Author: News Desk Benkiyabale

ತುಮಕೂರು: ಹೇಮಾವತಿ ನೀರಾವರಿ ಹೋರಾಟದಲ್ಲಿ ಭಾಗವಹಿಸಿ ಬಂಧನಕ್ಕೆ ಒಳಗಾ ಗಿದ್ದ ರೈತರನ್ನು ಬಿಡುಗಡೆಗೊಳಿಸಿ ಸ್ವಾಗತಿಸಿ ಕರೆ ತಂದ ಶಾಸಕ ಬಿ. ಸುರೇಶ್ ಗೌಡ. ಭೋವಿಪಾಳ್ಯ ಜೈಲುಖಾನೆ ಬಳಿ ಶಾಸಕರಾದ ಬಿ. ಸುರೇಶಗೌಡರು ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಹೆಬ್ಬಾಕ ರವಿ ಸೇರಿದಂತೆ ನೂರಾರು ಕಾರ್ಯಕರ್ತರು ಮತ್ತು ಅಪಾರ ಸಂಖ್ಯೆಯಲ್ಲಿ ರೈತರು ಸೇರಿ ಬಂದನಕ್ಕೆ ಒಳಗಾಗಿದ್ದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಚೇತನ್, ರೈತ ಆನಂದ್, ಗುಬ್ಬಿಯ ಚೇತನ್ ಹಾಗೂ ಲೋಕೇಶ್ ಅವರನ್ನು ಬಿಡುಗಡೆಗೊಳಿಸಿ ಜೈಲಿನಿಂದ ಕರೆ ತಂದರು. ಈ ಸಂದರ್ಭದಲ್ಲಿ ತುಮಕೂರು ಬಂದಿಖಾನೆ ಗೇಟ್ ಬಳಿ ಮಾತನಾಡಿದ ಶಾಸಕ ಬಿ ಸುರೇಶ್ ಗೌಡ, ಬಂಧನಕ್ಕೆ ಒಳಗಾಗಿದ್ದ ನಾಲ್ಕು ಜನರು ಯಾವುದೇ ಆರೋಪಕ್ಕೆ ಒಳಗಾಗಿ ಬಂಧನಕ್ಕೆ ಒಳಗಾಗಿದ್ದು ಅಲ್ಲ. ಜಿಲ್ಲೆಯ ಅಸ್ತಿತ್ವಕ್ಕಾಗಿ ಹಾಗೂ ಹೇಮಾವತಿ ಲಿಂಕ್ ಕೆನಾಲ್ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ತಮ್ಮ ವಿರೋಧವನ್ನು ವ್ಯಕ್ತಪಡಿಸಿ ಜಿಲ್ಲೆಯ ರೈತರ ಪರವಾಗಿ ಧ್ವನಿ ಎತ್ತಿ ಮಾತನಾಡಿ ಬಂಧನಕ್ಕೆ ಒಳಗಾಗಿದ್ದ ತಾವೆಲ್ಲರೂ ಅಭಿನಂದನಾರ್ಹರು. ತಾವ್ಯಾರು…

Read More

ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ ‘ಇಂಪ್ರೆಶನ್-೨೦೨೫’ ರಾಜ್ಯಮಟ್ಟದ ಮಾಧ್ಯಮ ಹಬ್ಬವನ್ನು ಜೂನ್ ೨೬ ಹಾಗೂ ೨೭ರಂದು ಹಮ್ಮಿಕೊಳ್ಳಲಾಗಿದೆ. ಮಾಧ್ಯಮ ಹಬ್ಬದ ಭಿತ್ತಿಪತ್ರವನ್ನು ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಕುಲಸಚಿವೆ ನಾಹಿದಾ ಜûಮ್ ಜûಮ್ ಬುಧವಾರ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಕೌಶಲಗಳೇ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಕಾಲವಿದು. ಪತ್ರಿಕೋದ್ಯಮ ವಿಭಾಗ ಹಮ್ಮಿಕೊಂಡಿರುವ ಮಾಧ್ಯಮ ಹಬ್ಬವು ಯುವಜನರನ್ನು ಭವಿಷ್ಯದ ಸ್ಪರ್ಧಾತ್ಮಕ ಜಗತ್ತಿಗೆ ಸಿದ್ಧಪಡಿಸುವಲ್ಲಿ ಉತ್ತಮ ವೇದಿಕೆಯಾಗಲಿ ಎಂದು ಹಾರೈಸಿದರು. ವಿಭಾಗದ ಸಂಯೋಜಕ ಡಾ. ಸಿಬಂತಿ ಪದ್ಮನಾಭ ಕೆ. ವಿ., ಮಾಧ್ಯಮ ಹಬ್ಬವು ವಿದ್ಯಾರ್ಥಿಗಳ ಪ್ರತಿಭಾಪ್ರದರ್ಶನಕ್ಕೆ ಉತ್ತಮ ಅವಕಾಶ ಒದಗಿಸಲಿದೆ. ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳ ಹಾಗೂ ಕಾಲೇಜುಗಳ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಕಲೆ, ವಾಣಿಜ್ಯ, ವಿಜ್ಞಾನ ವಿಷಯಗಳನ್ನೊಳಗೊಂಡAತೆ ಎಲ್ಲ ಹಿನ್ನೆಲೆಯ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಈ ಸ್ಪರ್ಧೆಗಳಲ್ಲಿ ಭಾಗವಹಿಸಬಹುದಾಗಿದೆ ಎಂದರು. ಮಾಧ್ಯಮ…

Read More

ಕೊರಟಗೆರೆ: ಲೋಕಾಯುಕ್ತ ನ್ಯಾಯಾಧೀಶರ ಆದೇಶದಂತೆ ಜಿಲ್ಲೆಯ ಹತ್ತು ತಾಲ್ಲೂಕುಗಳ ತಹಶೀಲ್ದಾರ್ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ಬುಧವಾರ ದಿಢೀರ್ ಭೇಟಿ ನೀಡಿ ಕಂದಾಯ ಅಧಿಕಾರಿಗಳಿಗೆ ಬೆವರಿಳಿಸಿದ್ದಾರೆ. ಕೊರಟಗೆರೆ, ಮಧುಗಿರಿ, ಪಾವಗಡ, ಸಿರಾ, ತುಮಕೂರು, ಸೇರಿದಂತೆ ಹತ್ತು ತಾಲ್ಲೂಕಿನ ತಹ ಶೀಲ್ದಾರ್ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಗ್ರಾಮ ಆಡಳಿತಾಧಿಕಾರಿ, ಕಂದಾಯ ನಿರೀಕ್ಷಕರು, ಶಿರಸ್ತೆ ದಾರ್, ಕೇಸ್ ವರ್ಕರ್‌ಗಳ ನಿದ್ದೆ ಕೆಡಿಸಿದ್ದಾರೆ. ಏಕಕಾಲದಲ್ಲಿ ದಿಢೀರ್ ಭೇಟಿ ನೀಡಿ: ಲೋಕಾ ಯುಕ್ತ ನ್ಯಾಯಾಧೀಶರ ಆದೇಶದನ್ವಯ ಜಿಲ್ಲೆಯ ಲೋಕಾಯುಕ್ತ ಎಸ್‌ಪಿ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಅಧಿಕಾರಿಗಳು ಹತ್ತು ತಂಡಗಳನ್ನು ರೂಪಿಸಿಕೊಂಡು ಜಿಲ್ಲೆಯ ಎಲ್ಲಾ ತಾಲ್ಲೂಕಿನ ಕಂದಾಯ ಇಲಾಖೆ ಏಕಾಕಾಲದ ಬೆ.೧೦:೪೫ಕ್ಕೆ ಧೀಡಿರ್ ಭೇಟಿ ನೀಡಿದ್ದು, ಮೇಲೆ ಏಕಕಾಲದ ದಿಡೀರ್ ಭೇಟಿ ನೀಡಿದ್ದು, ಬೆಳಗ್ಗೆ ೧೦:೪೫ಕ್ಕೆ ಲೋಕಾಯುಕ್ತ ಪೋಲಿಸರು ಕೊರಟಗೆರೆಯ ಕಂದಾಯ ಇಲಾಖೆ ಕಚೇರಿಗೆ ಭೇಟಿ ನೀಡಿದ ವೇಳೆ ಕಚೇರಿ ಶೌಚಾಲಯ, ಮೀಟಿಂಗ್ ಹಾಲ್, ಸಕಾಲ ಕೇಂದ್ರ, ಪಹಣಿ ವಿತರಣಾ ಕೇಂದ್ರ, ಭೂಮಿ…

Read More

ತುಮಕೂರು: ನ್ಯಾಯಾಂಗ ಇಲಾಖೆಯಿಂದಲೂ ವಿಶ್ವ ಪರಿಸರ ದಿನ ಕಾರ್ಯಕ್ರಮಏರ್ಪಡಿಸಬೇಕು. ಈಲ್ಲೆಯಲ್ಲಿ ೧೦ ಸಾವಿರ ಗಿಡಗಳನ್ನು ನೆಡಬೇಕೆಂಬ ಆದೇಶವಿದ್ದು, ಎಲ್ಲಾತಾಲೂಕು ನ್ಯಾಯಾಲಯಗಳ ಸಹಕಾರದೊಂದಿಗೆ ಈ ಗುರಿಯನ್ನುತಲುಪಲು ನ್ಯಾಯಾಂಗ ಇಲಾಖೆ ಶ್ರಮಿಸುತ್ತಿದೆ ಎಂದುಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾ.ನೂರುನ್ನಿಸಾ ತಿಳಿಸಿದ್ದಾರೆ. ನಗರದ ಸಪ್ತಗಿರಿ ಬಡಾವಣೆಯಗಾರೆನರಸಯ್ಯಕಟ್ಟೆ ಸಮೀಪ ಮಹಾನಗರಪಾಲಿಕೆವತಿಯಿಂದ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದಗಿಡ ನೆಡುವಕಾರ್ಯಕ್ರಮಕ್ಕೆ ಪರಿಸರ ದಿನಾಚರಣೆಯ ಪ್ರತಿಜ್ಞಾವಧಿ ಭೋಧಿಸಿ, ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದಅವರು, ಜೂನ್ ೦೫ ರಿಂದಲೇ ಈ ಗುರಿತಲುಪಲುಕಾರ್ಯೋನ್ಮುಖವಾಗಿದ್ದೇವೆಎಂದರು. ಅಭಿವೃದ್ದಿ ಹೆಸರಿನಲ್ಲಿಕಾಂಕ್ರಿಟ್ ಕಾಡುಗಳು ನಿರ್ಮಾಣವಾಗಿ, ಹಸಿರು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಪರಿಸರದ ಮೇಲೆ ಸಾಕಷ್ಟು ದುಷ್ಪರಿಣಾಮಗಳು ಉಂಟಾಗುತ್ತಿರುವುದನ್ನುಕಾಣಬಹುದು.ಇದರಿAದ ಮುಕ್ತಿ ಹೊಂದಲುಇರುವ ಏಕೈಕ ಮಾರ್ಗವೆಂದರೆ ಗಿಡ,ಮರಗಳನ್ನು ನೆಟ್ಟು ಸಂರಕ್ಷಿಸುವುದು.ಹಾಗಾಗಿ ಅನಿವಾರ್ಯವಾಗಿಒಂದು ಮರಕಡಿದರೆ,ಅದಕ್ಕೆ ಬದಲಾಗಿ ಮತ್ತೊಂದುಗಿಡವನ್ನು ನೆಟ್ಟು ಮರವಾಗಿ ಬೆಳೆಸುವ ಗುರುತರಜವಾಬ್ದಾರಿ ನಮ್ಮೆಲ್ಲರ ಮೇಲಿದೆ.ಒಂದುಗಿಡ ಮರವಾಗಲು ಹತ್ತಾರು ವರ್ಷಗಳು ಬೇಕು.ಇದನ್ನು ನಾವೆಲ್ಲರೂ ಮನಗಾಣಬೇಕಿದೆ. ಈ ವರ್ಷದ ಪರಿಸರ ದಿನಾಚರಣೆಯ ಮುಖ್ಯಉದ್ದೇಶ ಪ್ಲಾಸ್ಟಿಕ್ ಮುಕ್ತ ಪರಿಸರ.ಪ್ಲಾಸ್ಟಿಕ್…

Read More

ತುರುವೇಕೆರೆ: ಪಟ್ಟಣಕ್ಕೆ ರೈಲ್ವೆ ಯೋಜನೆ ತರುವಂತಹ ಪ್ರಯತ್ನ ಮಾಡುವುದಾಗಿ ಕೇಂದ್ರ ಸರ್ಕಾರದ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು. ಪಟ್ಟಣದ ಚೌದ್ರಿ ಕನ್ವೆಂಷನ್ ಆವರಣದಲ್ಲಿ ಜೆಡಿಎಸ್ ಮುಖಂಡರು, ಅಭಿಮಾನಿಗಳು ಹಾಗೂ ಕಾರ್ಯಕರ್ತರು ಹಮ್ಮಿಕೊಂಡಿದ್ದ ಶಾಸಕ ಎಂ.ಟಿ.ಕೃಷ್ಣಪ್ಪ ೭೫ ನೇ ವರ್ಷದ ಹುಟ್ಟು ಹಬ್ಬ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ ಹಾಗೂ ಉಚಿತ ದಂತ ಚಿಕಿತ್ಸ ಸೌಲಬ್ಯ ಕಾರ್ಯಕ್ರದಲ್ಲಿ ಭಾಗವಹಿಸಿ ಶಾಸಕ ಎಂ.ಟಿ.ಕೃಷ್ಣಪ್ಪರಿಗೆ ಸನ್ಮಾನಿಸಿ ಅಭಿನಂದಿಸಿ ಮಾತನಾಡಿದ ಅವರು ಲೋಕಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳನ್ನು ನೀಡಿದ ತಾಲೂಕಿನ ಜನತೆಯ ಋಣ ತಿರಿಸಬೇಕು. ಅದರಿಂದ ಪಟ್ಟಣಕ್ಕೆ ರೈಲ್ವೆ ಯೋಜನೆ ತರಲು ಚಂತಿಸಿದ್ದೇನೆ ರೈತರು ಭೂಮಿ ನೀಡಿ ಸಹಕರಿಸಬೇಕು ಎಂದು ಮನವಿ ಮಾಡಿದರು. ಮಂತ್ರಿ ಭಾಗ್ಯ ಸಿಗಲಿ: ಎಂ.ಟಿ.ಕೃಷ್ಣಪ್ಪ ಬಡವರ ದೀನ ದಲಿತರ, ರೈತರ ಪರವಾಗಿ ಸದಾ ಹೋರಾಟ ಮಾಡುತ್ತಾ ಚಟುವಟಿಕೆಗಳಿಂದ ಇರುವ ನೇರ ನುಢಿಗಾರರು, ಜನಪರವಾದ ಕಾಳಜಿ ಹೊಂದಿದ್ದು ಸುಮಾರು ವರ್ಷಗಳಿಂದ ನನಗೆ ಸ್ನೇಹಿತರು. ಅವರಿಗೆ ೭೫…

Read More

ತುಮಕೂರು: ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಜೂನ್ ೧೧ ರಿಂದ ೧೪ರವರೆಗೆ ಜಿಲ್ಲೆಯಲ್ಲಿ    ಭಾರಿ ಪ್ರಮಾಣದ ಗುಡುಗು-ಸಿಡಿಲು ಸಹಿತ ಗಾಳಿ-ಮಳೆಯಾಗುವ ಸಾಧ್ಯತೆ ಇರುವುದರಿಂದ ಆರೆಂಜ್ ಮತ್ತು ಯಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಪ್ರತಿಕೂಲ ಹವಾಮಾನ ಸಮಯದಲ್ಲಿ ಹೆಚ್ಚಿನ ಮುಂಜಾಗ್ರತೆವಹಿಸಬೇಕು  ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಶುಭ ಕಲ್ಯಾಣ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಸಿಡಿಲು ಸಹಿತ ಮಳೆಯಾಗುವುದರಿಂದ ಸಿಡಿಲು ಬಡಿಯುವ ಪ್ರದೇಶದ ಬಗ್ಗೆ ರಾಜ್ಯದಿಂದ ಮುಂಚಿತವಾಗಿ ಸಾರ್ವಜನಿಕರಿಗೆ ಎಸ್‌ಎಂಎಸ್ ಅಲರ್ಟ್ ರವಾನಿಸಲಾಗುವುದು. ತುರ್ತಾಗಿ ಸುರಕ್ಷಿತವಾದ ತಗ್ಗು ಪ್ರದೇಶಕ್ಕೆ ತೆರಳಬೇಕು. ಕೃಷಿ ಕೆಲಸ, ಜಾನುವಾರು ಮೇಯಿಸಲು ಹೋಗಬಾರದು. ಲೋಹದ ತಗಡು ಮನೆಗಳು, ಮರ, ವಿದ್ಯುತ್ ಉಪಕರಣ/ಸರಬರಾಜು, ಮಾರ್ಗ/ಕಂಬ, ದೂರವಾಣಿ ಸಂಪರ್ಕ, ಮೊಬೈಲ್ ಟವರ್, ಜಲಕಾಯಗಳು ಸೇರಿದಂತೆ ಇತರೆ ಪ್ರತ್ಯೇಕ ವಸ್ತುಗಳಿಂದ ದೂರವಿರಬೇಕು. ಕಬ್ಬಿಣದ ಸರಳುಗಳ ಛತ್ರಿ/ಮೊಬೈಲ್ ಫೋನ್ ಬಳಸಬಾರದು. ಮಿಂಚು ಒಬ್ಬರಿಂದ ಒಬ್ಬರಿಗೆ ಸಂಚರಿಸದAತೆ, ಜನ ಸಂದಣಿಯಾಗದAತೆ ಅಂತರ ಕಾಪಾಡಬೇಕು.  ತುರ್ತು ಚಿಕಿತ್ಸೆಗೆ ಹತ್ತಿರದ ಆರೋಗ್ಯ ಕೇಂದ್ರಗಳ ಮಾಹಿತಿಯನ್ನು…

Read More

ವಿವಿ ಕಲಾ ಕಾಲೇಜಿನ ವೃತ್ತಿಮಾರ್ಗದರ್ಶನ ಮತ್ತು ನೇಮಕಾತಿ ಘಟಕವು ಹಮ್ಮಿಕೊಂಡಿದ್ದ ಯುಪಿಎಸ್‌ಸಿ ಪರೀಕ್ಷೆಗಳ ಕುರಿತ ಮಾರ್ಗದರ್ಶನ ಕಾರ್ಯಕ್ರಮವನ್ನು ಪ್ರಾಂಶುಪಾಲೆ ಡಾ. ಜಿ. ದಾಕ್ಷಾಯಿಣಿ ಉದ್ಘಾಟಿಸಿ ಮಾತನಾಡಿದರು. ತುಮಕೂರು: ದೃಢನಿರ್ಧಾರ ಮತ್ತು ಕಠಿಣ ಪರಿಶ್ರಮದಿಂದ ಮಾತ್ರ ಐಎಎಸ್ ನಂತಹ ಸಂಕೀರ್ಣ ಪರೀಕ್ಷೆಗಳಲ್ಲಿ ತೇರ್ಗಡೆಯಾಗಬಹುದು. ಈ ಪ್ರಕ್ರಿಯೆಯಲ್ಲಿ ಯಾವುದೇ ಸಣ್ಣಪುಟ್ಟ ಆಕರ್ಷಣೆಗಳಿಗೆ ಒಳಗಾಗಿ ದಾರಿತಪ್ಪಬಾರದು ಎಂದು ಬೆಂಗಳೂರಿನ ಇನ್‌ಸೈಟ್ಸ್ ಅಕಾಡೆಮಿ ಸಂಸ್ಥಾಪಕ ವಿನಯ್ ಕುಮಾರ್ ಜಿ.ಬಿ. ತಿಳಿಸಿದರು. ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ವೃತ್ತಿಮಾರ್ಗದರ್ಶನ ಮತ್ತು ನೇಮಕಾತಿ ಘಟಕವು ಮಂಗಳವಾರ ಹಮ್ಮಿಕೊಂಡಿದ್ದ ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆಗಳ ಕುರಿತ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು. ಅನೇಕ ಗ್ರಾಮೀಣ ಯುವಕರು ಬಡತನದಲ್ಲೇ ಹುಟ್ಟಿರುತ್ತಾರೆ. ಆದರೆ ಬಡತನದಲ್ಲೇ ಜೀವನ ಕಳೆಯಬೇಕಾಗಿಲ್ಲ. ಅವರು ಐಎಎಸ್‌ನಂತಹ ಉನ್ನತ ಕನಸುಗಳನ್ನು ಕಟ್ಟಿಕೊಂಡು ನನಸಾಗಿಸಲು ದೃಢನಿರ್ಧಾರ ಮಾಡಬೇಕು. ಅಭಿವೃದ್ಧಿಶೀಲ ದೇಶ ಅಭಿವೃದ್ಧಿ ಹೊಂದಿದ ದೇಶವಾಗಿ ಬದಲಾಗಬೇಕಾದರೆ ಅವರ ಕೊಡುಗೆ ಮುಖ್ಯ ಎಂದರು. ಯುಪಿಎಸ್‌ಸಿ ಪರೀಕ್ಷೆಗಳಿಗೆ ತರಬೇತಿ ಪಡೆಯಲು ಹಿಂದೆ ಯುವಕರು ದೆಹಲಿಯಂತಹ ದೂರದ ಪ್ರದೇಶಗಳಿಗೆ…

Read More

ತುಮಕೂರು: ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೂಲ ಉದ್ದೇಶ ಕ್ಷೇತ್ರದ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿಸುವುದರಲ್ಲಿ ರಾತ್ರಿ ಹಗಲಲೆನ್ನದೆ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಶಾಸಕ ಬಿ.ಸುರೇಶ್ ಗೌಡ ತಿಳಿಸಿದರು. ಲೋಕೋಪಯೋಗಿ ಇಲಾಖೆ ಮತ್ತು ಗ್ರಾಮೀಣ ಕುಡಿಯುವ ನೀರಿನ ಇಲಾಖೆಯಿಂದ ಇಂದು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕೈದಾಳ, ಬೈರಸಂದ್ರ ಹಾಗೂ ಗೊಲ್ಲರಹಟ್ಟಿ ಚೋಳoಬಳ್ಳಿ ಗ್ರಾಮಗಳಲ್ಲಿ ಮತ್ತು ಸಿಮೆಂಟ್ ರಸ್ತೆ ಚರಂಡಿ ಹಾಗೂ ಕುಡಿಯುವ ನೀರಿನ ಯೋಜನೆಯ ೫.೦೦ ಕೋಟಿ ರೂ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಬಿ ಸುರೇಶ್ ಗೌಡ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಗೂಳೂರು ಗ್ರಾಮದಿಂದ ಇತಿಹಾಸ ಪ್ರಸಿದ್ಧ ಚೆನ್ನಕೇಶವನ ನೆಲೆ ಕೈದಾಳ ಗ್ರಾಮದವರೆಗೆ ಸುಸಜ್ಜಿತ ಸಿಮೆಂಟ್ ರಸ್ತೆ ನಿರ್ಮಾಣಕ್ಕಾಗಿ ಎರಡು ಕೋಟಿ ಐವತ್ತು, ಲಕ್ಷ ರೂಪಾಯಿಗಳ ಅನುದಾನವನ್ನು ನೀಡಿದ್ದೇನೆ. ಈ ರಸ್ತೆಯು ಐವತ್ತು ವರ್ಷಗಳಾದರೂ ಕೂಡ ಹಾಳಾಗಬಾರದು ಆ ರೀತಿಯಲ್ಲಿ ಸುಸಜ್ಜಿತವಾಗಿ ಉತ್ತಮ ಗುಣಮಟ್ಟದಿಂದ ಕಾಮಗಾರಿ ಅನುಷ್ಠಾನ ಮಾಡುವಂತೆ ಗುತ್ತಿಗೆದಾರನಿಗೆ ಮತ್ತು…

Read More

ಹುಳಿಯಾರು: ಗಣಿ ದಂಡದ ಮನೆ ನೀಡುವ  ಗುರಿಯನ್ನು ಹೆಚ್ಚಿಸಲು ಒತ್ತಾಯಿಸಿ ಧರಣಿ ಕುಳಿತ ಘಟನೆ ಹುಳಿಯಾರು ಹೋಬಳಿಯ ಗಾಣದಾಳು ಗ್ರಾಮ ಪಂಚಾಯ್ತಿಯ ಗುರುವಾಪುರ ಗ್ರಾಮದಲ್ಲಿ ನಡೆದಿದೆ. ಗುರುವಾಪುರದಲ್ಲಿ ಮೇ ೨೬ ರಂದು ಗಾಣಿಬಾಧಿತ ಪ್ರದೇಶ ಮನೆಗಳ ಫಲಾನುಭವಿಗಳ ಆಯ್ಕೆಗೆ ವಾರ್ಡ್ ಸಭೆ ನಿಗದಿಪಡಿಸಲಾಗಿತ್ತು. ಆದರೆ ಸಭೆಯಲ್ಲಿ ಗಲಾಟೆಯಾದ ಪರಿಣಾಮ ಸೋಮವಾರ ಮತ್ತೆ ಅಧ್ಯಕ್ಷ ಬಾಪು ಗಿರೀಶ್, ನೋಡಲ್ ಅಧಿಕಾರಿ ಪಶು ವೈದ್ಯಕೀಯ ಇಲಾಖೆ ನಿರ್ದೇಶಕ ರೆ.ಮಾ. ನಾಗಭೂಷಣ್, ಪಿಡಿಒ ಕೋಕಿಲಾ, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಜಿ.ಎಸ್.ಶ್ರೀನಿವಾಸ್ ಸೇರಿದಂತೆ ಗ್ರಾಮಸ್ಥರ ಉಪಸ್ಥಿತಿಯಲ್ಲಿ ಸಭೆ ಏರ್ಪಡಿಸಿದ್ದರು. ಸಭೆಯಲ್ಲಿ ಕರ್ನಾಟಕ ಗಣಿ ಪರಿಸರ ಪುನಶ್ವೇತನ ನಿಧಿಯಿಂದ ಗಾಣಧಾಳು ಗ್ರಾಮ ಪಂಚಾಯಿತಿಗೆ ೫೩ ಮನೆಗಳನ್ನು ಮಂಜೂರಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಇದಕ್ಕೆ ಪ್ರತಿಯಾಗಿ ಗುರುವಾರಪುರ ಮತ್ತು ಸೋಮನಹಳ್ಳಿ ಗ್ರಾಮಗಳು ಗಣಿಪ್ರದೇಶದ ಸಮೀಪವಿರುವದರಿಂದ ೨೫ ಮನೆಗಳನ್ನು ನೀಡುವಂತೆ ಒತ್ತಾಯಿಸಿದರು. ನಿಯಮ ಮೀರಿ ಆಯ್ಕೆ ಮಾಡಲು ಸಾಧ್ಯವಿಲ್ಲ ಎಂದು ನೋಡೆಲ್ ಅಧಿಕಾರಿ ತಿಳಿಸಿದರು. ಸ್ಥಳಕ್ಕೆ ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕರು…

Read More

ಕೊರಟಗೆರೆ: ರಾಜ್ಯದ ಸರ್ವೋತೋಮುಖ ಅಭಿವೃದ್ಧಿಗೆ ಪರಮೇಶ್ವರ್‌ರಂತಹ ಸಜ್ಜನ ರಾಜಕಾರಣಿ ಅವಶ್ಯಕತೆಯಿದೆ. ಮುಂಬರುವ ದಿನಗಳಲ್ಲಿ ತುಮಕೂರು ಜಿಲ್ಲೆಯಿಂದ ಗೃಹಮಂತ್ರಿ ಡಾ.ಜಿ ಪರಮೇಶ್ವರ್‌ರವರು ರಾಜ್ಯದ ಮುಖ್ಯಮಂತ್ರಿಯಾಗಲಿ ಎಂಬುದು ನನ್ನ ಬಯಕೆ ಎಂದು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಹನುಮಂತನಾಥ ಸ್ವಾಮೀಜಿ ಕುತೂಹಲ ಹೇಳಿಕೆ ನೀಡಿದರು. ಕೊರಟಗೆರೆ ತಾಲ್ಲೂಕಿನ ಎಲೆರಾಂಪುರ ಶ್ರೀಮಠದಲ್ಲಿ ಆಯೋಜಿಸಿದ ಪರಮಪೂಜ್ಯ ಡಾ.ಶ್ರೀಹನುಮಂತನಾಥ ಸ್ವಾಮೀಜಿ ಅವರ ೪೩ನೇ ಜನ್ಮ ವರ್ಧಂತಿಯ ಕಾರ್ಯಕ್ರಮದಲ್ಲಿ ಗೃಹ ಸಚಿವರಿಂದ ಗೌರವ ಸ್ವೀಕರಿಸಿ ಮಾತನಾಡಿ, ಶ್ರೀಮಠ ಸ್ಥಾಪನೆಯಾಗಿ ೧೪ವರ್ಷಗಳು ಕಳೆದಿದೆ. ಅಂದಿನಿAದಲೂ ಸಂಸ್ಕಾರ ಶಿಬಿರ, ಆರೋಗ್ಯ ಶಿಬಿರ, ರಕ್ತದಾನ ಶಿಬಿರ ಈಗೇ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ ಎಂದು ಹೇಳಿದರು. ಜಾತಿ ಮತವೆನ್ನದೆ ಬಡಕುಟುಂಬದ ಎಲ್ಲಾ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರೀಮಠ ಸಿದ್ದವಾಗಿದೆ. ಸಂಪೂರ್ಣವಾಗಿ ಮುಂದಿನ ದಿನಗಳಲ್ಲಿ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕಾರ್ಯಕ್ರಮಗಳ ಪೂರೈಕೆಗೆ ಚಿಂತನೆಯನ್ನು ನಡೆಸಿದ್ದು, ರಾಜ್ಯದಲ್ಲಿ ಮಠ ಮಾನ್ಯಗಳು ಮನಸ್ಸುಗಳನ್ನು ಕಟ್ಟುವಂತಹ ಕೆಲಸ ಮಾಡುತ್ತಿದೆ. ಸಿದ್ದರಬೆಟ್ಟ ಶ್ರೀಗಳು ಮತ್ತು ಗೃಹ ಸಚಿವರು, ಭಕ್ತ ಸಮೂಹ…

Read More