ತುಮಕೂರು : ನಗರದ ಶಿರಾಗೇಟ್ ನಾಗಯ್ಯನಪಾಳ್ಯದ ಅನಿಕೇತನ ಶಾಲೆ ಬಳಿ ಗುರುವಾರ ಸಂಜೆ ನಡೆದ ಮಹಾಂತೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಸವಣ್ಣನ ಪಾಳ್ಯದ ಸುಹಾಸ್ (19), ಮನೋಹರ್ (20) ಮತ್ತು ಯಶವಂತ್ (19) ಬಂಧಿತ ಆರೋಪಿಗಳು. ಗುರುವಾರ ಸಂಜೆ ಮಹಾಂತೇಶ್ ಮತ್ತು ಮಂಜುನಾಥ್ ಎಂಬುವವರ ಮೇಲೆ ಬಂಧಿತರು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಮಹಾಂತೇಶ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಆರೋಪಿಗಳ ಪತ್ತೆಗಾಗಿ ಎಸ್.ಪಿ ಡಾ.ಕೆ.ವಂಶಿಕೃಷ್ಣ ಹಾಗೂ ಎಎಸ್‍ಪಿ ಟಿ.ಜೆ.ಉದೇಶ್ ಮುಂದಾಗಿದ್ದರು. ಡಿವೈಎಸ್‍ಪಿ ತಿಪ್ಪೇಸ್ವಾಮಿ ಹಾಗೂ ಸಿಬಿಐ ನವೀನ್ ಉಸ್ತುವಾರಿಯಲ್ಲಿ ತನಿಖಾ ತಂಡ ರಚಿಸಿದ್ದರು.ಕಾರ್ಯಾಚರಣೆಯಲ್ಲಿ ಪಿಎಸ್‍ಐ ವಿಜಯಲಕ್ಷ್ಮಿ, ಕೃಷ್ಣೇಗೌಡ, ಸಿಬ್ಬಂದಿ ರಮೇಶ್, ನಾಗರಾಜ್, ಡಿ.ಮಂಜುನಾಥ್, ರಾಮಚಂದ್ರಯ್ಯ, ನವೀನ್ ಕುಮಾರ್, ಈರಣ್ಣ, ಸೈಯದ್, ಮುಕ್ತಿಯಾರ್, ಪ್ರಸನ್ನಕುಮಾರ್, ಜೈಪ್ರಕಾಶ್, ಸಿದ್ದೇಶ್ವರ್ ಪಾಲ್ಗೊಂಡಿದ್ದರು.ಹತ್ಯೆ ನಡೆದು 24 ಗಂಟೆಯ ಒಳಗೆ ಆರೋಪಿಗಳನ್ನು ಪತ್ತೆ ಹಚ್ಚಿದ ಸಿಬ್ಬಂದಿಯನ್ನು ಎಸ್‍ಪಿ ಪ್ರಶಂಸಿಸಿದ್ದಾರೆ.…
Author: News Desk Benkiyabale
ಗುಬ್ಬಿ : ವೀಕ್ ಕ್ಯಾಂಡಿಡೇಟ್ ಹಾಕಿದ್ದೆ ಗುಬ್ಬಿಯಲ್ಲಿ ಶ್ರೀನಿವಾಸ್ ಸತತವಾಗಿ ಗೆಲುವು ಸಾಧಿಸಲು ಕಾರಣವಾಯಿತು ಎಂದು ಸಂಸದ ಹಾಗೂ ದಿಶಾ ಉಪಸಮಿತಿ ಅಧ್ಯಕ್ಷ ಜಿ.ಎಸ್.ಬಸವರಾಜು ಅಚ್ಚರಿಯ ಮಾತುಗಳನ್ನಾಡಿದರು. ತಾಲ್ಲೂಕಿನ ಮಾರಶೆಟ್ಟಿಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ದಿಶಾ ಉಪಸಮಿತಿ ಪ್ರಗತಿ ಪರಿಶೀಲನೆ ಸಭೆ ಹಾಗೂ ಸಂಸದ ಆದರ್ಶ ಗ್ರಾಮ ಯೋಜನೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಈಚೆಗೆ ಗುಬ್ಬಿ ಶಾಸಕರು ನೀಡಿರುವ ಟೀಕಾ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವ ಭರದಲ್ಲಿ ಕಿಡಿಕಾರುತ್ತಲೇ ಗುಬ್ಬಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ದಿ ಆಗಿಲ್ಲ. ಅಸಮರ್ಥರನ್ನು ಆಯ್ಕೆ ಮಾಡುತ್ತೀರಿ. ಶ್ರೀನಿವಾಸ್ ಶಾಸಕನಾಗುವಂತಿಲ್ಲ. ಆತನ ವಿರುದ್ದ ವೀಕ್ ಕ್ಯಾಂಡಿಡೇಟ್ ಹಾಕಿ ತಪ್ಪಾಯ್ತು ಎಂದು ಬೆಟ್ಟಸ್ವಾಮಿ ಅವರನ್ನು ಅಸಮರ್ಥ ಎಂದು ಪರೋಕ್ಷವಾಗಿ ಹೇಳಿ ಸಭಿಕರಲ್ಲಿ ಅಚ್ಚರಿ ತಂದರು. ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ನನ್ನ ಮೇಲೆ ಟೀಕೆ ಮಾಡಿರುವ ಗುಬ್ಬಿ ಶಾಸಕರು ಅಭಿವೃದ್ದಿ ವಿಚಾರದಲ್ಲಿ ಶ್ವೇತಪತ್ರ ಹೊರಡಿಸಲಿ. ನಾನು ಕೂಡಾ ನನ್ನ ಕೊಡುಗೆಯನ್ನು…
ತುಮಕೂರು : ದೇಶದಲ್ಲಿ ಆರ್ಥಿಕ ಕುಸಿತದಿಂದ ಉದ್ದಿಮೆಗಳು, ಕೈಗಾರಿಕೆಗಳು ಬಾಗಿಲು ಮುಚ್ಚಿದ್ದು ದುಡಿಯುವ ವರ್ಗ ತತ್ತರಿಸಿ ಹೋಗಿದೆ. ಸ್ಕೀಂ ನೌಕರರು, ಸಂಘಟಿತ ಮತ್ತು ಅಸಂಘಟಿತ ನೌಕರರು ಇನ್ನಿಲ್ಲದ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಮಾಜಿ ರಾಜ್ಯಸಭಾ ಸದಸ್ಯರು ಆದ ಸಿಐಟಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತಪನ್ ಸೇನ್ ಆತಂಕ ವ್ಯಕ್ತಪಡಿಸಿದರು. ತುಮಕೂರಿನ ಗಾಜಿನಮನೆಯಲ್ಲಿ ಅಕ್ಟೋಬರ್ 8ರಂದು ಸಮಗ್ರ, ಸಮೃದ್ಧ ಮತ್ತು ಸೌಹಾರ್ದಕ್ಕಾಗಿ ನಡೆಯುತ್ತಿರುವ ಸಿಐಟಿಯು 14ನೇ ರಾಜ್ಯ ಮಟ್ಟದ ಸಮ್ಮೇಳನದ ಬಹಿರಂಗ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ದೇಶವನ್ನು ಮಾರಾಟ ಮಾಡಲು ಹೊರಟಿದೆ. ಬಂಡವಾಳಶಾಹಿಗಳು ಕಿರುಪಾಲುದಾರರಾಗುತ್ತಿದ್ದಾರೆ. ಕೈಗಾರಿಕೆಗಳು ಮುಚ್ಚುತ್ತಿದ್ದು ಕಾರ್ಮಿಕರು ಬೀದಿಪಾಲಾಗುತ್ತಿದ್ದಾರೆ ಎಂದು ಹೇಳಿದರು. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾg ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಲು ಹೊರಟಿದೆ. ಕಾನೂನುಗಳನ್ನು ಸಂಹಿತೆಗಳನ್ನಾಗಿ ಮಾಡುತ್ತ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಬಂಡವಾಳ ಶಕ್ತಿಗಳು ಮತ್ತು ರಾಜಕೀಯ…
ತುಮಕೂರು: ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳು ತ್ವರಿತವಾಗಿ ಪೂರ್ಣಗೊಳ್ಳದ ಕಾರಣ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ತಾತ್ಕಾಲಿಕ ಸ್ಥಳಾಂತರಕ್ಕೆ ಅಡ್ಡಿಯಾಗಿದೆ. ಸ್ಥಳಾಂತರಕ್ಕೆ ಪೂರಕವಾದ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ|| ರಾಕೇಶ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು. ತಮ್ಮ ಕಚೇರಿಯಲ್ಲಿಂದು ಕೆಎಸ್ಸಾರ್ಟಿಸಿ, ಸ್ಮಾರ್ಟ್ ಸಿಟಿ, ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣವನ್ನು ಹೈಟೆಕ್ ಬಸ್ ನಿಲ್ದಾಣವನ್ನಾಗಿ ನಿರ್ಮಿಸುವ ಕಾಮಗಾರಿ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಜೆಸಿ ರಸ್ತೆಯಲ್ಲಿರುವ ಕೆಎಸ್ಸಾರ್ಟಿಸಿ ಘಟಕ-1ರ ಸ್ಥಳಕ್ಕೆ ಹಾಲಿಯಿರುವ ಕೆಎಸ್ಸಾರ್ಟಿಸಿ ಬಸ್‍ನಿಲ್ದಾಣವನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಸ್ಮಾರ್ಟ್‍ಸಿಟಿ ವತಿಯಿಂದ ಕೈಗೊಂಡಿರುವ ಕಾಮಗಾರಿಗಳನ್ನು ನವೆಂಬರ್ 18ರೊಳಗಾಗಿ ಪೂರ್ಣಗೊಳಿಸುವಂತೆ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು. ನಗರದ ಜೆ.ಸಿ ರಸ್ತೆ, ಪ್ರಶಾಂತ್ ಚಿತ್ರಮಂದಿರ ಬಳಿ, ಅಶೋಕ ರಸ್ತೆಗಳ ಬದಿಯಲ್ಲಿರುವ ತಳ್ಳುಗಾಡಿ ಅಂಗಡಿ, ಹಣ್ಣಿನ ಅಂಗಡಿ ಸೇರಿದಂತೆ…
ತುಮಕೂರು : ನಗರದಲ್ಲಿ ಮತ್ತೊಂದು ಭೀಕರ ಕೊಲೆಯಾಗಿದೆ. ತುಮಕೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ನಾಗಣ್ಣನ ಪಾಳ್ಯದಲ್ಲಿ ಸಂಜೆ 4.30 ಸುಮಾರಿನಲ್ಲಿ ಮಹಾಂತೇಶ್ ಮತ್ತು ಮಂಜುನಾಥ್ ಎಂಬುವರಿಬ್ಬರ ಮೇಲೆ ಭೀಕರ ಸ್ವರೂಪದಲ್ಲಿ ಹಲ್ಲೆ ಮಾಡಿದ್ದಾರೆ. ಲಾಂಗು ಮತ್ತು ಮಚ್ಚು ಹಾಗೂ ಇತರೆ ಮಾರಕಾಸ್ತ್ರಗಳನ್ನು ಹಿಡಿದುಬಂದ ರೌಡಿಗಳ ಗುಂಪು ಅಮಾನವೀಯವಾಗಿ ಹಲ್ಲೆ ಮಾಡಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಾಂತೇಶ್ ಹಾಗೂ ಮಂಜುನಾಥ್ ರವರನ್ನ ಆಸ್ಪತ್ರೆಗೆ ದಾಖಲು ಮಾಡಿದ್ದು, ಆಸ್ಪತ್ರೆಯಲ್ಲಿ ಮಹಾಂತೇಶ್ ಕೊನೆಯುಸಿರೆಳೆದಿದ್ದಾರೆ. ಮಹಾಂತೇಶ್ ಮತ್ತು ಚಿನ್ನು ಎನ್ನುವವರ ನಡುವೆ ಆಗಾಗ ಗಲಾಟೆ-ಗದ್ದಲಗಳು ನಡೆಯುತ್ತಿತ್ತು. ಚಿನ್ನು ಎನ್ನುವ ರೌಡಿ ಕುಖ್ಯಾತ ರೌಡಿ ರೋಹಿತ್ ನ ಶಿಷ್ಯನಾಗಿದ್ದು, ಮುಂದಾಗಬಹುದಾದ ಅನಾಹುತವನ್ನು ಗಮನಿಸಿ ಈ ಹಿಂದೆಯೇ ನಗರ ವೃತ್ತ ನಿರೀಕ್ಷಕ ಚಂದ್ರಶೇಖರ್ ರವರು ಮಹಾಂತೇಶ ಮತ್ತು ಚಿನ್ನುವನ್ನ ಕರೆಸಿ ಬುದ್ಧಿ ಹೇಳಿ ಎಚ್ಚರಿಕೆ ನೀಡಿದ್ದರು. ಆದರೆ, ಆಂತರಿಕವಾಗಿ ಚಿನ್ನು…
ತುಮಕೂರು: ನಗರಕ್ಕೆ ಕುಡಿಯುವ ನೀರು ಪೂರೈಸುವ ಬುಗುಡನಹಳ್ಳಿ ಪಂಪ್ ಹೌಸ್‍ಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಎಕ್ಸ್‍ಪ್ರೆಸ್ ಲೈನ್‍ನ ಕಂಬಗಳು ಮಣ್ಣು ಮಾಫಿಯಾದ ಕರಾಳತೆಯಿಂದ ನೀರಿನಲ್ಲಿ ಮುಳುಗಿದ್ದು ನಗರಕ್ಕೆ ಎರಡು ದಿನಗಳಿಂದ ನೀರು ಪೂರೈಕೆ ಮಾಡಲಾಗುತ್ತಿಲ್ಲ. ನಗರದ ವಾರ್ಡ್ ನಂ-01ರ ಸಂಜೀವಯ್ಯನ ಕಟ್ಟೆಯಲ್ಲಿ ಅಕ್ರಮವಾಗಿ ಮಣ್ಣು ತುಂಬುತ್ತಿರುವ ಬಗ್ಗೆ ಸಿಪಿಐ 26-10-2018ರಂದು ಜಿಲ್ಲಾಧಿಕಾರಿಗಳು, ತಹಶೀಲ್ದಾರ್, ಕಂದಾಯಾಧಿಕಾರಿಗಳು, ಪೊಲೀಸ್ ಸೇರಿದಂತೆ ಆಡಳಿತ ವ್ಯವಸ್ಥೆಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ಇದ್ದರಿಂದ ಇಂದು ಸಂಜೀವಯ್ಯನ ಕೆರೆಯಲ್ಲಿ 40ರಿಂದ 50 ಅಡಿ ಆಳ ತೆಗೆದು ಅಕ್ರಮವಾಗಿ ಮಣ್ಣನ್ನು ಪ್ರತಿಷ್ಠಿತ ವ್ಯಕ್ತಿಗಳ ಲೇಔಟ್ ಹಾಗೂ ರೈಲ್ವೆ ಕಾಮಗಾರಿಗೆ ಬಳಸಿಕೊಳ್ಳಲಾಗಿದೆ. ಕೆರೆಯಲ್ಲಿ ಮಣ್ಣು ತುಂಬುತ್ತಿರುವುದರಿಂದಾಗಿ ಬುಗುಡನಹಳ್ಳಿ ಪಂಪ್‍ಹೌಸ್‍ಗೆ ಸಂಪರ್ಕ ಕಲ್ಪಿಸುವ ಎಕ್ಸ್‍ಪ್ರೆಸ್ ಲೈನ್‍ನ ವಿದ್ಯುತ್ ಕಂಬಗಳು ನೀರಿನಲ್ಲಿ ಮುಳುಗುಡೆಯಾಗುತ್ತವೆ. ಇದರಿಂದಾಗಿ ಬೆಸ್ಕಾಂ ಇಲಾಖೆಗೆ ನಷ್ಟವಾಗಲಿದ್ದು, ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೂ ಸಹ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗದೇ…
ಕೊರಟಗೆರೆ : ತುಮಕೂರು ಕೆ.ಎಂ.ಎಫ್ ನಿಂದ ಉದ್ಘಾಟನೆಗೊಂಡ ಘಟಕಗಳನ್ನು ಮತ್ತೆ ಉದ್ಘಾಟಿಸಿ, ಆಹ್ವಾನ ಪತ್ರಿಕೆಗಳಲ್ಲಿ ಸರ್ಕಾರದ ನಿಯಮದ ಶಿಷ್ಟಾಚಾರ ಉಲ್ಲಂಘಿಸಿ ಕಾರ್ಯಕ್ರಮ ನಡೆಸಲಾಗಿದೆ ಎಂದು ಸ್ಥಳಿಯರು ಆರೋಪಿಸಿದ್ದಾರೆ. ಕೊರಟಗೆರೆ ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಹಾಲು ಉತ್ಪಾದಕರ ಸಹಕಾರ ಸಂಘದ ಕುರಂಕೋಟೆ ಮತ್ತು ಬೆಂಡೋಣೆ ಗ್ರಾವiಗಳಲ್ಲಿ ನೂತನ ಬಿ.ಎಂ.ಸಿ ಕಟ್ಟಡಗಳನ್ನು ಉದ್ಘಾಟನಾ ಸಮಾರಂಭವನ್ನು ನ.6 ರಂದು ಕಾರ್ಯಕ್ರಮ ನಡೆಸುವ ಮುಖಾಂತರ ಉದ್ಘಾಟಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಹಾಲು ಉತ್ಪಾದಕರ ಸಂಘದ ಅದ್ಯಕ್ಷರನ್ನೊಳಗೊಂಡು ಕೆಲ ನಿರ್ದೇಶಕರು, ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು. ಆದರೆ ತಾಲ್ಲೂಕಿನಲ್ಲಿ ಈ ಹಿಂದೆಯೇ ಸೆ.6. 2018 ರಂದು 6 ಗ್ರಾಮಗಳಲ್ಲಿ ಬಿ.ಎಂ.ಸಿ ಘಟಕಗಳ ಉದ್ಘಾಟನೆಯನ್ನು ತಾಲ್ಲೂಕಿನ ಕ್ಯಾಮೇನಹಳ್ಳಿ ಗ್ರಾಮದಲ್ಲಿ ಸಮೂಹಿಕವಾಗಿ ಉದ್ಘಾಟನಾ ಸಮಾರಂಭ ನಡೆದಿತ್ತು. ಹಾಲು ಉತ್ಪಾದಕರ ಸಂಘಗಳಲ್ಲಿ ಆರ್ಥಿಕ ಸ್ಥಿತಿ ಉಳಿಸುವ ನಿಟ್ಟಿನಲ್ಲಿ ಆರೂ ಕಡೆ ಸಮಾರಂಭ ಮಾಡದೆ ವಿದ್ಯುಕ್ತವಾಗಿ ಒಂದು ಕಡೆ ಮಾಡಲಾಗಿತ್ತು. ಆದರೆ ತಾಲ್ಲೂಕಿನ ಕುರಂಕೋಟೆ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ…
ತುಮಕೂರು : ನಗರದ ಹೃದಯ ಭಾಗದ ರೈಲ್ವೇ ಸ್ಟೇಷನ್ ರಸ್ತೆಯಲ್ಲಿ ನಿರ್ಭಯವಾಗಿ ರೌಡಿ ಗ್ಯಾಂಗ್ ಲಾಂಗು ಮಚ್ಚು ಹಿಡಿದು ರಾಜಾರೋಷವಾಗಿ ಮತ್ತೊಂದು ರೌಡಿ ಗ್ಯಾಂಗ್ ನ ಇಬ್ಬರನ್ನೂ ಕೊಚ್ಚಿ ಕೊಲೆ ಮಾಡುವ ಹಂತ ತಲುಪಿದೆ ಎಂದರೆ ಸ್ಥಳೀಯ ಖಾಕಿಯಲ್ಲಿ ಖಧರ್ ಇಲ್ಲವೆನ್ನುವುದು ಸ್ಪಷ್ಟವಾಗುತ್ತಿದೆ. ವಿಶೇಷವೆಂದರೆ ಕುಕೃತ್ಯ ನಡೆದದ್ದು ಬೇರೆಲ್ಲೂ ಅಲ್ಲ ಲೇಡಿ ಸಿಗಂ ಆಗಲು ಹೋಗಿ ಲೇವಡಿ ಸಿಂಗಂ ಆಗಿ ಸಾರ್ವಜನಿಕವಾಗಿ ನಗೆ ಪಾಟಲಿಗೀಡಾದ ಪಾರ್ವತಮ್ಮ ಎಂಬ ತಿಲಕ್ ಪಾರ್ಕ್ ವೃತ್ತನಿರೀಕ್ಷಕರ ವ್ಯಾಪ್ತಿಯ ತಿಲಕ್ ಪಾರ್ಕ ಪೊಲೀಸ್ ಠಾಣಾ ಸರಹದ್ದಿನ ರೈಲ್ವೆ ಸ್ಟೇಷನ್ ರಸ್ತೆಯ ಮಹಾವೀರ ಕಲ್ಯಾಣ ಮಂಟಪದ ಎದುರು. ನವೆಂಬರ್ 2 ರ ರಾತ್ರಿ 11-30 ರ ಸುಮಾರಿನಲ್ಲಿ ಹತ್ಯೆಯಾದ ಕುಖ್ಯಾತ ರೌಡಿ ಹಟ್ಟಿ ಮಂಜನ ಬಲಗೈ ಭಂಟ ರೌಡಿಶೀಟರ್‍ಗಳಾದ ದಿವಾಕರ್ ಮತ್ತು ಸಾಲೆ ಮಂಜನ ಮೇಲೆ ಅಟ್ಯಾಕ್ ಮಾಡಿ ಕೊಲ್ಲಲು ಪ್ರಯತ್ನಿಸಿದ ಹಟ್ಟಿ ಮಂಜನ ಹಂತಕರಾದ ಶಂಬು, ರಾಘವ, ಸಂಪಿ,…
ಗುಬ್ಬಿ : ಜನಸಂಖ್ಯಾ ಅನುಗುಣವಾಗಿ ಪರಿಶಿಷ್ಟ ಪಂಗಡಕ್ಕೆ ನೀಡಬೇಕಾದ ಮೀಸಲಾತಿಯನ್ನು ಶೇ.೭.೫ ಕ್ಕೆ ಏರಿಸಬೇಕು. ಈ ಬಗ್ಗೆ ದೊಡ್ಡ ಹೋರಾಟ ನಡೆಸಿ ಹಕ್ಕೋತ್ತಾಯ ಮಂಡಿಸಲಾಗಿದೆ. ಆದರೂ ಸರ್ಕಾರ ನಿರ್ಲಕ್ಷ್ಯ ತೋರಿದಂತೆ ಕಾಣುತ್ತಿದೆ. ಮೀಸಲಾತಿ ನಮ್ಮ ಹಕ್ಕು ಯಾರಪ್ಪನ ಮನೆಯ ಸ್ವತ್ತಲ್ಲ ಎಂದು ರಾಜನಹಳ್ಳಿ ವಾಲ್ಮೀಕಿ ಪೀಠಾಧ್ಯಕ್ಷ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಗುಡುಗಿದರು. ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ವಾಲ್ಮೀಕಿ ನಾಯಕರ ಸಮಾಜ ಹಮ್ಮಿಕೊಂಡಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಬುಡಕಟ್ಟು ಜನಾಂಗವಾಗಿ ತನ್ನದೇ ಆದ ವೈಶಿಷ್ಟ ಬೆಳೆಸಿಕೊಂಡು ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ವಿಚಾರದಲ್ಲಿ ಅನ್ಯಾಯವಾಗುತ್ತಿದೆ. ಎಲ್ಲಾ ರಂಗದಲ್ಲೂ ಮೀಸಲಾತಿ ಪಡೆದಲ್ಲಿ ನಮ್ಮ ಸಮುದಾಯ ಮುಖ್ಯವಾಹಿನಿಗೆ ಬರಲಿದೆ. ಈ ನಿಟ್ಟಿನಲ್ಲಿ ನಿಗದಿಯಾಗಿರುವ ಶೇ.೩ ರ ಮೀಸಲಾತಿಯನ್ನು ಶೇ.೭.೫ ಕ್ಕೆ ಏರಿಕೆ ಮಾಡಬೇಕಿದೆ ಎಂದರು. ದೇಶದಲ್ಲಿ ಬಹುಸಂಖ್ಯೆಯಲ್ಲಿರುವ ವಾಲ್ಮೀಕಿ ಸಮುದಾಯ…
ತುಮಕೂರು: ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದ ಪಕ್ಕದಲ್ಲಿ ಮಾಜಿ ಉಪಪ್ರಧಾನಿ ಬಾಬು ಜಗಜೀವನರಾಂ ಭವನ ನಿರ್ಮಾಣಕ್ಕೆ ಮೀಸಲಿಟ್ಟಿರುವ ನಿವೇಶನವನ್ನು ತಾಲ್ಲೂಕು ಸಮಾಜಕಲ್ಯಾಣಾಧಿಕಾರಿ ಶ್ರೀನಿವಾಸ್ ಅವರು ದಲಿತ ಪರ ಸಂಘಟನೆಗಳ ಮುಖಂಡರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಾಬು ಜಗಜೀವನರಾಂ ಭವನ ನಿರ್ಮಾಣಕ್ಕೆಂದು ಮೀಸಲಿಟ್ಟಿರುವ ಜಾಗದ ಬಗ್ಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟರ ಕುಂದುಕೊರತೆ ಸಭೆಯಲ್ಲಿ ದಲಿತ ಮುಖಂಡರು ಪ್ರಸ್ತಾಪಿಸಿ, ಭವನ ನಿರ್ಮಾಣಕ್ಕೆ ಮುಂದಾಗಬೇಕು, ಕಾಪೌಂಡ್ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದ್ದ ಹಿನ್ನೆಲೆಯಲ್ಲಿ ತಾಲ್ಲೂಕು ಸಮಾಜಕಲ್ಯಾಣಾಧಿಕಾರಿ ಶ್ರೀನಿವಾಸ್ ಅವರು ಸ್ಥಳ ಪರಿಶೀಲನೆ ನಡೆಸಿದರು. ಭವನಕ್ಕೆಂದು ಮೀಸಲಿಟ್ಟಿರುವ ಜಾಗದಲ್ಲಿ ಸುರಿಯಲಾಗಿರುವ ಕಸವನ್ನು ತೆರವುಗೊಳಿಸುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದ ಅವರು, ನಿವೇಶನವನ್ನು ಒತ್ತುವರಿ ಮಾಡದಂತೆ ಹಾಗೂ ನಿವೇಶನವನ್ನು ಸ್ವಚ್ಛವಾಗಿ ಇಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಈ ವೇಳೆ ಭರವಸೆ ನೀಡಿದರು. ಈ ವೇಳೆ ದಲಿತ ಮುಖಂಡರಾದ ಎ.ನರಸಿಂಹಮೂರ್ತಿ, ಮರಳೂರು…











