Author: News Desk Benkiyabale

 ತುಮಕೂರು :        ರಾಜ್ಯ ಸರ್ಕಾರದ ದಿನಕ್ಕೊಂದು ನೀತಿಯ ಮೂಲಕ ಕ್ವಾರಿ ಮತ್ತು ಕ್ರಷರ್ಗಳ ಮಾಲೀಕರ ಮೇಲೆ ಗಧಾ ಪ್ರಹಾರ ನಡೆಸುತ್ತಿರುವುದನ್ನು ಹಾಗೂ ಎರಡೆರಡು ತೆರಿಗೆ ವಸೂಲಿ ಮಾಡುತ್ತಿರುವುದನ್ನು ಖಂಡಿಸಿ ಫೆಡರೇಷನ್ ಆಫ್ ಕರ್ನಾಟಕ ಕ್ಯಾರಿ ಮತ್ತು ಸ್ಟೋನ್ ಕ್ರಷರ್ ಒನ¾õï್ಸ ಅಸೋಸಿಯೇಷನ್ಸ್ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.       ಇಲ್ಲಿನ ಟೌನ್‍ಹಾಲ್ ವೃತ್ತದಲ್ಲಿ ಜಮಾಯಿಸಿದ ನೂರಾರು ಮಂದಿ ಕ್ರಷರ್ ಮಾಲೀಕರು ಹಾಗೂ ಕಾರ್ಮಿಕರು ಸರ್ಕಾರದ ದ್ವಂದ್ವ ನೀತಿ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಅಶೋಕ ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.       ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಕ್ರಷರ್ ಮತ್ತು ಕ್ವಾರಿ ಮಾಲೀಕರು ಸಂಘದ ರಾಜ್ಯ ಕಾರ್ಯದರ್ಶಿ ಭಾಸ್ಕರ್, ಜೆಲ್ಲಿ ಕ್ರಷರ್ ಹಾಗೂ ಕ್ವಾರಿ ಮಾಲೀಕರ ಮೇಲೆ ಸರ್ಕಾರ ದ್ವಂದ್ವ ನಿಲುವು ತೋರುತ್ತಿದ್ದು, ಇದರಿಂದ ಕ್ವಾರಿ ಮಾಲೀಕರಿಗೆ…

Read More

ತುಮಕೂರು:       ಇತಿಹಾಸ ಪ್ರಸಿದ್ದ ಸಿದ್ದಗಂಗಾ ಕ್ಷೇತ್ರದ ಆರಾಧ್ಯದೈವ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ ರಥೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ವೈಭವೋಪೇತವಾಗಿ ಇಂದು ನಡೆಯಿತು.       ನಡೆದಾಡುವ ದೇವರಾಗಿದ್ದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು ಲಿಂಗೈಕ್ಯರಾದ ನಂತರ ಶ್ರೀಕ್ಷೇತ್ರದಲ್ಲಿ ನಡೆಯುತ್ತಿರುವ ಮೊದಲ ರಥೋತ್ಸವ ಇದಾಗಿದ್ದು, ಮಧ್ಯಾಹ್ನ 12.10 ಗಂಟೆಗೆ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಹರಗುರುಚರಮೂರ್ತಿಗಳ ಸಮ್ಮುಖದಲ್ಲಿ ಹಿರಿಯ ಶ್ರೀಗಳಂತೆ ರಥದ ಬಲಭಾಗದ ಗಾಲಿಗೆ ತೆಂಗಿನಕಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.       ರಥೋತ್ಸವಕ್ಕೂ ಮುನ್ನ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯನ್ನು ಶ್ರೀಗಳ ಗದ್ದುಗೆ ಬಳಿಗೆ ಕೊಂಡೊಯ್ದು ಪೂಜೆ ಸಲ್ಲಿಸಿ, ನಂತರ ರಥದ ಸುತ್ತ ಮೂರು ಸುತ್ತು ಸುತ್ತಿದ ನಂತರ ರಥಕ್ಕೆ ಕೂರಿಸಲಾಯಿತು. ನಂತರ ಸಿದ್ದಲಿಂಗ ಸ್ವಾಮೀಜಿಯವರು ರಥದ ಗಾಲಿಗೆ ತೆಂಗಿನಕಾಯಿ ಒಡೆದು ಚಾಲನೆ ನೀಡುತ್ತಿದ್ದಂತೆ ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಸಮೂಹದ ಹರ್ಷೋದ್ಗಾರ ಮುಗಿಲು ಮುಟ್ಟಿತು. ನೆತ್ತಿ ಸುಡುವ ಬಿಸಿಲಿನ ಝಳವನ್ನು ಲೆಕ್ಕಿಸದೆ…

Read More

 ತುಮಕೂರು:       ನಗರದ ನಾಗರಿಕರಿಗೆ ಅತ್ಯಾಧುನಿಕ ರೀತಿಯಲ್ಲಿ ಸ್ಮಾರ್ಟ್ ರಸ್ತೆ, ಮಲ್ಟಿ ಯುಟಿಲಿಟಿ ಮಾಲ್, ಸ್ಮಾರ್ಟ್ ಲಾಂಜ್, ಎಲ್‍ಇಡಿ ಲೈಟ್ಸ್, ಇಂಟಿಗ್ರೇಟೆಡ್ ಬಸ್ ಟರ್ಮಿನಲ್, ಸ್ಮಾರ್ಟ್ ಉದ್ಯಾನವನ ಹೀಗೆ ಅಗತ್ಯವಿರುವ ಹಲವಾರು ಸೌಲಭ್ಯ ಹಾಗೂ ಸಂಪರ್ಕ ಸಾಧನಗಳನ್ನು ಒದಗಿಸಲು ಹೊರಟಿರುವ ಸ್ಮಾರ್ಟ್ ಸ್ಮಾರ್ಟ್ ಸಿಟಿ ಲಿಮಿಟೆಡ್ ಸದ್ದಿಲ್ಲದೆ ಲ್ಯಾಬ್ ಆನ್ ಬೈಕು ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡು ಯಶಸ್ವಿಯಾಗಿದೆ. ಏನಿದು ಲ್ಯಾಬ್ ಆನ್ ಬೈಕು:       ಕಾರ್ಯಕ್ರಮದಲ್ಲಿ ವಿಜ್ಞಾನ ಬೋಧಕರು ತಮ್ಮ ಮೊಬೈಲ್ ಲ್ಯಾಬ್ ಕಿಟ್‍ಗಳೊಂದಿಗೆ ದ್ವಿಚಕ್ರದಲ್ಲಿ ಒಂದು ಶಾಲೆಯಿಂದ ಮೊತ್ತೊಂದು ಶಾಲೆಗೆ ಪ್ರಯಾಣಿಸಿ ಮಕ್ಕಳಿಗೆ ಹಸ್ತಸ್ಪರ್ಶಿ ವಿಧಾನದ ಮೂಲಕ ವಿಜ್ಞಾನ ಶಿಕ್ಷಣದ ಬೋಧನೆ ಹಾಗೂ ತರಬೇತಿ ನೀಡಿದ್ದಾರೆ. ಇದಕ್ಕಾಗಿ 9 ಬೋಧನಾ ಸಿಬ್ಬಂದಿಯೊಂದಿಗೆ ಒಂದು ಮೊಬೈಲ್ ಸೈನ್ಸ್ ಲ್ಯಾಬ್ ಹಾಗೂ 3 ಬೈಕ್‍ಗಳನ್ನು ಬಳಸಿಕೊಳ್ಳಾಗಿದೆ. ಸರ್ಕಾರಿ ಶಾಲೆಗಳಲ್ಲಿ ಮಾತ್ರ:       ನಗರದ ಎಲ್ಲ ಸರ್ಕಾರಿ ಶಾಲೆಗಳ 5 ರಿಂದ 10ನೇ…

Read More

ಕೊರಟಗೆರೆ :       ಯುವಕರು ಧಾರ್ಮಿಕ ಹಾಗೂ ಸಾಮಾಜಿಕ ಸೇವೆಗಳಲ್ಲಿ ತಮ್ಮಗಳನ್ನು ತೊಡಗಿಸಿಕೊಂಡರೆ ಉತ್ತಮ ಸಾಮಾಜಿಕ ಪರಿಸರ ನಿರ್ಮಾಣವಾಗುತ್ತದೆ ಎಂದು ಸಿದ್ದರಬೆಟ್ಟ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಪೀಠಾದ್ಯಕ್ಷರಾದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.       ಅವರು ಶ್ರೀರಣಬೈರೆಗೌಡ ಯುವಸೇವಾ ಸಂಘ ಮತ್ತು ಫ್ರೆಂಡ್ಸ್ ಗ್ರೂಪ್ ಸೇವಾಸಮೀತಿ ಅವರಿಂದ ಪಟ್ಟಣದ ಗಂಗಾಧರೇಶ್ವರ ಸ್ವಾಮಿ ಬೆಟ್ಟದಲ್ಲಿ ಮಹಾಶಿವರಾತ್ರಿಯಂದು ನಡೆದ ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪ್ರಸ್ತುತ ಸಮಾಜದಲ್ಲಿ ಯುವಕರು ಆಧುನಿಕತೆಯ ಮೋಜಿಗೆ ಬಿದ್ದು, ಸಮಾಜದ ಒಳಿತನ್ನು ಮರೆತು, ಹಿರಿಯರಲ್ಲಿನ ಗೌರವವನ್ನು ಸಹ ಕಳೆದುಕೊಳ್ಳುತ್ತಾ ದುಷ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಆದ್ದರಿಂದ ಯುವಕರು ತಮ್ಮ ದೈನಂದಿನ ಕೆಲಸಗಳೊಂದಿಗೆ ಧಾರ್ಮಿಕತೆ ಮತ್ತು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡರೆ ಉತ್ತಮ ಸಮಾಜದ ನಿರ್ಮಾಣಕ್ಕೆ ದಾರಿಯಾಗುತ್ತದೆ, ಯುವಕರು ಧಾರ್ಮಿಕತೆಯನ್ನು ಮತ್ತು ದೈವತ್ವದ ಮಹತ್ವದ ಬಗ್ಗೆ ತಿಳಿದುಕೊಂಡರೆ ಮಾನಸಿಕವಾಗಿ ಸದೃಡರಾಗುವುದರೊಂದಿಗೆ ಏಕಾಗ್ರತೆಯನ್ನು ಸಹ ಬೆಳೆಸಿಕೊಳ್ಳುತ್ತಾರೆ.      ಇತ್ತೀಚೆಗೆ ಯುವಕರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದು ಆತ್ಮಹತ್ಯೆಯಂತಹ…

Read More

ತುರುವೇಕೆರೆ:       ಸರ್ಕಾರ ಅಭಿವೃದ್ದಿ ಕಾಮಗಾರಿಗಳಿಗೆ ಕ್ರಿಯಾಯೋಜನೆ ರೂಪಿಸಬೇಕಾದರೆ ಕನಿಷ್ಟ ಹತ್ತು ವರ್ಷಗಳ ಅವಧಿಗೆ ಗುರಿ ನಿಗದಿಗೊಳಿಸಿ ಕ್ರಿಯಾಯೋಜನೆ ರೂಪಿಸಲಾಗಿರುತ್ತದೆ, ಅದರಂತೆ ನೆನಗುದಿಗೆ ಬಿದ್ದಿರುವ ಹಿಂದಿನ ಕಾಮಗಾರಿಗಳನ್ನು ಚಾಲನೆಗೊಳಿಸುವ ಕೆಲಸ ಆಯಾ ಸ್ಥಳೀಯ ಶಾಸಕರ ಜವಬ್ದಾರಿಯಾಗಿರುತ್ತದೆ ಎಂಬುದನ್ನು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನವರು ಅರಿಯಬೇಕಿದೆ ಎಂದು ಶಾಸಕ ಮಸಾಲೆಜಯರಾಮ್ ತಿರುಗೇಟು ನೀಡಿದರು.       ತಾಲೂಕಿನ ದಬ್ಬೇಗಟ್ಟ ಹೋಬಳಿ ಗುರುವಿನಮಠ ಗ್ರಾಮದಲ್ಲಿ 96ಲಕ್ಷವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಡಿದ ಅವರು ಈ ಹಿಂದಿನ ಸರ್ಕಾರದಲ್ಲಿ ಮುಂಜೂರಾದ ಕಾಮಗಾರಿಗಳಿಗೆ ಅವಶ್ಯವಿರುವ ಹೆಚ್ಚುವರಿ ಅನುದಾನ ಹಾಗೂ ಸರ್ಕಾರದ ಮಟ್ಟದಲ್ಲಿ ಕ್ಷೇತ್ರಕ್ಕೆ ಬೇಕಾಗಿರುವ ಕಾಮಗಾರಿಗಳನ್ನು ಅನುಮೋದನೆಗೊಳಿಸಿಕೊಂಡು ಬರುವ ತಾಕತ್ತು ನನಗಿದೆ. ಕ್ಷೇತ್ರದ ಅಭಿವೃದ್ದಿ ಮಾಡುತ್ತಿರುವ ನನಗೆ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನವರ ಪುಕ್ಕಟೆ ಸಲಹೆ ಅವಶ್ಯಕತೆಯಿಲ್ಲ, ಜನರು ಅಧಿಕಾರ ಕೊಟ್ಟಿರುವುದು ನನಗೆ ತಾಲೂಕಿನ ಕ್ಷೇತ್ರದ ಜನರ ಪರವಾಗಿ ವಿಧಾನಸೌದದಲ್ಲಿ ಚರ್ಚೆಮಾಡಿ ಅವಶ್ಯಕವಿರುವ ಅನುದಾನವನ್ನು ತಂದು ಹೋರಟ ಮಾಡುವವನು ನಾನು. ನಾನು ರಾಜಕಾರಣದಲ್ಲಿ…

Read More

ಮಧುಗಿರಿ:-       ಪಟ್ಟಣದ ಹೃದಯ ಭಾಗದಲ್ಲಿ ಹರಿಹರ ಸಂಗಮದಂತೆ ಮಧುಗಿರಿಯ ಎರಡು ಕಣ್ಣುಗಳಂತೆ ಐತಿಹಾಸಿಕ ಶ್ರೀ ಮಲ್ಲೇಶ್ವರ ಸ್ವಾಮಿ ಮತ್ತು ಶ್ರೀ ವೆಂಕಟರಮಣ ಸ್ವಾಮಿ ದೇವಾಲಯಗಳಿವೆ. ಮಹಾಶಿವರಾತ್ರಿ ಹಬ್ಬದ ಜಾಗರಣೆ ಪ್ರಯುಕ್ತ ಶ್ರೀ ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸಾಂಸ್ಕøತಿಕ ಭಜನಾ ಕಾರ್ಯಕ್ರಮಗಳು, ರುದ್ರಾಭಿಷೇಕ ಮತ್ತು ವಿಶೇಷ ಪೂಜೆಗಳನ್ನು ಆಯೋಜಿಸಲಾಗಿದೆ. ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಮಧ್ಯೆರಾತ್ರಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.      ದೇವಸ್ಥಾನದ ಇತಿಹಾಸ:       ಜಗತ್ತಿನ ಜೀವನದಲ್ಲಿ ಜನತೆಯ ನಂಬುಗೆಯ ಶಕ್ತಿಯಿಂದ ಭಕ್ತಿಪೂರ್ಣದಿಂದ ವಿವಿಧ ರೂಪದಿಂದ ಪರಮಾತ್ಮನು ತನ್ನ ದರ್ಶನವನ್ನು ಅನೇಕ ಕಡೆ ಪ್ರದರ್ಶನ ಮಾಡಿ ತೋರಿಸಿರುವಂತೆ ವನದೇವತೆಯ ಮಡಿಲೆನಿಸಿದ ಈ ಮಧುಗಿರಿ ಎಂಬ ಸುಗ್ರಾಮದಲ್ಲಿ ಉದ್ಭವಿಸಿ ಜನತೆಯನ್ನು ಮುಗ್ಧಗೊಳಿಸಿರುತ್ತಾನೆ. ಈ ಮೂರ್ತಿಯು ಪ್ರಪಂಚಕ್ಕೆ ಸುಪ್ರಸಿದ್ದವಾದ ಕಾಶೀಲಿಂಗ ಮೂರ್ತಿಯನ್ನು ಹೋಲುತ್ತದೆ ಇಂತಹ ದಿವ್ಯ ಸುಂದರ ಉದ್ಬವ ಮೂರ್ತಿಯ ಸೃಷ್ಠಿಯನ್ನು ಜನವಾಖ್ಯಗಳಿಂದ ಆರಿವಾಗುತ್ತದೆ.       ಪ್ರಾರಂಭದಲ್ಲಿ ಈ ದೇವಸ್ಥಾನವು ಮೂರು ನಾಲ್ಕು ಬಂಡೆಗಳಿಂದ…

Read More

ಮಧುಗಿರಿ :       ನರೇಂದ್ರ ಮೋದಿಯ ಜನಪರ ಆಡಳಿತವನ್ನು ಎಲ್ಲರಿಗೂ ತಿಳಿಸುವ ಉದ್ದೇಶದಿಂದ ಈ ವಿಜಯ ಸಂಕಲ್ಪ ಯಾತ್ರೆ ಹಮ್ಮಿಕೊಂಡಿದ್ದು, ಮತ್ತೊಮ್ಮೆ ಮೋದಿ ಕೇಂದ್ರದಲ್ಲಿ ಆಡಳಿತ ನಡೆಸಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಮಧುಗಿರಿ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಎಸ್.ಇ.ರಮೇಶ್‍ರೆಡ್ಡಿ ತಿಳಿಸಿದರು.        ಪಟ್ಟಣದ ಶ್ರೀದಂಡಿನ ಮಾರಮ್ಮ ದೇಗುಲದ ಮುಂಭಾಗದಲ್ಲಿ ಬಿಜೆಪಿ ಕಾರ್ಯಕರ್ತರ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ಸಮರ್ಥವಾಗಿ ಅಭಿವೃದ್ಧಿಯಾಗುತ್ತಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮೋ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂಬ ಅದಮ್ಯ ವಿಶ್ವಾಸವಿದೆ. ಅದಕ್ಕಾಗಿ ಕ್ಷೇತ್ರದ ಕಾರ್ಯಕರ್ತರ ಮನೆ ಮನೆಗೂ ತೆರಳಿ ಕೇಂದ್ರ ಸರ್ಕಾರದ ಸಾಧನೆಗಳನ್ನು ಹಾಗೂ ಜನಪರ ಆಡಳಿತವನ್ನು ಮನದಟ್ಟು ಮಾಡಿಕೊಡಬೇಕಿದೆ. ಆಯುಶ್ಮಾನ್ ಭಾರತ್, ಫಸಲ್‍ಭೀಮಾ, ಉಜ್ವಲ್, ಕಿಸಾನ್ ಸಮ್ಮಾನ್ ಹಾಗೂ ಇತರೆ ಕೃಷಿ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ಸ್ಥಾಪಿಸಿರುವ ಜನಪರ ಯೋಜನೆಗಳನ್ನು ಪ್ರಚಾರ ಮಾಡಬೇಕಿದೆ. ಪ್ರಸ್ತುತ ರೈತರ ಖಾತೆಗೆ 6 ಸಾವಿರ ಹಣವನ್ನು ಹಾಕುವ ಕಾರ್ಯಕ್ಕೆ ಚಾಲನೆ…

Read More

  ತುಮಕೂರು :       ಬಿಜೆಪಿ ಮುಖಂಡನೊರ್ವನನ್ನು ದೂರೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಕರೆತಂದಿದ್ದಕ್ಕೆ ಗ್ರಾಮಾಂತರ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಬಿ.ಸುರೇಶ್ ಗೌಡರು ಪೊಲೀಸ್ ಠಾಣೆಯ ಮುಂದೆ ಮಲಗಿ ಪ್ರತಿಭಟನೆ ಮಾಡಿದ್ದಾರೆ.       ತಾಲೂಕು ಪಂಚಾಯ್ತಿಯ ಬಿಜೆಪಿ ಮಾಜಿ ಸದಸ್ಯ ಹನುಮಂತರಾಜು ವಿರುದ್ಧ ಜೆಡಿಎಸ್ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯ ಶಿವು ಎಂಬವರ ನಡುವೆ ಪೈಪ್ ಲೈನ್ ವಿಚಾರದಲ್ಲಿ ಗಲಾಟೆ ನಡೆದಿತ್ತು. ಆದ್ದರಿಂದ ಶಿವು ಅವರು ಹನುಮಂತರಾಜು ಅವರ ಮೇಲೆ ಕ್ಯಾತಸಂದ್ರದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಹೀಗಾಗಿ ಹನುಮಂತರಾಜು ಅವರನ್ನು ಪೊಲೀಸರು ವಿಚಾರಣೆಗಾಗಿ ಠಾಣೆಗೆ ಕರೆತಂದಿದ್ದರು.       ಈ ಹಿನ್ನಲೆಯಲ್ಲಿ ಆಕ್ರೊಶಗೊಂಡ ಬಿ.ಸುರೇಶ್ ಗೌಡರು, ತುಮಕೂರು ಗ್ರಾಮಾಂತರ ಕ್ಷೇತ್ರದ ಊರ್ಡಿಗೆರೆ ಹೋಬಳಿ ಬೆಟ್ಟಸೀತಕಲ್ಲು ಗ್ರಾಮದ ವಾಸಿಯಾದ ತಾಪಂ ಸದಸ್ಯರು ಆಗಿರುವ ಹನುಮಂತರಾಜು ದಲಿತ ಸಮುದಾಯಕ್ಕೆ ಸೇರಿರುವ ಇವರ ಮೇಲೆ ಇದೇ ಗ್ರಾಮದ ಜೆಡಿಎಸ್ ಬೆಂಬಲಿತ ಗ್ರಾಪಂ ಸದಸ್ಯ ಗೌರಿಶಂಕರ ಬೆಂಬಲಿಗನಾದ ಶಿವು ಎಂಬಾತ ಪೈಪು ಲೈನು ಕಾಮಗಾರಿ ಮಾಡುತ್ತಿದ್ದು ಕಳೆದ…

Read More

 ತುಮಕೂರು:       ಗಂಡ, ಅತ್ತೆ, ಮಾವಂದಿರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ನಗರದ ಗೋಕುಲ ಬಡಾವಣೆ ನಿವಾಸಿ ರಾಜೇಶ್ವರಿ ಹಾಗೂ ಈಕೆಯ ತಮ್ಮ ಮೋಹನ್ ಕುಮಾರ್ ಅವರಿಗೆ 6ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.       ಆರೋಪಿ ರಾಜೇಶ್ವರಿಯು ತನ್ನ ಗಂಡ ಆನಂದ, ಮಾವ ರಾಮಕೃಷ್ಣ ಹಾಗೂ ಅತ್ತೆ ನಿಂಗಮ್ಮ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವುದು ವಿಚಾರಣೆಯಿಂದ ತಿಳಿದುಬಂದಿದೆ. ಈಕೆಯು ಮನೆಯಲ್ಲಿ ಸರಿಯಾಗಿ ಕೆಲಸ ಮಾಡದೆ, ಮನೆಯವರನ್ನು ಗೌರವ ತೋರದೆ ಏಕವಚನದಲ್ಲಿ ಬೈಯುವುದು, ಗಂಡನನ್ನು ಷಂಡನನ್ನ ಮಗ ಎಂದು ಪದೇಪದೇ ಹಿಯ್ಯಾಳಿಸಿ ತವರು ಮನೆಗೆ ಹೋಗುವುದು, ತನ್ನ ತಮ್ಮ ಮೋಹನ್‍ಕುಮಾರ್‍ನೊಂದಿಗೆ ಸೇರಿ ನೀವೆಲ್ಲಾ ಇರುವುದಕ್ಕಿಂತ ಕೆರೆಗೋ-ಬಾವಿಗೋ ಬಿದ್ದು ಸಾಯಿರಿ. ವರದಕ್ಷಿಣೆ ಕೇಸು ಕೊಟ್ಟು ಜೈಲಿನಲ್ಲಿ ಕೊಳೆಯುವಂತೆ ಮಾಡುತ್ತೇನೆ ಎಂದು ಅವಮಾನ ಮಾಡಿದ್ದರಿಂದ ಕಿರುಕುಳ ತಾಳಲಾರದೆ ಆರೋಪಿಯ ಗಂಡ ಆನಂದ, ಅತ್ತೆ ನಿಂಗಮ್ಮ, ಮಾವ…

Read More

 ತುಮಕೂರು:       ಜಿಲ್ಲೆಯು ಬರಪೀಡಿತವೆಂದು ಘೋಷಣೆಯಾಗಿರುವ ಹಿನ್ನಲೆಯಲ್ಲಿ ಬೆಳೆ ನಷ್ಟದ ವಾಸ್ತವಿಕ ಪರಿಸ್ಥಿತಿಯನ್ನು ಅರಿತು 15 ದಿನಗೊಳಗಾಗಿ ಸಂಕಷ್ಟದಲ್ಲಿರುವ ಅರ್ಹ ರೈತರ ಖಾತೆಗೆ ಪರಿಹಾರಧನವನ್ನು ಜಮಾ ಮಾಡಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್ ಕೃಷಿ ಇಲಾಖೆ ಇಲಾಖೆ ಜಂಟಿ ನಿರ್ದೇಶಕ ಜಯಸ್ವಾಮಿ ಅವರಿಗೆ ತಾಕೀತು ಮಾಡಿದರು.       ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿಂದು ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ 9551 ರೈತರ ಅರ್ಜಿಗಳು ತಿರಸ್ಕೃತಗೊಂಡಿರುವ ಬಗ್ಗೆ ರಾಜ್ಯ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಬಗ್ಗೆ ಅವರು ಪ್ರಶ್ನಿಸಿದಾಗ, ಜಂಟಿ ಕೃಷಿ ನಿರ್ದೇಶಕ ಜಯಸ್ವಾಮಿ ಉತ್ತರಿಸುತ್ತಾ ಬ್ಯಾಂಕ್ ಹಾಗೂ ವಿಮಾ ಕಂಪನಿಗಳ ಲೋಪದೋಷದಿಂದ ಅರ್ಜಿಗಳು ತಿರಸ್ಕøತವಾಗಿವೆ. ಬೆಳೆ ನಷ್ಟ ಪರಿಹಾರ ಧನವನ್ನು ವಿತರಿಸಲು ಕೇಂದ್ರ ಸರ್ಕಾರದಿಂದ ಈಗಾಗಲೇ 681ಲಕ್ಷ ರೂ.ಗಳ ಹಣ ಬಿಡುಗಡೆಯಾಗಿದ್ದು, ಅರ್ಹ ಫಲಾನುಭವಿಗಳ ಖಾತೆಗೆ ತ್ವರಿತವಾಗಿ ಜಮಾ ಮಾಡಲಾಗುವುದು ಎಂದು ತಿಳಿಸಿದರು.    …

Read More