ತುಮಕೂರು: ದಿ:೦೧/೦೨/೨೦೨೫ ರಂದು ಸಂಜೆ ೦೬-೧೫ ಗಂಟೆಗೆ ಪಿರ್ಯಾದಿ ಬಸವರಾಜ ಪೂಜಾರಿರವರು ಠಾಣೆಗೆ ಹಾಜರಾಗಿ, ಪಾವಗಡ ತಾ ತಿರುಮಣಿ ಪೊಲೀಸ್ ಠಾಣಾ ವ್ಯಾಪ್ತಿಯ ವಳ್ಳೂರು ಗ್ರಾಮದ ಅವಧಾ ಸೋಲಾರ್ ಪ್ಲಾಂಟ್‌ನಲ್ಲಿ ದಿ:೨೦/೦೧/೨೦೨೫ ರಂದು ರಾತ್ರಿ ೧೦-೦೦ ಗಂಟೆಯಿAದ ದಿನಾಂಕ:೨೧/೦೧/೨೦೨೫ ರಂದು ಸುಮಾರು ಬೆಳಗ್ಗೆ ೦೭-೦೦ ನಡುವಿನ ಸಮಯದಲ್ಲಿ ಯಾರೋ ಕಳ್ಳರು ಸೋಲಾರ್ ಪ್ಯಾನಲ್‌ಗೆ ಆಳವಡಿಸಿದ್ದ ಸುಮಾರು ೨,೫೦೦ ಮೀಟರ್ ಡಿ.ಸಿ ಕೇಬಲ್ ವೈರ್ (ಇವುಗಳ ಅಂದಾಜು ಮೌಲ್ಯ ೧.೩೦,೦೦೦/- ರೂಗಳು) ಅನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ತಿರುಮಣಿ ಪೊಲೀಸ್ ಠಾಣೆಯಲ್ಲಿ ಮೊ.ನಂ:೦೭/೨೦೨೫, ಕಲಂ:೩೦೩(೨) ಬಿ.ಎನ್.ಎಸ್ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ. ದಿ:೧೭-೦೫-೨೦೨೫ ರಂದು ಈ ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿಗಳಾದ ೧) ಮಲ್ಲೇಶ್ @ ಮಲ್ಲಿಕಾರ್ಜುನ ಕೋಯಪ್ಪ ಬಿನ್ ಸುಂಕಪ್ಪ, ೨೮ ವರ್ಷ, ಈಚಲು ಪೊರಕೆ ವ್ಯಾಪಾರ, ಆಫ್ ಬಂಡೆ. ಪಾವಗಡ ಟೌನ್. ೨) ಬಾಬು @ ಬಾಬುರಾವ್ ಬಿನ್…
Author: News Desk Benkiyabale
ತುಮಕೂರು: ಸಸ್ಯಗಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ೧೭ ಪೋಷಕಾಂಶಗಳ ಅಗತ್ಯವಿರುತ್ತದೆ. ಇವುಗಳಲ್ಲಿ ಸ್ವಾಭಾವಿಕವಾಗಿ ದೊರೆಯುವ ಇಂಗಾಲ, ಜಲಜನಕ ಮತ್ತು ಆಮ್ಲಜನಕವು ಗಾಳಿ ಮತ್ತು ನೀರಿನ ಮೂಲಕ ಸಸ್ಯಗಳಿಗೆ ಲಭ್ಯವಾಗುತ್ತದೆ. ಸಸ್ಯಗಳಿಗೆ ಪ್ರಧಾನ ಪೋಷಕಾಂಶಗಳಾದ ಸಾರಜನಕ, ರಂಜಕ, ಪೋಟ್ಯಾಷ್ ಹೆಚ್ಚಿನ ಪ್ರಮಾಣದಲ್ಲಿ ಹಾಗೂ ಲಘು ಪೋಷಕಾಂಶಗಳಾದ ಕಾಲ್ಸಿಯಂ, ಮೆಗ್ನಿಷಿಯಂ, ಗಂಧಕ, ಕಬ್ಬಿಣ, ಜಿಂಕ್, ಬೋರಾನ್, ತಾಮ್ರ, ಮ್ಯಾಂಗನೀಸ್, ಮಾಲಿಬಿನಂ, ಕ್ಲೋರಿನ್ ಮತ್ತು ನಿಕಲ್ ಕಡಿಮೆ ಪ್ರಮಾಣದಲ್ಲಿ ಅಗತ್ಯವಿರುತ್ತದೆ. ಇವುಗಳಲ್ಲಿ ಯಾವುದೇ ಒಂದು ಪೋಷಕಾಂಶದ ಕೊರತೆಯಾದರೂ ಸಸ್ಯಗಳ ಬೆಳವಣಿಗೆ ಮತ್ತು ಅಭಿವೃದ್ಧಿಯ ಮೇಲೆ ಪರಿಣಾಮ ಬೀರಿ ಇಳುವರಿ ಕುಂಠಿತವಾಗಿರುತ್ತದೆ. ಪ್ರಧಾನ ಪೋಷಕಾಂಶಗಳು ಮತ್ತು ಲಘು ಪೋಷಕಾಂಶಗಳಿಗೆ ಭೂಮಿಯೇ ಮುಖ್ಯ ಆಧಾರ, ಮಣ್ಣಿನಿಂದ ಎಲ್ಲಾ ಪೋಷಕಾಂಶಗಳು ಬೇಕಾದ ಪ್ರಮಾಣದಲ್ಲಿ ಬೆಳೆಗಳಿಗೆ ದೊರೆಯುವುದಿಲ್ಲವಾದ್ದರಿಂದ ಬಾಹ್ಯವಾಗಿ ನೀಡುವುದು ಅನಿವರ‍್ಯ. ಬೆಳೆಗಳಿಗೆ ಬೇಕಾಗುವ ಈ ಬಾಹ್ಯ ಪೋಷಕಾಂಶಗಳನ್ನು ಸಾವಯವ (ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ, ಹಿಂಡಿ ಇತ್ಯಾದಿ) ಮತ್ತು ರಸಗೊಬ್ಬರಗಳಿಂದ ಒದಗಿಸಬೇಕು. ರಸಗೊಬ್ಬರಗಳಲ್ಲಿ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ಮತ್ತು ನೇರವಾಗಿ…
ತುಮಕೂರು: ಕಲ್ಪತರುನಾಡು ತುಮಕೂರು ಜಿಲ್ಲೆಯಲ್ಲಿ ಕಳೆದ ೨ ದಿನಗಳಿಂದ ವರುಣನ ಆರ್ಭಟ ಜೋರಾಗಿದ್ದು, ಮುಂಜಾನೆಯಿAದಲೇ ಬಿಟ್ಟು ಬಿಡದೆ ಸುರಿದ ಮಳೆಯಿಂದಾಗಿ ಜನ ಹೈರಾಣಾಗಿದ್ದಾರೆ. ಕಳೆದ ೨ ದಿನಗಳಲ್ಲಿ ತುಮಕೂರು ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ವರುಣ ಅಬ್ಬರಿಸಿದ್ದು, ತಗ್ಗುಪ್ರದೇಶಗಳು, ಕೆಲ ಬಡಾವಣೆಗಳ ರಸ್ತೆಗಳು, ತೋಟಗಳು ಜಲಾವೃತಗೊಂಡಿವೆ. ಇAದು ಮುಂಜಾನೆಯಿAದಲೇ ಸಾಧಾರಣ ಮಳೆಯಾಗಿದ್ದು, ದಿನನಿತ್ಯದ ಕೆಲಸ ಕಾರ್ಯಗಳಿಗೆ ತೆರಳುವ ಸರ್ಕಾರಿ ನೌಕರರು, ಕೂಲಿ ಕಾರ್ಮಿಕರು, ಕಾಲೇಜು ವಿದ್ಯಾರ್ಥಿಗಳು ತೆರಳಲು ಪರದಾಡುವಂತಾಯಿತು. ಮುAಜಾನೆಯಿAದ ಆರಂಭವಾದ ಮಳೆ ಬೆಳಿಗ್ಗೆ ೯.೩೦ ಗಂಟೆಯಾದರೂ ಸುರಿದಿದ್ದರಿಂದ ಮಳೆಯಲ್ಲೇ ಸರ್ಕಾರಿ ನೌಕರರು, ಕಾಲೇಜು ವಿದ್ಯಾರ್ಥಿಗಳು ಜರ್ಕಿನ್ ಧರಿಸಿ ಛತ್ರಿಗಳನ್ನು ಹಿಡಿದು ತೆರಳುತ್ತಿದ್ದ ದೃಶ್ಯಗಳು ಕಂಡು ಬಂದವು. ನಗರದ ದಿಬ್ಬೂರಿಗೆ ಸಂಪರ್ಕ ಹೊಂದಿರುವ ಗಾರ್ಡನ್ ರಸ್ತೆಯಲ್ಲಿ ಮ್ಯಾನ್ ಹೋಲ್ ತುಂಬಿ ಕೊಳಚೆ ನೀರು ಮಳೆ ನೀರಿನೊಂದಿಗೆ ರಸ್ತೆಯಲ್ಲಿ ಹರಿಯುತ್ತಿರುವುದರಿಂದ ಈ ಭಾಗದಲ್ಲಿ ಸಂಚರಿಸುವ ಪಾದಚಾರಿಗಳು, ವಾಹನ ಸವಾರರು ತೀವ್ರ ಪ್ರಯಾಸ ಪಡುವಂತಾಗಿದೆ. ಮಳೆ ನೀರಿದೊಂದಿಗೆ ಕೊಳಚೆ ನೀರು ಮಿಶ್ರಣಗೊಂಡಿರುವುದರಿAದ ಈ ರಸ್ತೆಯಲ್ಲಿ…
ತುಮಕೂರು: ಸಂಗೀತ, ನೃತ್ಯ, ನಾಟಕಗಳಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಮನುಷ್ಯನ ಮನಸ್ಸು, ಕೆಟ್ಟ ವಿಚಾರಗಳತ್ತ ಹೊರಳದಂತೆ ತಡೆಯುತ್ತವೆ. ಇಂತಹ ಅಭ್ಯಾಸಗಳಿಂದ ಯುವಜನರು ದುಶ್ಚಟಗಳ ದಾಸರಾಗುವುದು ತಪ್ಪುತ್ತದೆ ಎಂದು ಕರ್ನಾಟಕ ಕೌಶಲ್ಯಾಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದ್ದಾರೆ. ನಗರದ ಕನ್ನಡ ಭವನದಲ್ಲಿ ಕಲಾಕಾರ್ ಇವೆಂಟ್ಸ್ ಅವರ ಆಯೋಜಿಸಿದ್ದ ರಾಜ್ಯಮಟ್ಟದ ಸ್ವರ ಶೃಂಗಾರ ಕರೋಕೆ ಗೀತಗಾಯನ ಮತ್ತು ಸ್ವರ ಶೃಂಗಾರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸ್ವರ ಶೃಂಗಾರ ಸಂಸ್ಥೆಯ ಲಾಂಛನ ಬಿಡುಗಡೆ ಮಾಡಿ ಮಾತನಾಡುತಿದ್ದ ಅವರು,ಮಾದಕ ವ್ಯಸನಗಳಿಗೆ ಬಲಿಯಾಗಿ ಯುವಜನರು ತಮ್ಮ ಜೀವನವನ್ನೇ ಕಳೆದುಕೊಳ್ಳುತ್ತಿದ್ದಾರೆ.ಶಾಲಾ, ಕಾಲೇಜುಗಳ ಯುವಜನರು ಸಂಗೀತ, ಸಾಹಿತ್ಯದಂತಹ ಸಾಂಸ್ಕೃತಿಕ ಕಲೆಗಳನ್ನು ತಮ್ಮಲ್ಲಿ ರೂಢಿಸಿಕೊಂಡರೆ ವ್ಯಸನ ಮುಕ್ತ ಜೀವನ ನಡೆಸಲು ದಾರಿಯಾಗುತ್ತದೆ. ಹಾಗಾಗಿ ಕಲಾಕಾರ್ ಈವೆಂಟ್ಸ್ ಇಂತಹ ಕಾರ್ಯಕ್ರಮಗಳನ್ನು ಹದಿಹರೆಯದ ಯುವಜನರು ಕಲಿಯುವ ಕಾಲೇಜುಗಳಲ್ಲಿ ಏರ್ಪಡಿಸಿ, ಅವರಲ್ಲಿರುವ ಪ್ರತಿಭೆಗೆ ಸಾಣೆ ಹಿಡಿಯುವ ಕೆಲಸ ಮಾಡಿದರೆ, ಹೊಸ ಪ್ರತಿಭೆಗಳ ಉದಯದ ಜೊತೆಗೆ, ಸಾಮಾಜಿಕ ಸಮಸ್ಯೆಯಾಗಿರುವ ದುಶ್ಚಟಗಳಿಂದ ದೂರ ಇಡಲು…
ತುರುವೇಕೆರೆ: ಕಾಶ್ಮೀರದಲ್ಲಿನ ಪ್ರವಾಸಿಗರ ಮೇಲೆ ದಾಳಿ ನಡೆಸಿದ ಉಗ್ರರು ಮತ್ತು ಅವರಿಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ಮೇಲೆ ಭಾರತ ಸಿಂಧೂರ್ ಆಫರೇಷ್ ನಡೆಸಿ ಯಶಸ್ವಿಯಾಗಿವ ಕಾರಣ ಇದರ ಕ್ರೆಡಿಟ್ ಅನ್ನು ಪ್ರಧಾನಿಯವರಿಗೆ ನೀಡದೆ ಸೈನಿಕರಿಗೆ ನೀಡಬೇಕು ಎನ್ನುವ ಮುಖ್ಯ ಮಂತ್ರಿಗಳ ನಿಲುವು ಖಂಡನೀಯ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸಂಜೆ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಯುದ್ದದ ಮೂಲಕ ಭಾರತ ಪಾಕಿಸ್ತಾನದ ತಪ್ಪನ್ನು ಮನವರಿಕೆ ಮಾಡಿಕೊಟ್ಟಿದೆ. ಜೊತೆಗೆ ಪಾಕಿಸ್ತಾನದ ಪ್ರಧಾನಿಯವರು ಯುದ್ದವನ್ನು ನಿಲ್ಲಿಸುವಂತೆ ಭಾರತಕ್ಕೆ ಮನವಿ ಮಾಡಿದ ಕಾರಣ ಪ್ರಧಾನಿ ನೇಂದ್ರ ಮೋದಿಯವರು ತಾತ್ಕಾಲಿಕವಾಗಿ ಕದನ ವಿರಾಮ ಘೋಷಣೆ ಮಾಡಿದ್ದರೂ ಸಹ ಸಂಪೂರ್ಣವಾಗಿ ಯುದ್ದ ನಿಂತಿಲ್ಲ. ಭಾರತೀಯ ಸೈನಿಕರು ಉಗ್ರರನ್ನು ಹುಡುಕಿ ಸದೆಬಡಿದಿದ್ದಾರೆ. ಆದರೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಿಂಧೂರ್ ಆಫರೇಷ್ ಗೆಲುವಿನ ಕ್ರೆಡಿಟ್ ಅನ್ನು ಯಾರಿಗೂ ನೀಡದೆ ಹೋರಾಡಿದ ಸೈನಿಕರಿಗೆ ನೀಡಬೇಕು ಎನ್ನುತ್ತಾರೆ ಇದನ್ನೂ ಒಪ್ಪೊಣ. ಆದರೆ ಶತ್ರುಗಳೊಂದಿಗೆ ಯುದ್ದ ನಡೆಸುವ…
ತುಮಕೂರು: ಮಾಧ್ಯಮರಂಗ ಇಂದು ಬಹಳ ವಿಸ್ತಾರವಾಗಿ ಹರಡಿಕೊಂಡಿದೆ. ಇದರಲ್ಲಿರುವ ವಿಫುಲ ಅವಕಾಶಗಳನ್ನು ಯುವಜನತೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಸಂತ ಟಿ. ಡಿ. ತಿಳಿಸಿದರು. ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಯೋಗದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಸೋಮವಾರ ಹಮ್ಮಿಕೊಂಡಿದ್ದ ಒಂದು ದಿನದ ಮಾಧ್ಯಮ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾಧ್ಯಮ ಕ್ಷೇತ್ರ ಇಂದು ಪತ್ರಿಕೆ, ಟಿವಿಗಳಿಗೆ ಸೀಮಿತವಾಗಿಲ್ಲ. ಡಿಜಿಟಲ್ ಯುಗ ನಮ್ಮನ್ನು ಆವರಿಸಿಕೊಂಡಿದೆ. ಯುವಜನರು ಮನಸ್ಸು ಮಾಡಿದರೆ ಸಮಾಜದಲ್ಲಿ ಬದಲಾವಣೆ ತರಲು ಮಾಧ್ಯಮರಂಗವನ್ನು ಬಳಸಿಕೊಳ್ಳಬಹುದು. ವಿದ್ಯಾರ್ಥಿಗಳು ಇಂತಹ ಕಾರ್ಯಾಗಾರಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಮಾಧ್ಯಮ ರಂಗದ ಉದ್ಯೋಗಾವಕಾಶಗಳ ಬಗ್ಗೆ ಮಾತನಾಡಿದ ತುಮಕೂರು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಯೋಜಕ ಡಾ. ಸಿಬಂತಿ ಪದ್ಮನಾಭ ಕೆ. ವಿ. ಮಾಧ್ಯಮರಂಗದಲ್ಲಿ ಉದ್ಯೋಗ ಪಡೆಯುವವರಿಗೆ ಜೀವನೋಪಾಯವಷ್ಟೇ ಮುಖ್ಯವಾಗುವುದಿಲ್ಲ. ಸಮಾಜದ ಬದಲಾವಣೆಯಲ್ಲಿ ಪಾತ್ರವಹಿಸಿದ ತೃಪ್ತಿ ಹಾಗೂ ಸಾಮಾಜಿಕ ಮನ್ನಣೆ ಕೂಡ…
ತುಮಕೂರು: ಜಿಲ್ಲಾಡಳಿತ ಹಾಗೂ ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ೭೫ ಲಕ್ಷ ರೂ. ವೆಚ್ಚದಲ್ಲಿ ತುಮಕೂರು ವಿಶ್ವವಿದ್ಯಾಲಯದ ಆವರಣದಲ್ಲಿರುವ ಟೆನಿಸ್ ಕೋರ್ಟ್ ಹಾಗೂ ಆಟಗಾರರ ಕೊಠಡಿಯ ನವೀಕರಣಗೊಳಿಸುವ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ತುಮಕೂರು ಬಹಳ ವೇಗವಾಗಿ ಬೆಳೆಯುತ್ತಿದೆ. ಇದರ ದೂರದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಸಚಿವ ಪರಮೇಶ್ವರ ಅವರು ಹೇಳಿದರು. ೨೦೦೩ರಲ್ಲಿ ಎಟಿಪಿ ರ‍್ಯಾಂಕ್ ಟೆನಿಸ್ ಟೂರ್ನಿಮೆಂಟ್ ನಡೆಸಬೇಕು ಎಂಬ ಮನವಿ ಬಂದಿತ್ತು. ಆಗ ಈ ಜಾಗವನ್ನು ಗುರುತಿಸಿ, ಎರಡು ತಿಂಗಳಲ್ಲಿ ಟೆನಿಸ್ ಮೈದಾನ ನಿರ್ಮಿಸಲಾಯಿತು. ಅಂದಿನ ಟೂರ್ನಮೆಂಟ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಭಾಗವಹಿಸಿದರು. ತದನಂತರ ಇದರ ನಿರ್ವಹಣೆಯ ಹೊಣೆಯನ್ನು ತುಮಕೂರು ಟೆನಿಸ್ ಅಸೋಸಿಯೇಷನ್‌ಗೆ ವಹಿಸಲಾಯಿತು. ಕೆಲವು ದಿನ ನಿರ್ವಹಣೆ ಮಾಡಿದರು. ಸಂಪನ್ಮೂಲ ಕೊರತೆಯಿಂದ ಮುಂದುವರೆಯಲಿಲ್ಲ. ನಾಲ್ಕೂ ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಉದ್ಘಾಟನೆಯ ಸಂದರ್ಭದಲ್ಲಿ ಟೂರ್ನಮೆಂಟ್ ಆಯೋಜಿಸಲಾಗುವುದು. ರಾಜ್ಯದ ಕ್ರೀಡಾಕೂಟ ತುಮಕೂರಿನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಬ್ಯಾಸ್ಕೆಟ್‌ಬಾಲ್,…
ತುಮಕೂರು: ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ನೂತನ ಸಭಾಂಗಣ ಕಟ್ಟಡದ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ತುಮಕೂರಿನ ಅಭಿವೃದ್ಧಿಯ ದೃಷ್ಟಿಯಿಂದ ಜಿಲ್ಲೆಯ ಆಡಳಿತದ ವೈಖರಿ ಮತ್ತಷ್ಟು ಸುಧಾರಣೆಯಾಗಬೇಕು. ಯಾವುದೇ ರೀತಿಯ ಆಪೇಕ್ಷೆ ಇಲ್ಲದೆ ಜನಸಮುದಾಯಕ್ಕೆ ಕೆಲಸಗಳು ಆಗಬೇಕು ಎಂದು ಸಚಿವರು ಹೇಳಿದರು. ಸಾಮಾನ್ಯ ಪ್ರಜೆ, ಬಡ ರೈತ ತಹಶೀಲ್ದಾರರ ಕಚೇರಿಗೆ ತೊಂದರೆ, ನೋವಿನಿಂದ ಬರುತ್ತಾನೆ. ಅಂತವರ ಕೆಲಸಗಳನ್ನು ಸುಲಭವಾಗಿ ಮಾಡಿಕೊಡಬೇಕು. ಆತ ನಗುವಿನಿಂದ ಹೋದರೆ ಅದೇ ಒಳ್ಳೆಯ ಆಡಳಿತ. ಒಂದು ದಾಖಲೆ ಪಡೆದುಕೊಳ್ಳಲು ಹತ್ತು ಬಾರಿ ಅಲೆಯಬಾರದು. ಈ ವಿಚಾರವನ್ನು ಅಧಿಕಾರಿಗಳು ಮನಸ್ಸಿನಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕು ಎಂದು ಸೂಚಿಸಿದರು. ಸರ್ಕಾರವು ಹಲವು ಜನಪರ ಯೋಜನೆಗಳನ್ನು ಜಾರಿಗೆ ತರುತ್ತದೆ. ಅನೇಕ ನೀತಿಗಳನ್ನು, ತೀರ್ಮಾನಗಳನ್ನು ಮಾಡುತ್ತೇವೆ. ಅವುಗಳು ಜನರಿಗೆ ತಲುಪುವ ನಿಟ್ಟಿನಲ್ಲಿಅನುಷ್ಟಾನಗೊಳಿಸುವ ಜವಾಬ್ಧಾರಿ ನಿಮ್ಮ ಮೇಲಿದೆ ಎಂದರು. ಬೇರೆ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗಳನ್ನು ಸುಂದರವಾಗಿ, ಕಾರ್ಯಾತ್ಮಕವಾಗಿ ಹಾಗೂ ಆಧುನಿಕ ಆಡಳಿತಕ್ಕೆ ತಕ್ಕಂತೆ ಕಟ್ಟಿಸಿದ್ದಾರೆ.…
ತುಮಕೂರು: ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಗವಲ್ಲಿ ಗ್ರಾಮದ ಕೆರೆ ಕೋಡಿಯ ಅಂಚಿನಲ್ಲಿ ವಾಸವಿದ್ದ ಸುಡುಗಾಡು ಸಿದ್ದ ಸಮುದಾಯದ ೧೯ ಕುಟುಂಬಗಳನ್ನು ಬಳ್ಳಗೆರೆ ಗ್ರಾಮ ಪಂಚಾಯಿತಿ ಹನುಮಂತನಗರಕ್ಕೆ ಸ್ಥಳಾಂತರಿಸಲಾಗಿದ್ದು ಈ ಕೂಡಲೇ ಅವರಿಗೆ ನಿವೇಶನದ ಹಕ್ಕುಪತ್ರ ವಿತರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಳೆಗೆರೆ ಗ್ರಾಮ ಪಂಚಾಯಿತಿ ಹನುಮಂತನಗರಕ್ಕೆ ಸಮಾಜ ಕಲ್ಯಾಣ ಯಾಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ನಿವೇಶನ ನೀಡುವ ಜಾಗವನ್ನು ಶಾಸಕರು ಪರಿಶೀಲಿಸಿದರು. ಸ್ವಾತಂತ್ರ‍್ಯ ಬಂದು ೭೫ ವರ್ಷಗಳು ಕಳೆದರೂ ಇಂದಿಗೂ ಗುಡಿಸಲಿ ನಲ್ಲಿ ವಾಸ ಮಾಡುತ್ತಿರುವುದು ನಮಗೆಲ್ಲ ಅವಮಾನ ಮತ್ತು ಅಪಮಾನ ಎಂದು ಶಾಸಕ ಬಿ ಸುರೇಶ್ ಗೌಡ ಹೇಳಿದರು. ರಾಜ್ಯದಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಇರುವ ಈ ಸಮುದಾಯವು ಅಳಿವಿನ ಅಂಚಿನಲ್ಲಿ ಇದಾವೆ. ಇಂತಹ ಜನ ಸಮುದಾಯದ ಉಳಿವಿಗಾಗಿ ಅವರಿಗೆ ಉತ್ತಮ ಶಿಕ್ಷಣ ಉತ್ತಮ ಅರೋಗ್ಯ ಹಾಗೂ ಉತ್ತಮ ಜನ ವಸತಿ ಪ್ರದೇಶ ನಿರ್ಮಾಣ ಮಾಡಿಕೊಡಬೇಕು ಈ…
ತುಮಕೂರು: ಸರಕಾರಿ ಶಾಲೆಗಳನ್ನು ಗುಣಮಟ್ಟದ ಶಿಕ್ಷಣದ ಜೊತೆಗೆ ಮೂಲಭೂತ ಸೌಕರ್ಯಗಳು ಮಕ್ಕಳಿಗೆ ದೊರೆಯುವಂತೆ ಮಾಡಿ, ಸರಕಾರಿ ಶಾಲೆಗಳನ್ನು ಉಳಿಸುವ ಗುರುತರಜವಾಬ್ದಾರಿ ಶಿಕ್ಷಕರು, ಪೋಷಕರು, ಹಳೆಯ ವಿದ್ಯಾರ್ಥಿಗಳ ಸಂಘ ಮತ್ತು ಎಸ್.ಡಿ.ಎಂ.ಸಿ ಸದಸ್ಯರುಗಳ ಮೇಲಿದೆ ಎಂದು ಬಿಇಓ ಹನುಮಂತಪ್ಪ ತಿಳಿಸಿದ್ದಾರೆ. ನಗರದಉತ್ತರಬಡಾವಣೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆವತಿಯಿಂದ ಆಯೋಜಿಸಿದ್ದ “ನಮ್ಮ ಶಾಲೆ, ನಮ್ಮಜವಾಬ್ದಾರಿ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದಅವರು,ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯತ್ತದೆ ಎಂಬ ನಂಬಿಕೆಯನ್ನು ಮಕ್ಕಳ ಪೋಷಕರಲ್ಲಿಉಂಟು ಮಾಡಿದರೆ, ತಾನಾಗಿಯೇ ಮಕ್ಕಳ ಸಂಖ್ಯೆ ಹೆಚ್ಚಳವಾಗಲಿದೆ.ಈ ನಿಟ್ಟಿನಲ್ಲಿ ಶಿಕ್ಷಕರು,ಎಸ್.ಡಿ.ಎಂಸಿ ಸದಸ್ಯರು ಮತ್ತುಇಲಾಖೆಯಜವಾಬ್ದಾರಿಯೂಇದೆಎಂದರು. ಸರಕಾರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದಉಚಿತವಾಗಿ ಪುಸ್ತಕ,ಬಿಸಿಯೂಟ, ಕ್ಷೀರಭಾಗ್ಯ,ಷೂ ಭಾಗ್ಯ ನೀಡುತ್ತಿದೆ.ಅಲ್ಲದೆ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ನಿವಾರಿಸಲುಚಿಕ್ಕಿ, ಬಾಳೆ ಹಣ್ಣು ಮತ್ತು ಮೊಟ್ಟೆಯನ್ನು ನೀಡುತ್ತಿದೆ.ನಾನು ಕೂಡ ಶಾಲೆಯಲ್ಲಿಕೊಡುತ್ತಿದ್ದಗೋಧಿ ನುಚ್ಚಿನಉಪ್ಪಿಟ್ಟುತಿಂದುಕಲಿತವ. ಮಕ್ಕಳ ಬೌದ್ದಿಕ ಮತ್ತು ಶಾಲೆಯ ಭೌತಿಕ ಬೆಳವಣಿಗೆ ಸರಕಾರಎಲ್ಲಾರೀತಿಯ ಸಹಾಯ ಮತ್ತು ಸಹಕಾರ ನೀಡುತ್ತಾ ಬಂದಿದೆ.ಉತ್ತರ ಬಡಾವಣೆಯ…











