Author: News Desk Benkiyabale

ತುಮಕೂರು:       ಗ್ರಾಮಂತರ ಕ್ಷೇತ್ರದಲ್ಲಿರುವ ವಿದ್ಯಾವಂತ ನಿರುದ್ಯೋಗಿಗಳಿಗೆ ಸೂಕ್ತ ಉದ್ಯೋಗವಕಾಶ ಕಲ್ಪಿಸುವ ನಿಟ್ಟಿನಲ್ಲಿ ಮಾರ್ಚ್ ತಿಂಗಳಲ್ಲಿ ವಸಂತನರಸಾಪುರದ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೋಧ್ಯಮಿಗಳ ಕೆ ಐ ಎ ಡಿ ಬಿ ಅಧಿಕಾರಿಗಳು, ಡಿ ಐ ಸಿ ಅಧಿಕಾರಿಗಳು, ಜಿಲ್ಲಾ ಪಂಚಾಯ್ತಿ ಸಿಇಒ ಒಳಗೊಂಡಂತೆ ಬೃಹತ್ ಸಭೆ ಕರೆದು ಯುವಕರಿಗೆ ಉದ್ಯೋಗವಕಾಶ ಕಲ್ಪಿಸುವ ಸಂಬಂಧ ಚರ್ಚಿಸುವುದಾಗಿ ಶಾಸಕ ಡಿ. ಸಿ. ಗೌರೀಶಂಕರ್ ಭರವಸೆ ನೀಡಿದರು.       ಅವರು ಗೂಳೂರು ಜಿಲ್ಲಾ ಪಂಚಾಯ್ತಿ ವಾಪ್ತಿಯಯಲ್ಲಾಪುರ ಗ್ರಾಮದಲ್ಲಿ ಶ್ರೀ ಆದಿಶಕ್ತಿ ದುರ್ಗಾದೇವಿ ನೂತನ ಆಲಯ ಜೀರ್ಣೋದ್ದಾರ ಮತ್ತು ದುರ್ಗಾದೇವಿಯ ನೂತನ ಸ್ತಿರಬಿಂಭಪ್ರತಿಷ್ಠಾಪನ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.       ಗ್ರಾಮಂತರ ಕ್ಷೇತ್ರದ ವಿದ್ಯಾವಂತ ಯುವಕರು ಉದ್ಯೋಗ ಅರಸಿ ಬೆಂಗಳೂರು ಸೇರಿದಂತೆ ವಿವಿಧೆಡೆ ಫಲಾಯನ ಮಾಡುತ್ತಿದ್ದಾರೆ.ಇನ್ನು ಕೆಲ ಯುವಕರು ತಮ್ಮ ವಿಧ್ಯಾಭ್ಯಾಸಕ್ಕೆ ತಕ್ಕ ಉದೋಗ ಲಭಿಸದೆ ನಿರುದ್ಯೋಗಿಗಳಾಗಿದ್ದಾರೆ ಇದನ್ನು ತಪ್ಪಿಸಲು ವಸಂತ ನರಸಾಪುರದಲ್ಲಿ ಕೈಗಾರಿಕೋಧ್ಯಮಿಗಳು ಹಾಗು ಅಧಿಕಾರಿಗಳ ಬೃಹತ್ ಸಭೆ…

Read More

ದೆಹಲಿ:       ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯಲು ಅಮೆರಿಕಕ್ಕೆ ತೆರಳಿದ್ದ  ವಿತ್ತ ಸಚಿವ ಅರುಣ್‌ ಜೇಟ್ಲಿ ಭಾರತಕ್ಕೆ ಮರಳಿದ್ದಾರೆ.       ಭಾರತಕ್ಕೆ ಮರಳುತ್ತಲೇ ಟ್ವಿಟ್‌ ಮಾಡಿದ ಜೇಟ್ಲಿ, “ಮನೆಗೆ ಮರಳಿರುವುದಯ ಸಂತಸ ನೀಡಿದೆ” ಎಂದು ತಿಳಿಸಿದ್ದಾರೆ.       ಜೇಟ್ಲಿ (66) ಅವರು ಅನಾರೋಗ್ಯ ಕಾರಣದಿಂದ ನಾರ್ಥ್​ ಬ್ಲಾಕ್​ನಲ್ಲಿರುವ ತಮ್ಮ ಆಫೀಸ್​ಗೆ ಬರುವುದನ್ನು ಕಳೆದ ವರ್ಷದ ಏಪ್ರಿಲ್​ನಲ್ಲೇ ಕೊನೆಗೊಳಿಸಿದ್ದರು. ಅದರ ಮರುತಿಂಗಳೇ ದೆಹಲಿಯ ಏಮ್ಸ್​ ಆಸ್ಪತ್ರೆಗೆ ದಾಖಲಾದರು. ಆನಂತರ ಆಗಸ್ಟ್​ನಲ್ಲಿ ತಮ್ಮ ಕಚೇರಿ ಬಂದರಾದರೂ ಜನವರಿಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಗೆ ತೆರಳಿದರು.       ಅಂಗಾಂಶದ ಕ್ಯಾನ್ಸರ್‌ಗೆ ತುತ್ತಾಗಿದ್ದ ಅವರು ಕಳೆದ ತಿಂಗಳು ಚಿಕಿತ್ಸೆಗೆಂದು ನ್ಯೂಯಾರ್ಕ್‌‌ಗೆ ತೆರಳಿದ್ದರು.       ಮೇ 14, 2018ರಲ್ಲಿ AIIMS ನಲ್ಲಿ ದೊಡ್ಡ ಸರ್ಜರಿ ಮಾಡಿಸಿಕೊಂಡಿದ್ದ ಜೇಟ್ಲಿ ಇದೇ ಮೊದಲ ಬಾರಿಗೆ ವಿದೇಶಕ್ಕೆ ತೆರಳಿದ್ದರು.  ಈ ಕಾರಣ ಅವರು, ಈ ವರ್ಷದ ಬಜೆಟ್‌ ಮಂಡನೆ ಮಾಡಲು ಆಗಲಿಲ್ಲ. ಜೇಟ್ಲಿ ಅನುಪಸ್ಥಿತಿಯಲ್ಲಿ…

Read More

ನವದೆಹಲಿ:        ಪಾಕಿಸ್ತಾನ ಸೈನಿಕರ ಮತ್ತು ಅಲ್ಲಿನ ಉಗ್ರರ ಸ್ನೈಪರ್ ರೈಫಲ್ ಗಳಿಗೆ ಬಲಿಯಾಗುತ್ತಿದ್ದ ಭಾರತೀಯ ಸೈನಿಕರ ಬಹು ದಿನಗಳ ಆಸೆ ಕೊನೆಗೂ ಈಡೇರಿದ್ದು, ಇದೀಗ ಭಾರತೀಯ ಸೈನಿಕರ ಕೈಗೂ ಅತ್ಯಾಧುನಿಕ ಡೆಡ್ಲಿ ಸ್ನೈಪರ್ ರೈಫಲ್ ಗಳು ಬಂದಿವೆ.       ಡೆಡ್ಲಿ ಸ್ನೈಪರ್ ರೈಫಲ್ಸ್ ಎಂದೇ ಕರೆಯಲಾಗುವ ಅತ್ಯಾಧುನಿಕ ಬೆರೆಟ್ಟಾ ಸಂಸ್ಥೆಯ 0.338 ಲಪುವಾ ಮ್ಯಾಗ್ನಮ್ ಸ್ಲಾರ್ಪಿಯೋ ಟಿಜಿಟಿ ಸೂಪರ್ ಸ್ನೈಪರ್ ರೈಫಲ್ ಹಾಗೂ ಬರೆಟ್ಟ್ ಸಂಸ್ಥೆಯ 0.50 ಕ್ಯಾಲಿಬರ್ ಎ095 ಸ್ನೈಪರ್ ರೈಫಲ್‍ಗಳನ್ನ ಖರೀದಿ ಮಾಡಲಾಗಿದೆ. ಒಂದು ವರ್ಷದ ಹಿಂದೆಯೇ ಸರ್ಕಾರ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು.        ಪಾಕ್‌ ಮೂಲದ ನುಸುಳುಕೋರ ಉಗ್ರರನ್ನು ಮತ್ತು ಅಪ್ರಚೋದಿತ ದಾಳಿ ಮಾಡುವ ಪಾಕ್ ಸೈನಿಕರ ಮಟ್ಟಹಾಕಲು ಅನುಕೂಲವಾಗುವಂತೆ ಅತ್ಯಾಧುನಿಕ ಸ್ನೈಪರ್‌ ರೈಫ‌ಲ್ ಗ‌ಳ ಬಳಕೆಯನ್ನು ಭಾರತೀಯ ಸೇನೆ ಆರಂಭಿಸಿದೆ.         ಮೂಲಗಳ ಪ್ರಕಾರ ಈ ಎರಡೂ ಮಾದರಿ ಒಟ್ಟು…

Read More

ತುಮಕೂರು:       ಶಿಕ್ಷಣ, ಕ್ರೀಡೆ ಮಾತ್ರವಲ್ಲದೆ ಸಾಂಸ್ಕೃತಿಕ ರಂಗದ ಕೊಡುಗೆಯಲ್ಲೂ ಮಹಿಳೆಯರದು ಬಹುಪಾಲು ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.       ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಿಳ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಗಳ ಸಹಯೋಗದಲ್ಲಿಂದು ನಗರದ ಬಾಲಭವನದಲ್ಲಿ ಏರ್ಪಡಿಸಿದ್ದ “ಮಹಿಳಾ ಸಾಂಸ್ಕೃತಿಕ ಉತ್ಸವ”ವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆಯರು ಇಂದು ಸಮಾಜದಲ್ಲಿ ಪುರುಷರಷ್ಟೆ ಸಮಾನತೆಯನ್ನು ಪಡೆದುಕೊಳ್ಳುವುದರ ಜೊತೆಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಮಹಿಳಾ ಸಾಂಸ್ಕೃತಿಕ ಉತ್ಸವದ ಮೂಲಕ ಮಹಿಳೆಯರಲ್ಲಿರುವ ಪ್ರತಿಭೆಯನ್ನು ಪ್ರದರ್ಶನ ಮಾಡಲು ಪ್ರತ್ಯೇಕ ವೇದಿಕೆ ಕಲ್ಪಿಸಿರುವುದು ಸ್ವಾಗತಾರ್ಹ. ಮಹಿಳೆಯರು ಇಂತಹ ಕಾರ್ಯಕ್ರಮಗಳನ್ನು ಸದುಪಯೋಗಪಡಿಸಿಕೊಂಡು ರಾಷ್ಟ್ರಮಟ್ಟದಲ್ಲಿ ಕೀರ್ತಿ ತರಬೇಕೆಂದು ಹಾರೈಸಿದರು.       ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಶಾಸಕ ಜಿ.ಬಿ. ಜ್ಯೋತಿಗಣೇಶ್ ಅವರು ಮಹಿಳೆಯರು ಅಡುಗೆ ಮನೆಗಷ್ಟೇ ಸೀಮಿತವಾಗದೆ…

Read More

 ತುಮಕೂರು:       ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಇಲ್ಲದೆ ಸಂಕಷ್ಟ ಎದುರಿಸುತ್ತಿರುವ ಇಂದಿನ ದಿನಗಳಲ್ಲಿ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ “ನೇಗಿಲು” ಎಂಬ ನಾಟಕದ ಮೂಲಕ ರೈತ ಅನುಭವಿಸುತ್ತಿರುವ ಸಂಕಷ್ಟಗಳ ಕುರಿತು ಜಾಗೃತಿ ಮೂಡಿಸಲು ಹೊರಟಿರುವುದು ಶ್ಲಾಘನೀಯ ಕೆಲಸ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಎ.ಗೋವಿಂದರಾಜು ತಿಳಿಸಿದ್ದಾರೆ.       ಗುಬ್ಬಿ ಪಟ್ಟಣದ ನಾಟಕರತ್ನ ಡಾ.ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ(ರಿ) ತುಮಕೂರು,ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಜಿ.ಇಂದ್ರಕುಮಾರ್ ರಚಿಸಿರುವ “ನೇಗಿಲು” ನಾಟಕದ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ಇಂದು ರೈತರ ಸಮಸ್ಯೆಗಳ ಕುರಿತು ದೃಶ್ಯ ಮತ್ತು ಮುದ್ರಣ ಮಾಧ್ಯಮಗಳು ಸುದ್ದಿ ಬಿತ್ತರಿಸುವುದು ಕಡಿಮೆಯಾಗಿದೆ. ಒಂದು ರೀತಿಯಲ್ಲಿ ರೈತ ಮಾಧ್ಯಮಗಳಿಗೆ ಟಿಆರ್‍ಪಿ ಗಳಿಸಿಕೊಡದ ವಿಷಯವಾಗಿದ್ದಾರೆ.ಇಂತಹ ಪರಿಸ್ಥಿತಿಯಲ್ಲಿ ನಾಟಕದ ಮೂಲಕ ಯುವ ಸಮೂಹ ರೈತರ ಸಂಕಷ್ಟಗಳ ಪರಿಚಯ ಮಾಡಿಸಲು ಗ್ರಾಮೀಣ ಯುವಕರು,ವಿದ್ಯಾರ್ಥಿಗಳು ಹೊರಟಿರುವುದು ಹೆಮ್ಮೆ ಪಡುವ ವಿಚಾರವಾಗಿದೆ.ಇದಕ್ಕಾಗಿ ಗ್ರಾಮೀಣ ಕ್ರಿಯಾತ್ಮಕ…

Read More

ತುಮಕೂರು:       ನಗರದ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್‍ರವರು ನಗರದ 27ನೇ ವಾರ್ಡಿನ ಅಮರಜ್ಯೋತಿನಗರದಲ್ಲಿ ಪಿ.ಡಬ್ಲು.ಡಿ. ಇಲಾಖೆಯಿಂದ ಎಸ್.ಎಫ್.ಸಿ. ಯೋಜನೆಯಲ್ಲಿ ಕೈಗೊಂಡಿರುವ ಸಿ.ಸಿ. ರಸ್ತೆ. ಮತ್ತು ಸಿ.ಸಿ. ಚರಂಡಿ ಅಭಿವೃದ್ದಿ ಕಾಮಗಾರಿಗೆ ಗುದ್ದಲಿ ಪೂಜೆ ಮಾಡುವುದರ ಮೂಲಕ ಚಾಲನೆ ನೀಡಿದರು.       ತುಮಕೂರು ಮಹಾನಗರ ಪಾಲಿಕೆ ಸದಸ್ಯರಾದ ಮಂಜುನಾಥ್, ವೇದಮೂರ್ತಿ, ಕುಮಾರ್, ಜಿತೇಂದ್ರ, ಹನುಮಂತಪ್ಪ ಹಾಗೂ ಪಿ.ಡಬ್ಲು.ಡಿ. ಇಲಾಖೆಯ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Read More

 ತುಮಕೂರು :       ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಯ ನಿರುದ್ಯೋಗಿಗಳಿಗಾಗಿ ಫೆಬ್ರುವರಿ 16 ಹಾಗೂ 17ರಂದು ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆಯಲಿರುವ ಬೃಹತ್ ಉದ್ಯೋಗ ಮೇಳದಲ್ಲಿ ಭಾಗವಹಿಸಲು 10ಸಾವಿರಕ್ಕೂ ಹೆಚ್ಚು ಉದ್ಯೋಗಾರ್ಥಿಗಳು ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಕಾರ್ಮಿಕ ಇಲಾಖೆ ಆಯುಕ್ತ ಬಾಲಯ್ಯ ತಿಳಿಸಿದರು.       ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಜರುಗಿದ ಜಿಲ್ಲೆಯ ವಿವಿಧ ಕಂಪನಿ/ ಕೈಗಾರಿಕೆಗಳನ್ನು ನಡೆಸುತ್ತಿರುವ ಉದ್ಯೋಗದಾತರ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಮೇಳದಲ್ಲಿ ಭಾಗವಹಿಸಲು 10ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ನೋಂದಾಯಿಸಿಕೊಂಡಿರುವುದು ಸಂತಸ ತಂದಿದೆ. ಇವರಲ್ಲಿ ಕನಿಷ್ಠ 7ಸಾವಿರ ಮಂದಿ ತಾಂತ್ರಿಕೇತರ ಉದ್ಯೋಗಾರ್ಥಿಗಳು ಇರುವ ಸಾಧ್ಯತೆ ಇದೆ. ಬೆಂಗಳೂರಿನ ಸುಮಾರು 50 ಐಟಿ ಕಂಪನಿಗಳು ಮೇಳದಲ್ಲಿ ಪಾಲ್ಗೊಳ್ಳಲಿದ್ದು, ಜಿಲ್ಲೆಯಲ್ಲಿರುವ ಉದ್ಯೋಗದಾತರು ಹೆಚ್ಚಿನ ಸಂಖ್ಯೆಯಲ್ಲಿ ಮೇಳದಲ್ಲಿ ಭಾಗವಹಿಸಿದರೆ ಮಾತ್ರ ಸ್ಥಳೀಯ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ದೊರೆಯಲಿದೆ ಎಂದು ತಿಳಿಸಿದರು.       ರಾಜ್ಯದಲ್ಲಿರುವ ಎಲ್ಲಾ ಉದ್ಯಮಗಳು/ ಕಂಪನಿ/ ಸಂಸ್ಥೆಗಳು ತನ್ನಲ್ಲಿ ಖಾಲಿ…

Read More

 ತುಮಕೂರು:       ಉತ್ತಮ ಆರೋಗ್ಯಕ್ಕೆ ಆಯುಷ್ ಚಿಕಿತ್ಸೆ ಅಗತ್ಯ ಎಂದು ಜಿಲ್ಲಾ ಆಯುಷ್ ಆರೋಗ್ಯಾಧಿಕಾರಿ ಸಂಜೀವ್‍ಮೂರ್ತಿ ತಿಳಿಸಿದರು.       ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ಹಾಗೂ ಅರುಣ ಎಜುಕೇಷನ್ ಟ್ರಸ್ಟ್‍ಗಳ ಸಹಯೋಗದಲ್ಲಿಂದು ನಗರದ ಅಶ್ವಿನಿ ಆಯುರ್ವೇದ ಆಸ್ಪತ್ರೆಯಲ್ಲಿ ಎಸ್.ಸಿ.ಪಿ ಫಲಾನುಭವಿಗಳಿಗಾಗಿ ಏರ್ಪಡಿಸಲಾಗಿದ್ದ “ಜಿಲ್ಲಾ ಮಟ್ಟದ ಆಯುಷ್ ಕಾರ್ಯಾಗಾರ”ವನ್ನು ಉದ್ಘಾಟಿಸಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಜನರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಆಯುಷ್ ಚಿಕಿತ್ಸೆಯಿಂದ ಇಂತಹ ರೋಗಗಳನ್ನು ನಿಯಂತ್ರಿಸಬಹುದು ಎಂದು ತಿಳಿಸಿದರು. ಸರ್ಕಾರದ ಐ.ಇ.ಸಿ ಕಾರ್ಯಕ್ರಮದಡಿ ಎಸ್.ಸಿ.ಪಿ/ಟಿಎಸ್.ಪಿ ಫಲಾನುಭವಿಗಳಿಗಾಗಿ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.       ಕಾರ್ಯಾಗಾರದಲ್ಲಿ ಅರುಣ ಎಜುಕೇಷನ್ ಟ್ರಸ್ಟ್‍ನ ನಿರ್ದೇಶಕ ರಾಘವೇಂದ್ರ, ಕಾರ್ಯದರ್ಶಿ ಸುಜಾತ, ಅಶ್ವಿನಿ ಆರ್ಯುವೇದ ಕಾಲೇಜಿನ ಪ್ರಾಂಶುಪಾಲ ಹರೀಶ್, ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

Read More

 ತುಮಕೂರು:      ಮಕ್ಕಳು ತಮ್ಮ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳುವುದೇ ಮಹಾ ಭಾಗ್ಯ ಎಂದು ಸಿದ್ದಗಂಗಾ ಮಠದ ಶ್ರೀಗಳಾದ ಸಿದ್ದಲಿಂಗಸ್ವಾಮಿ ಅವರು ಮಕ್ಕಳಿಗೆ ಕಿವಿಮಾತು ಹೇಳಿದರು.      ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಕೇಂದ್ರ, ಸಾರ್ವಜನಿಕ ಶಿಕ್ಷಣ ಇಲಾಖೆ ಸಿದ್ದಗಂಗಾ ಶಾಲೆಗಳ ಸಹಯೋಗದಲ್ಲಿ ಮಠದ ಆವರಣದಲ್ಲಿ ಇಂದು ಹಮ್ಮಿಕೊಂಡಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಾ, ಮಕ್ಕಳು ಆಲ್ಬೆಂಡಜೋಲ್ ಜಂತು ನಿವಾರಕ ಮಾತ್ರೆಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಯಾವುದೇ ಸಾಧನೆ ಮಾಡಲು ದೈಹಿಕ ಆರೋಗ್ಯ ಅಗತ್ಯ. ಈ ನಿಟ್ಟಿನಲ್ಲಿ ಮಕ್ಕಳು ತಮ್ಮ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.       ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಚಂದ್ರಿಕಾ ಮಾತನಾಡಿ, ಜಂತುಹುಳು ನಿವಾರಣೆಗೆ ಸ್ವಚ್ಛತೆ ಅವಶ್ಯ. ಜಂತುಹುಳು ಸೋಂಕಿನಿಂದ ಮಕ್ಕಳು ರಕ್ತಹೀನತೆ, ಪೌಷ್ಠಿಕಾಂಶ ಕೊರತೆ, ಹಸಿವೆಯಾಗದಿರುವುದು, ನಿಶ್ಯಕ್ತಿ ಮತ್ತು ಆತಂಕ, ಹೊಟ್ಟೆನೋವು, ವಾಕರಿಕೆ, ವಾಂತಿ, ಅತಿಸಾರ, ತೂಕ ಕಡಿಮೆಯಾಗುವಂತಹ ಅಪಾಯಕಾರಿ ಆರೋಗ್ಯ…

Read More

 ತುಮಕೂರು:       ರಾಷ್ಟ್ರೀಯ ಸಪ್ತಾಹದ ಅಂಗವಾಗಿ ತುಮಕೂರು ರೋಟರಿ ಕ್ಲಬ್ ವತಿಯಿಂದ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ ಆವರಣದಲ್ಲಿಂದು ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.       ಪ್ರಾದೇಶಿಕ ಸಾರಿಗೆ ಇಲಾಖೆ, ರೋಟರಿ, ಜೆ.ಸಿ. ವಾಲೆಂಟರಿ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಈ ಶಿಬಿರವನ್ನುದ್ದೇಶಿಸಿ ಮಾತನಾಡಿದ ಉಪ ಸಾರಿಗೆ ಪ್ರಾದೇಶಿಕ ಕಚೇರಿಯ ಹಿರಿಯ ಮೋಟಾರ್ ವಾಹನ ನಿರೀಕ್ಷಕ ಬಸವರಾಜ್ ಆರಾಧ್ಯ, ರಕ್ತದಾನ ಮಾಡುವುದರಿಂದ ಮತ್ತೊಬ್ಬರಿಗೆ ಜೀವದಾನ ಮಾಡಿದಂತಾಗುತ್ತದೆ. ತುರ್ತು ಸಂದರ್ಭಗಳಲ್ಲಿ ರಕ್ತದ ಅಗತ್ಯತೆ ಇರುವವರಿಗೆ ನೀಡುವ ಮೂಲಕ ಮಾನವೀಯತೆ ತೋರಬೇಕು ಎಂದು ತಿಳಿಸಿದರು.       ತುಮಕೂರು ರೋಟರಿ ಅಧ್ಯಕ್ಷ ಉದಯ್ ಕುಮಾರ್ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಶಿಬಿರದಲ್ಲಿ ಸುಮಾರು 40ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು.

Read More