Author: News Desk Benkiyabale

ತುಮಕೂರು: ನಗರದ ಶ್ರೀರಾಮನಗರದಲ್ಲಿ ರುವ ಅಂದರೆ ಅಮಾನಿಕೆರೆ ಮುಖ್ಯದ್ವಾರದ ಮುಂಭಾಗದಲ್ಲಿರುವ ಸರ್ಕಾರಿ ಶಾಲೆಯನ್ನು ಆಂಗ್ಲ ಮಾಧ್ಯಮ ಶಾಲೆಯನ್ನಾಗಿ ಪರಿವರ್ತನೆ ಮಾಡಬೇಕೆಂದು ಕರ್ನಾಟಕ ಪಿಂಜಾರ/ನದಾಫ್ ಜನಾಂಗದ ಕ್ಷೇಮಾಭಿವೃದ್ಧಿ ರಾಜ್ಯ ಸಂಘದ ರಾಜ್ಯದಕ್ಷರು ಹಾಗೂ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಬಷೀರ್ ಅಹಮದ್‌ರವರು ರಾಜ್ಯ ಶಿಕ್ಷಣ ಸಚಿವರಿಗೆ ಸೇರಿದಂತೆ ಸ್ಥಳೀಯ ಶಿಕ್ಷಣ ಅಧಿಕಾರಿಗಳು, ಬಿ.ಇ.ಓ. ರವರುಗಳಿಗೆ ಮನವಿ ಯನ್ನು ಸಲ್ಲಿಸಿದ್ದಾರೆ. ತಮ್ಮ ಮನವಿಯಲ್ಲಿ ವಿವರಿಸಿರುವಂತೆ ಶ್ರೀರಾಮನಗರ ಸರ್ಕಾರಿ ಶಾಲೆಯು ಒಂದರಿAದ ಏಳನೇ ತರಗತಿವರೆಗೂ ತರಗತಿಗಳು ನಡೆಯುತ್ತಿರುತ್ತವೆ, ಈ ಶಾಲೆಯು ಪ್ರಸ್ತುತ ಕನ್ನಡ ಮೀಡಿಯಂ ಶಾಲೆಯಾಗಿರುತ್ತದೆ, ಆದರೆ ಕೆಲವು ವರ್ಷಗಳಿಂದ ಇಲ್ಲಿನ ಸ್ಥಳೀಯ ನಿವಾಸಿಗಳು ಹಾಲಿ ಶಾಲೆಯನ್ನು ಇಂಗ್ಲಿಷ್ ಮೀಡಿಯಂ ಶಾಲೆಯನ್ನಾಗಿ ಪರಿವರ್ತನೆ ಮಾಡಬೇಕು ಎಂದು ಒತಾಯಿಸಿಕೊಂಡು ಬರುತ್ತಿದ್ದೇವೆ, ಜೊತೆಗೆ ಇತ್ತೀಚೆಗೆ ಸ್ಥಳೀಯ ಬಿ.ಇ.ಓ. ಸೇರಿದಂತೆ ಇಲಾಖಾ ಉಪ-ನಿರ್ದೇಶಕರಿಗೆ ಮನವಿಯನ್ನು ಸಹ ಸಲ್ಲಿಸಿರುತ್ತೇವೆ, ಈ ಶಾಲೆಯನ್ನು ಆಂಗ್ಲ ಮಾಧ್ಯಮ ಶಾಲೆಯನ್ನಾಗಿ ಪರಿವರ್ತನೆ ಮಾಡಿದರೆ ಅನುಕೂಲವಾಗುತ್ತದೆ ಜೊತೆಗೆ ಈ ಶಾಲೆಯು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿದ್ದು ಪ್ರತಿಯೊಬ್ಬರೂ ಸಹ ಸುಶಿಕ್ಷಿ…

Read More

ತುಮಕೂರು: ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಜೆಜೆಎಂ(ಜಲಜೀವನ್ ಮಿಷನ್) ಯೋಜನೆಯಲ್ಲಿ ಮೊದಲ ಮತ್ತು ಎರಡನೇ ಹಂತದ ಕಾಮಗಾರಿಗಳನ್ನು ಮುಂದಿನ ಮೂರು ತಿಂಗಳ ಒಳಗೆ ಪೂರ್ಣಗೊಳಿಸಿ, ಜನರಿಗೆ ಕುಡಿಯುವ ನೀರು ಕೊಡದಿದ್ದರೆ, ಕರ್ನಾಟಕ ಗ್ರಾಮೀಣ ನೀರು ಸರಬರಾಜು ಮತ್ತು ನೈಮರ್ಲ್ಯ ಇಲಾಖೆಯ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮಕ್ಕೆ ಸರಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆಯುವುದಾಗಿ ಶಾಸಕ ಸುರೇಶಗೌಡ ಎಚ್ಚರಿಕೆ ನೀಡಿದ್ದಾರೆ. ನಗರದ ತಾ.ಪಂ.ಸಭಾAಗಣದಲ್ಲಿAದು ಆಯೋಜಿಸಿದ್ದ ತ್ರೆöÊಮಾಸಿಕ ಕರ್ನಾಟಕ ಅಭಿವೃದ್ದಿಯೋಜನೆ)ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು,ಮೊದಲನೇ ಹಂತದಲ್ಲಿ ೬ ಹಾಗೂ ಎರಡನೇ ಹಂತದಲ್ಲಿ ೯ ವರ್ಕ್ಗಳು ಇಂದಿಗೂ ಆರಂಭವಾಗಿಲ್ಲ.ಯೋಜನೆ ಪ್ರಾರಂಭವಾಗಿ ಐದು ವರ್ಷ ಕಳೆದರೂ ಪ್ರತಿ ಮನೆಗೆ ನಲ್ಲಿ ನೀರು ಎಂಬ ಸರಕಾರದ ಘೋಷಣೆಯಂತೆ ನೀರು ನೀಡಲು ಸಾಧ್ಯವಾಗಿಲ್ಲ.ಹೀಗಾದರೆ ಸರಕಾರದ ಮೇಲೆ ಜನರಿಗೆ ವಿಶ್ವಾಸ ಬರುವುದಾದರೂ ಹೇಗೆ ಎಂದು ಪ್ರಶ್ನಿಸಿದ ಶಾಸಕರು,ಮೊದಲ ಮತ್ತು ಎರಡನೇ ಹಂತದ ಬಾಕಿ ಇರುವ ಕಾಮಗಾರಿಗಳನ್ನು ಮುಂದಿನ ಕೆಡಿಪಿ ಸಭೆಯೊಳಗೆ ಮುಗಿಸಿ, ಪಂಚಾಯಿತಿಗಳಿಗೆ ವಹಿಸಬೇಕು.ಅಲ್ಲದೆ ಮೂರನೇ ಹಂತದಲ್ಲಿ…

Read More

ತುಮಕೂರು: ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸಲು ‘ದುಡಿಯೋಣ ಬಾ ಅಭಿಯಾನ’ದ ಮೂಲಕ ಸ್ಥಳೀಯವಾಗಿ ಕೆಲಸ ನೀಡಲಾಗುವುದು. ಗ್ರಾಮೀಣ ಜನರು ಅಭಿಯಾನದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಹರ್ಷ ಕುಮಾರ್ ಕೆ. ಹೇಳಿದರು. ತಾಲ್ಲೂಕಿನ ಹರಳೂರು ಗ್ರಾಮ ಪಂಚಾ ಯಿತಿ ವ್ಯಾಪ್ತಿಯಲ್ಲಿ ಮಂಗಳವಾರ ನರೇಗಾ ಯೋಜನೆಯಡಿ ‘ದುಡಿಯೋಣ ಬಾ ಅಭಿಯಾನ’ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಡ ಕುಟುಂಬಗಳನ್ನು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವುದು, ಸ್ಥಳೀಯರಿಗೆ ಉದ್ಯೋಗ ನೀಡುವ ಮೂಲಕ ಸ್ವಾವಲಂಬಿ ಬದುಕು ಸಾಗಿಸುವಂತೆ ಮಾಡುವುದು, ಗ್ರಾಮೀಣ ಭಾಗದಲ್ಲಿ ವಲಸೆ ತಪ್ಪಿಸಿ ಕೂಲಿಕಾ ರರಿಗೆ ಕೆಲಸ ಒದಗಿಸುವುದು ನರೇಗಾ ಯೋಜ ನೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು. ತಾಲೂಕಿನಲ್ಲಿ ದುಡಿಯೋಣ ಬಾ ಅಭಿಯಾನವನ್ನು ಗ್ರಾಮೀಣ ಜನರು ಸದ್ಬಳಕೆ ಮಾಡಿಕೊಂಡಾಗ ಮಾತ್ರ ಸರ್ಕಾರದ ಯೋಜನೆ ಯಶಸ್ವಿಯಾಗಲಿದೆ. ಈ ನಿಟ್ಟಿನಲ್ಲಿ ವೈಯಕ್ತಿಕ ಅಥವಾ ಸಾಮೂಹಿಕ ಕೂಲಿಯನ್ನು ಸೃಷ್ಟಿಸಲು ದುಡಿಯೋಣ ಬಾ ಅಭಿಯಾನ ಸಹಕಾರಿಯಾಗಿದೆ. ಹರಳೂರು ಗ್ರಾಮದ ರೈತರಿಗೆ ಉದ್ಯೋಗ ಖಾತರಿ ಯೋಜನೆಯ ಮಾಹಿತಿಯುಳ್ಳ…

Read More

ಚಿಕ್ಕನಾಯಕನಹಳ್ಳಿ: ಪರಿಶಿಷ್ಟ ಜಾತಿಯ ಬಡವರ್ಗದವರಿಗೆ ನೀಡುವಂತಹ ಗಂಗಕಲ್ಯಾಣ ಯೋಜನೆಯ ಗುರಿಯನ್ನು ಸರ್ಕಾರ ಹೆಚ್ಚಿಸುವ ಮೂಲಕಅವರಿಗೆ ಆರ್ಥಿಕ ವಾಗಿ ಅನುಕೂಲ ಮಾಡಿಕೊಡಬೇಕಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು. ಪಟ್ಟಣದ ತಾಲ್ಲೂಕು ಕ್ರೀಡಾಂಗಣದ ಆವರ ಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮದವತಿಯಿಂದ ಪಲಾನುಭವಿ ಗಳಿಗೆ ಪಂಪುಮೋಟ್ ವಿತರಣೆ ಮಾಡಿ ಮಾತನಾಡಿದ ಅವರು ಅರ್ಜಿಸಲ್ಲಿಸಿದ ಎಲ್ಲರಿಗೂ ಇದರಲ್ಲಿ ಸೌಲಭ್ಯಗಳು ಸಿಗುತ್ತಿಲ್ಲ ಕಾರಣ ಸರ್ಕಾರ ಇಂತಿಷ್ಟು ಎಂದು ಗುರಿಪಡಿಸಿದ್ದು ಅಷ್ಟು ಮಾತ್ರ ಬರುತ್ತಿವೆ ಅದರಲ್ಲೂ ಆರ್ಥಿಕವಾಗಿ ಹಿಂದುಳಿದಿರುವವರನ್ನು ಗುರುತಿ ಅವರಿಗೆ ಈ ಸೌಲಭ್ಯವನ್ನು ನೀಡಲಾಗುತ್ತಿದ್ದು ಇದರ ಮೂಲಕ ಅವರು ಸೌಲಭ್ಯ ಸದ್ಬಳಕೆ ಮಾಡಿಕೊಂಡು ತಮ್ಮ ಭೂಮಿಯನ್ನು ಉತ್ತಮ ನೀರಾವರಿಯ ಮೂಲಕ ಆರ್ಥಿಕವಾಗಿ ಸಬಲರಾಗಬೇಕಾಗಿದೆ ಇಂದು ೧೫ಜನ ಪಲಾನುಭವಿಗಳಿಗೆ ಒಟ್ಟು ೨೭ಲಕ್ಷದ ೬೦ಸಾವಿರ ವೆಚ್ವದ ಪಂಪು ಮೋಟಾರ್ ವಿತರಣೆ ಮಾಡಲಾಗುತ್ತಿದೆ ಎಂದರು. ಈ ಸಂದರ್ಭಧಲ್ಲಿ ತಹಸೀಲ್ದಾರ್ ಪುರಂದರ ಕೆ, ಅಂಬೇಡ್ಕರ್ ಅಭಿವೃದ್ದಿ ನಿಗಮದ ತಾಲ್ಲೂಕು ಅಭಿವೃದ್ದಿ ಅಧಿಕಾರಿ ಮಹೇಂದ್ರ ಸೇರಿದಂತೆ ಮಾಜಿ ಜಿ.ಪಂ.ಸದಸ್ಯ ರಾಮಚಂದ್ರಯ್ಯ ಹಾಗೂ ಇತರರು ಇದ್ದರು.

Read More

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಕಂದಿಕೆರೆ ಹೋಬಳಿಯ ವಿವಿಧ ಕಡೆಗಳಲ್ಲಿ ಸುಮಾರು ೧೫ಕೋಟಿ ೩೦ಲಕ್ಷ ವೆಚ್ಚದ ಕಾಮಗಾರಿಗಳಿಗೆ ಶಾಸಕ ಸಿ.ಬಿ.ಸುರೇಶ್ ಬಾಬು ಗುದ್ದಲಿ ಪೂಜೆ ನೆರೆವೆರಿಸಿದರು. ತಾಲ್ಲೂಕಿನ ಕಂದಿಕೆರೆ ಹೋಬಳಿಯ ವಿವಿಧ ಕಡೆಗಳಲ್ಲಿ ಸಿಸಿ ರಸ್ತೆ ಹಾಗೂ ಚೆಕ್ ಡ್ಯಾಂ ಕಾಮಗಾರಿಗೆ ಗುದ್ದಲಿ ಪೂಜೆ ನೆರೆವೆರಿಸಿ ಮಾತನಾಡಿದ ಅವರು ಹರಿಯುವ ನೀರನ್ನು ನಿಲ್ಲುವಂತೆಯು ನಿಲ್ಲುವಂತಹ ನೀರನ್ನು ಹಿಂಗುವAತೆ ಮಾಡುವ ಮೂಲಕ ಅಂತರ್ಜಲದ ಮರುಪೂರಣಕ್ಕಾಗಿ ಚೆಕ್ ಡ್ಯಾಂ ಗಳನ್ನು ನಿರ್ಮಿಸಲಾಗುತ್ತದೆ ಈಗಾಗಲೇ ತಾಲ್ಲೂಕಿನ ಹಲವಾರು ಹಳ್ಳಗಳ ಕಡೆಗಳಲ್ಲಿ ಚೆಕ್ ಡ್ಯಾಂ ಗಳನ್ನು ನಿರ್ಮಿಸಿ ಸಾಕಷ್ಟು ನೀರು ಪೋಲಾಗಿ ಹರಿಯುವುದನ್ನು ನಿಲ್ಲಿಸುವಂತಹ ಕೆಲಸ ಮಾಡಲಾಗುತ್ತಿದೆ ನನ್ನ ಈ ಹಿಂದಿನ ಅವಧಿಯಲ್ಲಿ ತೀರ್ಥಪುರ ಯರೇಕಟ್ಟೆ ವಜ್ರದಬಳಿ ಒಂದು ಕೋಟಿ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಿಸಲಾಗಿತ್ತು ಅದೇ ರೀತಿ ಈ ಬಾರಿ ಒಂದು ಕೋಟಿ ವೆಚ್ಚದಲ್ಲಿ ಅಕ್ಕನಹಳ್ಳಿ ಚೆಕ್ ಡ್ಯಾಂ ನಿರ್ಮಿಸಲು ಗುದ್ದಲಿ ಪೂಜೆ ನೆರೆವರೆರಿಸಿದ್ದು ಇದರ ಮೂಲಕ ನೀರು ಹರಿಯುವದಲ್ಲಿ ನಿಲ್ಲಿಸಿ ಅಂತರ್ಜಲ ಹೆಚ್ಚುವಂತೆ ಇದುಅನುಕೂಲವಾಗಲಿದೆ ಇದೇ ರೀತಿ…

Read More

ತುರುವೇಕೆರೆ: ಕಳೆದು ಮೂರ್ನಾಲ್ಕು ದಿನಗಳಿಂದ ತಾಲ್ಲೂಕಿನಾದ್ಯಂತ. ಸುರಿದ ಕೃತ್ತಿಕೆ ಮಳೆಯಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದ್ದು, ತಾಲೂಕಿನಾದ್ಯಂತ ಕೃಷಿ ಚಟುವಟಿಕೆಗಳು ಗರಿಗೆದರಿದೆ. ಮಾರ್ಚ್ ತಿಂಗಳ ಕೊನೆಯ ಭರಣಿ ಮಳೆ ತಾಲ್ಲೂಕಿನ ಅಲ್ಲಲ್ಲಿ ಸಾಧಾರಣ ಮಳೆಯಾಗಿದ್ದರಿಂದ ಕೆಲವು ರೈತರು ತಮ್ಮ ಜಮೀನುಗಳನ್ನು ಉಳುಮೆ ಮಾಡಿ ಹೆಸರು, ಉದ್ದು ಬೀಜ ಬಿತ್ತನೆ ಮಾಡಿದ್ದರು. ಕೆಲವು ಭಾಗದಲ್ಲಿನ ರೈತರು ಭೂಮಿ ಹದಮಾಡಿಕೊಂಡರು. ಜೊತೆಗೆ ಪೂರ್ವ ಮುಂಗಾರು ಬಿತ್ತನೆಗೆ ಬೇಕಾದ ಬೀಜ, ಗೊಬ್ಬರವನ್ನು ಸಹ ದಾಸ್ತಾನು ಮಾಡಿಕೊಂಡಿದ್ದರು. ಇದಾದ ಮೇಲೆ ಸಮರ್ಪಕವಾಗಿ ಮಳೆ ಬಾರದ ಕಾರಣ ರೈತರು ಬೀಜ ಭಿತ್ತನೆ ಹಿಂದೇಟು ಹಾಕಿದರು. ತಾಲ್ಲೂಕಿನ ಸಂಪಿಗೆ, ದೊಂಬರನಹಳ್ಳಿ, ಕುರುಬರಹಳ್ಳಿ ಬ್ಯಾಲಾ, ತಾಳ್ಕೆರೆ, ಮಾಯಸಂದ್ರ, ಸೂಳೇಕೆರೆ ಲೋಕಮ್ಮನಹಳ್ಳಿ, ದಂಡಿನಶಿವರ, ಬಾಣಸಂದ್ರ ಸೇರಿದಂತೆ ಬೆರಳೆಣಿಕೆಯಷ್ಟು ಕಡೆಗಳಲ್ಲಿ ಭರಣಿ ಮಳೆ ಬಿದ್ದ ಹಿನ್ನೆಲೆಯಲ್ಲಿ ರೈತರು ಹೆಸರು, ಅಲಸಂದೆ ಭಿತ್ತನೆ ಮಾಡಿದರು ಇದರಿಂದ ಹೆಸರು ಮತ್ತು ಅಲಸಂದೆ ಗಿಡಗಳು ಈಗಾಗಲೇ ಎರಡು ಎಲೆ ಬಂದಿವೆ. ಕೃತ್ತಿಕೆ ಮಳೆ ಚನ್ನಾಗಿ ಬೀಳುತ್ತಿರುವ ಕಾರಣ ಭಿತ್ತನೆ…

Read More

ತುಮಕೂರು: ಹಿಂದೆಲ್ಲಾ ಮಕ್ಕಳಿಗೆ ಊಟ ಮಾಡಿಸುವಾಗ ಪೋಷಕರು ಚಂದಮಾಮ ಹಾಗೂ ಪಂಚ ತಂತ್ರದ ಕಥೆಗಳನ್ನು ಹೇಳುತ್ತಿದ್ದರು. ಈಗ ಆ ಕಥೆ ಹೇಳಿ ಊಟ ಮಾಡಿಸುವ ಪೋಷಕರು ಕಾಣುತ್ತಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಚೇತನ್ ಕುಮಾರ್ ಎಂ.ಎನ್. ವಿಷಾದಿಸಿದರು. ತುಮಕೂರಿನ ಬಾಲಭವನದಲ್ಲಿ ರಾಜ್ಯ ಬಾಲಭವನ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲಭವನ ಸಮಿತಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ಈಗ ಮಕ್ಕಳಿಗೆ ಪೋಷಕರು ಊಟ ಮಾಡಿಸುವಾಗ ಮೊಬೈಲ್ ಅನ್ನು ಕೊಡುತ್ತಿದ್ದಾರೆ. ಇದು ಸರಿಯಲ್ಲ ಎಂದು ವಿಷಾದಿಸಿದರು. ಹೀಗಾಗಿ ಚಂದಮಾಮ ಕಥೆಗಳನ್ನು ಮಕ್ಕಳಿಗೆ ಹೇಳಿಕೊಡುವ ಪೋಷಕರ ಸಂಖ್ಯೆ ಹೆಚ್ಚಾಗಲಿ ಎಂದು ಆಶಿಸಿದರು. ಮೊಬೈಲ್ ನಲ್ಲಿ ಮಕ್ಕಳು ಕಳೆದು ಹೋಗಿರುವ ಆಂತಕ ಇದೆ. ಇದು ಮಕ್ಕಳ ಸಮಸ್ಯೆಯಲ್ಲ, ಪೋಷಕರ ಸಮಸ್ಯೆ. ಮನೆಗಳಲ್ಲೂ ಕೂಡ ರೋಬರ್ಟ್ ಗಳು ಬಂದಿವೆ.  ಮೊಬೈಲ್ ನಿಂದ ಮಕ್ಕಳು ಹೊರಗೆ ಬರುವುದು…

Read More

ತುಮಕೂರು: ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಮತ್ತು ಸ್ಲಂ ಜನಾಂದೋ ಲನ-ಕರ್ನಾಟಕದ ಸಂಚಾಲಕರಾದ ಎ.ನರ ಸಿಂಹಮೂರ್ತಿರವರ ೫೦ನೇ ವರ್ಷದ ಜನ್ಮದಿ ನದ ಅಂಗವಾಗಿ ಕ್ಯಾತ್ಸಂದ್ರ ಎಳ್ಳರಬಂಡೆ, ಮಾರಿಯಮ್ಮ ನಗರ, ಸ್ಲಂ ಭವನದಲ್ಲಿ ಶಾಲಾ ಮಕ್ಕಳಿಗೆ ಬ್ಯಾಗ್ ಮತ್ತು ನೋಟ್ ಬುಕ್ ವಿತರಣೆ, ಅನ್ನದಾನ, ಸ್ನೇಹಕೂಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ರಾಜ್ಯದಲ್ಲಿ ಸ್ಲಂ ಜನರನ್ನು ಸಂವಿಧಾನದ ಆಶ ಯದೊಂದಿಗೆ ಕಳೆದ ೨೫ನೇ ವರ್ಷಗಳಿಂದ ಸ್ಲಂ ಜನಾಂದೋಲನ ಕರ್ನಾಟಕದ ಕಾರ್ಯದರ್ಶಿ ಯಾಗಿ, ಸಂಚಾಲಕರಾಗಿ ಜವಾಬ್ದಾರಿ ತೆಗೆದು ಕೊಂಡು ಸ್ಲಂ ಜನರ ಸಂಘಟನೆಗೆ ಅವಿರತವಾಗಿ ಶ್ರಮಿಸಿ, ಹಲವಾರು ಯಶಸ್ಸುಕಂಡು ರಾಜ್ಯದಲ್ಲಿ ಸ್ಲಂ ಜನರ ಧ್ವನಿಯಾಗಿ ಸ್ಲಂ ಜನರ ಭೂಮಿ, ವಸತಿ ಹೋರಾಟಗಳು ಹಲವಾರು ಜಿಲ್ಲೆಗಳಲ್ಲಿ ಕಾಲಕಾಲಕ್ಕೆ ಹಮ್ಮಿಕೊಳ್ಳುತ್ತ ನಗರಗಳ ಮೇಲಿನ ಹಕ್ಕನ್ನು ಸ್ಪಾಪಿಸಲು ನಗರವಂಚಿತ ಸಮುದಾಯಗಳು ಮುಂದಾಗಿರುವುದು ಶ್ಲಾಘನೀಯವಾದದ್ದು ಹಗಲು ರಾತ್ರಿಯನ್ನದೆ ರಾಜ್ಯಾದ್ಯಂತ ಸ್ಲಂ ಜನರನ್ನು ಎ.ನರಸಿಂಹಮೂರ್ತಿ ಸಂಘಟಿಸಿರುವುದು ಮತ್ತು ಜಾಗೃತರನ್ನಾಗಿಸುತ್ತಿರುವುದು ಅಭಿನಂದನೀಯ ವಾಗಿದೆ ಎಂದು ಉಪಾದ್ಯಕ್ಷರಾದ ದೀಪಿಕಾ ಹೇಳಿದ್ದರು. ಮಾಜಿ ಶಾಸಕರಾದ ಡಾ. ರಫೀಕ್ ಅಹ್ಮದ್…

Read More

ಚಿಕ್ಕನಾಯಕನಹಳ್ಳಿ: ಪುಣ್ಯಕ್ಷೇತ್ರಗಳ ದರ್ಶ ನಕ್ಕೆ ತೆರಳಿ ಅಪಘಾತಕ್ಕೆ ಈಡಾಗಿ ಸಾವನ್ನಪ್ಪಿದ ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಕೆಂಕೆರೆ ನವೀನ್ ಬಿಜೆಪಿ ಮುಖಂಡ ಕೆಂಕೆರೆ ಸಂತೋ ಷ್ ಹಾಗೂ ಲೋಕೇಶ್ ರವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಪಟ್ಟಣದ ನೆಹರು ಸರ್ಕಲ್ ನಲ್ಲಿ ನಡೆದ ಶ್ರದ್ಧಾಂಜಲಿ ಸಂದರ್ಭದಲ್ಲಿ ಅ.ಭಾವೀ.ಲಿಂ.ಮ.ಸಭಾ ತಾಲ್ಲೂಕು ಅಧ್ಯಕ್ಷ ಸಾಸಲು ದಿನೇಶ್ ಮಾತನಾಡಿ ಮೃತ ದುರ್ದೈವಿಗಳು ಸಮಾ ಜಕ್ಕೆ ಅನೇಕ ಸೇವೆಸಲ್ಲಿಸಿದ್ದರು. ಕೆಂಕೆರೆ ನವೀನ್ ರಾಜಕೀಯ ಕ್ಷೇತ್ರದಲ್ಲಿ ಸರಳತೆಯ ನಾಯಕತ್ವವನ್ನ ಹೊಂದಿದ್ದರು. ಸಂತೋಷ್ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು ಲೋಕೇ ಶ್ ಕೂಡ ಸಮಾಜದ ಸೇವೇಯಲ್ಲಿ ಸಾಧನೆಯ ಕನಸುಗಳನ್ನ ಕಂಡಿದ್ದರು ಅವರ ಅಕಾಲಿಕ ಮರಣದಿಂದ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಕಂಬನಿ ಮಿಡಿದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ನಿರಂಜನ್ ಮಾತನಾಡಿ ಭಾರತೀಯ ಜನತಾ ಪಾರ್ಟಿ ಯಲ್ಲಿ ಮೃತರು ಪ್ರಾಮಾಣಿಕ ಕಾರ್ಯಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದರು. ಪಕ್ಷ ಸಂಘಟಣೆಯಲ್ಲಿ ನವೀನ್ ಚತುರರಾಗಿದ್ದರು. ಸಂತೋಷ್ ಪಕ್ಷದ ಯುವಮೋರ್ಚರಾಗಿ ಕೆಲಸ ನಿರ್ವಹಿಸಿದ್ದರು ಲೋಕೇಶ್…

Read More

ತುಮಕೂರು: ಡಾ: ಡಿ.ಎಂ. ನಂಜುAಡಪ್ಪ ವರದಿಯ ಶಿಫಾರಸ್ಸಿನಂತೆ ಪ್ರಾದೇಶಿಕ ಅಸಮತೋಲನೆಯನ್ನು ನಿವಾರಿಸಲು ರಾಜ್ಯದಲ್ಲಿ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗಾಗಿ ೨೦೦೭-೦೮ ರಿಂದ ೨೦೨೩-೨೪ರವರೆಗೂ ಸರ್ಕಾರದಿಂದ ಬಿಡುಗಡೆಯಾಗಿರುವ ೩೭,೬೬೧.೬೫ ಕೋಟಿ ರೂ.ಗಳ ಅನುದಾನದಲ್ಲಿ ೩೪,೩೮೧.೦೨ ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ ಎಂದು ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಅಧ್ಯಕ್ಷ ಪ್ರೊ: ಎಂ. ಗೋವಿಂದರಾವ್ ತಿಳಿಸಿದರು. ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ದೇಶನದಂತೆ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣೆ ಸಂಬAಧ ಸೆಪ್ಟೆಂಬರ್ ೨೦೨೪ರಲ್ಲಿ  ಹೊಸ ಸಮಿತಿಯನ್ನು ರಚಿಸಲಾಗಿದೆ. ರಾಜ್ಯದಲ್ಲಿರುವ ಪ್ರಾದೇಶಿಕ ಅಸಮತೋಲನಾ ನಿವಾರಣೆಗಾಗಿ ಈ ಸಮಿತಿಯು ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡುತ್ತಿದೆ ಎಂದು ಹೇಳಿದರು. ಸಮಿತಿಯು ರಾಜ್ಯದಾದ್ಯಂತ ಪ್ರವಾಸ ಕೈಗೊಂಡು ಡಾ: ನಂಜುAಡಪ್ಪ ಸಮಿತಿ ಶಿಫಾರಸ್ಸುಗಳ ಆಧಾರದ ಮೇಲೆ ಅಸಮತೋಲನೆ ನಿವಾರಣೆಗೆ  ಪರಿಣಾಮಕಾರಿಯಾಗಿ   ಕೈಗೊಳ್ಳಲಾದ ಕ್ರಮಗಳ  ಮೌಲ್ಯಮಾಪನ ಮಾಡಲಿದೆ ಎಂದು ತಿಳಿಸಿದರು. ರಾಜ್ಯದ ಯಾವುದೇ ಸಮುದಾಯ, ಪ್ರದೇಶಗಳು ಅಭಿವೃದ್ಧಿಯಲ್ಲಿ ಹಿಂದುಳಿಯಬಾರದೆAಬುದೇ ಸಮಿತಿ ರಚನೆ ಮುಖ್ಯ ಉದ್ದೇಶವಾಗಿದೆ.  ಈ…

Read More