಎಂದರು. ಕಡು ಬಡತನ ಕುಟುಂಬದಲ್ಲಿ ಹುಟ್ಟಿದ ಅಂಬೇಡ್ಕರ್ ವಿದ್ಯರ‍್ಥಿ ದಿಸೆಯಲ್ಲಿಯೇ ಆದ ಹಲವು ಅಪಮಾನಗಳನ್ನು ಮೆಟ್ಟಿನಿಂತು ಈ ದೇಶದ ಎಲ್ಲ ಜನರಿಗೆ ಅಗತ್ಯವಾಗಿರುವ ಸಂವಿಧಾನವನ್ನು ರಚಿಸಿಕೊಟ್ಟರು. ಇದರ ಹಿಂದಿನ ಶಕ್ತಿ ಎಂದರೆ ಅವರಲ್ಲಿದ್ದ…
ತುಮಕೂರು: ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಅವರು ಮಂಗಳವಾರ ನವದೆಹಲಿಯ ಸಂಸತ್ ಭವನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ತುಮಕೂರು, ಚಿತ್ರದುರ್ಗ, ದಾವಣಗೆರೆ ರೈಲ್ವೇ ಮಾರ್ಗಕ್ಕೆ ಸಂಬAಧಪಟ್ಟ ಭಾಗವಾದ ತಿಮ್ಮರಾಜನಹಳ್ಳಿ ಮತ್ತು ತಾವರೆಕೆರೆ ಮಧ್ಯದ ರೈಲ್ವೇ ಕಾಮಗಾರಿ ಕೈಗೊಳ್ಳಲು ರೈಲ್ವೇ ಮಂಡಳಿಯು ಕೇಂದ್ರ ಗೃಹ ಇಲಾಖೆಗೆ ಕಳುಹಿಸಿದ ಪ್ರಸ್ತಾವನೆಗೆ ಅನುಮೋದನೆ ನೀಡಬೇಕೆಂದು ಮನವಿ ಮಾಡಿದರು. ಮನವಿಗೆ ಕೇಂದ್ರ ಗೃಹ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿರುವುದು ಸಂತಸ ತಂದಿದೆ. ಕರ್ನಾಟಕ ರಾಜ್ಯದ ಹಾಗೂ ವಿಶೇಷವಾಗಿ ತುಮಕೂರು ಜನತೆಯ ಪರವಾಗಿ ಅಮಿತ್ ಶಾ ಅವರಿಗೆ ಸೋಮಣ್ಣ ಅವರು ಧನ್ಯವಾದ ತಿಳಿಸಿದ್ದಾರೆ.
ತುಮಕೂರು: ಗಣಿಬಾಧಿತ ಕುಟುಂಬಗಳಿಗೆ ಆದ್ಯತೆ ಮೇರೆಗೆ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ(ಕೆಎಂಇಆರ್‌ಸಿ)ದ ವ್ಯವಸ್ಥಾಪಕ ನಿರ್ದೇಶಕ ಡಾ: ಸಂಜಯ್ ಎಸ್. ಬಿಜ್ಜೂರ್ ಸೂಚಿಸಿದರು. ಮಂಗಳವಾರ ಜಿಲ್ಲಾಧಿಕಾರಿಯ ಕಚೇರಿಯಲ್ಲಿ ನಡೆದ ಕೆಎಂಇಆರ್‌ಸಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಗಣಿಗಾರಿಕೆಯಿಂದ ಹಲವಾರು ಕುಟುಂಬಗಳಿಗೆ ತೊಂದರೆಯುAಟಾಗುತ್ತಿದ್ದು, ಗಣಿಬಾಧಿತ ಕುಟುಂಬಗಳಿಗೆ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. Àರ್ಕಾರವು ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ ಮೂಲಕ ರಾಜ್ಯದ ಗಣಿಬಾಧಿತ ಪ್ರದೇಶಗಳಲ್ಲಿ ಪರಿಸರ ಪುನಶ್ಚೇತನ ಮತ್ತು ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಗಣಿಬಾಧಿತ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಸಮಗ್ರ ಪರಿಸರ ಯೋಜನೆ ಮತ್ತು ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿ (ಅಇPಒIZ) ಯೋಜನೆಯು ಪ್ರಮುಖವಾಗಿದ್ದು, ಈ ಯೋಜನೆಯಡಿ ಗಣಿಬಾಧಿತ ಪ್ರದೇಶಗಳಲ್ಲಿ ಮೂಲಸೌಕರ್ಯ, ಆರೋಗ್ಯ, ಶಿಕ್ಷಣ, ಪರಿಸರ ಸಂರಕ್ಷಣೆ ಮತ್ತು ಜನರ ಜೀವನ ಮಟ್ಟದ ಸುಧಾರಣೆಗಾಗಿ ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ಆರ್ಥಿಕವಾಗಿ ಹಿಂದುಳಿದವರಿಗೆ ಮಾತ್ರ ಗಣಿಬಾಧಿತ ಯೋಜನೆಗಳನ್ನು ಕಲ್ಪಿಸಬೇಕು. ಗಣಿಬಾಧಿತ ಪ್ರದೇಶಗಳಲ್ಲಿ…
ಹುಳಿಯಾರು: ರೈತರು ಸರ್ಕಾರದ ಕೃಷಿ ಹೊಂಡ, ಚೆಕ್ ಡ್ಯಾಮ್, ಉದಿಬದ ಮತ್ತಿತರರ ಅನುಕೂಲಗಳನ್ನು ಬಳಕೆ ಮಾಡಿಕೊಂಡು ಮಳೆಯ ನೀರನ್ನು ಇಂಗಿಸಲು ಮುಂದಾಗಬೇಕು ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು. ಹುಳಿಯಾರು ಸಮೀಪದ ದೊಡ್ಡಎಣ್ಣೇಗೆರೆಯಲ್ಲಿ ಕೃಷಿ ಇಲಾಖೆಯಿಂದ ಜಲಾನಯನ ಡಬ್ಲೂö್ಯಡಿ ಸಿ 2 ಯೋಜನೆಯಲ್ಲಿ ಆಯೋಜಿಸಿದ್ದ ಮಣ್ಣು ಮತ್ತು ನೀರಿನ ಸಂರಕ್ಷಣೆ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ತಾಲೂಕಿಗೆ ಈ ಹಿಂದೆ ವರ್ಷಕ್ಕೆ ಇನ್ನೂರರಿಂದ ಐನೂರು ಸ್ಪಿಂಕ್ಲರ್ ಸೆಟ್ ವಿತರಿಸಲಾಗುತ್ತಿತ್ತು. ಈಗ ಕಳೆದ 2 ವರ್ಷಗಳಿಂದ ಆರು ಸಾವಿರಕ್ಕೂ ಹೆಚ್ಚು ಸ್ಪಂಕ್ಲರ್ ಸೆಟ್‌ಗಳನ್ನು ರೈತರಿಗೆ ವಿತರಿಸಲಾಗಿದೆ. ಅದೂ ಯಾವ ಪಕ್ಷ, ಜಾತಿ ನೋಡದೆ ರೈತನೆನ್ನುವ ಪಹಣಿ ಒಂದನ್ನು ನೋಡಿ ವಿತರಿಸಲಾಗಿದೆ ಎಂದು ತಿಳಿಸಿದರು. ಗಣಿ ಬಾದಿತ ಪ್ರದೇಶದ ಅಭಿವೃದ್ದಿಗೆ ಮೀಸಲಿದ್ದ ಗಣಿ ಹಣದಲ್ಲಿ ತಾಲೂಕಿನ ಕೃಷಿ ಇಲಾಖೆಗೆ 57 ಕೋಟಿ, ರಸ್ತೆಗಳಿಗೆ 400 ಕೋಟಿ ರೂ. ಬಿಡುಗಡೆಯಾಗಿದೆ ಹಂದನಕೆರೆ ಹೋಬಳಿಗೆ ಭದ್ರ ನೀರು ಹರಿಸಲು ಈಗಾಗಲೆ ಎಂಜಿನಿಯರ್ ಅವರೊಂದಿಗೆ ಚರ್ಚಿಸಲಾಗಿದೆ ಎಂದರಲ್ಲದೆ ಮೈಕ್ರೋ…
ಕೊರಟಗೆರೆ: ಎಲೆರಾಂಪುರ ಪ್ರಾಥಮಿಕ ಕೃಷಿ ಪತ್ತಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಮಧುಕುಮಾರ್ ಉಪಾಧ್ಯಕ್ಷರಾಗಿ ಚಂದ್ರಪ್ಪ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ಸಿಡಿಒ ಗುರುರಾಜ್ ಘೋಷಣೆ ಮಾಡಿದರು. ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿಯ ಎಲೆರಾಂಪುರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಏರ್ಪಡಿಸಲಾಗಿದ್ದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಊರಿನ ಮುಖಂಡರು ಹಾಗೂ ನಿರ್ದೇಶಕರ ಒಮ್ಮತದಿಂದ ಅಧ್ಯಕ್ಷ ಸ್ಥಾನಕ್ಕೆ ಮಧೂಕುಮಾರ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚಂದ್ರಪ್ಪ ಅವರು ಮಾತ್ರ ನಾಮಪತ್ರ ಸಲ್ಲಿಸಿದರು. ಇವರ ವಿರುದ್ದ ಯಾರು ನಾಮಪತ್ರ ಸಲ್ಲಿಸದ ಹಿನ್ನಲೇಯಲ್ಲಿ ಅಧ್ಯಕ್ಷರಾಗಿ ಮಧುಕುಮಾರ್ ಉಪಾಧ್ಯಕ್ಷರಾಗಿ ಚಂದ್ರಪ್ಪ ಅವರನ್ನ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ನೂತನ ಅಧ್ಯಕ್ಷ ಮಧುಕುಮಾರ್ ಮಾತನಾಡಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್.ರಾಜಣ್ಣ ಆಶೀರ್ವಾದದಿಂದ ಹಾಗೂ ಎಲ್ಲಾ ನನ್ನ ನಿರ್ದೇಶಕರ ಸಹಕಾರದಿಂದ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ಗ್ರಾಮೀಣ ಭಾಗದ ರೈತ ಸಮಸ್ಯೆಯನ್ನ ಹಾಗೂ ಸಾಲ ಸೌಲಭ್ಯಗಳನ್ನ ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್ ರಾಜಣ್ಣ…
ತುರುವೇಕೆರೆ: ತಾಲೂಕಿನ ಗಡಿಭಾಗದ ಸುಕ್ಷೇತ್ರ ರಂಗನಹಳ್ಳಿ ಶ್ರೀ ಶನೇಶ್ವರ ಸ್ವಾಮಿಯವರ 21 ನೇ ಜಾತ್ರಾ ಮಹೋತ್ಸವವು ಫೆ.12 ರಿಂದ 15 ರವರೆಗೆ ಬಹಳ ವಿಜೃಂಭಣೆಯಿ0ದ ನೆರವೇರಲಿದೆ ಎಂದು ರಂಗನಹಳ್ಳಿ ಶ್ರೀ ಶನೇಶ್ವರಸ್ವಾಮಿ ಸೇವಾ ಸಮಿತಿ ತಿಳಿಸಿದೆ. ಸುಮಾರು ವರ್ಷಗಳಿಂದ ಬಹಳ ವೈಭವದಿಂದ ನಿರಂತರವಾಗಿ ಆಚರಿಸಿಕೊಂಡು ಬರುತ್ತಿರುವ ಶನೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವು ತಾಲೂಕಿನಲ್ಲಿ ಪ್ರಸಿದ್ದಿ ಪಡೆದಿದ್ದು, ಈ ಬಾರಿ ನಡೆಯುವ 21 ನೇ ಜಾತ್ರಾ ಮಹೋತ್ಸವವು ಶ್ರೀ ಆಂಜನೇಯಸ್ವಾಮಿ, ಶ್ರೀ ದುರ್ಗಾಪರಮೇಶ್ವರಿ ಹಾಗೂ ಆದಿಪರಾಶಕ್ತಿ ಕಾಳಿಕಾದೇವಿಯವರ ಆಗಮನದೊಂದಿಗೆ ಶ್ರೀಶನೇಶ್ವರ ಸ್ವಾಮಿಯವರ ಮಹೋತ್ಸವವು ಧಾರ್ಮಿಕ ವಿಧಿ-ವಿಧಾನಗಳಿಂದ ವಿಜೃಂಭಣೆಯಿAದ ನೆರವೇರಲಿದೆ. ಫೆ. 12 ರಂದು ಸ್ವಾಮಿಗೆ ಪಂಚಾಮೃತ, ಅಷ್ಟೋತ್ತರ ಕುಂಕುಮಾರ್ಚನೆ ಮಹಮಂಗಳಾರತಿ ಹಾಗೂ ಶ್ರೀಕ್ಷೇತ್ರ ಮಲ್ಲಾಘಟ್ಟ ಕೆರೆಯಲ್ಲಿ ಸ್ವಾಮಿಗೆ ಗಂಗಾಸ್ನಾನ ನೆರವೇರಲಿದ್ದು, 13 ರಂದು ಜಾನಪದ ಕಲಾ ತಂಡಗಳೊAದಿಗೆ ಆಲ್ಬೂರು. ಅಣಪನಹಳ್ಳಿ. ಬಸವನಹಳ್ಳಿ. ರಂಗನಹಳ್ಳಿ. ಮಾಕನಹಳ್ಳಿ. ನೊಣವಿನಕೆರೆ. ಕಾಡಸಿದ್ದೇಶ್ವರ ಮಠ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಲ್ಲಿ ಉತ್ಸವಗಳು ನೆಡೆಯಲಿವೆ. ಫೆ.14 ರಂದು ಲೋಕಕಲ್ಯಾಣ ಯಾಗ ಕ್ಷೇತ್ರಕ್ಕೆ…
ತುಮಕೂರು: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಾಥಮಿಕ ಶಿಕ್ಷಣದ ಬುನಾದಿ ಬಹುಮುಖ್ಯವಾಗಿರುವುದರಿಂದ ಗ್ರಾಮೀಣ ವಿದ್ಯಾರ್ಥಿಗಳು ಭಾಷೆ, ಬರವಣಿಗೆ, ಕೌಶಲ್ಯತೆ, ಸಾಮಾನ್ಯ ಜ್ಞಾನವನ್ನು ಈ ಹಂತದಲ್ಲೇ ಪಡೆದುಕೊಂಡಲ್ಲಿ ಯಶಸ್ಸನ್ನು ಸುಲಭವಾಗಿ ಪಡೆಯಬಹುದೆಂದು ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಧಿಕಾರಿ ರವೀಂದ್ರ.ಪಿ.ಎನ್. ಹೇಳಿದರು. ಅವರು ಫೆಬ್ರವರಿ 8ರಂದು ಗುಬ್ಬಿ ತಾಲ್ಲೂಕಿನ ಕಾಡಶೆಟ್ಟಿಹಳ್ಳಿ ಜ್ಞಾನಮಲ್ಲಿಕಾ-ಪಿಎಂಶ್ರೀ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯಲ್ಲಿ ‘ಮಕ್ಕಳೊಡನೆ ಮಾತು ಕತೆ’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಗ್ರಾಮೀಣ ಭಾಗದ ವಿದ್ಯಾಥಿಗಳಲ್ಲಿ ಬದ್ಧತೆ, ಕೌಶಲ್ಯ, ವ್ಯವಹಾರಿಕ ಜ್ಞಾನ, ಹಿರಿ-ಕಿರಿಯರಿಗೆ ಗೌರವ ಕೊಡುವುದನ್ನು ಕಲಿಸುವುದು ಗ್ರಾಮೀಣ ಪ್ರದೇಶದ ಪಾಠ ಶಾಲೆಗಳೆಂದರೆ ಹಳ್ಳಿಗಳು, ಪ್ರಾಥಮಿಕ ಹಂತದ ಶಿಕ್ಷಣದ ಬೂನಾದಿ ಬಹುಮುಖ್ಯವಾದದ್ದು, ಪ್ರಾಥಮಿಕ ಶಿಕ್ಷಣದ ಬೂನಾದಿ ಬಿಗಿಯಾಗಿದ್ದರೆ ಜ್ಞಾನದ ಸೌಧಗಳನ್ನು ಸುಲಭವಾಗಿ ಕಟ್ಟಬಹುದು ಎಂದು ಹೇಳಿದರು. ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಮೈಸೂರು ಒಡೆಯರಾಗಿದ್ದ ನಾಲ್ವಡಿ ಕೃಷ್ಣರಾಜೇಂದ್ರ ಅವರು ಸಮ ಸಮಾಜದ ಕನಸ್ಸನ್ನು ಕಂಡವರು, ಒಬ್ಬರು ಸಂವಿಧಾನ ನೀಡಿದರೆ, ಮತ್ತೊಬ್ಬರು ಆಗಿನ ಕಾಲಕ್ಕೆ ಮೀಸಲಾತಿಯ ಮೂಲಕ ಶಿಕ್ಷಣ ನೀಡಿದಂತಹ ಮಹಾನುಭಾವರು. ಎಂದು ಹೇಳಿದರು. ಸಮಾರಂಭದಲ್ಲಿ ಪ್ರಾಸ್ತವಿಕವಾಗಿ ಪತ್ರಕರ್ತ ವೆಂಕಟಾಚಲ.ಹೆಚ್.ವಿ.…