ತುಮಕೂರು :
ನಗರದ ಕೇಂದ್ರಭಾಗದಲ್ಲಿರುವ ಅಮಾನಿಕೆರೆಗೆ ಸುಮಾರು 887 ವರ್ಷಗಳ ಇತಿಹಾಸವಿದೆ. ಮಾನವ ನಿರ್ಮಿತ ವೈಭವದಿಂದ ಕೂಡಿದ್ದ ಈ ಕೆರೆಯು ಕೆಲವು ವರ್ಷಗಳ ಹಿಂದೆ ಸಂಸ್ಕರಿಸದ ಒಳಚರಂಡಿ ನೀರು, ಕಸದ ರಾಶಿಯಿಂದ ತುಂಬಿಕೊಂಡು ಅಸಹನೀಯ ದುರ್ವಾಸನೆಯಿಂದ ಕೂಡಿದ ಅವ್ಯವಸ್ಥೆಯ ತಾಣವಾಗಿತ್ತು. ಮತ್ತೊಮ್ಮೆ ಈ ಕೆರೆಗೆ ಪುನಶ್ಚೇತನ ನೀಡಿ ಹೊಸ ರೂಪ ನೀಡಲು ಸ್ಮಾರ್ಟ್ ಸಿಟಿ ಸಂಸ್ಥೆಯು ಮುಂದಾಗಿದೆ.
28ಕೋಟಿ ರೂ. ವೆಚ್ಚದಲ್ಲಿ ಕೆರೆ ಅಭಿವೃದ್ಧಿ:
ಭಾರತದಲ್ಲಿ ನೀರಿನ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಖಿieಡಿ (ಟೈರ್)-1 ನಗರಗಳಾದ ದೆಹಲಿ, ಬೆಂಗಳೂರು, ಹೈದ್ರಬಾದ್, ಮತ್ತಿತರ ನಗರಗಳಲ್ಲಿ 2020ರ ವೇಳೆಗೆ ಅಂತರ್ಜಲ ಬರಿದಾಗಲಿದೆ ಎಂದು ಓIಖಿI ಆಯೋಗವು ಇತ್ತೀಚಿಗಷ್ಟೇ ವರದಿ ಮಾಡಿದೆ. ಇದನ್ನು ಮನಗಂಡ ಸ್ಮಾರ್ಟ್ ಸಿಟಿ ಲಿಮಿಟೆಡ್ ಅಧ್ಯಕ್ಷೆ ಡಾ|| ಶಾಲಿನಿ ರಜನೀಶ್ ಅವರ ನೇತೃತ್ವದಲ್ಲಿ ನಗರದ ನಾಗರಿಕರಿಗೆ ಉಪಯೋಗವಾಗುವಂತೆ ಅಮಾನಿಕೆರೆಯನ್ನು ಪುನರುಜ್ಜೀವನಗೊಳಿಸಿ ಸೌಂದರ್ಯೀಕರಣಗೊಳಿಸಲು 28 ಕೋಟಿ ರೂ.ಗಳ ಅಂದಾಜು ವೆಚ್ಚದ ಯೋಜನೆಯೊಂದನ್ನು ರೂಪಿಸಿ ಈಗಾಗಲೇ ಕಾರ್ಯಾರಂಭ ಮಾಡುವ ಮೂಲಕ ಆಧುನಿಕತೆಯ ಹೊಸ ರೂಪ ನೀಡಲು ಸ್ಮಾರ್ಟ್ ಸಿಟಿ ಸಜ್ಜಾಗಿದೆ.
ಅಂತರ್ಜಲ ಮಟ್ಟ ಹೆಚ್ಚಳ:
ಸುಮಾರು 506 ಎಕರೆ ಪ್ರದೇಶ, 7 ಕಿ.ಮೀ ವಿಸ್ತೀರ್ಣದ ಪರಿಧಿ, ಒಳಭಾಗದ ಒಟ್ಟು ವಿಸ್ತೀರ್ಣ 481 ಎಕರೆ ಹೊಂದಿ ದುರ್ವಾಸನೆ ಮತ್ತು ಕಳೆಗಳಿಂದ ಕೂಡಿದ್ದ ಈ ಸರೋವರ(ಅಮಾನಿಕೆರೆ)ವನ್ನು ಸ್ಮಾರ್ಟ್ ಸಿಟಿಯ ಸೌಂದರ್ಯೀಕರಣ ಯೋಜನೆಯಡಿ ರಿವೆಟ್ಮೆಂಟ್ಸ್ ಮರುಜೋಡಣೆ, ಸರೋವರದ ಒಡ್ಡು(ಃuಟಿಜ) ಪ್ರದೇಶಲ್ಲಿರುವ ಸಾರ್ವಜನಿಕ ಉದ್ಯಾನವನದ ಅಭಿವೃದ್ಧಿ ಮತ್ತು ನವೀಕರಣ, ಕೆರೆಯಿಂದ ಹೂಳು ತೆಗೆಯುವ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಕಾಮಗಾರಿಯಿಂದ ಕೆರೆಯಲ್ಲಿ ನೀರು ತುಂಬಿ ಜನರಿಗೆ ಕುಡಿಯುವ ನೀರಿನ ಬವಣೆಗೆ ಪರಿಹಾರ ದೊರೆಯುವುದಲ್ಲದೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಅನುಕೂಲವಾಗುತ್ತದೆ.
ಸಲಹಾ ಕಂಪನಿಯ ನೇಮಕ:
ಈ ಸರೋವರದ ಅಭಿವೃದ್ಧಿಗೆ ಅಂತರ್‍ರಾಷ್ಟ್ರೀಯ ಸಲಹಾ ಸಂಸ್ಥೆಯಾದ ಐಪಿಒ ಗ್ಲೋಬಲ್ ಕಂಪನಿಯನ್ನು ನೇಮಿಸಲಾಗಿದೆ. ಸಲಹಾ ಕಂಪನಿಯು ಸರೋವರದ ಅಭಿವೃದ್ಧಿಯತ್ತ ಗಮನ ಹರಿಸಲಿದ್ದು, ಸಂಸ್ಕರಿಸದ ಕೊಳೆತ ಪದಾರ್ಥಗಳನ್ನು ಸರೋವರಗಳಲ್ಲಿ ಪ್ರವೇಶಿಸುವುದನ್ನು ತಡೆಯಲು ಒಳಚರಂಡಿ ತಿರುವು ಕಾರ್ಯವನ್ನು ಮೊದಲ ಹಂತದಲ್ಲಿ ಪೂರ್ಣಗೊಳಿಸಲಿದೆ. ಒಳಚರಂಡಿಯನ್ನು ತಿರುಗಿಸುವುದರ ಜೊತೆಗೆ, ನೀರಿನ ಹಾನಿಕಾರಕ ಒಳಹರಿವನ್ನು ಮತ್ತು ನೀರಿನಲ್ಲಿ ಬೆಳೆಯುವ ಕಳೆ ಸಸ್ಯಗಳನ್ನು ತಡೆಗಟ್ಟುವುದಕ್ಕೆ ಆದ್ಯತೆ ನೀಡಲಿದೆ. ಅಲ್ಲದೆ ಈ ಯೋಜನೆಯಡಿ ಶೌಚಾಲಯದ ಬ್ಲಾಕ್‍ಗಳು, ಮಕ್ಕಳ ಉದ್ಯಾನ ಪ್ರದೇಶ, ವಾಕಿಂಗ್ ಟ್ರ್ಯಾಕ್, ಯೋಗ ಮತ್ತು ವ್ಯಾಯಾಮ ವಲಯಗಳನ್ನು ಸ್ಥಾಪಿಸಲಾಗುವುದು.
ಅಮಾನಿಕೆರೆ ಸರೋವರವು ಮನರಂಜನೆ, ಪ್ರವಾಸೋದ್ಯಮ ಮತ್ತು ಕಾಟೇಜ್ ಅಥವಾ ವಸತಿ ಜೀವನಕ್ಕೆ ಪ್ರಮುಖ ಅವಕಾಶಗಳನ್ನು ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಯೋಜನೆಯಿಂದ ಐತಿಹಾಸಿಕ ಮತ್ತು ಸಾಂಪ್ರದಾಯಿಕ ಮೌಲ್ಯಗಳನ್ನು ಹೆಚ್ಚಿಸುವುದರೊಂದಿಗೆ ಶುದ್ಧೀಕರಿಸಿದ ನೀರಿನ ಮೂಲವನ್ನಾಗಿ ಅಭಿವೃದ್ಧಿಪಡಿಸಬಹುದಾಗಿದೆ.
ಅಮಾನಿಕೆರೆಯು ಕಾವೇರಿ ಜಲಾನಯನ ಪ್ರದೇಶ ಮತ್ತು ಶಿಂಷಾ ನದಿ ಉಪ ಜಲಾನಯನ ಪ್ರದೇಶದಲ್ಲಿದ್ದು, ಸರೋವರದ ಜಲಾನಯನ ಪ್ರದೇಶ ಸುಮಾರು 38 ಚ.ಕಿ.ಮೀ ಹೊಂದಿದ್ದು, ನೀರು ಶೇಖರಣಾ ಸಾಮಥ್ರ್ಯ 4885 ಮಿಲಿಯನ್ ಲೀಟರ್ ಆಗಿರುತ್ತದೆ. ನೀರಿನ ಅಭಾವವಿರುವ ತುಮಕೂರಿನಲ್ಲಿ ಅಂತರ್ಜಲ ಮಟ್ಟವನ್ನು ಪುನರ್ಭರ್ತಿ ಮಾಡಲು ಅಮಾನಿಕೆರೆ ಅಭಿವೃದ್ಧಿ ಒಂದು ವರವಾಗಲಿದೆ ಎಂದು ಸ್ಮಾರ್ಟ್ ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಬಿ.ಟಿ. ರಂಗಸ್ವಾಮಿ ತಿಳಿಸಿದ್ದಾರೆ.