ತುಮಕೂರು: ವಿದ್ಯಾರ್ಥಿಗಳಿಗೆ ಅಕ್ಷರದೊಂದಿಗೆ ಬದುಕಿನ ಮೌಲ್ಯಗಳ ಬಗ್ಗೆ ಅರಿವನ್ನು ಮೂಡಿಸುವವರೇ ನಿಜವಾದ ಗುರು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ(ದಕ್ಷಿಣ)ಯ ಸಹಯೋಗದಲ್ಲಿಂದು ನಗರದ ಅಮಾನಿಕೆರೆಯ ಗಾಜಿನಮನೆಯಲ್ಲಿ ಏರ್ಪಡಿಸಿದ್ದ ಡಾ: ಸರ್ವಪಲ್ಲಿ ರಾಧಾಕೃಷ್ಣನ್ ಅವರ 132ನೇ ಜನ್ಮ ದಿನಾಚರಣೆ ಹಾಗೂ ಶಿಕ್ಷಕರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣಕ್ಕೆ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಶಕ್ತಿಯಿರುತ್ತದೆ. ಶಿಕ್ಷಕನಿಗೂ ವಿದ್ಯಾರ್ಥಿಗೂ ಅವಿನಾಭಾವ ಸಂಬಂಧವಿದೆ. ಮಕ್ಕಳು ಹಿರಿಯರ ಹಾಗೂ ಶಿಕ್ಷಕರ ನಡೆ-ನುಡಿಗಳನ್ನು ಅನುಸರಿಸುವ ಮನೋಭಾವ ಹೊಂದಿರುತ್ತಾರೆ. ಈ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳಿಗೆ ಬುದ್ಧಿ ಹೇಳುವ ನೈತಿಕತೆಯನ್ನು ಬೆಳೆಸಿಕೊಳ್ಳಬೇಕು. ಮಗು ತನ್ನ ಜಗತ್ತಿನಲ್ಲಿ ಶಿಕ್ಷಕನೇ “ಸೂಪರ್ ಮ್ಯಾನ್”. ಗುರುವಿಗೆ ತಿಳಿಯದಿರುವ ವಿಷಯವೇ ಇಲ್ಲ ಎಂದು ಭಾವಿಸಿಕೊಂಡಿರುತ್ತದೆ. ಪ್ರತಿ ಮಗುವಿನ ಉತ್ತಮ ಭವಿಷ್ಯದ ಜೀವನವನ್ನು ರೂಪಿಸುವ ಶಕ್ತಿ…
Author: News Desk Benkiyabale
ಮಧುಗಿರಿ : ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಬಂಧನ ಖಂಡಿಸಿ ಗುರುವಾರ ಡಿಕೆಶಿ ಅಭಿಮಾನಿ ಬಳಗ ಮತ್ತು ಕನ್ನಡ ಜಾಗೃತಿ ವೇದಿಕೆ ವತಿಯಿಂದ ಕರೆ ನೀಡಿದ್ದ ಮಧುಗಿರಿ ಬಂದ್ ಬಾಗಶಃ ಯಶಸ್ವಿಯಾಗಿದೆ. ಬೆಳಗ್ಗೆ 8 ಗಂಟೆಯಿಂದಲೇ ಡಿಕೆಶಿ ಅಭಿಮಾನಿಗಳು ಮತ್ತು ಕನ್ನಡ ಜಾಗೃತಿ ವೇದಿಕೆ ಕಾರ್ಯಕರ್ತರು ಪಟ್ಟಣದಾಧ್ಯಂತ ಸಂಚರಿಸಿ ತೆರೆದಿದ್ದ ಅಂಗಡಿಗಳನ್ನು ಮುಚ್ಚಿಸಿ ಬಂದ್ ಸಹಕರಿಸುವಂತೆ ಮನವಿ ಸಲ್ಲಿಸಿ ಕೇಂದ್ರ ಸರ್ಕಾರದ ವಿರುದ್ದ ಘೋಷನೆ ಕೂಗಿದರು. ಸಣ್ಣಪುಟ್ಟ ಕೇರಿಗಳಲ್ಲಿ ಅಂಗಡಿಗಳು ತೆರೆದಿರುವುದು ಹೊರತುಪಡಿಸಿದರೆ ಬಹುತೇಕ ಅಂಗಡಿ ಮುಗ್ಗಟ್ಟುಗಳು ಬಂದ್ ಆಗಿದ್ದವು. ವಾಹನ ಸಂಚಾರವೂ ವಿರಳವಾಗಿತ್ತು. ನಂತರ ಪಟ್ಟಣದ ಡೂಂ ಲೈಟ್ ವೃತ್ತದಲ್ಲಿ ಜಮಾಯಿಸಿ ಡಿಕೆಶಿ ಬಂಧನದ ವಿರುದ್ದ ಕಿಡಿ ಕಾರಿದರು. ದ್ವೇಷದ ರಾಜಕಾರಣ ಮಾಡುತ್ತಿರುವ ಬಿಜೆಪಿ ತನ್ನ ವರ್ತನೆಯನ್ನು ಬದಲಾಯಿಸಿಕೊಳ್ಳಬೇಕು. ಮಾಜಿ ಸಚಿವ ಡಿಕೆ.ಶಿವಕುಮಾರ್‍ರವರನ್ನು ತಕ್ಷಣ ಬಿಡುಗಡೆ ಮಾಡಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು…
ಗುಬ್ಬಿ : ಸರ್ಕಾರಿ ಬಸ್ ಮತ್ತು ದ್ವಿಚಕ್ರವಾಹನ ಮುಖಾಮುಖಿ ಡಿಕ್ಕಿ ಸಂಭವಿಸಿ ದಂಪತಿ ಸಾವನ್ನಪ್ಪಿದ ಧಾರುಣ ಘಟನೆ ಬುಧವಾರ ಮುಂಜಾನೆ ತಾಲ್ಲೂಕಿನ ಎಚ್.ಎಚ್.ಗೇಟ್ ಪೆಟ್ರೋಲ್ ಬಂಕ್ ಬಳಿಯ ರಾ.ಹೆ.206 ರಲ್ಲಿ ನಡೆದಿದೆ. ಚಿಕ್ಕನಾಯಕನಹಳ್ಳಿ ತಾಲ್ಲೂಕು ದೊಡ್ಡಎಣ್ಣೆಗೆರೆ ಗ್ರಾಮದ ದಂಪತಿ ಈಶ್ವರಯ್ಯ(35) ಮತ್ತು ಗಾಯತ್ರಿದೇವಿ(30) ಮೃತಪಟ್ಟವರು. ಬೆಂಗಳೂರಿನ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡುವ ಈಶ್ವರಯ್ಯ ಕುಟುಂಬ ಸಮೇತ ತಮ್ಮ ಸ್ವಗ್ರಾಮದಿಂದ ಹಬ್ಬ ಮುಗಿಸಿ ಮರಳಿ ಬೆಂಗಳೂರಿನತ್ತ ಬೈಕ್‍ನಲ್ಲಿ ಸಾಗುವ ಮಾರ್ಗ ಮಧ್ಯೆ ಈ ದುರ್ಘಟನೆ ಸಂಭವಿಸಿದೆ. ತುಮಕೂರಿನಿಂದ ಮಡಿಕೇರಿಯತ್ತ ಸಾಗಿದ್ದ ಸರ್ಕಾರಿ ಬಸ್ ನೇರ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಈಶ್ವರಯ್ಯ ಸಾವನ್ನಪ್ಪಿದ್ದಾರೆ. ತಲೆಗೆ ತೀವ್ರ ಪೆಟ್ಟಾಗಿದ್ದ ಗಾಯತ್ರಿದೇವಿ ಜಿಲ್ಲಾಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. 9 ವರ್ಷದ ಕೀರ್ತಿ ಎಂಬ ಪುತ್ರ ಅದೃಷ್ಟವಶಾತ್ ಗಾಯಗಳಿಂದ ಬದುಕುಳಿದಿದ್ದು ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗುಬ್ಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಾವಗಡ : ತಾಲ್ಲೂಕಿನ ಬೋಡರಹಳ್ಳಿ ಗ್ರಾಮದಲ್ಲಿ ಗಣಪತಿ ಹಬ್ಬವನ್ನು ಮನೆ ಮನೆಗೆ ಒಂದು ಗಿಡ ನೆಡುವ ಮೂಲಕ ಪರಿಸರ ಸ್ನೇಹಿ ಗಣೇಶ ಹಬ್ಬವನ್ನು ಆಚರಿಸಿದರು. ಪಾವಗಡ ಪಿಎಸ್ ಐ ರಾಘವೇಂದ್ರ ಅವರು ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥ ಬಾಲಾಜಿ, ಗಣೇಶ ಚತುರ್ಥಿ ಮನೆ ಮಂದಿ, ಊರು ಕೇರಿಯವರನ್ನೆಲ್ಲಾ ಒಂದುಗೂಡಿಸುವ ಹಬ್ಬ. ಹಾಗೆಯೇ ಇದೀಗ ಅದು ಪರಿಸರಪ್ರೇಮಿಗಳನ್ನು ಒಂದುಗೂಡಿಸುವ ಹಬ್ಬವೂ ಹೌದು. ಗಣೇಶ ಹಬ್ಬವನ್ನು ಪರಿಸರಸ್ನೇಹಿಯನ್ನಾಗಿಸಲು ನಮ್ಮ ಹಳ್ಳಿಯಲ್ಲಿ ಈ ಬಾರಿ ಹಬ್ಬವನ್ನು ವಿಭಿನ್ನವಾಗಿ ಆಚರಿಸಲು ನಿರ್ಧರಿಸಿದ್ದೇವೆ. ಕಾರಣ ಇಷ್ಟೆ, ಈ ಬಾರಿನೂ ಮಳೆ ಇಲ್ಲ, ಬೆಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಕೆರೆಗಳು ಭತ್ತಿ ಹೊಗಿವೆ. ಕೊಳವೇ ಬಾವಿಗಳಲ್ಲಿ ನೀರು ಕಮ್ಮಿಯಾಗಿದೆ ಹಾಗು ಕೆಲವು ನಿಂತು ಹೋಗಿವೆ. 1000-1200 ಅಡಿ ಕೊಳವೆ ಬಾವಿ ಕೊರೆದರೂ ನೀರು ಸಿಗುತ್ತಿಲ್ಲ. ಮಳೆಗಾಲದಲ್ಲೇ ಇಂತಹ ಪರಿಸ್ಥಿತಿ ಎಂದರೆ,…
ತುಮಕೂರು: ನಗರದ ತಿಲಕ್‍ಪಾರ್ಕ್ ಪೊಲೀಸ್ ವೃತ್ತ ನಿರೀಕ್ಷಕಿ ಪಾರ್ವತಮ್ಮ ಈಚೆಗೆ ರೌಡಿ ಶೀಟರ್‍ಗಳಿಗೆ ಕೊಟ್ಟ ವಾರ್ನಿಂಗ್ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು ವಿಡಿಯೋ ವೈರೆಲ್ ಆಗಿದೆ. ಕರ್ತವ್ಯದಲ್ಲಿದ್ದ ಸಿಪಿಐ ಪಾರ್ವತಮ್ಮ ರೌಡಿ ಶೀಟರ್‍ಗಳಿಗೆ ಪರಿವರ್ತನಾ ಪಾಠ ಹೇಳಲು ಹೋಗಿ ತಾವೇ ಪಾಠ ಕಲಿಯುವಂತಹ ಸ್ಥಿ?ತಿಗೆ ತಾವೇ ತಂದುಕೊಂಡಿದ್ದಾರೆ ಎಂದು ಕೆಲ ಅಧಿಕಾರಿಗಳೇ ಹೇಳುತ್ತಿದ್ದಾರೆ. ಅಸಂಬದ್ಧ ವಾರ್ನಿಂಗ್, ಒಣ ಪ್ರತಿಷ್ಠೆ ತೋರಿದ ಸಿಪಿಐಗೆ ಗರ್ವಭಂಗವಾಗಿದೆ. ನಾಗರೀಕ ಸಮಾಜದ ಶಾಂತಿ, ಸೌಹಾರ್ದತೆ ಕಾಪಾಡುವುದು ಪೆÇಲೀಸ್ ಇಲಾಖೆ ಕರ್ತವ್ಯ. ಆದರೆ, ತಾವು ಏನು, ಹೇಳ್ತಿದ್ದೇನೆ ಎಂಬ ಅರಿವೂ ಇಲ್ಲದೆ ಏಕಾಏಕಿ ಸಿಂಗಂ ಆಗಲು ಹೊರಟ ಲೇಡಿ ಟೈಗರ್‍ನ ದಬ್ಬಾಳಿಕೆಗೆ ಜನ ಮುಸಿ ಮುಸಿ ನಗುವಂತಾಗಿದೆ. ಠಾಣೆ ಮುಂದೆ ನಿಂತ ಪಾರ್ವತಮ್ಮ ಗನ್ ಲೋಡ್ ಆಗಿದೆ, ಎನ್‍ಕೌಂಟರ್ ಮಾಡ್ಬಿಡ್ತೀನಿ ಎನ್ನುವ ದಾಟಿಯಲ್ಲಿ ಮಾತಾಡಿದ್ದಾರೆ. ನಿಮ್ಮಲ್ಲಿ ಮದುವೆ ಆಗದವರು…
ತುಮಕೂರು: ಹೇಮಾವತಿ ಉಪನಾಲೆ 24ರಲ್ಲಿ ನೀರು ಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ ಜಿಲ್ಲೆಗೆ ಹೇಮಾವತಿ ನೀರನ್ನು ಹರಿಸುವ ಪ್ರಯತ್ನವನ್ನು ಮಾಡದ ರಾಜಕಾರಣಿಗಳು, ಹೇಮಾವತಿ ವಿಚಾರವನ್ನು ಕೇವಲ ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಉಪನಾಲೆ 24ರ ವ್ಯಾಪ್ತಿಯಲ್ಲಿ ಬರುವ ಗುಬ್ಬಿ ತಾಲ್ಲೂಕಿನ ಎಸ್.ಕೊಡಗೀಹಳ್ಳಿ, ಕುನ್ನಾಲ, ಚಂಗಾವಿ, ಹಿಂಡಿಸ್ಕರೆ ವ್ಯಾಪ್ತಿಯ ಕೆರೆಗಳಿಗೆ ನೀರು ಹರಿಸದೆ, ಉಪನಾಲೆ 23, 25ಕ್ಕೆ ಮಾತ್ರ ಹೇಮಾವತಿ ನೀರನ್ನು ಹರಿಸಲಾಗುತ್ತಿದೆ. ಕುಣಿಗಲ್ ಮತ್ತು ಸಿಎಸ್‍ಪುರ ಕೆರೆಗಳಿಗೆ ನೀರು ಹರಿಸುವಾಗ ಮಾತ್ರ ಉಪನಾಲೆ 24ರಲ್ಲಿ ನೀರು ಹರಿಸಲು ಸಾಧ್ಯ, ಆದರೆ ಅಧಿಕಾರಿಗಳು ಉಪನಾಲೆ 24ಕ್ಕೆ ನೀರು ಹರಿಸುತ್ತಿಲ್ಲ ಎಂದು ದೂರಿದರು. ಹೇಮಾವತಿ ನಾಲೆ ಆಧುನೀಕರಣಗೊಳ್ಳದೆ…
ತುಮಕೂರು: ಜಿಲ್ಲೆಯಲ್ಲಿರುವ ಎಲ್ಲ ಆಟೋ ರಿಕ್ಷಾಗಳಿಗೆ ಕಡ್ಡಾಯವಾಗಿ ಸಂಚಾರಿ ಪೊಲೀಸ್ ಠಾಣೆಯಿಂದ ನೀಡಲಾಗುವ ಟಿಟಿಪಿ(ತುಮಕೂರು ಟ್ರಾಫಿಕ್ ಪೊಲೀಸ್) ಸಂಖ್ಯೆಯನ್ನು ಅಳವಡಿಸಬೇಕೆಂದು ಜಿಲ್ಲಾಧಿಕಾರಿ ಡಾ|| ಕೆ. ರಾಕೇಶ್ ಕುಮಾರ್ ಅವರು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ತಮ್ಮ ಕಚೇರಿಯಲ್ಲಿಂದು ಜರುಗಿದ ಇ-ಆಟೋ ರಿಕ್ಷಾ ವಿತರಣೆ ಕುರಿತ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಟಿಟಿಪಿ ಸಂಖ್ಯೆ ಅಳವಡಿಸದ ಆಟೋ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದ ಅವರು ಟಿಟಿಪಿ ಸಂಖ್ಯೆಯನ್ನು ಅಳವಡಿಸುವುದರಿಂದ ಜಿಲ್ಲೆಯಲ್ಲಿ ಚಾಲನೆಯಲ್ಲಿರುವ ಆಟೋರಿಕ್ಷಾಗಳ ನಿಖರ ಅಂಕಿ-ಅಂಶ ದೊರೆಯಲಿದೆ ಎಂದು ತಿಳಿಸಿದರು. ಜಿಲ್ಲೆಯ ಎಲ್ಲ ಆಟೋ ರಿಕ್ಷಾ ಚಾಲಕರ ಚಾಲನಾ ಪರವಾನಗಿಯನ್ನು ಕೂಡಲೇ ಆಧಾರ್‍ಲಿಂಕ್ ಮಾಡಬೇಕೆಂದು ಆರ್‍ಟಿಓಗೆ ಸೂಚಿಸಿದರು. ಪ್ರಾದೇಶಿಕ ಸಾರಿಗೆ ಇಲಾಖೆಗೆ ನಿಗಧಿತ ಶುಲ್ಕ ಪಾವತಿಸಿ ಆಟೋಗಳ ಹಿಂದೆ ವಿವಿಧ ಕಂಪನಿಗಳ ಎಲ್‍ಇಡಿ ಜಾಹೀರಾತು ಫಲಕಗಳನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಡುವ ಬಗ್ಗೆ ಚಿಂತಿಸಲಾಗಿದೆ. ಜಾಹೀರಾತು ನೀಡಿದ…
ತುಮಕೂರು: ಮತದಾರರು ತಮ್ಮ ಮತದಾರರ ಪಟ್ಟಿಯಲ್ಲಿನ ಹೆಸರು ಹಾಗೂ ಇತರೆ ಮಾಹಿತಿಗಳನ್ನು ಪರಿಶೀಲನೆ ಮಾಡಿಕೊಳ್ಳಲು ನಾಗರಿಕ ಸೇವಾ ಕೇಂದ್ರದಲ್ಲೂ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ ತಿಳಿಸಿದರು. ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿಂದು ನಡೆದ ಸಿಎಸ್‍ಸಿ ಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಚುನಾವಣಾ ಆಯೋಗ ಪ್ರತಿವರ್ಷವು ಚುನಾವಣಾ ವಿಭಾಗದಿಂದ ಮತದಾರರ ಪಟ್ಟಿಯನ್ನು ಬಿಎಲ್‍ಒ ಹಾಗೂ ವಿವಿಧ ಅಧಿಕಾರಿಗಳು ಮನೆ ಮನೆಗೂ ಹೋಗಿ ಪರಿಶೀಲನೆ ನಡೆಸುತ್ತಿದ್ದರು. ಈ ವರ್ಷದಿಂದ ವಿವಿಧ ಸೇವೆಗಳ ಜೊತೆಗೆ ನಾಗರಿಕ ಸೇವಾ ಕೇಂದ್ರದಲ್ಲಿ ಮತದಾರರ ಪಟ್ಟಿ ಪರಿಶೀಲನೆಯನ್ನೂ ಸಹ ಮಾಡಲು ಸೂಚಿಸಲಾಗಿದೆ ಎಂದರು. ಜಿಲ್ಲೆಯಾದ್ಯಂತ ಈಗಾಗಲೇ 165 ನಾಗರಿಕ ಸೇವಾ ಕೇಂದ್ರಗಳು ಚಟುವಟಿಕೆಯಿಂದ ಕಾರ್ಯನಿರ್ವಹಿಸುತ್ತಾ ಹಲವು ಸೇವೆಗಳನ್ನು ಒದಗಿಸುತ್ತಿವೆ. ಈ ವರ್ಷದಿಂದ ವಿವಿಧ ಸೇವೆಗಳ ಜೊತೆಗೆ ನಾಗರಿಕ ಸೇವಾ ಕೇಂದ್ರದಲ್ಲಿ ಮತದಾರರ ಪಟ್ಟಿ ಪರಿಶೀಲನೆಯ ಕಾರ್ಯವನ್ನು ಮಾಡಲು ಸೂಚಿಸಲಾಗಿದ್ದು, ಬೇರೆ ನಾಗರಿಕ…
ತುಮಕೂರು : ಸ್ಮಾರ್ಟ್‍ಸಿಟಿ ಅಡಿಯಲ್ಲಿ ಕೌಶಲ್ಯ ಅಭಿವೃದ್ಧಿಗಾಗಿ ಬಿಡುಗಡೆಯಾಗುವ ಹಣವನ್ನು ಸಾರ್ವಜನಿಕವಾಗಿ ಸದುಪಯೋಗವಾಗುವಂತೆ ಅಧಿಕಾರಿಗಳು ಬಳಸಬೇಕು ಎಂದು ಸಂಸದ ಜಿ.ಎಸ್. ಬಸವರಾಜ್ ತಿಳಿಸಿದರು. ನಗರದ ಸ್ಮಾರ್ಟ್‍ಸಿಟಿ ಲಿಮಿಟೆಡ್‍ನ ಕಚೇರಿಯಲ್ಲಿಂದು ಹಮ್ಮಿಕೊಂಡಿದ್ದ ಸ್ಕಿಲ್ ಪಾರ್ಕ್ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಸರ್ಕಾರದಿಂದ ಬಿಡುಗಡೆಯಾಗುವ ಹಣವನ್ನು ಅಧಿಕಾರಿಗಳು ವ್ಯರ್ಥಮಾಡದೇ ನಗರದ ಅಭಿವೃದ್ಧಿಗೆ ಸದುಪಯೋಗಪಡಿಸಿ ತುಮಕೂರು ನಗರದ ಚಿತ್ರಣವನ್ನು ಬದಲಾಯಿಸಿ ಉತ್ತಮ ನಗರವನ್ನಾಗಿ ನಿರ್ಮಿಸಬೇಕು ಎಂದು ಅವರು ಹೇಳಿದರು. ಈ ಹಿಂದೆ ಐದು ವರ್ಷಗಳ ಕಾಲ ಸಂಸತ್‍ನ ಸದಸ್ಯನಾಗಿದ್ದಾಗ ತುಮಕೂರು ನಗರವನ್ನು ಇಂಡಸ್ಟ್ರಿಯಲ್ ಹಬ್ ಮಾಡಬೇಕೆಂಬ ಹಂಬಲವಿತ್ತು. ಆದರೆ ಅದು ಆಗ ಕೈಗೂಡಲಿಲ್ಲ. ತುಮಕೂರು ನಗರ ಬೆಂಗಳೂರಿಗೆ ಮುಖ್ಯದ್ವಾರವಾಗಿದ್ದು, ಕೈಗಾರಿಕೀಕರಣದ ಕೇಂದ್ರೀಯ ಸ್ಥಾನವನ್ನಾಗಿ ಮಾರ್ಪಾಡು ಮಾಡಬೇಕು. ವಿದೇಶಿಯರಿಗೆ 100 ಎಕರೆ ಜಮೀನು ಕೊಟ್ಟು ಅವಕಾಶ ನೀಡುವುದಕ್ಕಿಂತ ಸ್ಥಳೀಯರನ್ನು ಗುರ್ತಿಸಿ 2 ಅಥವಾ 5 ಎಕರೆ ಜಮೀನು ಕೊಟ್ಟು ತರಬೇತಿ ನೀಡಿ ತಂತ್ರಜ್ಞಾನ ಬಳಸುವಂತೆ ಮಾಡಿದರೆ…
ಚಿಕ್ಕನಾಯಕನಹಳ್ಳಿ: ಖಾಸಗಿ ಬಸ್ ಹಾಗೂ ಆಟೋಗಳ ನಡುವೆ ನಡೆದ ಅಪಘಾತದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ ಘಟನೆ ಪಟ್ಟಣದ ದುಗಡಿಹಳ್ಳಿ ಬಳಿ ನಡೆದಿದೆ. ತಿಪಟೂರಿನಿಂದ ಚಿ.ನಾ. ಹಳ್ಳಿಯಕಡೆ ಬರುತ್ತಿದ್ದ ಖಾಸಗಿ ಬಸ್ ದುಗಡಿಹಳ್ಳಿ ಕಟ್ಟೆಯ ಬಳಿ ಎದುರಿನಿಂದ ಬರುತ್ತಿದ್ದ ಆಟೋಗೆ ಡಿಕ್ಕಿಹೊಡೆದ ಪರಿಣಾಮ ಆಟೋದಲಿದ್ದ ಪಟ್ಟಣದ ಲತಾಮಣಿ (35) ಎಂಬುವರಿಗೆ ತಲೆಗೆ ತೀವ್ರಪೆಟ್ಟುಬಿದ್ದು ಸ್ಥಳದಲ್ಲಿಯೇ ಅಸುನೀಗಿದ್ದಾರೆ. ತನ್ನ ಮಗುವಿನ ಚಿಕಿತ್ಸೆಗಾಗಿ ತಿಪಟೂರಿಗೆ ತೆರಳುತ್ತಿದ್ದಾಗ ಈಘಟನೆ ನಡೆದಿದೆ. ಪ್ರಕರಣ ಪಟ್ಟಣದ ಠಾಣೆಯಲ್ಲಿ ದಾಖಲಾಗಿದೆ.











