Author: News Desk Benkiyabale

 ತುಮಕೂರು:        ಸಮಾಜದಲ್ಲಿ ಕಸುಬಿನ ಮೂಲಕ ಜಾತಿಗಳು ಮಾರ್ಪಟ್ಟಿದ್ದರೂ, ತನ್ನ ಕಾಯಕದ ಮೂಲಕ ಸಮಾಜವನ್ನು ಬದಲಾಯಿಸುವ ಧ್ಯೇಯ ಹೊಂದಿದ್ದ ಏಕೈಕ ದಾರ್ಶನಿಕ ನಿಜಶರಣ ಅಂಬಿಗ ಚೌಡಯ್ಯ ಎಂದು ಶಾಸಕ ಜಿ.ಬಿ ಜ್ಯೋತಿಗಣೇಶ್ ಅಭಿಪ್ರಾಯಪಟ್ಟರು.       ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಜಿಲ್ಲಾ ಗಂಗಾ ಮತಸ್ಥರ ಸಂಘಗಳ ಸಹಯೋಗದಲ್ಲಿಂದು ನಗರದ ಬಾಲಭವನದಲ್ಲಿ ಏರ್ಪಡಿಸಿದ್ದ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಯೊಬ್ಬರಿಗೂ ಅವರ ವೃತ್ತಿಯೇ ಮುಖ್ಯ. ಸಮಾಜದಲ್ಲಿರುವ ಏರು-ಪೇರುಗಳನ್ನು ತನ್ನ ವಚನದ ಮೂಲಕ ಕಟುವಾಗಿ ಟೀಕಿಸಿದ ಮಹಾನ್ ದಾರ್ಶನಿಕ ಅಂಬಿಗ ಚೌಡಯ್ಯ. ಗಂಗಾಮತಸ್ಥರ ಸಮುದಾಯಕ್ಕೆಂದು ಸರ್ಕಾರ ಹಲವು ಸೌಲಭ್ಯಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಬಳಸಿಕೊಳ್ಳುವುದರ ಮೂಲಕ ಈ ಸಮಾಜದ ಯುವಜನತೆ ಶೈಕ್ಷಣಿಕವಾಗಿ ಮುಂದುವರೆಯಬೇಕು ಎಂದು ತಿಳಿಸಿದರು.       ಕಾರ್ಯಕ್ರಮದಲ್ಲಿ ಸಾಹಿತಿ ಮತ್ತು ವಿಮರ್ಶಕ ಡಾ|| ರವಿಕುಮಾರ್ ನೀಹ ಉಪನ್ಯಾಸ…

Read More

 ತುಮಕೂರು:        ಸಂಚಾರಿ ಪೊಲೀಸ್ ಠಾಣೆಯೂ ಸೇರಿದಂತೆ ಜಿಲ್ಲೆಯಲ್ಲಿರುವ 41 ಪೊಲೀಸ್ ಠಾಣೆಗಳಲ್ಲಿ ಈಗಾಗಲೇ ಹೊಸ ವಾಹನ ವಿತರಣೆ ಮಾಡಿರುವ ಠಾಣೆ ಹೊರತುಪಡಿಸಿ ಉಳಿಕೆ ಠಾಣಾಧಿಕಾರಿಗಳಿಗೆ 15-20 ವರ್ಷಗಳಷ್ಟು ಹಳೆಯ ವಾಹನಗಳನ್ನು ಪರಿಶೀಲಿಸಿ ಹೊಸ ವಾಹನ ಮಂಜೂರು ಮಾಡಿ ಪೊಲೀಸರ ಕರ್ತವ್ಯ ನಿಷ್ಠೆಯನ್ನು ಮತ್ತಷ್ಟು ಹೆಚ್ಚಿಸುವತ್ತ ಕ್ರಮ ಕೈಗೊಳ್ಳಬೇಕೆಂದು ಹ್ಯೂಮನ್ ರೈಟ್ಸ್ ಪ್ರೊಟೆಸ್ಟ್ ಸೆಂಟ್ರಲ್ (ರಿ.) ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.       ಹ್ಯೂಮನ್ ರೈಟ್ಸ್ ಪ್ರೊಟೆಸ್ಟ್ ಸೆಂಟ್ರಲ್‍ನ ರಾಜ್ಯಾಧ್ಯಕ್ಷ ಎಸ್.ಸಾಧಿಕ್ ಪಾಷ ನೇತೃತ್ವದಲ್ಲಿ ನಿಯೋಗದಲ್ಲಿ ತೆರಳಿದ ಸಂಸ್ಥೆಯ ಪದಾಧಿಕಾರಿಗಳು ಜಿಲ್ಲಾ ಪೊಲೀಸ್ ಕಚೇರಿಯ ಡಿವೈಎಸ್ಪಿ ಸೂರ್ಯನಾರಾಯಣ್ ರಾವ್ ರವರ ಮೂಲಕ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.       ಈ ಸಂದರ್ಭದಲ್ಲಿ ಮಾತನಾಡಿದ ಹ್ಯೂಮನ್ ರೈಟ್ಸ್ ಪ್ರೊಟೆಸ್ಟ್ ಸೆಂಟ್ರಲ್‍ನ ರಾಜ್ಯಾಧ್ಯಕ್ಷ ಎಸ್.ಸಾಧಿಕ್ ಪಾಷ ರಾಜ್ಯದಲ್ಲಿ ಪೊಲೀಸ್ ಅಧಿಕಾರಿ ಮತ್ತು ಪೊಲೀಸ್ ಸಿಬ್ಬಂದಿಗಳಿಗೆ ಗುಣಮಟ್ಟದ ವಾಹನಗಳ ಕೊರತೆ, ಸಿಬ್ಬಂದಿ ಕೊರತೆ, ನಿಗಧಿತ…

Read More

 ಮಿಡಿಗೇಶಿ :       ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶ್ರಮಸಂಸ್ಕøತಿ ಹಿನ್ನೆಲೆ ಹೊಂದಿದ್ದು, ಅವರಲ್ಲಿ ಕ್ರೀಡಾಸ್ಪೂರ್ತಿ ಹೆಚ್ಚಾಗಿದೆ. ಇಂತಹ ಪ್ರತಿಭೆಗಳಿಗೆ ಸೂಕ್ತ ತರಬೇತಿ ನೀಡಿದಲ್ಲಿ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಹೊರಹೊಮ್ಮುತ್ತಾರೆ. ಆಟಗಾರರು ಕ್ರೀಡಾಸ್ಪೂರ್ತಿಯಿಂದ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು. ಎದುರಾಗುವ ಪ್ರತಿಯೊಂದು ಸೋಲನ್ನು ಸವಾಲಾಗಿ ಸ್ವೀಕರಿಸುವ ಮನೋಭಾವವನ್ನು ಬೆಳೆಸಿಕೊಂಡಾಗ, ಬಹುದೊಡ್ಡ ಗೆಲುವು ನಿಮ್ಮದಾಗಲಿದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಸಂಯೋಜಕರಾದ ಆರ್.ಸುದೀಪ್‍ಕುಮಾರ್ ಕರೆ ನೀಡಿದರು.        ಅವರು ಮಿಡಿಗೇಶಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ತುಮಕೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಅಂತರಕಾಲೇಜುಗಳ ಮಹಿಳೆಯರ ಥ್ರೋಬಾಲ್ ಮತ್ತು ಟೆನ್ನಿಕಾಯ್ಟ್ ಪಂದ್ಯಾವಳಿಗಳ ವಿಜೇತರಿಗೆ ಬಹುಮಾನ ಮತ್ತು ಟ್ರೋಫಿ ವಿತರಿಸಿ ಮಾತನಾಡಿ ಇಡೀ ಜೀವನ ಒಂದು ಕ್ರೀಡೆಯಿದ್ದಂತೆ ಆಟಗಾರರು ಗೆಲುವಿಗಾಗಿ ಸತತ ಶ್ರಮಪಡುತ್ತಿದ್ದರೆ, ಪ್ರತಿಸ್ಪರ್ಧಿಗಳು ಅವರನ್ನು ಸೋಲಿಸಲು ಪ್ರಯತ್ನಿಸುತ್ತಿರುತ್ತಾರೆ. ಹಾಗೆಯೇ ನಿಜಜೀವನದಲ್ಲಿಯೂ ಸಹ ಸಾಧನೆಗೆ ಬರುವ ಅಡ್ಡಿಆತಂಕಗಳನ್ನು ನಿವಾರಿಸಿ ಯಶಸ್ಸಿನ ಮೆಟ್ಟಿಲನ್ನು ಏರಬೇಕಾಗಿದೆ. ಕ್ರೀಡೆಗೆ ಹೆಚ್ಚಿನ ಮಹತ್ವ ಸಿಗುತ್ತಿರುವ ಈ ಕಾಲಘಟ್ಟದಲ್ಲಿ…

Read More

 ತುಮಕೂರು:       ತುಮಕೂರು ನಗರವನ್ನು ಪರಿಸರ ಸ್ನೇಹಿ, ಉತ್ತಮ, ಸುಂದರ ನಗರ ಮಾಡಲು ಸ್ಮಾರ್ಟ್ ಸಿಟಿ ಲಿಮಿಟೆಡ್ ಹಾಗೂ ಮಹಾನಗರ ಪಾಲಿಕೆಗಳು ಜಂಟಿಯಾಗಿ ಕೈಗೊಂಡಿರುವ ಗೋಡೆಗಳ ಮೇಲೆ ವರ್ಣರಂಜಿತ 3ಡಿ ಚಿತ್ರಗಳನ್ನು ಬಿಡಿಸುತ್ತಿರುವ ಈ ಕಾರ್ಯ ನಗರಕ್ಕೆ ಹೊಸ ಮೆರಗು ತರಲಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಭಿಪ್ರಾಯಪಟ್ಟರು.       ನಗರವನ್ನು ಸುಂದರವಾಗಿಸುವ ಉದ್ದೇಶದಿಂದ ನಗರದ ಪ್ರವೇಶ ದ್ವಾರ ಬಟವಾಡಿ ಪ್ರದೇಶದಲ್ಲಿ ಏರ್ಪಡಿಸಿದ್ದ ಗೋಡೆಗಳ ಮೇಲೆ ವರ್ಣರಂಜಿತ ಚಿತ್ರಗಳನ್ನು ಬಿಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸ್ಮಾರ್ಟ್‍ಸಿಟಿ ಲಿಮಿಟೆಡ್ ಹಲವಾರು ಯೋಜನೆಗಳನ್ನು ಈಗಾಗಲೇ ಹಮ್ಮಿಕೊಂಡಿದ್ದು, ನಗರದ ಗೋಡೆಯ ಮೇಲೆ ಚಿತ್ರವನ್ನು ಬಿಡಿಸುವ ಕಾರ್ಯಕ್ರಮದ ಮೂಲಕ ನಗರ ಇನ್ನಷ್ಟು ಸುಂದರ ಕಾಣಲಿದೆ. ಇಂತಹ ಕಾರ್ಯಕ್ರಮಗಳಿಂದ ದೃಶ್ಯ ಕಲೆಗಳಿಗೆ ಮಹತ್ವ ಕೊಟ್ಟಂತಾಗುತ್ತದೆ.       ತೋಟಗಾರಿಕೆ ಇಲಾಖೆಯು ಈ ಕಾರ್ಯಕ್ರಮಕ್ಕೆ ಸಹಕಾರ ನೀಡಲಿದ್ದು, ಖ್ಯಾತ ವರ್ಣರಂಜಿತ ಕಲಾಕಾರರ ಸಂಸ್ಥೆಯಾದ “Uಉಐಙ IಓಆIಂಓS” ಚಿತ್ರಕಾರರು ನಗರದ ಬಟವಾಡಿ ಫ್ಲೈಓವರ್…

Read More

 ತುಮಕೂರು :       ಕೊರಟಗೆರೆ ಪಟ್ಟಣದ ಊರ್ಡಿಗೆರೆ ಕ್ರಾಸ್ ಬಳಿ 47.49ಕೋಟಿ ರೂ.ಗಳ ವೆಚ್ಚದಲ್ಲಿ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಜಿ.ಪರಮೇಶ್ವರ್ ಭೂಮಿ ಪೂಜೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು.       ಕೊರಟಗೆರೆ ಪಟ್ಟಣ ಪರಿಮಿತಿಯಲ್ಲಿ 15ಕೋಟಿ ರೂ.ಗಳ ವೆಚ್ಚದ ಹುಣಸನಹಳ್ಳಿ-ಚಿಕ್ಕಹಳ್ಳಿ(ಎಸ್.ಹೆಚ್-3) 2.40 ಕಿ.ಮೀ. ರಸ್ತೆಗೆ ವೈಟ್-ಟಾಪಿಂಗ್, ತಾಲೂಕಿನ ವ್ಯಾಪ್ತಿಯಲ್ಲಿ 18.36ಕೋಟಿ ರೂ.ಗಳ ವೆಚ್ಚದಲ್ಲಿ ಬಾಗೇಪಲ್ಲಿ-ಹಲಗೂರು (ರಾಜ್ಯ ಹೆದ್ದಾರಿ-94ರ ಸರಪಳಿ 80.57 ಕಿ.ಮೀ ರಿಂದ 103.87 ಕಿ.ಮೀ.ವರೆಗೆ) ರಸ್ತೆ ಅಭಿವೃದ್ಧಿ ಕಾಮಗಾರಿ 10.51ಕೋಟಿ ರೂ.ಗಳ ವೆಚ್ಚದಲ್ಲಿ ಕೊರಟಗೆರೆ ತಾಲೂಕಿನ ತುಂಬಾಡಿ-ಜೋನಿಗರಹಳ್ಳಿ ಸೇರುವ(ಸರಪಳಿ 13.10 ಕಿ.ಮೀ.ವರೆಗೆ) ರಸ್ತೆ ಹಾಗೂ 18.62ಕೋಟಿ ರೂ.ಗಳ ವೆಚ್ಚದಲ್ಲಿ ಮಧುಗಿರಿ ತಾಲೂಕು ವ್ಯಾಪ್ತಿ ಕೊರಟಗೆರೆ–ಆಂಧ್ರಪ್ರದೇಶ ಗಡಿಯ ಕೊಡಗದಾಲ-ಐ.ಡಿ ಹಳ್ಳಿ ಮಾರ್ಗವಾಗಿ (ರಾಜ್ಯ ಹೆದ್ದಾರಿ-160 ಸರಪಳಿ 13 ಕಿ.ಮೀ. ರಿಂದ 41 ಕಿ.ಮೀ. ವರೆಗೆ) ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಶಂಕುಸ್ಥಾಪನೆ ನೆರವೇರಿಸಿದರು.  …

Read More

 ತುಮಕೂರು:       ಜಿಲ್ಲೆಯ ಎಲ್ಲ ತಾಲೂಕುಗಳು ಬರಪೀಡಿತವೆಂದು ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಯಾವುದೇ ನೆಪ ಹೇಳದೆ ಬರ ನಿರ್ವಹಣೆ ಮಾಡಬೇಕೆಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಜಿ. ಪರಮೇಶ್ವರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.       ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಜಿಲ್ಲೆಯಲ್ಲಿ ಬರ ನಿರ್ವಹಣೆ ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ವಿವಿಧ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ ಅವರು ರಾಜ್ಯದ 176 ತಾಲೂಕುಗಳ ಪೈಕಿ 158 ತಾಲೂಕುಗಳು ಬರಪೀಡಿತವಾಗಿವೆ. ಜಿಲ್ಲೆಯ ಐದಾರು ತಾಲೂಕುಗಳು ಬರಪೀಡಿತಕ್ಕೊಳಗಾಗಿದ್ದನ್ನು ಮಾತ್ರ ನಾನು ಕೇಳಿದ್ದೆ. ಮಳೆಯ ಅಭಾವದಿಂದ ಈ ವರ್ಷ ಜಿಲ್ಲೆಯ ಎಲ್ಲ ತಾಲೂಕುಗಳು ಭೀಕರ ಬರಗಾಲಕ್ಕೆ ತುತ್ತಾಗಿವೆ. ಈ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಬರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಜನರ ಸಮಸ್ಯೆ ನಿವಾರಣೆಗೆ ಸ್ಪಂದಿಸಬೇಕು ಎಂದು ಸೂಚಿಸಿದರು.       ಈಗಾಗಲೇ ಬೇಸಿಗೆ ಪ್ರಾರಂಭವಾಗಿದ್ದು, ಮುಂದಿನ ಮೂರು ತಿಂಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರು, ಬೆಳೆ ನಷ್ಟ,…

Read More

 ತುಮಕೂರು:       ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿಜ್ಞಾನಕ್ಕೆ ಹೆಚ್ಚು ಒತ್ತು ಕೊಡುವ ಅಗತ್ಯವಿದೆ. ಶಿಕ್ಷಕರು ಸಮಾಜ ಹಾಗೂ ವಿದ್ಯಾರ್ಥಿಗಳು ಇದರಲ್ಲಿ ತಮ್ಮನ್ನು ತೊಡಗಿಸಿಕೊಂಡು, ವಿಜ್ಞಾನದಲ್ಲಿ ಹೊಸ-ಹೊಸ ಆವಿಷ್ಕಾರಗಳನ್ನು ವಿದ್ಯಾರ್ಥಿಗಳಿಂದ ಹೊರ ಹೊಮ್ಮಿಸಿಬೇಕು ಈ ದಿಸೆಯಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್‍ನ್ನು ಉತ್ತಮ ವೇದಿಕೆಯನ್ನಾಗಿ ಮಾಡಿಕೊಳ್ಳಬೇಕೆಂದು ಸಾ.ಶಿ ಇಲಾಖೆಯ ಉಪನಿರ್ದೇಶಕರಾದ ಕೆ. ಮಂಜುನಾಥ್ ತಿಳಿಸಿದರು.       ಅವರು ತುಮಕೂರಿನ ಶ್ರೀ ಸಿದ್ಧಗಂಗಾ ಪ್ರೌಢಾಶಾಲೆಯಲ್ಲಿ ಏರ್ಪಡಿಸಿದ್ದ ಅಂತರಶಾಲಾ ವಿಜ್ಞಾನ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿದ್ದ ಬಿ.ಆರ್.ಸಿ ಗಂಗಹನುಮಯ್ಯ ಮಾತನಾಡಿ ಮಕ್ಕಳಲ್ಲಿರುವ ವೈಜ್ಞಾನಿಕ ಪ್ರತಿಭೆಯನ್ನು ಹೊರಹೊಮ್ಮಿಸಲು ವಿಜ್ಞಾನ ವಸ್ತು ಪ್ರದರ್ಶನಗಳು ಸಹಾಯಕವಾಗಿವೆ, ವಿದ್ಯಾರ್ಥಿಗಳು ತಮಗೆ ಗೊತ್ತಿರದ ವಿಚಾರಗಳನ್ನು ಶಿಕ್ಷಕರಿಂದ, ತಜ್ಞರಿಂದ, ಮಾಧ್ಯಮಿಗಳಿಂದ ಹಾಗೂ ಅಂತರ್ಜಾಲದಿಂದ ತಂತ್ರಜ್ಞಾನವನ್ನು ಬಳಸಿಕೊಂಡು ಸಮಾಜಕ್ಕೆ ವಿದ್ಯಾರ್ಥಿಗಳು ಕೊಡುಗೆ ನೀಡಬೇಕೆಂದು ತಿಳಿಸಿದರು.       ಸಮಾರಂಭದ ಅಧ್ಯಕ್ಷತೆವಹಿಸಿದ್ದ ಡಯಟ್‍ನ ಪ್ರಾಂಶುಪಾಲರಾದ ಸಿ. ನಾಗಮಣಿ ಮಾತನಾಡಿ ನಾವು ಯಾವುದೇ ಅಭಿವೃದ್ದಿಯನ್ನು ತಳಹಂತದಿಂದ ರೂಢಿಸಿಕೊಂಡಾಗ ಮಾತ್ರ ಪೂರ್ಣಪ್ರಗತಿ ಸಾಧ್ಯ. ಮುಂದಿನ…

Read More

ತುಮಕೂರು :       ಫೆಬ್ರವರಿ ತಿಂಗಳ ನಂತರ ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಳವಾಗಲಿದ್ದು, 15ನೇ ವಾರ್ಡ್‍ನ ಸಾರ್ವಜ ನಿಕರು ಹೇಮಾವತಿ ನೀರನ್ನು ಮಿತವಾಗಿ ಬಳಸುವ ಮೂಲಕ ಸಹಕಾರ ನೀಡುವಂತೆ ಮಹಾನಗರ ಪಾಲಿಕೆ ಲೆಕ್ಕಪತ್ರಗಳ ಸ್ಥಾಯಿಸಮಿತಿ ಅಧ್ಯಕ್ಷೆ ಗಿರಿಜಾ ಧನಿಯಾಕುಮಾರ್ ಮನವಿ ಮಾಡಿದ್ದಾರೆ.       ಬುಗುಡನಹಳ್ಳಿಯಲ್ಲಿ ಲಭ್ಯವಿರುವ ನೀರಿನ ಬಗ್ಗೆ ಹಾಗೂ ಬೇಸಿಗೆಯಲ್ಲಿ ನಗರದಲ್ಲಿ ನೀರಿನ ಸಮಸ್ಯೆ ಬಗ್ಗೆ ಮುಂಜಾಗ್ರತೆ ವಹಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಸಭೆ ನಡೆಸಿ ಪಾಲಿಕೆ ಎಂಜನಿಯರ್ ವಸಂತ್ ಅವರಿಂದ ಮಾಹಿತಿಯನ್ನು ಪಡೆದುಕೊಂಡರು.       ಫೆಬ್ರವರಿ ನಂತರ ನೀರಿನ ಬಾಷ್ಪೀಕರಣ ಹೆಚ್ಚಲಿದ್ದು, ನೀರಿನ ಲಭ್ಯತೆ ಕಡಿಮೆಯಾಗಲಿದೆ, ಈಗಾಗಲೇ ಕೊಳವೆಬಾವಿಗಳ ಮೂಲಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದ್ದು, ಹೇಮಾವತಿ ನೀರನ್ನು ಮಿತವಾಗಿ ಬಳಸಿದರೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುವುದಿಲ್ಲ, ಹಾಗಾಗಿ ಸಾರ್ವಜನಿಕರು ಮಹಾನಗರ ಪಾಲಿಕೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.       ಸಾರ್ವಜನಿಕರಿಗೆ ವಾಸ್ತವ ಸ್ಥಿತಿಯನ್ನು ತಿಳಿಸಿ, ಕುಡಿಯುವ ನೀರಿನ ಸಮಸ್ಯೆಯುಂಟಾಗದಂತೆ…

Read More

 ತುಮಕೂರು:      ಲೋಕಸಭೆ ಚುನಾವಣೆ ಪ್ರಯುಕ್ತ ಮತದಾರರ ಪಟ್ಟಿಯಲ್ಲಿ ನೋಂದಣಿಯಾಗದೆ ಹೊರಗುಳಿದವರಿಗಾಗಿ ಜಿಲ್ಲಾದ್ಯಂತ ಮೊದಲನೇ ಹಂತದಲ್ಲಿ ಫೆಬ್ರುವರಿ 23 ಮತ್ತು 24ರಂದು ಹಾಗೂ ಎರಡನೇ ಹಂತದಲ್ಲಿ ಮಾರ್ಚ್ 2 ಮತ್ತು 3ರಂದು ವಿಶೇಷ ನೋಂದಣಿ ಅಭಿಯಾನವನ್ನು ನಡೆಸಲಾಗುವುದು ಎಂದು ಸ್ವೀಪ್ ಸಮಿತಿ ಅಧ್ಯಕ್ಷೆ ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.      ಜಿಲ್ಲಾ ಪಂಚಾಯತಿಯಲ್ಲಿಂದು ನಡೆದ ಕೆ.ಡಿ.ಪಿ. ಸಭೆಯ ನಂತರ ಮಾತನಾಡಿದ ಅವರು, ಅಭಿಯಾನ ದಿನಗಳಂದು ಸಂಬಂಧಿಸಿದ ಮತಗಟ್ಟೆ ಅಧಿಕಾರಿಯು ಜನವರಿ 16ರಂದು ಪ್ರಕಟಿಸಲಾದ ಅಂತಿಮ ಮತದಾರರ ಭೌತಿಕ ಪಟ್ಟಿಯೊಂದಿಗೆ ಆಯಾ ಮತಗಟ್ಟೆಯಲ್ಲಿ ಹಾಜರಿದ್ದು, ಮತದಾರರಿಗೆ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.       ಈ ಅಭಿಯಾನದಲ್ಲಿ ದಿನಾಂಕ: 1-1-2019ಕ್ಕೆ 18ವರ್ಷ ಪೂರ್ಣಗೊಂಡ ಅರ್ಹ ಮತದಾರರು ಮತಪಟ್ಟಿಗೆ ನೋಂದಾಯಿಸಿಕೊಳ್ಳಲು ನಿಗಧಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮತಗಟ್ಟೆ ಅಧಿಕಾರಿಗೆ ಸಲ್ಲಿಸಬಹುದು. ಅಲ್ಲದೆ ಮತದಾರ ಒಂದು ವಿಧಾನ ಸಭಾ ಕ್ಷೇತ್ರದಿಂದ ಮತ್ತೊಂದು ಕ್ಷೇತ್ರಕ್ಕೆ…

Read More

 ತುಮಕೂರು:       ಶ್ರೀ ಸಿದ್ದಗಂಗಾ ಮಠ ಶ್ರೀ ಸಿದ್ಧಲಿಂಗೇಶ್ವರಸ್ವಾಮಿ ಜಾತ್ರಾ ಮಹೋತ್ಸವವು ಫೆಬ್ರುವರಿ 26 ರಿಂದ ಮಾರ್ಚ್ 7 ರವರೆಗೆ ಜರುಗಲಿದ್ದು, ಜಾತ್ರೆ ಪ್ರಯುಕ್ತ ಮಾರ್ಚ್ 5ರಂದು ರಥೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಏರ್ಪಡಿಸಲಾಗುವುದು ಎಂದು ಮಠದ ಅಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮಿಗಳು ತಿಳಿಸಿದ್ದಾರೆ.       ಜಾತ್ರೆಯಲ್ಲಿ ಫೆಬ್ರುವರಿ 26ರ ರಾತ್ರಿ ಶ್ರೀ ಗೋಸಲ ಸಿದ್ಧೇಶ್ವರಸ್ವಾಮಿ ಉತ್ಸವ, ಶೂನ್ಯ ಸಿಂಹಾಸನರೋಹಣೋತ್ಸವ, ವೃಷಭ ವಾಹನ ಉತ್ಸವಗಳು ನಡೆಯಲಿದ್ದು, ಫೆಬ್ರುವರಿ 27ರಂದು ನಂದಿವಾಹನ ಹಾಗೂ ಗಜವಾಹನ; ಫೆಬ್ರುವರಿ 28ರಂದು ಹುಲಿವಾಹನ ಹಾಗೂ ಸಿಂಹವಾಹನ; ಮಾರ್ಚ್ 1ರಂದು ಹುತ್ತದ ವಾಹನ ಹಾಗೂ ಶೇಷವಾಹನ; ಮಾರ್ಚ್ 2ರಂದು ಅಶ್ವವಾಹನ ಹಾಗೂ ನವಿಲುವಾಹನ; ಮಾರ್ಚ್ 3ರಂದು ರಾವಣವಾಹನ, ಬಿಲ್ವವೃಕ್ಷವಾಹನ ಹಾಗೂ ನವರಂಗಪಾಲಕಿ ಉತ್ಸವ; ಮಾರ್ಚ್ 4ರಂದು ಮಹಾಶಿವರಾತ್ರಿ ಪ್ರಯುಕ್ತ ಬೆಳ್ಳಿರಥೋತ್ಸವ ಹಾಗೂ ಮುತ್ತಿನ ಪಾಲಕಿ ಉತ್ಸವ ನಡೆಯಲಿವೆ. ಅಲ್ಲದೆ ಮಾರ್ಚ್ 5ರಂದು ರಥೋತ್ಸವ ಹಾಗೂ ರುದ್ರಾಕ್ಷಿ ಮಂಟಪೋತ್ಸವ, ಮಾರ್ಚ್ 6ರಂದು ಬೆಳ್ಳಿಪಾಲಕಿ ಉತ್ಸವ; ಮಾರ್ಚ್7ರಂದು…

Read More