ಸೂಡಾನ್ ಪ್ರಜೆಯ ಬಂಧನ, 1280ಗ್ರಾಂ ಗಾಂಜಾ ವಶ!

ತುಮಕೂರು :
 
      ಹೆಗ್ಗೆರೆ ಬಸ್ ನಿಲ್ದಾಣದ ಬಳಿ ಗಾಂಜಾ ಹೊಂದಿದ್ದ ಸೂಡಾನ್ ದೇಶದ ವಿದ್ಯಾರ್ಥಿಯೊಬ್ಬನನ್ನು ಪೊಲೀಸರು ದಾಳಿ ನಡೆಸಿ ವಶಕ್ಕೆ ತೆಗೆದುಕೊಂಡಿದ್ದಾರೆ.
      ಜೂ.4 ರಂದು ಸಂಜೆ 5 ಗಂಟೆಗೆ ಪೊಲೀಸರು ದಾಳಿ ನಡೆಸಿದ್ದು, ಹೆಗ್ಗೆರೆ ಬಸ್ ನಿಲ್ದಾಣದಲ್ಲಿ ಓರ್ವ ವ್ಯಕ್ತಿ ಕಪ್ಪು ಬಣ್ಣದ ಬ್ಯಾಗ್ ಹಾಕಿ ಅದರೊಳಗೆ ಗಾಂಜಾ ಮತ್ತು ಗಾಂಜಾ ಸೇದುವ ಉಪಕರಣಗಳು ಇದ್ದುದು ಕಂಡುಬಂದಿದೆ. ಆತನ ಮೇಲೆ ಅನುಮಾನ ಬಂದು ಆತನ ವಿಳಾಸ ವಿಚಾರಿಸಲಾಗಿ, ಆತ ಸೂಡಾನ್ ದೇಶದವನಾಗಿದ್ದು, ಮೊಹಮ್ಮದ್ ಮುಸ ಎಂದು ತಿಳಿದುಬಂದಿದೆ.
      ಹಾಲಿ ವಿದ್ಯಾರ್ಥಿ ಆಚಾರ್ಯ ಕಾಲೇಜಿನಲ್ಲಿ  ಓದುತ್ತಿದ್ದು, ವಾಸ ಬೆಂಗಳೂರು ಎಂದು  ತಿಳಿದುಬಂದಿರುತ್ತದೆ.  ಈ ವ್ಯಕ್ತಿಯು ಮೆಡಿಕಲ್ ಕಾಲೇಜು ಫ್ರೆಂಡ್ಸ್ ಗಳಿಗೆ ಮಾರಾಟ ಮಾಡಲು ತಂದಿರುವುದಾಗಿ ತಿಳಿಸಿರುತ್ತಾನೆ.  ಈತನಿಂದ 1280ಗ್ರಾಂ  ಗಾಂಜಾ ಸೊಪ್ಪು ಹಾಗೂ ಉಪಕರಣಗಳನ್ನು ವಶಪಡಿಸಿಕೊಂಡ ಪ್ರಕರಣ ದಾಖಲಾಗಿದೆ.
 
       ಈ ದಾಳಿಯಲ್ಲಿ ಪಾಲ್ಗೊಂಡಿದ್ದ ಪ್ರೋಬೇಷನರಿ ಡಿಎಸ್ಪಿ ಶಾಂತಾವೀರ, ಪಿಎಸ್ಐ ಸುಂದರ್, ಸಿಬ್ಬಂದಿಗಳಾದ ತಿಮ್ಮರಾಜು, ಪ್ರಾಣೇಶ, ಗೋಮುನಿಯಪ್ಪರವರುಗಳನ್ನು ಜಿಲ್ಲಾ ಎಸ್ಪಿ ರವರಾದ ಡಾ,ಕೆ. ವಂಶಿಕೃಷ್ಣ  ರವರು ಅಭಿನಂದಿಸಿರುತ್ತಾರೆ.   
(Visited 14 times, 1 visits today)

Related posts

Leave a Comment