ತುರುವೇಕೆರೆ : ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು ಹಿಂದೇಟು ಹಾಕುವ ಹಾಗೂ ಸಾರ್ವಜನಿಕರಿಂದ ಹಣ ಸುಲಿಗೆ ಮಾಡುವವರಿಗೆ ಸಿಂಹಸ್ವಪ್ನದಂತಿರಬೇಕಾದ ಭ್ರಷ್ಠಾಚಾರ ನಿಗ್ರಹ ದಳದ ಪತ್ರಕ್ಕೆ ತಾಲೂಕಿನ ಹಲವಾರು ಸರ್ಕಾರಿ ಕಛೇರಿಗಳು ಕವಡೆ ಕಿಮ್ಮತ್ತನ್ನೂ ನೀಡುತ್ತಿಲ್ಲ ಎಂಬ ಸಂಗತಿ ಇಂದು ಬಾಣಸಂದ್ರದಲ್ಲಿ ನಡೆದ ಎಸಿಬಿ ಸಾರ್ವಜನಿಕರ ಸಭೆಯ ವೇಳೆ ಪ್ರಸ್ತಾಪವಾಯಿತು. ತಾಲೂಕಿನ ಎಂ.ಮಂಚೇನಹಳ್ಳಿಯ ಕೃಷ್ಣಮೂರ್ತಿ ಎಂಬುವವರು ಕಳೆದ 28-11- 18 ರಂದು ಎಸಿಬಿ ಗೆ ತುರುವೇಕೆರೆ ತಾಲೂಕು ಕಛೇರಿಯಲ್ಲಿ ಕಾನೂನು ಬಾಹಿರವಾಗಿ ಖಾತೆ ಬದಲಾವಣೆ ಮಾಡಲಾಗಿದೆ. ಈ ಕುರಿತು ಸಾಕಷ್ಟು ಬಾರಿ ಮನವಿ ಹಾಗೂ ದೂರು ನೀಡಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳದೇ ತೊಂದರೆ ಮಾಡಲಾಗಿದೆ ಎಂದು ದೂರು ನೀಡಿದ್ದರು. ಈ ಸಂಬಂಧ ತಾಲೂಕು ಕಛೇರಿಗೆ ಅಂದೇ ಜಿಲ್ಲಾ ಭ್ರಷ್ಠಾಚಾರ ನಿಗ್ರಹ ದಳದ ಅಧಿಕಾರಿಗಳು ಸಂಬಂಧಿಸಿದ ದಾಖಲೆಗಳನ್ನು ಪರಿಶೀಲನೆ ಮಾಡಿ ದೂರುದಾರರಿಗೆ ಸೂಕ್ತ ನ್ಯಾಯ ದೊರಕಿಸಿಕೊಡಬೇಕೆಂದೂ ಹಾಗೂ ಆ ಕುರಿತಂತೆ ದೂರುದಾರರಿಗೆ ಮತ್ತು ತಮಗೆ ಇನ್ನು…
Author: News Desk Benkiyabale
ಗುಬ್ಬಿ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 206 ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಹಾಗೂ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಸ್ವಾಧೀನಪಡಿಸಿ ಕೊಳ್ಳುತ್ತಿರುವ ರೈತರ ಭೂಮಿ, ನಿವೇಶನ, ತೋಟಗಳು, ವಾಸದ ಮನೆಗಳಿಗೆ ಸೂಕ್ತವಾದ ಪರಿಹಾರ ನೀಡದಿರುವುದನ್ನು ಖಂಡಿಸಿ ತಾಲ್ಲೂಕಿನ ಮುದಿಗೆರೆ ಭಾಗದ ರೈತರು ಹಾಗೂ ರೈತ ಸಂಘದ ಪದಾಧಿಕಾರಿಗಳು ಕಾಮಗಾರಿ ನಡೆಸದಂತೆ ಜೆಸಿಬಿ ಯಂತ್ರಗಳನ್ನು ತಡೆದು ಪ್ರತಿಭಟನೆ ನಡೆಸಿದರು. ತಾಲ್ಲೂಕಿನ ಮುದಿಗೆರೆ ಗ್ರಾಮದ ಪಕ್ಕದಲ್ಲಿ ಹಾದು ಹೋಗುತ್ತಿರುವ ರಸ್ತೆ ಕಾಮಗಾರಿ ನಡೆಯುತ್ತಿರುವ ರೈತರ ಜಮೀನಿನಲ್ಲಿ ಜೆಸಿಬಿ ಯಂತ್ರವನ್ನು ತಡೆದು ಸ್ವಾಧೀನಪಡಿಸಿಕೊಳ್ಳುವ ಜಮೀನಿಗೆ ಸೂಕ್ತವಾದ ಪರಿಹಾರ ನೀಡುವವರೆಗೂ ಕಾಮಗಾರಿ ಮಾಡಬಾರದೆಂದು ಈ ಭಾಗದ ರೈತರು ರೈತ ಸಂಘದ ಮುಖಂಡರೊಂದಿಗೆ ಪ್ರತಿಭಟನೆ ನಡೆಸಿದರು. ರೈತ ಮಹದೇವಯ್ಯ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಸ್ವಾಧೀನ ಪಡಿಸಿಕೊಂಡಿರುವ ನಮ್ಮ ಭೂಮಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈವರೆಗೂ ಸೂಕ್ತವಾದ ಪರಿಹಾರ ನೀಡಿಲ್ಲ. ಅಲ್ಲದೆ ಯಾವುದೇ ಮಾಹಿತಿಯನ್ನು ನೀಡದೆ…
ತುಮಕೂರು : ಶಾಲೆಯಿಂದ ಹೊರಗುಳಿದ ಅಲ್ಪಸಂಖ್ಯಾತ ಮಕ್ಕಳನ್ನು ಮುಖ್ಯವಾಹಿನಿಗೆ ಕರೆ ತನ್ನಿ ಎಂದು ಜಿಲ್ಲಾಧಿಕಾರಿ ಡಾ|| ಕೆ. ರಾಕೇಶ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ನಡೆದ ಅಲ್ಪಸಂಖ್ಯಾತ ಕಲ್ಯಾಣದ ಪ್ರಧಾನ ಮಂತ್ರಿಗಳ 15 ಅಂಶಗಳ ವಿವಿಧ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಗುಬ್ಬಿ ಹಾಗೂ ತುಮಕೂರು ತಾಲ್ಲೂಕಿನಲ್ಲಿ ಒಟ್ಟು 114 ಅಲ್ಪಸಂಖ್ಯಾತರ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಹೊರಗುಳಿದ ಮಕ್ಕಳನ್ನು ವಿಶೇಷ ದಾಖಲಾತಿ ಆಂದೋಲನಡಿಯಲ್ಲಿ ಮಕ್ಕಳಿಗೆ ಜಾಗೃತಿ ಮೂಡಿಸಿ ಶಾಲೆಗೆ ದಾಖಲಿಸಬೇಕು ಹಾಗೂ ತಂದೆ-ತಾಯೆಂದರಿಗೆ ಮಕ್ಕಳ ಭವಿಷ್ಯದ ಬಗ್ಗೆ ಅರಿವು ಮೂಡಿಸಬೇಕೆಂದರು. ಅಲ್ಪಸಂಖ್ಯಾತ ಶಾಲೆಗಳಲ್ಲಿ ವಿದ್ಯಾರ್ಥಿನಿಯರ ದಾಖಲಾತಿ ಹೆಚ್ಚಾಗಿದ್ದು, ವಿದ್ಯಾರ್ಥಿಗಳ ಸಂಖ್ಯೆ ಕಡಿಯಾಗುತ್ತಿರುವ ಬಗ್ಗೆ ಕಾರಣವೇನೆಂದು ಕೇಳಿ ನಿಖರ ಮಾಹಿತಿ ನೀಡಲು ಡಿಡಿಪಿಐ ಕಾಮಾಕ್ಷಿ ಅವರಿಗೆ ಸೂಚಿಸಿದಾಗ ಆರ್ಥಿಕವಾಗಿ ಹಿಂದುಳಿದಿರುವುದರಿಂದ ಮಕ್ಕಳ ಪೋಷಕರೇ ಗ್ಯಾರೇಜು, ಮತ್ತಿತರ ಕಡೆ ಕೆಲಸಕ್ಕೆ ಕಳುಹಿಸುತ್ತಿರುವುದರಿಂದ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ…
ತುಮಕೂರು: ನಗರದಲ್ಲಿ ಕೈಗೊಂಡಿರುವ ಸ್ಮಾರ್ಟ್ ರಸ್ತೆ ಯೋಜನೆ ಪೂರ್ಣಗೊಂಡ ಬಳಿಕ ರಸ್ತೆ ಅಗೆಯುವ ಯಾವುದೇ ಕಾಮಗಾರಿಗೆ ಅನುಮತಿ ನೀಡಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ|| ಕೆ. ರಾಕೇಶ್ ಕುಮಾರ್ ತಿಳಿಸಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸ್ಮಾರ್ಟ್ ರಸ್ತೆ ಕಾಮಗಾರಿ ಪೂರ್ಣಗೊಳ್ಳುವ ಮುನ್ನ ವಿವಿಧ ಇಲಾಖೆಗಳ ವತಿಯಿಂದ ಕೈಗೊಳ್ಳಬಹುದಾದ ಕುಡಿಯುವ ನೀರು, ವಿದ್ಯುತ್, ಗ್ಯಾಸ್, ಬೀದಿ ದೀಪ, ನೀರಿನ ಸಂಪರ್ಕ, ಬಿಎಸ್‍ಎನ್‍ಎಲ್ ಕೇಬಲ್ ಅಳವಡಿಕೆ, ಯುಜಿಡಿ ಸಂಪರ್ಕ ಸೇರಿದಂತೆ ಮತ್ತಿತರ ರಸ್ತೆ ಅಗೆಯುವ ಕಾಮಗಾರಿಗಳನ್ನು ಪೂರ್ಣಗೊಳಿಸಿರಬೇಕು. ತದ ನಂತರ ಯಾವುದೇ ರಸ್ತೆ ಅಗೆಯುವ ಕಾಮಗಾರಿಗೆ ಅನುಮತಿ ನೀಡಲಾಗುವುದಿಲ್ಲ ಎಂದು ಅವರು ತಿಳಿಸಿದರು. ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಸ್ಮಾರ್ಟ್ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡನಂತರ ಅತ್ಯಾವಶ್ಯಕ ಕಾಮಗಾರಿಗಳಿದ್ದಲ್ಲಿ ಸಂಬಂಧಪಟ್ಟವರು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಮನ್ವಯ ಸಮಿತಿಯಲ್ಲಿ ಮಂಡಿಸಿ ಪೂರ್ವಾನುಮತಿ ಪಡೆದುಕೊಳ್ಳಬೇಕು. ತಪ್ಪಿದಲ್ಲಿ…
ತುರುವೇಕೆರೆ: ತುಮಕೂರು ಜಿಲ್ಲಾದಿಕಾರಿ ರಾಕೇಶ್‍ಕುಮಾರ್ ಮಂಗಳವಾರ ಸಂಜೆ ತಾಲೂಕು ಕಚೇರಿಗೆ ಧಿಡೀರ್ ಬೇಟಿ ನೀಡಿ ಹಲವಾರು ಇಲಾಖೆಗಳ ಕಡತಗಳನ್ನು ಪರಿಶೀಲಿಸುವ ಮೂಲಕ ಅದಿಕಾರಿಗಳಿಗೆ ಚುರುಕು ಮುಟ್ಟಿಸಿದರು. ತಾಲೂಕು ಕಛೇರಿಯಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಸಮಾಜಿಕ ಭದ್ರತ ಯೋಜನೆಯಲ್ಲಿನ ಪಿಂಚಣಿ ಹಣ ವರ್ಗಾವಣೆಯಲ್ಲಿ ವಿಳಂಬವಾಗುತ್ತಿದ್ದ ಹಿನ್ನಲೆಯಲ್ಲಿ ಸಾರ್ವಜನಿಕರಿಂದ ಹಲವು ದೂರುಗಳು ಸಲ್ಲಿಕೆಯಾಗಿದ್ದು ಖುದ್ದು ಬೇಟಿ ನೀಡಿ ಪರಿಶೀಲಿಸಲಾಗಿ ಕೆಲವು ಲೋಪ ದೋಷಗಳು ಕಂಡ ಬಂದಿದ್ದು ಹಲವು ಪಲಾನುಭವಿಗಳಿಗೆ ಎರಡು ಬಾರಿ ಹಣ ಸಂದಾಯವಾಗಿದ್ದು. ಇನ್ನು ಕೆಲವು ಜನರಿಗೆ ಸುಮಾರು ದಿನಗಳಿಂದ ಪಿಂಚಣಿ ಬಂದಿಲ್ಲ. ಕೆ-1 ನಿಂದ ಕೆ-2ಗೆ ಆಡಳಿತ ಯಂತ್ರ ಬದಲಾಗಿರುವುದರಿಂದ ಸೂಕ್ತ ದಾಖಲಾತಿಗಳನ್ನು ಪಲಾನುಭವಿಗಳು ಸಲ್ಲಿಸದಿದ್ದರಿಂದ ವಿಳಂಬವಾಗಿದೆ. ಪಿಂಚಣಿ ಪಲಾನುಭವಿಗಳು ತಮ್ಮ ಆದಾರ್ ಕಾರ್ಡ್ ಬ್ಯಾಂಕ್ ಪಾಸ್ ಪುಸ್ತಕವನ್ನು ಸಲ್ಲಿಸುವಂತೆ ಸೂಚಿಸಿದರು. ಗ್ರಾಮ ಪಂಚಾಯ್ತಿಯಲ್ಲಿ ಆದಾರ್ ತಿದ್ದುಪಡಿ: ಜಿಲ್ಲೆಯಲ್ಲಿಯೇ ಆದಾರ್ ಕಾರ್ಡ್…
ತುಮಕೂರು : ಗ್ರಾಮಲೆಕ್ಕಾಧಿಕಾರಿಗಳ ಮುಂಬಡ್ತಿಯಲ್ಲಿ ಉಂಟಾಗುತ್ತಿರುವ ನಿರಂತರ ಅನ್ಯಾಯವನ್ನು ಸರಿಪಡಿಸಿ, ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ಮತ್ತು ಗ್ರಾಮಲೆಕ್ಕಿಗರ ಜೇಷ್ಠತೆಗಳನ್ನು ಒಟ್ಟುಗೂಡಿಸಿ, ಪದನವೀಕರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಜಿಲ್ಲಾ. ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಕೆ.ಆರ್.ಮುರಳೀಧರ್ ಆಗ್ರಹ ವ್ಯಕ್ತ ಪಡಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಕೇಂದ್ರ ಸಂಘವು ರಾಜ್ಯ ಗ್ರಾಮಲೆಕ್ಕಾಧಿಕಾರಿಗಳ ಕುಂದು ಕೊರತೆ ಮತ್ತು ಇತರೆ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಸರಿಪಡಿಸುವಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಲ್ಲಿ ಕೋರಲಾಗಿತ್ತು. ನಂತರ ಈ ಬಗ್ಗೆ ಎರಡು ಬಾರಿ ಸಭೆ ಕರೆದು ಚರ್ಚ ಮಾಡಿ ಬೇಡಿಕೆಗಳ ಈಡೇರಿಕೆಗೆ ಆಶ್ವಾಸನೆ ನೀಡಲಾಗಿತ್ತು. ಆದರೆ ಇಲ್ಲಿವರೆಗೆ ಭರವಸೆಗಳು ಈಡೇರಿಲ್ಲ ಎಂದು ಆಕ್ರೋಷ ವ್ಯಕ್ತ ಪಡಿಸಿದರು. ಅನ್ಯ ಇಲಾಖೆಯ ಕೆಲಸದ ಒತ್ತಡವನ್ನು ನಮ್ಮ ಇಲಾಖೆ ನೌಕರರ…
ಹುಳಿಯಾರು: ಅಧಿಕಾರಕ್ಕೋಸ್ಕರ ಖರೀದಿಯಾದ ಶಾಸಕರುಗಳಿಗೆ ಹಾಗೂ ಅಭಿವೃದ್ಧಿ ಬಗ್ಗೆ ಚಿಂತಿಸದೆ ರೈತರ ಹಿತ ಕಡೆಗಣಿಸಿದ ಸರ್ಕಾರಕ್ಕೆ ಛೀ.. ಥೂ ಎಂದು ಉಗಿಯುವ ಚಳುವಳಿಯನ್ನು ಹುಳಿಯಾರಿನಲ್ಲಿ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆಂಕೆರೆ ಸತೀಶ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ಹುಳಿಯಾರಿನ ಬಸ್ ನಿಲ್ದಾಣದಲ್ಲಿ ನಡೆದ ವಿನೂತನ ಪ್ರತಿಭಟನೆಯಲ್ಲಿ ತಮ್ಮ ಶಾಸಕ ಸ್ಥಾನವನ್ನು ದುಡ್ಡಿಗೆ ಮಾರಾಟ ಮಾಡಿಕೊಂಡ ಶಾಸಕರುಗಳಿಗೆ ಛೀಮಾರಿ ಹಾಕಿದ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆಂಕೆರೆ ಸತೀಶ್ ಜನರಿಂದ ಆಯ್ಕೆಯಾಗಿ ಶಾಸಕರಾದ ಇವರುಗಳಿಂದು ಕೇವಲ ಹಣ ಹಾಗೂ ಸಚಿವಗಿರಿ ಸ್ಥಾನಕ್ಕಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದನ್ನು ತೀವ್ರವಾಗಿ ಖಂಡಿಸಿದರಲ್ಲದೆ ಹಣಕ್ಕಾಗಿ ಮತದಾರರನ್ನು ಕಡೆಗಣಿಸಿ ರೆಸಾರ್ಟ್‍ನಲ್ಲಿ ವಾಸಿಸುತ್ತಿರುವ ಶಾಸಕರುಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಅವರ ಜನ್ಮ ಜಾಲಾಡಿದರು. ತಾಲೂಕು ಅಧ್ಯಕ್ಷ ತಿಮ್ಮನಹಳ್ಳಿ ಲೋಕಣ್ಣ ಮಾತನಾಡಿ ರೈತರ, ಸಾರ್ವಜನಿಕರ ಹಿತಾಸಕ್ತಿಗೆ ಸ್ಪಂದಿಸದ ಇವರುಗಳು ಕೇವಲ ಹಣ ಹಾಗೂ ಅಧಿಕಾರದ ಲಾಲಸೆಗಾಗಿ ಸಚಿವರಾಗಿ…
ತುಮಕೂರು: ರಾಜ್ಯದಲ್ಲಿ ಮಳೆ ಇಲ್ಲದೆ ಬರ ಪರಿಸ್ಥಿತಿ ತಾಂಡವವಾಡುತ್ತಿದ್ದರೂ ಸಹ ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವದ ಆಶಯಗಳನ್ನು ಗಾಳಿಗೆ ತೂರಿ ರಾಜಕೀಯ ದೊಂಬರಾಟದಲ್ಲಿ ತೊಡಗಿರುವುದನ್ನು ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಗರದಲ್ಲಿಂದು ಪ್ರತಿಭಟನೆ ನಡೆಸಲಾಯಿತು. ಇಲ್ಲಿನ ಟೌನ್‍ಹಾಲ್ ವೃತ್ತದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಜಮಾಯಿಸಿದ ನೂರಾರು ಮಂದಿ ರೈತರು ಸಮ್ಮಿಶ್ರ ಸರ್ಕಾರ ಹಾಗೂ ಶಾಸಕರು, ಸಚಿವರುಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ರೈತ ಸಂಘದ ಆನಂದ್‍ಪಾಟೀಲ್ ಮಾತನಾಡಿ, ರಾಜ್ಯ ವಿಧಾನಸಭೆಯಲ್ಲಿ ಎಬ್ಬಿಸಿರುವ ಗಲಭೆಯನ್ನು ಗಮನಿಸಿದರೆ ರಾಷ್ಟ್ರದ ಮುಂದೆ ಕರ್ನಾಟಕದ ಜನತೆ ತಲೆತಗ್ಗಿಸುವಂತಹ ವಾತಾವರಣ ನಿರ್ಮಾಣವಾಗಿದೆ. ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ. ಮುಂಗಾರು ಮಳೆ ಆಗದೇ ಸಕಾಲಕ್ಕೆ ಬೆಳೆಯೂ ಇಲ್ಲದೆ ರೈತರು ಬರ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇಂಥ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಶಾಸಕರು, ಸಚಿವರುಗಳು ರಾಜ್ಯದ ಜನರ ಹಿತ ಕಾಪಾಡುವ ನಿಟ್ಟಿನಲ್ಲಿ ಗಮನ ಹರಿಸದೆ ತಮ್ಮ…
ತುಮಕೂರು : ತಮಗೆ ಲಭಿಸಿದ ಖಚಿತ ವರ್ತಮಾನ ಆಧರಿಸಿ ಗೋಡೋನ್ ಒಂದರ ಮೇಲೆ ದಾಳಿ ನಡೆಸಿದ ತುಮಕೂರು ಮಹಾನಗರ ಪಾಲಿಕೆಯ ಅಧಿಕಾರಿಗಳು, ಸುಮಾರು 1 ಲಕ್ಷ ರೂ. ಮೌಲ್ಯದ 1,200 ಕೆ.ಜಿ. ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರಲ್ಲದೆ, ಸಂಬಂಧಿಸಿದವರಿಗೆ 50,000 ರೂ. ದಂಡ ವಿಧಿಸಿರುವ ಮಹತ್ವದ ಘಟನೆ ಶುಕ್ರವಾರ ನಡೆದಿದೆ. ತುಮಕೂರು ನಗರದ ಮಂಡಿಪೇಟೆಯ ಒಂದನೇ ಮುಖ್ಯರಸ್ತೆಯ ಮೂರನೇ ತಿರುವಿನಲ್ಲಿರುವ ಗೋಡೋನ್‍ನಲ್ಲಿ ಈ ಘಟನೆ ಜರುಗಿದೆ. ಇದು ಅಮ್ಜದ್ ಪಾಷ ಎಂಬುವವರಿಗೆ ಸೇರಿದ ಗೋಡೋನ್ ಆಗಿದೆ. ದೊಡ್ಡ ಪ್ರಮಾಣದಲ್ಲಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಿಡಲಾಗಿದೆ ಎಂಬ ವರ್ತಮಾನದ ಹಿನ್ನೆಲೆಯಲ್ಲಿ ಗುರುವಾರ ಸಂಜೆಯೇ ಪಾಲಿಕೆಯ ಅಧಿಕಾರಿಗಳು ಈ ಗೋಡೋನ್‍ಗೆ ದಾಳಿ ನಡೆಸಿದ್ದರು. ಆದರೆ ಗೋಡೋನ್ ಮಾಲೀಕರು ಬಾಗಿಲು ತೆರೆಯಲು ಒಪ್ಪಿರಲಿಲ್ಲ. ಹೀಗಾಗಿ ಸದರಿ ಗೋಡೋನ್ ಅನ್ನು ಪಾಲಿಕೆಯವರು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಶುಕ್ರವಾರ ಮಧ್ಯಾಹ್ನ ಆಯುಕ್ತ ಟಿ.ಭೂಬಾಲನ್…
ತುಮಕೂರು : ನಗರದ ಕೇಂದ್ರಭಾಗದಲ್ಲಿರುವ ಅಮಾನಿಕೆರೆಗೆ ಸುಮಾರು 887 ವರ್ಷಗಳ ಇತಿಹಾಸವಿದೆ. ಮಾನವ ನಿರ್ಮಿತ ವೈಭವದಿಂದ ಕೂಡಿದ್ದ ಈ ಕೆರೆಯು ಕೆಲವು ವರ್ಷಗಳ ಹಿಂದೆ ಸಂಸ್ಕರಿಸದ ಒಳಚರಂಡಿ ನೀರು, ಕಸದ ರಾಶಿಯಿಂದ ತುಂಬಿಕೊಂಡು ಅಸಹನೀಯ ದುರ್ವಾಸನೆಯಿಂದ ಕೂಡಿದ ಅವ್ಯವಸ್ಥೆಯ ತಾಣವಾಗಿತ್ತು. ಮತ್ತೊಮ್ಮೆ ಈ ಕೆರೆಗೆ ಪುನಶ್ಚೇತನ ನೀಡಿ ಹೊಸ ರೂಪ ನೀಡಲು ಸ್ಮಾರ್ಟ್ ಸಿಟಿ ಸಂಸ್ಥೆಯು ಮುಂದಾಗಿದೆ. 28ಕೋಟಿ ರೂ. ವೆಚ್ಚದಲ್ಲಿ ಕೆರೆ ಅಭಿವೃದ್ಧಿ: ಭಾರತದಲ್ಲಿ ನೀರಿನ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಖಿieಡಿ (ಟೈರ್)-1 ನಗರಗಳಾದ ದೆಹಲಿ, ಬೆಂಗಳೂರು, ಹೈದ್ರಬಾದ್, ಮತ್ತಿತರ ನಗರಗಳಲ್ಲಿ 2020ರ ವೇಳೆಗೆ ಅಂತರ್ಜಲ ಬರಿದಾಗಲಿದೆ ಎಂದು ಓIಖಿI ಆಯೋಗವು ಇತ್ತೀಚಿಗಷ್ಟೇ ವರದಿ ಮಾಡಿದೆ. ಇದನ್ನು ಮನಗಂಡ ಸ್ಮಾರ್ಟ್ ಸಿಟಿ ಲಿಮಿಟೆಡ್ ಅಧ್ಯಕ್ಷೆ ಡಾ|| ಶಾಲಿನಿ ರಜನೀಶ್ ಅವರ ನೇತೃತ್ವದಲ್ಲಿ ನಗರದ ನಾಗರಿಕರಿಗೆ ಉಪಯೋಗವಾಗುವಂತೆ ಅಮಾನಿಕೆರೆಯನ್ನು ಪುನರುಜ್ಜೀವನಗೊಳಿಸಿ ಸೌಂದರ್ಯೀಕರಣಗೊಳಿಸಲು 28 ಕೋಟಿ ರೂ.ಗಳ ಅಂದಾಜು ವೆಚ್ಚದ ಯೋಜನೆಯೊಂದನ್ನು ರೂಪಿಸಿ ಈಗಾಗಲೇ…











