ಪಾವಗಡ : ತುಂಗಭದ್ರಾ ಕುಡಿ ಯುವ ನೀರಿನ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ವಲಸೆ ಕಾರ್ಮಿಕರಿಗೆ ಕಳೆದ 50 ದಿನಗಳಿಂದ ಆಹಾರವಿಲ್ಲ. ಪ್ರತಿದಿನ ತಿಂಡಿ ಊಟಕ್ಕಾಗಿ ಸಮೀಪದ ಬೆಳ್ಳಿಬೆಟ್ಲು ಮತ್ತು ಶೈಲಾಪುರ ಗ್ರಾಮಗಳಿಗೆ ಅಲೆದಾಡುತ್ತಿರುವುದು ಮನಕಲಕುವಂತಿದೆ. ಸುಮಾರು 2,350 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಈ ಕಾಮಗಾರಿ ಕೆಲಸ ಮಾಡಲು ಬಂದಿದ್ದರು. ಆದರೆ ಈ ಲಾಕ್‍ಡೌನ್‍ಯಿಂದಾಗಿ ತಮ್ಮ ಊರುಗಳಿಗೆ ಹೋಗಲು ಪರದಾಡುತ್ತಿದ್ದಾರೆ. ಮತ್ತೊಂದೆಡೆ ಇವರು ಸ್ವಗ್ರಾಮಗಳಿಗೆ ತೆರಳುತ್ತೇವೆ ಎಂದು ಮನವಿ ಮಾಡಿದರೆ ಗುತ್ತಿಗೆದಾರರಿಂದಲೇ ಹಲ್ಲೆಯತ್ನ ನಡೆಯುತ್ತದೆ. ಈ ರೀತಿಯ ಹತ್ತು ಹಲವು ಚಿತ್ರಹಿಂಸೆ ಅನುಭವಿಸುತ್ತಾ ಕಳೆದ 4 ತಿಂಗಳಿಂದ ವೇತನವಿಲ್ಲದೆ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಎಂಬ ಆರೋಪ ಉತ್ತರ ಪ್ರದೇಶ ಮತ್ತು ಬಿಹಾರ ಮೂಲದ ವಲಸೆ ಕಾರ್ಮಿಕರಿಂದ ಕೇಳಿ ಬರುತ್ತಿದೆ. ತಮಗೆ ಸೂಕ್ತ ಭದ್ರತೆಯನ್ನು ನೀಡುವಂತೆ ಅಂಗಲಾಚುವ ಪರಿಸ್ಥಿತಿ ನಿರ್ಮಾಣವಾಗಿದೆ. ತುಂಗಭದ್ರಾ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಕೆಲಸಕ್ಕಾಗಿ ಉತ್ತರ ಪ್ರದೇಶದಿಂದ…
Author: News Desk Benkiyabale
ತುಮಕೂರು : ಹೊರರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ತುಮಕೂರು ಜಿಲ್ಲೆಗೆ ಬರುವವರ ಮೇಲೆ ತೀವ್ರ ನಿಗಾವಹಿಸಲಾಗುತ್ತಿದ್ದು, ಇಲ್ಲಿಯವರೆಗೂ ಹೊರ ಜಿಲ್ಲೆಯಿಂದ 2711 ಮಂದಿ ಹಾಗೂ ಮೇ 1 ರಿಂದ ಹೊರ ರಾಜ್ಯಗಳಿಂದ 289 ಮಂದಿ ಜಿಲ್ಲೆಗೆ ಆಗಮಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಅವರು ತಿಳಿಸಿದ್ದಾರೆ. ಈಗಾಗಲೇ ಇವರನ್ನು ಪ್ರತ್ಯೇಕವಾಗಿ ವಸತಿ ಶಾಲೆ, ಶಾಲೆಗಳಲ್ಲಿ ಹಾಗೂ ಹೋಟೆಲ್‍ಗಳಲ್ಲಿ ಕ್ವಾರಂಟೈನ್ ಮಾಡಿ ಪರಿಶೀಲಿಸಲಾಗುತ್ತಿದೆ. ಹೊರ ರಾಜ್ಯಗಳಾದ ಆಂಧ್ರಪ್ರದೇಶ ಹಾಗೂ ತೆಲಂಗಾಣದಿಂದ ಬರುವವರಿಗೆ ಪಾವಗಡದಲ್ಲಿ ತಪಾಸಣಾ ಕೇಂದ್ರ ಮಾಡಿದ್ದು, ಮಧುಗಿರಿಯಲ್ಲಿ ಸ್ವೀಕರಣಾ ಕೇಂದ್ರವನ್ನು ತೆರೆಯಲಾಗಿದೆ. ಅದೇರೀತಿ ಉತ್ತರ ಕರ್ನಾಟಕದಿಂದ ಬರುವವರಿಗೆ ಶಿರಾದಲ್ಲಿ ಹಾಗೂ ಹೊರ ರಾಜ್ಯಗಳಿಂದ ಬೆಂಗಳೂರು ಕಡೆಯಿಂದ ಬರುವವರಿಗೆ ತುಮಕೂರು ನಗರದ ಕೆಎಸ್‍ಆರ್‍ಟಿಸಿ ತಾತ್ಕಾಲಿಕ ಬಸ್ಸು ನಿಲ್ದಾಣದಲ್ಲಿ ಸ್ವೀಕರಣಾ ಕೇಂದ್ರವನ್ನು ತೆರೆಯಲಾಗಿದೆ ಎಂದರು. ತುಮಕೂರು ನಗರಕ್ಕೆ 2 ಕಡೆ ಪ್ರವೇಶ ದ್ವಾರಗಳನ್ನು ಕಲ್ಪಿಸಿದ್ದು, ಇಲ್ಲಿ ಆರೋಗ್ಯ, ಕಂದಾಯ…
ತುಮಕೂರು: ಜಿಲ್ಲೆಯಲ್ಲಿ ಕೋವಿಡ್-19 ಹರಡದಂತೆ ಕಾಪಾಡುವ ನಿಟ್ಟಿನಲ್ಲಿ ಅಂಗಡಿ ಮುಂಗಟ್ಟು ಮತ್ತಿತರ ಸಾಮಾಜಿಕ ಸ್ಥಳಗಳಲ್ಲಿ ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಕಾನೂನು ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಸಚಿವರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ ಮಾಧುಸ್ವಾಮಿ ಅವರು ಹೇಳಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸಾರ್ವಜನಿಕ ಸ್ಥಳಗಳಲ್ಲಿ ಅಕ್ಕಪಕ್ಕದ ಜನರು ಕೆಮ್ಮುವಾಗ, ಸೀನುವಾಗ ಎಚ್ಚರವಹಿಸಬೇಕು ಎಂದರಲ್ಲದೇ ಈಗಾಗಲೇ ಮುಸ್ಲಿಂ ಭಾಂದವರ ಪವಿತ್ರ ರಂಜಾನ್ ಹಬ್ಬ ಪ್ರಯುಕ್ತ ಪ್ರಾರ್ಥನೆ ಮಾಡುವವರು ಈದ್ಗಾಗೆ ಹೋಗುವುದು ಬೇಡ. ಇದರಿಂದ ಹಲವಾರಿಗೆ ತೊಂದರೆಯಾಗುತ್ತದೆ. ಈಗ ಹಗ್ ಮಾಡುವುದು ಬೇಡ. ಆದ್ದರಿಂದ ಮುಸ್ಲಿಂ ಭಾಂದವರು ಮನೆಯಲ್ಲಿಯೇ ಕುಳಿತು ಪ್ರಾರ್ಥನೆ ಮಾಡಿ ಎಂದರು. ಕೊರೊನಾ ವೈರಸ್ ಎಂಬುದು ಒಂದು ಸಮುದಾಯದ ಜನರಿಗೆ ಮಾತ್ರ ಬರುವಂತಹದ್ದಲ್ಲ. ಸಾರ್ವಜನಿಕರು ಕೇವಲ ಒಂದು ಸಮುದಾಯವನ್ನು ಟಾರ್ಗೆಟ್ ಮಾಡಬಾರದು. ಖಾಯಿಲೆ ಪ್ರತಿಯೊಬ್ಬರಿಗೂ ಬರುತ್ತದೆ. ನಾವೆಲ್ಲರೂ…
ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿ ನಡೆಯಬೇಕಿರುವ ಯುಜಿಡಿ, ನೀರಿನ ಟ್ಯಾಂಕ್, ಚರಂಡಿ ಹಾಗೂ ಹುಳಿಯಾರಿನ ರಸ್ತೆ ಕಾಮಗಾರಿಗಳ ಪ್ರಗತಿ ತೃಪ್ತಿದಾಯಿಕವಾಗಿಲ್ಲ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ಅಸಮಧಾನ ವ್ಯಕ್ತಪಡಿಸಿದರು. ಪಟ್ಟಣದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಪೌರಕಾರ್ಮಿಕರಿಗೆ ಸಮವಸ್ತ್ರ ಹಾಗೂ ರಕ್ಷಣಾಕಿಟ್‍ಗಳನ್ನು ವಿತರಿಸಿದ ನಂತರ ಇಲಾಖಾವಾರು ಸಂಬಂಧಿಸಿದ ಅಧಿಕಾರಿಗಳಿಂದ ಹಲವು ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದರು. ಪಟ್ಟಣದಲ್ಲಿ ಒಳಚರಂಡಿ ನಿರ್ಮಾಣಕ್ಕಾಗಿರೂ. 60ಕೋಟಿ. ಬಿಡುಗಡೆಯಾಗಿ ಆರುತಿಂಗಳು ಕಳೆದರೂ ಆಮೆಗತಿಯಲ್ಲಿ ನಡೆದಸಿರುವ ಬಗ್ಗೆ ತೀವ್ರ ಅತೃಪ್ತಿವ್ಯಕ್ತಪಡಿಸಿ ಮೊದಲು ಸಂಸ್ಕರಣಾ ಪಿಟ್‍ಗಳ ನಿರ್ಮಾಣಕ್ಕಾಗಿ ಜಾಗಗಳನ್ನು ಪುರಸಭಾ ವಶಕ್ಕೆ ಪಡೆದು ಕಾಮಗಾರಿ ಅಲ್ಲಿನಿಂದಲೇ ಆರಂಭಿಸಲು ತಿಳಿಸಿದ್ದರೂ ಇನ್ನು ತಡವಾಗಿರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿ ಇದಕ್ಕಾಗಿಯೇ ಪಟ್ಟಣದ ಯಾವುದೇ ರಸ್ತೆಕಾಮಗಾರಿಗೆ ಅನುದಾನ ಹಾಕದೇ ಬೇರೆಡೆಗೆ ವಿನಿಯೋಗಿಸಲಾಗಿದೆ. ಆದರೆ ನೀವು ಇನ್ನೂ ಇದರ ಬಗ್ಗೆ ಆಸಕ್ತಿಯೇ ತೆಳೆದಿಲ್ಲವೆಂದು ಮುಖ್ಯಾಧಿಕಾರಿ ಶ್ರೀನಿವಾಸ್‍ರವರನ್ನು ತರಾಟೆಗೆ ತೆಗೆದುಕೊಂಡರು. ನಂತರ ಸಂಸ್ಕರಣಾಪಿಟ್‍ಗಳಿಗೆ ಜಾಗದ ಸಮಸ್ಯೆಗಳ ನಿವಾರಣೆಗಾಗಿ…
ತುಮಕೂರು: ವಿಶ್ವದಾದ್ಯಂತ ಹರಡುತ್ತಿರುವ ಕೋವಿಡ್-19 ಸೋಂಕು ತಡೆಗಟ್ಟಲು ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೊರೋನಾ ಸೋಂಕಿತರು, ಶಂಕಿತರು, ವೈದ್ಯರು, ಶುಶ್ರೂಷಕರು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಪ್ರತಿ ದಿನ 2 ಗ್ರಾಂ ಸ್ಪಿರುಲಿನಾ ಮಾತ್ರೆ ಸೇವಿಸುವಂತೆ ತುಮಕೂರು ಸ್ಪಿರುಲಿನಾ ಫೌಂಡೇಷನ್ ಸಂಸ್ಥೆಯ ಅಧ್ಯಕ್ಷ ಮಹೇಶ್ ಆರ್.ವಿ. ಅವರು ಸಲಹೆ ನೀಡಿದರು. ಸ್ಪಿರುಲಿನಾ ಫೌಂಡೇಷನ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಜಿಲ್ಲಾ ಆಸ್ಪತ್ರೆಯಲ್ಲಿಂದು 350 ಚಿಕ್ಕಿ ಪ್ಯಾಕೆಟ್ ಹಾಗೂ 150 ಬಾಕ್ಸ್ ಸ್ಪಿರುಲಿನಾ ಮಾತ್ರೆಗಳನ್ನು ವಿತರಿಸಿ ಅವರು ಮಾತನಾಡಿದರು. ಸ್ಪಿರುಲಿನಾ ಒಂದು ಸೂಕ್ಷ್ಮಾಣು ಜೀವಿಯಾಗಿದ್ದು, ಅತೀ ಹೆಚ್ಚು ಪೋಷಕಾಂಶಗಳನ್ನು ಹೊಂದಿರುವ ಕಾರಣ ದೇಹದಲ್ಲಿ ಬೇರೆಲ್ಲಾ ಆಹಾರಗಳಿಗಿಂತ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಹೀರಲ್ಪಟ್ಟು ಇದರ ಪರಿಣಾಮವಾಗಿ ದೇಹದ ರೋಗ ನಿರೋಧಕ ಶಕ್ತಿ ವೃದ್ಧಿಸಿ ಯಾವುದೇ ವೈರಾಣು ಸೋಂಕನ್ನು ಪ್ರತಿರೋಧಿಸುವಲ್ಲಿ ಸಹಕಾರಿಯಾಗಿರುತ್ತದೆ ಎಂದು ತಿಳಿಸಿದರು. ತುಮಕೂರಿನ ಸ್ಪಿರುಲಿನಾ ಫೌಂಡೇಷನ್…
ಮಧುಗಿರಿ : ಇಲ್ಲಿಯವರೆವಿಗೂ ಕೊರೊನಾ ವೈರಸ್ ಹರಡದಂತೆ ಮಧುಗಿರಿ ಜನತೆ ಸರ್ಕಾರದ ನಿರ್ದೇಶನಗಳನ್ನು ಕಟ್ಟನಿಟ್ಟಾಗಿ ಪಾಲಿಸಿದಕ್ಕೆ ವೈಯಕ್ತಿಕವಾಗಿ ಧನ್ಯವಾದಗಳು ಎಂದು ಉಪವಿಭಾಗಾಧಿಕಾರಿ ಡಾ.ಕೆ.ನಂದಿನಿದೇವಿ ತಿಳಿಸಿದರು. ಅವರು ಉಪವಿಭಾಗಾಧಿಕಾರಿ ಕಛೇರಿಯಲ್ಲಿ ಮಧುಗಿರಿ ವಿದ್ಯಾಸಂಸ್ಥೆಯ ಖಜಾಂಚಿ ಎಂ.ಎಸ್.ಧರ್ಮವೀರ್‍ರವರ ನಿರ್ಮಾಪಕತ್ವದಲ್ಲಿ ‘ಸಿನಿಕ್ ಬ್ಯೂಟಿ ಆಫ್ ಮಧುಗಿರಿ ಡ್ಯೂರಿಂಗ್ ಕೋವಿಡ್-19 ಲಾಕ್‍ಡೌನ್’ಗೆ ಸಂಬಂಧಿಸಿದ 9 ನಿಮಿಷಗಳ ಸಾಕ್ಷ್ಯ ಚಿತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ವಿಶ್ವವಿಖ್ಯಾತ ಏಕಶಿಲಾ ಬೆಟ್ಟ ಹೊಂದಿರುವ ಮಧುಗಿರಿ ಬೆಟ್ಟದ ಬಗ್ಗೆ ವರ್ಣಿಸಲು ಸಮಯವೇ ಸಾಲದು, ಈ ಸಾಕ್ಷ್ಯ ಚಿತ್ರದಲ್ಲಿ ಮಧುಗಿರಿ ಗಡಿಭಾಗದಿಂದ ಆರಂಭಗೊಂಡು ಮಧುಗಿರಿ ಚೋಳೇನಹಳ್ಳಿ ಕೆರೆ, ಸಿದ್ದಾಪುರ ಕೆರೆ, ಬೈಪಾಸ್ ರಸ್ತೆ, ಸೂರ್ಯ ಮುಳಗುವ ವೇಳೆ ಮಧುಗಿರಿ ಏಕಶಿಲಾ ಬೆಟ್ಟದ ಪ್ರಕೃತಿ ಸೌಂದರ್ಯ, ಐತಿಹಾಸಿಕ ಶ್ರೀ ಮಲ್ಲೇಶ್ವರ ಸ್ವಾಮಿ ಮತ್ತು ವೆಂಕಟರಮಣ ಸ್ವಾಮಿ, ಪ್ರಮುಖ ರಸ್ತೆಗಳು, ನ್ಯಾಯಾಲದ ಸಂಕೀರ್ಣ, ಸಾಲಮರದ ತಿಮ್ಮಕನ ಸಸ್ಯೋದ್ಯಾನ, ಪೊಲೀಸ್ ಠಾಣೆ, ಜೈಲು, ಪುರಸಭೆ, ಸರ್ಕಾರಿ ಪ್ರೌಢಶಾಲೆ,…
ಚಿಕ್ಕನಾಯಕನಹಳ್ಳಿ: ಹೊರರಾಜ್ಯ ಹಾಗೂ ಜಿಲ್ಲೆಯಿಂದ ಬರುವವರನ್ನು ಕಡ್ಡಾಯವಾಗಿ ಕ್ವಾರಂಟೈನ್‍ಗೆ ಒಳಪಡಿಸಲಾಗುವುದೆಂದು ತಹಸೀಲ್ದಾರ್ ಬಿ.ತೇಜಸ್ವಿನಿ ತಿಳಿಸಿದರು. ಈಚೆಗೆ ಲಾಕ್ಡೌನ್ ಸಡಿಲಿಕೆಯ ಸಂದರ್ಭದಲ್ಲಿ ಹಸಿರುವಲಯದಲ್ಲಿರುವ ನಮ್ಮ ತಾಲ್ಲೂಕಿನಲ್ಲಿ ಯಾವುದೇ ಸೋಂಕಿನ ಪ್ರಕರಣ ಆಗದ ರೀತಿ ಪಟ್ಟಣ ಹಾಗೂ ಗ್ರಾಮಗಳಲ್ಲಿಯೂ ಸಹ ಎಚ್ಚರಿಕೆಯ ಕ್ರಮಗಳನ್ನು ಅನುಸರಿಸಲಾಗುತ್ತದೆ. ಪಿಡಿಓಗಳಿಗೆ ಸೂಚನೆ: ಕೊರೊನಾ ಸೋಂಕು ತಾಲ್ಲೂಕಿನನೊಳಗೆ ಬರದಂತೆ ತಡೆಯುವ ಉದ್ದೇಶದಿಂದ ಹೊರಗಿನಿಂದ ಯಾವುದೇ ವ್ಯಕ್ತಿಗಳ ಆರೋಗ್ಯ ತಪಾಸಣೆ ಕಡ್ಡಾಯ ಹಾಗೂ ಕೆಂಪು ಮತ್ತು ಕಿತ್ತಳೆವಲಯದಿಂದ ಬಂದವರನ್ನು ಕಡ್ಡಾಯವಾಗಿ ಹೋಂ ಕ್ವರಂಟೈನ್‍ಗೆ ಒಳಪಡಿಸಲು ಗ್ರಾಮ ಪಂಚಾಯಿತಿ ಪಿಡಿಓಗಳಿಗೆ ನಿರ್ದೇಶನ ನೀಡಲಾಗಿದೆ. ಆರೋಗ್ಯತಪಾಸಣೆಯ ಸಂದರ್ಭದಲ್ಲಿ ಸಂಶಯ ಬಂದರೆ ಅಂತಹವರನ್ನು ಆಸ್ಪತ್ರೆಯಲ್ಲಿ ಐಸೋಲೇಷನ್‍ಗೆ ಒಳಪಡಸಲಾಗುವುದೆಂದರು. ಹೊರರಾಜ್ಯದ ಎಂಟುಮಂದಿ: ತಮಿಳುನಾಡು ಮತ್ತು ಹೈದರಬಾದ್‍ನಿಂದ ಬಂದಿರುವ ಎಂಟು ಮಂದಿಯನ್ನು ಆಸ್ಪತ್ರೆಯಲ್ಲಿ ಕ್ವರಂಟೈನ್‍ಗೆ ಒಳಪಡಿಸಲಾಗಿದೆ. ಇವರು ಸ್ಥಳಿಯರಾಗಿದ್ದು ಕೆಲಸದ ನಿಮಿತ್ತ ಹೊರರಾಜ್ಯಗಳಿಗೆ ತೆರಳಿದ್ದವರಾಗಿದ್ದಾರೆಂದರು. ಇದಲ್ಲದೆ ಇತರೆ ಕಾಂಗಾರಿಗಳಾದ ಹೆದ್ದಾರಿ, ನೀರಿ…
ತುಮಕೂರು: ಎತ್ತಿನ ಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯಡಿ ಗುರುತ್ವಾ ಕಾಲುವೆಯ ನಾಲಾ ಸರಪಳಿ 199.620 ಕಿ.ಮೀ. ರಿಂದ 210.090 ಕಿ.ಮೀ. ವರೆಗೆ ನಿರ್ಮಾಣವಾಗುತ್ತಿರುವ ಬೃಹತ್ ಮೇಲ್ಗಾಲುವೆ ಕಾಮಗಾರಿಯನ್ನು ಚುರುಕುಗೊಳಿಸಿ ಕಾಲಾವಧಿಯಲ್ಲಿ ಪೂರ್ಣಗೊಳಿಸಲಾಗುವುದೆಂದು ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ ತಿಳಿಸಿದರು. ಅವರು ಬುಧವಾರ ಚೇಳೂರು ತೊಳಚನಹಳ್ಳಿ ಹತ್ತಿರ ಮೇಲ್ಗಾಲುವೆಯ ಕಾಮಗಾರಿ ವೀಕ್ಷಣೆ ಮಾಡಿ ಮಾತನಾಡಿದರು. ಯೋಜನೆಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿರುವ ಭೂಮಾಲೀಕರಿಗೆ ಪರಿಹಾರ ವಿತರಣೆಗಾಗಿ 100 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಜಲಸಂಪನ್ಮೂಲ ಇಲಾಖೆ ಕಾಮಗಾರಿಗಳನ್ನು ವಿಳಂಬಗೊಳಿಸುವಂತಿಲ್ಲ. ಸಕಲೇಶಪುರ ಬಳಿ ಯೋಜನೆಯಲ್ಲಿದ್ದ ಲೋಪದೋಷಗಳನ್ನು ಸರಿಪಡಿಸಲಾಗಿದ್ದು, 2021ರ ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಕಾಮಗಾರಿಯನ್ನು ಕಾಲಾವಧಿಯಲ್ಲಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು. ಜಲಸಂಪನ್ಮೂಲ ಇಲಾಖೆಗೆ ಅನುದಾನದ ಕೊರತೆ ಇಲ್ಲ. ಇಲಾಖೆಗೆ ಇನ್ನು ಹೆಚ್ಚಿನ ಅನುದಾನವನ್ನು ನೀಡಲು ಮುಖ್ಯಮಂತ್ರಿಗಳು ಸಿದ್ದರಿದ್ದಾರೆ ಎಂದು ಅವರು…
ತುಮಕೂರು: ಕೊರೋನಾ ಸಂಕಷ್ಟದ ಸಮಯದಲ್ಲಿ ಸ್ವಚ್ಛತೆಗೆ ಶ್ರಮಿಸುತ್ತಿರುವ ಪೌರ ಕಾರ್ಮಿಕರು ಹಾಗೂ ಆಟೋ ಚಾಲಕರಿಗೆ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರ ಆದೇಶದಂತೆ ಪಡಿತರ ಕಿಟ್ ವಿತರಿಸಲಾಯಿತು ಎಂದು ಕ್ರೀಬ್ಕೋ ಸಂಸ್ಥೆ ನಿರ್ದೇಶಕ ಆರ್.ರಾಜೇಂದ್ರ ತಿಳಿಸಿದರು. ನಗರದ ಕ್ಯಾತ್ಸಂದ್ರದ ಚಂದ್ರಮೌಳೇಶ್ವರ ಸಹಕಾರ ಸಂಘದ ಆವರಣದ ಬಳಿ ಕೊರೋನಾ ಸಂಕಷ್ಟದಲ್ಲಿರುವ ಕ್ಯಾತ್ಸಂದ್ರ 33, 34ನೇ ವಾರ್ಡ್ ನ ಪೌರಕಾರ್ಮಿಕರು, ಮಡಿವಾಳರು, ಮೇದರು, ಆಟೋ ಚಾಲಕರಿಗೆ ಪಡಿತರ ವಿತರಿಸಿ ಅವರು ಮಾತನಾಡಿದರು. ಸ್ವಚ್ಛತೆಗೆ ಶ್ರಮಿಸುತ್ತಿರುವ ಪೌರಕಾರ್ಮಿಕರು ಸುರಕ್ಷತಾ ಸಲಕರಣೆಗಳು ಇಲ್ಲದೇ ಕಾರ್ಯನಿರ್ವಹಿಸುತ್ತಿದ್ದಾರೆ, ಅವರಿಗೆ ಮೊದಲು ಸುರಕ್ಷತಾ ಸಾಧನಾಗಳನ್ನು ವಿತರಿಸಬೇಕು ಈ ನಿಟ್ಟಿನಲ್ಲಿ ನಮ್ಮ ಭಾಗದ ಮುಖಂಡರು ಗಮನಹರಿಸಬೇಕು, ಟಿಜಿಎಂಸಿ ಬ್ಯಾಂಕ್ ನ ಎನ್.ಎಸ್.ಜಯಕುಮಾರ್ ಅವರು ಬ್ಯಾಂಕ್ ವತಿಯಿಂದ ನೀಡಿರುವ ಯೂನಿಫಾರ್ಮ್ ಧರಿಸಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು. ಕೊರೋನಾ ಹರಡದಂತೆ ತಡೆಯುವ ನಿಟ್ಟಿನಲ್ಲಿ ಪೌರ ಕಾರ್ಮಿಕರ ಪಾತ್ರ ಮಹತ್ವದಾಗಿದ್ದು, ಪ್ರತಿ ದಿನ…
ತುಮಕೂರು: ಆಸ್ತಿ ವಿಚಾರವಾಗಿ ತಂದೆಯೇ ಮಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಗೊಪಾಲಪುರ ಗ್ರಾಮದಲ್ಲಿ ನಡೆದಿದೆ. 6 ವರ್ಷಗಳ ಹಿಂದೆ ಮದುವೆಯಾಗಿ ಬೆಂಗಳೂರಿನಲ್ಲಿ ವಾಸವಿದ್ದ ಅಮೃತಾ ಮತ್ತು ಸುನೀಲ್ ಮಾರ್ಚ್ ನಲ್ಲಿ ಗೋಪಾಲಪುರ ಗ್ರಾಮದ ತಂದೆ ಮನೆಗೆ ಬಂದಿದ್ದರು. ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ಗ್ರಾಮದಲ್ಲೇ ಉಳಿದುಕೊಂಡಿದ್ದರು. ಈ ವೇಳೆ ತಂದೆ ಭೈರಪ್ಪ ಜಮೀನಿನಲ್ಲಿ ಮಣ್ಣು ತೆಗೆಸಿ ಮಾರಿಕೊಂಡಿದ್ದಾರೆ ಎಂದು ಅಮೃತಾ ತಂದೆಯನ್ನ ಪ್ರಶ್ನಿಸಿದ್ದಾರೆ. ಈ ವಿಚಾರಕ್ಕೆ ತಂದೆ ಮಗಳ ನಡುವೆ ಗಲಾಟೆ ಶುರುವಾಗಿ ಕೊನೆಗೆ ಅಮೃತಾ ನೊಣವಿನಕೆರೆ ಪೆÇಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸ್ ಠಾಣೆಯಿಂದ ಮನೆಗೆ ಬಂದ ಅಮೃತಾ ಹಾಗೂ ತಂದೆ ಬೈರಪ್ಪ ನಡುವೆ ಮತ್ತೆ ಜಗಳ ಶುರುವಾಗಿದ್ದು ವಿಕೋಪಕ್ಕೆ ತಿರುಗಿದೆ. ತಂದೆ ಬೈರಪ್ಪ ಹಾಗೂ ಅಣ್ಣ ತಮ್ಮಂದಿರು ಸೇರಿ ಮಾರಕಾಸ್ತ್ರಗಳಿಂದ ಅಮೃತಾ ಮೇಲೆ ಹಲ್ಲೆ ನಡೆಸಿದ್ದಾರೆ. ಜಗಳ…











