ಮಧುಗಿರಿ : ತುರ್ತು ವಾಹನ 108 ಅಂಬುಲೆನ್ಸ್‍ನ್ನು ತಾಲ್ಲೂಕಿನ ಹೋಬಳಿ ಒಂದರಂತೆ ಮಂಜೂರು ಮಾಡಿಸಿಕೊಡಬೇಕೆಂದು ಜಯಕರ್ನಾಟಕ ಮಧುಗಿರಿ ತಾಲ್ಲೂಕು ಘಟಕದ ಪದಾಧಿಕಾರಿಗಳು ಉಪವಿಭಾಗಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಮಧುಗಿರಿಯು ಉಪವಿಭಾಗ ಕೇಂದ್ರವಾಗಿದ್ದು 4 ತಾಲ್ಲೂಕುಗಳು ಒಳಪಟ್ಟಿರುವುದರಿಂದ ಇಲ್ಲಿ ಜನ ಸಂದಣಿ ದಟ್ಟವಾಗಿರುತ್ತದೆ. ಆದ ಕಾರಣ ಸರಣಿ ಅಪಘಾತಗಳು ಸಂಭವಿಸುತ್ತಿದ್ದು, ಹಾಲಿ ಈಗ ಇರುವ ಏಕೈಕ ತುರ್ತು ವಾಹನ ಕಾರ್ಯನಿರ್ವಹಿಸಲು ಕಷ್ಟಕರವಾಗಿರುತ್ತದೆ. ಆದ್ದರಿಂದ ಹೋಬಳಿಗೆ ಒಂದರಂತೆ 5 ತುರ್ತು ವಾಹನಗಳನ್ನು ಮತ್ತು ತಾಲೂಕಿಗೆ ವೈಕುಂಠ ವಾಹನವನ್ನು ಮಂಜೂರು ಮಾಡಿಸಿಕೊಡಬೇಕು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಐಸಿಯು ಮತ್ತು ಡಯಾಲಿಸಿಸ್ ಇರುವುದರಿಂದ ಸಿಬ್ಬಂದಿಕೊರತೆ ಇದೆ. ಹಾಗೂ ಚರ್ಮ ರೋಗ ತಜ್ಞರು, ನರ್ಸ್‍ಗಳ ಅವಶ್ಯಕತೆ ಮತ್ತು ಸಿಟಿ ಸ್ಕಾನಿಂಗ್ ವ್ಯವಸ್ಥೆ ಮಾಡಿಕೊಡಬೇಕು. ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆಯಿರುವುದರಿಂದ ಆಸ್ಪತ್ರೆ ಆವರಣದಲ್ಲಿ ಕೊಳವೆ ಬಾವಿ ಕೊರೆಸಿಕೊಡಬೇಕಾಗಿ ಮನವಿ ಯಲ್ಲಿ ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷ…
Author: News Desk Benkiyabale
ತುಮಕೂರು: ತಾಲ್ಲೂಕಿನ ಹೆಬ್ಬೂರು ಹೋಬಳಿ ರಾಯವಾರ ಗ್ರಾಮದ ದಲಿತ ಯುವಕನಿಗೆ ಕಿರುಕುಳ ನೀಡಿ ಆತ್ಮಹತ್ಯೆಗೆ ಕಾರಣವಾಗಿರುವ 11 ಆರೋಪಿತರನ್ನು ಬಂಧಿಸಬೇಕು, ಆರೋಪಿತರಿಗೆ ಬಿ ರಿಪೋರ್ಟ್ ನೀಡಬಾರದು ಎಂದು ಒತ್ತಾಯಿಸಿ ದಲಿತ ಸಂಘಟನೆಯ ಪದಾಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ರಾಯವಾರದ ಜಯಣ್ಣ ಎಂಬುವ ಯುವಕ ಸವರ್ಣೀಯರ ಬೆದರಿಕೆಗೆ ಹೆದರಿ, 11 ಮಂದಿಯ ಹೆಸರನ್ನು ಉಲ್ಲೇಖಿಸಿ ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಜಾತಿನಿಂದನೆ ಪ್ರಕರಣವೊಂದರಲ್ಲಿ ಆರೋಪಿತರ ಪರವಾಗಿ ಸಾಕ್ಷಿ ಹೇಳದೇ ಇದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ, ತೋಟದ ಮನೆಯಲ್ಲಿ ಕೂಡಿಹಾಕಿದ್ದು, 24-11-18ರಂದು ಸರ್ವಣೀಯರ ಬೆದರಿಕೆಗೆ ಹೆದರಿ ಜಯಣ್ಣ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆರೋಪಿತರಲ್ಲಿ ಕೆಂಪೇಗೌಡ ರೌಡಿಶೀಟರ್ ಆಗಿದ್ದು, ರಘುಕುಮಾರ್ ಎಂಬುವರ ಮೇಲೆ ಮೂರು ಜಾತಿ ನಿಂದನೆ ಪ್ರಕರಣಗಳು ದಾಖಲಾಗಿದ್ದು, ರಾಜಕೀಯ ಮತ್ತು ಹಣ ಬಲದಿಂದ ಬಿ ರಿಪೋರ್ಟ್ ಹಾಕಿಸಿಕೊಂಡಿದ್ದು, ಈ ಪ್ರಕರಣದಲ್ಲಿ ಬಿ ರಿಪೋರ್ಟ್ ಪಡೆದುಕೊಳ್ಳಲು ಪ್ರಭಾವ ಬೀರುತ್ತಿದ್ದು,…
ತುಮಕೂರು: ಪವರ್ ಗ್ರಿಡ್ ಸಂಸ್ಥೆ ಮತ್ತು ಕೂಡ್ಗಿ ಸಂಸ್ಥೆಯಿಂದ ಅನ್ಯಾಯಕ್ಕೊಳಗಾದ ಜಿಲ್ಲೆಯ ರೈತರಿಗೆ ಸೂಕ್ತ ಪರಿಹಾರವನ್ನು ಮುಂಬರುವ ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮುನ್ನ ಜಿಲ್ಲಾಧಿಕಾರಿಗಳು ಸಭೆ ಕರೆದು ರೈತರಿಗೆ ಸೂಕ್ತ ಪರಿಹಾರ ನೀಡುವ ಅನುಮೋದನೆ ನೀಡಬೇಕು ಇಲ್ಲದಿದ್ದರೆ ರೈತರು ಕುಟುಂಬ ಸಮೇತ ಸಾಮೂಹಿಕವಾಗಿ ಬಹಿಷ್ಕರಿಸಲು ತೀರ್ಮಾನಿಸಲಾಗಿದೆ ಎಂದು ಕೃಷಿಕ ಸಮಾಜ, ನವದೆಹಲಿ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್ ಕಂಚೇನಹಳ್ಳಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ನಿಯೋಗ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೃಷಿಕ ಸಮಾಜ ನವದೆಹಲಿ ಜಿಲ್ಲಾಧ್ಯಕ್ಷ ಸುರೇಶ್ ಕಂಚೇನಹಳ್ಳಿ ತುಮಕೂರು ತಾಲ್ಲೂಕಿನ ಬೆಳ್ಳಾವಿ ಮತ್ತು ಕೋರಾ ಹೋಬಳಿ, ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಕಸಬಾ ಮತ್ತು ಹುಲಿಕುಂಟೆ ಹೋಬಳಿ, ಮಧುಗಿರಿ ತಾಲ್ಲೂಕಿನ ಕಸಬಾ, ದೊಡ್ಡೇರಿ ಹೋಬಳಿ, ಕೊರಟಗೆರೆ ತಾಲ್ಲೂಕಿನ ಕೋಳಾಲ ಹೋಬಳಿಗಳಲ್ಲಿನ ರೈತರ ಜಮೀನುಗಳಲ್ಲಿ ಕೇಂದ್ರ ಸರ್ಕಾರದ ಯೋಜನೆಯಾದ ಹೈ ಟೆನ್ಷನ್ ವಿದ್ಯುತ್ ಕಂಬಗಳ ಮತ್ತು ತಂತಿ…
ಚಿಕ್ಕನಾಯಕನಹಳ್ಳಿ: ಪರಿಸರದಲ್ಲಿ ಗಿಡ ಮರಗಳನ್ನು ಬೆಳೆಯಲು ಸರ್ಕಾರ ಯತ್ತೇಚ್ಛವಾಗಿ ಹಣ ನೀಡುತ್ತಿದೆ ಇದನ್ನು ಉಪಯೋಗಿಸಿಕೊಳ್ಳುವಂತೆ ಶಾಸಕ ಜೆ.ಸಿ.ಮಾಧುಸ್ವಾಮಿ ರೈತರಿಗೆ ಸಲಹೆ ನೀಡಿದರು. ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಹಾಗೂ ಎಸ್.ಎಂ.ಎಫ್, ಎನ್.ಆರ್.ಇ.ಜಿ ಹಾಗೂ ಕೆ.ಎ.ಪಿ.ವೈ ಯೋಜನೆಯಡಿ ರೈತರಿಗೆ ಸಾರ್ವಜನಿಕರಿಗೆ ದೊರೆಯುವ ಸವಲತ್ತುಗಳು ಹಾಗೂ ಯೋಜನೆಯ ರೂಪುರೇಷೆಗಳ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿ, ಹಿಂದಿನ ನಮ್ಮ ಹಿರಿಯರು ತೋಪುಗಳು ನೆಡುತೋಪು, ಅರಣ್ಯ ಹಾಗೂ ಕೃಷಿ ಅರಣ್ಯ ಭೂಮಿಯಾಗಿ ವಿಂಗಡಿಸಿ ಮರಗಿಡಗಳನ್ನು ಬೆಳೆಸಿದ್ದರು. ಈಗ ವಿದ್ಯಾವಂತರಾಗುತ್ತಿದ್ದು, ಸ್ವಾರ್ಥ ಹೆಚ್ಚಾಗುತ್ತಿದೆ. ನಮ್ಮ ಕಣ್ಣುಮುಂದೆ ಏನು ನಡೆಯುತ್ತಿದ್ದರೂ ನಮಗೆ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿದ್ದೇವೆ. ತಂಪಿರುವ ಕಡೆ ಮಳೆಯಾಗುತ್ತಿದ್ದು, ಮಳೆ ಇರುವ ಕಡೆ ತಂಪಿದೆ ಋತುಮಾನ ಬದಲಾದಂತೆ ಮಳೆ ಕಡಿಮೆಯಾಗುತ್ತಿದೆ. ಕರ್ನಾಟಕದ 7 ರಿಂದ 8 ಜಿಲ್ಲೆಗಳ ಭೂಮಿ ಬರಡಾಗುತ್ತಿದ್ದು, ನಾವು ಎಚ್ಚೇತ್ತುಕೊಳ್ಳದೆ ಹೋದರೆ ಮರುಭೂಮಿಯಾಗುವುದರಲ್ಲಿ ಅನುಮಾನವಿಲ್ಲ ಮರಗಿಡಗಳಿಲ್ಲದೇ ಹೋದರೆ ನಾವು ಉಸಿರಾಡಲು ಅಮ್ಲಜನಕ ದೊರೆಯುವುದಿಲ್ಲ…
ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದಲ್ಲಿಂದು ನಡೆದ ವಾರ್ಷಿಕ 12ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳ ಸಾಧನೆಯನ್ನು ಕಂಡು ಪೋಷಕರು ಸಂಭ್ರಮಿಸಿದರು. ಈ ಘಟಿಕೋತ್ಸವದಲ್ಲಿ 67 ಮಂದಿಗೆ ಪಿಎಚ್‍ಡಿ, 68 ವಿದ್ಯಾರ್ಥಿಗಳಿಗೆ 89 ಚಿನ್ನದ ಪದಕ ಹಾಗೂ 9442 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಹೆಚ್ಚು ಚಿನ್ನದ ಪದಕ ಪಡೆದವರು:- ಎಂ.ಎಸ್ಸಿ ಗಣಿತಶಾಸ್ತ್ರ ವಿಭಾಗದಲ್ಲಿ ಕೆ.ಆರ್ ಕಿಶೋರ್‍ಕುಮಾರ್ 5 ಚಿನ್ನದ ಪದಕ ಹಾಗೂ ಎಂ.ಎ ಕನ್ನಡ ವಿಭಾಗದಲ್ಲಿ ಕೆ.ಎಂ. ಗೋವಿಂದರಾಜು ಅವರಿಗೆ 4 ಚಿನ್ನದ ಪದಕ ಪ್ರದಾನ ಮಾಡಲಾಗಿದೆ. ಬಿ.ಎ ಕನ್ನಡ (ಐಚ್ಛಿಕ)ವಿಭಾಗದಲ್ಲಿ ಕೆ.ಎನ್. ಪವನ, ಬಿ.ಕಾಂ ವಿಭಾಗದಲ್ಲಿ ಕೆ.ವಿ ಶ್ರೀವಲ್ಲಿ, ಬಿ.ಎಸ್ಸಿ ಗಣಿತಶಾಸ್ತ್ರ ಮತ್ತು ಭೌತಶಾಸ್ತ್ರ ವಿಭಾಗದ ಚಿರಾಗ್ ಎಸ್., ಎಂ.ಕಾಂ ವಿಭಾಗದ ಕೆ.ಎನ್. ವಸುಧ ಅವರು ತಲಾ 3 ಚಿನ್ನದ ಪದಕ ಗಳಿಸಿದ್ದಾರೆ. ಬಿ.ಎ ರಾಜ್ಯಶಾಸ್ತ್ರ ವಿಭಾಗದಲ್ಲಿ ಸಂತೋಷ್ ಜೆ.ಆರ್, ಎಂ.ಎ ಅರ್ಥಶಾಸ್ತ್ರ ವಿಭಾಗದಲ್ಲಿ ಸುರೇಖ, ಎಂ.ಎ ರಾಜ್ಯಶಾಸ್ತ್ರ ವಿಭಾಗದಲ್ಲಿ ಎಂ.ಅನುರಾಧ,…
ತುರವೇಕೆರೆ: ಸಾಂಸ್ಕೃತಿಕ ಹಾಗೂ ಸೌಂದರ್ಯ ಪ್ರಜ್ಞೆ ಇದ್ದವರು ನಮ್ಮ ದೇಶದ ಕಲೆ, ಸಂಸೃತಿ ಪ್ರೀತಿಸುತ್ತಾ ಸಮಾಜದಲ್ಲಿ ಸಾಮರಸ್ಯ ಬದುಕು ರೂಪಿಸುತ್ತಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ತಿಳಿಸಿದರು. ಪಟ್ಟಣದ ಕೆ. ಹಿರಣ್ಣಯ್ಯ ಬಯಲು ರಂಗ ಮಂದಿರ ಆವರಣದಲ್ಲಿ ಸೋಮವಾರ ಸಂಜೆ ಸಂಗಮ ಸಾಂಸ್ಕೃತಿಕ ಟ್ರಸ್ಟ್, ಆಳ್ವಾಸ್ ಶಿಕ್ಷಣ ಪ್ರತಿಷ್ಟಾನ, ರೊಟರಿ ಕ್ಲಬ್ ತುರುವೇಕೆರೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮೂಡಬಿದರೆ ಆಳ್ವಾಸ್ ಸಂಸ್ಥೆಯು ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರಾಜ ಮಹಾರಾಜರ ಕಾಲದಲ್ಲಿ ತಮ್ಮ ನಾಡಿನ ಕಲೆ, ಸಂಸೃತಿಯನ್ನು ಹೆಚ್ಚು ಪ್ರೋತ್ಸಾಹಿಸಿ ಬೆಳಸುತ್ತಿದ್ದರು. ಈಗ ಸರ್ಕಾರಗಳು ಸಹ ನಮ್ಮ ಕಲೆ ಸಂಸೃತಿಗಳನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕಿದೆ. ನಮ್ಮ ಆಳ್ವಾಸ್ ನುಡಿ ಸಿರಿ ಕಾರ್ಯಕ್ರಮಗಳು ಜನರಲ್ಲಿ ಸಾಂಸ್ಕೃತಿಕ ಪ್ರಜ್ಞೆಯನ್ನು ಮೂಡಿಸುವುದರ ಜೊತೆಗೆ, ಮನಸ್ಸನ್ನು ಕಟ್ಟಲು ಸಹಕಾರಿಯಾಗಿವೆ. ನಾವಿಂದು…
ತುಮಕೂರು: ತುಮಕೂರು ಗ್ರಾಮಾಂತರ ಶಾಸಕರಾದ ಡಿ.ಸಿ.ಗೌರಿಶಂಕರ್ ರವರಿಗೆ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ ಅಧ್ಯಕ್ಷರಾಗಿ ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರವರು ಆದೇಶಿಸಿರುತ್ತಾರೆ. ತುಮಕೂರು ಗ್ರಾಮಾಂತರ ಕ್ಷೇತ್ರದ ಅಭಿವೃದ್ಧಿಯ ಹೊಣೆ ಹೊತ್ತಿದ್ದ ಶಾಸಕ ಗೌರಿಶಂಕರ್ ರವರಿಗೆ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನದ ಹೆಚ್ಚಿನ ಹೊಣೆಗಾರಿಕೆಯನ್ನ ಹೊರಿಸುವುದರ ಮುಖೇನ ಕರ್ನಾಟಕ ರಾಜ್ಯವ್ಯಾಪಿ ಇರುವ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ (ಎಂಎಸ್‍ಐಎಲ್) ಅಭಿವೃದ್ಧಿಯ ಹೆಚ್ಚಿನ ಜವಾಬ್ಧಾರಿಯನ್ನ ನೀಡಿರುವುದರಿಂದ ಸಮರ್ಥವಾಗಿ ನಿಭಾಯಿಸುವ ಸಾಮಥ್ರ್ಯ ನಮ್ಮ ಶಾಸಕರಿಗಿದೆ ಎಂದು ಅವರ ಅಭಿಮಾನಿ ವರ್ಗ ಸಂಭ್ರಮಾಚರಣೆ ಮಾಡಿದರು.
ಜೈಪುರ: ಈ ದೇಶಕ್ಕಿಂತಲೂ ಮುಖ್ಯವಾದದ್ದು ನನಗೆ ಬೇರೇನೂ ಇಲ್ಲ. ಈ ಮಣ್ಣಿನ ಆಣೆ ನಾನು ದೇಶವನ್ನು ತಲೆಬಾಗಲು ಬಿಡುವುದಿಲ್ಲ ದೇಶದ ಸುರಕ್ಷತೆ ದೃಷ್ಟಿಯಿಂದ ಉಗ್ರ ನಿಗ್ರಹಕ್ಕೆ ಬದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ಪುನರುಚ್ಚರಿಸಿದ್ದಾರೆ. ರಾಜಸ್ಥಾನದ ಚುರುವಿನಲ್ಲಿ ಸಮಾವೇಶದಲ್ಲಿ ಮಾತನಾಡಿದ ಅವರು, ವೈಮಾನಿಕ ದಾಳಿಯ ನಂತರ ಮೊದಲ ಬಾರಿಗೆ ಆ ಬಗ್ಗೆ ಪ್ರತಿಕ್ರಿಯಿಸಿದರು. ಭಾರತ ಅತ್ಯಂತ ಸುರಕ್ಷಿತ ಕೈಗಳಲ್ಲಿದೆ ಎಂದು ದೇಶಕ್ಕೆ ಮತ್ತೊಮ್ಮೆ ಭರವಸೆ ನೀಡಲು ಬಯಸುತ್ತೇನೆ. ಪಾಕಿಸ್ತಾನದ ಬಾಳಾಕೋಟ್ ಮೇಲಿನ ವೈಮಾನಿಕ ದಾಳಿ ನಡೆಸಿ, ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿದ ಧೀರ ಯೋಧರೆಲ್ಲರನ್ನೂ ಅಭಿನಂದಿಸಲು ಬಯಸುತ್ತೇನೆ ಎಂದು ಹೇಳಿದರು. ಯಾವುದೇ ಕಾರಣಕ್ಕೂ ದೇಶದ ಗೌರವಕ್ಕೆ ಧಕ್ಕೆ ಒದಗದಂತೆ ನೋಡಿಕೊಳ್ಳುತ್ತೇನೆ. 2014ರಲ್ಲಿ ನಾನು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವಾಗ ಈ ಕುರಿತು ಹೇಳಿದ ಮಾತಿಗೆ ನಾನು ಈಗಲೂ ಬದ್ಧ ಎಂದರು. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರನೊಬ್ಬನ ದಾಳಿಯಲ್ಲಿ ಸಿಆರ್ಪಿಎಫ್ನ 40…
ಕೊಡಿಗೇನಹಳ್ಳಿ : ಸರಕಾರಿ ಯೋಜನೆಗಳ ಬಗ್ಗೆ ಪಂಚಾಯತಿ ಅಧಿಕಾರಿಗಳು ಸಭೆ ಕರೆಯುತ್ತಾರೆ ಮಾಹಿತಿ ನೀಡುತ್ತಾರೆ ಎಂದು ಕಾದು ಕುಳಿತಿದ್ದ ಸಾರ್ವಜನಿಕರಿಗೆ ಗ್ರಾಪಂ ಅಧಿಕಾರಿಗಳು ಗುಪ್ತವಾಗಿ ಸಭೆ ಕರೆದು ಬಸವ ವಸತಿ ಯೋಜನೆ ಮನೆಗಳು ವಂಚಿಸಲು ಯತ್ನಿಸಿದ ಘಟನೆ ವರದಿಯಾಗಿದೆ. ಕೊಡಿಗೇನಹಳ್ಳಿ ಗ್ರಾಪಂ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ 2018-19 ನೇ ಸಾಲಿನ ಬಸವ ವಸತಿ ಯೋಜನೆಯ ಫಲಾನುಭವಿಗಳ ಗ್ರಾಮ ಸಭೆಯನ್ನು ಮಂಗಳವಾರ ಆಯೋಜಸಿಲಾಗಿತ್ತು. ಸಭೆಯ ಬಗ್ಗೆ ಟಾಂಟಾಂ ಹಾಕಿಸದರೆ ಸಾರ್ವಜನಿಕರಿಗೆ ಯಾವುದೆ ಮಾಹಿತಿ ನೀಡದೆ ಗುಪ್ತವಾಗಿ ಸಭೆಯನ್ನು ಆಯೋಜಸಿಲಾಗಿತ್ತು. ಈ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳನ್ನು ಪ್ರಶ್ನಿಸಿದಾಗ ಗ್ರಾಪಂ ಅಧಿಕಾರಿಗಳು ಹಾರೈಕೆ ಉತ್ತರ ನೀಡಿ ಮೌನಕ್ಕೆ ಶರಣಾದರು. ವಸತಿ ಯೋಜನೆಗಳಿಗೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡದೆ ಗುಪ್ತವಾಗಿ ಸಭೆಯನ್ನು ಆಯೋಜನೆ ಮಾಡಿದ್ದು ಇದು ಅರ್ಹ ಫಲಾನವಿಗಳನ್ನು ವಂಚಿಸುತ್ತಿದ್ದಾರೆ ಎಂದು ಸಾರ್ವಜನಿರಕು ಆಕ್ರೋಶ ವ್ಯಕ್ತಪಡಿಸಿದರು, ಈ ಸಂದರ್ಭದಲ್ಲಿ ಕೆಲ ಕಾಂಗ್ರೇಸ್ ಹಾಗೂ ಜೆಡಿಎಸ್ ಕಾರ್ಯಕರ್ತರ…
ತುಮಕೂರು: ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ನಗರದಲ್ಲಿ ವಿವಿಧ ಕಡೆ ಕೈಗೆತ್ತಿಕೊಂಡಿರುವ 134 ಕೋಟಿ ರೂ. ವೆಚ್ಚದ 3 ಸ್ಮಾರ್ಟ್ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಸಂಸದ ಎಸ್.ಪಿ. ಮುದ್ದಹನುಮೇಗೌಡ ಅವರು ಇಂದು ಭೂಮಿ ಪೂಜೆ ನೆರವೇರಿಸಿದರು. ನಗರದ ಸುಮಾರು 14 ಕಿ.ಮೀ. ಉದ್ದದ ಪ್ರಮುಖ ರಸ್ತೆಗಳನ್ನು 191.10 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್ ರಸ್ತೆಗಳನ್ನಾಗಿ ಪರಿವರ್ತಿಸುವ ಕಾಮಗಾರಿಯಡಿ ಈ 3 ರಸ್ತೆಗಳ ನಿರ್ಮಾಣ ಕೈಗೊಳ್ಳಲಾಗಿದ್ದು, 47.74ಕೋಟಿ ರೂ. ವೆಚ್ಚದ ಸ್ಮಾರ್ಟ್ ರಸ್ತೆಯನ್ನು ಡಾ: ಶಿವಕುಮಾರ ಸ್ವಾಮೀಜಿ ವೃತ್ತ, 49.87 ಕೋಟಿ ರೂ. ವೆಚ್ಚದ ರಸ್ತೆಯನ್ನು ಡಾ: ರಾಧಾಕೃಷ್ಣ ರಸ್ತೆ ಹಾಗೂ 36.88 ಕೋಟಿ ರೂ. ವೆಚ್ಚದ ಸ್ಮಾರ್ಟ್ ರಸ್ತೆಯನ್ನು ಭಗವಾನ್ ಮಹಾವೀರರಸ್ತೆಯಲ್ಲಿ ಅವರು ಇಂದು ಭೂಮಿಪೂಜೆ ನೆರವೇರಿಸಿದರು. ಸ್ಮಾರ್ಟ್ ರಸ್ತೆ ವಿಶೇಷ ಪ್ಯಾಕೇಜ್‍ನಡಿ ಹಂತ ಹಂತವಾಗಿ ಉತ್ತಮವಾದ ಪಾದಚಾರಿ ಮಾರ್ಗ, ಪ್ರತ್ಯೇಕ ಬೈಸಿಕಲ್ ಟ್ರ್ಯಾಕ್, ಅಂಡರ್‍ಗ್ರೌಂಡ್ ಡಕ್ಟಿಂಗ್, ಬಹುಕ್ರಿಯಾತ್ಮಕ ವಲಯ, ಹಸಿರು ವಲಯ…