BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಆರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸಿ
  • ನೌಕರರ ಒಳ ಜಗಳದಿಂದ ಜನರು ಸೌಲಭ್ಯ ವಂಚಿತರಾಗಬಾರದು
  • ತಪ್ಪು ಮಾಹಿತಿ, ನಿಯಮ ಉಲ್ಲಂಘಿಸಿ ಅತಿಥಿ ಉಪನ್ಯಾಸಕರಾಗಿ ನೇಮಕ
  • ಚಿಂಪುಗಾನಹಳ್ಳಿಯಲ್ಲಿ ಅದ್ಧೂರಿ ಜಾತ್ರಾ ಮಹೋತ್ಸವ
  • ರೈತರ ಕಣ್ಣೀರಿನ ಮಡುವಿನಲ್ಲಿ ಮರಗಳ ಮಾರಣಹೋಮ
  • ಸಮಗ್ರ ತನಿಖೆಗೆ ಆಗ್ರಹಿಸಿ ತಹಶೀಲ್ದಾರರಿಗೆ ದೂರು
  • ಜು.೧೯ರಂದು ಚಿತ್ರದುರ್ಗದಲ್ಲಿ ಭೋವಿ ಜನೋತ್ಸವ: ಡಾ.ಎಂ.ರಾಮಪ್ಪ
  • ಉಪಮುಖ್ಯಮಂತ್ರಿಗಳ ಮೇಲಿನ ಆರೋಪ ಸರಿಯಲ್ಲ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಕುಷ್ಠರೋಗ ಶಾಪವಲ್ಲ – ನ್ಯಾಯಾಧೀಶ ಗಣೇಶ್
Trending

ಕುಷ್ಠರೋಗ ಶಾಪವಲ್ಲ – ನ್ಯಾಯಾಧೀಶ ಗಣೇಶ್

By News Desk BenkiyabaleUpdated:January 30, 2019 4:48 pm

ತುಮಕೂರು:

      ಕುಷ್ಠರೋಗವು ದೇವರ ಶಾಪ ಅಥವಾ ಪಾಪದ ಫಲಗಳಿಂದ ಬರುವುದಿಲ್ಲ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ. ಗಣೇಶ ತಿಳಿಸಿದರು.

      ಸ್ಪರ್ಶ ಕುಷ್ಠರೋಗ ಅರಿವು ಆಂದೋಲನದ ಅಂಗವಾಗಿ ಜಿಲ್ಲಾಸ್ಪತ್ರೆ ಆವರಣದಲ್ಲಿಂದು ಹಮ್ಮಿಕೊಂಡಿದ್ದ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಗಾಂಧೀಜಿಯವರು ಹುತಾತ್ಮರಾದ ದಿನವಾದ ಇಂದು ಅವರ ಸ್ಮರಣೆಯಲ್ಲಿ ರಾಷ್ಟ್ರಾದ್ಯಂತ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನವನ್ನು ಹಮ್ಮಿಕೊಳ್ಳಾಗುತ್ತಿದೆ. ಗಾಂಧೀಜಿಯವರ “ಕುಷ್ಠ ಮುಕ್ತ ದೇಶ”ದ ಕನಸನ್ನು ನಾವೆಲ್ಲಾ ನನಸಾಗಿಸೋಣ ಎಂದು ಹೇಳಿದರಲ್ಲದೆ ಕುಷ್ಠರೋಗವನ್ನು ಸುಲಭವಾಗಿ ಪತ್ತೆ ಹಚ್ಚಿ ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ. ಕುಷ್ಠರೋಗಿಗಳನ್ನು ಕಂಡರೆ ತಾರತಮ್ಯ ತೋರದೆ ದೌರ್ಜನ್ಯಕ್ಕೊಳಗಾದ ಕುಷ್ಠರೋಗಿಗಳನ್ನು ಮುಖ್ಯವಾಹಿನಿಗೆ ತಂದು ಸಾಮಾನ್ಯರೊಂದಿಗೆ ಬದುಕಲು ಅವಕಾಶ ಕಲ್ಪಿಸಬೇಕೆಂದು ಅವರು ಮನವಿ ಮಾಡಿದರು.

Displaying DSC_0962.JPG

      ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಚಂದ್ರಿಕಾ ಮಾತನಾಡಿ ಜಿಲ್ಲಾದ್ಯಂತ ಜನವರಿ 30 ರಿಂದ ಫೆಬ್ರುವರಿ 13ರವರೆಗೆ 15 ದಿನಗಳ ಕಾಲ ಈ ಆಂದೋಲನದಲ್ಲಿ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು, ವೈದ್ಯಾಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿ ಶಂಕಿತ ಕುಷ್ಠರೋಗಿಗಳ ಪತ್ತೆ ಮಾಡಿ ಚಿಕಿತ್ಸೆಗೊಳಪಡಿಸಲಿದ್ದಾರೆ. ಆರೋಗ್ಯ ಸಿಬ್ಬಂದಿ ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ಕುಷ್ಠರೋಗದ ಗುಣಲಕ್ಷಣಗಳಿದ್ದಲ್ಲಿ ಹಿಂಜರಿಯದೆ ಮಾಹಿತಿ ನೀಡುವ ಮೂಲಕ ಕುಷ್ಠರೋಗ ಮುಕ್ತ ಜಿಲ್ಲೆಯಾಗಿಸುವಲ್ಲಿ ಕೈಜೋಡಿಸಬೇಕೆಂದು ಮನವಿ ಮಾಡಿದರು.

      ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ|| ಚೇತನ್ ಮಾತನಾಡಿ ಜಿಲ್ಲೆಯಲ್ಲಿ ಪ್ರಸಕ್ತ ವರ್ಷದಲ್ಲಿ 75 ಹೊಸ ಕುಷ್ಠರೋಗ ಪ್ರಕರಣಗಳು ಪತ್ತೆಯಾಗಿವೆ. ಕುಷ್ಠರೋಗವು ಮೈಕ್ರೋ ಬ್ಯಾಕ್ಟೀರಿಯಾ ಲೆಫ್ರೇ ಎಂಬ ಬ್ಯಾಕ್ಟೀರಿಯಾದಿಂದ ಬರುತ್ತದೆ. ತಿಳಿ, ಬಿಳಿ, ತಾಮ ವರ್ಣದ ಸ್ಪರ್ಶಜ್ಞಾನವಿಲ್ಲದ ಮಚ್ಚೆಯು ಕುಷ್ಠರೋಗದ ಚಿಹ್ನೆಯಾಗಿರಬಹುದು. ತ್ವರಿತ ಚಿಕಿತ್ಸೆ ಪಡೆಯುವುದರಿಂದ ಈ ರೋಗವನ್ನು ಬಹುವಿಧೌಷಧಿಗಳಿಂದ ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ ಎಂದರು.

Displaying DSC_0972.JPG

      ಅಂಗವಿಕಲತೆ ಪ್ರಮಾಣವನ್ನು ತಗ್ಗಿಸುವ ಸಲುವಾಗಿ ಈ ಆಂದೋಲನದಲ್ಲಿ ಪ್ರಾಥಮಿಕ ಹಂತದಲ್ಲೇ ರೋಗವನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಒತ್ತು ನೀಡಲಾಗುತ್ತದೆ. ಅಲ್ಲದೆ ರೋಗದ ಬಗ್ಗೆ ಜನ ಜಾಗೃತಿ ಮೂಡಿಸಲು ಎಲ್ಲ ಗ್ರಾಮಗಳ ಮನೆ-ಮನೆಗೆ ಭೇಟಿ, ಗ್ರಾಮ ಸಭೆ, ಜಾಥಾ, ಶಾಲಾ ಮಕ್ಕಳಿಗೆ ಕ್ವಿಜ್ ಕಾರ್ಯಕ್ರಮ/ಭಾಷಣ ಸ್ಪರ್ಧೆ, ಗುಂಪು ಸಭೆಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.

      ಈ ಸಂದರ್ಭದಲ್ಲಿ ಜಿಲ್ಲಾ ಸರ್ಜನ್ ಡಾ|| ವೀರಭದ್ರಯ್ಯ, ಆರ್‍ಸಿಹೆಚ್ ಅಧಿಕಾರಿ ಡಾ|| ಕೇಶವ್‍ರಾಜ್, ಡಾ|| ಕಲ್ಲೇಶ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ|| ಸನತ್, ವಾರ್ತಾ ಸಹಾಯಕಿ ಆರ್. ರೂಪಕಲಾ, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಜಯಲಕ್ಷ್ಮಮ್ಮ, ಶ್ರೀರಂಗನಾಥ್, ನಾಗರಾಜ್, ಸತೀಶ್, ವಿರುಪಾಕ್ಷಪ್ಪ, ವಾಸು, ಮತ್ತಿತರರು ಹಾಜರಿದ್ದರು.
ನಂತರ ನರ್ಸಿಂಗ್ ವಿದ್ಯಾರ್ಥಿಗಳಿಂದ ನಡೆದ ಜಾಥಾ ಕಾರ್ಯಕ್ರಮದಲ್ಲಿ “ ಮಚ್ಚೆಗಳು ಇದ್ದರೆ ಮೈಯಲ್ಲಿ-ಮುಚ್ಚಿಡಬೇಡಿ ಮನದಲ್ಲಿ”, “ಕುಷ್ಠರೋಗದ ತ್ವರಿತ ಪತ್ತೆ ಶೀಘ್ರ ಚಿಕಿತ್ಸೆ”, “ಬನ್ನಿ ಕುಷ್ಠ ಮುಕ್ತ ದೇಶವನ್ನು ನಿರ್ಮಿಸೋಣ” ಎಂಬ ಘೋಷ ವಾಕ್ಯಗಳನ್ನು ಪ್ರದರ್ಶಿಸುವ ಮೂಲಕ ಜನಜಾಗೃತಿ ಮೂಡಿಸಿದರು. ಇದಕ್ಕೂ ಮುನ್ನ ಕುಷ್ಠರೋಗ ನಿರ್ಮೂಲನೆಗೆ ಪಣ ತೊಡುವ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

 

(Visited 46 times, 1 visits today)
Previous Articleಕನ್ನಡ ಬಳಸಿ-ಉಳಿಸುವ ಮನಸ್ಸಿನ ಸಂಘಟನೆಗಳ ಅವಶ್ಯಕತೆಯಿದೆ
Next Article ಶಿವಕುಮಾರಶ್ರೀಗೆ ಭಾರತ ರತ್ನ ನೀಡಲಿ: ಮುರುಳೀಧರ ಹಾಲಪ್ಪ
News Desk Benkiyabale

Related Posts

ಆರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸಿ

July 11, 2026 5:21 pm news

ನೌಕರರ ಒಳ ಜಗಳದಿಂದ ಜನರು ಸೌಲಭ್ಯ ವಂಚಿತರಾಗಬಾರದು

July 11, 2026 4:17 pm news

ತಪ್ಪು ಮಾಹಿತಿ, ನಿಯಮ ಉಲ್ಲಂಘಿಸಿ ಅತಿಥಿ ಉಪನ್ಯಾಸಕರಾಗಿ ನೇಮಕ

July 11, 2026 4:13 pm news
ತಾಜಾ ಸುದ್ಧಿಗಳು

ಆರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸಿ

July 11, 2026 5:21 pm

ನೌಕರರ ಒಳ ಜಗಳದಿಂದ ಜನರು ಸೌಲಭ್ಯ ವಂಚಿತರಾಗಬಾರದು

July 11, 2026 4:17 pm

ತಪ್ಪು ಮಾಹಿತಿ, ನಿಯಮ ಉಲ್ಲಂಘಿಸಿ ಅತಿಥಿ ಉಪನ್ಯಾಸಕರಾಗಿ ನೇಮಕ

July 11, 2026 4:13 pm

ಚಿಂಪುಗಾನಹಳ್ಳಿಯಲ್ಲಿ ಅದ್ಧೂರಿ ಜಾತ್ರಾ ಮಹೋತ್ಸವ

July 11, 2026 4:10 pm

ರೈತರ ಕಣ್ಣೀರಿನ ಮಡುವಿನಲ್ಲಿ ಮರಗಳ ಮಾರಣಹೋಮ

July 11, 2026 4:08 pm

ಸಮಗ್ರ ತನಿಖೆಗೆ ಆಗ್ರಹಿಸಿ ತಹಶೀಲ್ದಾರರಿಗೆ ದೂರು

July 11, 2026 4:05 pm
Our Youtube Channel
Our Picks

ಆರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸಿ

July 11, 2026 5:21 pm

ನೌಕರರ ಒಳ ಜಗಳದಿಂದ ಜನರು ಸೌಲಭ್ಯ ವಂಚಿತರಾಗಬಾರದು

July 11, 2026 4:17 pm

ತಪ್ಪು ಮಾಹಿತಿ, ನಿಯಮ ಉಲ್ಲಂಘಿಸಿ ಅತಿಥಿ ಉಪನ್ಯಾಸಕರಾಗಿ ನೇಮಕ

July 11, 2026 4:13 pm

ಚಿಂಪುಗಾನಹಳ್ಳಿಯಲ್ಲಿ ಅದ್ಧೂರಿ ಜಾತ್ರಾ ಮಹೋತ್ಸವ

July 11, 2026 4:10 pm

ರೈತರ ಕಣ್ಣೀರಿನ ಮಡುವಿನಲ್ಲಿ ಮರಗಳ ಮಾರಣಹೋಮ

July 11, 2026 4:08 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds kannada news karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss

ಆರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸಿ

By News Desk BenkiyabaleJuly 11, 2026 5:21 pm

ತುಮಕೂರು: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಎಸ್.ಐ.ಆರ್ ಮತ್ತು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬAಧಿಸಿದAತೆ ಜಿಲ್ಲಾ ಕಾಂಗ್ರೆಸ್‌ನ ಮಂಚೂಣಿ ಘಟಕಗಳ…

ನೌಕರರ ಒಳ ಜಗಳದಿಂದ ಜನರು ಸೌಲಭ್ಯ ವಂಚಿತರಾಗಬಾರದು

July 11, 2026 4:17 pm

ತಪ್ಪು ಮಾಹಿತಿ, ನಿಯಮ ಉಲ್ಲಂಘಿಸಿ ಅತಿಥಿ ಉಪನ್ಯಾಸಕರಾಗಿ ನೇಮಕ

July 11, 2026 4:13 pm

ಚಿಂಪುಗಾನಹಳ್ಳಿಯಲ್ಲಿ ಅದ್ಧೂರಿ ಜಾತ್ರಾ ಮಹೋತ್ಸವ

July 11, 2026 4:10 pm
News by Date
July 2026
M T W T F S S
 12345
6789101112
13141516171819
20212223242526
2728293031  
« Jun    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.