ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿ ನಡೆಯಬೇಕಿರುವ ಯುಜಿಡಿ , ನೀರಿನ ಟ್ಯಾಂಕ್, ಚರಂಡಿ ಹಾಗೂ ಹುಳಿಯಾರಿನ ರಸ್ತೆ ಕಾಮಗಾರಿಗಳ ಪ್ರಗತಿ ತೃಪ್ತಿದಾಯಿಕವಾಗಿಲ್ಲ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ಅಸಮಧಾನ ವ್ಯಕ್ತಪಡಿಸಿದರು. ಪಟ್ಟಣದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಪೌರಕಾರ್ಮಿಕರಿಗೆ ಸಮವಸ್ತ್ರ ಹಾಗೂ ರಕ್ಷಣಾಕಿಟ್‍ಗಳನ್ನು ವಿತರಿಸದ ನಂತರ ಇಲಾಖಾವಾರು ಸಂಬಂಧಿಸಿದ ಅಧಿಕಾರಿಗಳಿಂದ ಹಲವು ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದರು. ಪಟ್ಟಣದಲ್ಲಿ ಒಳಚರಂಡಿ ನಿರ್ಮಾಣಕ್ಕಾಗಿರೂ. 60ಕೋಟಿ. ಬಿಡುಗಡೆಯಾಗಿ ಆರುತಿಂಗಳು ಕಳೆದರೂ ಆಮೆಗತಿಯಲ್ಲಿ ನಡೆದಸಿರುವ ಬಗ್ಗೆ ತೀವ್ರ ಅತೃಪ್ತಿವ್ಯಕ್ತಪಡಿಸಿ ಮೊದಲು ಸಂಸ್ಕರಣಾ ಪಿಟ್‍ಗಳ ನಿರ್ಮಾಣಕ್ಕಾಗಿ ಜಾಗಗಳನ್ನು ಪುರಸಭಾ ವಶಕ್ಕೆ ಪಡೆದು ಕಾಮಗಾರಿ ಅಲ್ಲಿನಿಂದಲೇ ಆರಂಭಿಸಲು ತಿಳಿಸಿದ್ದರೂ ಇನ್ನು ತಡವಾಗಿರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿ ಇದಕ್ಕಾಗಿಯೇ ಪಟ್ಟಣದ ಯಾವುದೇ ರಸ್ತೆಕಾಮಗಾರಿಗೆ ಅನುದಾನ ಹಾಕದೇ ಬೇರೆಡೆಗೆ ವಿನಿಯೋಗಿಸಲಾಗಿದೆ. ಆದರೆ ನೀವು ಇನ್ನೂ ಇದರ ಬಗ್ಗೆ ಆಸಕ್ತಿಯೇ ತೆಳೆದಿಲ್ಲವೆಂದು ಮುಖ್ಯಾಧಿಕಾರಿ ಶ್ರೀನಿವಾಸ್‍ರವರನ್ನು ತರಾಟೆಗೆ ತೆಗೆದುಕೊಂಡರು. ನಂತರ ಸಂಸ್ಕರಣಾಪಿಟ್‍ಗಳಿಗೆ ಜಾಗದ ಸಮಸ್ಯೆಗಳ ನಿವಾರಣೆಗಾಗಿ ಮಾಜಿ ಪುರಸಭಾಧ್ಯಕ್ಷ ಸಿ.ಎಂ.…
Author: News Desk Benkiyabale
ತುಮಕೂರು: ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯು ಕೋವಿಡ್-19 ಹಿನ್ನೆಲೆಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಮುಂದೂಡಲಾಗಿದ್ದು ವಿದ್ಯಾರ್ಥಿಗಳ ಆತ್ಮವಿಶ್ವಾಸ ತುಂಬಲು ಹಾಗೂ ವಿಷಯವಾರು ಕ್ಲಿಷ್ಟ ಅಂಶಗಳು/ಸಂದೇಹಗಳನ್ನು ಪರಿಹರಿಸಲು ನಿಗಧಿತ ಸಂಪನ್ಮೂಲ ಶಿಕ್ಷಕರುಗಳಿಂದ ಫೋನ್ ಇನ್ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಉಪನಿರ್ದೇಶಕರಾದ ಎಂ. ರೇವಣಸಿದ್ದಪ್ಪ ಅವರು ತಿಳಿಸಿದ್ದಾರೆ. ಮೇ 13ರಂದು ಗಣಿತ ಮತ್ತು ವಿಜ್ಞಾನ, ಮೇ 14ರಂದು ಕನ್ನಡ ಮತ್ತು ಇಂಗ್ಲೀಷ್, ಮೇ 15ರಂದು ಸಮಾಜ ವಿಜ್ಞಾನ ಮತ್ತು ಹಿಂದಿ ವಿಷಯಗಳನ್ನು ಬೆಳಿಗ್ಗೆ 11.00 ರಿಂದ ಮಧ್ಯಾಹ್ನ 1.30 ರವರೆಗೆ ಫೋನ್ ಇನ್ ಕಾರ್ಯಕ್ರಮ ನಡೆಯುತ್ತಿದ್ದು, ಕೊರಟಗೆರೆ, ಮಧುಗಿರಿ, ಪಾವಗಡ ಮತ್ತು ಸಿರಾ ತಾಲ್ಲೂಕಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ನಿಗಧಿಪಡಿಸಿದ ದಿನಾಂಕ ಮತ್ತು ಸಮಯದಂದು ದೂರವಾಣಿ ಕರೆ ಮಾಡಿ ಸಂದೇಹಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ ಕರೆ ಮಾಡುವ ದೂರವಾಣಿ ಸಂಖ್ಯೆ : ಮಧುಗಿರಿ ಉಪನಿರ್ದೇಶಕರು (ಆಡಳಿತ)-9448999347; ಶಿಕ್ಷಣಾಧಿಕಾರಿಗಳು-9880541556; ಗಣಿತ ವಿಷಯಕ್ಕಾಗಿ ಧನಂಜಯಪಟೇಲ್-7344120729, ಗುರುಪ್ರಸಾದ್-9663945599, ಕೆ.ಆರ್.…
ತುಮಕೂರು: ಕೋವಿಡ್-19ನಿಂದ ಲಾಕ್‍ಡೌನ್ ಆಗಿರುವ ಈ ಸಂದರ್ಭದಲ್ಲಿ ನಗರದಲ್ಲಿ ಯಾರೂ ಹಸಿವಿನಿಂದ ಬಳಲಬಾರದು ಎಂಬ ಉದ್ಧೇಶದಿಂದ ಆರ್.ಆರ್. ಅಭಿಮಾನಿ ಬಳಗವು ಯುವ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿನಿತ್ಯ ದಾಸೋಹ ಕಾರ್ಯ ನಡೆಸುತ್ತಿರುವುದು ಶ್ಲಾಘನೀಯ ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ಮೆಚ್ಚುಗೆ ವ್ಯಕ್ತಪಡಿಸಿದರು. ನಗರದ ಮರಳೂರು ಎಸ್‍ಎಸ್‍ಐಟಿ ಕಾಲೇಜಿನ ಮುಂಭಾಗದಲ್ಲಿರುವ ಬೀರೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ದಾಸೋಹ ಕಾರ್ಯವನ್ನು ಶುಕ್ರವಾರ ವೀಕ್ಷಿಸಿದ ನಂತರ ಮಾತನಾಡಿದ ಅವರು, “ಉಳ್ಳವರು ಇಲ್ಲದವರೊಂದಿಗೆ ಹಂಚಿಕೊಂಡು ಬದುಕುವಂಥ ಆದರ್ಶದ ಮಾರ್ಗ ಹಾಕಿಕೊಟ್ಟವರು ಬಸವಣ್ಣ. ಕೊರೊನಾ ಸಂಕಷ್ಟದಲ್ಲಿ ಆರ್.ರಾಜೇಂದ್ರ ನೇತೃತ್ವದ ಬಳಗವು ಬಸವಣ್ಣನ ಮಾತಿನಂತೆ ದಾಸೋಹ ಕಾರ್ಯ ನಡೆಸುತ್ತಿದ್ದಾರೆ. ಬಸವೇಶ್ವರರು ಸಾರಿದ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು, ಇತತರಿಗೆ ಮಾದರಿಯಾಗಿದ್ದಾರೆ ಎಂದು ತಿಳಿಸಿದರು. ಕಾಯಕವೇ ಕೈಲಾಸ ಎಂಬ ತತ್ತ್ವವನ್ನು ಅಳವಡಿಸಿಕೊಂಡಾಗ ಎಲ್ಲರಿಗೂ ಸಲ್ಲುವಂಥ `ಹಸಿವು ಮುಕ್ತ’ `ಜಾತ್ಯತೀತ ಸಮಾಜ’ ಕಟ್ಟಬಹುದು ಎಂದ ಅವರು, ನಗರದಲ್ಲಿ ಸುಮಾರು 3000ಕ್ಕೂ ಹೆಚ್ಚು ಜನರಿಗೆ…
ತುಮಕೂರು: ಕೋವಿಡ್-19 ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹಲವಾರು ಕಾರಣಗಳಿಂದ ಕೂಲಿ ಕಾರ್ಮಿಕರ ಸೇವೆಯಲ್ಲಿ ವ್ಯತ್ಯಯ ಉಂಟಾಗಿದ್ದು, ದಿನನಿತ್ಯ ವಹಿವಾಟು ನಡೆಯುವ ಎಪಿಎಂಸಿ ಮಾರುಕಟ್ಟೆ/ ತರಕಾರಿ ಮಾರುಕಟ್ಟೆ/ಮತ್ತಿತರ ಅಂಗಡಿ-ಮುಂಗಟ್ಟುಗಳಲ್ಲಿ ಮೂಟೆಗಳನ್ನು ಏರಿಸಲು ಮತ್ತು ಇಳಿಸಲು ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಬಳಸಿಕೊಳ್ಳುತ್ತಿರುವುದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಗಮನಕ್ಕೆ ಬಂದಿದ್ದು, ಬಾಲ ಕಾರ್ಮಿಕ ನಿಷೇಧ ಕಾಯ್ದೆಯನ್ವಯ ಅಪ್ತಾಪ್ರ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳುವುದು ಅಪರಾಧವಾಗಿದೆ. ಕಾಯ್ದೆಯನ್ನು ಉಲ್ಲಂಘಿಸಿದ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್ ತಿಳಿಸಿದ್ದಾರೆ.
ತುರುವೇಕೆರೆ : ಕಾರೊಂದು ಮರಕ್ಕೆ ಡಿಕ್ಕಿ ಹೊಡೆದು ಚಾಲಕನಿಗೆ ತೀವ್ರ ರಕ್ತ ಸ್ರಾವವಾಗಿ ಚಾಲಕ ಸಾವನ್ನಪ್ಪಿರುವ ಘಟನೆ ತುರುವೇಕೆರೆ ತಾಲ್ಲೂಕಿನ ದಂಡಿನಶಿವರ ಪೋಲಿಸ್ ಠಾಣಾ ಸರಹದ್ದಿನಲ್ಲಿ ನಡೆದಿದೆ. ವಿನಯ್ (31 ವರ್ಷ) ಮೃತ ಯುವಕ. ಈತ ನಿಟ್ಟೂರು ಬಳಿ ಬಂಡಿಹಳ್ಳಿ ಗ್ರಾಮ ವಾಸಿಯಾಗಿದ್ದು, ಇಟಿಯೋಸ್ ಕಾರಿನಲ್ಲಿ ಅಮ್ಮಸಂದ್ರದಿಂದ ತನ್ನ ಸ್ವಗ್ರಾಮಕ್ಕೆ ತೆರಳುವಾಗ ಕೊಡಗಲ್ ಪಾಳ್ಯ ಗೇಟ್ ಬಳಿ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲಿಯೇ ಕಾರು ಚಾಲನೆ ಮಾಡುತ್ತಿದ್ದ ವಿನಯ್ ಸಾವಿಗೀಡಾಗಿದ್ದಾರೆ. ಸ್ಥಳಕ್ಕೆ ದಂಡಿನಶಿವರ ಪೋಲಿಸರು ಆಗಮಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ತುಮಕೂರು: ತುಮಕೂರು ನಗರದ ಕಂಟೈನ್ಮೆಂಟ್ ವಲಯ ಹೊರತುಪಡಿಸಿ ತುಮಕೂರು ನಗರದಲ್ಲಿ ವೈನ್ ಶಾಪ್ ಸೇರಿದಂತೆ ಅಂಗಡಿ-ಮುಂಗಟ್ಟುಗಳನ್ನು ತೆರೆಯಲು ಷರತ್ತಿಗೊಳಪಟ್ಟು ಅನುಮತಿ ನೀಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು ತಿಳಿಸಿದರು. ಅವರು ಇಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ತುಮಕೂರು ನಗರದಲ್ಲಿ ಕೋವಿಡ್-19 ವೈರಾಣು ನಿಯಂತ್ರಣ ಮತ್ತು ಸಡಿಲಿಕೆ ಕುರಿತು ಕರೆಯಲಾಗಿದ್ದ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ನಗರದ ಶಾಸಕರಾದ ಜ್ಯೋತಿಗಣೇಶ್ ಹಾಗೂ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಸಡಿಲಿಕೆ ಕುರಿತು ಸಮಗ್ರ ಮಾಹಿತಿ ಪಡೆದು ಮಾತನಾಡಿದರು. ಸಾಮಾಜಿಕ ಅಂತರ, ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಮತ್ತು ಜನಜಂಗುಳಿ ನಿಯಂ ತ್ರಣದೊಂದಿಗೆ ಅಂಗಡಿಗಳ ಮಾಲೀಕರುಗಳು ಮತ್ತು ವರ್ತಕರುಗಳು ತಮ್ಮ ಸ್ವಯಂ ಜವಾಬ್ದಾರಿಯಿಂದ ಅಂಗಡಿಗಳನ್ನು ತೆರೆಯಲು ಅವರು ಸೂಚನೆ ನೀಡಿದರು. ತುಮಕೂರು ನಗರದಲ್ಲಿ ವೈನ್‍ಶಾಪ್‍ಗಳು ಹಾಗೂ ಎಂಎಸ್‍ಐಎಲ್…
ತುಮಕೂರು: ವಿಶ್ವದಾದ್ಯಂತ ಹರಡುತ್ತಿರುವ ಕೊರೋನಾ ವೈರಾಣುವನ್ನು ತಡೆಗಟ್ಟಲು ಹಗಲಿರುಳು ಶ್ರಮಿಸುತ್ತಿರುವ ಕೊರೋನಾ ಸೈನಿಕರನ್ನು ಗೌರವಿಸಿ ಎಂದು ಉಪ ಮುಖ್ಯಮಂತ್ರಿ, ಲೋಕೋಪಯೋಗಿ ಹಾಗೂ ಸಮಾಜ ಕಲ್ಯಾಣ ಸಚಿವ ಗೋವಿಂದ ಎಂ.ಕಾರಜೋಳ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು. ತಾಲ್ಲೂಕಿನ ಹೆಗ್ಗೆರೆ ಗ್ರಾಮಪಂಚಾಯತಿಯಲ್ಲಿ ಏರ್ಪಡಿಸಿದ್ದ ಅಗತ್ಯ ವಸ್ತುಗಳ ಕಿಟ್ ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕೊರೋನಾ ಸೈನಿಕರಾದ ಆಶಾ/ ಅಂಗನವಾಡಿ ಕಾರ್ಯಕರ್ತೆಯರು, ಆರಕ್ಷಕರು, ಪೌರಕಾರ್ಮಿಕರು, ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಪತ್ರಕರ್ತರು ತಮ್ಮ ಪ್ರಾಣದ ಹಂಗನ್ನು ತೊರೆದು ವೈಯಕ್ತಿಕ ಜೀವನವನ್ನು ಬದಿಗಿಟ್ಟು ಕೊರೋನಾ ವೈರಸ್ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆಶಾ ಕಾರ್ಯಕರ್ತೆಯರು ಸಮೀಕ್ಷೆಗಾಗಿ ಮನೆ-ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಿರುಕುಳ, ಅವಮಾನಗಳನ್ನು ಸಹಿಸಿಕೊಂಡು ತಮ್ಮ ಸೇವೆಯನ್ನು ಎದೆಗುಂದದೆ ಮಾಡುತ್ತಿದ್ದಾರೆ. ಇಂತಹ ಕೊರೋನಾ ಸೈನಿಕರನ್ನು ನಾವೆಲ್ಲರೂ ಪೂಜಿಸಬೇಕೆಂದು ತಿಳಿಸಿದರು. ಕೊರೋನಾ ವೈರಸ್ ರಾಜ್ಯಕ್ಕೆ ಮಾತ್ರವಲ್ಲ ಪ್ರಪಂಚದ ಸುಮಾರು 200ಕ್ಕೂ ಹೆಚ್ಚು…
ತುಮಕೂರು : ಮಹಾನಗರ ಪಾಲಿಕೆ ಸಭಾಂಗಣದಲ್ಲಿಂದು ನಡೆದ 2020-21ನೇ ಸಾಲಿನ ಆಯ-ವ್ಯಯ ಸಭೆಯಲ್ಲಿ 3.81ಕೋಟಿ ರೂ. ಉಳಿತಾಯ ಬಜೆಟನ್ನು ಮಂಡನೆ ಮಾಡಲಾಯಿತು. ಬಜೆಟ್ ಮಂಡಿಸಿದ ಹಣಕಾಸು ಮತ್ತು ತೆರಿಗೆ ನಿರ್ಧರಣೆ ಸ್ಥಾಯಿ ಸಮಿತಿಯ ಅಧ್ಯಕ್ಷ ಟಿ.ಎಂ.ಮಹೇಶ್ ಪಾಲಿಕೆಯು ತನ್ನ ಆರ್ಥಿಕ ಇತಿಮಿತಿಗಳಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಆಯ-ವ್ಯಯ ಅಂದಾಜನ್ನು ತಯಾರಿಸಲಾಗಿದೆ. ಈ ಆಯವ್ಯಯದ ಅನ್ವಯ ಒಟ್ಟು ಆರಂಭಿಕ ಶಿಲ್ಕು 2601.45 ಲಕ್ಷ ರೂ. ಸೇರಿ 22804.77ಲಕ್ಷ ರೂ.ಗಳ ಅಂದಾಜು ಸ್ವೀಕೃತಿ ಹಣದಲ್ಲಿ 2020-21 ಸಾಲಿಗಾಗಿ 22423.37 ಲಕ್ಷ ರೂ.ಗಳ ಅಂದಾಜು ವೆಚ್ಚ ಮಾಡಲು ಬಜೆಟ್ ಮಂಡನೆ ಮಾಡಲಾಗಿದ್ದು, 381.40ಲಕ್ಷ ರೂ.ಗಳು ಮಿಗತೆಯಲ್ಲಿದೆ ಎಂದು ತಿಳಿಸಿದ ಅವರು ತುಮಕೂರು ನಗರ ನಿವಾಸಿಗಳಿಗೆ ಮೂಲಭೂತ ಸೌಲಭ್ಯವನ್ನು ಒದಗಿಸುವಲ್ಲಿ ಹೆಚ್ಚು ಪ್ರಾಧಾನ್ಯತೆಯನ್ನು ನೀಡಲಾಗಿದೆ ಎಂದು ಹೇಳಿದರು. ಈ ವರ್ಷದ ಆಯವ್ಯಯದಲ್ಲಿ ನಗರದ ಜನತೆಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ…
ತುಮಕೂರು: ಕೋವಿಡ್-19 ಲಾಕ್‍ಡೌನ್ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಆರ್.ರಾಜೇಂದ್ರ ನೇತೃತ್ವದ ದಾಸೋಹ ವ್ಯವಸ್ಥೆ ಇಂದಿಗೆ ಒಂದು ಲಕ್ಷ ಜನರನ್ನು ತಲುಪಿದ್ದು, ಯುವಕರ ಸೇವಾ ಮನೋಭಾವ ಇತರರಿಗೆ ಮಾದರಿ ಎಂದು ಕಾಂಗ್ರೆಸ್ ಮುಖಂಡ ಹಾಗೂ ರಾಜ್ಯ ಅಪೇಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ. ನಗರದ ಬೀರೇಶ್ವರ ಕಲ್ಯಾಣ ಮಂಟಪದಲ್ಲಿ ಯುವಕಾಂಗ್ರೆಸ್ ಹಾಗೂ ಆರ್.ಆರ್.ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿರುವ ದಾಸೋಹ ತಯಾರಿಕ ಸ್ಥಳಕ್ಕೆ,ಕಾಂಗ್ರೆಸ್ ಮುಖಂಡರಾದ ಚಲುವರಾಯಸ್ವಾಮಿ, ಹೆಚ್.ಸಿ.ಬಾಲಕೃಷ್ಣ, ನರೇಂದ್ರಸ್ವಾಮಿ ಹಾಗೂ ಯುವ ಕಾಂಗ್ರೆಸ್ ರಘವೀರಗೌಡ ಅವರುಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿದ ಅವರು,ವಿದ್ಯಾವಂತ ಯುವಜನರು, ತಮ್ಮ ಬಿಡುವಿನ ವೇಳೆಯನ್ನು ಈ ರೀತಿ ಅಶಕ್ತರು, ಬಡವರು, ಕಷ್ಟದಲ್ಲಿ ಇರುವವರ ಸೇವೆಗೆ ಮೀಸಲಿಟ್ಟಿರುವುದು ನಿಜಕ್ಕೂ ಮೆಚ್ಚುವಂತದ್ದು ಎಂದರು. ಮಾರ್ಚ್ 22 ರಿಂದ ಇದುವರೆಗೂ ಮೂರು ಹಂತದಲ್ಲಿ ಲಾಕ್‍ಡೌನ್ ವಿಸ್ತರಣೆಯಾಗಿದೆ.ಮೇ.17 ರ ನಂತರ ಏನು ಎಂಬುದು ತಿಳಿದಿಲ್ಲ.ಆದರೆ ಇಡೀ ಲಾಕ್‍ಡೌನ್…
ಚಿಕ್ಕನಾಯಕನಹಳ್ಳಿ: ಚಿಕ್ಕನಾಯಕನಹಳ್ಳಿ ತಾಲೂಕು ಹಂದನಕೆರೆ ಹೋಬಳಿ ಬೆಳಗುಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳೇ ಗೊಲ್ಲರಹಟ್ಟಿಯಲ್ಲಿ ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ಚನ್ನಪ್ಪನ ಮಕ್ಕಳು 7 ಜನ ಗುಂಪುಕಟ್ಟಿಕೂಂಡು ಮನೆನುಗ್ಗಿ ಹಳೇಹಟ್ಟಿ ನಿವಾಸಿ ಶಾಂತಯ್ಯ ಮತ್ತು ಅವರ ಸಂಬಂಧಿಕ ತಿಪಟೂರು ತಾಲೂಕಿನ ಕಿಬ್ಬನಳ್ಳಿ ಹೋಬಳಿ ಅರೇಹಳ್ಳಿ ಗೊಲ್ಲರಹಟ್ಟಿ ನಿವಾಸಿ ಯಾದ ಬಸವರಾಜು ಎಂಬುವರನ್ನು ಹೊಡೆಯುವ ಸಂದರ್ಭದಲ್ಲಿ ಬಸವರಾಜು 45 ವರ್ಷ, ಸ್ಥಳದಲ್ಲಿಯೇ ಮೃತಪಟ್ಟಿದ್ದು. ಶಾಂತಯ್ಯ ಎಂಬುವರು ಗಂಭೀರವಾಗಿದ್ದು, ತುಮಕೂರಿನ ಶ್ರೀದೇವಿ ಆಸ್ಪತ್ರೆಗೆ ದಾಖಲಿಸಲಾಗಿದ್ದು. ಇವರೂ ಕೂಡ ಸಾವು-ಬದುಕಿನ ನಡುವೆ ಹೊರಾಡುತ್ತಿದ್ದಾರೆ. ಸ್ಥಳೀಯ ಹಂದನಕೆರೆ ಪೊಲೀಸ್ ಸಬ್‍ಇನ್‍ಸ್ಪೆಕ್ಟರ್ ಎಸ್. ಶಿವಕುಮಾರ್ ಮತ್ತು ತಿಪಟೂರು SP ಚಂದನ್ ಕುಮಾರ್ ಪ್ರಖರಣ ದಾಖಲಿಸಿ ಚಿ.ನಾ ಹಳ್ಳಿ ಸಿಪಿಐ ಶ್ರೀಮತಿ ವೀಣಾ ರವರು ಸ್ಥಳಕ್ಕೆ ದಾವಿಸಿ ಆರೋಪಿ ಮಾಧವಾ ಮತ್ತು ಇತರೆ 6 ಜನ ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೊಂಡು ದಸ್ತು ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿರುತ್ತಾರೆ.











