ತುಮಕೂರು: ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿನಿಂದ ಪಿ-84 ವ್ಯಕ್ತಿಯು ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಪಿ-84ರ ಸಂಪರ್ಕದಲ್ಲಿದ್ದವರ ಮಾದರಿಯನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಎಲ್ಲಾ ಮಾದರಿಗಳು ನೆಗೆಟಿವ್ ಬಂದಿವೆ. ಆದ್ದರಿಂದ ಶಿರಾ ತಾಲೂಕಿನಲ್ಲಿ ಕಂಟೈನ್ಮೆಂಟ್ ವಲಯವನ್ನು ತೆರೆವುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್ ಕುಮಾರ್ ಅವರು ತಿಳಿಸಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 7 ಪ್ರಕರಣಗಳು ಕಂಡು ಬಂದಿವೆ. ಈ ಪೈಕಿ ಇಬ್ಬರು ಮರಣ ಹೊಂದಿದ್ದು, ಒಬ್ಬರು ಗುಣಮುಖರಾಗಿದ್ದಾರೆ, ಉಳಿದ ನಾಲ್ಕು ಮಂದಿಯನ್ನು ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು. ತುಮಕೂರು ಜಿಲ್ಲೆ ಆರೇಂಜ್ ವಲಯದಲ್ಲಿದ್ದು, ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಾದ್ಯಂತ ಎಲ್ಲಾ ರೀತಿಯ ಮಳಿಗೆಗಳನ್ನು ತೆರೆದು ಕಾರ್ಯಚಟುವಟಿಕೆಗಳನ್ನು ಪ್ರಾರಂಭಿಸಲು ಅವಕಾಶ ನೀಡಿದ್ದು, ಶಿರಾದಲ್ಲೂ ಕೂಡ ಎಲ್ಲಾ ಅಂಗಡಿ ಮಳಿಗೆಗಳನ್ನು ತೆರೆಯುವಂತೆ ಅವಕಾಶ ಮಾಡಿಕೊಡುತ್ತೇವೆ. ತುಮಕೂರು ಜಿಲ್ಲೆಯಲ್ಲಿ 3 ಕಂಟೈನ್ಮೆಂಟ್ ವಲಯಗಳಾಗಿ ವಿಂಗಡಿಸಲಾಗಿದೆ. ಆದ್ದರಿಂದ ವೈನ್ ಶಾಪ್‍ಗಳನ್ನು ತೆರೆಯದಂತೆ ನಿರ್ದೇಶನ ನೀಡಲಾಗಿದೆ…
Author: News Desk Benkiyabale
ತುಮಕೂರು: ಲಾಕ್‍ಡೌನ್‍ನಿಂದ ಕಳೆದ ಒಂದೂವರೆ ತಿಂಗಳಿನಿಂದ ನಿರಂತರವಾಗಿ ನಗರದಲ್ಲಿ ಉಚಿತ ದಾಸೋಹ ನಡೆಸುತ್ತಿರುವ ಆರ್.ಆರ್.ಅಭಿಮಾನಿ ಬಳಗ ಹಾಗೂ ಯುವ ಕಾಂಗ್ರೆಸ್ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೋನ ವಂಸಿಕೃಷ್ಣ ಮೆಚ್ಚುಗೆ ವ್ಯಕ್ತಪಡಿಸಿದರು. ನಗರದ ಮರಳೂರು ರಸ್ತೆಯ ಎಸ್‍ಎಸ್‍ಐಟಿ ಮುಂಭಾಗದಲ್ಲಿರುವ ಬೀರೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಉಚಿತ ದಾಸೋಹ ಕಾರ್ಯವನ್ನು ಬುಧವಾರ ವೀಕ್ಷಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಲ್ಲಿ ಆಹಾರ ಉತ್ತಮ ಗುಣಮಟ್ಟದಿಂದ ಕೂಡಿದ್ದು, ಆಹಾರ ತಯಾರಿಸುವವರಿಂದ ಹಿಡಿದು ಪ್ಯಾಕ್ ಮಾಡುವವರೆಗೂ ಸ್ವಚ್ಚತೆ ಹಾಗೂ ಗುಣಮಟ್ಟವನ್ನು ಕಾಯ್ದುಕೊಂಡು ಮಾಸ್ಕ್, ಹ್ಯಾಂಡ್ ಗ್ಲೌಸ್, ಸ್ಯಾನಿಟೈಸರ್ ಸೇರಿದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಸಂಘಟಿತರಾಗಿ ಆಹಾರ ಸಿದ್ಧಪಡಿಸುತ್ತಿದ್ದಾರೆ ಎಂದು ಶ್ಲಾಘಿಸಿದರು. ಲಾಕ್‍ಡೌನ್‍ನಿಂದ ನಗರದಲ್ಲಿ ಪೊಲೀಸರಿಗಷ್ಟೇ ಅಲ್ಲದೆ, ವೈದ್ಯಕೀಯ ಸಿಬ್ಬಂದಿ, ಹೋಂಗಾಡ್ರ್ಸ್ ಸಿಬ್ಬಂದಿ, ಕೂಲಿ ಕಾರ್ಮಿಕರು, ಬಡವರು, ನಿರ್ಗತಿಕರಿಗೆ ಹಾಗೂ ಸಾರ್ವಜನಿಕರಿಗೆ ಉಚಿತ ದಾಸೋಹ ಮಾಡುತ್ತಿದ್ದಾರೆ. ಆರ್.ಆರ್.…
ತುಮಕೂರು: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ದುರಸ್ಥಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಕೂಡಲೇ ಸರಿಪಡಿಸುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ಎಂ. ರವಿಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ಗ್ರಾಮೀಣ ಕುಡಿಯುವ ನೀರು ಸರಬರಾಜು ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್‍ಗಳ ಮೂಲಕ ನೀರು ಸರಬರಾಜು ಮಾಡಿ, ಖಾಸಗಿ ಬೋರ್‍ವೆಲ್‍ಗಳಿಂದ ನೀರು ಪೂರೈಸಲು ಅವಕಾಶ ಕಲ್ಪಿಸಲಾಗಿದ್ದು, ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದರು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್ ಅವರು ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದುರಸ್ಥಿಯಲ್ಲಿರುವ ಆರ್.ಓ ಪ್ಲಾಂಟ್‍ಗಳನ್ನು ಪಟ್ಟಿ ಮಾಡಿ, ದುರಸ್ಥಿಯಾಗಿರುವ ಘಟಕದಲ್ಲಿ ದುರಸ್ಥಿಯಲ್ಲಿದೆ ಎಂದು ಬೋರ್ಡ್ ಹಾಕಬೇಕು. ಅಲ್ಲದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶುದ್ಧ ನೀರಿನ ಘಟಕಗಳಲ್ಲಿ ಕಾರ್ಯನಿರ್ವಹಿಸುವ ವಾಟರ್ ಮ್ಯಾನ್‍ಗಳಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಘಟಕ ನಿರ್ವಹಿಸುವ…
ತುಮಕೂರು: ಲಾಕ್‍ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೇ ಉಳಿದುಕೊಂಡಿದ್ದ ರಾಜ್ಯದ ವಿವಿಧ ಜಿಲ್ಲೆಗಳ 765 ವಲಸೆ ಕಾರ್ಮಿಕರು ತಮ್ಮ ಊರಿಗೆ ಪ್ರಯಾಣ ಬೆಳೆಸಲು ಒಟ್ಟು 24 ಬಸ್‍ಗಳ ವ್ಯವಸ್ಥೆ ಮಾಡಲಾಗಿತ್ತು ಎಂದು ಕ.ರಾ.ರ.ಸಾ.ನಿ.ದ ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರ ಕುಮಾರ್ ತಿಳಿಸಿದ್ದಾರೆ. ತುಮಕೂರು ನಗರದ ಬಸ್ ನಿಲ್ದಾಣದಿಂದ ಮುದ್ದೇಬಿಹಾಳ್, ರಾಯಚೂರು, ಶಿವಮೊಗ್ಗ, ಹಾವೇರಿ, ಕಲ್ಬುರ್ಗಿ, ಬಾಗಲಕೋಟೆ, ಹುಬ್ಬಳ್ಳಿ, ಬೆಂಗಳೂರು, ಯಾದಗಿರಿ, ರಾಯಚೂರು-ಬಳ್ಳಾರಿ, ಹಾಸನ-ಶಿವಮೊಗ್ಗ, ಯಾದಗಿರಿ-ಕಲ್ಬುರ್ಗಿ ಜಿಲ್ಲೆಗಳಿಗೆ ಒಟ್ಟು 13 ಬಸ್‍ಗಳಲ್ಲಿ 438 ಕಾರ್ಮಿಕರು ಪ್ರಯಾಣ ಮಾಡಿದರು. ಗುಬ್ಬಿ ಬಸ್ ನಿಲ್ದಾಣದಿಂದ ಕಲ್ಬುರ್ಗಿ ಜಿಲ್ಲೆಗೆ 30; ಕುಣಿಗಲ್‍ನಿಂದ ಕರಟಗಿ ಹಾಗೂ ಬಾಗಲಕೋಟೆ-ವಿಜಾಪುರ ಜಿಲ್ಲೆಗಳಿಗೆ ಒಟ್ಟು 73; ಮಧುಗಿರಿಯಿಂದ ತುಮಕೂರಿಗೆ 22; ಚಿಕ್ಕನಾಯಕನಹಳ್ಳಿಯಿಂದ ಬೆಂಗಳೂರು ಹಾಗೂ ವಿಜಾಪುರಕ್ಕೆ 91; ತುರುವೇಕೆರೆ ಬಸ್‍ನಿಲ್ದಾಣದಿಂದ ಬೆಂಗಳೂರು, ರಾಯಚೂರು ಹಾಗೂ ವಿಜಾಪುರಕ್ಕೆ 111 ಪ್ರಯಾಣಿಕರು ತಮ್ಮ ಊರಿಗೆ ಸೇರಲು ಒಟ್ಟು 11 ಬಸ್‍ಗಳ ವ್ಯವಸ್ಥೆ ಮಾಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ತುಮಕೂರು: ಲಾಕ್‍ಡೌನ್ ಹಿನ್ನಲೆಯಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಕೂಲಿಕಾರ್ಮಿಕರಿಗೆ, ನಿರ್ಗತಿಕರಿಗೆ, ಪೊಲೀಸ್ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ, ಹೋಂಗಾಡ್ರ್ಸ್‍ಗಳಿಗೆ ನಿರಂತರವಾಗಿ ಆಹಾರ ವಿತರಿಸುತ್ತಿರುವ ಆರ್. ರಾಜೇಂದ್ರ ನೇತೃತ್ವದ ಆರ್.ಆರ್. ಅಭಿಮಾನಿ ಬಳಗವು ಮಂಗಳವಾರ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ವಲಸೆ ಕಾರ್ಮಿಕರಿಗೆ ಆಹಾರ, ಮಕ್ಕಳಿಗೆ ಬಿಸ್ಕೆಟ್ ಮತ್ತು ನೀರು ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ಪ್ರಯಾಣಿಕರಿಗೆ ಉಚಿತ ಊಟದ ಪಾಕೆಟ್ ಮತ್ತು ಕುಡಿಯುವ ನೀರನ್ನು ವಿತರಿಸಿ ಮಾತನಾಡಿದ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆರ್.ರಾಜೇಂದ್ರ, ಕೋವಿಡ್-19 ಲಾಕ್‍ಡೌನ್ ಆದಾಗಿನಿಂದ ಯುವ ಕಾಂಗ್ರೆಸ್ ವತಿಯಿಂದ ನಗರದಲ್ಲಿ ನಿರಂತರವಾಗಿ ಬೆಳಿಗ್ಗೆ ತಿಂಡಿ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಮಾಡಿಕೊಂಡು ಬರಲಾಗುತ್ತಿದೆ. ನಿನ್ನೆಯಿಂದ ನಗರದ ಕೆಎಸ್ ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ವಲಸೆ ಕಾರ್ಮಿಕರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದರು. ಕೂಲಿಕಾರ್ಮಿಕರು ಅವರ ಸ್ವಂತ ಊರಿಗೆ ತೆರಳಲು ಬಹಳ ಕಷ್ಟವಾಗಿರುವಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕಳೆದ…
ಕೊರಟಗೆರೆ: ಕೋರಾ ಮತ್ತು ಪುರವಾರ ಜಿಪಂ ಕ್ಷೇತ್ರಕ್ಕೆ ಸರಕಾರದ ಆದೇಶದಂತೆ ಅನುಧಾನ ಹಂಚಿಕೆ ಮಾಡಿ.. ನೀವೇನು ನನ್ನ ಕೊರಟಗೆರೆ ಕ್ಷೇತ್ರಕ್ಕೆ ಏನು ದಾನ ಕೋಡಬೇಡಿ.. ಟಾಸ್ಕ್‍ಪೂರ್ಸ್ ಸಮಿತಿಯಿಂದ ನನ್ನ ಕೈಬಿಟ್ಟಿರುವ ಹಿಂದಿರುವ ಉದ್ದೇಶವೇನು ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ತುಮಕೂರು ಗ್ರಾಮಾಂತರ ಮತ್ತು ಮಧುಗಿರಿ ತಹಶೀಲ್ದಾರ್, ಇಓ ವಿರುದ್ದ ಕಿಡಿಕಾರಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ತುಮಕೂರು ಗ್ರಾಮಾಂತರ, ಕೊರಟಗೆರೆ ಹಾಗೂ ಮಧುಗಿರಿ ತಾಲೂಕು ಮಟ್ಟದ ಅಧಿಕಾರಿಗಳ ಕೋವಿದ್-19 ಮತ್ತು ಕುಡಿಯುವ ನೀರು ಪೂರೈಕೆಯ ತುರ್ತುಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು. ತುಮಕೂರು ಗ್ರಾಮಾಂತರ, ಕೊರಟಗೆರೆ ಮತ್ತು ಮಧುಗಿರಿ ತಾಲೂಕು ಬರಪೀಡಿತವೆಂದು ಸರಕಾರ ಘೋಷಣೆ ಮಾಡಿ ಪ್ರತಿ ತಾಲೂಕಿಗೆ 1ಕೋಟಿ ಅನುಧಾನ ಬಿಡುಗಡೆ ಮಾಡಿದೆ. ತುಮಕೂರು ಗ್ರಾಮಾಂತರದ ಕೋರಾ ಮತ್ತು ಮಧುಗಿರಿಯ ಪುರವಾರದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಕೊರಟಗೆರೆ ಕ್ಷೇತ್ರದಲ್ಲಿನ ಕುಡಿಯುವ ನೀರಿನ ಸಮಸ್ಯೆ ಮತ್ತು ಟಾಸ್ಕ್‍ಪೂರ್ಸ್ ಕಮಿಟಿಯ…
ಚಿಕ್ಕನಾಯಕನಹಳ್ಳಿ: ಲಾಕ್ಡೌನ್ ಹಿನ್ನಲೆಯಲ್ಲಿ ನೆನೆಗುದಿಗೆ ಬಿದ್ದಿದ್ದ ಮುಖ್ಯಕಾಮಗಾರಿಗಳಿಗೆ ಚಾಲನೆ ದೊರೆಯುತ್ತಿದೆ ಆದರೆ ಈ ಕೆಲಸಗಳಿಗೆ ಹೊರಗಿನ ಕೂಲಿಕಾರ್ಮಿಕರು ಬರುತ್ತಿದ್ದು ಸುರಕ್ಷತೆಯ ಕೆಲ ನಿಯಮಗಳು ಪಾಲನೆಯಾಗದಿರುವುದು ಆತಂಕಕ್ಕೆಡೆ ಮಾಡಿಕೊಟ್ಟಿದೆ. ಕಾಮಗಾರಿಗೆ ಗ್ರೀನ್ ಸಿಗ್ನಲ್: ಕೊರೊನಾ ಸೋಂಕಿನ ಮಹಾಮಾರಿಯಿಂದ ತಪ್ಪಿಸಿಕೊಳ್ಳಲು ಇದೇ ಮೊದಲಬಾರಿಗೆ ಲಾಕ್‍ಡೌನ್ ಆದ ಪರಿಣಾಮ ದೇಶದಲ್ಲಿ ಕೊರೊನಾ ಹರಡುವಿಕೆಗೆ ಕಡಿವಾಣ ಬಿದ್ದಿದ್ದು ಈಗ ಲಾಕ್‍ಡೌನ್ ಸಡಿಲಿಕೆಯಾಗಿದೆ. ಕಾರ್ಮಿಕರ ನೆರವಿನಿಂದ ನಡೆಯುವ ಕಾಮಗಾರಿಗಳನ್ನು ಆರಂಭಿಸಲು À ಸರ್ಕಾರ ಕೆಲವು ಶರತ್ತುಬದ್ದದನ್ವಯ ನಡೆಸಲು ಸೂಚಿಸಿದೆ. ಅದರಂತೆ ತಾಲ್ಲೂಕಿನಲ್ಲಿ ಈಗಾಗಲೇ ಇದಕ್ಕೆ ಚಾಲನೆ ನೀಡಲಾಗಿದೆ ಪಟ್ಟಣದ ಮುಲಕ ಹಾದುಹೋಗುವು ರಾಷ್ಟ್ರಿಯ ಹೆದ್ದಾರಿ ಕಾಮಗಾರಿ ಆರಂಭಗೊಂಡಿದ್ದು ಎತ್ತಿನಹೊಳೆ, ಹೇಮಾವತಿಯ ನಾಲಾ ಕಾಮಗಾರಿಗಳು ಇನ್ನೇನು ಆರಂಭಗೊಳ್ಳಲಿದೆ. ಸುರಕ್ಷತಾ ಕ್ರಮಕ್ಕೆ ತಿಲಾಂಜಲಿ: ಈ ನಡುವೆ ಹೆದ್ದಾರಿ ಕಾಮಗಾರಿ ಆರಂಭಕ್ಕಾಗಿ ಹೊರ ಪ್ರದೇಶದಿಂದ ಸುಮಾರು 34 ಮಂದಿ ಆಗಮಿಸಿದ್ದಾರೆ. ಇಂತಹ ಕಾರ್ಮಿಕರು ಉಳಿದುಕೊಳ್ಳಲು ಗ್ಯಾರೆಹಳ್ಳಿ,…
ತುಮಕೂರು: ತುಮಕೂರು ಜಿಲ್ಲೆಯಲ್ಲಿ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರನ್ನು ತಮ್ಮ ತಮ್ಮ ಊರುಗಳಿಗೆ ಉಚಿತವಾಗಿ ಕರೆದೊಯ್ಯುವ ಕೆಸ್ಸಾರ್ಟಿಸಿ ಬ ಸ್ಸುಗಳಿಗೆ ತುಮಕೂರು ನಗರದ ಶಾಸಕರಾದ ಜಿ.ಬಿ ಜ್ಯೋತಿಗಣೇಶ್ ಅವರು ನಗರದ ಕೆಸ್ಸಾರ್ಟಿಸಿ ಬಸ್ಸು ನಿಲ್ದಾಣದಿಂದ ಹಸಿರು ನಿಶಾನೆ ತೋರಿದರು. ಅನಂತರ ಮಾತನಾಡಿದ ಅವರು, ವಲಸೆ ಕಾರ್ಮಿಕರಿಗೆ ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ಕರ್ನಾಟಕ ಸರ್ಕಾರ, ಕೆ.ಎಸ್.ಆರ್.ಟಿ.ಸಿ ಮತ್ತು ಜಿಲ್ಲಾಡಳಿತ ವತಿಯಿಂದ ಇವತ್ತು ಮತ್ತು ನಾಳೆ ತಮ್ಮ ತಮ್ಮ ಊರುಗಳಿಗೆ ಹೋಗಲು ಉಚಿತ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ. ಆರೋಗ್ಯ ಇಲಾಖೆಯಿಂದಲೂ ಸಹ ಆರೋಗ್ಯ ತಪಾಸಣೆಯನ್ನು ಮಾಡಲಾಗುತ್ತಿದೆ. ಎಷ್ಟು ಜನ ಬಂದರೂ ಕೂಡ ಕರೆದುಕೊಂಡು ಹೋಗುವ ವವ್ಯಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ ಎಂದರು. ವಿಭಾಗ ನಿಯಂತ್ರಣಾಧಿಕಾರಿ ಗಜೇಂದ್ರ ಕುಮಾರ್ ಮಾತನಾಡಿ ಜಿಲ್ಲಾಡಳಿತ ವತಿಯಿಂದ ತುಮಕೂರು ನಗರದಲ್ಲಿ ಉಳಿದು ಕೊಂಡಿರುವ ಮುದ್ದೆಬಿಹಾಳ, ಗುಲ್ಬರ್ಗ, ರಾಯಚೂರು, ಶಿವಮೊಗ್ಗ, ಹಾವೇರಿ, ಹುಬ್ಬಳ್ಳಿ ಹೀಗೆ ನಾನಾ ಕಡೆಯ ವಲಸೆ ಕಾರ್ಮಿಕರನ್ನು…
ತುಮಕೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು 2019-20ನೇ ಶೈಕ್ಷಣಿಕ ಸಾಲಿನಲ್ಲಿ (ಜುಲೈ ಮತ್ತು ಜನವರಿ ಆವೃತ್ತಿಯಲ್ಲಿ) ಪ್ರವೇಶಾತಿ ಪಡೆದಿದ್ದ ಪ್ರಥಮ ಮತ್ತು ದ್ವಿತೀಯ ಬಿ.ಎ/ಬಿ.ಕಾಂ ವಿದ್ಯಾರ್ಥಿಗಳಿಗೆ ಆನ್‍ಲೈನ್ ಮೂಲಕ ಸಂಪರ್ಕ ತರಗತಿಗಳು ಪ್ರಾರಂಭವಾಗಿವೆ ಎಂದು ಪ್ರಾದೇಶಿಕ ನಿರ್ದೇಶಕ ದಿಲೀಪ ಡಿ. ಅವರು ತಿಳಿಸಿದ್ದಾರೆ. ವೇಳಾಪಟ್ಟಿಯನ್ನು ಈಗಾಗಲೇ www.ksoumyuru.ac.in ನಲ್ಲಿ ಅಪ್‍ಲೋಡ್ ಮಾಡಲಾಗಿದ್ದು, ವಿದ್ಯಾರ್ಥಿಗಳು ಞsousಣuಜeಟಿಣ ಂಠಿಠಿ ಅನ್ನು ಡೌನ್‍ಲೋಡ್ ಮಾಡಿಕೊಳ್ಳುವ ಮೂಲಕ ಆನ್‍ಲೈನ್ ಸಂಪರ್ಕ ಕಾರ್ಯಕ್ರಮಕ್ಕೆ ಲೈವ್ ಆಗಿ ಸೇರಿಕೊಳ್ಳಬಹುದಾಗಿದೆ. www.ksoumyuru.ac.in ವೆಬ್‍ಸೈಟ್‍ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ. ವಿದ್ಯಾರ್ಥಿಗಳು ಆನ್‍ಲೈನ್ ಸಂಪರ್ಕ ತರಗತಿಗಳ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಪ್ರಾದೇಶಿಕ ಕೇಂದ್ರ, ಸಿ.ಎ-07, ಟೂಡಾ ಲೇಔಟ್, ಮೇಳೆಕೋಟೆ-ವೀರಸಾಗರೆ, ತುಮಕೂರು-572105 ಅಥವಾ ದೂರವಾಣಿ ಸಂಖ್ಯೆ: 9108808219 ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ತುಮಕೂರು: ಜಿಲ್ಲೆಯಲ್ಲಿ ನೈಸರ್ಗಿಕ ನೀರಿನ ಮೂಲಗಳಾದ ಹಳ್ಳ, ಕೆರೆಗಳನ್ನು ಪುನಶ್ಚೇತನಗೊಳಿಸುವುದರಿಂದ ಅಂತರ್ಜಲ ಸಾಮಥ್ರ್ಯ ವೃದ್ಧಿಯಾಗುತ್ತದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ ತಿಳಿಸಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ಅಂತರ್ಜಲ ಚೇತನ ಯೋಜನೆ ಅನುಷ್ಠಾನ ಕುರಿತು ಎಲ್ಲಾ ತಾಲ್ಲೂಕುಗಳ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಕಾರ್ಯಪಾಲಕ ಅಭಿಯಂತರರು, ಸಹಾಯಕ ನಿರ್ದೇಶಕರು(ಗ್ರಾ.ಉ.)ಗಳು, ಎಂ.ಐ.ಎಸ್. ಸಂಯೋಜಕರು, ತಾಂತ್ರಿಕ ಸಂಯೋಜಕರು, ತಾಂತ್ರಿಕ ಸಹಾಯಕ ಇಂಜಿನಿಯರುಗಳಿಗಾಗಿ ಏರ್ಪಡಿಸಿದ್ದ ತರಬೇತಿಯನ್ನುದ್ದೇಶಿಸಿ ಅವರು ಮಾತನಾಡುತ್ತಾ, ನೀರಿನ ಮೂಲಗಳಲ್ಲಿ ಮಣ್ಣಿನ ಸವಕಳಿ ಹಾಗೂ ಹೂಳು ತುಂಬುವಿಕೆಯನ್ನು ಕಡಿಮೆ ಮಾಡುವುದರಿಂದ ಹಳ್ಳ, ಕೆರೆಗಳಿಗೆ ನೀರಿನ ಹರಿವು ಹೆಚ್ಚುತ್ತದೆ. ನದಿ ಮತ್ತು ಜಲಾನಯನ ಪ್ರದೇಶಗಳಲ್ಲಿ ಸ್ವಾಭಾವಿಕ ಸಸ್ಯವರ್ಗವನ್ನು ಅಭಿವೃದ್ಧಿಗೊಳಿಸುವುದರಿಂದ ನೈಸರ್ಗಿಕ ನೀರಿನ ಮೂಲಗಳನ್ನು ಪುನರುಜ್ಜೀವನಗೊಳಿಸಬಹುದಾಗಿದೆ ಎಂದು ತಿಳಿಸಿದರು. ರಾಜ್ಯ ಸರ್ಕಾರವು ಪ್ರಸಕ್ತ ವರ್ಷದಲ್ಲಿ ಅಂತರ್ಜಲ ಚೇತನ ಯೋಜನೆ ಅನುಷ್ಠಾನ ಮಾಡಲು ಅವಕಾಶ ಕಲ್ಪಿಸಿರುವ ರಾಜ್ಯದ…











