ಕುರಿ ಮೈತೊಳೆಯಲು ಹೋಗಿ ನೀರುಪಾಲಾದ ಕುರಿಗಾಹಿ

 ಗುಬ್ಬಿ:

       ಕೆರೆಯಲ್ಲಿ ಕುರಿ ಮೈತೊಳೆಯಲು ಹೋದ ವ್ಯಕ್ತಿಯೋರ್ವ ಆಯತಪ್ಪಿ ನೀರಿನಲ್ಲಿ ಮುಳುಗಿ  ಸಾವನ್ನಪ್ಪಿರುವ ಘಟನೆ  ತಾಲ್ಲೂಕಿನ ಕಗ್ಗರೆಯಲ್ಲಿ ನಡೆದಿದೆ.

       ರಾಜಣ್ಣ(46) ಸಾವನ್ನಪ್ಪಿರುವ ದುರ್ದೈವಿ. ರಾಜಣ್ಣ ತಮ್ಮ ಕುರಿಗಳನ್ನು ಕಗ್ಗರೆ ಕೆರೆಯಲ್ಲಿ ತೊಳೆಯುತ್ತಿರುವಾಗ ಆಯತಪ್ಪಿ ನೀರಿಗೆ ಬಿದ್ದಿದ್ದಾರೆ. ಈ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

       ಮೃತರಿಗೆ ಇಬ್ಬರು ಮಕ್ಕಳಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(Visited 25 times, 1 visits today)

Related posts

Leave a Comment