ತುಮಕೂರು: ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಸಾಹಿತ್ಯ ಪರಿಷತ್ತಿನ ಕಾಲೇಜಿಗೊಂದು ಕನ್ನಡ ಕಾರ್ಯಕ್ರಮ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ತುಮಕೂರು ಹಾಗೂ ಶಾಲಾ ಶಿಕ್ಷಣ (ಪದವಿಪೂರ್ವ) ಇಲಾಖೆ, ತುಮಕೂರು ಜಿಲ್ಲೆ ಇವರ ಸಹಯೋಗದೊಂದಿಗೆ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ನಡೆ-ಯುವ ಜನತೆಯ ಕಡೆ ಎಂಬ ಕಾಲೇಜಿಗೊಂದು ಕನ್ನಡ ಕಾರ್ಯಕ್ರಮವು ತುಮಕೂರು ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣ ಮಾಡಿದ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಸಹ ಕಾರ್ಯದರ್ಶಿಯಾದ ಡಾ. ಅಜಯಕುಮಾರ್ ಎಂ.ವಿ. ಇದು ಕನ್ನಡವನ್ನು ಉಳಿಸಿ, ಬೆಳೆಸುವ ಹಾಗೂ ವಿದ್ಯಾರ್ಥಿಗಳಲ್ಲಿ ನಾಡು ನುಡಿಯ ಮಹತ್ವ ತಿಳಿಸುವ ವಿಶೇಷ ಕಾರ್ಯಕ್ರಮ ಎಂದರು. ಮುಖ್ಯ ಅತಿಥಿಗಳಾಗಿ ವಿಶೇಷ ಉಪನ್ಯಾಸ ನೀಡಿದ ತುಮಕೂರು ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥರಾದ ಪ್ರೊ. ಎಲ್.ಪಿ.ರಾಜುರವರು “ಕರ್ನಾಟಕದಲ್ಲಿ ಕ್ವಿಟ್‌ಇಂಡಿಯಾ” ಎಂಬ ವಿಷಯವನ್ನು ಮನಮುಟ್ಟುವಂತೆ ತಿಳಿಸಿದರು. ಅಂದಿನ ಕ್ವಿಟ್‌ಇಂಡಿಯಾ ಚಳುವಳಿಯಲ್ಲಿ…
Author: News Desk Benkiyabale
ಹುಳಿಯಾರು: ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹೇಮಾವತಿ ಕುಡಿಯುವ ನೀರಿನ ಯೋಜನೆಯಡಿ ಗುರತ್ವಾಕರ್ಷಣೆಯ ಮೂಲಕ ಈಗಾಗಲೇ ಚಾನಲ್ ಕೆಲಸ ಆಗಿರುವಂತಹ ಶೆಟ್ಟಿಕೆರೆ ಹೋಬಳಿಯ ಸಾಸಲು ಕೆರೆಯಿಂದ ಹುಳಿಯಾರು ಕೆರೆಯವರೆಗೆ ಹೇಮಾವತಿ ನೀರನ್ನು ಹರಿಸಲಾಗುತ್ತದೆ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು. ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹೇಮಾವತಿ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಗಡಬನಹಳ್ಳಿ ಬಳಿಯ ಮುಖ್ಯ ನಾಲೆಯಿಂದ ಗುರುತ್ವಾಕರ್ಷಣೆಯ ಮೂಲಕ ನೀರು ಹರಿಸುವ ಗೇಟ್‌ನ್ನು ತೆರವು ಮಾಡುವ ಮೂಲಕ ಚಾಲನೆ ನೀಡಿ ಗಂಗಾಪೂಜೆ ನೆರೆವೆರಿಸಿ ಅವರು ಮಾತನಾಡಿದರು. ಮಂಗಳವಾರದಿ0ದ ಮೂರು ತಿಂಗಳಕಾಲ ೮.೩ ಕಿ.ಮೀ ಚಾನಲ್ ಮೂಲಕ ಹರಿಯುವಂತ ನೀರು ತಾಲ್ಲೂಕಿನ ಸಾಸಲು ಕೆರೆಯಿಂದ ಪ್ರಾರಂಭವಾಗಿ ಶೆಟ್ಟಿಕೆರೆ, ಅಜ್ಜನಕೆರ, ಗೌಡನಹಳ್ಳಿಕೆರೆ, ಹೆಸರಹಳ್ಳಿಕೆರೆ, ಅಂಕಸAದ್ರಹಣೆಯ ಮೂಲಕ ತಿಮ್ಲಾಪುರದ ಕೆರೆ ಮೂಲಕ ಹುಳಿಯಾರು ಕೆರೆಯನ್ನು ತಲುಪುವುದು. ಹಾಗೇ ಮುಂದುವರೆದು ಸಾದ್ಯವಾದರೆ ಬೋರನಕಣಿವೆಗೂ ಹರಿಸಲಾಗುವುದು ಎಂದರು. ಈ ಚಾನಲ್ ೧೦ ವೆಂಟಿಲೇಟರ್‌ಗಳಲ್ಲಿ ಮಳೆಯಿಂದಾಗಿ ಹೂಳೂ ತುಂಬಿತ್ತು. ಅದನ್ನು ೨೮ ಲಕ್ಷ ವೆಚ್ಚದಲ್ಲಿ ತೆಗೆಸಲಾಗಿದ್ದು ಈ ಬಾರಿ ಸಂಪೂರ್ಣ ನೀರು ಸರಾಗವಾಗಿ ಹರಿಯುವ ಸಾದ್ಯತೆ…
ಪಾವಗಡ: ಪಾವಗಡದ ಜನರ ದಹ ನೀಗಿಸಿದ ಭಗೀರಥ ಸಿಎಂ ಸಿದ್ದರಾಮಯ್ಯನವರು ಎಂದು ಪಾವಗಡ ಶಾಸಕ ಹೆಚ್. ವಿ. ವೆಂಕಟೇಶ್ ತಿಳಿಸಿದ್ದಾರೆ ಗುರುವಾರ ಪಾವಗಡ ಪಟ್ಟಣದ ಸಮುದಾಯ ಭವನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಕ್ರಮದ ಕಾರ್ಯಕರ್ತರ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತ್ತಾ ಸಿದ್ದರಾಮಯ್ಯ ಅವರು ೨೦೧೮ರಲ್ಲಿ ಮುಖ್ಯಮಂತ್ರಿಗಳಾದAತಹ ಸಂದರ್ಭದಲ್ಲಿ ಮಾಜಿ ಸಚಿವ ವೆಂಕಟರಮಣಪ್ಪ ಅವರು ಮುಖ್ಯಮಂತ್ರಿಗಳಿಗೆ ಗಡಿನಾಡು ಭಾಗದ ಬಡಜನರ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಮನವಿ ಮಾಡಿದ್ದರು ಜೊತೆಗೆ ಅನೇಕ ಹೋರಾಟಗಾರರಿಗೆ ಬೆಂಬಲವಾಗಿ ನಿಂತಿದ್ದರು, ಈ ಎಲ್ಲರ ಫಲವಾಗಿ ಪಾವಗಡ ತಾಲೂಕಿಗೆ ತುಂಗಭದ್ರಾ ಕುಡಿಯುವ ನೀರು ಬಂದಿದೆ ಇದನ್ನ ಉದ್ಘಾಟಿಸಲು ಜುಲೈ ೨೧ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾವಗಡಕ್ಕೆ ಆಗಮಿಸುತ್ತಿದ್ದು ಅಂದು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಕಾರ್ಯಕ್ರಮದ ಬಗ್ಗೆ ಜನರಿಗೆ ಅರಿವು ನೀಡುವುದರ ಜೊತೆಗೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕ್ರಮ ವಹಿಸಬೇಕೆಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದರು ಪ್ರತಿ ಬೂತ್ ನಿಂದ ನೂರು ಜನರನ್ನ ಕಾರ್ಯಕ್ರಮದಲ್ಲಿ ಭಾಗವಹಿಸಲು ಕ್ರಮ ವಹಿಸುವಂತೆ…
ತುಮಕೂರು: ಉದ್ಯಮದ ಸರ್ವತೋಮುಖ ಅಭಿವೃದ್ಧಿಗೆ ಮತ್ತು ಬೆಳವಣಿಗೆಗೆ ಉತ್ತಮ ಚಿಂತನೆ ಬಹಳ ಮುಖ್ಯ. ಒಂದು ಐಡಿಯಾ ನಿಮ್ಮ ಬದುಕನ್ನೇ ಬದಲಿಸುತ್ತದೆ. ಆ ಚಿಂತನೆ ನಿಮ್ಮಿಂದ ಬರಬೇಕೆ ವಿನಾ ಬೇರೆಯವರಿಂದ ಅಲ್ಲ ಎಂದು ಹೆಲ್ತ್ಕೇರ್ ಗ್ಲೋಬಲ್ ಕ್ಯಾನ್ಸರ್ ಸೆಂಟರ್ ಮತ್ತು ಅಕಾಡೆಮಿಕ್ ಸೆಂಟರ್‌ನ ಮುಖ್ಯಸ್ಥರಾಗಿರುವ ಡಾ. ಯು.ಎಸ್. ವಿಶಾಲ್ ರಾವ್ ಹೇಳಿದರು. ತುಮಕೂರು ವಿಶ್ವವಿದ್ಯಾನಿಲಯದ ಜ್ಞಾನಸಿರಿ ಕ್ಯಾಂಪಸ್‌ನಲ್ಲಿ ಬಯೋಟೆಕ್ನಾಲಜಿ ಮತ್ತು ಮೈಕ್ರೋಬಯಾಲಜಿ ಅಧ್ಯಯನ ಮತ್ತು ಸಂಶೋಧನ ವಿಭಾಗದಿಂದ ಗುರುವಾರ ಆಯೋಜಿಸಿದ್ದ ಬಯೋ ಉನ್ನತಿ: ನೆಕ್ಸ್÷್ಟ ಜೆನರೇಷನ್ ಟೂಲ್ಸ್ ಫಾರ್ ಸಸ್ಟೆöÊನಬಲ್ ಅಪ್ಲಿಕೇಶನ್ಸ್ ಆಫ್ ಮೈಕ್ರೋಬಿಯಲ್ ಬಯೋಟೆಕ್ನಾಲಜಿ ಎಂಬ ಮೂರುದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ಶ್ರೀ ಶಿವಕುಮಾರ ಸ್ವಾಮೀಜಿ ಅವರ ಒಂದು ಉತ್ತಮವಾದ ಚಿಂತನೆಯಿAದ ತ್ರಿವಿಧ ದಾಸೋಹ ಇಡೀ ವಿಶ್ವಕ್ಕೆ ಪರಿಚಯವಾಯಿತು. ಸಾಮಾಜಿಕ ಜಾಲತಾಗಳು ಇಲ್ಲದ ಕಾಲದಲ್ಲೇ ಆ ಯೋಜನೆ ಅಷ್ಟು ಪ್ರಚುರವಗಲಿಕ್ಕೆ ಅವರ ಚಿಂತನೆಯೇ ಕಾರಣವಾಗಿದೆ ಎಂದರು. ಕೈಗರಿಕೊದ್ಯಮಿ ಡಾ.ಹೆಚ್. ಜಿ. ಚಂದ್ರಶೇಖರ್ ಮಾತನಾಡಿ ನಮ್ಮ ಚಿಂತನೆಗಳು ಬದಲಾಗಿವೆ. ನಾವೆಲ್ಲ ವೈಜ್ಞಾನಿಕ…
ತುಮಕೂರು: ತುಮಕೂರು ರೈಲು ನಿಲ್ದಾಣದಲ್ಲಿ ವ್ಯವಸ್ಥಿತ ದ್ವಿಚಕ್ರ ವಾಹನ ಪಾರ್ಕಿಂಗ್ ಸ್ಥಳವನ್ನು ಅತಿ ಶೀಘ್ರವಾಗಿ ನಿರ್ಮಿಸಿಕೊಡಬೇಕೆಂದು ತುಮಕೂರು ಜಿಲ್ಲಾ ರೈಲ್ವೇ ಪ್ರಯಾಣಿಕರ ವೇದಿಕೆ ಅಧ್ಯಕ್ಷ, ನೈಋತ್ಯ ರೈಲ್ವೇ ಬೆಂಗಳೂರು ವಲಯದ ರೈಲು ಬಳಕೆದಾರರ ಸಲಹಾ ಸಮಿತಿ ಸದಸ್ಯ ಕರಣಂ ರಮೇಶ್ ಆಗ್ರಹಿಸಿದರು. ಬೆಂಗಳೂರಿನ ಡಿಆರ್‌ಎಂ ಕಚೇರಿಯಲ್ಲಿ ಗುರುವಾರ ನಡೆದ ಸಮಿತಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ನಿಲ್ದಾಣ ಪುನರ್ ನವೀಕರಣದ ಅಡಿಯಲ್ಲಿ ಬಹುಮಹಡಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸುವ ಬಗ್ಗೆ ಕಳೆದ ಮೂರು ವರ್ಷಗಳಿಂದ ಭರವಸೆ ನೀಡಿಕೊಂಡೇ ಬರಲಾಗುತ್ತಿದೆ. ಇದೇ ಕಾರಣ ನೀಡಿ ಹಿಂದೆ ಇದ್ದ ವಿಸ್ತಾರವಾದ ವಾಹನ ನಿಲುಗಡೆ ಸ್ಥಾನವನ್ನು ಚಿಕ್ಕ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಇದರಿಂದ ಪ್ರಯಾಣಿಕರ ವಾಹನ ನಿಲುಗಡೆಗೆ ಸೂಕ್ತ ಸ್ಥಳಾವಕಾಶವಿಲ್ಲದಂತಾಗಿದೆ. ಇದರಿAದ ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಉದ್ಯೋಗಿ ಪ್ರಯಾಣಿಕರು ದ್ವಿಚಕ್ರವಾಹನಗಳÀನ್ನು ರಸ್ತೆ ಬದಿಯಲ್ಲಿ ನಿಲ್ಲಿಸುವ ಅನಿವಾರ್ಯ ಪರಿಸ್ಥಿತಿ ಎದುರಾಗಿದ್ದು ಸೂಕ್ತ ರಕ್ಷಣೆ ಇಲ್ಲವಾಗಿದೆ. ಪ್ರಯಾಣಿಕರ ವಾಹನ ನಿಲುಗಡೆಯೇ ದೊಡ್ಡ ಸಮಸ್ಯೆ ಮತ್ತು ಸವಾಲಾಗಿದ್ದು, ರೈಲು ನಿಲ್ದಾಣ…
ಚಿಕ್ಕನಾಯಕನಹಳ್ಳಿ: ಸರ್ಕಾರಿ ಯೋಜನೆಗಳು ನೈಜ ಪಲಾನುಭವಿಗಳಿಗೆ ತಲುಪಿದಾಗ ಮಾತ್ರ ಆ ಯೋಜನೆ ರೂಪಿಸಿದ್ದಕ್ಕು ಸಾ ರ್ಥಕ ರೈತರು ಇಂತಹ ಯೋಜನೆಗಳನ್ನು ಸದ್ಬ ಳಕೆ ಮಾಡಿಕೊಂಡು ಕೃಷಿಯಲ್ಲಿ ಸ್ವಾವಲಂಬಿ ಸಾಧಿ ಸಬೇಕು ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು. ಪಟ್ಟಣದ ತೀನಂಶ್ರೀ ಭವನದ ಆವರಣದಲ್ಲಿ ಸೋಮವಾರ ಕೃಷಿ ಇಲಾಖೆಯವತಿಯಿಂದ ರೈತರಿಗೆ ಬಿತ್ತನೆ ಕೂರಿಗೆಗಳನ್ನು ವಿತರಿಸಿ ಮಾತನಾಡಿದ ಅವರು ನಮ್ಮ ಹಳೆಯ ವ್ಯವಸಾಯ ಪದ್ದತಿಯಿಂದ ನಮ್ಮ ದೇಶದಲ್ಲಿ ಆಹಾರದ ಸಮಸ್ಯೆ ಉಂಟಾದ ಸಂದರ್ಭದಲ್ಲಿ ಹಸಿರು ಕ್ರಾಂತಿಯ ಮೂಲಕ ಅತ್ಯಾದುನಿಕ ತಂತ್ರಜ್ಞಾನಗಳನ್ನು ಬಳಸಿ ಆಹಾರ ಸಮಸ್ಯೆಯನ್ನು ಬಗೆಹರಿಸಲಾಯಿತು ಇಂದು ನಮ್ಮ ದೇಶ ಆಹಾರದ ಉತ್ಪಾದನೆಯಲ್ಲಿ ಸ್ವವಲಂಬಿ ಸಾಧಿಸುವುದರೊಂದಿಗೆ ಬೇರೆ ರಾಷ್ಟ್ರಗಳಿಗೆ ಕೇಲವು ಆಹಾರದ ವಸ್ತುಗಳನ್ನು ರಪ್ತು ಮಾಡುತ್ತಿದೆ ಈ ನಿಟ್ಟಿನಲ್ಲಿ ನಮ್ಮ ರೈತರು ಇಂತಹಅದುನಿಕ ತಂತ್ರಾಜ್ಞಾನ ಕೂರಿಗೆ ಯಂತ್ರಗಳನ್ನು ನೀಡಿದ್ದು ಇವುಗಳನ್ನು ಬಳಸಿಕೊಂಡು ಬಿತ್ತನೆ ಮಾಡಿ ಇಂತಹ ಸೌಲಭ್ಯಗಳನ್ನು ಬಳಸಿಕೊಂಡು ಸ್ವಾವ ಲಂಬಿಗಳಾಗಿ ಎಂದರು. ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೆಶಕ ಶಿವರಾಜ್ ಕುಮಾರ್ ಮಾತನಾಡಿ…
ತುರುವೇಕೆರೆ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯಲ್ಲಿ ತಾಲೂಕಿನಿಂದ ಸುಮಾರು ೨.೫೧ ಕೋಟಿಗೂ ಅಧಿಕ ಮಹಿಳೆಯರು ರಾಜ್ಯದ ವಿವಿಧೆಡೆಗೆ ಪ್ರಯಾಣ ಬೆಳೆಸಿದ್ದಾರೆಂದು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಗುಡ್ಡೇನಹಳ್ಳಿ ಪ್ರಸನ್ನ ತಿಳಿಸಿದರು. ಶಕ್ತಿ ಯೋಜನೆಯಡಿ ೫೦೦ ಕೋಟಿ ಮಹಿಳೆಯರು ಪ್ರಯಾಣ ಬೆಳೆಸಿದ್ದ ಹಿನ್ನೆಲೆಯಲ್ಲಿ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದ ಅವರು ರಾಜ್ಯ ಸರ್ಕಾರ ೧೧-೬-೨೩ ರಿಂದ ಶಕ್ತಿ ಯೋಜನೆಯನ್ನು ಜಾರಿಗೆ ತಂದಿತ್ತು. ೩೦-೫-೨೫ ರವರೆಗೆ ತುರುವೇಕೆರೆಯ ಡಿಪೋ ಬಸ್ ನಲ್ಲಿ ೩.೬೨.೦೪೯೧೨ ಮಂದಿ ಮಹಿಳೆಯರು ಮತ್ತು ಪುರುಷರು ಸೇರಿ ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ಪ್ರಯಾಣ ಬೆಳೆಸಿದ್ದಾರೆ. ಇದರಲ್ಲಿ ೨.೫೧.೩೮,೬೫೨ ಮಂದಿ ಮಹಿಳೆಯರೇ ಇದ್ದಾರೆ. ಜಿಲ್ಲೆಯೊಳಗೆ ಪ್ರಯಾಣಿಸಿರುವ ಮಹಿಳೆಯರ ಸಂಖ್ಯೆ ೧,೬೨,೩೧,೦೧೦ ಮಂದಿ. ಜಿಲ್ಲೆಯ ಹೊರಗೆ ಪ್ರಯಾಣಿಸಿರುವ ಮಹಿಳೆಯರ ಸಂಖ್ಯೆ ೮೯,೦೭೬೪೨ ಮಂದಿ. ಒಟ್ಟು ಈ ಪ್ರಯಾಣದಿಂದ ಕೆ ಎಸ್ ಆರ್…
ತುರುವೇಕೆರೆ: ಕ್ಷೇತ್ರದಲ್ಲಿ ಮಾದಕ ವಸ್ತುಗಳ ಮಾರಾಟ ಜಾಲ ಹಾವಳಿಯಿಂದ ಅಮಾಯಕ ಯುವಕರು ಬಲಿಯಾಗುತ್ತಿದ್ದಾರೆ ಪೋಲೀಸ್ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದೆ ಎಂದು ಮಾಜಿ ಶಾಸಕ ಮಸಾಲ ಜಯರಾಮ್ ಆರೋಪಿಸಿದರು. ಪಟ್ಟಣ ಸಮೀಪದ ತೋಟದ ಮನೆಯಲ್ಲಿ ಸೋಮವಾರ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು ವಿಧಾನಸಭಾ ಕ್ಷೇತ್ರದ ಸಿ.ಎಸ್. ಪುರ ಹೋಬಳಿಯಲ್ಲಿ ಗಾಂಜಾ ಡ್ರಗ್ಸ್ ಸೇರಿ ಮಾದಕ ವಸ್ತುಗಳ ಮಾರಾಟ ಹೆಚ್ಚಾಗಿದೆ. ಗಾಂಜಾ ಅಮಲಿಗೆ ತುತ್ತಾದ ವ್ಯಕ್ತಿಯಿಂದ ಗಲಾಟೆ ಗರ್ಷಣೆ ಸೇರಿ ಕೊಲೆ ಮಾಡುವ ಹಂತಕ್ಕೆ ತಲುಪುತ್ತಿದೆ. ಗಾಂಜಾ ಹಾವಳಿ ಮಿತಿಮೀರಿರುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮದಾನ ವ್ಯಕ್ತಪಡಿಸಿದರು. ಗಾಂಜಾ ಸಾಗಟ ಹಾಗೂ ಮಾರಾಟದಲ್ಲಿ ವರ್ಗದ ಜನರು ಶಾಮೀಲಾಗಿದ್ದಾರೆ ಗಾಂಜಾ ಮಾರಾಟ ಮಾಡುವ ಮಾಲು ಸಮೇತ ಸಿಕ್ಕಿಬಿದ್ದರೂ ಸಹ ಪೊಲೀಸರು ಅವರ ಮೇಲೆ ಕ್ರಮ ಕೈಗೊಳ್ಳಲಾಗದಂತ ಸ್ಥಿತಿಗೆ ತಲುಪಿದ್ದಾರೆ. ನಮ್ಮ ಕ್ಷೇತ್ರದ ತುಂಬಾ ಹಾಗೂ ಜಿಲ್ಲೆಯಲ್ಲಿ ಡ್ರಗ್ ಪೆಡ್ಲರ್ಗಳ ಹಾವಳಿ ಹೆಚ್ಚಾಗಿದ್ದು ಅಮಾಯಕ ಯುವಕರನ್ನು…
ತುಮಕೂರು: ಗುಬ್ಬಿ ರಿಂಗ್ ರಸ್ತೆಯಲ್ಲಿ ಸೂಕ್ತ ದಾಖಲೆಗಳಿಲ್ಲದೆ ರಿಯಾಯಿತಿ ದರದ ಯೂರಿಯಾ ರಸಗೊಬ್ಬರವನ್ನು ಸರಕು ವಾಹನ ಸಂಖ್ಯೆ : ಕೆಎ.೦೫-ಎಎ-೫೩೯೯ ರಲ್ಲಿ ಸಾಗಾಣಿಕೆ ಮಾಡುತ್ತಿರುವಾಗ ವಾಣಿಜ್ಯ ತೆರಿಗೆ ಅಧಿಕಾರಿ(ಜಾರಿ-೨), ಸಹಾಯಕ ಆಯುಕ್ತರು(ಜಾರಿ), ವಾಣಿಜ್ಯ ತೆರಿಗೆಗಳ ಕಛೇರಿ ತುಮಕೂರು ಇವರು ರಸ್ತೆ ಜಾಗೃತಿ ಕಾರ್ಯನಿರ್ವಹಿಸುತ್ತಿರುವಾಗ ವಾಹನವನ್ನು ಪರಿಶೀಲಿಸಿ ದೋಷಪೂರಿತ ದಾಖಲೆಗಳು ಕಂಡು ಬಂದ ಮೇರೆಗೆ ಕೃಷಿ ಇಲಾಖೆ, ಜಾರಿದಳ ಅಧಿಕಾರಿಗಳ ಗಮನಕ್ಕೆ ತಂದು ವಾಹನವನ್ನು ಜಪ್ತಿ ಮಾಡಿ ಇಲಾಖೆ ವಶಕ್ಕೆ ಪಡೆಯಲಾಗಿದೆ ಎಂದು ಶ್ರೀ.ಪುಟ್ಟರಂಗಪ್ಪ, ಸಹಾಯಕ ಕೃಷಿ ನಿರ್ದೇಶಕರು(ಜಾರಿದಳ-೧), ಜಂಟಿ ಕೃಷಿ ನಿರ್ದೇಶಕರ ಕಛೇರಿ, ತುಮಕೂರು ರವರು ತಿಳಿಸಿದ್ದಾರೆ. ಸದರಿ ವಾಹನದಲ್ಲಿ ಸಾವಯವ ಗೊಬ್ಬರ ಎಂಬ ಹೆಸರಿನಲ್ಲಿ ಅಕ್ರಮವಾಗಿ ರಿಯಾಯಿತಿ ದರದ ಬೇವು ಲೇಪಿತ ಯೂರಿಯಾ ರಸಗೊಬ್ಬರವನ್ನು (೨೦ ಟನ್ ಅಂದಾಜು ಮೌಲ್ಯ ರೂ.೮೭೦೩೩೩/- ಎಂಟು ಲಕ್ಷ ಎಪ್ಪತ್ತು ಸಾವಿರದ ಮೂರು ನೂರ ಮೂವತ್ಮೂರು ಮಾತ್ರ) ಸೂಕ್ತ ದಾಖಲೆಗಳಿಲ್ಲದೆ, ಕೃಷಿ ಇಲಾಖೆಯ ಅನುಮತಿಯಿಲ್ಲದೆ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಸಾಗಾಣಿಕೆ ಮಾಡುತ್ತಿರುವುದು, ಬಿಲ್ಲಿನಲ್ಲಿ…
ತುಮಕೂರು: ರಾಜ್ಯದ ನಂದಿನಿ ತುಪ್ಪ ಕಳೆದ ಆರೇಳು ವರ್ಷಗಳ ನಂತರ ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದ ತಯಾರಿಕೆಗಾಗಿ ಮತ್ತೆ ಟಿಟಿಡಿ ದೇವಾಲಯಕ್ಕೆ ಪೂರೈಕೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಮಕೂರು ಹಾಲು ಒಕ್ಕೂಟದಿಂದ ಟಿಟಿಡಿ ದೇವಾಲಯಕ್ಕೆ ತುಪ್ಪ ಕೊಂಡೊಯ್ಯುವ ಟ್ಯಾಂಕರ್ ವಾಹನಕ್ಕೆ ತುಮುಲ್ ಅಧ್ಯಕ್ಷ ಹಾಗೂ ಶಾಸಕ ಹೆಚ್.ವಿ. ವೆಂಕಟೇಶ್ ಚಾಲನೆ ನೀಡಿದರು. ತಿರುಪತಿ ತಿಮ್ಮಪ್ಪನ ದೇವಾಲಯಕ್ಕೆ ನೇರವಾಗಿ ತುಪ್ಪ ಪೂರೈಸುವ ಅವಕಾಶವನ್ನು ಕೆಎಂಎಫ್ ತನ್ನ ವ್ಯಾಪ್ತಿಯ ಹಾಲು ಒಕ್ಕೂಟಗಳಿಗೆ ಕಲ್ಪಿಸಿರುವುದರಿಂದ ತುಪ್ಪವನ್ನು ಟ್ಯಾಂಕರ್ ಮೂಲಕ ಟಿಟಿಡಿಗೆ ಪೂರೈಸುವ ಕಾರ್ಯವನ್ನು ತುಮುಲ್ ಆರಂಭಿಸಿದೆ. ಟಿಟಿಡಿಗೆ ತುಪ್ಪ ಕೊಂಡೊಯ್ಯುವ ಟ್ಯಾಂಕರ್ ವಾಹನಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ತುಮುಲ್ ಅಧ್ಯಕ್ಷ ಹಾಗೂ ಶಾಸಕ ಹೆಚ್.ವಿ. ವೆಂಕಟೇಶ್ ಅವರು, ತುಮಕೂರು ಹಾಲು ಒಕ್ಕೂಟದಲ್ಲಿ ಪ್ರಸ್ತುತ ಪ್ರತಿದಿನ ೧೦ಲಕ್ಷದ ೫೦ಸಾವಿರ ಲೀಟರ್ ಹಾಲು ದಾಖಲೆ ಪ್ರಮಾಣದಲ್ಲಿ ಶೇಖರಣೆಯಾಗುತ್ತಿದೆ ಎಂದರು. ಪ್ರತಿದಿನ ಶೇಖರಣೆಯಾಗುತ್ತಿರುವ ಹಾಲಿನ ಪೈಕಿ ಬೆಂಗಳೂರಿಗೆ ೧.೯೫ ಲಕ್ಷ ಲೀಟರ್ ಹಾಲು ಹಾಗೂ ತುಮಕೂರಿನಲ್ಲಿ ೧.೨೦ ಲಕ್ಷ ಲೀಟರ್ ಹಾಲು…










