ತುಮಕೂರು : ರೈತನಿಂದ ಬೆಳೆ ಸಾಲ ಮಂಜೂರು ಮಾಡಲು ಲಂಚದ ಹಣ ಪಡೆಯುವಾಗ ಸಹಕಾರ ಸಂಘದ ಕಾರ್ಯದರ್ಶಿಯೊಬ್ಬರು ಎಸಿಬಿ ಬಲೆಗೆ ಬಿದ್ದಿರುವ ಘಟನೆ ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಬೇಡತ್ತೂರು ಗ್ರಾಮದಲ್ಲಿ ನಡೆದಿದೆ. ಬೇಡತ್ತೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಬಿ.ಡಿ.ಅವಲಮೂರ್ತಿ 3 ಸಾವಿರ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ. ಮಿಡಿಗೇಶಿ ಹೋಬಳಿಯ ಎಮ್ಮೆತಿಮ್ಮನಹಳ್ಳಿ ಗ್ರಾಮದ ದೊಡ್ಡರಂಗೇಗೌಡರು ತಮ್ಮ ತಾಯಿಯ ಹೆಸರಿನಲ್ಲಿದ್ದ ಜಮೀನಿನ ಮೇಲೆ ಬೆಳೆ ಸಾಲಕ್ಕೆ ಅರ್ಜಿ ಸಲ್ಲಿಸಿದ್ದು, 50 ಸಾವಿರ ಹಣ ಮಂಜೂರು ಮಾಡಿಕೊಡಬೇಕಿದ್ದ ಸಹಕಾರ ಸಂಘದ ಕಾರ್ಯದರ್ಶಿ ಹಣಕ್ಕಾಗಿ ಬಡ ರೈತನಿಗೆ ಬೇಡಿಕೆಯಿಟ್ಟಿದ್ದು, ಹಣ ಕೊಡಲಾಗದ ಸ್ಥಿತಿಯಲ್ಲಿದ್ದ ಆತ ಕೋವಿಡ್-19 ಸಂದರ್ಭದಲ್ಲಿ ತನ್ನ ಕೆಲಸಕ್ಕಾಗಿ ಲಂಚಕ್ಕಾಗಿ ಬೇಡಿಕೆಯಿಟ್ಟಿರುವ ಬಿ.ಡಿ.ಅವಮೂರ್ತಿಯ ವಿರುದ್ಧ ತುಮಕೂರು ಭ್ರಷ್ಟಾಚಾರ ನಿಗ್ರಹ ದಳ ಕಛೇರಿಯಲ್ಲಿ ಎಸಿಬಿ ಡಿವೈಎಸ್ಪಿ ಬಿ.ಉಮಾಶಂಕರ್ ರವರಿಗೆ ದೂರು ನೀಡಿದ್ದು ಲಂಚಕ್ಕೆ…
Author: News Desk Benkiyabale
ತುಮಕೂರು: ಸೂರತ್ನಿಂದ ತುಮಕೂರಿನ ಮಸೀದಿಗೆ ಧರ್ಮ ಪ್ರಚಾರಕ್ಕೆ ಆಗಮಿಸಿದ್ದ 14 ಜನರಲ್ಲಿ ಓರ್ವನಿಗೆ ಕೊರೊನಾ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಪತ್ತೆಯಾಗಿರುವ ಕೋವಿಡ್-19 ಸೋಂಕು ಪೀಡಿತ ವ್ಯಕ್ತಿ ಮೂಲತಃ ತುಮಕೂರು ಜಿಲ್ಲೆಗೆ ಸೇರಿದವನಲ್ಲ. ಬದಲಾಗಿ ಗುಜರಾತ್ ರಾಜ್ಯದ ಸೂರತ್ ಮೂಲದವ. ಮಾ. 12ರಂದೇ ನಗರಕ್ಕೆ ಬಂದಿದ್ದರು. ಒಟ್ಟು 14 ಮಂದಿ ಸೂರತ್ನಿಂದ ತುಮಕೂರಿನ ಮಸೀದಿಗೆ ಧರ್ಮ ಪ್ರಚಾರಕ್ಕೆ ಆಗಮಿಸಿದ್ದರು. ಪಿ.ಹೆಚ್. ಕಾಲೋನಿಯಲ್ಲಿರುವ ಮಸೀದಿಯಲ್ಲಿ ತಂಗಿದ್ದರು. ಇಡೀ ದೇಶದಲ್ಲಿ ಲಾಕ್‍ಡೌನ್ ಘೋಷಣೆ ಆದ ನಂತರ ವಾಪಸ್ ಸೂರತ್ ಹೋಗಲು ಆಗಿರಲಿಲ್ಲ. ಹೀಗಾಗಿ ಮಸೀದಿಯಲ್ಲಿಯೇ ಉಳಿದುಕೊಂಡಿದ್ದರು. ಕಳೆದ ರಾತ್ರಿ ಈತನನ್ನ ವಶಕ್ಕೆ ಪಡೆದಿರುವ ಜಿಲ್ಲಾಡಳಿತ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ವ್ಯಕ್ತಿಯನ್ನ ಬೆಂಗಳೂರಿಗೆ ರವಾನೆ ಮಾಡಲಾಗಿದೆ. ಇನ್ನು ಈತನ ಜೊತೆಯಲ್ಲಿದ್ದ ಉಳಿದ 13 ಮಂದಿಯನ್ನ ಮಸಿದಿಯಲ್ಲೆ ಕ್ವಾರೆಂಟೈನ್ ಮಾಡಲಾಗಿದೆ. ಪಿ.ಎಚ್. ಕಾಲೋನಿಯ ನಿಮ್ರಾ ಮಸೀದಿ ಸುತ್ತ 150 ಮೀಟರ್ ಸೀಲ್‌ಡೌನ್…
ತುಮಕೂರು : ಬಡವರ ಬಾಗಿಲು ಎನ್ನುವ ವಿನೂತನ ಕಾರ್ಯವನ್ನು ತುಮಕೂರು ಗ್ರಾಮಾಂತರ ಪಿಎಸೈ ಲಕ್ಷ್ಮಯ್ಯರವರು ಕಾರ್ಯರೂಪಕ್ಕೆ ತಂದಿದ್ದು ಹೆಗ್ಗೆರೆ ಬಸ್ ನಿಲ್ದಾಣದ ಬಳಿ ಇಂದು ಬೆಳಿಗ್ಗೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ ವಂಶಿಕೃಷ್ಣರವರು ಲೋಕಾರ್ಪಣೆ ಮಾಡಿದರು. ಜನರಿಂದ ಜನರಿಗಾಗಿ ದಿನನಿತ್ಯದ ಅಗತ್ಯ ವಸ್ತುಗಳು ಮತ್ತು ಹಣ್ಣು ತರಕಾರಿ ಹ್ಯಾಂಡ್ ಸ್ಯಾನಿಟೈಸರ್ ಹೀಗೆ ಹಲವಾರು ವಸ್ತುಗಳನ್ನು ಇಲ್ಲಿ ಇರಿಸಲಾಗುತ್ತದೆ. ದಾನ ಮಾಡಲಿಚ್ಚಿಸುವವರು ಬಡವರ ಬಾಗಿಲು ಸ್ಥಳಕ್ಕೆ ತಂದು ಇಟ್ಟರೆ ಅಗತ್ಯವಿರುವ ಕಡು ಬಡವರು ಬಂದು ಅದನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಅನ್ಯ ದೇಶಗಳಲ್ಲಿ ಚಾಲ್ತಿಯಲ್ಲಿರುವ ಕಾರ್ಯಕ್ರಮ ನಮ್ಮ ತುಮಕೂರು ಜಿಲ್ಲೆಯಲ್ಲಿ ಅದೂ ತುಮಕೂರು ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯರೂಪಕ್ಕೆ ಬಂದಿರುವುದು ವಿಶೇಷವಾಗಿದೆ. ಪಿಎಸೈ ಲಕ್ಷ್ಮಯ್ಯ ರವರ ವಿಶೇಷ ಆಲೋಚನೆಯನ್ನು ಪೋಲಿಸ್ ವರಿಷ್ಠಾಧಿಕಾರಿ ಕೋನ ವಂಶಿಕೃಷ್ಣರವರು ಅನುಮತಿ ನೀಡಿ ಅದು ಕಾರ್ಯರೂಪಕ್ಕೆ ತರಲು ಪ್ರೇರೇಪಿಸಿದ್ದಾರೆ ಸ್ವತಃ…
ತುಮಕೂರು : ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹೆಬ್ಬುರು ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಸಿರಿವರ ಹಾಗೂ ಗಂಗೋನಹಳ್ಳಿ ಗ್ರಾಮ ಪಂಚಾಯ್ತಿಗಳ ಪ್ರತಿ ಮನೆ ಮನೆಗಳಿಗೆ ಉಚಿತ ಮಾಸ್ಕ್ ವಿತರಿಸಲಾಯಿತು ಇದೇ ಸಂದರ್ಭದಲ್ಲಿ ರೈತರು ಬೆಳೆದ ತರಕಾರಿ ಮತ್ತು ಹಣ್ಣುಗಳನ್ನು ಬೆಳೆದ ರೈತರಿಂದ ಮಾರುಕಟ್ಟೆ ದರಕ್ಕೆ ನೇರವಾಗಿ ಖರೀದಿಸಲಾಯಿತು ಖರೀದಿ ಮಾಡಿದ ತರಕಾರಿಯನ್ನು ಪೊಟ್ಟಣಗಳನ್ನು ಕಟ್ಟಿ ಬಡ ಕುಟುಂಬಗಳಿಗೆ ಅಕ್ಕಿ, ಬೇಳೆ, ಉಪ್ಪು, ಅಡುಗೆ ತೈಲ, ಈರುಳ್ಳಿ ಮತ್ತು ತರಕಾರಿ ಪೊಟ್ಟಣಗಳನ್ನು ಮಾಜಿ ಶಾಸಕರಾದ ಬಿ, ಸುರೇಶ್ ಗೌಡ ವಿತರಿಸಿದರು. ಸ್ಥಳೀಯ ರೈತರು ಕಷ್ಟಪಟ್ಟು ಬೆಳೆದ ಬೆಳೆಗೆ ಉತ್ತಮ ಬೆಲೆ ದೊರೆಯದೇ ಕಂಗಾಲಾಗಿದ್ದ ಬಡ ರೈತರ ಕುಟುಂಬಗಳು ಬೀದಿಗೆ ಬರುವ ಮುನ್ನ ಅಧಿಕಾರ ವಂಚಿತರಾದರು ನಂಬಿದ ಜನರನ್ನು ಕೈಬಿಡದೇ ಅವರ ಬೆಂಬಲಕ್ಕೆ ನಿಂತ ಮಾಜಿ ಶಾಸಕ ಬಿ ಸುರೇಶ್ ಗೌಡರು ರೈತರಿಂದ ನೇರವಾಗಿ ಖರೀದಿಸುವ ಮುಖೇನ ರೈತರ ಬದುಕು ಬೀದಿಗೆ ಬಂದು…
ತುಮಕೂರು: ರಾಜ್ಯದ ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ, ಗುಲ್ಬರ್ಗಾ ಹಾಗೂ ವಿಜಯಪುರ ಮೂಲದ ಸುಮಾರು 316 ವಲಸೆ ಕೂಲಿ/ ಕಟ್ಟಡ ಕಾರ್ಮಿಕರನ್ನು ಜಿಲ್ಲಾಡಳಿತವು ಇಂದು ಅವರ ತವರಿಗೆ ಕೆಎಸ್‍ಆರ್‍ಟಿಸಿ ಬಸ್ ಮೂಲಕ ಕಳುಹಿಸಿಕೊಟ್ಟಿದೆ. ಕೂಲಿಯನ್ನು ಅರಸಿ ಬೆಂಗಳೂರಿಗೆ ಬಂದಿದ್ದ ಈ ಕೂಲಿ ಕಾರ್ಮಿಕರು ಕೋವಿಡ್-19 ಲಾಕ್‍ಡೌನ್ ಹಿನ್ನೆಲೆಯಲ್ಲಿ ತಮ್ಮ ಮೂಲಸ್ಥಳಕ್ಕೆ ಕಾಲ್ನೆಡಿಗೆಯಲ್ಲೇ ಹೋಗುತ್ತಿರುವುದನ್ನು ಕಂಡ ಜಿಲ್ಲಾಡಳಿತ ಕಾರ್ಮಿಕರನ್ನೆಲ್ಲಾ ತನ್ನ ವಶಕ್ಕೆ ತೆಗೆದುಕೊಂಡು ನಗರದ ಹನುಮಂತಪುರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ಆಶ್ರಯ ನೀಡಿ ನಿರಾಶ್ರಿತರಿಗೆ ಊಟ, ವಸತಿ ಸೌಲಭ್ಯವನ್ನು ಕಲ್ಪಿಸಿತ್ತು. ವಲಸೆ ಕಾರ್ಮಿಕರು ತಮ್ಮ ತವರಿಗೆ ಹಿಂದಿರುಗುವ ಮನವಿಯನ್ನು ಜಿಲ್ಲಾಡಳಿತದ ಮುಂದಿಟ್ಟಿದ್ದರಿಂದ ಇಂದು ಇವರನ್ನು ಅವರ ಊರಿಗೆ ಹೋಗಲು 15 ಬಸ್ಸುಗಳಲ್ಲಿ ಕಳುಹಿಸಿ ಕೊಡಲಾಗಿದೆ. ಈ ವಲಸೆ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಲಾಗಿ ಯಾವುದೇ ರೀತಿಯ ರೋಗ ಲಕ್ಷಣಗಳು ಕಂಡು ಬಂದಿಲ್ಲವೆಂದು ಉಪವಿಭಾಗಾಧಿಕಾರಿ ಅಜಯ್ ತಿಳಿಸಿದ್ದಾರೆ.…
ತುಮಕೂರು: ಕೋವಿಡ್-19 ನಿಯಂತ್ರಣ ಸಲುವಾಗಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ತುಮಕೂರು ನಗರದಲ್ಲಿ ಕಾರ್ಯಾಚರಣೆ ನಡೆಸಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದವರ ಹಾಗೂ ತಂಬಾಕು ಉತ್ಪನ್ನಗಳನ್ನು ಬಳಕೆ ಮಾಡುತ್ತಿದ್ದವರ ವಿರುದ್ಧ ಒಟ್ಟು 9 ಪ್ರಕರಣಗಳನ್ನು ದಾಖಲಿಸಿ 1200 ರೂ. ದಂಡ ವಸೂಲಿ ಮಾಡಲಾಗಿದೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಜಿಲ್ಲಾ ಸಲಹೆಗಾರರಾದ ರವಿಪ್ರಕಾಶ. ಎಂ.ಆರ್ ತಿಳಿಸಿದ್ದಾರೆ. ಕೋವಿಡ್-19 ರೋಗವು ವಿಶ್ವದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿದ್ದು, ತಂಬಾಕು, ಪಾನ್ ಮಸಾಲ, ಜರ್ದಾ, ಚೈನಿ, ಇತ್ಯಾದಿಗಳನ್ನು ಬಳಕೆ ಮಾಡಿ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುವುದರ ಜೊತೆಗೆ ಸಾಂಕ್ರಾಮಿಕ ರೋಗಗಳಾದ ಕ್ಷಯರೋಗ, ನಿಮೋನಿಯ ಮತ್ತು ಕೋವಿಡ್-19 ವೈರಸ್‍ಗಳು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದರಿಂದ, ಬೀಡಿ, ಸಿಗರೇಟ್ ಸೇದುವುದರಿಂದ ಕೈಯಿಂದ ಬಾಯಿಗೆ ವೈರಸ್‍ಗಳು ಮಾನವನ ದೇಹವನ್ನು ಪ್ರವೇಶಿಸಿ ದೇಹದ ಇತರೆ ಭಾಗಗಳಿಗೆ ಸೋಂಕು ಹರಡಿ ಶ್ವಾಸಕೋಶ, ಹೃದಯ ಸಂಬಂಧಿ ಕಾಯಿಲೆಗಳು…
ತುಮಕೂರು : ಕೊವೀಡ್-19 ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಗೆ ಬಂದಿರುವ 480 ಮಂದಿಯನ್ನು ತೀವ್ರ ನಿಗಾವಣೆಯಲ್ಲಿಡಲಾಗಿದ್ದು, ಈ ಪೈಕಿ ಹೋಂ ಕ್ವಾರೆಂಟೈನ್‍ನಲ್ಲಿ ಯಾರೂ ಇರುವುದಿಲ್ಲ. ಒಟ್ಟು 395 ಮಂದಿಯನ್ನು ಐಸೋಲೇಷನ್‍ನಲ್ಲಿ ಇಡಲಾಗಿದ್ದು, ಆಸ್ಪತ್ರೆಯ ಐಸೋಲೇಷನ್‍ನಲ್ಲಿರುವವರು 76 ಮಂದಿ, 370 ಜನರ 28 ದಿನಗಳ ಹೋಂ ಕ್ವಾರೆಂಟೈನ್ ಅವಧಿ ಪೂರ್ಣಗೊಂಡಿದೆ. ಈವರೆವಿಗೂ 1078 ಜನರ ಗಂಟಲುಸ್ರಾವ ಮಾದರಿಯನ್ನು ಸಂಗ್ರಹಿಸಿ ತಪಾಸಣೆಗೊಳಪಡಿಸಿದ್ದು, ಆ ಪೈಕಿ 884 ಮಾದರಿಗಳು ನೆಗೆಟಿವ್ ಎಂದು ದೃಢಪಟ್ಟಿದೆ. 2 ಪ್ರಕರಣಗಳು ಪಾಸಿಟಿವ್ ಬಂದಿದ್ದು, ಒಬ್ಬರು ಮೃತಪಟ್ಟಿರುತ್ತಾರೆ. ಮತ್ತೊಬ್ಬ ಗುಣಮುಖರಾಗಿರುತ್ತಾರೆ. 9 ಮಾದರಿಗಳು ತಿರಸ್ಕೃತಗೊಂಡಿವೆ ಹಾಗೂ 183 ತಪಾಸಣೆಯ ವರದಿಯನ್ನು ನಿರೀಕ್ಷಿಸಲಾಗಿದೆ ಎಂದು ಡಿಹೆಚ್‍ಓ ಡಾ: ಚಂದ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತುಮಕೂರು : ಕೊರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್‌ನಿಂದ ಸಂಕಷ್ಟ ಅನುಭವಿಸುತ್ತಿರುವ ಬಡವರಿಗೆ ಉಚಿತ ತರಕಾರಿ, ರೇಷನ್ ಕಿಟ್ ನ್ನು ಜನಪ್ರಿಯ ಮಾಜಿ ಶಾಸಕರಾದ ಬಿ.ಸುರೇಶ್ ಗೌಡ ರವರು ವಿತರಿಸಿದರು. ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ, ಗೂಳೂರು ಜಿಲ್ಲಾ ಪಂಚಾಯ್ತಿಯ ಹರಳೂರು ಗ್ರಾಮ ಪಂಚಾಯತಿ ಪ್ರತಿ ಮನೆ ಮನೆಗೆ ಉಚಿತವಾಗಿ ಮಾಸ್ಕ್ ಹಾಗೂ ನೇರವಾಗಿ ರೈತರಿಂದ ಖರೀದಿ ಮಾಡಿದ ತರಕಾರಿಯನ್ನು ಮತ್ತು ರೇಷನ್ ಕಾರ್ಡ್ ರಹಿತ ಬಡ ಕುಟುಂಬಗಳಿಗೆ ರೇಷನ್ ಕಿಟ್ ನ್ನು ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶಿವಕುಮಾರ್, ಹರಳೂರು ಕುಮಾರಯ್ಯ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಾಜಣ್ಣ, ಗ್ರಾಮ ಪಂ ಸದಸ್ಯರಾದ ರಮೇಶ್, ಪುಟ್ಟರಾಜು, ಶಾಂತಕುಮಾರ್, ಕೃಷ್ಣಪ್ಪ, ಮುಖಂಡರಾದ ಹೊನ್ನೇಶ್ ಕುಮಾರ್, ಪಾಲಣ್ಣ ಮುಂತಾದವರು ಭಾಗವಹಿಸಿದ್ದರು.
ತುಮಕೂರು: ಗುಬ್ಬಿಯ ಕೆ.ಎಂ.ಎಫ್. ಪಶು ಆಹಾರ ಘಟಕದಲ್ಲಿ ಕರ್ತವ್ಯದಲ್ಲಿದ್ದ ಗುತ್ತಿಗೆ ಕಾರ್ಮಿಕ ಮಹಿಳೆ ಯಂತ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಬೆಳಿಗ್ಗೆ ಎಂದಿನಂತೆ ಕೆಲಸಕ್ಕೆ ಹಾಜರಾದ ಪಟ್ಟಣದ ಹೊರವಲಯದ ಕರೇಕಲ್ಲುಬಾರೆ ಬಡಾವಣೆಯ ಮಂಗಳಮ್ಮ(30) ಘಟಕದಲ್ಲಿನ ಹೊಸ ಯೂನಿಟ್‍ನಲ್ಲಿನ ಹೊಸ ಯಂತ್ರಗಳಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿನ ದೊಡ್ಡ ಗಾತ್ರದ ಮೋಟಾರ್ ಬೆಲ್ಟ್ ಗೆ ಸಿಲುಕಿದ ಮಂಗಳಮ್ಮ ತೀವ್ರ ಅಸ್ವಸ್ಥರಾದರು. ಗುಬ್ಬಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟ ತಕ್ಷಣ ಆತಂಕದಲ್ಲಿದ್ದ ಘಟಕದಲ್ಲಿದ್ದ ನೂರಾರು ಕಾರ್ಮಿಕರು ಹಾಗೂ ಮೃತ ಮಂಗಳಮ್ಮ ಅವರ ಸಂಬಂಧಿಕರು ಕಾರ್ಖಾನೆ ಮುಂಭಾಗ ಗೇಟ್ ಬಳಿ ಪ್ರತಿಭಟನೆಗೆ ಮುಂದಾದರು. ಕೆಲಸವನ್ನು ಸ್ಥಗಿತಗೊಳಿಸಿ ಪ್ರತಿಭಟನೆಗೆ ಸಾಥ್ ನೀಡಿದ ಕಾರ್ಮಿಕರು ಮಂಗಳಮ್ಮ ಸಾವಿಗೆ ನ್ಯಾಯ ಕೊಡುವಂತೆ ಆಗ್ರಹಿಸಿದರು. ಮೃತ ಮಹಿಳೆ ಪತಿ ಗಾರೆ ಕೆಲಸ ಮಾಡುತ್ತಿದ್ದು, ಎಂಟು ವರ್ಷದ ಮಗಳಿದ್ದಾಳೆ. ಸ್ಥಳದಲ್ಲಿ ಮಂಗಳಮ್ಮ ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿದೆ. ಕಾರ್ಮಿಕ ಮಂಗಳಮ್ಮ…
ತುಮಕೂರು: ಮೇ 3ರ ನಂತರ ಸರ್ಕಾರ ಹಾಗೂ ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ವಿದ್ಯಾರ್ಥಿಗಳು ಯಾವುದೇ ವದಂತಿಗಳಿಗೆ ಕಿವಿಗೊಡದೆ ಪರೀಕ್ಷೆ ಬರೆಯಲು ನಿರಂತರ ಅಧ್ಯಯನಶೀಲರಾಗಿರಿ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು. ಅವರು ಇಂದು ತುಮಕೂರು ಸಿದ್ಧಗಂಗಾ ಮಠಕ್ಕೆ ಭೇಟಿನೀಡಿ ಶ್ರೀ ಸಿದ್ಧಲಿಂಗಸ್ವಾಮೀಜಿ ಅವರ ದರ್ಶನ ಮಾಡಿ ವಸತಿ ಶಾಲೆಯಲ್ಲಿರುವ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು. ಶ್ರೀ ಮಠದಲ್ಲಿ 1320 ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಇರುವುದನ್ನು ಖಚಿತಪಡಿಸಿಕೊಂಡು ಈ ವಿದ್ಯಾರ್ಥಿಗಳಲ್ಲಿರುವ ಸಂಶಯ ಮತ್ತು ಸಂದೇಹಗಳಿಗೆ ಪರಿಹಾರ ಸೂಚಿಸುವ ಸಲುವಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬುವುದರ ಜೊತೆಗೆ ಉತ್ಸಾಹದಿಂದ ಓದಿನಲ್ಲಿ ಪ್ರವೃತ್ತರಾಗುವಂತೆ ಮನವೊಲಿಸುವ ಸಲುವಾಗಿ ಮಠಕ್ಕೆ ಭೇಟಿ ನೀಡಿದ್ದೇನೆಂದು ಅವರು ತಿಳಿಸಿದರು. ವಿಶ್ವಕ್ಕೆ ಅಂಟಿಕೊಂಡಿರುವ ಪ್ರಾಣಾಂತಿಕ ಕೋವಿಡ್-19 ಸೋಂಕಿನಿಂದ ಮುಕ್ತರಾಗಲು ದೇಶ…











