Author: News Desk Benkiyabale

ತುಮಕೂರು: ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆಗಳಂತಹ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನ ಕುಮಾರ್ ಕೆ. ಹೇಳಿದರು. ತುಮಕೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗ ಮಂಗಳವಾರ ಹಮ್ಮಿಕೊಂಡಿದ್ದ ಸ್ನಾತಕೋತರ ವಿಭಾಗಗಳ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ನಾಲ್ಕು ಗೋಡೆಗಳಿಗೆ ಮಾತ್ರ ಸೀಮಿತವಾಗಿರದೆ ಕ್ರೀಡೆಯಂತಹ ಪಠ್ಯೇತರ ಚಟುವಟಿಕೆಗಳಲ್ಲಿಯೂ ಪಾಲ್ಗೊಳ್ಳುವಂತಿರಬೇಕು. ಕ್ರೀಡೆಯು ಪ್ರತಿಯೊಬ್ಬರ ಜೀವನದಲ್ಲಿ ಅತ್ಯವಶ್ಯಕವಾದ ದೈಹಿಕ ಚಟುವಟಿಕೆಯಾಗಿದ್ದು ಉತ್ತಮವಾದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಸಹಕಾರಿಯಾಗುತ್ತದೆ ಎಂದರು. ಈಗಿನ ಯುವಜನತೆಯಲ್ಲಿ ಧೈರ್ಯದ ಮನೋಭಾವ ಕಡಿಮೆಯಾಗಿದ್ದು, ಇಂತಹ ಕ್ರೀಡಾ ಚಟುವಟಿಕೆಗಳಲ್ಲಿ ತಮ್ಮನ್ನು ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು. ಯಾವುದಕ್ಕೂ ಎದೆಗುಂದದೆ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಮೋಜು-ಮಸ್ತಿಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ದಿಕ್ಕು ತಪ್ಪುತ್ತಿರುವ ಯುವ ಸಮೂಹ ಕ್ರೀಡಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು. ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಅಧ್ಯಕ್ಷ ಪ್ರೊ. ಪರಶುರಾಮ ಕೆ. ಜಿ., ವಾಣಿಜ್ಯಶಾಸ್ತç ವಿಭಾಗದ ಅಧ್ಯಕ್ಷ ಪ್ರೊ. ಬಿ. ಶೇಖರ್,…

Read More

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಸಂಕಾಪುರದ ಬಳಿ ಕೈಗೊಂಡಿದ್ದ ಹೇಮಾವತಿ ಎಕ್ಸ್ಪ್ರೆಸ್ ಕೆನಾಲ್ ಕಾಮಗಾರಿ ಸ್ಥಳಕ್ಕೆ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಭೇಟಿ ನೀಡಿ ವೀಕ್ಷಿಸಿದರು. ಮಾಜಿ ಸಂಸದ ಜಿ.ಎಸ್. ಬಸವರಾಜು, ಮಾಜಿ ಸಚಿವ ಸೊಗಡು ಶಿವಣ್ಣ, ನಿವೃತ್ತ ಇಂಜಿನಿಯರ್ ಜೈಪ್ರಕಾಶ್, ಶಾಸಕ ಜ್ಯೋತಿಗಣೇಶ್, ದಿಲೀಪ್, ಗ್ಯಾಸ್ ಬಾಬು, ಮಾಜಿ ಶಾಸಕ ಪಿ.ಆರ್. ಸುಧಾಕರ್‌ಲಾಲ್, ಭುವನಹಳ್ಳಿ ಮಂಜುನಾಥ್, ಯೋಗಾನಂದ್, ಬ್ಯಾಟರಂಗೇಗೌಡ, ಬೈರಣ್ಣ, ಟಿ. ಆರ್. ಆಂಜನಪ್ಪ, ಹೊನ್ನಗಿರಿಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

Read More

ತುಮಕೂರು: ವಿದ್ಯಾರ್ಥಿಗಳ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿರುವುದರಿಂದ ನಗರದಲ್ಲಿ ವಿವಿಧ ಇಲಾಖೆಗಳಡಿ ಕಾರ್ಯ ನಿರ್ವಹಿಸುತ್ತಿರುವ ೫೮ ವಿದ್ಯಾರ್ಥಿ ನಿಲಯಗಳ ಜೊತೆಗೆ ಹೆಚ್ಚುವರಿಯಾಗಿ ೬ ಹೊಸ ವಿದ್ಯಾರ್ಥಿ ನಿಲಯಗಳನ್ನು ಮಂಜೂರು ಮಾಡಲಾಗಿದೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ್ ತಿಳಿಸಿದರು.      ನಗರದ ಹೊರವಲಯ ಮೈದಾಳ ರಸ್ತೆಯಲ್ಲಿರುವ ಶ್ರೀ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಸ್ನಾತಕೋತ್ತರ ಮಹಿಳೆಯರ ವಿದ್ಯಾರ್ಥಿ ನಿಲಯಕ್ಕೆ ಮಂಗಳವಾರ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು ಹೆಚ್ಚುವರಿಯಾಗಿ ಮಂಜೂರಾಗಿರುವ ೬ ವಿದ್ಯಾರ್ಥಿ ನಿಲಯಗಳನ್ನು ಪ್ರಸ್ತುತ ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿದ್ದು, ಶೀಘ್ರವೇ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.       ಇಂಜಿನಿಯರಿAಗ್, ವಿಶ್ವವಿದ್ಯಾನಿಲಯ, ಮತ್ತಿತರ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರು ಈ ನಿಲಯದಲ್ಲಿದ್ದು, ಸಮಾಜದಲ್ಲಿ ಉತ್ತಮ ಹಾಗೂ ಆರೋಗ್ಯವಂತ ಪ್ರಜೆಗಳನ್ನಾಗಿ ರೂಪಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರ, ನಿಗಧಿಪಡಿಸಿರುವ ಆಹಾರ ಪಟ್ಟಿಯನ್ವಯ…

Read More

ತುಮಕೂರು: ಪರವಾನಗಿ ಪಡೆಯದೆ ಗೃಹ ಬಳಕೆ ಕೀಟ ನಾಶಕಗಳನ್ನು ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದ ದಿನಸಿ ಅಂಗಡಿ ಮಳಿಗೆಯ ಮೇಲೆ ಕೃಷಿ ಇಲಾಖೆ ಜಾರಿ ದಳದ ಅಧಿಕಾರಿಗಳು ದಾಳಿ ನಡೆಸಿ ೩೨ ಸಾವಿರ ರೂ. ಮೌಲ್ಯದ ಗೃಹ ಬಳಕೆ ಕೀಟನಾಶಕವನ್ನು ವಶಪಡಿಸಿಕೊಂಡಿದ್ದಾರೆ. ನಗರದ ಮಂಡಿಪೇಟೆಯ ಮುಖ್ಯ ರಸ್ತೆಯಲ್ಲಿರುವ ರಾಜಾರಾಂ ಅಂಡ್ ಕಂ. ದಿನಸಿ ಮಳಿಗೆಯಲ್ಲಿ ಗೃಹ ಬಳಕೆ ಕೀಟನಾಶಕ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಕೃಷಿ ಇಲಾಖೆ ಜಾರಿ ದಳದ ಸಹಾಯಕ ನಿರ್ದೇಶಕ ಪುಟ್ಟರಂಗಪ್ಪ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದಾಗ ಪರವಾನಗಿ ಪಡೆಯದೆ, ದಾಖಲಾತಿ ನಿರ್ವಹಣೆ ಮಾಡದೆ ಕಿಂಗ್ ಮತ್ತು ಡೆಡ್‌ಲೈನ್ ಎಂಬ ಎರಡು ಗೃಹ ಬಳಕೆ ಕೀಟನಾಶಕಗಳನ್ನು ದಾಸ್ತಾನು ಮಾಡಿರುವುದು ಪತ್ತೆಯಾಗಿದೆ. ದಿನಸಿ ಸಾಮಗ್ರಿಗಳ ಜತೆ ೪೨ ಪ್ಲಾಸ್ಟಿಕ್ ಬ್ಯಾಗ್‌ಗಳಲ್ಲಿ ತುಂಬಿಟ್ಟಿದ್ದ ೩೨ ಸಾವಿರ ರೂ. ಮೌಲ್ಯದ ೨೩೭೯೯ ಗೃಹ ಬಳಕೆ ಕೀಟನಾಶಕಗಳ ಪ್ಯಾಕೇಟ್‌ಗಳನ್ನು ವಶಪಡಿಸಿಕೊಂಡು ಕೀಟನಾಶಕ ಮಾದರಿಗಳನ್ನು ತೆಗೆದು ಗುಣ ನಿಯಂತ್ರಣ ವಿಶ್ಲೇಷಣೆಗೆ…

Read More

ತುಮಕೂರು: ಉದ್ದಿಮೆದಾರರು ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ತುಮಕೂರು ನಗರವನ್ನು ಕೇಂದ್ರವಾಗಿಟ್ಟುಕೊAಡು ರಾಜ್ಯಮಟ್ಟದ ಉದ್ಯಮಿ ಮಿತ್ರ ಸಹಕಾರ ಸಂಘ ನಿಯಮಿತ ಸ್ಥಾಪನೆ ಮಾಡಲಾಗಿದೆ ಎಂದು ಉದ್ಯಮಿ ಮಿತ್ರ ಸಹಕಾರ ಸಂಘದ ಮುಖ್ಯ ಪ್ರವರ್ತಕ ಸಂತೋಷಕುಮಾರ್.ಹೆಚ್.ಎನ್.ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿAದು ಮಾತನಾಡಿದ ಅವರು, ಹೊಸದಾಗಿ ಉದ್ದಿಮೆ ಆರಂಭಿಸುವ ಯುವಜನರಿಗೆ ಜ್ಞಾನದ ಕೊರತೆಯಿಂದ ಕೆಲವಷ್ಟು ದಿನ ಉದ್ದಿಮೆ ನಡೆಸಿ, ನಂತರ ಬಾಗಿಲು ಹಾಕಿರುವ ಪ್ರಕರಣಗಳೇ ಹೆಚ್ಚಿವೆ. ಬಂಡವಾಳ ಹೂಡಿಕೆ, ಸಂಪನ್ಮೂಲ ಕ್ರೂಢೀಕರಣ,ಮಾರುಕಟ್ಟೆ ಇನ್ನಿತರ ಸಮಸ್ಯೆಗಳನ್ನು ಎದುರಿಸಲಾಗದೆ. ಅರ್ಧಕ್ಕೆ ಕೈಬಿಡುವ ಪ್ರಸಂಗಗಳೇ ಹೆಚ್ಚಾಗಿವೆ. ಈ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಬೇಕಾದ ಮಾರ್ಗದರ್ಶನ ಹಾಗೂ ಸಹಕಾರವನ್ನು ನೀಡುವ ನಿಟ್ಟಿನಲ್ಲಿ ಉದ್ಯಮಿ ಮಿತ್ರ ಸಹಕಾರ ಸಂಘ ಪ್ರಯತ್ನಿಸುತ್ತಿದೆ ಎಂದರು. ಉದ್ಯಮಿ ಮಿತ್ರ ಸಹಕಾರಿ ಸಂಘ ಕೇವಲ ಹಣಕಾಸು ವ್ಯವಕಾರಕ್ಕೆ ಸಂಬAಧಿಸಿದ ಸೋಸೈಟಿಯಲ್ಲ.ಬದಲಿಗೆ ಉದ್ದಿಮೆದಾರರು, ವ್ಯಾಪಾರಸ್ಥರು,ಮಾರಾಟಗಾರರು,ಏಜೆಂಟರುಗಳ ಹೀಗೆ ಬಹು ಹಂತದ ಸೇವೆಯನ್ನು ಉದ್ದಿಮೆದಾರರಿಗೆ ಒದಗಿಸಿ, ಯುವಜನರ ಬೆನ್ನೆಲುಬಾಗಿ ಕೆಲಸ ಮಾಡಲಿದೆ.ತುಮಕೂರಿನ ರೆಡ್‌ಕ್ರಾಸ್ ಭವನದಲ್ಲಿ ಮುಖ್ಯ ಕಚೇರಿಯಿದ್ದು, ರಾಜ್ಯದ ನಾಲ್ಕು ವಿಭಾಗಗಳಲ್ಲಿಯೂ ಸಂಪರ್ಕ…

Read More

ಕೊರಟಗೆರೆ: ಭಾರತೀಯ ಸಂಸ್ಕೃತಿಯಲ್ಲಿ ವಿವಾಹವು ವಿಶೇಷ ಸ್ಥಾನಮಾನ ಪಡೆದಿದೆ. ಸಾಮೂಹಿಕ ವಿವಾಹದ ಮೂಲಕ ದಾಂಪತ್ಯ ಜೀವನ ಪ್ರವೇಶಿಸುತ್ತಿರುವ ಆದರ್ಶ ದಂಪತಿಗಳು ನಿಜಕ್ಕೂ ಪುಣ್ಯವಂತರು ಎಂದು ಬಾಳೆಹೊನ್ನೂರು ಶ್ರೀಮಠದ ಶ್ರೀಮದ್ ರಂಭಾಪುರಿ ವೀರಸಿಂಹಾನಾಧೀಶ್ವರ ಶ್ರೀ೧೦೦೮ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ತಿಳಿಸಿದರು. ತಾಲ್ಲೂಕಿನ ಶ್ರೀಕ್ಷೇತ್ರ ಸಿದ್ದರಬೆಟ್ಟ ಬಾಳೆಹೊನ್ನೂರು ಖಾಸಾ ಶಾಖಾ ಮಠದಲ್ಲಿ ಆಯೋಜಿಸಿದ್ದ ೧೯ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಶ್ರೀಜಗದ್ಗುರು ರೇಣುಕಾಚಾರ್ಯರ, ಶ್ರೀಜಗಜ್ಯೋತಿ ಬಸವೇಶ್ವರರ ಜಯಂತ್ಯೋತ್ಸವ ಹಾಗೂ ಸಾಮೂಹಿಕ ವಿವಾಹ, ಜನಜಾಗೃತಿ ಧರ್ಮ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಶ್ರೀಕ್ಷೇತ್ರದಲ್ಲಿ ವಾರ್ಷಿಕೋತ್ಸವ ಅಂಗವಾಗಿ ನಡೆಯುತ್ತಿರುವ ಹಲವಾರು ವೈವಿಧ್ಯಮಯ ಧಾರ್ಮಿಕ ಕಾರ್ಯಕ್ರಮಗಳು ಹಬ್ಬದ ವಾತಾವರಣ ಸೃಷ್ಠಿಸಿದೆ. ಧರ್ಮದ ಜಾಗೃತಿಗಾಗಿ ನೆಲೆಯೂರಿದ ಶ್ರೀಮಠÀ ೧೯ವರ್ಷ ಪೂರೈಸಿ ಮುಂದೆ ಸಾಗುತ್ತಿರುವ ಕೀರ್ತಿ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿಗೆ ಸಲ್ಲುತ್ತದೆ. ಶೈಕ್ಷಣಿಕ ವಿದ್ಯಾಲಯ ಪ್ರಗತಿ, ನಿತ್ಯ ದಾಸೋಹ, ಬಡ ವಿದ್ಯಾರ್ಥಿಗಳ ನಿಲಯವಿದ್ದು ಇಷ್ಟೆಲ್ಲಾ ಸೇವೆಗಳಿಗೆ ಭಕ್ತರೇ ಶ್ರೀಮಠದ ನಿಜವಾದ ಶಕ್ತಿ. ಆಧುನಿಕ ಜಗತ್ತಿನಲ್ಲಿ ಮಕ್ಕಳು…

Read More

ತುಮಕೂರು: ಅಂದು ಅನಂತಮೂರ್ತಿ ಅವರು ಆರಂಭಿಸಿದ ಚಲನೆಯು ಇಂದು ಬಾನು ಮುಷ್ತಾಕ್ರಿಂದ ಪೂರ್ಣವಾಗಿದೆ. ಬಾನು ಮತ್ತು ಭಾಸ್ತಿ ಈಗ ಕನ್ನಡಕ್ಕೆ ಬೂಕರ್ ಪ್ರಶಸ್ತಿ ತಂದು ಕನ್ನಡ ಭಾಷೆಯ ಕಂಪನ್ನು ಜಗತ್ತಿಗೆ ಪಸರಿಸಿದ್ದಾರೆ ಹಾಗೂ ಈ ಪ್ರೇರಣೆಯಿಂದ, ಬಾನು ಅವರ ಕಥೆಗಳ ಪ್ರಭಾವದಿಂದ ಇನ್ನಷ್ಟು ಕನ್ನಡ ಮೂಲ ಸಾಹಿತ್ಯವನ್ನು ಓದುವ ಆಸಕ್ತಿ ಬೆಳೆಯಲಿದೆ ಎಂದು ಹಿರಿಯ ಸಾಹಿತಿಗಳಾದ ಅಗ್ರಹಾರ ಕೃಷ್ಣಮೂರ್ತಿಯವರು ಕುಂಡದ ಬೇರು ಕಥಾ ಸಂಕಲನ ಬಿಡುಗಡೆ  ಸಮಾರಂಭದಲ್ಲಿ ತಿಳಿಸಿದರು. ನಗರದ ಕನ್ನಡ ಭವನದಲ್ಲಿ ಕರ್ನಾಟಕ ಲೇಖಕಿಯರ ಸಂಘ ಜಿಲ್ಲಾ ಶಾಖೆ ತುಮಕೂರು, ತುಮಕೂರಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮಿಲಿಟರಿ ಪ್ರಕಾಶನ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಕುಂಡದ ಬೇರು ಕಥಾ ಸಂಕಲನನ್ನು ಲೋಕಾರ್ಪಣೆಗೊಳಿಸಿದ ಅವರು “ಲೇಖಕಿ ಪ್ರತಿಭಾ ನಂದಕುಮಾರ್ ಅವರ ಮಾತನ್ನು ನೆನೆಯುತ್ತಾ ಬದುಕು ಮತ್ತು ಸಾಹಿತ್ಯದ ನಡುವಿನ ಗೆರೆಯನ್ನು ಅಳಿಸಿದಾಗ ಕನ್ನಡದ ಅಪ್ಪಟ ಸಾಹಿತ್ಯದ ಗುರುತಿಸುವಿಕೆ ಸಾಧ್ಯ” ಎಂದರು. ಕುಂಡದ ಬೇರು ಕೃತಿಯ ಕುರಿತು ಮಾತನಾಡಿದ ಅವರು “ಜಾತಿಯ…

Read More

ತುಮಕೂರು: ಕಾಶ್ಮೀರದ ಪಹಲ್ಗಾಮ್ ಘಟನೆ ಯಿಂದ ಮುಂದೂಡಲ್ಪಟ್ಟಿದ್ದ ಸಹಕಾರಿ ಸಚಿವ ಕೆ.ಎನ್. ರಾಜಣ್ಣರವರ ಗೌರವ ಗ್ರಂಥ ಬಿಡುಗಡೆ ಕಾರ್ಯಕ್ರಮವನ್ನು ಜೂನ್. ೨೧ ರಂದು ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ತಿಳಿಸಿದರು. ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಗೌರವ ಗ್ರಂಥ ಬಿಡುಗಡೆ ಸಮಾರ ಂಭದ ವೇದಿಕೆ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೇ ೧೩ ರಂದು ಆಯೋಜಿಸಿದ್ದ ಕಾರ್ಯಕ್ರಮ ಇನ್ನೆರಡು ದಿನ ಇದೆ ಎನ್ನುವಾಗ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಪ್ರವಾಸಿಗರ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಆಪರೇಷನ್ ಸಿಂಧೂರ ಪ್ರಾರಂಭಿಸಲಾಗಿತ್ತು. ದೇಶದೆಲ್ಲೆಡೆ ಬಿಗುವಿನ ವಾತಾವರಣ ಇದ್ದ ಪರಿಣಾಮ ಹಿರಿಯರ ಮಾರ್ಗದರ್ಶನದಂತೆ ಕಾರ್ಯಕ್ರಮ ಮುಂದೂಡಿದ್ದು, ಕೆ.ಎನ್.ಆರ್. ಅಮೃತ ಮಹೋತ್ಸವ ಅಭಿನಂದನಾ ಸಮಿತಿ ತೀರ್ಮಾನದಂತೆ ಜೂನ್. ೨೧ ಕ್ಕೆ ಆಯೋಜಿಸಲಾಗುತ್ತಿದೆ ಎಂದರು. ಸಹಕಾರಿ ಸಚಿವರಾಗಿರುವ ಕೆ.ಎನ್.ರಾಜಣ್ಣ ಅವರು ಸಹಕಾರಿ ಕ್ಷೇತ್ರದಲ್ಲಿ ಹೆಸರು ಮಾಡಿದವರು. ಹಾಗಾಗಿ ಇಡೀ ರಾಜ್ಯದ ಮೂಲೆ…

Read More

ತುಮಕೂರು: ಜೂ.೪ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಐಪಿಎಲ್ ಪಂದ್ಯ ವೀಕ್ಸಿಸಲು ಹೋಗಿ ಕಾಲ್ತುಳಿತದಲ್ಲಿ ಮೃತಪಟ್ಟ ಕುಣಿಗಲ್ ಅಮೃತೂರಿನ ಮನೋಜ್ ಕುಮಾರ್ ತಂದೆಗೆ ಸರ್ಕಾರ ವತಿಯಿಂದ ೨೫ ಲಕ್ಷ ರೂ. ಪರಿಹಾರ ವಿತರಿಸಲಾಯಿತು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೃತ ಮನೋಜ್ ತಂದೆ ದೇವರಾಜುಗೆ ಪರಿಹಾರದ ಚೆಕ್ ವಿತರಿಸಿ ಮಾತನಾಡಿದ ಜಿಲ್ಲಾಧಿಕಾರಿ ಶುಭಕಲ್ಯಾಣ್ ಮುಖ್ಯಮಂತ್ರಿ ಗಳ ರಿಲೀಪ್ ಫಂಡ್ ನಿಂದ ನಮಗೆ ಜಿಲ್ಲಾûಧಿಕಾರಿಗಳ ಪಿಡಿ ಖಾತೆಯಿಂದ ತಕ್ಷಣ ೨೫ ಲಕ್ಷ ರೂ. ಪರಿಹಾರ ನೀಡುವಂತೆ ಆದೇಶ ಬಂದಿದ್ದು ಅದರಂತೆ ನಾವು ಪರಿಹಾರದ ಚೆಕ್ ನೀಡಿದ್ದೇವೆ ಎಂದರು. ದೇವರಾಜು ಮಾತನಾಡಿ ಸರ್ಕಾರ ಹಣ ನೀಡಿದೆ ಆದರೆ ನಮ್ಮಮಗ ಬದುಕಿಬರಲಿಲ್ಲ.ಮುಂದಿನ ದಿನಗಳಲ್ಲಿ ನಮಗೆ ಆದಂತೆ ಬೇರೆ ಯಾರಿಗೂ ಆಗುವುದು ಬೇಡ . ಸರ್ಕಾರ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು.ನನ್ನ ಮಗ ರ್ಯಾಂಕ್ ವಿದ್ಯಾರ್ಥಿ ಇನ್ನು ಎರಡು ವರ್ಷ ಹೋಗಿದ್ದರೆ ಉತ್ತಮ ಉದ್ಯೋಗ ಸಂಪಾದಿಸಿ ಇದಕ್ಕಿಂತ ಎರಡರಷ್ಟು ಸಂಪಾದನೆ ಮಾಡುತ್ತಿದ್ದ. ಪರಿಹಾರದ ಹಣವನ್ನು ಅವನ ತಂಗಿ ಹಾಗೂ ತಾಯಿ…

Read More

ಕೊರಟಗೆರೆ: ಸಾರಿಗೆ ಬಸ್ ನಿರಂತರ ಸಮಸ್ಯೆಗೆ ಬೇಸೆತ್ತ ಪ್ರಯಾಣಿಕರು ಸೋಮವಾರ ಬೆಳಗ್ಗೆ ಬೆಂಗಳೂರಿಗೆ ಹೋಗುತ್ತಿದ್ದ ಬಸ್ ತಡೆದು ಸಾರಿಗೆ ಅಧಿಕಾರಿಗಳು ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಗೃಹ ಸಚಿವರ ಕ್ಷೇತ್ರದಲ್ಲಿಯೇ ಬಸ್‌ಗಾಗಿ ಪರದಾಡುತ್ತವಂತಹ ಅನಿವಾರ್ಯತೆ ಎದುರಾಗಿದೆ. ಸಾರ್ವಜನಿಕ ಆಸ್ಪತ್ರೆ ಮುಂಭಾಗದ ಖಾಸಗಿ ಬಸ್ ನಿಲ್ದಾಣದಲ್ಲಿ ಬೆ.೪ರಿಂದಲೂ ಕಾಯುತ್ತಿದ್ದೇವೆ, ಬಸ್ ಬಂದರೂ ನಿಲ್ಲಿಸಲ್ಲಾ, ಕೆಲವು ಬಸ್‌ಗಳು ನಗರಕ್ಕೆ ಬರದೇ ಬೈಪಾಸ್ ಮೂಲಕ ಹೋಗುತ್ತಿದೆ. ಇದು ಕೇವಲ ಒಂದು ದಿನದ ಸಮಸ್ಯೆಯಲ್ಲಾ ಪ್ರತಿನಿತ್ಯದ ಸಮಸ್ಯೆ ಎಂದು ಪ್ರಯಾಣಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಬಸ್ ತಡೆದು ಆಕ್ರೋಶ ಹೊರಹಾಕುತ್ತಿರುವ ಬಗ್ಗೆ ಮಾಹಿತಿ ತಿಳಿದ ಕೂಡಲೇ ಪೋಲಿಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಪ್ರಯಾಣಿಕರ ಸಮಸ್ಯೆಯನ್ನು ಆಲಿಸಿ ತುಮಕೂರು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಕರೆ ಮಾಡಿ ತಿಳಿಸಿ, ಪ್ರಯಾಣಿಕರ ಸಮಸ್ಯೆಯ ಬಗ್ಗೆ ಅರಿವು ಮೂಡಿಸಿ, ಪ್ರಯಾಣಿಕರು ತಡೆಹಿಡಿದ ೧೦ಕ್ಕೂ ಹೆಚ್ಚಿನ ಬಸ್‌ಗಳಿಂದ ಉಂಟಾಗಿದ್ದ ಟ್ರಾಫಿಕ್ ಕ್ಲಿಯರ್ ಮಾಡಿ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು. ಸರ್ಕಾರಿ ಬಸ್ ತೊರೆದು…

Read More