ತುಮಕೂರು : ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಜಿಲ್ಲೆಯ ಎಲ್ಲಾ ಶಾಲೆಗಳ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳುತಿದ್ದೇನೆ ಎಂದು ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ತಿಳಿಸಿದರು. ಪಟ್ಟಣದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿದೇರ್ಶಕರ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮೌಲ್ಯಾಧಾರಿತ ಮತ್ತು ಗುಣಾತ್ಮಕ ಶಿಕ್ಷಣ ನೀಡುವುದು ನಮ್ಮ ಸರಕಾರದ ಮುಖ್ಯ ಉದ್ದೇಶವಾಗಿದೆ. ಕರ್ನಾಟಕ ಪಬ್ಲೀಕ್ ಶಾಲೆಗಳು ಯಶಸ್ವಿಯಾಗಿದ್ದು, ನಮ್ಮ ಮಕ್ಕಳು ಇಂಗ್ಲೀಷ್ ಕಲಿಯಬೇಕು ಎಂಬ ಭಾವನೆ ಪೋಷಕರಲ್ಲಿದೆ, ಆದ್ದರಿಂದ ಬೇಡಿಕೆ ಹೆಚ್ಚಾಗಿದೆ, ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮ ಎರಡು ಭಾಷೆಗಳಿರುವುದರಿಂದ ಇದರ ಬಗ್ಗೆ ಸಮಗ್ರವಾಗಿ ಚರ್ಚಿಸಬೇಕಿದೆ. ನಮ್ಮ ಮಕ್ಕಳು ಉತ್ತಮ ಶಿಕ್ಷಣ ಕಲಿತು ಮೌಲ್ಯಧಾರಿತ ಶಿಕ್ಷಣವಂತರಾಗಬೇಕು, ರಾಜ್ಯದ 60 ಕ್ಕೂ ಅಧಿಕ ಶಾಲೆಗಳಲ್ಲಿ ವಾಸ್ತವ್ಯ ಮಾಡುವ ಮೂಲಕ ಆಯಾ ಶಾಲೆಗಳ ಕುಂದುಕೊರತೆಗಳನ್ನು ಕಲೆಹಾಕುತ್ತನೆ,…
Author: News Desk Benkiyabale
ತುಮಕೂರು : ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಯೋಜನೆಗಳನ್ನು ಕಾರ್ಯರೂಪಕ್ಕೆ ತರದ ಅಧಿಕಾರಿಗಳು ಜಾಗ ಖಾಲಿ ಮಾಡಬೇಕೆಂದು ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಅವರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾ ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು ಸರ್ಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸುವಲ್ಲಿ ಅಧಿಕಾರಿಗಳು ವಿಫಲರಾಗುತ್ತಿದ್ದಾರೆ. ಸೌಲಭ್ಯ ಒದಗಿಸಲು ಸಾಧ್ಯವಾಗದಿದ್ದರೆ ಅಂತಹ ಅಧಿಕಾರಿಗಳು ಜಾಗ ಖಾಲಿ ಮಾಡಬೇಕೆಂದು ನಿರ್ದಾಕ್ಷಿಣ್ಯವಾಗಿ ಸೂಚಿಸಿದರು. ಸಮಸ್ಯೆ ಹೇಳಿಕೊಂಡು ತಮ್ಮ ಬಳಿ ಬಂದವರಿಗೆ ಗೌರವಿಸಿ, ವಿನಾಕಾರಣ ಅಲೆದಾಡಿಸಿ ಅವರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ನಾನು ಸುಮ್ಮನೆ ಇರುವುದಿಲ್ಲ ಎಂದು ಹೇಳಿದರಲ್ಲದೆ, ತಹಶೀಲ್ದಾರ್ ಬಳಿ ಪಹಣಿ, ಖಾತೆ ಮಾಡಿಸಲು ಬಂದವರನ್ನು ತಂದೆ ತಾಯಿಯಂತೆ ಕಾಣಬೇಕು. ಸಾರ್ವಜನಿಕರ ಜೊತೆ ಮಾನವೀಯತೆಯಿಂದ ನಡೆದುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು. ಜಿಲ್ಲಾ ಪಂಚಾಯತ್‍ನಲ್ಲಿ ನಡೆಯುವ…
ತುಮಕೂರು : ಮನೆ ಹಾಗೂ ದೇವಸ್ಥಾನಗಳಲ್ಲಿ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳನನ್ನು ಪೊಲೀಸರು ಬಂಧಿಸಿ, 3,70,000 ರೂ.ಬೆಲೆಬಾಳುವ ಆಭರಣಗಳನ್ನು ವಶಪಡಿಸಿಕೊಂದಿದ್ದಾರೆ. ಜುಲೈ 2 ರಂದು ರಾತ್ರಿ ವೇಳೆ ತುಮಕೂರು ತಾಲ್ಲೂಕು ಕಸಬಾ ಹೋಬಳಿ ಊರುಕೆರೆ ಬೋವಿಪಾಳ್ಯದ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಾಲಯದ ಬೀಗ ಮುರಿದು ದೇವರ ಗರ್ಭಗುಡಿಯಲ್ಲಿಟ್ಟಿದ್ದ 20 ಸಾಲಿಗ್ರಾಮಗಳು, ಸುಮಾರು 35 ಬೆಳ್ಳಿ ಮತ್ತು ತಾಮ್ರದ ದೇವರ ಪ್ರತಿಮೆಗಳು, 2 ಬೆಳ್ಳಿ ತಾಳಿಗಳು, 2 ಬೆಳ್ಳಿ ಲೋಟಗಳು, 2 ಬೆಳ್ಳಿ ಬಟ್ಟಲುಗಳು, 1 ತಾಮ್ರದ ಬಿಂದಿಗೆ, 1 ತಾಮ್ರದ ಗಂಗಳ, 5 ತಾಮ್ರದ ತಂಬಿಗೆಗಳನ್ನು ಕಳ್ಳರು ಕಳವು ಮಾಡಿದ್ದರು. ಎಂದು ದೇವಸ್ಥಾನದ ರಮೇಶ್ ಎಂಬುವರು ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ದೂರಿನ ಮೇರೆಗೆ ಸಿಪಿಐ ಶ್ರೀ ಮಧುಸೂಧನ್ ರವರು ವಿಶೇಷ ತಂಡವನ್ನು ರಚಿಸಿದ್ದು, ಈ ತಂಡ ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರದ ಹಲವು…
ತುಮಕೂರು: ಪ್ರಕೃತಿಯಲ್ಲಿ ಪ್ರತಿ ರೋಗಕ್ಕೂ, ರೋಗನಿರೋಧಕ ಶಕ್ತಿ ಇರುತ್ತದೆ, ಅದನ್ನು ಗಂಭೀರವಾಗಿ ಪರಿಗಣಿಸಿ ಪರಿಶೀಲನೆ ನಡೆಸಬೇಕಾದ ಹಾಗೂ ಬೆಳೆಸುವ ಮೂಲಕ ಎಲ್ಲ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಕಾನೂನು ಸಂಸದೀಯ ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಭಿಪ್ರಾಯಪಟ್ಟರು. ನಗರದ ಸಿದ್ಧಾರ್ಥ ತಾಂತ್ರಿಕ ಕಾಲೇಜಿನಲ್ಲಿ ಕರ್ನಾಟಕ ಪಶುವೈದ್ಯಕೀಯ ಸಂಘ ಮತ್ತು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಂಪ್ರದಾಯಿಕ ಪಶುಚಿಕಿತ್ಸೆ ವಿಷಯದ ಕುರಿತ ವಿಚಾರ ಸಂಕಿರಣ ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಾಲು ಉತ್ಪಾದನೆ ರೈತರ ಉಪಕಸಬಾಗಿದ್ದು, ಪ್ರಮುಖ ಕಸುಬಿನಲ್ಲಿ ಹೂಡುತ್ತಿದ್ದ ಬಂಡವಾಳವನ್ನು ಕಡಿಮೆ ಮಾಡುತ್ತಿತ್ತು, ಗರಿಷ್ಠ ಬೆಲೆಯನ್ನು ಉಪಕಸುಬು ದೊರೆಕಿಸಿಕೊಡುತ್ತದೆ. ಹಾಗಾಗಿ ರೈತರಿಗೆ ಉಪಕಸುಬು ನೆಚ್ಚಿಕೊಂಡಿದ್ದಾರೆ, ತುಮಕೂರು ಜಿಲ್ಲೆ ಯಂತಹ ಅರೆ ಬರಪೀಡಿತ ಜಿಲ್ಲೆ 75 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿರುವುದು ಸಂತಸದ ವಿಚಾರವಾಗಿದ್ದು, ಹೈನು ಗಾರಿಕೆ ಲಾಭದಾಯಕವಾಗಬೇಕಾದರೆ, ಕೃತಕ ಗರ್ಭಧಾರಣೆಯಾಗಬೇಕು, ತಳಿ…
ತುಮಕೂರು: ಕೈಗಾರಿಕಾ ವಲಯದಲ್ಲಿ ಉದ್ಯೋಗಾವಕಾಶ ಸೃಷ್ಠಿ ಹಾಗೂ ಆರ್ಥಿಕ ಮಟ್ಟ ಚೇತರಿಕೆಗೆ ಕ್ರಮ ಕೈಗೊಳ್ಳುವ ಸಂಬಂಧ ಚಿಂತನೆ ನಡೆಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್‍ಶೆಟ್ಟರ್ ಇಂದಿಲ್ಲಿ ತಿಳಿಸಿದರು. ಆರ್ಥಿಕ ಹಿಂಜರಿತ ಕೇವಲ ನಮ್ಮ ರಾಜ್ಯ, ರಾಷ್ಟ್ರಕ್ಕೆ ಮಾತ್ರ ಆಗಿಲ್ಲ. ಇಡೀ ಜಗತ್ತಿನಲ್ಲೇ ಇದೆ. ಆದರೆ ಇದರಿಂದ ಆಟೋ ಮೊಬೈಲ್ ಕ್ಷೇತ್ರಕ್ಕೆ ಭಾರೀ ಹಿನ್ನಡೆಯಾಗಿರುವುದು ಸತ್ಯ. ಈ ಎಲ್ಲದರ ಬಗ್ಗೆ ಅಧ್ಯಯನ ನಡೆಸಿ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು. ನಗರದ ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡುವ ಮುನ್ನ ಸಿದ್ದಗಂಗಾ ಮಠಕ್ಕೆ ತೆರಳಿ ಲಿಂ. ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು, ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೈಗಾರಿಕಾ ಕ್ಷೇತ್ರದಲ್ಲಿ ಕೆಲವು ವಲಯಗಳಿಗೆ ಆರ್ಥಿಕ ಹಿಂಜರಿತ…
ತುಮಕೂರು: ಜಿಲ್ಲೆಯನ್ನು ಭವಿಷ್ಯದಲ್ಲಿ ಕ್ರೀಡಾ ಹಬ್ ಆಗಿ ಪರಿವರ್ತಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿರುವ ಕರ್ನಾಟಕ ಸ್ಟೋಟ್ರ್ಸ್ ಕೋ ಆರ್ಡಿನೇಟ್ ಕಮಿಟಿ ವತಿಯಿಂದ ಕ್ರೀಡಾಸಕ್ತ ಯುವಜನರ ಸಭೆಯನ್ನು ನಗರದ ಉಡ್‍ಲ್ಯಾಂಡ್ ಹೊಟೇಲ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿತ್ತು. ಶಿರಾ ಗ್ರೆನ್ ಮರ್ಚೆಂಟ್ ಅಸೋಸಿಯೇಷನ್ ಅಧ್ಯಕ್ಷ ಲಕ್ಷ್ಮಣಗೌಡ ಅವರು ಸಭೆಯನ್ನು ಉದ್ದೇಶಿಸಿ ಮೊದಲಿಗೆ ಮಾತನಾಡಿ, ನಿವೃತ್ತ ಐಎಎಸ್ ಅಧಿಕಾರಿ ಜಮೀರ್ ಪಾಷ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಸ್ಟೋಟ್ರ್ಸ್ ಕೋ ಅರ್ಡಿನೇಟ್ ಕಮಿಟಿ ಯುವಜನರನ್ನು ಕ್ರೀಡೆಯತ್ತ ಸೆಳೆಯುವ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡುತ್ತಿದೆ.ಯುವಜನತೆ ಕ್ರೀಡೆಯತ್ತ ತೊಡಗಿ ಕೊಳ್ಳುವುದರಿಂದ ಸಮಾಜದಲ್ಲಿ ಸಮಾಜ ವಿದ್ರೋಹಿ ಕೃತ್ಯಗಳು ಕಡಿಮೆಯಾಗುವುದರ ಜೊತೆಗೆ,ಉತ್ತಮ ಪ್ರಜೆಗಳನ್ನು ದೇಶಕ್ಕೆ ನೀಡಬಹುದು. ಈ ನಿಟ್ಟಿನಲ್ಲಿ ಯುವಜನರಿಗೆ ಇದೊಂದು ಒಳ್ಳೆಯ ವೇದಿಕೆ.ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಮುನೀರ್ ಅಹಮದ್(ಅಮೇರಿಕಾ) ಅವರು ಮಾತನಾಡಿ,ಯುವಜನರು ಕ್ರೀಡೆಯಲ್ಲಿ ಸಾಧನೆ ಮಾಡಲು ಕೆ.ಎಸ್.ಸಿ.ಸಿ. ಒಂದು ಒಳ್ಳೆಯ ವೇದಿಕೆ.ಇಲ್ಲಿ ಕ್ರೀಡೆಗಳಿಗೆ…
ತುಮಕೂರು: ನಗರದ ಸಿದ್ಧಗಂಗಾ ಮಠಕ್ಕೆ ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್ ಪಾಂಡ ಭೇಟಿ ನೀಡಿ, ಶ್ರೀಗಳ ಆರ್ಶೀವಾದ ಪಡೆದುಕೊಂಡರು. ಸಂಸದರಾಗಿರುವ ಬೈಜಯಂತ್ ಪಾಂಡ ಅವರು ಒಂದು ದೇಶ ಒಂದು ಸಂವಿಧಾನ ವಿಚಾರಗೋಷ್ಠಿ ಅಂಗವಾಗಿ ತುಮಕೂರಿನಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮಕ್ಕೂ ಮುನ್ನ ಸಿದ್ಧಗಂಗಾ ಮಠಕ್ಕೆ ತೆರಳಿ, ಶ್ರೀ ಶಿವಕುಮಾರಸ್ವಾಮೀಜಿ ಗದ್ದುಗೆಗೆ ನಮಿಸಿದರು. ಸುದ್ದಿಗಾರರೊಂದಿಗೆ ಶ್ರೀ ಮಠದ ಕಾರ್ಯವೈಖರಿಯ ಬಗ್ಗೆ ತಿಳಿದುಕೊಂಡು ತುಂಬಾ ಸಂತೋಷವಾಗಿದ್ದು, ವಾಜಪೇಯಿ ಅವರು ಹಾಗೂ ನೂಯಾರ್ಕ್‍ನಲ್ಲಿ ನಡೆದ ಕಾರ್ಯದಲ್ಲಿ ಸಿದ್ಧಗಂಗಾ ಮಠದ ಬಗ್ಗೆ ತಿಳಿದುಕೊಂಡಿದ್ದೇನೆ, ಈಗ ನೋಡಿದ್ದು ತುಂಬಾ ಸಂತೋಷವಾಗಿದ್ದು, ಇಡೀ ದೇಶಕ್ಕೆ ಒಂದೇ ಸಂವಿಧಾನವನ್ನು ಜಾರಿಗೊಳಿಸುವ ನಿಟ್ಟಿನಲ್ಲಿ 370 ಕಾಯ್ದೆಯನ್ನು ಜಾರಿಗೆ ತರಲಾಗಿದ್ದು, ಇದರಲ್ಲಿ ಯಾರ ಮೇಲೆಯೂ ಒತ್ತಡ ಹಾಕಿಲ್ಲ ಎಂದು ಶ್ರೀಗಳಿಗೆ ತಿಳಿಸಿಕೊಟ್ಟರು. ಈ ಸಂದರ್ಭದಲ್ಲಿ ಶಾಸಕ ಜ್ಯೋತಿಗಣೇಶ್, ಮಾಜಿ ಶಾಸಕ ಸುರೇಶ್‍ಗೌಡ, ಮುಖಂಡರುಗಳಾದ ಶಿವಪ್ರಸಾದ್, ರವಿ ಹೆಬ್ಬಾಕ, ರುದ್ರೇಶ್, ಕೊಪ್ಪಳ್‍ನಾಗರಾಜು, ಬ್ಯಾಟರಂಗೇಗೌಡ,…
ಮಧುಗಿರಿ : ತಾಲ್ಲೂಕಿನ ಬೇಡತ್ತೂರು ಗ್ರಾಮಕ್ಕೆ ಹೊಂದಿಕೊಂಡಿರುವ ಬೆಟ್ಟದಲ್ಲಿ ಕರಡಿ ಪ್ರತ್ಯಕ್ಷವಾಗಿದ್ದು ಕರಡಿಯನ್ನು ಕಂಡ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಮನೆಗಳ ಪಕ್ಕದಲ್ಲೇ ಇರುವ ಬೆಟ್ಟದಲ್ಲಿ ಕರಡಿ ಓಡಾಟ ನಡೆಸುತ್ತಿದ್ದು ಈ ಪ್ರದೇಶದ ಸುತ್ತಮುತ್ತ ಈಗಾಗಲೇ ಜನರ ಮೇಲೆ ಕರಡಿ ದಾಳಿ ನಡೆಸಿ ಗಾಯ ಗೊಳಿಸಿರುವ ಘಟನೆ ಆಗಾಗ್ಗೆ ನಡೆಯುತ್ತಿರುತ್ತದೆ. ಈ ಘಟನೆ ಮಾಸುವ ಮುನ್ನವೇ ಕರಡಿ ಪ್ರತ್ಯಕ್ಷವಾಗಿರುವುದು ಗ್ರಾಮಸ್ಥರಲ್ಲಿ ಇನ್ನಷ್ಟು ಆತಂಕ ಮೂಡಿಸಿದ್ದು ಮಹಿಳೆಯರು, ಮಕ್ಕಳು ಹೊರಗಡೆ ಹೋಗಲು ಹೆದರುತ್ತಿದ್ದಾರೆ. ಅರಣ್ಯ ಇಲಾಖೆಯವರಿಗೆ ತಿಳಿಸಿದರೂ ಇತ್ತ ಗಮನ ಹಾರಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸಂಜೆಯಾದರೆ ಸಾಕು ಮನೆಯಿಂದ ಆಚೆ ಹೋಗಲು ಅಂಜುತ್ತಿರುವ ಗ್ರಾಮಸ್ಥರು ಜನರ ಗಲಾಟೆ ಕಂಡು ಬೆಟ್ಟ ಹತ್ತಿಹೋಗುತ್ತಿರುವ ಕರಡಿಗಳು ರಾತ್ರಿ ಹೊತ್ತಿನಲ್ಲಿ ಬೆಟ್ಟದ ಬುಡದಲ್ಲೇ ಇರುವ ಬೇಡತ್ತೂರು ಗ್ರಾಮಕ್ಕೆ ಆಹಾರ ಹುಡಿಕಿ ಕೊಂಡು ಬರುವುದರಿಂದ ಜನತೆಯನ್ನು ಕಂಡು ದಾಳಿಗೆ ಮುಂದಾಗುತ್ತದೆ ಆದುದರಿಂದ ಆರಣ್ಯ ಇಲಾಖೆಯವರು…
ಪಾವಗಡ: ವಿದ್ಯಾರ್ಥಿಗಳು ಓದು-ಬರಹ ಕಲಿಯುವುದರ ಜೊತೆಯಲ್ಲಿ ಕ್ರೀಡೆ ಮತ್ತು ಸಾಂಸ್ಖ್ರತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುಂತೆ ಶಿಕ್ಷಕರು ಮಾರ್ಗದರ್ಶನ ನೀಡಬೇಕೆಂದು ಶಾಸಕ ವೆಂಕಟರವಣಪ್ಪ ತಿಳಿಸಿದರು ಶನಿವಾರ ಪಟ್ಟಣದ ಶ್ರೀವೆಂಕಟೇಶ್ವರ ವಿದ್ಯಾಸಂಸ್ಥೆಯ ಆವರಣದಲ್ಲಿ ಸಾರ್ವಜನಿಕ ಶಿಕ್ಷನ ಇಲಾಖೆಯಿಂದ ಹಮ್ಮಿಕೊಂಡಿದ್ದ ತಾ. ಮಟ್ಟದ ಪ್ರತಿಭಾಕಾರಂಜಿ/ ಕಲೋತ್ಸವ ಸಮಾರಂಭವನ್ನು ಉದ್ಗಾಟಿಸಿ ಮಾತನಾಡುತ್ತಾ, ಯಾವುದೆ ತಾರತಮ್ಯ ಎಸಗದೆ ವಿದ್ಯಾರ್ಥಿಗಳಿಗೆ ಕಲಿಸಬೇಕು,ಸರ್ಕಾರಿ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬರಲು ಶಿಕ್ಷಕರು ಶ್ರಮ ವಹಿಸಬೇಕು ಎಂದು ತಿಳಿಸಿದರು. ಆಗ್ನೇಯ ಪದವೀಧರ ಕ್ಷೇತ್ರದ ವಿಧಾನಪರಿಷತ್ ಸದಸ್ಯರಾದ ಚೌಡರೆಡ್ಡಿ ತೂಪಲ್ಲಿರವರು ಮಾತನಾಡಿ,ಮಕ್ಕಳು ಓದಿನ ಜೊತೆಯಲ್ಲಿ ಇತರೆ ಚಟುವಟಿಕೆಗಳಲ್ಲಿ ರಾರಾಜಿಸುವಂತೆ ಶಿಕ್ಷಕರು ಪ್ರೋತ್ಸಾಹ ನೀಡಬೇಕು, ಖಡ್ಡಾಯ- ಹೆಚ್ಚವರಿ ವರ್ಗಾವಣೆ ಸಮಸ್ಯೆಯನ್ನು ಶಿಕಣ ಸಚಿವರ ಗಮನಕ್ಕೆ ತಂದಿದ್ದು, ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನ ಪಡುವುದಾಗಿ ತಿಳಿಸಿದರು. ತಾ.ಪಂ. ಅದ್ಯಕ್ಷ ಸೊಗಡು ವೆಂಕಟೇಶ್ ಮಾತನಾಡಿ, ತಾಲ್ಲೂಕಿನ ವಿದ್ಯಾರ್ಥಿಗಳು ಕಲೆ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದು,…
ತುಮಕೂರು: ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಖಿಖಂI)ವು ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ಸಲುವಾಗಿ ಮೈಕಾಲ್, ಮೈಸ್ಪೀಡ್ ಹಾಗೂ ಡಿಎನ್‍ಡಿ ಎಂಬ ಮೂರು ಹೊಸ ಮೊಬೈಲ್ ಅಪ್ಲಿಕೇಶನ್‍ಗಳನ್ನು ಪ್ರಾರಂಭಿಸಿದೆ ಎಂದು ಕಾರ್ಯದರ್ಶಿ ಸುನಿಲ್ ಕೆ ಗುಪ್ತಾ ತಿಳಿಸಿದರು. ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು ನಗರದ ಕನ್ನಡ ಭವನದಲ್ಲಿಂದು ಏರ್ಪಡಿಸಿದ್ದ ಗ್ರಾಹಕರ ಸಂಪರ್ಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸಲು ಹಲವಾರು ಉತ್ತಮ ದೂರಸಂಪರ್ಕ ಸೇವೆಗಳನ್ನು ಪ್ರಾಧಿಕಾರ ಒದಗಿಸುತ್ತಾ ಬಂದಿದ್ದು, ಈಗ ಹೊಸದಾಗಿ 3 ಅಪ್ಲಿಕೇಶನ್‍ಗಳನ್ನು ಪ್ರಾರಂಭಿಸಿದೆ. ದೂರವಾಣಿ ಕರೆಯ ಗುಣ ಮಟ್ಟ ತಿಳಿಯಲು ಮೈಕಾಲ್, ಮೊಬೈಲ್ ನೆಟ್‍ವರ್ಕ್ (ಡೌನ್‍ಲೋಡಿಂಗ್ ಹಾಗೂ ಅಪ್‍ಲೋಡಿಂಗ್)ವೇಗವನ್ನು ತಿಳಿಯಲು ಮೈ ಸ್ಪೀಡ್ ಹಾಗೂ ಅನಪೇಕ್ಷಿತ ವಾಣಿಜ್ಯಾತ್ಮಕ ಸಂದೇಶ/ಕರೆಗಳನ್ನು ನಿಷ್ಕ್ರಿಯಗೊಳಿಸಲು ಡಿಎನ್‍ಡಿ ಅಪ್ಲಿಕೇಶನ್‍ಗಳೊಂದಿಗೆ ಹೊಸ ವೆಬ್ ಪೋರ್ಟಲ್ ಅನ್ನು ಪರಿಚಯಿಸಲಾಗಿದೆ. ಹೊಸ ಅಪ್ಲಿಕೇಶನ್‍ಗಳನ್ನು ಗೂಗಲ್ ಪ್ಲೇಸ್ಟೋರ್‍ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು. ದೇಶದಲ್ಲಿ 116ಕೋಟಿ ಗ್ರಾಹಕರು ಮೊಬೈಲ್…











